Tag: CNG

  • ಕೊಡಗು | ಗ್ಯಾಸ್ ಬಂಕ್‍ನಲ್ಲಿ ಅನಿಲ ಸೋರಿಕೆ – 10 ಕಿ.ಮೀ ದೂರದ ನಿವಾಸಿಗಳಿಗೂ ಕಾಡಿದ ಆತಂಕ

    ಕೊಡಗು | ಗ್ಯಾಸ್ ಬಂಕ್‍ನಲ್ಲಿ ಅನಿಲ ಸೋರಿಕೆ – 10 ಕಿ.ಮೀ ದೂರದ ನಿವಾಸಿಗಳಿಗೂ ಕಾಡಿದ ಆತಂಕ

    – ಸ್ಥಳೀಯರ ಆರೋಗ್ಯದಲ್ಲಿ ಏರುಪೇರು

    ಮಡಿಕೇರಿ: ನೂತನವಾಗಿ ನಿರ್ಮಾಣಗೊಂಡಿದ್ದ ಸಿಎನ್‍ಜಿ ಘಟಕದಲ್ಲಿ ಅನಿಲ ಸೋರಿಕೆಯಾದ (CNG Gas leak) ಘಟನೆ ಕೊಡಗಿನ (Kodagu) ಕುಶಾಲನಗರ (Kushalnagar) ತಾಲೂಕಿನ ಕೂಡ್ಲೂರು ಬಡಾವಣೆಯಲ್ಲಿ ನಡೆದಿದೆ.

    ಅನಿಲ ಸೋರಿಕೆಯಿಂದ ಮಂಗಳವಾರ ಸಂಜೆ ಘಟಕದ ಸುತ್ತಮುತ್ತ ಭಾರೀ ದುವಾರ್ಸನೆ ಬಂದಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಉಸಿರಾಟ ಸಮಸ್ಯೆಯಾಗಿ, ಆರೋಗ್ಯದಲ್ಲಿ ಏರುಪೇರಾಗಿದೆ. ಮಕ್ಕಳಲ್ಲಿ ವಾಂತಿ, ವಾಕರಿಗೆ ಹಾಗೂ ಅಸ್ವಸ್ಥತೆ ಉಂಟಾಗಿದೆ.

    ಈ ಘಟನೆಯಿಂದ ಆತಂಕಗೊಂಡ ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅವರ ನೇತೃತ್ವದಲ್ಲಿ ಗ್ಯಾಸ್ ಬಂಕ್‍ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಗ್ಯಾಸ್ ಘಟಕದವರ ನಿರ್ಲಕ್ಷ್ಯತನದಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಜನವಸತಿ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಈ ಘಟಕದಿಂದ ಮುಂದಿನ ದಿನಗಳಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಜೀವಹಾನಿ ಉಂಟಾದರೆ ಯಾರು ಹೊಣೆ? ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.

    ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿ, ಹಲವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಘಟಕದ ಸಿಬ್ಬಂದಿಯನ್ನು ವಿಚಾರಿಸಿದಾಗ ಲೀಕೇಜ್ ಟೆಸ್ಟಿಂಗ್ ಸಂದರ್ಭದಲ್ಲಿ ಈ ರೀತಿಯಾಗಿದೆ ಎಂದು ತಿಳಿಸಿದ್ದಾರೆ. ಇದರ ಬಗ್ಗೆ ಮುಂಚಿತವಾಗಿಯೇ ಯಾವುದೇ ಜಾಗೃತಿ ಮೂಡಿಸದೆ ಟೆಸ್ಟಿಂಗ್ ನಡೆಸಿದ ಪರಿಣಾಮ ಈ ಅವಾಂತರ ಉಂಟಾಗಿದೆ ಎಂದಿದ್ದಾರೆ.

  • ಗ್ಯಾಸ್ ಸಿಲಿಂಡರ್ ಸಾಗಿಸ್ತಿದ್ದ ಕ್ಯಾಂಟರ್‌ಗೆ ಲಾರಿ ಡಿಕ್ಕಿಯಾಗಿ ಸ್ಫೋಟ – ಇಬ್ಬರ ಸ್ಥಿತಿ ಗಂಭೀರ

    ಗ್ಯಾಸ್ ಸಿಲಿಂಡರ್ ಸಾಗಿಸ್ತಿದ್ದ ಕ್ಯಾಂಟರ್‌ಗೆ ಲಾರಿ ಡಿಕ್ಕಿಯಾಗಿ ಸ್ಫೋಟ – ಇಬ್ಬರ ಸ್ಥಿತಿ ಗಂಭೀರ

    ಚಿಕ್ಕಬಳ್ಳಾಪುರ: ಸಿಎನ್‍ಜಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಕ್ಯಾಂಟರ್‌ಗೆ ಗ್ರಾನೈಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿ ಉರಿದ ಘಟನೆ ಚಿಕ್ಕಬಳ್ಳಾಪುರದ ಹುನೇಗಲ್ ಗ್ರಾಮದ ಬಳಿ ಸಂಭವಿಸಿದೆ.

    ಘಟನೆಯಲ್ಲಿ ಚಾಲಕ ನರಸಿಂಹಮೂರ್ತಿ ಹಾಗೂ ಮಾದಪ್ಪ ಎಂಬವರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುನೇಗಲ್ ಬಳಿ ಯೂ ಟರ್ನ್ ಪಡೆಯಲು ನಿಂತಿದ್ದ ಸಿಎನ್‍ಜಿ ಸಿಲಿಂಡರ್ ತುಂಬಿದ್ದ ಲಾರಿಗೆ, ಕಲ್ಲು ದಿಮ್ಮೆಗಳನ್ನ ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸಿಎನ್‍ಜಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ.

    ಘಟನೆಯಿಂದ ಹುನೇಗಲ್ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಹಾನಿಗೊಳಗಾದ ವಾಹನ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

  • 6.79 ಲಕ್ಷಕ್ಕೆ 5 ಸ್ಟಾರ್ ಸೇಫ್ಟಿ ರೇಟೆಡ್ ಡಿಸೈರ್ ಕಾರು ಬಿಡುಗಡೆ

    6.79 ಲಕ್ಷಕ್ಕೆ 5 ಸ್ಟಾರ್ ಸೇಫ್ಟಿ ರೇಟೆಡ್ ಡಿಸೈರ್ ಕಾರು ಬಿಡುಗಡೆ

    ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ನಾಲ್ಕನೇ ತಲೆಮಾರಿನ ಹೊಸ ಡಿಜೈರ್ (Dzire) ಕಾರನ್ನು 6.79 ಲಕ್ಷಕ್ಕೆ (ಎಕ್ಸ್ ಶೋರೂಂ) ಬಿಡುಗಡೆ ಮಾಡಿದೆ. ಕಾರಿನ ಬೆಲೆ 6.79 ಲಕ್ಷದಿಂದ 10.14 ಲಕ್ಷದವರೆಗೆ ಇದೆ. ಹೊಸ ಡಿಸೈರ್ ಕಾರಿಗಾಗಿ ಬುಕ್ಕಿಂಗ್ ಆರಂಭವಾಗಿದ್ದು ಆಸಕ್ತ ಖರೀದಿದಾರರು ರೂ.11 ಸಾವಿರ ಪಾವತಿಸುವ ಮೂಲಕ ‘ಡಿಸೈರ್’ ಕಾರನ್ನು ಬುಕ್ ಮಾಡಬಹುದು.

    ಹೊಸ ಡಿಸೈರ್ ಕಾರು ಮಾನ್ಯುಯಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 24.79 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅದೇ ರೀತಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಹೊಸ ಡಿಸೈರ್ ಬರೋಬ್ಬರಿ 25.71 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು CNG ಮಾದರಿಯಲ್ಲೂ ಕಾರು ಲಭ್ಯವಿದ್ದು ಪ್ರತಿ KG CNGಗೆ 33.73 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದನ್ನೂ ಓದಿ: 7.89 ಲಕ್ಷಕ್ಕೆ ಸ್ಕೋಡಾ ಕೈಲಾಕ್ ಕಾರು ಬಿಡುಗಡೆ

    ಹೊಸ ಡಿಸೈರ್ 3,995mm ಉದ್ದ, 1,735mm ಅಗಲ ಮತ್ತು 1,525mm ಎತ್ತರ, 2,450mm ವೀಲ್‌ಬೇಸ್ ಮತ್ತು 163mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. Z12E 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಹೊಸ ಡಿಸೈರ್, 81.58 PS ಪವರ್ ಮತ್ತು 111.7 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಡಿಸೈರ್ ದೊರೆಯಲಿದೆ. ಇದನ್ನೂ ಓದಿ: ಹೊಸ ಮಾರುತಿ ಡಿಸೈರ್‌ಗೆ ಸಿಕ್ಕಿತು 5 ಸ್ಟಾರ್ ಸೇಫ್ಟಿ ರೇಟಿಂಗ್

    ಎಲೆಕ್ಟ್ರಿಕ್ ಸನ್ ರೂಫ್, ‘ಕ್ರಿಸ್ಟಲ್ ವಿಷನ್’ LED ಹೆಡ್ ಲ್ಯಾಂಪ್, ‘3D ಟ್ರಿನಿಟಿ LED ಎಲಿಮೆಂಟ್ಸ್’ ಹೊಂದಿರುವ ಟೈಲ್ ಲ್ಯಾಂಪ್, 9 ಇಂಚ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, ಆರ್ಕಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಯುಎಸ್‌ಬಿ ಟೈಪ್-A & ಟೈಪ್-C ಪೋರ್ಟ್‌, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಡಿಸೈರ್ ಹೊಂದಿದೆ.

    LXi, VXi, ZXi ಮತ್ತು ZXi+ ವೇರಿಯಂಟ್ಗಳಲ್ಲಿ 6 ಏರ್‌ಬ್ಯಾಗ್‌ಗಳು, ESP, ಹಿಲ್ ಹೋಲ್ಡ್ ಅಸಿಸ್ಟ್, EBD ಜೊತೆಗೆ ABS, ಬ್ರೇಕ್ ಅಸಿಸ್ಟ್, ಎಲ್ಲಾ ಸೀಟ್‌ಗಳಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ISOFIX ಸೀಟ್ ಮೌಂಟ್‌ ಸ್ಟ್ಯಾಂಡರ್ಡ್ ಆಗಿ ದೊರೆಯಲಿವೆ. ಇದನ್ನೂ ಓದಿ: ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ

    ಇತ್ತೀಚೆಗಷ್ಟೇ ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ ಹೊಸ ಡಿಸೈರ್ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 31.24 ಅಂಕಗಳನ್ನು ಗಳಿಸುವ ಮೂಲಕ ಡಿಸೈರ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಅದೇ ರೀತಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 42ಕ್ಕೆ 39.20 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗನ್ನು ತನ್ನದಾಗಿಸಿಕೊಂಡಿದೆ. ಟಾಟಾ ಕಂಪನಿಯ ಆಲ್ಟ್ರೋಜ್ ಮತ್ತು ಟಿಯಾಗೋ ಕಾರುಗಳಿಗಿಂತ ಹೊಸ ಡಿಸೈರ್ ಸುರಕ್ಷಿತವಾಗಿದೆ.

  • ವಿಶ್ವದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಬಜಾಜ್

    ವಿಶ್ವದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಬಜಾಜ್

    ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ (Bajaj Auto) ವಿಶ್ವದ ಮೊದಲ ಸಿಎನ್‌ಜಿ ಬೈಕ್ (CNG Bike) ‘ಬಜಾಜ್ ಫ್ರೀಡಂ 125’ (Bajaj Freedom 125) ಅನ್ನು ಬಿಡುಗಡೆಗೊಳಿಸಿದೆ. ಇದರ ಎಕ್ಸ್ ಶೋರೂಂ ಬೆಲೆ ರೂ.95,000 ದಿಂದ 1. 10 ಲಕ್ಷದವರೆಗೆ ಇದೆ.

    ಬಜಾಜ್ ಫ್ರೀಡಂ ಬೈಕ್ 125 ಸಿಸಿ ಎಂಜಿನ್ ಹೊಂದಿದ್ದು 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 2 ಲೀಟರ್ ಪೆಟ್ರೋಲ್ ಟ್ಯಾಂಕ್ ಮತ್ತು ಸೀಟ್ ನ ಕೆಳಗೆ 2 ಕೆಜಿ ಸಿಎನ್‌ಜಿ ಸಿಲಿಂಡರ್ ಅನ್ನು ಈ ಬೈಕ್ ಹೊಂದಿದೆ. ಇದು CNGಯಲ್ಲಿ ಚಲಿಸುವಾಗ, ಪ್ರತಿ ಕಿಲೋಗ್ರಾಂಗೆ 102 ಕಿಲೋಮೀಟರ್‌ ಮೈಲೇಜ್ ಮತ್ತು ಪೆಟ್ರೋಲ್‌ನಲ್ಲಿ ಚಲಿಸುವಾಗ 67 ಕಿಲೋಮೀಟರ್‌ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕೇವಲ ಒಂದು ಸ್ವಿಚ್ ಪ್ರೆಸ್ ಮಾಡುವ ಮೂಲಕ CNGಯಿಂದ ಪೆಟ್ರೋಲ್ ಮತ್ತು ಪೆಟ್ರೋಲ್‌ನಿಂದ CNGಗೆ ಬದಲಾವಣೆ ಮಾಡಿಕೊಳ್ಳಬಹುದು.

    ಫ್ರೀಡಂ ಬೈಕ್ 147 ಕೆಜಿ ತೂಕವಿದ್ದು, 758 ಮಿಲಿಮೀಟರ್ ಉದ್ದದ ಸಿಂಗಲ್ ಪೀಸ್ ಸೀಟ್ ಹೊಂದಿದೆ. ನೋಡೋಕೆ ತುಂಬಾ ಸ್ಟೈಲಿಶ್ ಆಗಿರುವ ಫ್ರೀಡಂ ಬೈಕ್ ಸ್ಪೋರ್ಟಿ ಸ್ಟೈಲಿಂಗ್, ಪೂರ್ಣ ಡಿಜಿಟಲ್ ಸ್ಪೀಡೋ ಮೀಟರ್ ಜೊತೆ ಬ್ಲೂಟ್‌ಟೂತ್ ಕನೆಕ್ಟಿವಿಟಿ, ಫಸ್ಟ್-ಇನ್-ಕ್ಲಾಸ್ ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್, ಎಲ್‌ಇಡಿ ಹೆಡ್ ಲ್ಯಾಂಪ್, ಡ್ಯುಯಲ್ ಕಲರ್ ಸ್ಕೀಮ್ ಅನ್ನು ಹೊಂದಿದೆ.

    ಈ ಬೈಕ್ ಡಿಸ್ಕ್ LED, ಡ್ರಮ್ LED ಮತ್ತು ಡ್ರಮ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದೆ. ಹೊಸ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ಗಳ ಬುಕ್ಕಿಂಗ್‌ ಆರಂಭವಾಗಿದ್ದು, ಡೆಲಿವರಿಗಳು ಮೊದಲು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಾರಂಭವಾಗುತ್ತದೆ.

    ಬಜಾಜ್ ಫ್ರೀಡಂ 125 ಮೋಟಾರ್‌ಸೈಕಲ್ 11 ಸುರಕ್ಷತಾ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ. ಬಜಾಜ್ ಕಂಪನಿಯು ಫ್ರೀಡಂ 125 ಬೈಕನ್ನು ಈಜಿಪ್ಟ್, ತಾಂಜಾನಿಯಾ, ಕೊಲಂಬಿಯಾ, ಪೆರು, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾದಂತಹ ದೇಶಗಳಿಗೆ ರಫ್ತು ಮಾಡಲು ಯೋಜಿಸಿದೆ.

  • ಎಲ್ಲಾ ಸಿಎನ್‌ಜಿ ವಾಹನಗಳ ಸಿಲಿಂಡರ್‌ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆ: ಸಾರಿಗೆ ಇಲಾಖೆ

    ಎಲ್ಲಾ ಸಿಎನ್‌ಜಿ ವಾಹನಗಳ ಸಿಲಿಂಡರ್‌ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆ: ಸಾರಿಗೆ ಇಲಾಖೆ

    ಬೆಂಗಳೂರು: ಕರ್ನಾಟಕದಲ್ಲಿರುವ ಎಲ್ಲಾ ಸಿಎನ್‌ಜಿ (CNG) ವಾಹನ ಮಾಲೀಕರು ತಮ್ಮ ವಾಹನಗಳ ಸಿಲಿಂಡರ್‌ಗಳಿಗೆ (Cylinder) ಕಡ್ಡಾಯ ಸುರಕ್ಷತಾ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.

    ಜನವರಿ 9 ರಂದು ಹೊರಡಿಸಲಾದ ಈ ಸುತ್ತೋಲೆಯು ಸಿಎನ್‌ಜಿ ವಾಹನಗಳಿಗೆ ರಾಷ್ಟ್ರೀಯ ಮಾರ್ಗಸೂಚಿಗಳ ಅನುಗುಣವಾಗಿದೆ. ವಾಹನ ಮಾಲೀಕರು ಮೂರು ವರ್ಷಗಳಿಗೊಮ್ಮೆ ಪ್ರತಿಯೊಂದು ಸಿಲಿಂಡರ್ ಅನ್ನು ʼಹೈಡ್ರೋಸ್ಟಾಟಿಕ್ ಸ್ಟ್ರೆಚ್ʼ ಪರೀಕ್ಷೆಗಳನ್ನು ನಡೆಸುವುದು ಕಡ್ಡಾಯ ಎಂದು ತಿಳಿಸಿದೆ.

    ಗ್ಯಾಸ್ ಆಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL), ರಾಜ್ಯದ ಅತಿದೊಡ್ಡ ಸಿಎನ್‌ಜಿ ಪೂರೈಕೆದಾರರಾಗಿದ್ದು ಇದು ಕರ್ನಾಟಕದಲ್ಲಿ 52,000 ಸಿಎನ್‌ಜಿ ವಾಹನಗಳಿವೆ ಎಂದು ಅಂದಾಜಿಸಿದೆ. ಅದರಲ್ಲಿ 48% ಅಥವಾ ಸುಮಾರು 25,000 ಬೆಂಗಳೂರಿನಲ್ಲಿವೆ. ಈ ಮಾಹಿತಿಯಲ್ಲಿ ಆಫ್ಟರ್ ಮಾರ್ಕೆಟ್ ನಲ್ಲಿ ಸಿಎನ್‌ಜಿ ಸಿಲಿಂಡರ್ ಗಳನ್ನು ಆಳವಡಿಸಿದ ವಾಹನಗಳು ಮತ್ತು GAIL ನಿಂದ ಸರಬರಾಜು ಮಾಡಲಾದ ವಾಹನಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಹುಬ್ಬಳ್ಳಿಯಿಂದ ಪುಣೆಗೆ ನೇರ ವಿಮಾನ ಸೇವೆ ಆರಂಭ

    ಈ ಪರೀಕ್ಷೆಗಳನ್ನು ನಡೆಸಲು ಸರ್ಕಾರವು ಬೆಂಗಳೂರು ಮೂಲದ ಸಂಸ್ಥೆ-ಎಂಜಿ ಆರ್ ಹೈಡ್ರೋಟೆಸ್ಟ್ ಇಂಕ್ ಅನ್ನು ಅಧಿಕೃತವಾಗಿ ನೇಮಿಸಿದೆ. ಅದೇ ರೀತಿ ಶೀಘ್ರದಲ್ಲೇ ಇನ್ನೆರೆಡು ಕಂಪನಿಗಳು ಈ ಪರೀಕ್ಷೆಗಳನ್ನು ನಡೆಸಲು ಅಧಿಕಾರವನ್ನು ಪಡೆಯಲಿದ್ದಾರೆ. ಎಂಜಿಆರ್ ಹೈಡ್ರೊಟೆಸ್ಟ್ PESO (ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ)ಯಿಂದ ಸಂಭಂಧಿತ ಪ್ರಮಾಣಿಕರಣಗಳನ್ನು ಹೊಂದಿದೆ.

    ಈ ಕುರಿತು ಮಾತನಾಡಿದ ಎಂಜಿಆರ್ ಹೈಡ್ರೊಟೆಸ್ಟ್ ವ್ಯವಸ್ಥಾಪಕ ಪಾಲುದಾರ ಜ್ಞಾನಚಂದ್ ಬಾಂಟಿಯಾ “ಕೇಂದ್ರದ ಗ್ಯಾಸ್ ಸಿಲಿಂಡರ್ ನಿಯಮಗಳು 2016ರ ಪ್ರಕಾರ, ಬಿಐಎಸ್ ಮಾನದಂಡಗಳು 154975 ಮತ್ತು ಬಿಐಎಸ್ 8481 ಮಾನದಂಡಗಳ ಪ್ರಕಾರ ಸಿಲಿಂಡರ್ ನ ಜೀವಿತಾವಧಿ 20 ವರ್ಷಗಳಾಗಿದ್ದು ಪ್ರತಿ ಮೂರು ವರ್ಷಗಳಿಗೊಮ್ಮೆ ಸಿಲಿಂಡರ್ ಗಳ ಹೈಡ್ರೋಸ್ಟಾಟಿಕ್ ಸ್ಟ್ರೆಚ್ ಪರೀಕ್ಷೆಯನ್ನು ನಡೆಸುವುದು ಕಡ್ಡಾಯವಾಗಿದೆ. ಈ ಕುರಿತು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದ್ದು ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ” ಎಂದರು.

    ಸಿಎನ್‌ಜಿ ವಾಹನಗಳ ಕನ್ವರ್ಷನ್ ಹಾಗೂ ಹೊಸ ನೋಂದಣಿ ಹೆಚ್ಚಾದಂತೆ, ಸುರಕ್ಷತೆಯ ಕಾಳಜಿಯನ್ನು ತಿಳಿಸುವ ಅಗತ್ಯವಿದೆ ಎಂದು ಬಾಂಡಿಯಾ ಹೇಳಿದರು. “ಸಿಎನ್‌ಜಿ 200 ಬಾರ್ ಗಳು ಹೆಚ್ಚಿನ ಒತ್ತಡವನ್ನು ಹೊಂದಿದ್ದು, ಇದು ಎಲ್‌ಪಿಜಿ ಗಿಂತ 10 ಪಟ್ಟು ಹೆಚ್ಚು ಒತ್ತಡವು ಹೆಚ್ಚಿರುವುದರಿಂದ, ಸಿಎನ್‌ಜಿ ಸಿಲಿಂಡರ್ ಅನ್ನು ದಪ್ಪದ ಗೇಜ್ ನಿಂದ (8ಎಂಎಂ ನಿಂದ 10 ಎಂಎಂ) ತಯಾರಿಸಲಾಗುತ್ತದೆ ಹಾಗೂ ಇದು ತಡೆರಹಿತವಾಗಿರುತ್ತದೆ ಎಂದು ಅವರು ಹೇಳಿದರು.

    ರಾಜ್ಯ ಸರಕಾರದ ಎಲ್ಲಾ ಆರ್‌ಟಿಒ ಕಚೇರಿಗಳು ಮತ್ತು ಸಾರಿಗೆ ಜಂಟಿ ಆಯುಕ್ತರಿಗೆ ಸುತ್ತೋಲೆ ಕಳುಹಿಸಿದೆ. ಮೂರು ವರ್ಷಗಳನ್ನು ಪೂರೈಸಿದ ಎಲ್ಲಾ ಸಿಎನ್‌ಜಿ ವಾಹನಗಳು ಫಿಟ್ ನೆಸ್ ಪರೀಕ್ಷೆಯ ಸಮಯದಲ್ಲಿ ಈ ಸುರಕ್ಷತಾ ಪ್ರಮಾಣಪತ್ರವನ್ನು ಇತರ ದಾಖಲೆಗಳೊಂದಿಗೆ ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದು ಹೇಳುತ್ತದೆ.

    ಒಮ್ಮೆ ಪರೀಕ್ಷೆಗಳು ಮುಗಿದ ನಂತರ, ಈ ಪ್ರಮಾಣಪತ್ರವನ್ನು PESO ಅನುಮೋದಿಸಿದೆ ಮತ್ತು ಆನ್ ಲೈನ್‌ನಲ್ಲಿ ನೀಡಲಾಗುತ್ತದೆ. PESO ವೆಬ್ ಸೈಟ್ ಸಾರಿಗೆ ಇಲಾಖೆಯ ವಾಹನದ ವೆಬ್ ಸೈಟ್ ನೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಈ ಪ್ರಮಾಣಪತ್ರಗಳು ಅಲ್ಲಿಯೂ ಲಭ್ಯವಾಗುತ್ತವೆ” ಎಂದು ಬಾಂಟಿಯಾ ತಿಳಿಸಿದರು. ಪ್ರಸ್ತುತ ಕರ್ನಾಟಕವು 100ಕ್ಕೂ ಹೆಚ್ಚು ಸಿಎನ್‌ಜಿ ಕೇಂದ್ರಗಳನ್ನು ಹೊಂದಿದೆ. ಅದರಲ್ಲಿ ಸುಮಾರು 55% ರಷ್ಟು ಬೆಂಗಳೂರಿನಲ್ಲಿವೆ ಎಂದು ಅವರು ಹೇಳಿದರು.

    ನಾವು ಈಗ ಆರ್‌ಟಿಒಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಮತ್ತು ನಿಲ್ದಾಣಗಳಲ್ಲಿ ಈ ಕುರಿತಾದ ಫಲಕಗಳನ್ನು ಹಾಕಲು GAILನೊಂದಿಗೆ ಸಂಪರ್ಕ ಹೊಂದಿದ್ದೇವೆ. ಆದ್ದರಿಂದ ವಾಹನ ಮಾಲೀಕರಿಗೆ ಪರೀಕ್ಷೆಗಳ ಬಗ್ಗೆ ತಿಳಿಸಬಹುದು ಹಾಗೂ ಭವಿಷ್ಯದಲ್ಲಿ ಅವುಗಳನ್ನು ಯೋಜಿಸಬಹುದು. ಅಪಘಾತಗಳ ಸಂದರ್ಭದಲ್ಲಿ ವಿಮೆಯನ್ನು ಪಡೆಯಲು ಕೂಡ ಈ ಪರೀಕ್ಷೆಗಳು ಬೇಕಾಗುತ್ತವೆ ಎಂದು ಅವರು ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಎನ್‍ಜಿ, ಪೈಪ್ಡ್ ಗ್ಯಾಸ್ ಬೆಲೆ ತಲಾ 3 ರೂ. ಏರಿಕೆ

    ಸಿಎನ್‍ಜಿ, ಪೈಪ್ಡ್ ಗ್ಯಾಸ್ ಬೆಲೆ ತಲಾ 3 ರೂ. ಏರಿಕೆ

    ನವದೆಹಲಿ: ವಾಹನಗಳಿಗೆ ಬಳಸುವ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ಮತ್ತು ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುವ ಅಡುಗೆ ಅನಿಲ (ಪಿಎನ್‍ಜಿ) ದರ ಇದೀಗ ಮತ್ತಷ್ಟು ದುಬಾರಿಯಾಗಿದೆ. ಇಂದು ಪ್ರತಿ ಕೆ.ಜಿಗೆ ತಲಾ 3 ರೂ. ಏರಿಕೆ ಮಾಡಲಾಗಿದೆ.

     

    ವಿದ್ಯುತ್ ಉತ್ಪಾದನೆ, ರಸಗೊಬ್ಬರ ತಯಾರಿಕೆ ಹಾಗೂ ವಾಹನಗಳ ಸಂಚಾರಕ್ಕೆ ಸಿಎನ್‍ಜಿಯಾಗಿ ಪರಿವರ್ತಿಸಲಾಗುವ ನೈಸರ್ಗಿಕ ಅನಿಲ ದರವು 3 ರೂ. ಏರಿಕೆ ಕಂಡು ದೆಹಲಿಯಲ್ಲಿ ಕೆ.ಜಿಗೆ 78.61ಕ್ಕೆ ತಲುಪಿದೆ. ಈ ಮೂಲಕ 2021ರ ಮಾರ್ಚ್ ಬಳಿಕ 14ನೇ ಬಾರಿ ಸಿಎನ್‍ಜಿ ಗ್ಯಾಸ್ ದರ ಏರಿಕೆ ಕಂಡಂತಾಗಿದೆ. ಇದನ್ನೂ ಓದಿ: ‘ಆದಿ ಪುರುಷ್’ ಬೆನ್ನಿಗೆ ನಿಂತ ರಾಜ್ ಠಾಕ್ರೆ ಸೇನೆ: ನಿಜವಾದ ರಾವನನ್ನು ಬಿಜೆಪಿ ನೋಡಿದ್ಯಾ?

     

    ಸಿಎನ್‍ಜಿ ಜೊತೆ ಪಿಎನ್‍ಜಿ ದರ ಕೂಡ 3 ರೂ. ಏರಿಕೆ ಕಂಡು ದೆಹಲಿಯಲ್ಲಿ 53.59 ರೂ.ಗೆ ತಲುಪಿದೆ. ಈ ಮೂಲಕ 2021ರ ಆಗಸ್ಟ್ ಬಳಿಕ ಸತತ 10ನೇ ಬಾರಿ ಏರಿಕೆ ಕಂಡಂತಾಗಿದೆ. ಈ ಬಗ್ಗೆ ಚಿಲ್ಲರೆ ವ್ಯಾಪಾರ ಮಾಡುವ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಹೊಸ ದರವನ್ನು ಪ್ರಕಟಿಸಿದೆ. ಇದನ್ನೂ ಓದಿ: 20 ವರ್ಷಗಳ ಹಿಂದೆ ಮದರಸಾದಲ್ಲಿ ಹಿಂದೂಗಳು ಪೂಜೆ ಮಾಡಿದ ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • CNG, PNG ದರ ಮತ್ತಷ್ಟು ದುಬಾರಿ: ಎಲ್ಲಿ ಎಷ್ಟು ದರ..?

    CNG, PNG ದರ ಮತ್ತಷ್ಟು ದುಬಾರಿ: ಎಲ್ಲಿ ಎಷ್ಟು ದರ..?

    ನವದೆಹಲಿ: ಕಳೆದ 10 ದಿನಗಳಿಂದಲೂ ಪೆಟ್ರೋಲ್, ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಿದೆ. ಇದರೊಂದಿಗೆ ಯುಗಾದಿ ಹಬ್ಬಕ್ಕೂ ಮುನ್ನವೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 250 ರೂ.ನಷ್ಟು ಏರಿಕೆಯಾಗಿದೆ.

    ಇದೀಗ ಕಳೆದ ವಾರವಷ್ಟೇ ಏರಿಕೆಯಾಗಿದ್ದ ಸಿಎನ್‌ಜಿ (ವಾಹನಗಳಿಗೆ ಬಳಸುವ ಸಂಕುಚಿತ ನೈಸರ್ಗಿಕ ಅನಿಲ) ಮತ್ತು ಪಿಎನ್‌ಜಿ (ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುವ ಅಡುಗೆ ಅನಿಲ) ದರ ಇದೀಗ ಮತ್ತಷ್ಟು ದುಬಾರಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ ಇಂಧನ ದರ ಏರಿಕೆಯ ಬಿಸಿ ಮತ್ತಷ್ಟು ತಟ್ಟಿದೆ. ಇದನ್ನೂ ಓದಿ: ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಆಯ್ತು ಈಗ ಸಿಎನ್‌ಜಿ, ಪಿಎನ್‌ಜಿ ದರದಲ್ಲೂ ಏರಿಕೆ 

    price

    ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಳೆದ ಎರಡು ವಾರಗಳಲ್ಲಿ 12ನೇ ಬಾರಿಗೆ ಭಾರತದಾದ್ಯಂತ ಇಂಧನ ಬೆಲೆಯನ್ನು ಹೆಚ್ಚಿಸಿವೆ. ಅಂತೆಯೇ ಸಿಎನ್‌ಜಿ ಹಾಗೂ ಪಿಎನ್‌ಜಿ ಅನಿಲ ದರವು 40 ಪೈಸೆ ಹೆಚ್ಚಳ ಕಂಡಿದೆ. ಇದನ್ನೂ ಓದಿ: ಏಷ್ಯಾದ ಅತೀ ದೊಡ್ಡ ಬಯೋ-ಸಿಎನ್‍ಜಿ ಸ್ಥಾವರ ಉದ್ಘಾಟಿಸಿದ ಮೋದಿ

    ಸಿಎನ್‌ಜಿ ಅನಿಲ ದರವು ಪ್ರತಿ ಕೆಜಿಗೆ ದೆಹಲಿಯಲ್ಲಿ 64.11 ರೂ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲೂ 66-.68 ರೂ., ಮುಜಾಫರ್ ನಗರ, ಮೀರತ್ ಮತ್ತು ಶಿಮ್ಲಾದಲ್ಲಿ 71.36, ಗುರುಗ್ರಾಮ್‌ನಲ್ಲಿ 72.45 ರೂ., ರೇವರಿ 74.55 ರೂ., ಕರ್ನಾಲ್ ಹಾಗೂ ಕೈಥಾಲ್‌ನಲ್ಲಿ 72.78 ರೂ., ಕಾನ್‌ಪುರ, ಹಮೀರ್‌ಪುರ್ ಹಾಗೂ ಫತೇಪುರ್ ನಲ್ಲಿ 75.90 ರೂ., ಅಜ್ಮೀರ್, ಪಾಲಿ ಹಾಗೂ ರಾಜ್‌ಸಮಂದ್‌ನಲ್ಲಿ 74.39 ರೂ.ಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ.

  • ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಆಯ್ತು ಈಗ ಸಿಎನ್‌ಜಿ, ಪಿಎನ್‌ಜಿ ದರದಲ್ಲೂ ಏರಿಕೆ

    ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಆಯ್ತು ಈಗ ಸಿಎನ್‌ಜಿ, ಪಿಎನ್‌ಜಿ ದರದಲ್ಲೂ ಏರಿಕೆ

    ನವದೆಹಲಿ: ಪೆಟ್ರೋಲ್‌, ಡೀಸೆಲ್‌, ಗೃಹ ಬಳಕೆಯ ಎಲ್‌ಪಿಜಿ ದರ ಏರಿಕೆ ಬೆನ್ನಲ್ಲೇ ಸಿಎನ್‌ಜಿ ಮತ್ತು ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುವ ಅಡುಗೆ ಅನಿಲ (ಪಿಎನ್‌ಜಿ) ದರದಲ್ಲೂ ಏರಿಕೆ ಮಾಡಲಾಗಿದೆ. ಇದರಿಂದ ಜನರಿಗೆ ಬೆಲೆ ಏರಿಕೆಯ ಬಿಸಿ ಮತ್ತಷ್ಟು ತಟ್ಟಿದೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಿಎನ್‌ಜಿ ದರ ಪ್ರತಿ ಕೆ.ಜಿ.ಗೆ 1 ರೂ. ಹೆಚ್ಚಳವಾಗಿದೆ. ದೆಹಲಿಯಲ್ಲಿ ಸಿಎನ್‌ಜಿ ಬೆಲೆಯನ್ನು 58.01 ರಿಂದ 59.01 ಕ್ಕೆ ಹೆಚ್ಚಿಸಲಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಬಸ್ಸಿನಲ್ಲೇ ಎಣ್ಣೆ ಹೊಡೆದ ಶಾಲಾ ಹೆಣ್ಮಕ್ಳು: ವಿಡಿಯೋ ವೈರಲ್

    ಅಡುಗೆ ಉದ್ದೇಶಗಳಿಗಾಗಿ ಕುಟುಂಬಗಳು ಪಡೆಯುವ ಪ್ರತಿ ಕ್ಯೂಬಿಕ್‌ ಮೀಟರ್‌ ಪಿಎನ್‌ಜಿ ದರ 36.61 ರೂಪಾಯಿ ತಲುಪಿದೆ. ಕಳೆದ ಎರಡು ದಿನಗಳಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ 1.60 ರೂಪಾಯಿಯಷ್ಟು ಏರಿಕೆಯಾಗಿದೆ. ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ 50 ರೂಪಾಯಿ ಹೆಚ್ಚಳವಾಗಿದೆ.

    ಜಾಗತಿಕವಾಗಿ ನೈಸರ್ಗಿಕ ಅನಿಲ ದರದಲ್ಲಿ ಏರಿಕೆಯಾಗಿರುವುದರಿಂದ ಈ ತಿಂಗಳು ಮೂರನೇ ಬಾರಿಗೆ ಸಿಎನ್‌ಜಿ ದರ ಹೆಚ್ಚಳ ಕಂಡಿದೆ. ಕಳೆದ ಎರಡು ಬಾರಿಯ ದರ ಏರಿಕೆಯಲ್ಲಿ ಪ್ರತಿ ಕೆಜಿ ಸಿಎನ್‌ಜಿಗೆ ಒಟ್ಟು 50 ಪೈಸೆ ಹೆಚ್ಚಳವಾಗಿದೆ. ಈ ವರ್ಷ ಪ್ರತಿ ಕೆ.ಜಿ.ಗೆ ಒಟ್ಟು 5.50ರಷ್ಟು ಏರಿಕೆಯಾಗಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಶಾದಿ ಮಹಲ್ ಯೋಜನೆ ರದ್ದು: ಬೊಮ್ಮಾಯಿ

    ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬೆಲೆ ಏರಿಕೆಯ ವಿಷಯ ಸದ್ದು ಮಾಡಿತ್ತು. ಅಧಿಕ ಹಣದುಬ್ಬರ ಮತ್ತು ಸರಕುಗಳ ಬೆಲೆ ಏರಿಕೆಯ ಮೂಲಕ ಸಾಮಾನ್ಯ ಜನರಿಗೆ ಹೆಚ್ಚಿನ ಹೊರೆ ಹೊರಿಸಲಾಗಿದೆ ಎಂದು ಪ್ರತಿಪಕ್ಷಗಳು ಪ್ರತಿಭಟಿಸಿದವು. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ