Tag: CN Ashwath Narayana

  • ಗೋಹತ್ಯೆ ಮಾಡಲು, ಗೋಮಾಂಸ ತಿನ್ನಲು ಅವಕಾಶ ಕೊಡ್ಬೇಕಾ – ಅಶ್ವಥ್ ನಾರಾಯಣ ಪ್ರಶ್ನೆ

    ಗೋಹತ್ಯೆ ಮಾಡಲು, ಗೋಮಾಂಸ ತಿನ್ನಲು ಅವಕಾಶ ಕೊಡ್ಬೇಕಾ – ಅಶ್ವಥ್ ನಾರಾಯಣ ಪ್ರಶ್ನೆ

    ಬೆಂಗಳೂರು: ಗೋಹತ್ಯೆ, ಗೋಮಾಂಸ ತಿನ್ನಲು ಅವಕಾಶ ಕೊಡಬೇಕಾ? ಎಂದು ಕಾಂಗ್ರೆಸ್ (Congress) ಸ್ಪಷ್ಟೀಕರಣ ಕೊಡಲಿ ಮಾಜಿ ಡಿಸಿಎಂ ಸಿ.ಎನ್ ಅಶ್ವಥ್ ನಾರಾಯಣ (CN Ashwath Narayana) ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲುಕೊಯ್ದ ಪ್ರಕರಣಕ್ಕೆ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟ ರಿಷಿ ಪತ್ನಿ

    ಕೃತ್ಯದ ಹಿಂದೆ ಸಂಘಟನೆ, ಕೆಲವರು ಇರಬಹುದು. ಕಾಂಗ್ರೆಸ್‌ನ ದ್ವೇಷದ ರಾಜಕಾರಣದಿಂದ ಈ ರೀತಿಯಾಗುತ್ತಿದೆ. ಮಾನಸಿಕವಾಗಿ ಕೆಲ ವ್ಯಕ್ತಿಗಳಿಗೆ ಉತ್ತೇಜನ ಕೊಟ್ಟಿದಾರೆ. ಗೋಮಾಂಸ, ಗೋವಿನ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟೀಕರಣ ನೀಡಬೇಕು. ಗೋಹತ್ಯೆ, ಗೋಮಾಂಸ ತಿನ್ನಲು ಅವಕಾಶ ಕೊಡಬೇಕಾ? ಎನ್ನುವುದನ್ನು ತಿಳಿಸಬೇಕು. ಸರ್ಕಾರ ಎಲ್ಲೋ ಒಂದು ಕಡೆ ಒಂದು ಸಮುದಾಯದ ಜನರನ್ನು ಓಲೈಸುತ್ತಿದೆ. ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಇದರಿಂದ ಇಂತಹ ಕೃತ್ಯ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಇನ್ನೂ ಇದೇ ವೇಳೆ ಆರೋಪಿ ಬಿಹಾರ ಮೂಲದವನು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಹಾರದವರಿಗೆ ಇಷ್ಟೊಂದು ಧೈರ್ಯ ಹೇಗೆ ಬರುತ್ತದೆ? ಇದರ ಹಿಂದೆ ಬೇರೆ ಯಾರಾದರೂ ಇರಬಹುದು. ಇಂತಹ ಘಟನೆಗಳು ಮತ್ತೆ ನಡೆಯಬಾರದು ಎಂದರೆ ಸ್ಪಷ್ಟ ತನಿಖೆಯಾಗಬೇಕು. ಆಯುಕ್ತರು ಸ್ಪಷ್ಟ ತನಿಖೆಯ ಮೂಲಕ ಸತ್ಯವನ್ನ ಹೊರ ತರಬೇಕು ಎಂದರು.

    ಆರೋಪಿ ಮಾನಸಿಕ ಅಸ್ವಸ್ಥ ಎನ್ನುವ ವಿಚಾರವಾಗಿ ಆರೋಪಿ ಮಾನಸಿಕ ಅಸ್ವಸ್ಥಾನಿಗಿದ್ದರೆ ಈ ರೀತಿ ಹುಡುಕಿಕೊಂಡು ಹೋಗಿ ಮನೆಯಲ್ಲಿ ಕಟ್ಟಿರುವ ಹಸುಗಳ ಕೆಚ್ಚಲು ಕೊಯ್ಯಲು ಸಾಧ್ಯನಾ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಹಿಂದೂ ಅನ್ನೋದು ಅವಮಾನಕರ ಶಬ್ದ – ಚಿಂತಕ ಕೆ.ಎಸ್ ಭಗವಾನ್ ಮತ್ತೆ ವಿವಾದಾತ್ಮಕ ಹೇಳಿಕೆ

  • ಸಿಲಿಕಾನ್ ಸಿಟಿ ಬೆಂಗ್ಳೂರಲ್ಲಿ ತಲೆ ಎತ್ತಲಿದೆ ಐಕಿಯ ಸ್ಟೋರ್

    ಸಿಲಿಕಾನ್ ಸಿಟಿ ಬೆಂಗ್ಳೂರಲ್ಲಿ ತಲೆ ಎತ್ತಲಿದೆ ಐಕಿಯ ಸ್ಟೋರ್

    ಬರ್ನ್: ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಇಂಗ್ಕಾ ಗ್ರೂಪ್ (ಐಕಿಯ) ಸಿಇಒ ಜೆಸ್ಪರ್ ಬ್ರಾಡಿನ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಐಕಿಯ ಸ್ಟೋರ್ ತೆರೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

    ಜೂನ್ ತಿಂಗಳಲ್ಲಿ ಬೆಂಗಳೂರಿನ ನಾಗಸಂದ್ರದಲ್ಲಿ ಐಕಿಯ ಸ್ಟೋರ್ ತೆರೆಯಲಿದ್ದು, ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜೆಸ್ಪರ್ ಬ್ರಾಡಿನ್ ಅವರು ಸಿಎಂ ಬೊಮ್ಮಾಯಿ ಅವರನ್ನು ಆಹ್ವಾನಿಸಿದರು. ಇದನ್ನೂ ಓದಿ: ದಾವೋಸ್‌ನಲ್ಲೂ ಆಪರೇಷನ್ ಕಮಲದ ಸದ್ದು- ಸಿಎಂಗೆ ನೀವು ಸ್ಟೇಬಲ್ ಇದ್ದೀರಾ ಎಂದ ಮಿತ್ತಲ್

    Davos 2

    ಐಕಿಯದ ಭಾರತೀಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು ಪೀಠೋಪಕರಣಗಳ ತಯಾರಿಕೆಯ ಸಂದರ್ಭದಲ್ಲಿ ಬಿದಿರು ಮತ್ತಿತರ ಸ್ಥಳೀಯ ವಸ್ತುಗಳ ವ್ಯಾಪಕ ಬಳಕೆಯ ಕುರಿತು ಸಹ ಚರ್ಚಿಸಲಾಯಿತು. ಇದನ್ನೂ ಓದಿ: ಲುಲು ಗ್ರೂಪ್‍ನೊಂದಿಗೆ 2,000 ಕೋಟಿ ರೂ. ಹೂಡಿಕೆ ಒಪ್ಪಂದ – ಪ್ರತಿಷ್ಠಿತ ಕಂಪನಿಗಳೊಂದಿಗೆ ಬೊಮ್ಮಾಯಿ ಚರ್ಚೆ

    INKGA 3

    ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.