Tag: CMIE

  • IT ಕ್ಷೇತ್ರದಲ್ಲಿ ಒಂದೇ ವರ್ಷಕ್ಕೆ 60 ಸಾವಿರ ಜಾಬ್‌ ಕಟ್‌

    IT ಕ್ಷೇತ್ರದಲ್ಲಿ ಒಂದೇ ವರ್ಷಕ್ಕೆ 60 ಸಾವಿರ ಜಾಬ್‌ ಕಟ್‌

    ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ (IT Sector) ಕಂಪನಿಗಳಿಂದ ಗುತ್ತಿಗೆದಾರರ (Contract Workers) ಮೂಲಕ ನೇಮಕಗೊಂಡ ಹೊರಗುತ್ತಿಗೆ ಕಾರ್ಮಿಕರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.7.7 ರಷ್ಟು ಕಡಿತಗೊಂಡಿದ್ದು, ಒಂದೇ ವರ್ಷದಲ್ಲಿ ಸುಮಾರು 60,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ನೇಮಕಾತಿ ಸಂಸ್ಥೆ ಮಂಗಳವಾರ ತಿಳಿಸಿದೆ.

    ವಿಶ್ವದಾದ್ಯಂತ ಅನೇಕ ಕಂಪನಿಗಳು ವೆಚ್ಚ ಕಡಿತ ಹಾಗೂ ಇತರ ಕಾರಣಗಳನ್ನು ನೀಡಿ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಈ ನಡುವೆ ಭಾರತದಲ್ಲಿ ಐಟಿ ಕ್ಷೇತ್ರದ ಕಂಪನಿಗಳಿಂದ ಗುತ್ತಿಗೆದಾರರ ಮೂಲಕ ನೇಮಕಗೊಂಡ ಸುಮಾರು 60 ಸಾವಿರ ಹೊರಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿರುವುದಾಗಿ ನೇಮಕಾತಿ ಸಂಸ್ಥೆ ತಿಳಿಸಿದೆ.

    ಐಟಿ ಕ್ಷೇತ್ರದಲ್ಲಿ ಹೊಸ ಉದ್ಯೋಗಗಳ ಸೃಷ್ಟಿ ಕಡಿತಗೊಂಡಿರುವುದರಿಂದ ನೇಮಕಾತಿಗೂ ಹಿನ್ನಡೆಯಾಗಿದೆ ಎಂದು 120ಕ್ಕೂ ಹೆಚ್ಚು ನೇಮಕಾತಿ ಏಜೆನ್ಸಿಗಳನ್ನು ಪ್ರತಿನಿಧಿಸುವ ಭಾರತೀಯ ಸ್ಟಾಫಿಂಗ್‌ ಫೆಡರೇಷನ್‌ ಅಧ್ಯಕ್ಷ ಲೋಹಿತ್‌ ಭಾಟಿಯಾ ತಿಳಿಸಿದ್ದಾರೆ. ಇದರ ಹೊರತಾಗಿಯೂ ಉತ್ಪಾದನಾ ವಲಯ, ಲಾಜಿಸ್ಟಿಕ್ಸ್‌ ಮತ್ತು ಚಿಲ್ಲರೆ ವಲಯಗಳಲ್ಲಿ ದೇಶೀಯ ಗ್ರಾಹಕರ ಬೇಡಿಕೆಯಿಂದ ನೇಮಕಾತಿ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಮೊಬೈಲ್ ಫೋನ್ ಕಳೆದು ಹೋದ್ರೆ ಇನ್ನು ಚಿಂತಿಸಬೇಕಿಲ್ಲ – ಶೀಘ್ರವೇ ಕೇಂದ್ರ ತರಲಿದೆ ಟ್ರ್ಯಾಕಿಂಗ್ ಸಿಸ್ಟಮ್

    ಸುಮಾರು 194 ಶತಕೋಟಿ ಡಾಲರ್‌ ವ್ಯಾವಹಾರಿಕಾ ವಲಯವು ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಚೇತರಿಸಿಕೊಂಡಿದ್ದು. ಆ ಸಮಯದಲ್ಲಿ ಜನ ರಿಮೋರ್ಟ್‌ ಸಿಸ್ಟಮ್‌, ಆನ್‌ಲೈನ್‌ ಶಾಪಿಂಗ್‌ ಹಾಗೂ ಇನ್ನಿತರ ಸಾಫ್ಟ್‌ವೇರ್‌ ಸೇವೆಗಳನ್ನು ಹೆಚ್ಚಾಗಿ ಬಳಸಿಕೊಂಡಿದ್ದರಿಂದ ಅಭಿವೃದ್ಧಿಗೆ ಸಹಾಯ ಮಾಡಿತ್ತು. ಈ ವರ್ಷ ಉದ್ಯೋಗಿಗಳು ಕಚೇರಿಗಳಿಗೆ ಮರಳುತ್ತಿರುವುದರಿಂದ ಸಾಫ್ಟ್‌ವೇರ್‌ ವಯಲಕ್ಕೆ ಪೆಟ್ಟು ಬಿದ್ದಂತಾಗಿದೆ. ಜೊತೆಗೆ ರಷ್ಯಾ-ಉಕ್ರೇನ್‌ ನಡುವಿನ ಯುದ್ಧವೂ ಐಟಿ ಕ್ಷೇತ್ರ ಬೆಳವಣಿಗೆ ಪೆಟ್ಟು ನೀಡಿರುವುದಾಗಿ ಭಾಟಿಯಾ ಹೇಳಿದ್ದಾರೆ.

    ಐಟಿ ವಲಯದಲ್ಲಿ ಹೊರಗುತ್ತಿಗೆ ನೌಕರರ ನೇಮಕವು ಮಾರ್ಚ್‌ ತ್ರೈಮಾಸಿಕದಿಂದ ಶೇ.6 ರಷ್ಟು ಕಡಿತಗೊಂಡಿದೆ. ಇದರಿಂದಾಗಿ ಏಪ್ರಿಲ್‌ ವೇಳೆಗೆ ದೇಶದಲ್ಲಿ ನಿರುದ್ಯೋಗ ದರವು ಶೇ.7.8 ರಿಂದ ಶೇ.8.11ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರ (CMIE) ತಿಳಿಸಿದೆ. ಇದನ್ನೂ ಓದಿ: ವೊಡಾಫೋನ್‌ನಲ್ಲಿ ಶೇ.33ರಷ್ಟು ಕೇಂದ್ರದ ಪಾಲು – ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ

  • ಏಪ್ರಿಲ್‍ನಲ್ಲಿ 7.83% ಕ್ಕೆ ಏರಿದೆ ಭಾರತದ ನಿರುದ್ಯೋಗ ದರ

    ಏಪ್ರಿಲ್‍ನಲ್ಲಿ 7.83% ಕ್ಕೆ ಏರಿದೆ ಭಾರತದ ನಿರುದ್ಯೋಗ ದರ

    ನವದೆಹಲಿ: ಭಾರತದಲ್ಲಿ ನಿರುದ್ಯೋಗ ದರ ಏಪ್ರಿಲ್‍ನಲ್ಲಿ 7.83% ಏರಿಕೆಯಾಗಿದ್ದು, ಈ ಕುರಿತು ಮಾಧ್ಯಮ ಅಂಕಿಅಂಶ ಪ್ರಕಟವಾಗಿದೆ.

    ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದ ನಿರುದ್ಯೋಗ ದರವು ಮಾರ್ಚ್‍ನಲ್ಲಿ 7.60% ರಿಂದ ಏಪ್ರಿಲ್‍ನಲ್ಲಿ 7.83%ಕ್ಕೆ ಏರಿದೆ. CMIE ಅಂಕಿಅಂಶಗಳ ಪ್ರಕಾರ, ನಗರ ನಿರುದ್ಯೋಗ ದರವು ಈ ವರ್ಷದ ಮಾರ್ಚ್‍ನಲ್ಲಿ 8.28% ಇತ್ತು. ಆದರೆ ಏಪ್ರಿಲ್ ಅಂದರೆ ಒಂದೇ ತಿಂಗಳ ಅಂತರದಲ್ಲಿ 9.22%ಕ್ಕೆ ಏರಿದೆ. ಆದರೆ ಗ್ರಾಮೀಣ ನಿರುದ್ಯೋಗ ದರವು 7.29% ರಿಂದ 7.18% ಕ್ಕೆ ಇಳಿದಿದೆ ಎಂದು ತಿಳಿಸಿದೆ. ಇದನ್ನೂ ಓದಿ:  ಆಸ್ತಿಗಾಗಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಕ್ರೂರಿ

    ಮಾರ್ಚ್‍ನಲ್ಲಿ, ಹಣದುಬ್ಬರವು 17 ತಿಂಗಳ ಗರಿಷ್ಠ 6.95% ತಲುಪಿತು. ಏಪ್ರಿಲ್ 28 ರಂದು ನೀಡಲಾದ ಕೇಂದ್ರದ ತ್ರೈಮಾಸಿಕ ಉದ್ಯೋಗ ಸಮೀಕ್ಷೆ(QES) ಪ್ರಕಾರ, ವಾಣಿಜ್ಯ, ಉತ್ಪಾದನೆ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಒಂಬತ್ತು ಪ್ರಮುಖ ಕೈಗಾರಿಕೆಗಳು ಅಕ್ಟೋಬರ್ ಮತ್ತು ಡಿಸೆಂಬರ್ 2021 ರ ನಡುವೆ 4,00,000 ಉದ್ಯೋಗಗಳನ್ನು ನಿರ್ಮಿಸಿವೆ.

    ಈ ಹಿಂದೆ, ಇತ್ತೀಚಿನ ಎನ್‍ಎಸ್‍ಒ ಅಂಕಿಅಂಶಗಳ ಪ್ರಕಾರ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO) ಸೆಪ್ಟೆಂಬರ್ 2012 ಮತ್ತು ಈ ವರ್ಷದ ಫೆಬ್ರವರಿ ನಡುವೆ ಸುಮಾರು 5.18 ಕೋಟಿ ಚಂದಾದಾರರನ್ನು ನೇಮಿಸಿಕೊಂಡಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ ಒದಗಿಸಿದ ಅಂಕಿಅಂಶಗಳ ಪ್ರಕಾರ, ನಿರ್ದಿಷ್ಟ ಅವಧಿಯೊಳಗೆ ಇಪಿಎಫ್‍ಗೆ ಸೇರಿದ ಸದಸ್ಯರ ಸಂಖ್ಯೆಯು ದೇಶಾದ್ಯಂತ ಆ ಅವಧಿಯಲ್ಲಿ ರಚಿಸಲಾದ ಉದ್ಯೋಗಗಳ ಸಂಖ್ಯೆಯ ಒಳನೋಟವನ್ನು ಒದಗಿಸುತ್ತದೆ ಎಂದು ತಿಳಿಸಿದೆ.

    ರಾಷ್ಟ್ರೀಯ ಅಂಕಿಅಂಶ ಕಚೇರಿ(NSO)ಯ ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಸೆಪ್ಟೆಂಬರ್ 2017 ರಿಂದ ಫೆಬ್ರವರಿ 2022 ರ ಅವಧಿಗೆ ದೇಶದ ಉದ್ಯೋಗದ ದೃಷ್ಟಿಕೋನ ಕುರಿತು ಮಾಧ್ಯಮ ಟಿಪ್ಪಣಿಯನ್ನು ಬಿಡುಗಡೆ ಮಾಡಿದೆ. ಇದು ಪ್ರಗತಿಯನ್ನು ನಿರ್ಣಯಿಸಲು ಆಯ್ದ ಸರ್ಕಾರಿ ಏಜೆನ್ಸಿಗಳೊಂದಿಗೆ ಲಭ್ಯವಿರುವ ಆಡಳಿತಾತ್ಮಕ ದಾಖಲೆಗಳನ್ನು ಆಧರಿಸಿದೆ. ಇದನ್ನೂ ಓದಿ: ಸಿಐಡಿ ಕಚೇರಿಗೆ ಹೊಸಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಫ್ಯಾಮಿಲಿ 

    ಸರ್ಕಾರವು ತನ್ನದೇ ಆದ ಮಾಸಿಕ ಅಂದಾಜುಗಳನ್ನು ಬಹಿರಂಗಪಡಿಸದ ಕಾರಣ, ಅರ್ಥಶಾಸ್ತ್ರಜ್ಞರು ಮತ್ತು ನೀತಿ ನಿರೂಪಕರು ಮುಂಬೈ ಮೂಲದ CMIE ಯಿಂದ ಡೇಟಾವನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.