Tag: CM Siddramaiah

  • ಲವ್ ಜಿಹಾದ್ ಕಲಿಸೋ ಮದರಸಾಗಳಿಗೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡ್ತಿದೆ: ಯತ್ನಾಳ್ ಕೆಂಡ

    ಲವ್ ಜಿಹಾದ್ ಕಲಿಸೋ ಮದರಸಾಗಳಿಗೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡ್ತಿದೆ: ಯತ್ನಾಳ್ ಕೆಂಡ

    ವಿಜಯಪುರ: ಮದರಸಾ, ಉರ್ದು ಶಾಲೆಗಳಿಗೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡುತ್ತಿದೆ. ಆದರೆ ಮದರಸಾಗಳಲ್ಲಿ ಏನು ಕಲಿಸುತ್ತಾರೆ? ದೇಶ ವಿರೋಧಿ ವಿಚಾರಗಳೇ ಇರ್ತಾವೆ, ಲವ್ ಜಿಹಾದ್ ಮಾಡಬೇಕು ಅಂತ ಕಲಿಸ್ತಾರೆ. ಅಂತಹ ಮದರಸಾಗಳಿಗೆ ಸರ್ಕಾರ ಹಣ ಕೊಡ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಕಿಡಿಕಾರಿದರು.

    ಬಿಡದಿಯಲ್ಲಿ ಪಾಕಿಸ್ತಾನ ಪರ ಬರಹ ವಿಚಾರವಾಗಿ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕರ್ನಾಟಕದಲ್ಲಿ ಈ ಸಿದ್ದರಾಮಯ್ಯ ಸರ್ಕಾರ ನೋಡಿದ್ರೆ ಸಾಕಾಗಿದೆ. ಹಿಂದೂ ಹೆಣ್ಣುಮಕ್ಕಳ ಕೊಲೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರದ ಬಗ್ಗೆ ಭಯ ಉಳಿದಿಲ್ಲ. ಪಾಕಿಸ್ತಾನದ ಬಗ್ಗೆ ಬರಹ ಬರೀತಾರೆ ಅಂದರೆ, ಅವರು ಎಷ್ಟು ಸ್ವೇಚ್ಛಾಚಾರದಿಂದ ರಾಜ್ಯದಲ್ಲಿ ಜೀವನ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ಹನಿಮೂನ್ ಮೂಡ್‌ನಲ್ಲಿ ಲವ್ ಬರ್ಡ್ಸ್- ನಾಗಚೈತನ್ಯ ಜೊತೆ ಶೋಭಿತಾ ಜಾಲಿ ರೈಡ್

    ನಮ್ಮ ಗೃಹಮಂತ್ರಿಗಳಂತೂ ಏನು ಮಾಡುತ್ತಿಲ್ಲ. ಅವರು ಬಿಗ್ ಝೀರೋ, ರಾಜೀನಾಮೆ ಕೊಟ್ಟು ಬೇರೆ ಖಾತೆಯೂ ತಗೆದುಕೊಳ್ಳುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸರ್ಕಾರವು ಮದರಸಾಗೆ, ಉರ್ದು ಶಾಲೆಗೆ ಹಣ ಕೊಡುತ್ತಿದೆ. ಮದರಸಾದಲ್ಲಿ ಏನು ಕಲಿಸುತ್ತಾರೆ? ಅಲ್ಲಿ ದೇಶ ವಿರೋಧಿ ವಿಚಾರಗಳ ಇರುತ್ತವೆ. ಪಾಕಿಸ್ತಾನಕ್ಕೆ ಜೈ ಅನ್ನೋದನ್ನೇ ಕಲಿಸುತ್ತಾರೆ ಅಲ್ಲಿ. ಇಸ್ಲಾಂ ಅಂದರೆ ಇಡೀ ಅನ್ಯ ಧರ್ಮದವರನ್ನ ನಾಶ ಮಾಡಬೇಕು. ಅಲ್ಲಿ ಲವ್ ಜಿಹಾದ್ ಮಾಡಬೇಕು ಎಂದು ಕಲಿಸುತ್ತಾರೆ. ಸಿದ್ದರಾಮಯ್ಯ ಸರ್ಕಾರ ಅವರಿಗೆ ಹಣ ಕೊಡುತ್ತಿರುವುದರಿಂದ ಅವರಿಗೆ ದೊಡ್ಡ ಶಕ್ತಿ ಬಂದಿದೆ ಎಂದು ದೂರಿದರು. ಇದನ್ನೂ ಓದಿ: ಚಾಮರಾಜನಗರ | ತಲೆಯಲ್ಲಿ ಕೂದಲು ಇಲ್ಲ ಎಂದು ಪತ್ನಿಯ ಟಾರ್ಚರ್ – ಮನನೊಂದು ಪತಿ ಆತ್ಮಹತ್ಯೆ

    ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ತರಬೇತಿ ವಿಚಾರವಾಗಿ ಪ್ರತಿಕ್ರಿಯಿಸಿ, ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ಕಲಿಸಿದರೆ, ನಿತ್ಯ ನಮ್ಮ ಹೆಣ್ಣು ಮಕ್ಕಳ ಜೊತೆಗೆ ಹೊಡೆದಾಡಬೇಕಾ? ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿದೆಯಾ? ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಪುಲ್ವಾಮಾ ಸ್ಟೈಲ್‌ ದಾಳಿ – ಪಾಕ್‌ 90 ಸೈನಿಕರ ಹತ್ಯೆ: ಬಲೂಚ್ ಲಿಬರೇಶನ್ ಆರ್ಮಿ ಘೋಷಣೆ

    ಶುಕ್ರವಾರ ಹಾವೇರಿಯಲ್ಲಿ ಹಿಂದೂ ಯುವತಿಯನ್ನ ಮುಸ್ಲಿಂ ಯುವಕ ಕೊಲೆ ಮಾಡಿದ್ದಾನೆ. ನಿರಂತರವಾಗಿ ಹಿಂದೂ ಹಾಗೂ ದಲಿತ ಹೆಣ್ಣು ಮಕ್ಕಳ ಮೇಲೆ ಈ ಸರ್ಕಾರದಿಂದ ದೌರ್ಜನ್ಯ ನಡೆಯುತ್ತಿದೆ. ಇನ್ನೊಂದಿಷ್ಟು ದಿನಗಳಲ್ಲಿ ಜನರೇ ದಂಗೆ ಏಳುತ್ತಾರೆ ಎಂದು ಹೇಳಿದರು.

  • ಉಪಚುನಾವಣೆ ಬಳಿಕ ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಹೈಕಮಾಂಡ್‌ನಿಂದ ಸೂಚನೆ – ಜನಾರ್ದನರೆಡ್ಡಿ

    ಉಪಚುನಾವಣೆ ಬಳಿಕ ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಹೈಕಮಾಂಡ್‌ನಿಂದ ಸೂಚನೆ – ಜನಾರ್ದನರೆಡ್ಡಿ

    ಕೊಪ್ಪಳ/ಬಳ್ಳಾರಿ: ಉಪಚುನಾವಣೆ ಬಳಿಕ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ ಎಂದು ಶಾಸಕ ಜನಾರ್ದನರೆಡ್ಡಿ (G. Janardhana Reddy) ಹೇಳಿದರು.

    ಸಂಡೂರಿನಲ್ಲಿ (Sanduru) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಲೋಕಾಯುಕ್ತ ತನಿಖೆ ಸರಿಯಾಗಿ ನಡೆಯತ್ತಿಲ್ಲ. ಸಿಎಂ ಎ1 ಆರೋಪಿಯಾಗಿದ್ದು ಈ ಪ್ರಕರಣ ಸಿಬಿಐಗೆ ವಹಿಸಬೇಕು. ಸಿಎಂ ಜೈಲಿಗೆ ಹೋಗುವುದು ಗ್ಯಾರಂಟಿಯಾಗಿದೆ. ಉಪಚುನಾವಣೆ ಆದ ಮೇಲೆ ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ. 25 ಸಾವಿರ ಕೋಟಿ ರೂ. ಗಣಿಗಾರಿಕೆ ಹಣವನ್ನು ಸಂಗ್ರಹಿಸಿದ್ದಾರೆ. ಆದರೆ ಅದನ್ನು ಬಳಕೆ ಮಾಡಲು ಅವರಿಂದ ಆಗುತ್ತಿಲ್ಲ. ಅಭಿವೃದ್ಧಿ ಬದಲು ಆ ದುಡ್ಡು ಹೊಡೆಯಲು ಸಂಚು ರೂಪಿಸಿದ್ದಾರೆ ಎಂದರು.ಇದನ್ನೂ ಓದಿ: ಡಿಕೆಶಿ ರೀತಿ ನಾನು ಲೂಟಿ ಮಾಡಿದ್ರೆ ಪ್ರತಿ ತಾಲೂಕಿಗೆ 10 ಎಕರೆ ಜಾಗ ಕೊಡ್ತಿದ್ದೆ – ಹೆಚ್‌ಡಿಕೆ

    ಕರ್ನಾಟಕದ ಮುಖ್ಯಮಂತ್ರಿಯಾಗಿ ಬಳ್ಳಾರಿ, ಸಂಡೂರು ಜಿಲ್ಲೆಗೆ ಅವರ ಕೊಡುಗೆ ಏನು ಇಲ್ಲ. ಕುಡಿಯುವ ನೀರು, ಕೆರೆಗಳನ್ನು ನಿರ್ಮಾಣ ಮಾಡಿ, ತುಂಗಭದ್ರಾ ನೀರು ಹರಿಸಿ ಮನೆ ಮನೆಗೆ ನೀರು ಕೊಟ್ಟಿದ್ದೀವಿ. ಬಳ್ಳಾರಿ ನಗರ ಮೊದಲು ಹೇಗಿತ್ತು? ಈಗ ಹೇಗಾಗಿದೆ? ನಾವೆಲ್ಲ ಅಭಿವೃದ್ಧಿ ಮಾಡಿದ್ದೇವೆ. ಸಂಡೂರಿನಲ್ಲಿ ನಾವು ಗೆಲ್ಲದೇ ಇದ್ದರೂ 250 ಕೋಟಿ ರೂ. ರಸ್ತೆಗೆ ನೀಡಿದ್ದೇವೆ. ರೆಡ್ಡಿ ಬಗ್ಗೆ ಮಾತನಾಡದೇ ಇರಲು ಆಗುವುದಿಲ್ಲ, ಅಭಿವೃದ್ಧಿ ಕೆಲಸ ಏನೂ ಮಾಡಿಲ್ಲ ಎನ್ನುವ ಕಾರಣಕ್ಕೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಒಬ್ಬರ ಜೇಬಿಗೆ ಕತ್ತರಿ ಹಾಕಿಲ್ಲ, ಮೋಸ ಮಾಡಿಲ್ಲ ಎಂದು ತಿಳಿಸಿದರು.

    ಸಿದ್ದರಾಮಯ್ಯ (CM Siddaramaiah) ಅಹಂಕಾರದ ಮನುಷ್ಯ, ನಾನು 1 ಲಕ್ಷ ಕೋಟಿ ರೂ. ಲೂಟಿ ಮಾಡಿದ್ದೇನೆ ಎಂದು ಆರೋಪ ಮಾಡುತ್ತಾರೆ. ಸಿಎಂ ಹುಚ್ಚರಾಗಿದ್ದಾರೆ ಅವರ ಯುಪಿಎ ಸರ್ಕಾರ ಇದ್ದಾಗ ಏನು ಕಿತ್ತುಕೊಳ್ಳಲು ಆಗಲಿಲ್ಲ. ಈಗ ಏನು ಮಾತಾಡುತ್ತೀರಾ? ಅವರಿಗೆ ನೆಮ್ಮದಿ ಕದಡಿದೆ. ರಾತ್ರಿ ಸರಿಯಾಗಿ ನಿದ್ದೆಯೂ ಮಾಡಲ್ಲ. ಯಾವಾಗ ಅರೆಸ್ಟ್ ಆಗುತ್ತೀನೋ ಎನ್ನುವ ಭೀತಿಯಲ್ಲಿ ಬದುಕುತ್ತಿದ್ದಾರೆ. ನಾನು ಬಳ್ಳಾರಿಯಲ್ಲಿ ನೆಮ್ಮದಿಯಿಂದ ನನ್ನ ಜನಗಳ ಜೊತೆ ಇದ್ದೇನೆ. ಅಖಂಡ ಬಳ್ಳಾರಿಯಲ್ಲಿ ನನಗೆ ಜನರ ಬೆಂಬಲ ಇದೆ ಎಂದರು.ಇದನ್ನೂ ಓದಿ: Citadel Honey Bunny: ವರುಣ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ ಸಮಂತಾ- ದಂಗಾದ ಫ್ಯಾನ್ಸ್