Tag: cm siddarmaiah

  • ಒಡೆದ ಮನೆಯಾಯ್ತು ಪಂಚಮಸಾಲಿ ಮೀಸಲಾತಿ ಹೋರಾಟ – ಯತ್ನಾಳ್‌, ಶ್ರೀಗಳ ವಿರುದ್ಧ ಕಾಶಪ್ಪನವರ್ ಕಿಡಿ

    ಒಡೆದ ಮನೆಯಾಯ್ತು ಪಂಚಮಸಾಲಿ ಮೀಸಲಾತಿ ಹೋರಾಟ – ಯತ್ನಾಳ್‌, ಶ್ರೀಗಳ ವಿರುದ್ಧ ಕಾಶಪ್ಪನವರ್ ಕಿಡಿ

    ಬಾಗಲಕೋಟೆ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದಲ್ಲಿ (Panchamasali Lingayats’ Quota Demand) ಈಗ ಬಿರುಕು ಮೂಡಿದೆ. ಪಂಚಮಸಾಲಿ ಪೀಠದ ಶ್ರೀ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ವಿರುದ್ಧ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ (Vijayanand Kashappanavar) ಕಿಡಿಕಾರಿದ್ದಲ್ಲದೇ ಪ್ರತ್ಯೇಕ ಹೋರಾಟಕ್ಕೆ ತಯಾರಿ‌ ನಡೆಸಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಶ್ರೀ ಪಂಚಮಸಾಲಿ ಜಗದ್ಗುರು ಮಹಾಪೀಠದ ಸಭಾಭವನದಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ‌ ಸಭೆ ಬಳಿಕ ಮಾತನಾಡಿದ ಅವರು, ಇಲ್ಲಿಯವರೆಗೆ ಹಿಂದುಳಿದ ಆಯೋಗದ ಸಂಪೂರ್ಣ ವರದಿ ಬಂದಿಲ್ಲ. ಸಂಪೂರ್ಣ ವರದಿ ಬಂದ ಬಳಿಕ 2ಎ ಮೀಸಲಾತಿ ಕುರಿತು ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddarmaiah) ನೀಡಿದರೂ ಕೂಡ ಸ್ವಾಮೀಜಿ ಬಿಜೆಪಿ ಪಕ್ಷದ ಬ್ಯಾನರ್ ಅಡಿಯಲ್ಲಿ ಹೋರಾಟ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಸಿಸೇರಿಯನ್‌ ದುರಂತ: ಮೃತ ಮಹಿಳೆಯರ ಸಂಖ್ಯೆ ನಾಲ್ಕಕ್ಕೆ ಏರಿಕೆ

    ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನದ ವೇಳೆ ಡಿ.10 ರಂದು ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲು ಸ್ವಾಮೀಜಿ ಹಾಗೂ ಯತ್ನಾಳ್‌ ಅವರು ತಯಾರಿ‌ ನಡೆಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷನಾದ ನನ್ನ ಹಾಗೂ ಸಮಾಜದ ಹಿರಿಯರ ಗಮನಕ್ಕೆ ತಂದಿಲ್ಲ. ತಾವೇ ಬಿಜೆಪಿ ಪಕ್ಷದ ಬ್ಯಾನರ್ ಅಡಿಯಲ್ಲಿ ಸಭೆ ಮಾಡುತ್ತಿದ್ದಾರೆ. ಹೀಗಾಗಿ ಸ್ವಾಮೀಜಿಯವರ ನಡೆಯನ್ನು ಖಂಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಹೋರಾಟ ವಕ್ಫ್ ವಿರುದ್ಧ, ಯಾವುದೇ ಕುಟುಂಬದ ವಿರುದ್ಧವಲ್ಲ: ಯತ್ನಾಳ್

    2ಎ ಮೀಸಲಾತಿ ಹೋರಾಟ ಪಕ್ಷಾತೀತವಾಗಿ ಇರಬೇಕು. ಆದರೆ ಇವರ ಹೋರಾಟ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್‌ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ರಾಜ್ಯದ‌ ಪಂಚಮಸಾಲಿ ಸಮಾಜ ನನ್ನ ಬೆನ್ನ ಹಿಂದಿದೆ ಎಂದು ಹೇಳುತ್ತಿದ್ದಾರೆ. ತಾಕತ್ತು ದಮ್ಮು ಇದ್ದರೆ ಸಮಾಜದ ಹೆಸರನ್ನು ಬಳಸದೇ ವೈಯಕ್ತಿಕ ವರ್ಚಸ್ಸಿನ ಮೇಲೆ ಹೋರಾಟ ಮಾಡಲಿ ಎಂದು ಸವಾಲ್ ಎಸೆದರು.

     

    ಈ ಹಿಂದೆ ಯತ್ನಾಳ್‌ ಅವರು ನಮ್ಮ ದಿಕ್ಕು ತಪ್ಪಿಸಿ ಬೆಂಗಳೂರಿನವರೆಗೆ ಪ್ರಜ್ಞಾರಹಿತವಾಗಿ ಪಾದಯಾತ್ರೆ ಮಾಡಿದರು. ಬೆಂಗಳೂರಿನಲ್ಲಿ ಶೀಘ್ರದಲ್ಲಿಯೇ ಪಕ್ಷಾತೀತವಾಗಿ ಪಂಚಮಸಾಲಿ ಸಮಾಜದ ಮುಖಂಡರ ಸಭೆ ಕರೆದು 2ಎ ಮೀಸಲಾತಿ ಹೋರಾಟ ಮುಂದುವರೆಸುತ್ತೇವೆ. ಆದರೆ ಈ ಸಭೆಗೆ ಸ್ವಾಮೀಜಿ ಹಾಗೂ ಯತ್ನಾಳ್‌ ಅವರನ್ನು ಆಹ್ವಾನಿಸುವುದಿಲ್ಲ. ಮಾಜಿ‌ ಸಚಿವ ಮುರಗೇಶ್‌ ನಿರಾಣಿ ಅವರಿಗೆ ಆಹ್ವಾನವಿರುತ್ತದೆ ಎಂದು ಹೇಳಿದರು.

     

  • ಸಿದ್ದರಾಮಯ್ಯ ಸಂಡೇ ಲಾಯರ್, ರಾಹುಲ್ ಗಾಂಧಿ ಮೌನ ಏಕೆ?: ಛಲವಾದಿ ನಾರಾಯಣಸ್ವಾಮಿ ಕಿಡಿ

    ಸಿದ್ದರಾಮಯ್ಯ ಸಂಡೇ ಲಾಯರ್, ರಾಹುಲ್ ಗಾಂಧಿ ಮೌನ ಏಕೆ?: ಛಲವಾದಿ ನಾರಾಯಣಸ್ವಾಮಿ ಕಿಡಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddarmaiah) ಅವರು ಮುಡಾ ಪ್ರಕರಣದಲ್ಲಿ (MUDA) ಸೆಷನ್ ಆರಂಭಕ್ಕೂ ಮುನ್ನ ಆಯೋಗ ರಚನೆ ಮಾಡಿ ತನಿಖೆಗೆ ಕೊಡ್ತಾರೆ. ಅದು ಸಂಡೇ.. ಇದು ಸಂಡೇ ಲಾಯರ್ ಕೆಲಸ, ಮಂಡೇ ಲಾಯರ್ ಕೆಲಸ ಅಲ್ಲ ಎಂದು ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವ್ಯಂಗ್ಯವಾಡಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi)ಭ್ರಷ್ಟಾಚಾರ ಸಹಿಸಲ್ಲ ಅಂತಾ ಹೇಳಿದ್ದರು. ಈಗ ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಆದರೆ ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ. ಅವರಿಗೆ ಇನ್ನೂ ಭ್ರಷ್ಟಾಚಾರ ಗಮನಕ್ಕೆ ಬಂದಿಲ್ಲವಾ? ಅಥವಾ ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಿದ್ದೀರಾ? ಜೊತೆಗೆ ಈ ಕುರಿತು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಮಾತಾಡಿಲ್ಲ, ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಪರಿಷತ್ ಸದಸ್ಯ

    ದೆಹಲಿಯ ಎಐಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕು ಅಂದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ನಿಲುವು, ಸ್ಪಷ್ಟನೆ ಕುರಿತು ಕೇಳಬೇಕು ಅಂದುಕೊಂಡಿದ್ದೇವೆ. ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಅಂತಾ ಹೇಳಿದ್ದಾರೆ.

    ಇನ್ನೊಂದೆಡೆ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಕುರಿತು ಮಾತನಾಡಿ, ನೀವು ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದೀರಿ. ನೀವು ಕೇಂದ್ರದ ಕೆಲಸ ಮಾಡಿ, ಎನ್‌ಡಿಎ (NDA) ಪರ ದೇಶ ಸುತ್ತಿ ಕೆಲಸ ಮಾಡಿ. ನೀವು ಮೋದಿ ಜತೆ ಸೇರಿ ಕೆಲಸ ಮಾಡಿ. ಬೆಳಗ್ಗೆ ಒಂದು ಹೇಳಿಕೆ ಕೊಡುತ್ತಾರೆ. ಅದಕ್ಕೆ ನೀವು ರಿಪ್ಲೈ ಕೊಡಬೇಕು ಈ ರೀತಿ ಮಾಡಿ ನಿಮ್ಮನ್ನು ಡೈವರ್ಟ್ ಮಾಡುತ್ತಾರೆ. ನಿಮ್ಮನ್ನು ಟ್ರ್ಯಾಪ್ ಮಾಡಲು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ (D K Shivakumar) ಈ ರೀತಿ ಮಾಡ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಪಾದಯಾತ್ರೆಯಲ್ಲಿ ಬರೀ ಅವರ ಆಸ್ತಿ ಇವರ ಆಸ್ತಿ ಬಗ್ಗೆ ಅಷ್ಟೇ ಚರ್ಚೆಯಾಯಿತು. ಅವರ ಹೇಳಿಕೆಗಳಿಗೆ ರಿಯಾಕ್ಟ್ ನೀವು ಮಾಡಬೇಡಿ ಅಂತಾ ಸಲಹೆ ಕೊಟ್ಟಿದ್ದಾರೆ.ಇದನ್ನೂ ಓದಿ: ರಾಜ್ಯಪಾಲರು ಸರ್ಕಾರದ ವಿರುದ್ಧ ಇರೋದು ಸ್ಪಷ್ಟ – ಪರಮೇಶ್ವರ್ ಆರೋಪ

    ಇದೇ ವೇಳೆ ಡಿಕೆಶಿ ವಿರುದ್ಧ ಮಾತನಾಡಿ, ನೀರಿನ ತೆರಿಗೆ ವಿಚಾರದಲ್ಲಿ ಡಿಕೆಶಿ ಬೆಂಗಳೂರಿಗರ ಮೇಲೆ ಸಿಟ್ಟು ತೋರಿಸಿದ್ದಾರೆ. ನಿಮಗೆ ಯಾಕೆ ಅಷ್ಟೊಂದು ಸಿಟ್ಟು? ಹೆಚ್ಚು ತೆರಿಗೆ ಕಟ್ಟಲು ಬೆಂಗಳೂರು ಆಗ ಬೇಕು.. ಈಗ ಬೇಡ್ವಾ? ಬೆಂಗಳೂರಿಗೆ ನೀವು ಏಕೆ ಬೇಕು? ಬೆಂಗಳೂರಿಗೆ ನಿಮ್ಮ ಕೊಡುಗೆ ಏನು? ಡಿಸಿಎಂ ಅವರು ಬೆಂಗಳೂರಿಗರ ಮೇಲೆ ಗದಾಪ್ರಹಾರ ಮಾಡಿದ್ದಾರೆ. ಇಲ್ಲಿಯವರ ಬಗ್ಗೆ ನೀವು ಮಾತನಾಡಿದ್ದು ಅಪರಾಧ. ಡಿಕೆಶಿ ಅವರೇ ನಮ್ಮ ನಗರದ ಜನರ ಪರವಾಗಿ ನಾವು ರಾಜೀನಾಮೆ ಕೊಡಿ ಎಂದು ಕೇಳ್ತಾ ಇದ್ದೀವಿ. ಯೋಗ್ಯತೆ ಇರೋರು ಬರಲಿ ಎಂದು ಆಗ್ರಹಿಸಿದ್ದಾರೆ.

  • ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರನ್ನು ತರಾಟೆಗೆ ತೆಗದುಕೊಂಡ ಸಿಎಂ- ಕಲಬುರಗಿಯಲ್ಲಿ ಬಹಮನಿ ಉತ್ಸವ ರದ್ದು

    ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರನ್ನು ತರಾಟೆಗೆ ತೆಗದುಕೊಂಡ ಸಿಎಂ- ಕಲಬುರಗಿಯಲ್ಲಿ ಬಹಮನಿ ಉತ್ಸವ ರದ್ದು

    ಕಲಬುರಗಿ: ಹಲವಾರು ಟೀಕೆಗಳ ನಂತರ ಕಲಬುರಗಿಯಲ್ಲಿ ಬಹಮನಿ ಉತ್ಸವ ರದ್ದಾಗಿದೆ. ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಕೊನೆಗೂ ಮಣಿದ ರಾಜ್ಯ ಸರ್ಕಾರ ಉತ್ಸವ ಆಚರಣೆಯಿಂದ ಹಿಂದೆ ಸರಿದಿದೆ.

    ಸಚಿವ ಸಂಪುಟ ಸಭೆಯಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ, ಯಾರ ಜೊತೆ ಚರ್ಚಿಸಿ ನೀವು ಉತ್ಸವ ಮಾಡಲು ಹೊರಟಿದ್ದಿರಿ ಪಾಟೀಲರೇ? ಏತಕ್ಕಾಗಿ ಉತ್ಸವ ಮಾಡಲು ಹೊರಟಿರಿ?. ನಾನು ಜನರಿಗೆ, ಮಾಧ್ಯಮದವರಿಗೆ ಏನಂತ ಉತ್ತರ ಕೊಡಲಿ? ಎಂದು ಸಿಎಂ ಅವರು ಸಚಿವರಿಗೆ ಪ್ರಶ್ನೆಗಳ ಸುರಿಮಳೆಗೈದರು.

    ಈ ಕೂಡಲೇ ನೀವು ಕಲಬುರಗಿಗೆ ತೆರಳಿ ಉತ್ಸವ ರದ್ದು ಅಂತಾ ಅಧಿಕೃತವಾಗಿ ಘೋಷಣೆ ಮಾಡಿ ಅಂತಾ ಸಿಎಂ ತಾಕೀತು ಮಾಡಿದ್ದಾರೆ ಅಂತ ಪಬ್ಲಿಕ್ ಟಿವಿಗೆ ಉನ್ನತ ಮೂಲಗಳ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಬಹಮನಿ ಸುಲ್ತಾನರ ಉತ್ಸವ ಆಚರಣೆಯಿಂದ ಸಚಿವರು ಹಿಂದೆ ಸರಿದಿದ್ದಾರೆ ಅಂತ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

    https://www.youtube.com/watch?v=4RlmyYKDuh0

  • ಕಾರ್ ನಂ.1 ಸಿಎಂ ಸಿದ್ದರಾಮಯ್ಯ ಕಾರಿಗೇ ಎಂಟ್ರಿ ಕೊಡಲಿಲ್ಲ ಪೊಲೀಸ್!

    ಕಾರ್ ನಂ.1 ಸಿಎಂ ಸಿದ್ದರಾಮಯ್ಯ ಕಾರಿಗೇ ಎಂಟ್ರಿ ಕೊಡಲಿಲ್ಲ ಪೊಲೀಸ್!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಗುಪ್ತಚರ ಇಲಾಖೆ ಡಿಜಿ ಎಂಎನ್ ರೆಡ್ಡಿಗೆ ಪೊಲೀಸರಿಂದಲೇ ಅಪಮಾನವಾಗಿದೆ.

    ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಇಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ರೀಲಾಂಚ್ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಕಾರನ್ನು ಒಳಗೆ ಬಿಡದೇ ಸುಮಾರು 20 ನಿಮಿಷ ಸತಾಯಿಸಿದ ಪೊಲೀಸರ ಕ್ರಮದಿಂದ ಬೇಸತ್ತು, ಕೊನೆಗೆ ಸಿಎಂ ತಾವೇ ಇಳಿದು ನಡೆದು ಕೊಂಡು ಅಂಬೇಡ್ಕರ್ ಭವನದ ಒಳಗೆ ಹೋಗಿದ್ದಾರೆ.

    ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಮಾಹಿತಿ ತಿಳಿಸಿದ ಬಳಿಕ ಸಿಎಂ ಕಾರಿಗೆ ಪೊಲೀಸರು ಅಂಬೇಡ್ಕರ್ ಭವನದ ಗೇಟ್ ತೆರೆದು ಕಾರು ಒಳಗೆ ಹೋಗಲು ಅನುಮತಿ ಕೊಟ್ಟಿದ್ದಾರೆ. ಇನ್ನೂ ವಿಶೇಷ ಎಂದರೆ ಸಿಎಂ ಬಂದ ಕಾರಿನಲ್ಲಿ ‘ಕಾರ್ ನಂಬರ್ 1 – ಗೌರವಾನ್ವಿತ ಮುಖ್ಯಮಂತ್ರಿ’ ಎಂದು ಬರೆಯಲಾಗಿತ್ತು. ಆದರೂ ಪೊಲೀಸರು ಇವರ ಕಾರಿಗೆ ಅನುಮತಿ ನಿರಾಕರಿಸಿದ್ದು ವಿಶೇಷ.

    ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ರಾಜ್ಯಪಾಲ ವಜುಭಾಯಿ ವಾಲಾ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಎಐಸಿಸಿ ಖಚಾಂಚಿ ಮೋತಿಲಾಲ್ ವೋರಾ ಸೇರಿದಂತೆ ಕಾಂಗ್ರೆಸ್ ಸಂಸದರು, ಶಾಸಕರು ಹಾಗೂ ಪದಾಧಿಕಾರಿಗಳು ಭಾಗಿಯಾಗಿದ್ದರು

    https://www.youtube.com/watch?v=u5vadvMnXpQ