Tag: cm siddaramaih

  • ಡಾ.ರಾಜ್‌ಕುಮಾರ್ ಅವರು ಸರಳತೆ, ಸಂಸ್ಕಾರದ ರಾಯಭಾರಿ ಆಗಿದ್ರು- ಸಿಎಂ ಸಿದ್ದರಾಮಯ್ಯ

    ಡಾ.ರಾಜ್‌ಕುಮಾರ್ ಅವರು ಸರಳತೆ, ಸಂಸ್ಕಾರದ ರಾಯಭಾರಿ ಆಗಿದ್ರು- ಸಿಎಂ ಸಿದ್ದರಾಮಯ್ಯ

    ದೊಡ್ಮನೆ ರಾಜ್‌ಕುಮಾರ್ (Dr.Rajkumar) ಅವರ ಕುಟುಂಬ ದಶಕಗಳಿಂದ ತಮ್ಮ ಸಿನಿಮಾಗಳ ಮೂಲ ಮನರಂಜನೆ ನೀಡುತ್ತಾ ಬಂದಿದ್ದಾರೆ. ಸಿನಿಮಾ ಅಷ್ಟೇ ಶಿಕ್ಷಣ ಕ್ಷೇತ್ರಕ್ಕೂ ಡಾ.ರಾಜ್‌ಕುಮಾರ್ ಅಕಾಡೆಮಿ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಅವರ ಅಕಾಡೆಮಿಯಿಂದ ಸಾಕಷ್ಟು ವಿದ್ಯಾರ್ಥಿಗಳು ಐಎಎಸ್ ಅಧಿಕಾರಿಗಳಾಗಿ ಹೊರಹೊಮ್ಮಿದ್ದಾರೆ.

    ಈ ಬಾರಿಯೂ ರಾಜ್‌ಕುಮಾರ್ ಅಕಾಡೆಮಿಯಿಂದ ಹಲವು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಐಎಎಸ್ ಅಧಿಕಾರಿಗಳಾಗುತ್ತಿದ್ದಾರೆ. ಅಂಥಹವರಿಗೆ ಸನ್ಮಾನ ಕಾರ್ಯಕ್ರಮವನ್ನು ರಾಜ್‌ಕುಮಾರ್ ಕುಟುಂಬ ಇರಿಸಿಕೊಂಡಿತ್ತು, ಜೊತೆಗೆ ಅಪ್ಪು ಹೆಸರಲ್ಲಿ ಪೃಥ್ವಿ ಸ್ಕಾಲರ್‌ಶಿಪ್ ಟೆಸ್ಟ್ ಲೋಗೋ ಬಿಡುಗಡೆ ಕಾರ್ಯಕ್ರಮವೂ ಇಂದು (ಜೂನ್ 9) ನಡೆಯಿತು. ದೊಡ್ಮನೆ ಕುಟುಂಬದವರು ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ (Cm Siddaramaiah) ಅತಿಥಿಯಾಗಿ ಆಗಮಿಸಿದ್ದರು. ವರನಟ ರಾಜ್‌ಕುಮಾರ್, ಅಪ್ಪುರನ್ನ (Appu) ಸಿಎಂ ಸ್ಮರಿಸಿ ಹಾಡಿ ಹೊಗಳಿದರು.

    ಈ ಕಾರ್ಯಕ್ರಮದಲ್ಲಿ ನಾನು ಬಹಳ ಸಂತೋಷದಿಂದ ಭಾಗವಹಿಸಿದ್ದೇನೆ. ಡಾ ರಾಜ್ ಈ ನಾಡು ಕಂಡ ಶ್ರೇಷ್ಠ ನಟ, ಅವರು ಹಳ್ಳಿಯವರು ನಮ್ಮ ಜಿಲ್ಲೆಯವರೇ. ಅವರನ್ನ ಭೇಟಿಯಾದಾಗ ಬನ್ನಿ ಬನ್ನಿ ನಮ್ ಕಾಡಿನವರು ಅಂತ ಕರೀತಾ ಇದ್ರು. ಜನರನ್ನ ಬಹಳ ಗೌರವಯುತವಾಗಿ ಮಾತಾಡಿಸುವ ಸಂಸ್ಕೃತಿಯನ್ನ ರೂಢಿಸಿಕೊಂಡಿದ್ದರು, ಅದನ್ನ ನಾವು ಸಹ ರೂಢಿಸಿಕೊಳ್ಳಬೇಕು. ಎಲ್ಲರನ್ನು ಗೌರವಿಸುವುದನ್ನು ಪ್ರೀತಿಸುವುದನ್ನು ಕಲಿಯಬೇಕು. ಅದನ್ನು ರಾಜಕುಮಾರ್ ರಿಂದ ಕಲೀಬೇಕು, ಮಕ್ಕಳಂತಿದ್ದವರು ರಾಜಕುಮಾರ್, ಅವರು ಯಾವತ್ತು ಕೆಟ್ಟದ್ದನ್ನ ಯೋಚನೆ ಮಾಡಿರಲಿಲ್ಲ ಎಂದು ಗುಣಗಾನ ಮಾಡಿದರು. ಇದನ್ನೂ ಓದಿ:4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಸುಶ್ಮಿತಾ ಸೇನ್ ಸಹೋದರ ರಾಜೀವ್

    ನಾನು ರಾಜ್‌ಕುಮಾರ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದಿನಿ ಅವರು ಜೀವನವನ್ನು ಸಾರ್ಥಕ ಮಾಡಿಕೊಂಡಿದ್ದರು ಎಂದ ಸಿದ್ದರಾಮಯ್ಯ, ನಮ್ಮ ದೇಶದಲ್ಲಿ ಚಾರಿತ್ರಿಕ ಕಾರಣದಿಂದ ಹಲವಾರು ಮಂದಿಗೆ ಶಿಕ್ಷಣ ಸಿಕ್ಕಿರಲಿಲ್ಲ. ನೂರಾರು ವರ್ಷಗಳ ಕಾಲ ಬಹು ಸಂಖ್ಯಾತ ಜನ ಶಿಕ್ಷಣದಿಂದ ವಂಚಿತರಾಗಿದ್ದರು. ಜಾತಿ ವ್ಯವಸ್ಥೆ ಮತ್ತು ಶಿಕ್ಷಣದ ಕಾರಣದಿಂದ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಭಿವೃದ್ದಿ ಆಗಿರಲಿಲ್ಲ ಎಂದರು. ಡಾ.ರಾಜ್‌ಕುಮಾರ್ ಅವರು ಸರಳತೆ ಸಂಸ್ಕಾರದ ರಾಯಭಾರಿ ಆಗಿದ್ರು ಎಂದು ಸಿಎಂ ಮಾತನಾಡಿದ್ದರು. ಅಪ್ಪು ಅವರನ್ನ ಕೂಡ ಈ ವೇಳೆ ಸ್ಮರಿಸಿದ್ದರು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಡಾ ರಾಜ್‌ಕುಮಾರ್ ಅಕಾಡೆಮಿ ಹಾಗೂ ರಾಜ್ ಕುಟುಂಬ ಸನ್ಮಾನ ಮಾಡಿತು. ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ದೊಡ್ಮನೆ ಕುಟುಂಬದ ಇನ್ನೂ ಕೆಲವರು ಭಾಗಿಯಾಗಿದ್ದರು.

  • ಮೈಸೂರು ವಿವಿಯಿಂದ ಸಿಎಂ ಗೆ ಗೌರವ ಡಾಕ್ಟರೇಟ್ ನೀಡುವಂತೆ ಶಿಫಾರಸ್ಸು

    ಮೈಸೂರು ವಿವಿಯಿಂದ ಸಿಎಂ ಗೆ ಗೌರವ ಡಾಕ್ಟರೇಟ್ ನೀಡುವಂತೆ ಶಿಫಾರಸ್ಸು

    ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡುವಂತೆ ವಿವಿಯ ಸಿಂಡಿಕೇಟ್ ಸದಸ್ಯರೊಬ್ಬರು ಶಿಫಾರಸ್ಸು ಮಾಡಿದ್ದಾರೆ.

    ವಿವಿಯ ಸಿಂಡಿಕೇಟ್ ಸದಸ್ಯ ಎಂಎಸ್‍ಎಸ್ ಕುಮಾರ್ ಎಂಬವರು ಮೈಸೂರು ವಿವಿಯ ಕುಲಪತಿಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. 2018ನೇ ಸಾಲಿನ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡುವಂತೆ ಸಿಂಡಿಕೇಟ್ ಸದಸ್ಯ ಮನವಿ ಮಾಡಿದ್ದಾರೆ.

    ಸಮಾಜದಲ್ಲಿ ಗಣ್ಯವ್ಯಕ್ತಿಗಳಿಗೆ ನೀಡುವ ಗೌರವ ಡಾಕ್ಟರೇಟ್ ಪದವಿಗೆ ಸಿದ್ದರಾಮಯ್ಯ ಅವರು ಅರ್ಹರಿದ್ದಾರೆ. ಅವರು ಇದೇ ವಿವಿಯಲ್ಲಿ ಪದವಿ ಕೂಡ ಪಡೆದಿದ್ದಾರೆ. ಮೈಸೂರಿನಿಂದ ಹೋಗಿ ರಾಜ್ಯದ ಚುಕ್ಕಾಣಿ ಹಿಡಿದು ಉತ್ತಮ ಆಡಳಿತ ನಡೆಸಿದ್ದಾರೆ. ಇಂಥವರಿಗೆ ಡಾಕ್ಟರೇಟ್ ನೀಡಿದರೆ ಮೈಸೂರು ವಿವಿಯ ಘನತೆ ಹೆಚ್ಚಲಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯನವರಿಗೆ ಈ ಸಾಲಿನ ಗೌರವ ಡಾಕ್ಟರೇಟ್‍ನೀಡುವಂತೆ ಶಿಫಾರಸ್ಸು ಮಾಡುತ್ತಿದ್ದೇನೆ ಎಂದು ಸಿಂಡಿಕೇಟ್ ಸದಸ್ಯ ಕುಮಾರ್ ಪತ್ರದಲ್ಲಿ ವಿವರಿಸಿದ್ದಾರೆ.

    ಇದರ ಜೊತೆಗೆ ಇತರೆ ಸಿಂಡಿಕೇಟ್ ಸದಸ್ಯರು ಸುತ್ತೂರು ಶ್ರೀ, ಸಾಲು ಮರದ ತಿಮ್ಮಕ್ಕ, ಇಸ್ರೋ ಅಧ್ಯಕ್ಷ ಕಿರಣ್‍ಕುಮಾರ್ ಅವರಿಗೆ ಕೂಡ ಗೌರವ ಡಾಕ್ಟರೇಟ್ ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ.

  • 2018ಕ್ಕೂ ನಾನೇ ಸಿಎಂ ಅಂತಿದ್ದ ಸಿದ್ದರಾಮಯ್ಯ ಉಲ್ಟಾ-ಸಿಎಂ ಕನಸಿಗೆ ಬ್ರೇಕ್ ಹಾಕ್ತಾ ಹೈಕಮಾಂಡ್?

    2018ಕ್ಕೂ ನಾನೇ ಸಿಎಂ ಅಂತಿದ್ದ ಸಿದ್ದರಾಮಯ್ಯ ಉಲ್ಟಾ-ಸಿಎಂ ಕನಸಿಗೆ ಬ್ರೇಕ್ ಹಾಕ್ತಾ ಹೈಕಮಾಂಡ್?

    ಮೈಸೂರು: ಹೋದಲ್ಲಿ ಬಂದಲ್ಲಿ, ಈ ಬಾರಿಯೂ ಕಾಂಗ್ರೆಸ್ ಗೆಲ್ಲುತ್ತೆ, ಮತ್ತೆ ನಾನೇ ಸಿಎಂ ಆಗುತ್ತೇನೆ ಎಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ಬುಧವಾರ ಉಲ್ಟಾ ಹೊಡೆದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿಎಂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆದ್ರೆ ನಾನೇ ಮುಖ್ಯಮಂತ್ರಿ ಆಗ್ತೀನಿ ಅನ್ನೋದು ಅನುಮಾನ ಎಂದಿದ್ದಾರೆ.

    ಈ ಮೂಲಕ ಸಿಎಂ ರೇಸ್‍ನಿಂದ ಹಿಂದೆ ಸರಿಯುವ ಮಾತನಾಡಿದ್ದಾರೆ. ಇದಕ್ಕೆ ಕಾರಣ ಏನು ಅಂತಾ ಗೊತ್ತಾಗಿಲ್ಲ. ಸಿಎಂ ರೇಸ್‍ನಲ್ಲಿ ತಮಗಿಂತ ಪ್ರಭಾವಿಗಳು ಇದ್ದಾರೆ ಅನ್ನೋ ಲೆಕ್ಕಾಚಾರವೋ, ಅಥವಾ ಹೈಕಮಾಂಡ್ ಮತ್ತೆ ತಮ್ಮನ್ನು ಸಿಎಂ ಮಾಡಲ್ಲ ಅನ್ನೋ ಅವಿಶ್ವಾಸವೋ ಅಥವಾ ಶಾಸಕರು ತಮ್ಮನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂಬ ಅನುಮಾನವೋ ಗೊತ್ತಿಲ್ಲ.

    ಇತ್ತೀಚಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ ಸಾರ್ವಜನಿಕ ಸಭೆಯೊಂದರಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಸಿಎಂ ಆಗ್ತೀನಿ ಅಂತಾ ಹೇಳಿದ್ದರು. ಆದರೆ ಅದಾದ ಬಳಿಕ ಉಲ್ಟಾ ಹೊಡೆದ ಶಿವಕುಮಾರ ಅವರು ಇಲ್ಲ ಸಿದ್ದರಾಮಯ್ಯನವರೇ ನಮ್ಮ ಸಿಎಂ ಅಭ್ಯರ್ಥಿ ಎಂದು ಹೇಳಿದ್ದರು.

  • ರಾಜಕೀಯ ಏನಿಲ್ಲ ನಾವು ಫ್ರೆಂಡ್ಸ್ ಅಂತಾರೆ ಸಿಎಂ- ಮತ್ತೆ ಸಂಪುಟ ಸೇರ್ತಾರಾ ಅಂಬರೀಷ್?

    ರಾಜಕೀಯ ಏನಿಲ್ಲ ನಾವು ಫ್ರೆಂಡ್ಸ್ ಅಂತಾರೆ ಸಿಎಂ- ಮತ್ತೆ ಸಂಪುಟ ಸೇರ್ತಾರಾ ಅಂಬರೀಷ್?

    ಬೆಂಗಳೂರು: ಸಚಿವ ಸ್ಥಾನದಿಂದ ಕೈಬಿಟ್ಟ ಬಳಿಕ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಅಂಬರೀಷ್ ರೆಬೆಲ್ ಆಗಿದ್ರು. ನಂಜನಗೂಡು, ಗುಂಡ್ಲುಪೇಟೆ ಚುನಾವಣೆ ವೇಳೆಯೂ ಪ್ರಚಾರಕ್ಕೆ ಹೋಗಿರಲಿಲ್ಲ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಂಬರೀಷ್ ಹೆಸರು ಇರಲಿಲ್ಲ. ಆದ್ರೆ ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ, ಏಕಾಏಕಿ ಅಂಬರೀಷ್ ಅವರ ಗಾಲ್ಫ್ ಕೋರ್ಟ್ ರಸ್ತೆಯಲ್ಲಿರೋ  ನಿವಾಸಕ್ಕೆ ತೆರಳಿ ಔತಣಕೂಟದಲ್ಲಿ ಭಾಗಿಯಾಗಿದ್ರು.

    ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಡಿನ್ನರ್ ನೆಪದಲ್ಲಿ ಚರ್ಚಿಸಿದ ನಾಯಕರು, ಆ ಬಳಿಕ ಹೊರಬಂದು ಹಿಂದೆ ಜೆ ಪಿ ನಗರದಲ್ಲಿದ್ದ ಅಂಬರೀಷ್ ಮನೆಗೂ ಹೋಗಿದ್ದೆ. ಆದ್ರೆ ಇಲ್ಲಿ ಊಟಕ್ಕೆ ಬಂದಿರಲಿಲ್ಲ. ಊಟಕ್ಕೆ ಕರೆದ್ರ ಹಂಗೆ ಬಂದೆ. ರಾಜಕಾರಣದವರಾಗಿದ್ದರಿಂದ ರಾಜಕೀಯ ಬಗ್ಗೆ ಚರ್ಚೆ ಮಾಡದೇ ಇರ್ತೀವಾ?. ಅಸಮಾಧಾನ, ಕೋಪ ಇದ್ರೆ ಸಮಾಧಾನ ಮಾಡ್ಬೇಕು. ಇವತ್ತಿಂದ ಅಲ್ಲ ಸುಮಾರು 40-45 ವರ್ಷದಿಂದಲೇ ನಾನು ಅಂಬರೀಷ್ ಫ್ರೆಂಡ್ಸ್. ರಾಜಕೀಯದಲ್ಲಿ ಎಳುಬೀಳುಗಳು ಇದ್ದೇ ಇರ್ತವೆ. ಆದ್ರೆ ಗೆಳತನಕ್ಕೆ ಧಕ್ಕೆ ಇಲ್ಲ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ರು.

    ಇತ್ತ ಅಂಬರೀಷ್ ಮಾಧ್ಯಮದೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹಾಗೂ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಗಳು ಆಗಬೇಕೆಂದು ಆಸೆ ಪಟ್ಟೋನು ನಾನು. ನನ್ನ ಸಚಿವರನ್ನಾಗಿ ಮಾಡಿ ಅಂತಾ ಸಿಎಂ ಅವರನ್ನು ನಾನು ಕೇಳಿಲ್ಲ. ಮಿನಿಸ್ಟರ್ ಮಾಡಿದ್ದಾರೆ ಸಂತೋಷ. ಶಾಸಕರಾದ ಎಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇದ್ದೇ ಇರತ್ತೆ. ಅವರಿಗೆ ಬಿಟ್ಟುಕೊಟ್ಟಿದ್ದೀವಿ ತೊಂದ್ರೆಯಿಲ್ಲ. ನನ್ನಷ್ಟದಂತೆ ನಾನು ಇಲ್ಲಿ ಇದ್ದೀನಿ ಅಂತಾ ಹೇಳಿದ್ರು.

    ಒಟ್ಟಿನಲ್ಲಿ ಅಂಬಿಯನ್ನ ಸಂಪುಟದಿಂದ ಕೈ ಬಿಟ್ಟ ಬಳಿಕ ಸಿಎಂ ಮೊದಲ ಬಾರಿಗೆ ಅಂಬರೀಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರೋದು ಕುತೂಹಲ ಮೂಡಿಸಿದೆ. ಸಿಎಂ ವಿರುದ್ಧ ಸ್ವತಃ ಅಂಬರೀಷ್ ಬಹಿರಂಗವಾಗಿ ಕಿಡಿಕಾರಿದ್ರು. ಆದ್ರೀಗ ಮತ್ತೆ ದೋಸ್ತಿ ಕುದುರಿದ್ದು, ಅಂಬಿಯನ್ನ ಸಿದ್ದರಾಮಯ್ಯ ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸಿಎಂಗಾಗಿ ನಾಟಿ ಕೋಳಿ ಸಾರು, ಮುದ್ದೆ ಸಿದ್ದಮಾಡಿಸಿದ್ರು. ಒಟ್ಟಿನಲ್ಲಿ ಮಾಜಿ ಸಚಿವ ಅಂಬರೀಷ್ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿರುವ ಹಿಂದೆ ಭಾರೀ ರಾಜಕೀಯ ತಂತ್ರಗಾರಿಕೆ ಅಡಗಿದೆ ಎನ್ನಲಾಗ್ತಿದೆ.

    ಔತಣಕೂಟದಲ್ಲಿ ಸಚಿವರಾದ ಕೆ ಜೆ ಜಾರ್ಜ್, ಎ.ಬಿ.ಪಾಟೀಲ್, 1 ಸಾವಿರ ಕೋಟಿ ವೆಚ್ಚದಲ್ಲಿ `ಮಹಾಭಾರತ’ ಚಿತ್ರ ನಿರ್ಮಾಣ ಮಾಡಲು ಮುಂದಾಗಿರುವ ಕರಾವಳಿ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಉಪಸ್ಥಿತರಿದ್ರು.