Tag: CM seat

  • ಸಿಎಂ ಸ್ಥಾನ ಖಾಲಿ ಇಲ್ಲ, ಖಾಲಿ ಆಗುವ ಪ್ರಶ್ನೆಯೂ ಇಲ್ಲ: ಹೆಚ್.ಕೆ.ಪಾಟೀಲ್

    ಸಿಎಂ ಸ್ಥಾನ ಖಾಲಿ ಇಲ್ಲ, ಖಾಲಿ ಆಗುವ ಪ್ರಶ್ನೆಯೂ ಇಲ್ಲ: ಹೆಚ್.ಕೆ.ಪಾಟೀಲ್

    ಗದಗ: ಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿ ಆಗುವ ಪ್ರಶ್ನೆಯೂ ಇಲ್ಲ ಎಂದು ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ (H K Patil) ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ಕಿಡಿಕಾರಿದರು.

    ಗದಗ ಹೊರವಲಯದ ನಾಗಾವಿ ಬಳಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (Karnataka State Rural Development and Panchayat Raj University) ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿ ಆಗುವ ಪ್ರಶ್ನೆಯೂ ಇಲ್ಲ. ಸಿದ್ದರಾಮಯ್ಯನವರೇ (CM Siddaramaiah) ನಮ್ಮ ಸಿಎಂ ಹಾಗೂ ನಮ್ಮ ನಾಯಕರು. ಅನಾವಶ್ಯಕವಾಗಿ ಸಿಎಂ ಸ್ಥಾನದ ಬಗ್ಗೆ ಮಾಧ್ಯಮದವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.ಇದನ್ನೂ ಓದಿ: ರಾಹುಲ್‌ ಹೇಳಿಕೆ ಉಲ್ಲೇಖಿಸಿ ಪ್ರತ್ಯೇಕ ಖಲಿಸ್ತಾನ ರಾಷ್ಟ್ರ ಬೇಡಿಕೆ ಮುಂದಿಟ್ಟ ಉಗ್ರ ಪನ್ನುನ್

    ಸಿಎಂ ಸ್ಥಾನದ ರೇಸ್‌ನಲ್ಲಿ ಹೆಚ್.ಕೆ.ಪಾಟೀಲ್ ಹೆಸರು ಕೇಳಿ ಬರುತ್ತಿರುವ ವಿಷಯವಾಗಿ ಮಾತನಾಡಿ, ಸಿಎಂ ಸ್ಥಾನ ಖಾಲಿಯೂ ಇಲ್ಲ. ಆ ಪ್ರಶ್ನೆ ಉದ್ಭವಿಸುವುದಿಲ್ಲ, ಇದು ಸಮಯವೂ ಅಲ್ಲ. ಈ ಬಗ್ಗೆ ಅನಾವಶ್ಯಕ ಚರ್ಚೆಯನ್ನು ವಿವೇಕ ಇದ್ದವರು ಮಾಡೋದಿಲ್ಲ ಎಂದು ಸಿಡಿಮಿಡಿಗೊಂಡರು.

    ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆ, ಪ್ರಗತಿ, ಸಮನ್ವಯ ಕಾರ್ಯಗಳಿಗೆ ಸಂಬಂಧಿಸಿದ ಸಚಿವರು ಕ್ರಮವಹಿಸಲು ಸಮಿತಿ ರಚನೆಯ ಕುರಿತು ತಿಳಿಸಿದರು. ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವರ ಅಧ್ಯಕ್ಷತೆಯಲ್ಲಿ 5 ಜನ ಸಚಿವರ ಸಮಿತಿ ರಚಿಸಿದ್ದಾರೆ. ಪ್ರಮಾದಗಳು, ತಪ್ಪು ಎಸಗಿರುವ ಬಗ್ಗೆ ತನಿಖೆ ಹಾಗೂ ಮುಂದಿನ ಕ್ರಮಗಳನ್ನು ಶಿಫಾರಸು ಮಾಡಲು ಈ ಬಗ್ಗೆ ನಮ್ಮ ಸಮಿತಿ ಬೇಗ ಕೆಲಸ ಮಾಡಲು ಪ್ರಾರಂಭ ಮಾಡಲಿದೆ ಎಂದರು.ಇದನ್ನೂ ಓದಿ: ರಾಜ್ಯದ ಅರಣ್ಯ ಸಿಬ್ಬಂದಿಗೂ ಪೊಲೀಸ್ ಕ್ಯಾಂಟೀನ್ ಸೌಲಭ್ಯ: ಈಶ್ವರ ಖಂಡ್ರೆ

    ವಾಲ್ಮೀಕಿ ನಿಗಮ ಹಗರಣ (Valmiki Scam) ಕುರಿತು ಮಾತನಾಡಿ, ವಾಲ್ಮೀಕಿ ನಿಗಮ ಹಗರಣ ಬಗ್ಗೆ ಎಸ್‌ಐಟಿ ಹಾಗೂ ಇಡಿ ತಂಡ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಕಾನೂನು ಕ್ರಮ, ಕಾನೂನು ಪ್ರಕ್ರಿಯೆ ಮುಂದುವರೆಯುತ್ತದೆ. ಕೋರ್ಟ್ಗಳ ಮೂಲಕ ಸತ್ಯಾಸತ್ಯತೆ ಹೊರಬರುತ್ತದೆ. ಸತ್ಯಾಸತ್ಯತೆ ಕೋರ್ಟ್‌ನಲ್ಲಿ ನಡೆಯುವ ಪ್ರಕರಣವನ್ನು ಹೊರಹಾಕುತ್ತದೆ ಎಂದು ಹೇಳಿದರು.

    ಅಮೆರಿಕಾದಲ್ಲಿ ರಾಹುಲ್ ಗಾಂಧಿ (Rahul Gandhi) ಹೇಳಿಕೆಯ ಬಗ್ಗೆ ಮಾತನಾಡಿದ ಅವರು, ಭಾರತ ಚುನಾವಣೆ ವ್ಯವಸ್ಥೆ, ಬೇರೆ ವಿಷಯ ಏನಿಲ್ಲದಿದ್ದರೂ ಬಿಜೆಪಿಯವರು ಇಲ್ಲದ ಕಾರಣ ಹುಡುಕುವ ಪ್ರಯತ್ನ ಮಾಡುತ್ತಾರೆ. ರಾಹುಲ್ ಗಾಂಧಿ ಅವರು ಏನು ಹೇಳಿಕೆ ಕೊಟ್ಟಿರುತ್ತಾರೆ, ಅದನ್ನು ಗಮನಿಸಿಕೊಂಡು ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕೆ ವಿನಃ ಟೀಕೆ ಮಾಡುವುದಕ್ಕೆ ಅದನ್ನು ಬಳಕೆ ಮಾಡಿಕೊಳ್ಳಬಾರದು. ಬಿಜೆಪಿಯವರು ರಾಹುಲ್ ಗಾಂಧಿ ಅವರನ್ನು ಎಷ್ಟೇ ಅವಹೇಳನ ಮಾಡಲು ಪ್ರಯತ್ನ ಮಾಡಲಿ. ನಮ್ಮ ದೇಶದ ಜನರು ರಾಹುಲ್ ಗಾಂಧಿಯವರನ್ನು ಎತ್ತರದ ನಾಯಕ ಎಂದು ಗುರುತಿಸಿದ್ದಾರೆ. ಬಿಜೆಪಿಯವರು ಏನು ಮಾಡಿದರೂ ಅವರ ಉದ್ದೇಶ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

  • ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ, ಅನುಮಾನವೇ ಬೇಡ: ಸಿದ್ದರಾಮಯ್ಯ ಕೌಂಟರ್

    ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ, ಅನುಮಾನವೇ ಬೇಡ: ಸಿದ್ದರಾಮಯ್ಯ ಕೌಂಟರ್

    ಬೆಂಗಳೂರು: ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ ಇದರಲ್ಲಿ ಯಾವುದೇ ಅನುಮಾನವೇ ಬೇಡ ಎಂದು ಸಿಎಂ ಸ್ಥಾನದ ಆಕಾಂಕ್ಷಿಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಕೌಂಟರ್ ಕೊಟ್ಟಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನದ ಬಗ್ಗೆ ಹಲವು ಸಚಿವರ ಹೇಳಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಿಎಂ ಸ್ಥಾನದ ಚರ್ಚೆ ಬಗ್ಗೆ ಕೆಲ ಕಾಂಗ್ರೆಸ್ ನಾಯಕರಿಂದ ಹೈಕಮಾಂಡ್‌ಗೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.ಇದನ್ನೂ ಓದಿ: ಯಾವುದೇ ಬೆಂಬಲವನ್ನು ನೀಡಿಲ್ಲ- ಪಿ.ಟಿ.ಉಷಾ ವಿರುದ್ಧ ಫೋಟೋ ಕ್ಲಿಕ್ಕಿಸಿದ ಬಗ್ಗೆ ಫೋಗಟ್ ಕಿಡಿ

    ಯಾರೂ ಕೂಡಾ ಸಿಎಂ ಆಗ್ತೀವಿ ಅಂತಾ ಹೇಳಿಕೆ ಕೊಟ್ಟಿಲ್ಲ. ಕುರ್ಚಿನೇ ಖಾಲಿ ಇಲ್ಲ. ಸಿಎಂ ಆಗ್ತೀವಿ ಅಂತಾ ಯಾಕೆ ಹೇಳ್ತಾರೆ. ಅವರೆಲ್ಲರೂ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ ಅಂತಾ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಸೂಚಿಸಿದರೆ ಸಿಎಂ ಆಗ್ತೀವಿ ಎಂಬ ಕೆಲವರ ಹೇಳಿಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ.

    ಸಿಎಂ ಸ್ಥಾನ ಖಾಲಿ ಆದರೆ ಅಲ್ಲವಾ? ಇನ್ನು ಸೂಚನೆ ಯಾಕೆ ಕೊಡ್ತಾರೆ? ಯಾವುದೇ ಡೌಟ್ ಇಲ್ಲ. ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.ಇದನ್ನೂ ಓದಿ: ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಎಲ್ಲರಿಗೂ ಪ್ರಕೃತಿ ರಕ್ಷಣೆಯ ಹೊಣೆ ಇದೆ: ಸಿದ್ದರಾಮಯ್ಯ

  • ಸಿಎಂ ಆಗೋದಕ್ಕೆ ನನಗಿನ್ನೂ ಟೈಮ್ ಇದೆ, ಸಿಎಂ ರೇಸ್‍ನಲ್ಲಿರೋ ಮಂದಿಗೆ ಆಲ್ ದಿ ಬೆಸ್ಟ್: ಡಿಕೆಶಿ

    ಸಿಎಂ ಆಗೋದಕ್ಕೆ ನನಗಿನ್ನೂ ಟೈಮ್ ಇದೆ, ಸಿಎಂ ರೇಸ್‍ನಲ್ಲಿರೋ ಮಂದಿಗೆ ಆಲ್ ದಿ ಬೆಸ್ಟ್: ಡಿಕೆಶಿ

    ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಬಿಟ್ಟಿಟ್ಟ ಬಳಿಕ ಜಲಸಂಪ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನನಗಿನ್ನೂ ಸಿಎಂ ಆಗಲು ಟೈಮ್ ಇದೆ, ಸಿಎಂ ರೇಸ್‍ನಲ್ಲಿ ಇರುವವರಿಗೆ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ವಿಚಾರ ಪ್ರತಿಕ್ರಿಯಿಸಿದರು. ಸಿಎಂ ರೇಸ್ ನಲ್ಲಿ ಇರುವವರಿಗೆ ವಿಶ್ ಮಾಡ್ತೀನಿ ಬಿಡಿ. ಆಲ್ ದಿ ಬೆಸ್ಟ್ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು. ಇದನ್ನೂ ಓದಿ: ಮತ್ತೆ ಸಿಎಂ ಆಗೋ ಕನಸು ಬಿಚ್ಚಿಟ್ಟ ಸಿದ್ದರಾಮಯ್ಯ

    ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಅವರ ಡೈರಿ ವಿಚಾರವಾಗಿ ಮಾತನಾಡುತ್ತ ನಾನು ಇನ್ನೂ ಸಿಎಂ ಆಗಿಲ್ಲ. ಸಿಎಂ ಆಗಲೂ ನನಗಿನ್ನೂ ಟೈಮ್ ಇದೆ. ಆ ನಂತರ ಎಲ್ಲದ್ದಕ್ಕೂ ಉತ್ತರ ನೀಡುತ್ತೇನೆ ಎಂದು ತಮಗಿರುವ ಸಿಎಂ ಆಗುವ ಕನಸನ್ನು ಬಿಚ್ಚಿಟ್ಟಿರು.

    ನನ್ನ ಹತ್ತಿರ ಯಡಿಯೂರಪ್ಪ ಅವರ ಡೈರಿ ಇದ್ದಿದ್ದು ನಿಜ. ಅದನ್ನು ಐಟಿಯವರು ತೆಗೆದುಕೊಂಡು ಹೋಗಿದ್ದೂ ನಿಜ. ಆದರೆ ಕೋರ್ಟ್ ನಲ್ಲಿ ಈ ವಿಚಾರ ಇರುವುದರಿಂದ ಎಲ್ಲವನ್ನೂ ಹೇಳೋಕಾಗಲ್ಲ. ನಮ್ಮ ಹತ್ತಿರ ಯಾರ್ ಯಾರದ್ದೋ ಸೀಕ್ರೆಟ್ ಇರುತ್ತವೆ. ಐಟಿ ಅಧಿಕಾರಿಗಳನ್ನು ಎಲ್ಲ ವಿಚಾರ ಹೇಳಿ ಮುಜುಗರ ಮಾಡಲು ಇಷ್ಟಪಡುವುದಿಲ್ಲ. ನಾವು ಸಾರ್ವಜನಿಕ ಜೀವನದಲ್ಲಿ ಇರುವವರು. ಬಹಳ ಜನರ ರಹಸ್ಯ ನನಗೆ ಗೊತ್ತಿರುತ್ತದೆ ಎಂದರು. ನಂತರ ಯಡಿಯೂರಪ್ಪ ತಮ್ಮ ಮನೆಗೆ ಬಂದಿದ್ದ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲಾ ಸೀಕ್ರ್ರೆಟ್ ಗಳನ್ನು ಹೇಳೋದಕ್ಕೆ ಆಗೋದಿಲ್ಲ. ಎಸ್‍ಐಟಿ ರಚನೆ ಬಗ್ಗೆ ಸಿಎಂ ಹತ್ತಿರವೇ ಕೇಳಿ. ನಾನು ಇನ್ನೂ ಸಿಎಂ ಆಗಿಲ್ಲ. ಸಿಎಂ ಆದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಈಗ ನಾನು ಸಿಎಂ ವಕ್ತಾರ ಅಲ್ಲ ಎಂದು ಹೇಳಿದರು.