Tag: CM Pramod Sawant

  • ರಿಷಬ್‌ ನಟನೆಯ ʻಕಾಂತಾರʼ ಚಿತ್ರಕ್ಕೆ ಗೋವಾ ಸಿಎಂ ಮೆಚ್ಚುಗೆ

    ರಿಷಬ್‌ ನಟನೆಯ ʻಕಾಂತಾರʼ ಚಿತ್ರಕ್ಕೆ ಗೋವಾ ಸಿಎಂ ಮೆಚ್ಚುಗೆ

    ನ್ನಡದ `ಕಾಂತಾರ’ (Kantara Film) ಚಿತ್ರದ ಹವಾ ಇನ್ನೂ ಕಮ್ಮಿಯಾಗಿಲ್ಲ. ಗಡಿ ದಾಟಿ ಸದ್ದು ಮಾಡ್ತಿರುವ ರಿಷಬ್ ಚಿತ್ರಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್(Pramod Sawant) ಮೆಚ್ಚುಗೆ ಸೂಚಿಸಿದ್ದಾರೆ. ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಿ, ಚಿತ್ರದ ಬಗ್ಗೆ ಹಾಡಿ ಹೊಗಳಿದ್ದಾರೆ.

    ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ `ಕಾಂತಾರ’ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 400 ಕೋಟಿಗೂ ಮೀರಿ ಕಲೆಕ್ಷನ್ ಮಾಡಿರುವ ಕಾಂತಾರ ಒಟಿಟಿಯಲ್ಲೂ ಮೋಡಿ ಮಾಡ್ತಿದೆ. ಹೀಗಿರುವಾಗ `ಕಾಂತಾರ’ ಸಿನಿಮಾ ನೋಡಿ, ರಿಷಬ್ ಅವರನ್ನ ಗೋವಾ ಸಿಎಂ ಭೇಟಿಯಾಗಿದ್ದಾರೆ.

    ಗೋವಾದ ಪಣಜಿಯಲ್ಲಿ ನಟ, ಬರಹಗಾರ, ರಿಷಬ್ ಶೆಟ್ಟಿ ಆಗಿರುವುದಾಗಿ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಕಾಂತಾರ ಸಿನಿಮಾ ಜನಮನ್ನಣೆ ಗಳಿಸಿದೆ. ವಿವಿಧ ವಿಷಯಗಳ ಕುರಿತು ನಾವು ಚರ್ಚಿಸಿದ್ದೇವೆ. ರಿಷಬ್ ಶೆಟ್ಟಿ ಮುಂದಿನ ಕೆಲಸಗಳಿಗೆ ಗೋವಾ ಸರ್ಕಾರದ ಬೆಂಬಲ ಸದಾ ಇದ್ದೇ ಇದೆ ಎಂದು ಪ್ರಮೋದ್ ಸಾವಂತ್ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ರಿಷಬ್ ಸಿನಿಮಾವನ್ನ ಮೆಚ್ಚಿ, ಬೆನ್ನು ತಟ್ಟಿದ್ದಾರೆ.

    ಇನ್ನೂ ಐವತ್ತು ದಿನಗಳನ್ನು ಪೂರೈಸಿ, ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಕಾಂತಾರ ಸಿನಿಮಾ ಈವರೆಗೂ 400 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕರ್ನಾಟಕವೊಂದರಲ್ಲೇ 170 ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ವಿದೇಶದಿಂದ ಬಂದ ಹಣವನ್ನು ಒಟ್ಟಾಗಿಸಿದರೆ ಸಿನಿಮಾದ ಒಟ್ಟು ಗಳಿಕೆ 400 ಕೋಟಿ ರೂ. ಕಲೆಕ್ಷನ್ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಗೋವಾದಲ್ಲಿ ಮೇ 31 ರವರೆಗೂ ಲಾಕ್‍ಡೌನ್ ವಿಸ್ತರಣೆ

    ಗೋವಾದಲ್ಲಿ ಮೇ 31 ರವರೆಗೂ ಲಾಕ್‍ಡೌನ್ ವಿಸ್ತರಣೆ

    ಪನಾಜಿ: ಕೋವಿಡ್-19 ಎರಡನೇ ಅಲೆಯಿಂದಾಗಿ ರ್ಯಾಜ್ಯವ್ಯಾಪ್ತಿ ಲಾಕ್‍ಡೌನ್‍ನನ್ನು ಮೇ 31 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶುಕ್ರವಾರ ತಿಳಿಸಿದ್ದಾರೆ.

    ಗೋವಾದಲ್ಲಿ ಲಾಕ್‍ಡೌನ್ ವಿಸ್ತರಣೆಯ ಕುರಿತಾಗಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾವು ರಾಜ್ಯದಲ್ಲಿ ಕಫ್ರ್ಯೂವನ್ನು ಮೇ 31 ರವರೆಗೂ ವಿಸ್ತರಿಸುತ್ತಿದ್ದೇವೆ ಹಾಗೂ ಈ ಮುನ್ನ ಇದ್ದ ನಿಯಮಗಳು ಇದ್ದಂತೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

    ಕಫ್ರ್ಯೂ ವೇಳೆ ಅಗತ್ಯ ವಸ್ತುಗಳು, ದಿನಸಿ ಅಂಗಡಿ, ಮದ್ಯದಂಗಡಿಗಳನ್ನು ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ತೆರೆಯಲಾಗುತ್ತದೆ ಮತ್ತು ಮೆಡಿಕಲ್ ಶಾಪ್ ಮತ್ತು ರೆಸ್ಟೋರೆಂಟ್‍ಗಳು ಬೆಳಗ್ಗೆ 7 ರಿಂದ ಸಂಜೆ 7ರವರೆಗೂ ಕಾರ್ಯನಿರ್ವಹಿಸಲಿದೆ.

  • ಗೋವಾದಲ್ಲಿ ಮಹಾಮಾರಿ ಕೊರೊನಾಗೆ ಮೊದಲ ಬಲಿ

    ಗೋವಾದಲ್ಲಿ ಮಹಾಮಾರಿ ಕೊರೊನಾಗೆ ಮೊದಲ ಬಲಿ

    ಪಣಜಿ: ಕಡಲ ತೀರದ ರಾಜ್ಯ ಗೋವಾದಲ್ಲಿ ಮೊದಲ ಕೊರೊನಾ ಸಾವಿನ ಪ್ರಕರಣ ವರದಿಯಾಗಿದೆ. ಸೋಮವಾರ ಕೋವಿಡ್-19 ಪಾಸಿಟಿವ್ ದೃಢವಾಗಿದ್ದ 85 ವರ್ಷದ ವೃದ್ಧ ಸಾವನ್ನಪ್ಪಿರುವುದಾಗಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.

    ಕೋವಿಡ್ ಸಾವಿನ ಕುರಿತು ಟ್ವೀಟ್ ಮಾಡಿದ್ದ ವಿಶ್ವಜಿತ್ ರಾಣೆ, ಮೊದಲು ಸಾವನ್ನಪ್ಪಿದ್ದು ವೃದ್ಧೆ ಎಂದು ಹೇಳಿದ್ದರು. ಆದರೆ ಬಳಿಕ ಸ್ಪಷ್ಟನೆ ನೀಡಿ ವೃದ್ಧ ಸಾವನ್ನಪ್ಪಿರುವುದಾಗಿ ಸ್ಪಷ್ಟಪಡಿಸಿದರು. ಮೃತ ವೃದ್ಧ ದಕ್ಷಿಣ ಗೋವಾ ಜಿಲ್ಲೆಯ ಸತ್ತಾರಿ ತಾಲೂಕಿನ ಮೋರ್ಲೆಮ್ ಗ್ರಾಮದ ನಿವಾಸಿ ಎಂಬ ಮಾಹಿತಿ ಲಭಿಸಿದೆ.

    ಮೃತ ವೃದ್ಧನ ಕುಟುಂಬಸ್ಥರಿಗೆ ಸಂತ್ವಾನ ತಿಳಿಸಿರುವ ಸಚಿವರು, ಕೋವಿಡ್-19 ಲಕ್ಷಣದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಅವಧಿಯಲ್ಲೇ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಹಾಗೂ ಸೋಂಕಿತರ ಚಿಕಿತ್ಸೆಗೆ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾದ 140 ದಿನಗಳ ಬಳಿಕ ಗೋವಾದಲ್ಲಿ ಕೋವಿಡ್-19 ಮೊದಲ ಸಾವು ಸಂಭವಿಸಿದೆ. ಜನವರಿ 30 ರಂದು ಕೇರಳದಲ್ಲಿ ವುಹಾನ್‍ನಿಂದ ಆಗಮಿಸಿದ್ದ ಯುವತಿಗೆ ಕೊರೊನಾ ಪಾಟಿಸಿಟಿವ್ ವರದಿ ಕಂಡು ಬಂದಿತ್ತು. ಚಿಕಿತ್ಸೆ ಪಡೆದ ಬಳಿಕ ಯುವತಿ ಕೊರೊನಾದಿಂದ ಗುಣಮುಖರಾಗಿದ್ದರು. ಉಳಿದಂತೆ ದೇಶದಲ್ಲಿ ಮೊದಲ ಕೊರೊನಾ ಸಾವಿನ ಪ್ರಕರಣ ಕಲಬುರಗಿಯಲ್ಲಿ ಮಾರ್ಚ್ 13 ರಂದು ವರದಿಯಾಗಿತ್ತು. ಅಂದು 76 ವರ್ಷದ ವೃದ್ಧ ಕೋವಿಡ್-19 ನಿಂದ ಸಾವನ್ನಪ್ಪಿದ್ದರು.

    ಕಳೆದ 24 ಗಂಟೆಗಳ ಅವಧಿಯಲ್ಲಿ ಗೋವಾದಲ್ಲಿ 64 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಗೋವಾದಲ್ಲಿ ಸೋಂಕಿತ ಸಂಖ್ಯೆ 818ಕ್ಕೇರಿದೆ. ಇದುವರೆಗೂ 135 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 683 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾಕ್‍ಡೌನ್ ಸಡಿಲಿಕೆ ಆದ ಬಳಿಕ ಗೋವಾದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದೆ. ಇತ್ತೀಚೆಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ತಮ್ಮ ರಾಜ್ಯದಲ್ಲಿ ರೈಲು ನಿಲುಗಡೆ ಮಾಡದಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು.