Tag: CM post

  • ಡಿಕೆ ಡಿಕೆ ಅಂತ ಕೂಗೋದಲ್ಲ, ಮುಂದೆಯೂ ನನಗೆ ಅವಕಾಶ ಕೊಡಿ: ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

    ಡಿಕೆ ಡಿಕೆ ಅಂತ ಕೂಗೋದಲ್ಲ, ಮುಂದೆಯೂ ನನಗೆ ಅವಕಾಶ ಕೊಡಿ: ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

    ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತೊಮ್ಮೆ ಪರೋಕ್ಷವಾಗಿ ಸಿಎಂ ಸ್ಥಾನ ಆಸೆಯನ್ನು ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ ಡಿಕೆ ಶಿವಕುಮಾರ್‌ಗೆ ನೀವು ಶಕ್ತಿ ಕೊಡಬೇಕು ಎಂಬ ಮನವಿ ಮಾಡುವ ಮೂಲಕ ಸಿಎಂ ಸ್ಥಾನಕ್ಕೆ (Chief Minister Post) ನನ್ನನ್ನ ಕೂರಿಸಿ ಎಂಬ ಪರೋಕ್ಷವಾಗಿ ಸಂದೇಶ ಕಳುಹಿಸಿದ್ದಾರೆ.

    ಅರಮನೆ ಮೈದಾನದಲ್ಲಿ ಇವತ್ತು ಕೆಪಿಟಿಸಿಎಲ್ (KPTCL) ನೌಕರರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ವೇಳೆ ಡಿಕೆ ಶಿವಕುಮಾರ್ ಭಾಷಣ ಮಾಡಲು ಬಂದ ಕೂಡಲೇ ವಿದ್ಯುತ್ ಇಲಾಖೆ ಸಿಬ್ಬಂದಿಗಳು, ನೌಕರರು ಡಿಕೆ ಡಿಕೆ ಅಂತ ಘೋಷಣೆ ಕೂಗಿದರು. ಇದನ್ನೂ ಓದಿ: ನಂದಿನಿ ನಮ್ಮ ಸಂಸ್ಥೆ, ‘ನಮ್ಮ ಮೆಟ್ರೋ’ದಲ್ಲಿ ಮಳಿಗೆ ಹಾಕಲು ಅವಕಾಶ ಕೊಡ್ತೀವಿ: ಡಿಕೆಶಿ

     

    ಈ ವೇಳೆ ಮಾತಾನಾಡಿದ ಡಿಕೆ ಶಿವಕುಮಾರ್ ಈಗ ಡಿಕೆ ಡಿಕೆ ಅನ್ನೋದು ಅಲ್ಲ. ಎಲೆಕ್ಷನ್ ‌ನಲ್ಲಿ ಇನ್ನೊಂದು ಸಾರಿ ಡಿಕೆ ಶಿವಕುಮಾರ್ ತಂದು ಕೂರಿಸಿದ ಮೇಲೆ ಈ ಘೋಷಣೆ ಕೂಗಿ ಎಂದರು. ಇದನ್ನೂ ಓದಿ: ನಾವಿರುವವರೆಗೂ ಎಸ್ಕಾಂಗಳ ಖಾಸಗೀಕರಣಕ್ಕೆ ಅವಕಾಶವಿಲ್ಲ: ಡಿ.ಕೆ ಶಿವಕುಮಾರ್

    ಮಾತು ಮುಂದುವರೆಸಿದ ಡಿಕೆಶಿವಕುಮಾರ್, ತಾವು ಇಂಧನ ಇಲಾಖೆ ಸಚಿವನಾಗಿ ಇದ್ದಾಗ ಮಾಡಿದ ಸಾಧನೆ ಹೇಳಿದ್ರು. ನೀವು ಮನಸ್ಸು ಮಾಡಿದ್ರೆ ಡಿಕೆ ಶಿವಕುಮಾರ್‌ನನ್ನು ಮೇಲಕ್ಕೆ ಎತ್ತಬಹುದು. ಕೆಳಗೆ ಇಳಿಸಬಹುದು. ಅಷ್ಟು ಶಕ್ತಿ ನಿಮಗೆ ಇದೆ. ನಾವು ನಿಮಗೆ ಎಲ್ಲಾ ಮಾಡಿದ್ದೇವೆ. ನಿಮಗೆ ನಮ್ಮ ಮೇಲೆ ಉಪಕಾರ ಸ್ಮರಣೆ ಇರಬೇಕು. ಬರೀ ಡಿಕೆ ಡಿಕೆ ಅನ್ನೋದಲ್ಲ. ಈ ಸರ್ಕಾರವನ್ನು ತಂದು ಕೂರಿಸಬೇಕು ಎನ್ನುವ ಮೂಲಕ ಸಿಎಂ ಸ್ಥಾನಕ್ಕೆ ಆಶೀರ್ವಾದ ಮಾಡಬೇಕೆಂದು ಪರೋಕ್ಷವಾಗಿ ಹೇಳಿದರು.

  • ಮುಖ್ಯಮಂತ್ರಿ ಆಗುವ ಕಾಲ ಬಂದೇ ಬರುತ್ತೆ- ಯತ್ನಾಳ್ ಸಿಎಂ ಆಗುವ ಇಂಗಿತ

    ಮುಖ್ಯಮಂತ್ರಿ ಆಗುವ ಕಾಲ ಬಂದೇ ಬರುತ್ತೆ- ಯತ್ನಾಳ್ ಸಿಎಂ ಆಗುವ ಇಂಗಿತ

    – ಹಿಂದೂಸ್ತಾನದಲ್ಲಿ ಅಲ್ಲದೆ ಪಾಕಿಸ್ತಾನದಲ್ಲಿ ಗಣೇಶೋತ್ಸವ ಮಾಡೋಕಾಗುತ್ತಾ?

    ವಿಜಯಪುರ: ಸಿಎಂ ಆಗುವ ಆಸೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿಚ್ಚಿಟ್ಟಿದ್ದಾರೆ. ಸಿಎಂ ಆಗುವ ಆ ಕಾಲ ಬಂದೆ ಬರುತ್ತೆ ಎಂದಿದ್ದಾರೆ.

    ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವಿಶ್ವಕರ್ಮ ಸಮಾಜದ ಕಾರ್ಯಕ್ರಮದ ವೇದಿಕೆಯಲ್ಲಿ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಮುಂದೊಂದು ದಿನ ಆ ಕಾಲ ಬಂದೇ ಬರುತ್ತೆ. ಆ ಜಾಗದಲ್ಲಿ ಒಯ್ದು ನನ್ನ ಕೂರಿಸುತ್ತೆ. ಸಿಎಂ ಆಗುವ ಆ ಕಾಲ ಬಂದೇ ಬರುತ್ತೆ. ಇನ್ನು ಯತ್ನಾಳ್‍ದು ಮುಗಿತು ಎನ್ನುವ ಹುಚ್ಚು ಭ್ರಮೆಯಲ್ಲಿ ಇದ್ದರೆ ಅದನ್ನ ತಲೆಯಿಂದ ತೆಗೆಯಿರಿ. ಉಪದ್ಯಾಪಿಗಳು ಎಷ್ಟು ಹಾರಾಡಿದರು ಏನೂ ಆಗಲ್ಲ. ಯೋಗಿ ಆದಿತ್ಯನಾಥರನ್ನು ಸಿಎಂ ಮಾಡಬೇಕು ಎಂದು ಇರಲಿಲ್ಲ. ಹಿಂದುತ್ವದ ಉಳುವಿಗಾಗಿ ಸಿಎಂ ಮಾಡಬೇಕಾದ ಅನಿವಾರ್ಯತೆ ಬಂತು ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಕೋರಮಂಗಲದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 7 ಮಂದಿ ಬಲಿ

    ನಾನು ಮಂತ್ರಿ ಸ್ಥಾನವನ್ನು ಕೇಳಲಿಲ್ಲ, ಮಂತ್ರಿ ಆಗಬೇಕೆಂದು ಯಾರ ಮನೆಗೂ ಹೋಗಿಲ್ಲ. ಸಿಎಂ ಮಾಡಿ ಎಂದು ದೆಹಲಿಗೂ ಹೋಗಿಲ್ಲ. ನನಗೆ ಅದರ ಮೇಲೆ ಆಸೆಯೂ ಇಲ್ಲ ಎಂದು ಮಂತ್ರಿ ಸ್ಥಾನ ಹಾಗೂ ಸಿಎಂ ಸ್ಥಾನ ಸಿಗದಿದ್ದರ ಕುರಿತು ಹೇಳಿದರು.

    ಸಾರ್ವಜನಿಕ ಗಣೇಶೋತ್ಸವಕ್ಕ ಅನುಮತಿ ನೀಡುವ ವಿಚಾರವಾಗಿ ಮಾತನಾಡಿ, ಮೊನ್ನೆ ಎಲ್ಲರೂ ಅವರವರ ಜಾತ್ರೆ ಮಾಡಿಕೊಂಡಿದ್ದಾರೆ. ಮೊಹರಂ ಅದ್ಧೂರಿಯಾಗಿ ಆಚರಿಸಿದ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಗೌರವಯುತವಾಗಿ ಗಣೇಶ ಕೂರಿಸಲು ಅವಕಾಶ ಕೊಡಿ ಎಂದಿದ್ದೇನೆ. ಗೃಹ ಸಚಿವರ ಜೊತೆಗೆ ಮಾತನಾಡಿದ್ದೇನೆ. ನಮ್ಮ ಬೇಡಿಕೆ ಇಡೇರಿಸುತ್ತೇವೆ ಎಂದಿದ್ದಾರೆ. ಗಣೇಶ ಚತುರ್ಥಿ ಹಿಂದೂಸ್ತಾನದಲ್ಲಿ ಮಾಡದೇ ಪಾಕಿಸ್ತಾನದಲ್ಲಿ ಮಾಡಲು ಆಗುತ್ತಾ? ಮುಂದೊಂದು ದಿನ ಪಾಕಿಸ್ತಾನದಲ್ಲೂ ಗಣೇಶ ಕೂರಿಸುವ ಕಾಲ ಬರುತ್ತದೆ. ಪಾಕಿಸ್ತಾನದಲ್ಲಿ ಗಣೇಶ ಕೂರಿಸುವ ಕಾಲ ದೂರ ಇಲ್ಲ ಎಂದರು.

  • ಬಿಜೆಪಿ ತೊಲಗದಿದ್ದರೆ ರಾಜ್ಯಕ್ಕೆ ಮುಕ್ತಿ ಇಲ್ಲ: ಸಿದ್ದರಾಮಯ್ಯ

    ಬಿಜೆಪಿ ತೊಲಗದಿದ್ದರೆ ರಾಜ್ಯಕ್ಕೆ ಮುಕ್ತಿ ಇಲ್ಲ: ಸಿದ್ದರಾಮಯ್ಯ

    ಗದಗ: ಯಡಿಯೂರಪ್ಪ ರಾಜ್ಯ ಕಂಡ ಕಡು ಭ್ರಷ್ಟ ಮುಖ್ಯಮಂತ್ರಿ, ಅವರು ರಾಜೀನಾಮೆ ಕೊಡುವುದರಿಂದ ಅಥವಾ ಇನ್ನೊಬ್ಬ ಮುಖ್ಯಮಂತ್ರಿ ಬರುವುದರಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

    ಸ್ವ ಕ್ಷೇತ್ರ ಬಾದಾಮಿಗೆ ಹೋಗುವ ಮುನ್ನ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದರು. ಬಿಜೆಪಿಯೇ ಒಂದು ಭ್ರಷ್ಟ ಪಕ್ಷ, ಬಿಜೆಪಿ ತೊಲಗದಿದ್ದರೆ ರಾಜ್ಯಕ್ಕೆ ಮುಕ್ತಿ ಇಲ್ಲ. ಯಡಿಯೂರಪ್ಪ ಕರ್ನಾಟಕ ಕಂಡ ಒಬ್ಬ ಭ್ರಷ್ಟ ಮುಖ್ಯಮಂತ್ರಿ, ಇನ್ನೊಬ್ಬ ಬಂದರೂ ಭ್ರಷ್ಟ ಮುಖ್ಯಮಂತ್ರಿಯೇ ಆಗಿರುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಭ್ರಷ್ಟ ಮುಖ್ಯಮಂತ್ರಿ ತೆಗೆದು ಭ್ರಷ್ಟನನ್ನು ಮಾಡಿದರೆ ಸಾಮಾನ್ಯ ಜನರಿಗೇನು ಲಾಭ: ಸಿದ್ದರಾಮಯ್ಯ

    ಮುಂದಿನ ಸಿಎಂ ಯಾರಾಗಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನೇನು ಬಿಜೆಪಿ ಅಧ್ಯಕ್ಷನೇ? ಅದು ಅವರ ಪಕ್ಷದ ವಿಚಾರ ಎಂದು ಉತ್ತರಿಸಿದರು. ಯಡಿಯೂರಪ್ಪನವರ ಪರ ಸ್ವಾಮೀಜಿಗಳು ನಿಂತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸ್ವಾಮೀಜಿಗಳು ರಾಜಕಾರಣದಲ್ಲಿ ಬರದೇ ಇರುವುದು ಒಳ್ಳೆಯದು, ಧರ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತ ಇರಬೇಕು ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರ ಸಚಿವರಾಗುವಂತೆ ವಾಜಪೇಯಿ ಹೇಳಿದ್ದನ್ನು ನೆನೆದು ಕಣ್ಣೀರಿಟ್ಟ ಸಿಎಂ ಯಡಿಯೂರಪ್ಪ

    ರಾಜ್ಯಕ್ಕೆ ಹೊಸ ಸಿಎಂ ಬಂದರೂ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡವ ನಮ್ಮ ಹೋರಾಟ ಮುಂದುವರಿಯಲಿದೆ. ಕಾಂಗ್ರೆಸ್ ವಲಸಿಗರ ಪರಿಸ್ಥಿತಿ ನನಗೆ ಗೊತ್ತಿಲ್ಲ. ನಮ್ಮ ಪಕ್ಷ ಬಿಟ್ಟು ಬಿಜೆಪಿಗೆ ಹೋದವರಿಗೆ ಜನ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.

  • ಬಿಎಸ್‍ವೈ, ಸಿದ್ದರಾಮಯ್ಯ, ಜಮೀರ್ ಎಲ್ಲರೂ ಆಪ್ತರು – ಯತ್ನಾಳ್

    ಬಿಎಸ್‍ವೈ, ಸಿದ್ದರಾಮಯ್ಯ, ಜಮೀರ್ ಎಲ್ಲರೂ ಆಪ್ತರು – ಯತ್ನಾಳ್

    ಹಾವೇರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಎರಡು ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೋ ಹೊರತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ ಸಿಎಂ ಸ್ಥಾನದಲ್ಲಿ ಇರುತ್ತಾರೆ ಎಂದು ಘೋಷಿಸಿಲ್ಲ ಎಂದು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್  ಹೇಳಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಜೊತೆ ಬಹಳ ಆಪ್ತರಾಗಿದ್ದಾರೆ. ಹಾಗಾಗಿ ಯಡಿಯೂರಪ್ಪ ಯಾವಾಗ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂಬುದು ಅವರಿಗೆ ಮಾತ್ರ ಗೊತ್ತಿದೆ. ಯಡಿಯೂರಪ್ಪ, ಜಾರ್ಜ್, ಜಮೀರ್ ಅಹಮ್ಮದ್ ಖಾನ್ ಎಲ್ಲರೂ ಬಹಳ ಆಪ್ತರು. ಅಮಿತ್ ಶಾ ಎರಡೂವರೆ ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೆ. ಆದರೆ ಯಡಿಯೂರಪ್ಪನವರೆ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿದರು.

    ರಾಜ್ಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ನಾನು ಸಚಿವ ಸ್ಥಾನ ಕೇಳಿಲ್ಲ. ಯಾವ್ಯಾವ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ, ಅಂತಹ ಕಡೆಗಳಲ್ಲಿ ಸಚಿವ ಸ್ಥಾನ ನೀಡುವಂತೆ ಹೇಳಿದ್ದೇನೆ. ಸಚಿವ ಸ್ಥಾನ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದರು.

    ಇದೇ ವೇಳೆ ಸಿಡಿ ವಿಚಾರವಾಗಿ ನಾನು ಏನು ಹೇಳಿಲ್ಲ. ನಾನು ಶರಣರ ವಚನಗಳ ಸಿಡಿ ನೋಡುತ್ತೇನೆ ಹೊರತು ಅಂತಹ ಸಿಡಿಗಳನ್ನು ನೋಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದನ್ನು ನಾನು ಹೇಳಿದ್ದೇನೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.

    ಸದ್ಯ ಈಗ ಮೋದಿಯವರ ಗಾಳಿ ಇರುವುದರಿಂದ ವಲಸಿಗ ಶಾಸಕರು ಮೋದಿಯವರಿಗೆ ಜೈ ಅಂತಿದ್ದಾರೆ. ನಾಳೆ ಗಾಳಿ ಬೇರೆಯಾದರೆ ಸೋನಿಯಾಕಿ ಜೈಕಾರ ಹಾಕುತ್ತಾರೆ. ದೇವೇಗೌಡ ಅಪ್ಪಾಜಿ ಎಂದು ಕೂಡ ಕರೆಯುತ್ತಾರೆ. ವಲಸಿಗ ಶಾಸಕರು ಈಗ ಮೂಲ ಬಿಜೆಪಿ ಶಾಸಕರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಾ ಇದೇ ವೇಳೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅಲ್ಲ, ಅವರು ಉಪಾದ್ಯಾಪಿ ಠಾಕ್ರಿ. ಚುನಾವಣಾ ಸ್ಟಂಟ್ ಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.

  • ಸಿದ್ದರಾಮಯ್ಯನವರೇ ಕಾಗೆ ಕಟ್ಟಿದ ಗೂಡಲ್ಲಿ ಮೊಟ್ಟೆ ಇಡಲು ಹವಣಿಸುವ ಕೋಗಿಲೆಯ ಬುದ್ಧಿ ಏಕೆ?-ಬಿಜೆಪಿ

    ಸಿದ್ದರಾಮಯ್ಯನವರೇ ಕಾಗೆ ಕಟ್ಟಿದ ಗೂಡಲ್ಲಿ ಮೊಟ್ಟೆ ಇಡಲು ಹವಣಿಸುವ ಕೋಗಿಲೆಯ ಬುದ್ಧಿ ಏಕೆ?-ಬಿಜೆಪಿ

    – ಸಿದ್ದರಾಮಯ್ಯ ಪ್ರಶ್ನೆಗೆ ಬಿಜೆಪಿ ಉತ್ತರ

    ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರ ಪ್ರಶ್ನೆಗೆ ಕಾಗೆ ಕಟ್ಟಿದ ಗೂಡಲ್ಲಿ ಮೊಟ್ಟೆ ಇಡಲು ಹವಣಿಸುವ ಕೋಗಿಲೆಯ ಬುದ್ಧಿ ಏಕೆ ಎಂದು ಬಿಜೆಪಿ ತೀಕ್ಷ್ಣ ಉತ್ತರ ನೀಡಿದೆ.

    ಮಾನ್ಯ ಸಿದ್ದರಾಮಯ್ಯನವರೇ, ದೇವೇಗೌಡರು ಬೆಳೆಸಿದ ಜೆಡಿಎಸ್‍ನಲ್ಲಿ ಸ್ಥಾನಮಾನ ಅನುಭವಿಸಿದಿರಿ. ಪರಮೇಶ್ವರ್ ಬೆಳೆಸಿದ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾದಿರಿ. ಡಿಕೆಶಿ ಕಟ್ಟುತ್ತಿರುವ ಪಕ್ಷದಲ್ಲಿ ಮತ್ತೆ ಸಿಎಂ ಕನಸು ಕಾಣುತ್ತಿದ್ದೀರಿ. ಕಾಗೆ ಕಟ್ಟಿದ ಗೂಡಲ್ಲಿ ಮೊಟ್ಟೆ ಇಡಲು ಹವಣಿಸುವ ಕೋಗಿಲೆಯ ಬುದ್ಧಿ ಏಕೆ ಎಂದು ಬಿಜೆಪಿ ಮರು ಪ್ರಶ್ನೆ ಹಾಕಿದೆ.

    ಸಿದ್ದರಾಮಯ್ಯ ಟ್ವೀಟ್: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ಹಾಗೂ ಶಾಸಕರು ನಿರ್ಧರಿಸುತ್ತಾರೆ. ಕೆಲವರು ಅಭಿಮಾನದಿಂದ ಇವ್ರೆ ನಮ್ಮ ಮುಂದಿನ ಮುಖ್ಯಮಂತ್ರಿ ಅಂತ ಹೇಳ್ತಾರೆ. ಅವರಿಗೆಲ್ಲ ಮಾತಾಡ್ಬೇಡಿ ಅಂತ ಹೇಳೋಕಾಗುತ್ತಾ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

     

     

    ಇಂದು ಆರ್.ಆರ್.ನಗರ ಕೈ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಮಾಜಿ ಸಚಿವ, ಜಮೀರ್ ಅಹ್ಮದ್ ಮತ್ತೆ ತಮ್ಮ ಹೇಳಿಕೆಯನ್ನ ಪುನರುಚ್ಛಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಜನರ ಅಭಿಪ್ರಾಯವನ್ನ ನಾನು ಹೇಳಿದ್ದೇನೆ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ನನ್ನ ಹೇಳಿಕೆ ಪಕ್ಷ ವಿರೋಧಿ ಚಟುವಟಿಕೆ ಆಗಲ್ಲ. ಆದರೆ ಕಾಂಗ್ರೆಸ್ ನಲ್ಲಿ ಹೈಕಮಾಂಡ್ ಸಿಎಂ ಯಾರಾಗಬೇಕು ಎಂಬುದನ್ನ ನಿರ್ಧರಿಸುತ್ತದೆ. ನನಗೆ ಶಿಸ್ತು ಕ್ರಮದ ನೋಟಿಸ್ ಕೊಟ್ಟರೆ ಅದಕ್ಕೆ ಉತ್ತರಿಸುತ್ತೇನೆ ಎಂದರು. ಇದನ್ನೂ ಓದಿ: ಬಿಎಸ್‍ವೈ, ಮೋದಿ ಅವರೇನು ಎಳೆ ಕಡಸುಗಳಾ?- ಸಿದ್ದರಾಮಯ್ಯ

    ಬೈ ಎಲೆಕ್ಷನ್ ಬಳಿಕ ರಾಜ್ಯ ರಾಜಕೀಯ ಬದಲಾವಣೆ ಆಗಿ ಮತ್ತೆ ಚುನಾವಣೆ ಬರಬಹುದು. ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದ್ರೆ ಚುನಾವಣೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಆದರೆ ಜನಾಭಿಪ್ರಾಯದ ಜೊತೆಗೆ ನನ್ನ ವೈಯುಕ್ತಿಕ ಅಭಿಪ್ರಾಯವು ಮತ್ತೆ ಸಿದ್ದರಾಮಯ್ಯ ನವರೆ ಸಿಎಂ ಆಗಬೇಕು. ಹೈ ಕಮಾಂಡ್ ಕೇಳಿದರೂ ನಾನು ಸಿದ್ದರಾಮಯ್ಯತೇ ಸಿಎಂ ಆಗಬೇಕು ಅಂತ ಹೇಳ್ತೀನಿ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ಜನರ ಅಭಿಪ್ರಾಯ: ಜಮೀರ್ ಅಹ್ಮದ್

  • ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸವಿದೆ: ಎಚ್‍ಡಿಕೆ

    ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸವಿದೆ: ಎಚ್‍ಡಿಕೆ

    ರಾಮನಗರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ಹೋಗಿರಬಹುದು. ಆದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ. ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, ಪರಮಪೂಜ್ಯರ ಆಶೀರ್ವಾದ ಹಾಗೂ ರಾಜ್ಯದ ಜನರ ಆಶೀರ್ವಾದದಿಂದ ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸವಿದೆ ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದರು. ಬಮೂಲ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಕೆಎಂಎಫ್ ರಾಜ್ಯಕ್ಕೆ ಬರಲು ತಮ್ಮ ತಂದೆ, ಜೆಡಿಎಸ್ ವರಿಷ್ಠ ಎಚ್.ದೇವೇಗೌಡ ಅವರೇ ಕಾರಣ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಂಜಾವಧೂತ ಸ್ವಾಮೀಜಿಗಳು ಮಾತನಾಡಿ, ಎಚ್‍ಡಿ ಕುಮಾರಸ್ವಾಮಿ ಅವರು 20 ತಿಂಗಳ ಅಧಿಕಾರವನ್ನು ಜನರು ಇನ್ನೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಜನರು ಅಭಿಮಾನದಿಂದ ಮಾತನಾಡುತ್ತಾರೆ. ಅದಕ್ಕೂ ಹೆಚ್ಚಿನ ಆಡಳಿತವನ್ನು 14 ತಿಂಗಳಲ್ಲಿ ನೀಡಿದ್ದರು. ಅದನ್ನ ಜನರಿಗೆ ಮುಟ್ಟಿಸುವಲ್ಲಿ ಮಾಧ್ಯಮಗಳು ಸಹಕಾರ ನೀಡಲಿಲ್ಲ ಎಂಬ ಕೊರಗಿದೆ ಎಂದು ಹೇಳಿದರು.

    ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದ್ದರು. ಆದರೆ ಅವಕಾಶ ಸಿಗಲಿಲ್ಲ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ವೇದಿಕೆಯಲ್ಲಿಯೇ ಸಿಎಂ ಆಗ್ತಾರೆ ಎಂದು ತಿಳಿಸಿದ್ದೆ. ಈಗಲೂ ಹೇಳುತ್ತೇನೆ ಮುಂದೆ ಇನ್ನೊಮ್ಮೆ ರಾಜ್ಯವನ್ನು ಆಳುವ ಯೋಗ ಕುಮಾರಸ್ವಾಮಿ ಅವರಿಗೆ ಬರುತ್ತೆ ಎಂದು ತಿಳಿಸಿದರು.

    ಇದೇ ವಿಚಾರವನ್ನು ಪ್ರಸ್ತಾಪಿಸಿದ ಎಚ್.ಡಿ.ಕುಮಾರಸ್ವಾಮಿ ಅವರು, ಎರಡು ಬಾರಿ ಚಿಕಿತ್ಸೆ ಆಗಿರುವಂತಹ ಹಿನ್ನೆಲೆಯಲ್ಲಿ ಸಣ್ಣ ಸಮಸ್ಯೆಯಿದ್ದು ಹಿಂದೆ ಓಡಾಡುತ್ತಿದ್ದ ಸ್ಪೀಡ್ ನನ್ನಲ್ಲಿಲ್ಲ. ನಾನೂ ಕೂಡ ಸೀನಿಯರ್ ಸಿಟಿಜನ್ 60 ವರ್ಷ ದಾಟಿದ್ದೇನೆ ಎಂದು ತಿಳಿಸಿದರು.

    ಪರಮಪೂಜ್ಯ ಸ್ವಾಮೀಜಿಗಳು ಹೇಳಿದಂತೆ ಅವರ ಆರ್ಶೀವಾದ, ನಮ್ಮ ತಂದೆ ದೇವೇಗೌಡರು ಹಾಗೂ ನನ್ನನ್ನ ಪ್ರೀತಿಯಿಂದ ಕಾಣುವ ಲಕ್ಷಾಂತರ ಕುಟುಂಬದ ಜನರಿದ್ದಾರೆ. ನಿಮ್ಮ ಆರ್ಶೀವಾದದಿಂದ ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸವಿದೆ. ಅದಕ್ಕೆ ಕಾರಣ ನಿಮ್ಮ ಆರ್ಶೀವಾದ ಹಾಗೂ ಪರಮಪೂಜ್ಯರ ಆರ್ಶಿವಾದ ಎಂದು ತಿಳಿಸಿದರು.

  • ಬಿಎಸ್‍ವೈ ನಂತರ ನಾನೇ ರಾಜ್ಯದ ಸಿಎಂ ಎಂದ ಕತ್ತಿ

    ಬಿಎಸ್‍ವೈ ನಂತರ ನಾನೇ ರಾಜ್ಯದ ಸಿಎಂ ಎಂದ ಕತ್ತಿ

    ಹುಬ್ಬಳ್ಳಿ: ಸಿಎಂ ಬಿಎಸ್ ಯಡಿಯೂರಪ್ಪ ನಂತರ ನಾನೇ ರಾಜ್ಯದ ಸಿಎಂ. ಅದಕ್ಕಾಗಿಯೇ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವರಾಗಿ ಮುಖ್ಯಮಂತ್ರಿಯಾಗಬೇಕು. ಡಿಸಿಎಂ ಆಗಿ ಅಲ್ಲ. ಡಿಸಿಎಂ ಹುದ್ದೆ ಅಸಂವಿಧಾನಿಕ ಹುದ್ದೆಯಾಗಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಬದಲಾವಣೆ ಮಾಡೋದಕ್ಕಾಗೇ ನನಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಸದ್ಯಕ್ಕೆ ಬಿಎಸ್‍ವೈ ಸಿಎಂ ಆಗಿದ್ದಾರೆ. ಅವರ ನಂತರ ನಾನು ಸಿಎಂ ಆಗುವೆ. ನಾನು ಎಕಾಂಗಿ ಎನೂ ಅಲ್ಲ. ನನ್ನ ಹಿಂದೆಯೂ ಸಾಕಷ್ಟು ಜನರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನೆರೆ ಪರಿಹಾರ ನನಗೆ ಸಮಾಧಾನ ತಂದಿದೆ. ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಕೇಂದ್ರ ಸರ್ಕಾರ ಇನ್ನೂ 400 ಕೋಟಿ ಕೊಡುವುದಾಗಿ ಹೇಳಿದೆ. ಡಿಸಿಎಂ ಲಕ್ಷ್ಮಣ್ ಸವದಿ ನನ್ನ ಆತ್ಮೀಯ ಸ್ನೇಹಿತ. ಯಡಿಯೂರಪ್ಪ ಅವರು ನನ್ಮ ರಾಜಕೀಯ ಗುರುಗಳು ಎಂದು ಕತ್ತಿ ಹೇಳಿದರು. ಇದೇ ವೇಳೆ ಅನರ್ಹ ಶಾಸಕರಿಗೂ ಬಿಜೆಪಿ ಸಂಬಂಧವಿಲ್ಲ ಅನ್ನೋ ವಿಚಾರವಾಗಿ ಮಾತನಾಡಿ, ಅನರ್ಹರಿಂದಲೇ ನಮ್ಮ ಸರ್ಕಾರ ಬಂದಿದೆ ಎಂದರು.

    ಏಳು ಕ್ಷೇತ್ರಗಳ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ನಗರದ ಖಾಸಗಿ ಹೋಟೆಲ್‍ನಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಉಮೇಶ ಕತ್ತಿ ಏಕಾಂಗಿಯಾಗಿ ಸಾಮಾನ್ಯ ಕಾರ್ಯಕರ್ತರಂತೆ ಹಿಂಭಾಗದಲ್ಲಿ ಕುಳಿತ್ತಿದ್ದು ಕಂಡು ಬಂದಿತು. ವೇದಿಕೆ ಮೇಲಿದ್ದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹಾಗೂ ಸಿಎಂ ಬಿಎಸ್‍ವೈ ಸಭೆಗೆ ಆಗಮಿಸಿದ್ದ ಸಂಸದರು ಹಾಗೂ ಶಾಸಕರನ್ನು ಕರೆದು ವೇದಿಕೆ ಮುಂಭಾಗದಲ್ಲಿ ಕುಳಿತುಕೊಳ್ಳಲು ಸೂಚನೆ ನೀಡಿದರು. ಆದರೆ ಉಮೇಶ ಕತ್ತಿಯವರನ್ನು ನೋಡಿಯೂ ಮುಂದೆ ಕರೆಯದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ನಾನು ಸಭೆಯಲ್ಲಿ ಎಲ್ಲಿ ಕೂತರೇ ಎನು? ನಾನು ಎಕಾಂಗಿಯಲ್ಲ, ಹೇಳಬೇಕಾಗಿದ್ದನ್ನು ಹೇಳಿದ್ದೇನೆ ಎಂದು ಕತ್ತಿ ಉತ್ತರಿಸಿದರು.

  • ಎಚ್‍ಡಿಕೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ: ಅಭಿಷೇಕ್ ಅಂಬರೀಷ್

    ಎಚ್‍ಡಿಕೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ: ಅಭಿಷೇಕ್ ಅಂಬರೀಷ್

    ಬೆಂಗಳೂರು: ಮಂಗಳವಾರ ಸಿಎಂ ಸ್ಥಾನಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿರುವ ಹಿನ್ನೆಲೆ ನಟ ಅಭಿಷೇಕ್ ಅಂಬರೀಶ್ ಅವರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 8ನೇ ತಿಂಗಳ ಪುಣ್ಯತಿಥಿಯಾಗಿದ್ದು, ಸುಮಲತಾ ಅನುಪಸ್ಥಿತಿಯಲ್ಲಿ ಅಭಿಷೇಕ್ ಅಂಬರೀಷ್ ಮತ್ತು ರಾಕ್‍ಲೈನ್ ವೆಂಕಟೇಶ್ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದರು.

    ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸದ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮತ್ತು ಮುಂದಿನ ಸರ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಒಬ್ಬ ಸಂಸದೆಯ ಮಗನಾಗಿ ರಾಜಕೀಯದ ಬಗ್ಗೆ ಮಾತನಾಡಲು ನಮಗೆ ಅಧಿಕಾರವಿಲ್ಲ. ಆದರೆ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಈ ಬಗ್ಗೆ ನಾನು ಮಾತನಾಡಬಹುದು ಅಷ್ಟೇ. ಏನಾಗಿದೆ ಎನ್ನುವುದು ಮಾಧ್ಯಮಗಳ ಮೂಲಕ ಇಡೀ ರಾಜ್ಯವೇ ನೋಡಿದೆ. ಸರ್ಕಾರದಲ್ಲಿ ಬದಲಾವಣೆಯಾಗಿದೆ. ರಾಜ್ಯದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಕೂಡ ಅಭಿವೃದ್ಧಿ ಆಗಲಿ, ರಾಜ್ಯ ಉದ್ಧಾರವಾಗಲಿ, ಒಳ್ಳೆಯ ಕೆಲಸವಾಗಲಿ ಎಂದು ನಾವು ಬೇಡಿಕೆ ಇಡುತ್ತೇವೆ ಎಂದರು.

    ಸಿಎಂ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಅಧಿಕಾರ ಶಾಶ್ವತವಲ್ಲ ಎಂದು ಎಲ್ಲರೂ ಹೇಳಿದ್ದಾರೆ. ರಾಜಕಾರಣಿಗಳೆಲ್ಲರೂ ಮಾತನಾಡಿದ್ದಾರೆ. ಇದು ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ನಾವು ಅವರಿಗೆ ಸಲಹೆ ನೀಡುವಷ್ಟು ದೊಡ್ಡವರು ಅಲ್ಲ. ಅವರು ಅಧಿಕಾರದಲ್ಲಿ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಒಳ್ಳೆಯದು ಎನ್ನುವ ಮನೋಭಾವವಿಲ್ಲ. ಅವರು ಅಧಿಕಾರದಲ್ಲಿದ್ದರೂ ಕೂಡ ನಮ್ಮ ತಾಯಿ ಅವರ ಜೊತೆ ಕೆಲಸ ಮಾಡಲು ತಯಾರಿದ್ದರು. ಈಗ ಬೇರೆ ಸರ್ಕಾರ ಬಂದಿದೆ. ಇವರ ಜೊತೆ ಕೂಡ ನಮ್ಮ ತಾಯಿ ಕೈ ಜೋಡಿಸಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

    ಮುಂದೆ ಯಾವ ಸರ್ಕಾರ ಬಂದರೂ ಆಗ ತಮ್ಮ ತಾಯಿ ಎಂಪಿ ಆಗಿದ್ದರೆ, ಅವರ ಜೊತೆಗೂಡಿ ಕೆಲಸ ಮಾಡುತ್ತಾರೆ. ಅಭಿವೃದ್ಧಿ ಕೆಲಸ ಆಗಬೇಕೆಂದರೆ ವಿರೋಧ ಪಕ್ಷ ಅಥವಾ ಆಡಳಿತ ಪಕ್ಷ ಯಾವುದಾದರೂ ಆಗಲಿ ನಾವು ಕೆಲಸ ಮಾಡಲೇಬೇಕು. ಯಾವುದೇ ಸರ್ಕಾರ ಬಂದರೂ ನಮ್ಮ ಜವಾಬ್ದಾರಿ ನಾವು ನಿಭಾಯಿಸಲು ತಯಾರಿದ್ದೇವೆ ಎಂದಿದ್ದಾರೆ.

  • ಧರ್ಮ ಶ್ರೇಷ್ಠದಿಂದ ನಡೆದುಕೊಳ್ಳುವ ವ್ಯಕ್ತಿ ಮುಂದಿನ ಸಿಎಂ: ಮೈಲಾರಲಿಂಗ ಸ್ವಾಮೀಜಿ ಭವಿಷ್ಯ

    ಧರ್ಮ ಶ್ರೇಷ್ಠದಿಂದ ನಡೆದುಕೊಳ್ಳುವ ವ್ಯಕ್ತಿ ಮುಂದಿನ ಸಿಎಂ: ಮೈಲಾರಲಿಂಗ ಸ್ವಾಮೀಜಿ ಭವಿಷ್ಯ

    ಧಾರವಾಡ: ಧರ್ಮ ಶ್ರೇಷ್ಠದಿಂದ ನಡೆದುಕೊಳ್ಳುವ ವ್ಯಕ್ತಿ ಮುಂದಿನ ಸಿಎಂ ಆಗುತ್ತಾರೆ. ಯಾರು ಮುಂದಿನ ಸಿಎಂ ಅನ್ನೋದು ಇಂದು ಮಧ್ಯಾಹ್ನ 2.45ರೊಳಗೆ ಗೊತ್ತಾಗುತ್ತದೆ ಎಂದು ರಾಜ್ಯ ರಾಜಕಾರಣದ ಕುರಿತು ಮೈಲಾರಲಿಂಗ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಆದಿಶಕ್ತಿ ಹೊಳೆಮ್ಮದೇವಿ ಆರಾಧಕರಾಗಿರುವ ಮೈಲಾರಲಿಂಗ ಸ್ವಾಮೀಜಿ ಅವರು ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹೈಡ್ರಾಮಾವನ್ನು ನೋಡಿ ಭವಿಷ್ಯ ಹೇಳಿದ್ದಾರೆ. ಧರ್ಮ ಶ್ರೇಷ್ಠತೆಯಿಂದ ನಡೆದುಕೊಳ್ಳುವ ವ್ಯಕ್ತಿ ಮುಂದಿನ ಸಿಎಂ ಆಗುತ್ತಾರೆ. ಜನ ಯಾವುದು ಹೌದು, ಹೌದು ಎನ್ನುತ್ತಿದ್ದಾರೋ ಅದು ಅಲ್ಲವಾಗುತ್ತೆ. ಯಾವುದು ಆಗುವುದಿಲ್ಲ ಎಂದು ಜನ ತಿಳಿದಿದ್ದಾರೆಯೋ ಅದು ನಿಜವಾಗಲಿದೆ ಅಂತ ದೇವಿ ವಾಣಿಯಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

    ಧರ್ಮ ಶ್ರೇಷ್ಠತೆಯ ವ್ಯಕ್ತಿ ರಾಜ್ಯದ ಆಡಳಿತ ನಡೆಸುತ್ತಾನೆ. ಇಂದು ಮಧ್ಯಾಹ್ನ 2.45ರೊಳಗೆ ಎಲ್ಲಾ ತಿಳಿಯಲಿದೆ. ಧರ್ಮದ ಸೇವೆ ಮಾಡುವ ವ್ಯಕ್ತಿ ಸಿಎಂ ಸ್ಥಾನವನ್ನು ಏರುತ್ತಾನೆ ಎಂದು ದೇವಿ ನನ್ನ ಮೂಲಕ ಹೇಳಿಸುತ್ತಿದ್ದಾಳೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

  • ಸಿದ್ದರಾಮಯ್ಯರಿಗೆ ನನ್ನ ಮೇಲೆ ಅಭಿಮಾನವಿದೆ, ಒಲವಿದೆ: ರೇವಣ್ಣ

    ಸಿದ್ದರಾಮಯ್ಯರಿಗೆ ನನ್ನ ಮೇಲೆ ಅಭಿಮಾನವಿದೆ, ಒಲವಿದೆ: ರೇವಣ್ಣ

    ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯರಿಗೆ ನನ್ನ ಮೇಲೆ ಅಭಿಮಾನವಿದೆ ಮತ್ತು ಒಲವಿದೆ, ಹೀಗಾಗಿ ಸಿಎಂ ಸ್ಥಾನಕ್ಕೆ ನಾನೂ ಕೂಡ ಅರ್ಹ ಅಂತ ಟ್ವೀಟ್ ಮಾಡಿದ್ದಾರೆ ಎಂದು ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.

    ಈಗ ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಸ್ಥಾನಕ್ಕಾಗಿ ನಾವು ಅಣ್ಣ ತಮ್ಮಂದಿರು ಬಡಿದಾಡಿಕೊಳ್ಳಲ್ಲ. ನಮ್ಮ ವರಿಷ್ಠರು ದೇವೇಗೌಡರು ಏನು ಹೇಳುತ್ತಾರೆ ಹಾಗೆಯೇ ನಾನು ಕೇಳುತ್ತೇನಿ. ಭಿನ್ನವಾಡುವ ಪ್ರಶ್ನೆಯೇ ಉದ್ಭವಿಸಲ್ಲ. ನನ್ನ ಮತ್ತು ಕುಮಾರಸ್ವಾಮಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಿದ್ದರಾಮಯ್ಯನವರಿಗೆ ನನ್ನ ಮೇಲೆ ಅಭಿಮಾನವಿದೆ ಅದಕ್ಕೆ ಸಿಎಂ ಸ್ಥಾನಕ್ಕೆ ಅರ್ಹ ಎಂದಿದ್ದಾರೆ ಎಂದು ಮಾಜಿ ಸಿಎಂ ಪರ ನಿಂತಿದ್ದಾರೆ. ಇದನ್ನೂ ಓದಿ:ಖರ್ಗೆಗೆ ಸಿಎಂ ಪೋಸ್ಟ್ – ಸಿದ್ದರಾಮಯ್ಯ ಟಾಂಗಿಗೆ ಸಿಎಂ ತಿರುಗೇಟು

    ಸಿದ್ದರಾಮಯ್ಯ ಹೇಳಿದ್ದೇನು?
    ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನ ಇದ್ದಾರೆ. ಅವರಲ್ಲಿ ಹೆಚ್.ಡಿ.ರೇವಣ್ಣ ಕೂಡಾ ಒಬ್ಬರು. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದರು.