Tag: CM ibrahim

  • ಎತ್ತು ಏರಿಗೆ, ಕೋಣ ನೀರಿಗೆ: ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ

    ಎತ್ತು ಏರಿಗೆ, ಕೋಣ ನೀರಿಗೆ: ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ

    – ರೇಣುಕಾಚಾರ್ಯ ನೆಲದ ಮೇಲೆ ಬೋಟ್ ಓಡಿಸ್ತಾರೆ
    – ಅನರ್ಹ ಶಾಸಕರ ಬಗ್ಗೆಯೂ ‘ಕೈ’ ಮುಖಂಡ ವ್ಯಂಗ್ಯ

    ಬೆಂಗಳೂರು: ಎತ್ತು ಏರಿಗೆ ಇಳಿದರೆ ಕೋಣ ನೀರಿಗೆ ಇಳಿಯಿತಂತೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಾ ಹೋದರೆ ರಾಜ್ಯದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪರಿಹಾರ ಲೆಕ್ಕಾಚಾರ ಸರಿಯಾಗಿ ಕೊಟ್ಟಿಲ್ಲ. ಅದಕ್ಕೆ ಪುನಃ ಸಮೀಕ್ಷೆ ಮಾಡಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ದಯವಿಟ್ಟು ಆ ಭಾಗದ ಜನರ ಕೂಗನ್ನು ಆಲಿಸಿ ಎಂದು ಹೇಳಿದರು.

    ರಾಜ್ಯ ಹಾಗೂ ಕೇಂದ್ರದ ನಡುವೆ ಸಮನ್ವಯತೆ ಭಾರೀ ಚೆನ್ನಾಗಿದೆ. ಸತ್ತರೂ ಮಾತಾಡಬೇಡ ಎಂದು ಹೇಳುತ್ತಾರೆ. ಇದು ಖಾಮೋಷ್.. ಖಾಮೋಷ್ ಸರ್ಕಾರ, ಬೈಠಕ್ ಸರ್ಕಾರ. ಬಿಎಸ್ ಯಡಿಯೂರಪ್ಪ ಸರ್ಕಾರ ಎದ್ದೇಳಲೇ ಇಲ್ಲ ಎಂದು ವ್ಯಂಗ್ಯವಾಡಿದರು.

    ಅನರ್ಹ ಶಾಸಕರ ಬಗ್ಗೆ ವ್ಯಂಗ್ಯವಾಡಿದ ಸಿಎಂ ಇಬ್ರಾಹಿಂ, 17 ಜನ ಪತಿವ್ರತರು ಹೋಗಿಬಿಟ್ಟಿದ್ದಾರೆ. ಅವರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಹೀಗಾಗಿ ಎಲ್ಲರೂ ಚುನಾವಣೆ ಕಡೆಗೆ ಗಮನ ಹರಿಸುತ್ತಾರೆ. ಇದರಿಂದಾಗಿ ಪ್ರವಾಹ ಸಂತ್ರಸ್ತರ ಕಥೆ ಅಷ್ಟೇ. ಪರಿಹಾರ ವಿತರಣೆ ಆಗುವವರೆಗೆ ಉಪ ಚುನಾವಣೆ ಮುಂದೂಡಬೇಕು. ಇದರಿಂದ ಯಾವುದೇ ತೊಂದರೆ ಆಗಲ್ಲ. ಒಂದು ವೇಳೆ ಉಪ ಚುನಾವಣೆ ನಡೆದು, ಅನರ್ಹರು ಗೆದ್ದು ಬಂದರೆ ಸಚಿವ ಸ್ಥಾನಕ್ಕೆ ಕಿತ್ತಾಡುತ್ತಾರೆ ಎಂದು ಹೇಳಿದರು.

    ವಿರೋಧ ಪಕ್ಷದ ನಾಯಕನ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕಾಂಗ ನಾಯಕರಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಚರ್ಚೆ ನಡೆದಿದ್ದು, ಅಕ್ಟೋಬರ್ 10 ರೊಳಗೆ ಆಯ್ಕೆ ಪ್ರಕಟಿಸಲಾಗುತ್ತದೆ ಎಂದರು.

    ವಿರೋಧ ಪಕ್ಷದ ನಾಯಕನ ಯಾರಾಗಬೇಕು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರದ ಹೆಣ ಹೊರುವುದಕ್ಕೆ ಯಾರಾದರೇನು? ಹೆಣ ಹೊರುವುದಕ್ಕೆ ನಾಲ್ಕು ಜನ ಬೇಕು. ದೆಹಲಿಗೆ ಹೋಗುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ವೀಸಾ ಪಡೆಯಬೇಕು. ಸಿದ್ದರಾಮಯ್ಯ ಅವರು ಅಂತಹ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಮುಂದೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾತನಾಡುವುದಕ್ಕೆ ಆಗುವುದಿಲ್ಲ. ಕನಿಷ್ಠ ರಾಜ್ಯಪಾಲರ ಮುಂದೆ ಸಮಸ್ಯೆ ಹೇಳಿಕೊಳ್ಳಬಹುದಿತ್ತು. ಇಲ್ಲವೇ ಕೈಸೇ ಹೇ… ಮನ್ ಕಿ ಬಾತ್… ಮಾಡಬಹುದಿತ್ತು ಎಂದು ಲೇವಡಿ ಮಾಡಿದರು.

    ನೀರಿನಲ್ಲಿ ಬೋಟ್ ಓಡಿಸುವವರನ್ನ ನೋಡಿದ್ದೇನೆ. ಆದರೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ನೆಲದ ಮೇಲೆ ಬೋಟ್ ಓಡಿಸುತ್ತಾರೆ ಎಂದು ಕಿಚಾಯಿಸಿದರು.

    ಬಾಯಿ ಬಿಗಿ ಹಿಡಿದು ಮಾತನಾಡಿ ಅಂತ ರೇಣುಕಾಚಾರ್ಯ ಹೇಳುತ್ತಾರೆ. ಬಾಯಿ ಹಿಡಿಬೇಕೋ, ಸೊಂಡಿಲು ಹಿಡಿಬೇಕೋ ಗೊತ್ತಿಲ್ಲ. ಅವರ ಹೆಸರೇ ರೇಣುಕಾಚಾರ್ಯ. ರೇಣುಕಾ ಪ್ರಸಾದದಿಂದ ಹುಟ್ಟಿದವರು. ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಮುಂದೆ ಕರೆದುಕೊಂಡು ಹೋಗುವ ಸಾಹಸ ಮಾಡಲಿ ಎಂದು ಹೇಳಿದರು.

  • ಬಿಜೆಪಿಯವ್ರು ನಪುಂಸಕರು, ನಾವು ಹುಟ್ಟಿಸಿದ ಮಕ್ಕಳನ್ನ ಕರ್ಕೊಂಡು ಹೋದ್ರು: ಸಿಎಂ ಇಬ್ರಾಹಿಂ

    ಬಿಜೆಪಿಯವ್ರು ನಪುಂಸಕರು, ನಾವು ಹುಟ್ಟಿಸಿದ ಮಕ್ಕಳನ್ನ ಕರ್ಕೊಂಡು ಹೋದ್ರು: ಸಿಎಂ ಇಬ್ರಾಹಿಂ

    ಬೆಂಗಳೂರು: ಬಿಜೆಪಿಯವರು ನಪುಂಸಕರು. ನಾವು ಹುಟ್ಟಿಸಿದ ಮಕ್ಕಳನ್ನು ಕರೆದುಕೊಂಡು ಹೋದರು ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಮ್ಮ 17 ಜನ ಮಕ್ಕಳನ್ನು ಮುಂಬೈಗೆ ಕರೆದುಕೊಂಡು ಹೋಗಿ ಇಟ್ಟಿದ್ದರು. ಈಗ ಅವರೆಲ್ಲ ಬೀದಿ ಪಾಲು ಮಾಡಿದ್ದಾರೆ. ಅವರ ಪರಿಸ್ಥಿತಿ ಅರ್ಹರೂ ಅಲ್ಲ, ಅನರ್ಹರೂ ಅಲ್ಲ ಎನ್ನುವಂತಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೇಯರ್ ಆಯ್ಕೆ ಮಾಡಲು ಆಗುತ್ತಿಲ್ಲ. ಅಷ್ಟೇ ಯಾಕೆ ಕೇಂದ್ರ ಸರ್ಕಾರದಿಂದ ಕೇವಲ 10 ರೂ. ನೆರೆ ಪರಿಹಾರ ತರಲಿಕ್ಕೆ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರು ಇದ್ದಾರೆ. ಹಾಗಿದ್ದರೂ ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ತರುವುದಕ್ಕೆ ಆಗುತ್ತಿಲ್ಲ. ಕರ್ನಾಟಕದ ಮಾನವನ್ನು ದೆಹಲಿಯಲ್ಲಿ ಹರಾಜು ಹಾಕಿದರು. ನಾಚಿಕೆ ಆಗಬೇಕು ಬಿಜೆಪಿಯವರಿಗೆ ಎಂದು ಕಿಡಿಕಾರಿದರು.

    ಕೇಂದ್ರ ಸರ್ಕಾರದ ಖಜಾನೆ ಖಾಲಿಯಾಗಿದೆ. ಆರ್‌ಬಿಐ ನಿಂದ ಇತ್ತೀಚೆಗಷ್ಟೇ 30 ಸಾವಿರ ಕೋಟಿ ರೂ.ಯನ್ನು ಪಡೆದಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು, 2019ರ ಮಾರ್ಚ್ ಕಳೆದ ಮೇಲೆ ಜನ ಬೀದಿಗೆ ಬರುತ್ತಾರೆ ಎಂದು ಹೇಳಿದ್ದರು. ಅದರಂತೆ ಈಗ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದ್ದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

  • ಹಿಂದೂ, ಹಿಂದೂ ಅನ್ನೋರು ಹಬ್ಬದಂದು ಎಡೆ ಹಾಕಕ್ಕಾದ್ರೂ ಬಿಡಬಹುದಿತ್ತು- ಸಿಎಂ ಇಬ್ರಾಹಿಂ

    ಹಿಂದೂ, ಹಿಂದೂ ಅನ್ನೋರು ಹಬ್ಬದಂದು ಎಡೆ ಹಾಕಕ್ಕಾದ್ರೂ ಬಿಡಬಹುದಿತ್ತು- ಸಿಎಂ ಇಬ್ರಾಹಿಂ

    ಬೆಂಗಳೂರು: ಹಿಂದೂ ಹಿಂದೂ ಎಂದು ಹೇಳುವವರು ಗಣೇಶ ಹಬ್ಬದ ದಿನ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ತಂದೆಗೆ ಎಡೆ ಇಡಲು ಬಿಡುತ್ತಿದ್ದರೆ ಏನಾಗುತ್ತಿತ್ತು ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಾಶಕಾಲೇ ವಿಪರೀತ ಬುದ್ಧಿ. ಇದರಿಂದ ಅವರು ಏನಾದರೂ ಕಾಂಗ್ರೆಸ್ಸನ್ನು ಧಮನ ಮಾಡಬೇಕು ಎಂಬ ಕನಸು ಕಂಡಿದ್ದರೆ ಅದು ಹಗಲು ಕನಸಾಗಿರುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಹಿಂದೂ ಹಿಂದೂ ಎಂದು ಹೇಳುವವರು ಗಣೇಶ ಹಬ್ಬದಂದು ಒಂದು ದಿನವಾದರೂ ಅವರ ತಂದೆಗೆ ಎಡೆ ಇಡುವುದಕ್ಕೆ ಬಿಡುತ್ತಿದ್ದರೆ ಏನಾಗುತ್ತಿತ್ತು. ಎರಡು ವರ್ಷ ಸುಮ್ಮನಿದ್ರಲ್ವಾ. ಇದೊಂದು ಅಮಾನ್ಯವಾದಂತಹ ಕ್ರಮವಾಗಿದೆ ಎಂದು ಡಿಕೆಶಿ ಬಂಧನವನ್ನು ಸಿಎಂ ಇಬ್ರಾಹಿಂ ಖಂಡಿಸಿದರು.

    ಅಮಾನ್ಯವಾದಂತಹ ಈ ಕ್ರಮವನ್ನು ಕರ್ನಾಟಕ ರಾಜ್ಯದ ಆರೂವರೆ ಕೋಟಿ ನೋಡುತ್ತಿದ್ದಾರೆ. ಇಂದು ಪಕ್ಷ ಡಿಕೆಶಿ ಅವರ ಪರವಾಗಿ ನಿಂತಿದೆ. ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತದೆ ಎಂದರು.

    ದೆಹಲಿಯ ಫ್ಲ್ಯಾಟ್ ನಲ್ಲಿ ಸಿಕ್ಕ 8.59 ಕೋಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ವಿಚಾರಣೆಯ ನಂತರ ಮಂಗಳವಾರ ರಾತ್ರಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆಗೆಂದು ದೆಹಲಿಯ ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇತ್ತ ರಾಜ್ಯದಲ್ಲಿ ಡಿಕೆಶಿ ಬಂಧನವನ್ನು ಖಂಡಿಸಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.

  • ನಡತೆಗೆಟ್ಟ ಹುಡುಗಿ ಹೊಸ್ತಿಲು ದಾಟಿದ್ರೆ ಏನೂ ಮಾಡಕ್ಕಾಗಲ್ಲ- ಸಿ.ಎಂ ಇಬ್ರಾಹಿಂ

    ನಡತೆಗೆಟ್ಟ ಹುಡುಗಿ ಹೊಸ್ತಿಲು ದಾಟಿದ್ರೆ ಏನೂ ಮಾಡಕ್ಕಾಗಲ್ಲ- ಸಿ.ಎಂ ಇಬ್ರಾಹಿಂ

    ಕೊಪ್ಪಳ: ನಾವು ಹುಟ್ಟಿಸಿದ 17 ಮಂದಿಯನ್ನು ಕರೆದುಕೊಂಡು ಹೋಗಿ ನಮ್ಮ ಮಕ್ಕಳು ಎಂದು ಹೇಳುತ್ತಿದ್ದಾರೆ. ನಡತೆಗೆಟ್ಟ ಹುಡುಗಿ ಹೊಸ್ತಿಲು ದಾಟಿದರೆ ಏನೂ ಮಾಡೋಕೆ ಆಗಲ್ಲ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿ ಅನರ್ಹ ಶಾಸಕರಿಗೆ ಟಾಂಗ್ ನೀಡಿದ್ದಾರೆ.

    ಖಾಸಗಿ ಕಾರ್ಯಕ್ರಮದ ನಿಮಿತ್ತ ಇಂದು ಕೊಪ್ಪಳಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಂತ ಮಕ್ಕಳನ್ನು ಹುಟ್ಟಿಸೋಕೆ ಆಗದವರು ನಮ್ಮ ಮಕ್ಕಳನ್ನ ಕರೆದುಕೊಂಡು ಹೋಗಿ ಸರ್ಕಾರ ರಚನೆ ಮಾಡಿದ್ದಾರೆ. ಹೀಗಾಗಿ ಸ್ವಂತ ಮಕ್ಕಳನ್ನು ಹುಟ್ಟಿಸದವರು ನೀವೆಂಥಾ ಗಂಡಸರು ಎಂದು ಇಬ್ರಾಹಿಂ ಪ್ರಶ್ನಿಸಿದ್ದಾರೆ.

    17 ಜನ ನಾವು ಹುಟ್ಟಿಸಿದವರನ್ನು ಕರೆದುಕೊಂಡು ಹೋಗಿ ನಮ್ಮ ಮಕ್ಕಳು ಎನ್ನುತ್ತಿದ್ದಾರೆ. ನಡತೆಗೆಟ್ಟ ಹುಡುಗಿ ಹೊಸ್ತಿಲು ದಾಟಿದರೆ ಏನೂ ಮಾಡೋಕೆ ಆಗಲ್ಲ. ಇವರೆಲ್ಲ ಯಾಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು ಎಂದು ಅನರ್ಹ ಶಾಸಕರ ವಿರುದ್ಧ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

    ಸಿದ್ದರಾಮಯ್ಯ ಯಾವ ಶಾಸಕರನ್ನೂ ಕಳುಹಿಸಿಲ್ಲ. ಬಾಂಬೇ ಸೇಠ್ ಪತಿವ್ರತೆಯರನ್ನೆಲ್ಲ ಕರೆದುಕೊಂಡು ಹೋಗಿ ಬಿಟ್ಟನು. ಬಳಿಕ ಮೂರು ದಿನ ರೂಮಲ್ಲಿಟ್ಟುಕೊಂಡು ಬಿಟ್ಟಿದ್ದಾನೆ. ಈವಾಗ ಅನರ್ಹ ಶಾಸಕರು ದೇವದಾಸಿಯಾಗಿದ್ದಾರೆ. ಇವರೆಲ್ಲ ತೀನ್ ಕಾ ಮಜಾ ಎಂದು ಲೇವಡಿ ಮಾಡಿದರು.

    ಅನರ್ಹ ಶಾಸಕ ಸುಧಾಕರ್ ಅವರಿಗೆ ನೋವು ಆಗಿದೆ ಎಂದು ಹೇಳುತ್ತಾರೆ. ಅವರಗೇನು ಹೆರಿಗೆ ಆಗಿತ್ತಾ ಎಂದು ವ್ಯಂಗ್ಯವಾಡಿದ ಇಬ್ರಾಹಿಂ, ನಾವು ಹಾಳಾಗಿದ್ದೇವೆ ಅಂದುಕೊಂಡು ಸಿದ್ದರಾಮಯ್ಯ ಅವರ ಹೆಸರು ಕೆಡಿಸುತ್ತಿದ್ದಾರೆ ಎಂದು ತಿಳಿಸಿದರು.

    ಟಿಪ್ಪು ಜಯಂತಿಯನ್ನ ಯಡಿಯೂರಪ್ಪನವರು ರದ್ದು ಮಾಡಿಲ್ಲ. ಅವರ ಕಡೆಯಿಂದ ಮಾಡಿಸಿದ್ದಾರೆ ಅಷ್ಟೇ. ಟಿಪ್ಪು ಜಯಂತಿಯನ್ನ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಎಲ್ಲರೂ ಆಚರಿಸಿದ್ದಾರೆ. ಆದರೆ ಈಗ ಅವರೇ ರದ್ದು ಮಾಡಿದ್ದಾರೆ. ಬಹುಶಃ ಇದು ಸಂಘ ಪರಿವಾರದ ಕೆಲಸ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

    ಟಿಪ್ಪು ಜಯಂತಿ ರದ್ದಾಗಿದ್ದಕ್ಕೆ ನಮಗೆ ಯಾವುದೇ ಬೇಜಾರಿಲ್ಲ. ಇಸ್ಲಾಂ ಧರ್ಮದಲ್ಲಿ ಪೂಜೆ ಮಾಡುವುದು ಫೋಟೋಗೆ ಹಾರ ಹಾಕುವ ಸಂಪ್ರದಾಯ ಇಲ್ಲ. ಜಯಂತಿ ಆದರೆ ಬಡ ಮಕ್ಕಳಿಗೆ ಸಹಾಯ ಮಾಡುವುದಾಗಿದೆ ಎಂದರು.

  • ಮಾನ ಮರ್ಯಾದೆ, ಪಂಚೇಂದ್ರಿಯ ಇಲ್ಲದ ಸರ್ಕಾರ ರಾಜ್ಯದಲ್ಲಿದೆ : ರೇಣುಕಾಚಾರ್ಯ

    ಮಾನ ಮರ್ಯಾದೆ, ಪಂಚೇಂದ್ರಿಯ ಇಲ್ಲದ ಸರ್ಕಾರ ರಾಜ್ಯದಲ್ಲಿದೆ : ರೇಣುಕಾಚಾರ್ಯ

    ಧಾರವಾಡ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ರೈತರ ಜೊತೆ ನಾವಿದ್ದೇವೆ ಎಂದು ಹೇಳುತ್ತಿದೆ. ಆದರೆ ರೈತರು ಸಂಕಷ್ಟದಲ್ಲಿ ಇದ್ದಾಗ ಸರ್ಕಾರದ ನಾಯಕರು ರೆಸಾರ್ಟಿನಲ್ಲಿ ಮಾಲೀಸ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

    ಕುಂದಗೋಳ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರೋದು ಮಾನ ಮರ್ಯಾದೆ ಇಲ್ಲದ ಸರ್ಕಾರ. ಪಂಚೇಂದ್ರಿಯಗಳೇ ಇಲ್ಲದ ಸರ್ಕಾರ. ಇವರು ಯಾವ ರೈತರ ಸಾಲಮನ್ನಾ ಮಾಡಿಲ್ಲ. ಬರಗಾಲ ಸಮಸ್ಯೆಯನ್ನು ನಿಭಾಯಿಸುತ್ತಿಲ್ಲ. ರೈತರ ಜೊತೆ ಇದ್ದೇವೆ ಅಂತಾರೆ, ಋಣ ಮುಕ್ತ ಪತ್ರದ ಬದಲಿಗೆ ಸಾಂತ್ವನ ಪತ್ರ ಕೊಡುತ್ತಾರೆ. ರೈತರು ಸಂಕಷ್ಟದಲ್ಲಿ ಇದ್ದಾಗ ರೆಸಾರ್ಟ್ ನಲ್ಲಿ ಮಾಲೀಸ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ ಎಂದು ಟಾಂಗ್ ಕೊಟ್ಟರು.

    ಸಿ. ಎಂ ಇಬ್ರಾಹಿಂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿರುವುದಕ್ಕೆ ಪ್ರತಿಕ್ರಿಯಿಸಿ, ಮೋದಿ ಬಗ್ಗೆ ಜೋಕರ್ ಮತ್ತು ಬ್ರೋಕರ್ ಇಬ್ರಾಹಿಂ ಏನೇನೋ ಮಾತನಾಡುತ್ತಾ ಇದ್ದಾರೆ. ಭ್ರಷ್ಟಾಚಾರದ ಹಣ ತಂದು ಕುಂದಗೋಳ ಚಿಂಚೊಳಿಯಲ್ಲಿ ಹಂಚುತ್ತಿದ್ದಾರೆ ಎಂದು ಕಿಡಿಕಾರಿದರು.

    ಈಗಾಗಲೇ ಹರ್ಲಾಪುರದ ರೈತ ಈಶ್ವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಿಂದ ಸಿಎಂಗೆ ಕುಂದಗೋಳಗೆ ಸ್ವಾಗತ ಮಾಡುವಂತಾಗಿದೆ. ಈ ಸರ್ಕಾರ ನಿಜವಾಗಿಯೂ ಬದುಕಿದ್ದರೆ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

  • ಮೋದಿ ಪ್ರಧಾನಿಯಾದ್ಮೇಲೆ ಬೀಫ್ ಮಾರಾಟ ಜಾಸ್ತಿಯಾಗಿದೆ: ಸಿಎಂ ಇಬ್ರಾಹಿಂ

    ಮೋದಿ ಪ್ರಧಾನಿಯಾದ್ಮೇಲೆ ಬೀಫ್ ಮಾರಾಟ ಜಾಸ್ತಿಯಾಗಿದೆ: ಸಿಎಂ ಇಬ್ರಾಹಿಂ

    – ಸುಮಾರು 60 ಸಂಸದರಿಂದ ಬೀಫ್ ಫ್ಯಾಕ್ಟರಿ ನಿರ್ಮಾಣ
    – ಜಾಧವ್‍ಗೆ ಅಂಬಾನಿ, ಅದಾನಿ ದುಡ್ಡು ಬಂದಿದೆ

    ಯಾದಗಿರಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಬೀಫ್ ಮಾರಾಟ ಜಾಸ್ತಿಯಾಗಿದೆ. ಸುಮಾರು 60 ಸಂಸದರು ಬೀಫ್ ಫ್ಯಾಕ್ಟರಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಆರೋಪಿಸಿದ್ದಾರೆ.

    ಚಿಂಚೋಳಿ ತಾಲೂಕಿನ ಅರಣಕಲ್ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ-ಮುಸ್ಲಿಮರು ಒಂದಾಗಿ ಬಾಳುವಂತೆ ಮಾಡು ಅಂತ ನಾನು ದೇವರಲ್ಲಿ ಕೇಳುತ್ತೇನೆ. ರಂಜಾನ್ ತಿಂಗಳಿನಲ್ಲಿ ನಾನು ಸುಳ್ಳು ಹೇಳುವುದಿಲ್ಲ. ಮೋದಿ ನೀ ಹೋದಿ, ನೀ ಬರೋ ಪ್ರಶ್ನೆಯೇ ಇಲ್ಲ, ಮೋದಿ ಬೂದಿ. ಮೇ 23ರ ನಂತರ ದೇಶಕ್ಕೆ ಶುಭ ದಿನ ಬರುತ್ತದೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಅವರು 1996ರಿಂದಲೂ ನಮ್ಮ ಜೊತೆಗಿದ್ದಾರೆ. ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರಿಗೆ ಈಗಾಗಲೇ ಉದ್ಯಮಿಗಳಾದ ಅದಾನಿ ಹಾಗೂ ಅಂಬಾನಿ ಅವರ ಹಣ ಬಂದಿದೆ. ಪ್ರಧಾನಿ ಮೋದಿ ಅವರು ಊರಿಗೆ ಊರೇ ಮಾರುತ್ತಿದ್ದಾರೆ. ಇದನ್ನು ತೋರಿಸಲು ಯಾವುದೇ ರಾಷ್ಟ್ರೀಯ ಮಾಧ್ಯಮಗಳು ಮುಂದಾಗುತ್ತಿಲ್ಲ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಚ್, ಬೂಟ್ ಹಾಕಿದರೆ ತೋರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ವೀರಶೈವರೇ ಬರೆದಿಟ್ಟುಕೊಳ್ಳಿ, ಬಿ.ಎಸ್.ಯಡಿಯೂರಪ್ಪನವರು ಅಧಿಕಾರದಲ್ಲಿ ಮುಂದಿದ್ದಾರೆ. ಆದರೆ ಬಿ.ಎಲ್.ಸಂತೋಷ್ ಅವರು ಯಡಿಯೂರಪ್ಪರನ್ನು ಹಿಂದೆ ಸರಿಸುತ್ತಾರೆ ಎಂದರು.

  • ಬಿಜೆಪಿ ಒಂದು ಕೋಮುವಾದಿ ಪಕ್ಷ, ಜಾತಿ ಹೆಸ್ರಲ್ಲಿ ಮತ ಕೇಳ್ತಾರೆ: ಮಾಜಿ ಸಿಎಂ

    ಬಿಜೆಪಿ ಒಂದು ಕೋಮುವಾದಿ ಪಕ್ಷ, ಜಾತಿ ಹೆಸ್ರಲ್ಲಿ ಮತ ಕೇಳ್ತಾರೆ: ಮಾಜಿ ಸಿಎಂ

    ಧಾರವಾಡ: ಬಿಜೆಪಿ ಒಂದು ಕೋಮುವಾದಿ ಪಕ್ಷ, ಜಾತಿ ಹೆಸರಿನಲ್ಲಿ ಮತ ಕೇಳ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

    ಧಾರವಾಡ ಜಿಲ್ಲೆ ನವಲಗುಂದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಐದು ವರ್ಷ ಪ್ರಧಾನಿಯಾಗಿದ್ರು. ಎಲ್ಲಿಯೂ ಕೂಡ ಅವರು ಕರ್ನಾಟಕ ಮತ್ತು ರೈತರ, ಬಡವರ, ದಲಿತರ ಸಮಸ್ಯೆ ಬಗ್ಗೆ ಚರ್ಚೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ಮಹದಾಯಿ ಸಂಬಂಧ ನಾನು ಸಿಎಂ ಆಗಿದ್ದಾಗ ಮೋದಿ ಭೇಟಿಯಾಗೋಕೆ ಹೋಗಿದ್ದೆವು. ಆಗ ಅನಂತ್ ಕುಮಾರ್, ಶೆಟ್ಟರ್, ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ನಮ್ಮ ಜೊತೆ ಬರಲಿಲ್ಲ. ಪ್ರತ್ಯೇಕವಾಗಿ ಮೋದಿ ಭೇಟಿಯಾಗಿ ಯಾವ ಕಾರಣಕ್ಕೂ ಒಪ್ಪಿಕೊಳ್ಳಬೇಡಿ ಅಂದಿದ್ದರು ಎಂದು ಆರೋಪಿಸಿದ ಸಿದ್ದರಾಮಯ್ಯ, ಇದೆಲ್ಲವೂ ಸಂಸದ ಪ್ರಹ್ಲಾದ್ ಜೋಶಿಯದ್ದೇ ಕಿತಾಪತಿ ಎಂದು ಹೇಳಿದರು.

    ಈ ರೀತಿ ಹೇಳಿ ಎಂದು ಮೋದಿಗೆ ಹೇಳಿಕೊಟ್ಟಿದ್ದರು ಎಂದ ಅವರು, ಮಹದಾಯಿ ವಿಷಯದಲ್ಲಿ ಮೋದಿ ಮಧ್ಯ ಪ್ರವೇಶ ಆಗದೇ ಇರುವುದಕ್ಕೆ ಪ್ರಹ್ಲಾದ್ ಜೋಶಿಯೇ ಕಾರಣ. ಮತ್ತೊಂದು ಸಲ ಸಾಲಮನ್ನಾಕ್ಕಾಗಿ ನಾನು ಬಿಜೆಪಿಯವರನ್ನು ಕರೆದುಕೊಂಡ ಮೋದಿ ಭೇಟಿಗೆ ಹೋಗಿದ್ದೆ. ಬರಗಾಲ ಇದೆ ಸಾಲಮನ್ನಾ ಮಾಡಿ ಎಂದು ಕೈ ಮುಗಿದು ಗೋಗರೆದೆ, ಶೆಟ್ಟರ್, ಜೋಶಿ, ಸದಾನಂದ ಗೌಡರಿಗೆಲ್ಲ ನೀವಾದ್ರೂ ಹೇಳಿ ಅಂದೆ. ಆದರೆ ಈ ಗಿರಾಕಿಗಳು ಸಾಲಮನ್ನಾಗೆ ಒತ್ತಾಯ ಮಾಡಲೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

    ಪ್ರಹ್ಲಾದ್ ಜೋಶಿ ಯಾವತ್ತಾದ್ರೂ ಸಗಣಿ ಎತ್ತಿದ್ದಾರಾ? ಯಡಿಯೂರಪ್ಪ ರೈತ ನಾಯಕ ಎಂದು ಹಸಿರು ಟವೆಲ್ ಹಾಕೋತ್ತಾರೆ. ಆದರೆ ಸಾಲಮನ್ನಾ ಮಾಡ್ರಿ ಅಂದ್ರೆ ನೋಟ್ ಪ್ರಿಂಟ್ ಯಂತ್ರ ಇದೆಯಾ ಅಂದಿದ್ದರು ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದ್ರು.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸಿಎಂ ಇಬ್ರಾಹಿಂ, ಮೋದಿ ನೀನು ಹೋದಿ. ಕೊನೆಗೆ ಆಗುವೆ ನೀನು ಬೂದಿ ಎಂದು ವ್ಯಂಗ್ಯವಾಡಿದ್ರು. ವಿಜಯಪುರ ಕಡೆ ಮೋದಿ ನೀ ಹೋದಿ ಹೋದಿ ಎಂದು ಹೇಳುತ್ತಿದ್ದಾರೆ. ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕ್ತಾರಾ ಎಂಬ ಹಾಡನ್ನು ಕೂಡ ಇದೇ ವೇಳೆ ಪ್ರಸ್ತಾಪಿಸಿದ್ರು. ಮೋದಿ ಸತ್ತ ಮೇಲೆ ಯಾರು ಎಂದು ನಾನು ಅಮಿತ್ ಶಾ ಅವರನ್ನು ಕೇಳ ಬಯಸುವೆ. ನಮ್ಮ ಕಡೆ ಮಮತಾ ಹೋದ್ರೆ ಮಯಾವತಿ ಇದ್ದಾರೆ. ಇವರೆಲ್ಲ ಹೋದರೆ ನಮ್ಮ ಕಡೆ ರಾಹುಲ್‍ಗಾಂಧಿ ಇದ್ದಾರೆ. ಆದರೆ ಅಂತಹ ಒಂದು ಪೀಸ್ ಕೂಡ ಬಿಜೆಪಿಯಲ್ಲಿ ಇಲ್ಲ ಎಂದು ಗುಡುಗಿದರು.

  • ಸದನದಲ್ಲಿ ಖರ್ಗೆರನ್ನ ನೋಡಿದ್ರೆ ಮೋದಿಗೆ ದುರ್ಗಿ ಕಂಡಂತಾಗುತ್ತೆ: ಸಿಎಂ ಇಬ್ರಾಹಿಂ

    ಸದನದಲ್ಲಿ ಖರ್ಗೆರನ್ನ ನೋಡಿದ್ರೆ ಮೋದಿಗೆ ದುರ್ಗಿ ಕಂಡಂತಾಗುತ್ತೆ: ಸಿಎಂ ಇಬ್ರಾಹಿಂ

    ಕಲಬುರಗಿ: ಸಂಸತ್ ಕಲಾಪದಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದುರ್ಗಿ ಕಂಡಂತಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ.

    ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಒಬ್ಬರೇ ಬಿಜೆಪಿಯ 400 ಜನ ಸಂಸದರನ್ನು ಸಮರ್ಥವಾಗಿ ಎದುರಿಸಿದ್ದಾರೆ. ಹೀಗಾಗಿಯೇ ಮಲ್ಲಿಕಾರ್ಜುನ ಖರ್ಗೆ ಅಂದ್ರೆ ಪ್ರಧಾನಿ ಮೋದಿ ಅವರಿಗೆ ದುರ್ಗಿ ನೆನಪಾಗುತ್ತಾಳೆ ಎಂದರು.

    ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರ ಮೇಲೆ ನನಗೆ ಮುಂಚೆಯಿಂದಲೂ ಅನುಮಾನವಿತ್ತು. ಅವರ ದೇಹದ ಅಂಗಾಂಗಳು ಒಂದಕ್ಕೊಂದು ಹೊಂದಾಣಿಕೆಯೇ ಆಗಲ್ಲ ಎಂದು ವ್ಯಂಗ್ಯ ಮಾಡಿದರು.

    ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ನನ್ನ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸುವಂತೆ ಒತ್ತಾಯಿಸಲಾಗಿದೆ. ಈ ಚುನಾವಣೆಯಲ್ಲಿ ಸಣ್ಣ ಸಣ್ಣ ಮರಿಗಳನ್ನು ಹಿಡಿದುಕೊಂಡು ಬಂದು ನನ್ನ ವಿರುದ್ಧ ಬೈಯಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಲೀಕಯ್ಯ ಗುತ್ತೇದಾರ ಮತ್ತು ಬಾಬುರಾವ್ ಚಿಂಚನಸೂರ್ ವಿರುದ್ಧ ವಾಗ್ದಾಳಿ ನಡೆಸಿದರು.

  • ಬಿಜೆಪಿಗೆ ಮಕ್ಕಳು ಹುಟ್ಟಿಸೋ ಶಕ್ತಿಯಿಲ್ಲ, ಕಾಂಗ್ರೆಸ್‍ನಿಂದ ಪಡೆದುಕೊಂಡಿದೆ: ಸಿಎಂ ಇಬ್ರಾಹಿಂ

    ಬಿಜೆಪಿಗೆ ಮಕ್ಕಳು ಹುಟ್ಟಿಸೋ ಶಕ್ತಿಯಿಲ್ಲ, ಕಾಂಗ್ರೆಸ್‍ನಿಂದ ಪಡೆದುಕೊಂಡಿದೆ: ಸಿಎಂ ಇಬ್ರಾಹಿಂ

    ಕಲಬುರಗಿ: ಬಿಜೆಪಿಗೆ ಮಕ್ಕಳು ಹುಟ್ಟಿಸುವ ಶಕ್ತಿಯಿಲ್ಲ. ಅದಕ್ಕೆ ಕಾಂಗ್ರೆಸ್‍ಗೆ ಹುಟ್ಟಿದ ಮಗುವನ್ನು ಪಡೆದುಕೊಂಡಿದೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಅವರು, ಉಮೇಶ್ ಜಾಧವ್ ಬಿಜೆಪಿ ಅಭ್ಯರ್ಥಿ ಆಗಿರುವುದಕ್ಕೆ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಅಫಜಲಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದದ ಅವರು, ಈ ಚುನಾವಣೆ ಮಲ್ಲಿಕಾರ್ಜುನ ಖರ್ಗೆ ಅವರದ್ದಲ್ಲ. ಇದು ಕರ್ನಾಟಕ ರಾಜ್ಯದ ಅಭಿವೃದ್ಧಿಯ ಚುನಾವಣೆಯಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಬದ್ಧ ವೈರಿಗಳಾಗಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದಾಗಿವೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಬದ್ಧ ವೈರಿಗಳಾದ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಹಾಗೂ ಸಮಾಜವಾದಿ ಪಕ್ಷ (ಎಸ್‍ಪಿ) ಒಂದಾಗಿವೆ. ಹೀಗೆ ಅನೇಕ ಪಕ್ಷಗಳು ಒಂದಾಗಿದ್ದು, ಬಿಜೆಪಿಯನ್ನು ಸೋಲಿಸಲಿವೆ ಎಂದರು.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಆರ್ ಎಸ್‍ಎಸ್ ನಾಮಕಾವಸ್ತೆ ಎನ್ನುವಂತೆ ಇಟ್ಟುಕೊಂಡಿದೆ. ಮುಸಲ್ಮಾನರು ಬಿಜೆಪಿ ಕಚೇರಿಯಲ್ಲಿ 10 ವರ್ಷ ಕಸ ಹೊಡೆದರೆ ಟಿಕೆಟ್ ಕೊಡುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಅವರು 40 ವರ್ಷದಿಂದ ಆರ್ ಎಸ್‍ಎಸ್ ಕಚೇರಿಯ ಕಸ ಗುಡಿಸಿದರೂ ಕುರುಬ ಸಮುದಾಯದ ಒಬ್ಬರಿಗೆ ಟಿಕೆಟ್ ಕೊಡಿಸಲು ಅವರಿಂದ ಆಗಲಿಲ್ಲ ಎಂದು ಲೇವಡಿ ಮಾಡಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ದೇಶಕ್ಕೆ ಬಲಿಷ್ಠ ಪ್ರಧಾನಿ ಬೇಕು ಅಂತ ಹೇಳುತ್ತಾರೆ. ಬಲಿಷ್ಠ ಪ್ರಧಾನಿ ತಗೆದುಕೊಂಡು ಕುಸ್ತಿ ಆಡಬೇಕಾ? ಮಾಜಿ ಪ್ರಧಾನಿ ನರೇಂದ್ರ ಮೋದಿ ನಿಶಕ್ತರಾಗಿದ್ದರೂ 400 ರೂ.ಗೆ ಅಡುಗೆ ಗ್ಯಾಸ್ ಸಿಲಿಂಡರ್ ಕೊಡುತ್ತಿದ್ದರು. ಅಷ್ಟೇ ಅಲ್ಲದೆ ಅವರ ಆಡಳಿತ ಅವಧಿಯಲ್ಲಿ 12 ಸರ್ಜಿಕಲ್ ಸ್ಟ್ರೈಕ್ ಆಗಿವೆ. ಅವರು ಮಾಡಿರುವ ಕೆಲಸವನ್ನು ವಿವರಿಸಿ ಹೇಳುವುದಕ್ಕೆ ಸಮಯ ಸಿಗುತ್ತಿಲ್ಲ ಎಂದು ವ್ಯಂಗ್ಯದ ಮಾತುಗಳನ್ನಾಡಿದರು.

  • ಈಶ್ವರಪ್ಪ ಮಾತಿಗೆ ನನ್ನ ವಿರೋಧವಿದೆ ಅಂದ್ರು ಶ್ರೀನಿವಾಸ್ ಪ್ರಸಾದ್!

    ಈಶ್ವರಪ್ಪ ಮಾತಿಗೆ ನನ್ನ ವಿರೋಧವಿದೆ ಅಂದ್ರು ಶ್ರೀನಿವಾಸ್ ಪ್ರಸಾದ್!

    – ಸಿಎಂ ಇಬ್ರಾಹಿಂ ವಿದೂಷಕ

    ಮೈಸೂರು: ಮುಸ್ಲಿಂ ಮತಗಳು ಬೇಡ ಎಂದು ಕೆ.ಎಸ್. ಈಶ್ವರಪ್ಪ ಹೇಳಬಾರದಿತ್ತು. ಅವರ ಮತ ಬೇಡ ಇವರ ಮತ ಬೇಡ ಅನ್ನಬಾರದು ಎಂದು ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಈಶ್ವರಪ್ಪ ಮಾತಿಗೆ ವಿರೋಧ ವ್ಯಕ್ತಪಡಿಸಿದ್ರು.

    ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೋಸ್ತಿ ವರ್ಸಸ್ ಬಿಜೆಪಿ ಆಗಬೇಕಿತ್ತು. ದೋಸ್ತಿ ವರ್ಸಸ್ ದೋಸ್ತಿ ಆಗಿದೆ ಎಂದು ವ್ಯಂಗ್ಯವಾಡಿದ್ರು.

    ರಾಜ್ಯದಲ್ಲಿ ದೋಸ್ತಿಗಳು ಹೇಗಿದ್ದಾರೆ ಎಂದು ಗೊತ್ತಿದೆ. ಮಂಡ್ಯದಲ್ಲಿ ದೋಸ್ತಿ ವರ್ಸಸ್ ಸುಮಲತಾ ಆಗಿದೆಯಾ ಎಂದು ಪ್ರಶ್ನಿಸಿದ್ರು. ಅಲ್ಲದೆ ಎಂಟು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ನೀವು ಹೇಗೆ ಅಧಿಕಾರ ಮಾಡಿದ್ದೀರಿ ಎಂದು ರಾಜ್ಯದ ಜನತೆಗೆ ತಿಳಿದಿದೆ. ಎಷ್ಟರ ಮಟ್ಟಿಗೆ ನಿಮ್ಮ ನಡುವೆ ಸಮನ್ವಯ ಇದೆ ಎಂಬುದೂ ಗೊತ್ತಿದೆ ಎಂದು ಹೇಳಿದ್ರು.

    ದಾವೂದ್ ಇಬ್ರಾಹಿಂಗೂ ಸಿ.ಎಂ. ಇಬ್ರಾಹಿಂಗೂ ಏನಾದರೂ ವ್ಯತ್ಯಾಸ ಇದೆಯಾ ಎಂದು ಪ್ರಶ್ನಿಸಿದ ಶ್ರೀನಿವಾಸ್ ಪ್ರಸಾದ್, ಇಬ್ರಾಹಿಂ ಒಬ್ಬ ಕ್ರಿಮಿನಲ್ ಪಾಲಿಟಿಷಿಯನ್. ಇಬ್ರಾಹಿಂ ಒಬ್ಬ ವಿದೂಷಕನಾಗಿದ್ದಾರೆ. ದಾವೂದ್ ಇಬ್ರಾಹಿಂ ಅದರೂ ಅಂಡರ್ ವಲ್ರ್ಡ್ ಡಾನ್. ಆದರೆ ಇಬ್ರಾಹಿಂ ಯಾರು ಅಂದ್ರೆ ಸಿದ್ದರಾಮಯ್ಯ ಆಸ್ಥಾನದ ಒಬ್ಬ ವಿದೂಷಕ ಎಂದು ಸಿಎ.ಎಂ ಇಬ್ರಾಹಿಂ ವಿರುದ್ಧ ವಾಗ್ದಾಳಿ ನಡೆಸಿದ್ರು.


    ಅನಂತ್‍ಕುಮಾರ್ ಹೆಗ್ಡೆ ಸಂವಿಧಾನದದ ಬಗ್ಗೆ ಅತ್ಯಂತ ಬಾಲಿಶವಾಗಿ ಮಾತಾಡಿದ್ದರು. ಆ ಮಾತಿಗೆ ಅವರು ಸಂಸತ್ ನಲ್ಲಿ ಕ್ಷಮೆ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ರು.