Tag: CM ibrahim

  • ಪರಿಷತ್‍ನಲ್ಲಿ ಇವಿಎಂ ಗಲಾಟೆ, ಕೋಲಾಹಲ

    ಪರಿಷತ್‍ನಲ್ಲಿ ಇವಿಎಂ ಗಲಾಟೆ, ಕೋಲಾಹಲ

    ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿಂದು ಇವಿಎಂ ವಿಚಾರವಾಗಿ ದೊಡ್ಡ ಗಲಾಟೆ ಆಯ್ತು. ಇವಿಎಂನಲ್ಲಿ ಅಕ್ರಮ ನಡೆಯುತ್ತೆ. ಇವಿಎಂ ವ್ಯವಸ್ಥೆಯನ್ನೆ ರದ್ದು ಮಾಡಿ ಎಂದು ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ ಮಾತು ಕಲಾಪದಲ್ಲಿ ಗದ್ದಲಕ್ಕೆ ಕಾರಣವಾಯ್ತು. ಇಬ್ರಾಹಿಂ ವಿರುದ್ಧ ಮುಗಿಬಿದ್ದ ಬಿಜೆಪಿ ಸದಸ್ಯರು ಇವಿಎಂನ್ನು ಸಮರ್ಥನೆ ಮಾಡಿಕೊಂಡರು.

    ವಿಧಾನ ಪರಿಷತ್ ನಲ್ಲಿ ಸಂವಿಧಾನ ಮೇಲೆ ಚರ್ಚೆ ಮಾಡುವಾಗ ಮಾತನಾಡಿದ ಸದಸ್ಯ ಸಿಎಂ ಇಬ್ರಾಹಿಂ, ಚುನಾವಣೆ ಆಯೋಗದ ಮೇಲೆ ಅನುಮಾನ ವ್ಯಕ್ತಪಡಿಸಿದರು. ಚುನಾವಣೆ ಆಯೋಗ ಇವತ್ತು ಸಂಪೂರ್ಣವಾಗಿ ಬಲಹೀನವಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಇವಿಎಂನಲ್ಲಿ ಗೋಲ್‍ಮಾಲ್ ನಡೆಯುತ್ತಿದೆ ಎಂದು ಆರೋಪ ಮಾಡಿದರು. ವಿಶ್ವದ ಬಹುತೇಕ ಮುಂದುವರೆದ ದೇಶಗಳು ಇವಿಎಂನ್ನು ವಿರೋಧ ಮಾಡಿದ್ದಾರೆ. ಮುಂದುವರೆದ ದೇಶಗಳು ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸುತ್ತಿವೆ. ನಮ್ಮ ದೇಶದ ಇವಿಎಂ ವ್ಯವಸ್ಥೆ ಮೇಲೆ ನನಗೆ ಅನುಮಾನ ಇದೆ. ಹೀಗಾಗಿ ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಬೇಕು ಎಂದು ಆಗ್ರಹ ಮಾಡಿದರು.

    ಸಿಎಂ ಇಬ್ರಾಹಿಂ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಇಬ್ರಾಹಿಂ ವಿರುದ್ಧ ಕಿಡಿಕಾರಿದರು. ಇವಿಎಂ ದೇಶಕ್ಕೆ ತಂದೋರು ಕಾಂಗ್ರೆಸ್ಸಿನವರು. ಈಗ ಅವರೇ ವಿರೋಧ ಮಾಡೋದು ದುರಂತ ಎಂದು ಆಕ್ರೋಶ ಹೊರ ಹಾಕಿದರು. ಕಾಂಗ್ರೆಸ್ ನವರು ಗೆದ್ದರೆ ಇವಿಎಂ ದೋಷ ಇರುವುದಿಲ್ಲ. ಆದರೆ ಬಿಜೆಪಿ ಗೆದ್ದಾಗ ಮಾತ್ರ ಇವಿಎಂ ದೋಷ ಅಂತೀರಾ ಎಂದು ಇಬ್ರಾಹಿಂ ವಿರುದ್ಧ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು. ಈ ವೇಳೆ ಆಡಳಿತ ಪಕ್ಷ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ ಆಯ್ತು.

    ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ಸೀತೆ ಮೇಲೆ ಅನುಮಾನ ಬಂದಾಗ ರಾಮ ಸೀತೆಯನ್ನು ಕಾಡಿಗೆ ಕಳಿಸಿ ತ್ಯಾಗ ಮಾಡಿದ. ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಇವಿಎಂ ತ್ಯಾಗ ಮಾಡಲು ಆಗುವುದಿಲ್ಲವಾ ಎಂದು ಪ್ರಶ್ನೆ ಮಾಡಿದರು. ಇಬ್ರಾಹಿಂ ಮಾತಿಗೆ ಮತ್ತೆ ಸದನದಲ್ಲಿ ಗದ್ದಲ ಗಲಾಟೆ ನಡೆಯಿತು. ಬಳಿಕ ಸಭಾಪತಿಗಳು ಮಧ್ಯೆ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

  • ಇಬ್ರಾಹಿಂ ಕಥೆಗೆ ಸದನದಲ್ಲಿ ಗದ್ದಲ – ಸದನದಿಂದ ಹೊರ ನಡೆದ ತೇಜಸ್ವಿನಿ

    ಇಬ್ರಾಹಿಂ ಕಥೆಗೆ ಸದನದಲ್ಲಿ ಗದ್ದಲ – ಸದನದಿಂದ ಹೊರ ನಡೆದ ತೇಜಸ್ವಿನಿ

    ಬೆಂಗಳೂರು: ಸದಾ ಸ್ವಾರಸ್ಯಕರ ಘಟನೆಗಳು, ಕಥೆಗಳ ಮೂಲಕ ಸದನದಲ್ಲಿ ಹಾಸ್ಯ ಚಟಾಕಿ ಹಾರಿಸೋ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಹೇಳಿಕೆ ಇವತ್ತು ಸದನದಲ್ಲಿ ಗದ್ದಲ ಗಲಾಟೆಗೆ ಕಾರಣವಾಯಿತು. ಮಹಿಳೆಯರಿಗೆ ಸಂಬಂಧಿಸಿದ ಪದ ಬಳಕೆಗೆ ಬಿಜೆಪಿ ಸದಸ್ಯರು ಕೆರಳಿ ಕೆಂಡವಾದರು. ಇಬ್ರಾಹಿಂ ಹೇಳಿಕೆ ಖಂಡಿಸಿ ತೇಜಸ್ವಿನಿ ರಮೇಶ್ ಸದನದಿಂದ ಹೊರ ನಡೆದ ಘಟನೆಯೂ ನಡೀತು.

    ಸಂವಿಧಾನದ ಮೇಲೆ ಮಾತನಾಡುತ್ತಿದ್ದ ಇಬ್ರಾಹಿಂ ಎಂದಿನಂತೆ ಹಾಸ್ಯ ಶೈಲಿಯಲ್ಲಿ ಭಾಷಣ ಮಾಡಿದರು. ಈ ವೇಳೆ ಸನ್ನಿವೇಶವೊಂದನ್ನ ಉಲ್ಲೇಖ ಮಾಡಿದರು. ಈಗ ಯಾರು ಎಲ್ಲಿಯೇ ಕೆಲಸ ಕೇಳಲು ಹೋದರೆ ಅನುಭವ ಕೇಳುತ್ತಾರೆ. ಅದಕ್ಕೆ ನಾನು ನಿನ್ನ ಮಗಳನ್ನು ಕೊಡುವಾಗ ಅಳಿಯನ ಅನುಭವ ಕೇಳಿದ್ದೀರಾ ಅಂತ ಕೇಳಿದೆ ಅಂತ ಇಬ್ರಾಹಿಂ ಪದ ಬಳಕೆ ಮಾಡುತ್ತಾರೆ.

    ಇಬ್ರಾಹಿಂ ಪದ ಬಳಕೆಗೆ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಸೇರಿದಂತೆ ಇತರೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮದುವೆಗೆ ಮುನ್ನ ಅನುಭವ ಕೇಳುತ್ತೀರಲ್ಲ ಇದು ಮಹಿಳೆಯರಿಗೆ ಮಾಡುತ್ತಿರುವ ಅಪಮಾನ ಎಂದು ಇಬ್ರಾಹಿಂ ಹೇಳಿಕೆಯನ್ನು ಖಂಡಿಸಿದರು. ಇಬ್ರಾಹಿಂ ಮಾತಿಗೆ ಕೆರಳಿ ಕೆಂಡವಾದ ತೇಜಸ್ವಿನಿ ರಮೇಶ್, ಇಬ್ರಾಹಿಂ ಅವರ ಮಾತಿನಿಂದ ನಮಗೆ ನೋವಾಗಿದೆ. ಹೆಣ್ಣಿನ ಬಗ್ಗೆ ಬೇಕಾದಂತೆ ಮಾತನಾಡೋದಾದ್ರೆ ನಾನು ಹೊರ ಹೋಗುತ್ತೇನೆ. ಇದು ಸಂತೆಯಲ್ಲ. ಮಹಿಳೆಯರಿಗೆ ಅವಮಾನ ಮಾಡುತ್ತೀದ್ದೀರಾ ಎನ್ನುತ್ತಾ ಸದನದಿಂದ ಹೊರ ನಡೆದರು.

    ನಂತರ ಬಿಜೆಪಿ ಸದಸ್ಯರು ಇಬ್ರಾಹಿಂ ವಿರುದ್ಧ ಮುಗಿಬಿದ್ದರು. ನಿಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದಾಗ ಅನುಭವ ಕೇಳಿದ್ರಾ ಎಂದು ಇಬ್ರಾಹಿಂರನ್ನು ಪ್ರಶ್ನಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೂಡಲೇ ಸಿಎಂ ಇಬ್ರಾಹಿಂ ಮಾತನ್ನ ಕಡಿತದಿಂದ ತೆಗೆಯಬೇಕು ಎಂದು ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಸದನದಲ್ಲಿ ಹೇಗೆ ಮಾತನಾಡಬೇಕು ಅಂತ ನಿಯಮ ಇದೆ. ಅದು ಎಲ್ಲರಿಗೂ ಗೊತ್ತಿದೆ. ಕೆಲವೊಮ್ಮೆ ಮಾತನಾಡುವಾಗ ಹೆಚ್ಚು ಕಡಿಮೆ ಆಗುವುದು ಸಹಜ. ಈಗ ಇಬ್ರಾಹಿಂ ತಪ್ಪಾಗಿ ಹೇಳಿದ್ದನ್ನ ವಾಪಸ್ ಪಡೆಯುವಂತೆ ಸಲಹೆ ನೀಡಿದರು. ಹೊರಟ್ಟಿ ಸಲಹೆಯಂತೆ ಸಿಎಂ ಇಬ್ರಾಹಿಂ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ವಿವಾದಕ್ಕೆ ತಿಲಾಂಜಲಿ ಹಾಡಿದರು. ಬಳಿಕ ತೇಜಸ್ವಿನಿ ರಮೇಶ್ ಸದನಕ್ಕೆ ಹಾಜರಾದರು.

  • ಸಿಎಂ ಇಬ್ರಾಹಿಂ ಬಾಯಿ ಚಪಲಕ್ಕೆ ಮಾತನಾಡ್ತಾರೆ: ಸಂಗಣ್ಣ ಕರಡಿ ಟಾಂಗ್

    ಸಿಎಂ ಇಬ್ರಾಹಿಂ ಬಾಯಿ ಚಪಲಕ್ಕೆ ಮಾತನಾಡ್ತಾರೆ: ಸಂಗಣ್ಣ ಕರಡಿ ಟಾಂಗ್

    ಕೊಪ್ಪಳ: ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಬಾಯಿ ಚಪಲಕ್ಕೆ ಮಾತನಾಡ್ತಾರೆ ಎಂದು ಸಂಸದ ಕರಡಿ ಸಂಗಣ್ಣ ವ್ಯಂಗ್ಯವಾಡಿದ್ದಾರೆ.

    ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರು ಕಾಂಗ್ರೆಸ್ಸಿಗೆ ಸೇರ್ಪಡೆ ಆಗ್ತಾರೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಆದ್ರೆ ಇಬ್ರಾಹಿಂ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ. ನಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಸಿಎಂ ಇಬ್ರಾಹಿಂ ಜನರ ಮೂಡ್ ಬದಲಾವಣೆ ಮಾಡಲು ಏನೇನೋ ಹೇಳ್ತಾರೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸುಮ್ಮನೆ ಭ್ರಮೆಯಲ್ಲಿ ಮಾತಾಡ್ತಾರೆ ಎಂದು ಟಾಂಗ್ ಕೊಟ್ಟರು. ಜೊತೆಗೆ ಜೆಡಿಎಸ್‍ನ ಕೆಲವು ಶಾಸಕರು ಬಿಜೆಪಿ, ಕೆಲವು ಶಾಸಕರು ಕಾಂಗ್ರೆಸ್ಸಿಗೆ ಹೋಗಬಹುದು. ಆದರೆ ಏನಾಗುತ್ತೆ ಅಂತ ಕಾದು ನೋಡಬೇಕು ಎಂದು ಹೇಳಿದರು.

    ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಿಂದ ಭಾರತಕ್ಕೆ ಲಾಭವಾಗಲಿದ್ದು, ಟ್ರಂಪ್ ಭೇಟಿಗೆ ಕಾಂಗ್ರೆಸ್ ನಾಯಕರ ವಿರೋಧ ಮಾಡದೆ ಏನು ಮಾಡುತ್ತಾರೆ? ಮೋದಿ ಅವರನ್ನು ಹಾಡಿ ಹೋಗುಳುತ್ತಾರಾ? ಎಂದು ಮಾತಿನ ಚಾಟಿ ಬೀಸಿದರು. ಕಾಂಗ್ರೆಸ್ಸಿನವರು ಈಗಾಗಲೇ ಅಸ್ತಿತ್ವ ಕಳೆದುಕೊಂಡಿದ್ದು, ಕೈ ಪಕ್ಷದವರು ಅವರನ್ನೇ ಅವರು ಹುಡುಕಿಕೊಳ್ಳುವ ಸ್ಥಿತಿ ಬರುತ್ತೆ ಎಂದು ಟಾಂಗ್ ಕೊಟ್ಟರು.

  • ಸದನದಲ್ಲಿ ನಗೆ ಪಾಟಲಿಗೆ ಒಳಗಾದ ಸಚಿವ ಆನಂದ್ ಸಿಂಗ್

    ಸದನದಲ್ಲಿ ನಗೆ ಪಾಟಲಿಗೆ ಒಳಗಾದ ಸಚಿವ ಆನಂದ್ ಸಿಂಗ್

    ಬೆಂಗಳೂರು: ಅಧಿವೇಶನ ಅಂದ ಮೇಲೆ ಒಂದಿಷ್ಟು ಹಾಸ್ಯ, ಹರಟೆ, ಕೋಪ, ತಾಪ ಇವೆಲ್ಲ ಕಾಮನ್. ಜಂಟಿ ಅಧಿವೇಶನದಲ್ಲೂ ಹಾಸ್ಯ, ನಗೆ ಚಟಾಕಿ ಬರವಿಲ್ಲ. ಎರಡನೇ ದಿನ ಸದನಕ್ಕೆ ಆಗಮಿಸಿದ ಸಚಿವ ಆನಂದ್ ತಮ್ಮ ಮಾತಿನ ಮೂಲಕ ನಗೆ ಪಾಟಲಿಗೆ ಒಳಗಾದ ಹಾಸ್ಯ ಘಟನೆ ನಡೆಯಿತು.

    ಸದನ ಪ್ರಾರಂಭವಾದ ಮೇಲೆ ಸಭೆಯ ಮುಂದೆ ಕಾಗದ ಪತ್ರ ಮಂಡನೆ ಮಾಡೋ ಪ್ರಕ್ರಿಯೆ ನಡೆಯುತ್ತದೆ. ಯಾರೇ ಸಭೆ ಮುಂದೆ ಪತ್ರ ಮಂಡಿಸಬೇಕಾದ್ರೆ ತಮ್ಮ ಹೆಸರಿನ ಮುಂದಿನ ಕಾಗದ ಪತ್ರ ಅಂತ ಸೇರಿಸಬೇಕು. ಆದ್ರೆ ಸಚಿವರಾದ ಆನಂದ್ ಸಿಂಗ್ ಕಾಗದ ಪತ್ರಗಳನ್ನು ಮಂಡಿಸುತ್ತಿದ್ದೇನೆ ಅಂತ ಆತುರವಾಗಿ ಹೇಳಿ ಬಿಟ್ರು. ಕೂಡಲೇ ಸಭಾಪತಿಗಳು ‘ಯಾರ ಪತ್ರ ರೀ’ ಅಂತ ಹಾಸ್ಯ ಚಟಾಕಿ ಹಾರಿಸಿದ್ರು. ಸರಿಯಾಗಿ ಹೇಳಿ ಕೊಡಿ ಅಂತ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಕಾಲೆಳೆದ್ರು. ಬಳಿಕ ಎಚ್ಚೆತ್ತ ಸಚಿವ ಆನಂದ್ ಸಿಂಗ್ ನನ್ನ ಮುಂದಿರುವ ಕಾಗದ ಪತ್ರ ಸಭೆಯ ಮುಂದೆ ಮಂಡಿಸುತ್ತಿದ್ದೇನೆ ಅಂತ ಹೇಳಿದ್ರು. ಈ ಘಟನೆ ಸದನದಲ್ಲಿ ನಗೆಗಡಲಲ್ಲಿ ತೇಲುವಂತೆ ಮಾಡಿತು.

    ತಾವೇ ಹಾಸ್ಯ ಚಟಾಕಿ ಹಾರಿಸಿದ ಇಬ್ರಾಹಿಂ:
    ತಮ್ಮ ವಿಶಿಷ್ಟ ಮಾತುಗಾರಿಕೆ ಮೂಲಕ ಹೆಸರಾದ ಸಿಎಂ ಇಬ್ರಾಹಿಂ ತಮ್ಮ ಭಾಷಣದಲ್ಲಿ ಹಾಸ್ಯ ಚಟಾಕಿಗಳನ್ನ ಹಾರಿಸಿ ಸದನವನ್ನು ಹಾಸ್ಯದ ಕಡಲಲ್ಲಿ ತೇಲಿಸಿದ್ರು. ರಾಮಾಯಣ, ಮಹಾಭಾರತ, ಬಸವಣ್ಣ ತತ್ವಗಳನ್ನು ತಮ್ಮ ಭಾಷಣದಲ್ಲಿ ಸೇರಿಸಿ ಅದ್ಭುತ ಭಾಷಣ ಮಾಡಿದ್ರು. ಕಾನೂನು ಸುವ್ಯವಸ್ಥೆ ಬಗ್ಗೆ ಭಾಷಣ ಮಾಡುವಾಗ ದೇವದಾಸಿಯರ ಬಗ್ಗೆ ಇಬ್ರಾಹಿಂ ಪ್ರಸ್ತಾಪ ಮಾಡಿದರು.

    ಈ ವೇಳೆ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್, ಹೆಣ್ಣು ಮಕ್ಕಳ ಬಗ್ಗೆ ನಿಮಗೆ ಗೌರವ ಇಲ್ಲ. ದೇವದಾಸಿಯರ ಬಗ್ಗೆ ಮಾತಾಡಬೇಡಿ ಅಂತ ಕಿಡಿಕಾರಿದ್ರು. ಇದಕ್ಕೆ ಹಾಸ್ಯದ ರೂಪದಲ್ಲೇ ಉತ್ತರ ಕೊಟ್ಟ ಇಬ್ರಾಹಿಂ, ತಾಯಿ ತೇಜಸ್ವಿನಿ ನನಗೆ 8 ಜನ ಹೆಣ್ಣು ಮಕ್ಕಳು. ನನಗೆ ಗೌರವ ಇಲ್ಲ ಅಂತ ಅನ್ನಬೇಡಮ್ಮ ಅಂತ ಹಾಸ್ಯವಾಗಿ ಹೇಳಿದ್ರು. ಕೂಡಲೇ ಸದನದಲ್ಲಿ ಸದಸ್ಯರೊಬ್ಬರು ಎಷ್ಟು ಜನ ಮಕ್ಕಳು ಸಾರ್ ನಿಮಗೆ ಅಂತ ಮರು ಪ್ರಶ್ನೆ ಮಾಡಿದರು. ಇದಕ್ಕೂ ಹಾಸ್ಯದಿಂದಲೇ ಉತ್ತರ ಕೊಟ್ಟ ಇಬ್ರಾಹಿಂ ನನಗೆ 9 ಜನ ಮಕ್ಕಳು ಅಂದರು. ಇಬ್ರಾಹಿಂ ಮಾತು ಕೇಳಿ ಸದನ ನಗೆಗಡಲಲ್ಲಿ ತೇಲಾಡಿತು.

  • ಗಂಡಸ್ರಾಗಿ ಇಲ್ಲವೇ ಹೆಂಗಸ್ರಾಗಿ, ಮಧ್ಯದಲ್ಲಿರುವವರು ಆಗ್ಬೇಡಿ: ಸಿಎಂ ಇಬ್ರಾಹಿಂ

    ಗಂಡಸ್ರಾಗಿ ಇಲ್ಲವೇ ಹೆಂಗಸ್ರಾಗಿ, ಮಧ್ಯದಲ್ಲಿರುವವರು ಆಗ್ಬೇಡಿ: ಸಿಎಂ ಇಬ್ರಾಹಿಂ

    ರಾಮನಗರ: ನಿಮ್ಮ ಮುಖಕ್ಕೆ ನಾಚಿಕೆಯಾಗಬೇಕು. ನಿಮ್ಮ ಜೀವನಕ್ಕೆ ಒಂದಿಷ್ಟು ಬೆಂಕಿ ಬೀಳಾ. ಗಂಡಸರಾಗಿ ಇಲ್ಲ ಹೆಂಗಸರಾಗಿ ಮಧ್ಯದಲ್ಲಿರುವವರು ಆಗಬೇಡಿ. ಧೈರ್ಯವಿದ್ರೆ ಎದುರಿಗೆ ಬಂದು ಗಂಡಸ್ತನವಿದೆ ಅಂತ ಹೇಳಿ. ಧೈರ್ಯವಿದ್ಯಾ ನಿಮಗೆ ಎಂದು ಮಂಗಳೂರು ಬಾಂಬ್ ಪ್ರಕರಣದ ವಿಚಾರವಾಗಿ ಬಿಜೆಪಿ ನಾಯಕರು ಹಾಗೂ ಆರ್‌ಎಸ್‌ಎಸ್  ನಾಯಕರ ವಿರುದ್ಧ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಕಿಡಿಕಾರಿದ್ದಾರೆ.

    ಚನ್ನಪಟ್ಟಣದಲ್ಲಿ ನಡೆದ ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ರು. ಇದೇ ವೇಳೆ ಮಾತನಾಡಿದ ಅವರು, ಮೋದಿ, ಅಮಿತ್ ಶಾರವರ ಕಳ್ಳತನದ ನ್ಯಾಕ್ ಹೇಗಿದೆ ಅಂದ್ರೆ ಚೋರ್, ಚೋರ್ ಅಂತ ಪಕ್ಕದವರ ಜೇಬು ಕಳ್ಳತನ ಮಾಡ್ತಾರೆ. ದೆಹಲಿ ಎಲೆಕ್ಷನ್‍ನಲ್ಲಿ ಕೇಜ್ರಿವಾಲ್ ಗೆಲ್ತಿದ್ದಂತೆ ಅಮಿತ್ ಶಾ ಬಾಯಿ ಬಂದ್ ಆಗಿದ್ದು, ಸೋಲಿಗೆ ಮೋದಿ, ಅಮಿತ್ ಶಾನ ಬಿಟ್ಟು ನಡ್ಡಾನ ಅಡ್ಡ ಮಾಡ್ಬಿಟ್ರು ಎಂದು ತಿಳಿಸಿದ್ರು.

    ಮಂಗಳೂರು ಬಾಂಬ್ ಪ್ರಕರಣದಲ್ಲಿ ಏರ್‍ಪೋರ್ಟಿನಲ್ಲಿ ಬಾಂಬ್ ಇಟ್ಟ ಆದಿತ್ಯರಾವ್ ಲವ್ ಮಾಡೋಕೆ ಬಾಂಬ್ ಇಟ್ನಾ, ಆತನನ್ನ ಹುಚ್ಚ ಅಂತ ಗೃಹ ಸಚಿವ ಬೊಮ್ಮಾಯಿ ಕರೆದ್ರೆ, ಪ್ರಭಾಕರ್ ಭಟ್ ನನ್ನ ಜೊತೆ ಎಲ್ಲರೂ ಪೋಟೋ ತೆಗೆಸ್ಕೋತಾರೆ ಅಂತೇಳಿ ಜಾರಿಕೊಂಡ್ರು. ಇದನ್ನೇ ಸಾಬ್ರು ಮಾಡಿದ್ರೆ ಇಷ್ಟರಲ್ಲಿ ಏನೇನೋ ಆಗ್ಬಿಡ್ತಿತ್ತು. ರಾಜ್ಯದಲ್ಲಿ ಕಾನೂನೂ ಎಲ್ಲರಿಗೂ ಒಂದೇ ಸಾಬ್ರು ಅಂತ ಏನ್ ಬಿಟ್ಬಿಡ್ತೀರಾ ಎಂದು ಪ್ರಶ್ನಿಸಿದ್ರು.

    ಮೋದಿಯವರು ಹೇಳ್ತಾರೆ ಮುಸ್ಲಿಮರು ನಾಲ್ಕು ಮದುವೆ ಆಗ್ತಾರೆ ಅಂತಾರೆ ಅಂತ. ನಮ್ಮ ಧರ್ಮದಲ್ಲಿ ನಾಲ್ಕು ಮದುವೆಗೆ ಅವಕಾಶವಿದೆ, ಆದರೆ ಐದನೆಯದ್ದಕ್ಕೆ ಕಣ್ಣು ಹಾಕಿದ್ರೆ ತಲೆ ಕತ್ತರಿಸುತ್ತಾರೆ. ಈ ಕಾನೂನು ತರಲಿಕ್ಕೆ ಮೋದಿ ಕೈಲಿ ಸಾಧ್ಯನಾ. ಆಫೀಸಿಯಲಿ ನನಗೆ ಒಂದೇ ಮದುವೆಯಾಗಿರೋದು, ಅನ್ ಅಫೀಷಿಯಲಿ ನಿಮಗೆ ಎಷ್ಟಿದ್ಯೋ ಗೊತ್ತಿಲ್ಲ ಎಂದರು.

    ಗೋ ಮದುಸೂಧನ, ಅವರವ್ವನೇ ಗೋ ಅಂತ ಹೆಸರಿಟ್ಬಿಟ್ಟಿದ್ದಾಳೆ. ಉತ್ತರ ಪ್ರದೇಶದ ಸಿಎಂ ಯೋಗಿ, ಜೋಗಿ ಊರಿನ ಹೆಸರು ಬದಲಾಯಿಸಲು ಹೊರಟಿದ್ದಾನೆ. ಆದರೆ ಹೆಸರು ಬದಲಿಸಿದ್ರೆ ಏನೂ ಆಗೋದಿಲ್ಲ. ಮೊದಲು ನಿಮ್ಮ ಮನಸ್ಸು ಬದಲಾಯಿಸಿಕೊಳ್ಳಿ ಎಂದು  ವಾಗ್ದಾಳಿ ನಡೆಸಿದರು.

  • ಸಿಎಂ ಇಬ್ರಾಹಿಂಗಿಂತ ದೇವದಾಸಿಯರ ಬದುಕು ಪವಿತ್ರ : ಸಿ.ಟಿ.ರವಿ

    ಸಿಎಂ ಇಬ್ರಾಹಿಂಗಿಂತ ದೇವದಾಸಿಯರ ಬದುಕು ಪವಿತ್ರ : ಸಿ.ಟಿ.ರವಿ

    ಚಿಕ್ಕಮಗಳೂರು: ಮಾಜಿ ಸಚಿವ ಸಿಎಂ ಇಬ್ರಾಹಿಂ ಜೀವನಕ್ಕಿಂತ ದೇವದಾಸಿರ ಜೀವನ ಪವಿತ್ರವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

    ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ 14 ಜನರನ್ನ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ದೇವದಾಸಿಯರಿಗೆ ಹೋಲಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದರು. ದೇವದಾಸಿಯವರ ಬದುಕು ಅವರಿಗೆ ಗೊತ್ತಿಲ್ಲ. ಅವರದ್ದು ಪವಿತ್ರವಾದ ಬದುಕು. ಕಲೆಯ ಜೊತೆ ಸಮರ್ಪಿತವಾದಂತ ಬದುಕು ಅವರದ್ದು. ಅವರಿಗೆ ಅಪಮಾನ ಮಾಡಿದ್ದಾರೆ. ದೇವದಾಸಿಯರಿಗೆ ಅಪಮಾನ ಮಾಡಿರೋದನ್ನ ನಾನು ಖಂಡಿಸುತ್ತೇನೆ ಎಂದರು.

    ಅದಕ್ಕೂ ಮುಂಚೆ ಅವರ ಜೀವನ ಹೇಗೆ, ಸಿಎಂ ಇಬ್ರಾಹಿಂ ಜೀವನ ಹೇಗೆ ಎಂದು ಅವರೇ ಹೋಲಿಕೆ ಮಾಡಿಕೊಳ್ಳಲಿ ಎಂದಿದ್ದಾರೆ. ಇಬ್ರಾಹಿಂ ಜೀವನಕ್ಕಿಂತ ದೇವದಾಸಿಯರ ಬದುಕು ಪವಿತ್ರವಾಗಿದೆ ಎಂದು ಇಬ್ರಾಹಿಂ ವಿರುದ್ಧ ಕಿಡಿಕಾರಿದ್ದಾರೆ.

    ಸಿಎಂ ಇಬ್ರಾಹಿಂ ಹೇಳಿದ್ದೇನು?
    ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ 17 ಜನರದ್ದು ದೇವದಾಸಿಯವರ ಪರಿಸ್ಥಿತಿಯಂತಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ.ಸೋಮಶೇಖರ್, ರೇಣುಕಾಚಾರ್ಯ ಇವರೆಲ್ಲ ಬಸ್ ಸ್ಟಾಂಡ್ ಬಸವಿಯರು. ಇಂತವರ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ. ಮೂಲ ಬಿಜೆಪಿಗರು ಸಚಿವ ಸ್ಥಾನ ಕೇಳುತ್ತಿದ್ದಾರೆ. ಅವರು ಇಷ್ಟು ದಿನ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಪಟ್ಟದ ರಾಣಿಯನ್ನು ಬಿಟ್ಟು, ಕುಣಿಯೋ ರಾಣಿ ಹಿಂದೆ ಹೋದವರಿಗೆ ಬಿಜೆಪಿ ಸ್ಥಾನ ನೀಡುತ್ತಿದೆ. ಹಾಗಾಗಿ ಪಟ್ಟದ ರಾಣಿ ಇದ್ದವರು ನಮಗೂ ಸಚಿವ ಸ್ಥಾನ ಬೇಕೆಂದು ಹೇಳುತ್ತಿದ್ದಾರೆ. ಈ ಕಗ್ಗಂಟನ್ನು ಸಿಎಂ ಪರಿಹರಿಸಬೇಕಿದೆ ಎಂದಿದ್ದರು.

  • ನಾನು ಕಲ್ಲುಬಂಡೆ ಇದ್ದಂತೆ ಯಾವತ್ತು ಕರಗಲ್ಲ: ರೇಣುಕಾಚಾರ್ಯ

    ನಾನು ಕಲ್ಲುಬಂಡೆ ಇದ್ದಂತೆ ಯಾವತ್ತು ಕರಗಲ್ಲ: ರೇಣುಕಾಚಾರ್ಯ

    ದಾವಣಗೆರೆ: ನಾನು ಕಲ್ಲುಬಂಡೆ ಇದ್ದಂತೆ ನಾನ್ಯಾವತ್ತು ಕರಗಲ್ಲ. ಮಂತ್ರಿ ಸ್ಥಾನ ನೀರಿನ ಮೇಲೆ ಗುಳ್ಳೆ, ಈಗ ಎತ್ತಿನ ಬಂಡಿಯಲ್ಲಿ ಬಂದೆ. ಆ ಬಂಡಿ ಮುಂದೆ ಗೂಟದ ಕಾರು ಲೆಕ್ಕವೇ ಇಲ್ಲ ಎಂದು ದಾವಣಗೆರೆಯಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

    ಗೂಟದ ಕಾರು ಬೇಕು ಎನ್ನುವವರಿಗೆ ಮಂತ್ರಿ ಮಾಡಬೇಡಿ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ತಿರುಗೇಟು ನೀಡಿದ ರೇಣುಕಾಚಾರ್ಯ, ನಾನು ಸಚಿವ ಸ್ಥಾನ ಆಕಾಂಕ್ಷಿ ಎಂದು ಹೇಳಿದ್ದು ನಿಜ. ಆದರೆ ನನಗೆ ಗೂಟದ ಕಾರು ಲೆಕ್ಕಕ್ಕೇ ಇಲ್ಲ ಎಂದಿದ್ದಾರೆ.

    ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಅಧಿಕಾರ ಶಾಶ್ವತ ಅಲ್ಲ ಯಾರೇ ಟೀಕೆ ಮಾಡಿದರು ಪರವಾಗಿಲ್ಲ. ನಾನು ಬಂಡೆಯಿದ್ದಂತೆ ಕರಗಲ್ಲ. ಸಚಿವ ಸಂಪುಟ ವಿಚಾರದಲ್ಲಿ ಸಿಎಂಗೆ ಪರಾಮಾಧಿಕಾರವಿದೆ. ಅವರು ಹಾಗೂ ಕೇಂದ್ರದ ವರಿಷ್ಠರು ಸೇರಿ ಸಚಿವ ಸ್ಥಾನ ತೀರ್ಮಾನ ಮಾಡುತ್ತಾರೆ. ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ ಎಂದರು.

    ಬಸ್ ನಿಲ್ದಾಣದಲ್ಲಿನ ಮಹಿಳೆ ಇದ್ದಾಗೆ ಎಂದು ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ, ಸಿಎಂ ಇಬ್ರಾಹಿಂ ಅವರದ್ದು ಎಲುಬಿಲ್ಲದ ನಾಲಿಗೆ. ಆತ ಜೋಕರ್ ವಚನ ಹೇಳೋಕೆ ಅವರನ್ನು ಬಳಸಿಕೊಳ್ಳುತ್ತಾರೆ. ಸಿಎಂ ಇಬ್ರಾಹಿಂ ನೀಚ ಭದ್ರಾವತಿಯಲ್ಲಿ ಏನೇನೂ ಪ್ರಕರಣ ಮಾಡಿದ್ದಾರೆ ಎಲ್ಲ ಗೊತ್ತಿದೆ. ಇಡೀ ಭದ್ರಾವತಿಯನ್ನು ಕೋಮು ಗಲಭೆಗೆ ತಳ್ಳಿದವರು ಎಂದು ಆರೋಪಿಸಿದರು.

  • ಪೌರತ್ವ ಕಾಯ್ದೆ ವಿಚಾರದಲ್ಲಿ ಮೋದಿ, ಶಾ ಮನ ಪರಿವರ್ತನೆಯಾಗಬಹುದು- ಸಿಎಂ ಇಬ್ರಾಹಿಂ

    ಪೌರತ್ವ ಕಾಯ್ದೆ ವಿಚಾರದಲ್ಲಿ ಮೋದಿ, ಶಾ ಮನ ಪರಿವರ್ತನೆಯಾಗಬಹುದು- ಸಿಎಂ ಇಬ್ರಾಹಿಂ

    ದಾವಣಗೆರೆ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಮನಪರಿರ್ತನೆ ಆಗಬಹುದು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಆಶಾಭಾವ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯಲ್ಲಿ ಮಾತನಾಡಿದ ಅವರು, ಬಸವ ತತ್ವ ಆಧಾರದಲ್ಲೇ ಅಂಬೇಡ್ಕರ್ ಸಂವಿಧಾನ ಇದೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ತಮ್ಮ ನಿರ್ಧಾರ ಹಿಂಪಡೆಯುತ್ತಾರೆ ಎಂಬ ವಿಶ್ವಾಸ ಇದೆ. ಈ ಕುರಿತು ಸ್ವಾಮೀಜಿಗಳು, ನಾಗರೀಕರನ್ನು ಒಂದೆಡೆ ಸೇರಿಸಿ ಸರ್ವಧರ್ಮ ಸಮ್ಮೇಳನ ಮಾಡಿ ಚರ್ಚೆ ನಡೆಸಿ, ಮೋದಿ, ಅಮಿತ್ ಶಾ ಅವರಿಗೆ ಪ್ರಾರ್ಥನೆ ಮಾಡಲಿದ್ದೇವೆ. ಅವರು ಪರಿವರ್ತನೆಯಾಗಬಹುದು ಎಂಬ ವಿಶ್ವಾಸ ಇದೆ ಎಂದರು.

    ಹೊರಗಿನಿಂದ ಬಂದವರ ಮಾಹಿತಿಯನ್ನು ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆಯಲ್ಲಿ ಪಡೆಯಬಹುದು. ಆದರೆ ಇಲ್ಲೇ ಇದ್ದವರನ್ನು ಕೇಳುವುದು ಸರಿಯಲ್ಲ. ಅಲ್ಲದೆ ರಾಜ್ಯದಲ್ಲಿ ಈ ಸಮಸ್ಯೆ ಬರುವುದಿಲ್ಲ, ಇಲ್ಲಿ ಯಾರು ನುಸುಳುಕೋರರು ಇಲ್ಲ. ಈ ಬಗ್ಗೆ ಯೋಚನೆ ಬಿಟ್ಟು, ಅಡ್ವಾನಿ, ಯಶವಂತ ಸಿನ್ಹಾ, ಮನಮೋಹನ್ ಸಿಂಗ್ ಅವರಂತಹವರ ಬಳಿ ಸಲಹೆ ಪಡೆದು ಸರಿಯಾದ ರೀತಿಯಲ್ಲಿ ಆರ್ಥಿಕತೆ ನಡೆಸಿಕೊಂಡು ಹೋಗಿ ಎಂದು ತಿರುಗೇಟು ನೀಡಿದರು.

  • ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ: ಸಿಎಂ ಇಬ್ರಾಹಿಂ

    ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ: ಸಿಎಂ ಇಬ್ರಾಹಿಂ

    – ಮಂತ್ರಾಲಯಕ್ಕೆ ಜಾಗ ಕೊಟ್ಟಿದ್ದು ನವಾಬರು
    – ಶಾರದಾ ಪೀಠವನ್ನು ಮರಸ್ಥಾಪನೆ ಮಾಡಿದ್ದು ಟಿಪ್ಪು

    ವಿಜಯಪುರ: ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಮರಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮ ಸಂಪ್ರದಾಯದಲ್ಲಿ ಮೂರ್ತಿ ಪೂಜೆಯೂ ಇಲ್ಲ. ಈ ಹಿಂದೆ ಸರ್ಕಾರ ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಮುಸ್ಲಿಮರಲ್ಲಿ ಈ ಸಂಪ್ರದಾಯವೇ ಇಲ್ಲ ಎಂದು ಹೇಳಿದರು.

    ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ. ಟಿಪ್ಪು ಜನ್ಮದಿನ ಆಚರಣೆಯನ್ನು ಮುಸ್ಲಿಮರಿಗೆ ಬಿಟ್ಟು ಬಿಡಿ. ನಾವು ಟಿಪ್ಪು ಜಯಂತಿಯನ್ನು ಆಚರಣೆ ಮಾಡಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಟಿಪ್ಪು ಜಯಂತಿಯ ಆಚರಣೆಯನ್ನು ಮಾಡಲಾಯಿತು. ಆದರೆ ಈಗ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದು ಬೇಡ ಎಂದು ಹೇಳಿದೆ ಎಂದರು.

    ಟಿಪ್ಪು ಸುಲ್ತಾನ್ ಒಬ್ಬ ಹುತಾತ್ಮ ರಾಜ, ಮಹಾರಾಷ್ಟ್ರದ ಪೇಶ್ವೆಗಳು ಬಂದು ಶೃಂಗೇರಿಯ ಶಾರದಾ ಮಠವನ್ನು ನಾಶ ಮಾಡಿದಾಗ ಅದರ ವಿರುದ್ಧ ಹೋರಾಡಿ ಕಾರ್ಕಳದಲ್ಲಿ ಇದ್ದ ಸ್ವಾಮೀಜಿಯನ್ನು ವಾಪಾಸ್ ಕರೆದುಕೊಂಡು ಬಂದು ಮತ್ತೆ ಶಾರದಾ ಪೀಠವನ್ನು ಮರು ಸ್ಥಾಪನೆ ಮಾಡಿದರು. ಪತ್ರಿ ದಿನ ಆ ಜಾಗದಲ್ಲಿ ಟಿಪ್ಪು ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯದವರಿಗೆ ಅನ್ನ ದಾಸೋಹ ಮಾಡುತ್ತಿದ್ದರು. ಈ ಚರಿತ್ರೆ ಶೃಂಗೇರಿ ಮಠದಲ್ಲಿ ಇನ್ನೂ ಇದೆ ಎಂದು ಹೇಳಿದರು. ಇದನ್ನು ಓದಿ: ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ

    ಇದರ ಜೊತೆಗೆ ಗುರುರಾಘವೇಂದ್ರ ಸ್ವಾಮಿ ಅವರಿಗೆ ಮಂತ್ರಾಲಯ ಮಠ ಸ್ಥಾಪಿಸಲು ಜಾಗ ಕೊಟ್ಟಿದ್ದು, ಅದೋನಿ ನವಾಬರು. ಆ ಜಾಗವನ್ನು ಆ ಊರಿನ ಖಾಜಿ ಸಾಹೇಬರಿಗೆ ಕೊಟ್ಟಿದ್ದರು. ಆದರೆ ಅಂದು ನವಾಬರು ಗುರುರಾಘವೇಂದ್ರ ಸ್ವಾಮಿ ಅವರು ದೈವ ಮಾನವರು ಅವರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ ಎಂದು ಹೇಳಿ ಖಾಜಿ ಸಾಹೇಬರಿಗೆ ಕೊಟ್ಟಿದ್ದ ಭೂಮಿಯನ್ನು ವಾಪಾಸ್ ಪಡೆದುಕೊಂಡರು. ನಂತರ ಆ ಭೂಮಿಯನ್ನು ಗುರುರಾಘವೇಂದ್ರ ಸ್ವಾಮಿ ಅವರಿಗೆ ನೀಡಿದರು. ಇದರ ಚರಿತ್ರೆಯೂ ಕೂಡ ಮಂತ್ರಾಲಯದಲ್ಲಿದೆ. ಈ ಸಂಬಂಧ ಸಾವಿರಾರು ವರ್ಷದಿಂದ ನಡೆದುಕೊಂಡು ಬಂದಿದೆ. ಕೆಲವರು ಈಗ ಬಂದ ಹಾಳು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

  • ಸಿದ್ದರಾಮಯ್ಯರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಬೇಕು: ಶಾಸಕ ಭೀಮಾನಾಯ್ಕ್

    ಸಿದ್ದರಾಮಯ್ಯರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಬೇಕು: ಶಾಸಕ ಭೀಮಾನಾಯ್ಕ್

    – ಸಿದ್ದು ಪರ 50ಕ್ಕೂ ಹೆಚ್ಚು ಶಾಸಕರ ಬೆಂಬಲ

    ಬಳ್ಳಾರಿ: ವಿಪಕ್ಷ ಸ್ಥಾನ ಆಯ್ಕೆ ಸಂಬಂಧ ಭಾನುವಾರ ಕೆಪಿಸಿಸಿಯಲ್ಲಿ ಎಐಸಿಸಿ ವೀಕ್ಷಕರ ಸಭೆ ನಡೆಯಲಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಅವರು ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಬೇಕು ಎಂದು  ಒತ್ತಾಯ ಮಾಡಿದ್ದಾರೆ.

    ವಿಧಾನಸಭೆ, ವಿಧಾನ ಪರಿಷತ್, ಸಚೇತಕ ಸ್ಥಾನ ಆಯ್ಕೆ ಬಗ್ಗೆ ಭಾನುವಾರ ಮಧುಸೂದನ್ ಮಿಸ್ತ್ರಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈಗಾಗಲೇ 3-4 ಹೆಸರು ಸಿದ್ಧಪಡಿಸಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಇದೇ ವೇಳೆ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿರುವ ಶಾಸಕ ಭೀಮಾನಾಯ್ಕ್ ಅವರು ಸಿದ್ದರಾಮಯ್ಯ ಅವರ ಪರ ಒತ್ತಾಯ ಮಾಡಿದ್ದು, 50-60 ಜನ ಶಾಸಕರು ಸಿದ್ದರಾಮಯ್ಯ ಬೆಂಬಲಕ್ಕೆ ಇದ್ದಾರೆ ಎಂದು ಹೇಳಿದ್ದಾರೆ.

    ಇತ್ತ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ಜೋರಾಗಿದ್ದು, ಸಿದ್ದರಾಮಯ್ಯ ಬೆಂಬಲಿತ ಸುಮಾರು 20ಕ್ಕೂ ಹೆಚ್ಚು ಶಾಸಕರು ನಾಳೆ ಮಿಸ್ತ್ರಿ ಅವರನ್ನು ಭೇಟಿಯಾಗಿ, ಬ್ಯಾಟಿಂಗ್ ನಡೆಸಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಮೇಲ್ಮನೆ ಸದಸ್ಯ ಸಿ.ಎಂ ಇಬ್ರಾಹಿಂ ಕೂಡ ಸಿದ್ದರಾಮಯ್ಯರೇ ಪ್ರತಿಪಕ್ಷ ನಾಯಕರಾಗಬೇಕು ಎಂದಿದ್ದು, ಸೋನಿಯಾ ಜೊತೆಗೆ ಈಗಲೂ ಸಿದ್ದರಾಮಯ್ಯ ಚೆನ್ನಾಗೇ ಇದ್ದಾರೆ ಎಂದಿದ್ದಾರೆ.

    ಇದೇ ವೇಳೆ ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರವಾಗಿ ಮಾತನಾಡಿರುವ ಶಾಸಕ ಭೀಮಾನಾಯ್ಕ್ ಅವರು, ನಂಜುಡಪ್ಪ ವರದಿ ಪ್ರಕಾರ ಹಗರಿಬೊಮ್ಮನಹಳ್ಳಿ ತಾಲೂಕು ಹಿಂದುಳಿದ ತಾಲೂಕು ಆಗಿದೆ. ಹೊಸ ಜಿಲ್ಲೆ ಮಾಡುವುದಾದರೆ ಹಗರಿಬೊಮ್ಮನಹಳ್ಳಿ ತಾಲೂಕನ್ನ ಜಿಲ್ಲೆಯನ್ನಾಗಿ ಮಾಡಬೇಕು. ಹಗರಿಬೊಮ್ಮನಹಳ್ಳಿ ಭೌಗೋಳಿಕವಾಗಿ ಜಿಲ್ಲೆಯ ಮಧ್ಯಭಾಗದಲ್ಲಿದೆ. ಇನ್ನೊಂದು ಜಿಲ್ಲೆ ಸ್ಥಾಪನೆ ವಿಚಾರ ಸರ್ಕಾರದ ಮುಂದೆ ಇಲ್ಲವಾದರೆ ಅಖಂಡ ಬಳ್ಳಾರಿ ಜಿಲ್ಲೆಗೆ ನನ್ನ ಬೆಂಬಲವಿದೆ. ಹೊಸ ಜಿಲ್ಲೆ ಮಾಡುವುದಾದರೆ ಸಮಿತಿ ರಚನೆ ಮಾಡಿ. ಅದರ ಅನ್ವಯ ಜಿಲ್ಲೆಯ ಸ್ಥಾಪನೆಯಾಗಲಿ ಎಂದು ಸ್ಪಷ್ಟಪಡಿಸಿದರು.