Tag: CM ibrahim

  • ಲಾಕ್‍ಡೌನ್ ಮಾಡಿದ್ರೆ ಜನ ಸಾಯ್ತಾರೆ, ಸೆಕ್ಷನ್ 144 ತನ್ನಿ: ಸಿ.ಎಂ.ಇಬ್ರಾಹಿಂ

    ಲಾಕ್‍ಡೌನ್ ಮಾಡಿದ್ರೆ ಜನ ಸಾಯ್ತಾರೆ, ಸೆಕ್ಷನ್ 144 ತನ್ನಿ: ಸಿ.ಎಂ.ಇಬ್ರಾಹಿಂ

    – ಲಾಕ್‍ಡೌನ್ ಒಂದೇ ಪರಿಹಾರ ಅಲ್ಲ

    ಬೆಂಗಳೂರು: ಲಾಕ್‍ಡೌನ್ ಮಾಡಿದ್ರೆ ಜನರು ಸಾಯ್ತಾರೆ. ಅದರ ಬದಲಾಗಿ ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿಗೆ ತರಬೇಕು. ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರ ಅಲ್ಲ ಎಂದು ಕಾಂಗ್ರೆಸ್ ಎಂಎಲ್‍ಸಿ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

    ಸಿಎಂ, ಸಚಿವರು, ಬೆಂಗಳೂರಿನ ಶಾಸಕರ ಜೊತೆಗಿನ ಸಭೆ ಬಳಿಕ ಸಿಎಂ ಇಬ್ರಾಹಿಂ ಮಾಧ್ಯಮಗಳ ಜೊತೆ ಮಾತನಾಡಿದರು. ಸರ್ಕಾರ ಸಂಪೂರ್ಣವಾಗಿ ಗೊಂದಲದಲ್ಲಿದ್ದು, ಗಂಟು ಹಾಕಿ ಹೊಳೆಯಲ್ಲಿ ಬಿಟ್ಟಂತಾಗಿದೆ. ರಾಜ್ಯದಲ್ಲಿ ಬೆಡ್, ಆಕ್ಸಿಜನ್, ಇಂಜೆಕ್ಷನ್, ಲಸಿಕೆ ಮತ್ತು ಔಷಧಿಗಳ ಕೊರತೆ ಇದೆ. ಈ ಬಗ್ಗೆ ಸಭೆಯಲ್ಲಿ ಯಾವುದೇ ಸ್ಪಷ್ಟವಾದ ಉತ್ತರ ಸಿಗಲಿಲ್ಲ. ವ್ಯಾಕ್ಸಿನ್ ಪಡೆದವರಿಗೂ ಸೋಂಕು ತಗಲುತ್ತಿದೆ. ಹಾಗಾಗಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸರ್ಕಾರ ಜನರ ಗೊಂದಲವನ್ನ ಪರಿಹರಿಸಬೇಕೆಂದು ಸಿಎಂ ಇಬ್ರಾಹಿಂ ಒತ್ತಾಯಿಸಿದರು. ಇದನ್ನೂ ಓದಿ: ಮಸೀದಿಗಳನ್ನು ಸಂಪೂರ್ಣ ಬಂದ್ ಮಾಡಬೇಡಿ – ಮುಸ್ಲಿಂ ಶಾಸಕರ ಮನವಿ

    ಲಾಕ್‍ಡೌನ್ ಪರಿಹಾರ ಅಲ್ಲ: ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರ ಅಲ್ಲ. ಲಾಕ್‍ಡೌನ್ ಮಾಡುವ ಬದಲು ಸೆಕ್ಷನ್ 144 ಹಾಕಿ, ನಾಲ್ಕಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ ಎಂಬ ಕಠಿಣ ನಿಯಮ ಜಾರಿಯಾಗಬೇಕು. ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯಿಂದ ಸೋಂಕು ಹರಡಲ್ಲ ಅನ್ನೋದು ತಜ್ಞರ ಅಭಿಪ್ರಾಯ. ಈ ರೀತಿ ಎಲ್ಲ ತಜ್ಞರ ಅಭಿಪ್ರಾಯ ಕ್ರೋಢಿಕರಿಸಿ ಜನರಿಗೆ ಕುಟುಂಬಸ್ಥರಿಗೆ ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ರಸ್ತೆ ರಸ್ತೆಯಲ್ಲಿ ಹೆಣ ಕಾಣುವ ಸ್ಥಿತಿ ಬರುತ್ತೆ ಎಂದು ಇಬ್ರಾಹಿಂ ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂ ಆಸ್ಪತ್ರೆಯಲ್ಲಿದ್ದಾರೆ, ಬಿಜೆಪಿ ಸರ್ಕಾರ ಐಸಿಯುನಲ್ಲಿದೆ – ಸಿದ್ದರಾಮಯ್ಯ

    ಜನರಿಗೆ ಕೊರೊನಾ ಕುರಿತ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಹಾಗಾದಾಗ ಮಾತ್ರ ಬೆಡ್ ಗಳ ಸಮಸ್ಯೆ ನಿವಾರಣೆ ಆಗುತ್ತೆ. ಸರ್ಕಾರಕ್ಕೆ ಕೊರೊನಾ ನಿಯಂತ್ರಣಕ್ಕಾಗಿ ಸಲಹಗೆಳನ್ನ ನೀಡಿದ್ದೇವೆ. ಸರ್ಕಾರ ಶೀಘ್ರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.

  • ಕಾಂಗ್ರೆಸ್-ಜೆಡಿಎಸ್‍ನಲ್ಲಿ ಈಗ ಸಿ.ಎಂ.ಇಬ್ರಾಹಿಂ ಜಪ

    ಕಾಂಗ್ರೆಸ್-ಜೆಡಿಎಸ್‍ನಲ್ಲಿ ಈಗ ಸಿ.ಎಂ.ಇಬ್ರಾಹಿಂ ಜಪ

    ಬೆಂಗಳೂರು: ಕಾಂಗ್ರೆಸ್ ಅಂಗಳದಿಂದ ಒಂದು ಕಾಲು ಹೊರ ಇಟ್ಟಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈ ನಾಯಕರು ಮುಂದಾಗಿದ್ರೆ, ಇತ್ತ ಜೆಡಿಎಸ್ ಇಬ್ರಾಹಿಂ ಜೊತೆ ನಿರಂತರವಾಗಿ ಸಂಪರ್ಕದಲ್ಲಿದೆ. ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆ ಸಿ.ಎಂ.ಇಬ್ರಾಹಿಂ ಪ್ರಮುಖ ಪಾತ್ರ ವಹಿಸುವ ಹಿನ್ನೆಲೆ ಎರಡೂ ಪಕ್ಷಗಳು ಓಲೈಕೆಗೆ ಮುಂದಾಗಿವೆ.

    ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್‍ದೀಪ್ ಸುರ್ಜೇವಾಲಾ ಮೂಲಕ ಸಿ.ಎಂ.ಇಬ್ರಾಹಿಂ ಮನವೊಲೈಕೆ ಯತ್ನ ನಡೆದಿದೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರಂತರವಾಗಿ ಇಬ್ರಾಹಿಂ ಮನಪರಿವರ್ತನೆಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತ ಜೆಡಿಎಸ್ ಸಹ ಸಿ.ಎಂ.ಇಬ್ರಾಹಿಂ ಬರಮಾಡಿಕೊಳ್ಳಲು ಮುಂದಾಗಿದೆ. ಆದ್ರೆ ಇದುವರೆಗೂ ಸಿ.ಎಂ.ಇಬ್ರಾಹಿಂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

    ಯಾರಿಗೆ ಲಾಭ? ನಷ್ಟ?: ಇಬ್ರಾಹಿಂ ಕಾಂಗ್ರೆಸ್ ಬಿಟ್ಟರೆ ಅಲ್ಪಸಂಖ್ಯಾತ ನಾಯಕನನ್ನು ಕಳೆದುಕೊಂಡಂತಾಗುತ್ತದೆ. ಇಬ್ರಾಹಿಂ ಜೆಡಿಎಸ್ ಸೇರ್ಪಡೆಯಾದ್ರೆ ದಳಪತಿಗಳು ಬಳಗಕ್ಕೆ ದೊಡ್ಡಶಕ್ತಿ ಬರಲಿದ್ದು, ಜೆಡಿಎಸ್‍ಗೆ ಮತ್ತಷ್ಟು ಅಲ್ಪಸಂಖ್ಯಾತ ಮತಗಳು ಗಟ್ಟಿ ಆಗಲಿದೆ. ಜೆಡಿಎಸ್‍ನಲ್ಲಿ ಇಬ್ರಾಹಿಂಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುವ ಸಂಭವವಿದೆ. ಇಬ್ರಾಹಿಂ ಪಕ್ಷ ಬಿಟ್ರೆ ಅವರ ಬೆಂಬಲಿಗರೂ ಕಾಂಗ್ರೆಸ್‍ಗೆ ಗುಡ್‍ಬೈ ಹೇಳಬಹುದು.

  • ಜೆಡಿಎಸ್ ಸತ್ತಿದೆ, ಕುಮಾರಸ್ವಾಮಿ ಯಾವ ಸೀಮೆ ಲೀಡರ್ – ಜಮೀರ್ ಅಹ್ಮದ್

    ಜೆಡಿಎಸ್ ಸತ್ತಿದೆ, ಕುಮಾರಸ್ವಾಮಿ ಯಾವ ಸೀಮೆ ಲೀಡರ್ – ಜಮೀರ್ ಅಹ್ಮದ್

    – ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ
    – ಸಿಎಂ ಇಬ್ರಾಹಿಂ ವಿರುದ್ಧ ಕಿಡಿ

    ಬಾಗಲಕೋಟೆ: ಸಿದ್ದರಾಮಯ್ಯರಂತಹ ಲೀಡರ್‍ ನ ನಾನು ನೋಡಿಯೇ ಇಲ್ಲ, ಎಚ್.ಡಿ ಕುಮಾರಸ್ವಾಮಿ ಯಾವ ಸೀಮೆ ಲೀಡರ್ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ.

    ಖಾಸಗಿ ಕಾರ್ಯಕ್ರಮಕ್ಕಾಗಿ ಬಾದಾಮಿ ತಾಲೂಕಿನ ಕೆರೂರು ಪಟ್ಟಣಕ್ಕೆ ಆಗಮಿಸಿದ ಜಮೀರ್ ಅಹ್ಮದ್ ಆಗಮಿಸಿದ್ದರು. ಈ ವೇಳೆ ಉತ್ತರ ಕರ್ನಾಟಕ ಬಾಗಲಕೋಟೆಯಲ್ಲಿ ಜೆಡಿಎಸ್ ಸಂಘಟನಾ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷ ಎಲ್ಲಿದೆ? ಜೆಡಿಎಸ್ ಕೋಮುವಾದಿ ಪಕ್ಷದೊಂದಿಗೆ ಸೇರಿದೆ ಎಂದರು.

    ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಉಪಸಭಾಪತಿ ಆಯ್ಕೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡಿದೆ, ಸದ್ಯ ಜೆಡಿಎಸ್ ಪಕ್ಷದಿಂದ ಎಸ್ ಪದವನ್ನು ತೆಗೆಯಬೇಕು. ಇದು ಯಾವ ಜಾತ್ಯಾತೀತ ಪಕ್ಷ. ಜೆಡಿಎಸ್ ಪಕ್ಷ ಪ್ರಸ್ತುತ ಸತ್ತಿದೆ. 2006ರಲ್ಲಿ ಎಚ್‍ಡಿಕೆ ಸಿಎಂ ಆಗಿ ಒಳ್ಳೆಯ ಆಡಳಿತ ಕೊಟ್ಟಿದ್ದರು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸಿದ್ದರಾಮಯ್ಯ ಜೆಡಿಎಸ್‍ನಲ್ಲಿದ್ದಾಗ 59 ಸೀಟು ಬಂದಿತ್ತು. ಈಗ ಕುಮಾರಸ್ವಾಮಿ ಲೀಡರ್ ಎನ್ನುತ್ತಾರಲ್ಲ. ಈಗ ಆ ನಂಬರ್ ರೀಚ್ ಮಾಡುದಕ್ಕೆ ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಸೆಪ್ಟೆಂಬರ್ ಅಕ್ಟೋಬರ್‍ ನಲ್ಲಿ ಚುನಾವಣೆ ನಡೆಯುತ್ತದೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವಧಿ ಪೂರ್ಣಗೊಳಿಸುತ್ತದೆ. ಬಿಜೆಪಿಗೆ ಪೂರ್ಣ ಬಹುಮತವಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.

    ಇನ್ನು ಅಲ್ಪಸಂಖ್ಯಾತರ ಅನುದಾನ ಕಡಿತ ವಿಚಾರಕ್ಕೆ ಮಾತನಾಡಿದ ಜಮೀರ್, ಅಲ್ಪಸಂಖ್ಯಾತರ ಅನುದಾನ ನಮಗೆ ಕೊಟ್ಟಿದ್ದ ಅನುದಾನ ಕಡಿತ ಗೊಳಿಸಿದ್ದಾರೆ. ಅಲ್ಪಸಂಖ್ಯಾತರಿಗೆ 3150 ಕೋಟಿ ಇದ್ದ ಅನುದಾನವನ್ನು 600 ಕೋಟಿಗೆ ತಂದು ನಿಲ್ಲಿಸಿದ್ದಾರೆ. ಶಾದಿ ಭಾಗ್ಯ ನಿಲ್ಲಿಸಿದ್ದಾರೆ. ಏನೇ ಮಾಡಲಿ ಅವರ ಸರ್ಕಾರವಿದೆ. ಆದರೆ ಮಕ್ಕಳಿಗೆ ಕೊಡುತ್ತಿದ್ದ ಸ್ಕಾಲರ್ ಶಿಪ್ 198 ಕೋಟಿ ಇದ್ದಿದ್ದು 100 ಕೋಟಿ ಮಾಡಿದ್ದಾರೆ. ಇದರಿಂದ ಉಳಿದ 98 ಕೋಟಿ ಯಾರು ಕೊಡುತ್ತಾರೆ? ಓದುವ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

    ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಗೊಳ್ಳುವ ವಿಚಾರಕ್ಕೆ ಮಾತನಾಡಿದ ಜಮೀರ್, ಸಿಎಂ ಇಬ್ರಾಹಿಂ ಕಾಂಗ್ರೆಸ್‍ನ ಎಂಎಲ್‍ಸಿ ಆಗಿದ್ದಾರೆ. ಇನ್ನು ನಾಲ್ಕೂವರೆ ವರ್ಷ ಅವಧಿ ಇದೆ. ಹಾಗೇನಾದ್ರೂ ಕಾಂಗ್ರೆಸ್ ಬಿಡಬೇಕಿದ್ದರೆ ಎಂಎಲ್‍ಸಿ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು. ಚುನಾವಣೆಗಳಲ್ಲಿ ಸೋತಮೇಲೂ ಇಬ್ರಾಹಿಂ ಅವರನ್ನು ಕಾಂಗ್ರೆಸ್ ಪಕ್ಷದ ಚೇರ್ಮನ್ ಮಾಡಿದೆ. ಇದನ್ನು ಹೊರತು ಪಡಿಸಿ ಪಕ್ಷ ಇಬ್ರಾಹಿಂಗೆ ಮತ್ತೇನು ಮಾಡಬೇಕು? ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ ಏನು ಮಾಡಿಲ್ಲ ಎನುವುದಾದರೆ ಸಿದ್ದರಾಮಯ್ಯ ಸಿಎಂ ಇದ್ದಾಗ ಅಲ್ಪಸಂಖ್ಯಾತರಿಗೆ 120 ಕೋಟಿ ಇದ್ದ ಅನುದಾನವನ್ನು 3100 ಕೋಟಿಗೆ ಹೆಚ್ಚಿಸಿದ್ದರು. ಅಲ್ಪಸಂಖ್ಯಾತರ ಅನುದಾನ ಹೆಚ್ಚಿಸಿದಾಗ ಕಾಂಗ್ರೆಸ್‍ನಲ್ಲೇ ಇದ್ದ ಇಬ್ರಾಹಿಂ ಬಾಯಿಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ ಎಂದು ವ್ಯಂಗವಾಡಿದರು.

  • ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ: ಸಿಎಂ ಇಬ್ರಾಹಿಂ ಭವಿಷ್ಯ

    ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ: ಸಿಎಂ ಇಬ್ರಾಹಿಂ ಭವಿಷ್ಯ

    ರಾಯಚೂರು: ಮುಖ್ಯಮಂತ್ರಿ ಯಡಿಯೂರಪ್ಪನವರದ್ದು ಸಫಲತೆಗಿಂತ ವಿಫಲತೆನೆ ಜಾಸ್ತಿ. ಕ್ಯಾಬಿನೆಟ್ ಮಾಡುವುದರಲ್ಲೇ ಅವರ ಸಮಯ ಹೋಗುತ್ತಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ವಿಧಾನಸಭೆ ಚುನಾವಣೆ ಬಂದರೂ ನಾವು ಅಚ್ಚರಿ ಪಡಬೇಕಿಲ್ಲ ಅಂತ ಮಾಜಿ ಸಚಿವ ಸಿಎಂ ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ, ಈ ಹಿಂದೆ ಡಿಸೆಂಬರ್‍ನಲ್ಲಿ ರಾಜಕೀಯ ಕೋಲಾಹಲವಾಗುತ್ತೆ ಅಂತ ಹೇಳಿದ್ದೆ ಅದು ನಿಜವಾಗಿದೆ ಎಂದರು. ಕೂಡಲೇ ಚುನಾವಣೆ ಮಾಡಬೇಕು ಅನ್ನೋದು ಬಿಜೆಪಿ ವರಿಷ್ಠರಲ್ಲೂ ಚಿಂತನೆ ಶುರುವಾಗಿದೆ. ಯಡಿಯೂರಪ್ಪನವರು ಮಂತ್ರಿಮಂಡಲ ಪುನಃ ರಚನೆ ಮಾಡುತ್ತಿದ್ದರೂ ಎಲ್ಲವೂ ಸರಿಹೋಗಿಲ್ಲ ಎಂದರು.

    ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಆದ್ರೆ ಪಕ್ಷದಲ್ಲಿ ನಿರೀಕ್ಷಿತ ನ್ಯಾಯ ಸಿಕ್ಕಿಲ್ಲ. ಅಲ್ಲೂ ಅಸಮಧಾನ ಇದೆ. ಅಸಾದುದ್ದಿನ್ ಓವೈಸಿ ರಾಜ್ಯದಲ್ಲಿ ಎಂಐಎಂ ಶಾಖೆ ತೆರೆಯಲು ಹೊರಟಿದ್ದಾರೆ. ಅದು ರಾಜ್ಯದ ಹಿತಾಸಕ್ತಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಮುಸ್ಲಿಂ ಸಮಾಜದಲ್ಲಿ ಗೊಂದಲದ ವಾತಾವಣ ನಿರ್ಮಾಣವಾಗಿದೆ. ಅಗಸ್ಟ್ ನಲ್ಲಿ ನಮ್ಮ ಎಲ್ಲಾ ಮುಖಂಡರ ಸಭೆ ಕರೆದು ಮುಂದಿನ ನಡೆಯ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತ ತಿಳಿಸಿದರು.

    26 ಜನ ಮಂಗಳಮುಖಿಯರನ್ನ ಆರಿಸಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ಅವರು ಮೋದಿ ಜಪಮಾಡುತ್ತಿದ್ದಾರೆ ಒಂದು ರೂ. ದುಡ್ಡು ತರೋ ಶಕ್ತಿ ಇವರಲ್ಲಿಲ್ಲ. ಜಿಎಸ್ ಟಿಯಲ್ಲಿ 30 ಸಾವಿರ ಕೋಟಿ ರೂಪಾಯಿ ನಮಗೆ ಬರಬೇಕಿದೆ. ಹೆಚ್‍ಇಎಲ್, ಬಿಇಎಲ್ ಮಾರಾಟ ಮಾಡಲಿಕ್ಕೆ ಹೊರಟಿದ್ದಾರೆ. ನಾನು ವಿಮಾನಯಾನ ಸಚಿವನಾಗಿದ್ದಾಗ ಇಲಾಖೆ ಲಾಭದಲ್ಲಿತ್ತು. ನಾನು ಯಾರ ಜಾತಿ ನೋಡಲಿಲ್ಲಾ, ದೇಶಕ್ಕೆ ಒಳ್ಳೆಯದನ್ನ ಮಾಡುವವರನ್ನ ಕೆಲಸಕ್ಕೆ ನೇಮಿಸಿದ್ದೆ ಎಂದರು.

    ಇನ್ನೂ ಮಹಾರಾಷ್ಟ್ರ ಸಿಎಂ ಉದ್ಬವ್ ಠಾಕ್ರೆ ಮೊದಲು ಮುಂಬೈ ಉಳಿಸಿಕೊಳ್ಳಲಿ. ಅಲ್ಲಿ ಗುಜರಾತಿ ಹಾಗೂ ಮರಾಠಿಯವರಿಗೆ ಜಗಳ ನಡಿತಾಯಿದೆ. ಕಿತ್ತೂರು ಚೆನ್ನಮ್ಮನ ಊರು ಬೆಳಗಾವಿಯ ಚಿಂತೆ ಬಿಡಲಿ ಎಂದರು. ಮಹಾಜನ್ ವರದಿ ಪ್ರಕಾರ ಮೂಲ ಭೂ ಮಾಲೀಕರು ಇದ್ದದ್ದು ಮುಸ್ಲಿಮರು, ಮರಾಠಿಗರು ಅಲ್ಲಾ. ಉದ್ಬವ್ ಠಾಕ್ರೆ ಬೆಳಗಾವಿಯ ಚಿಂತೆ ಬಿಟ್ಟು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗಲಿ ಅಂತ ಸಿಎಂ ಇಬ್ರಾಹಿಂ ಹೇಳಿದರು.

  • ಗೋಹತ್ಯೆ ನಿಷೇಧಕ್ಕೆ ನಮ್ಮ ಬೆಂಬಲ ಇದೆ: ಸಿಎಂ ಇಬ್ರಾಹಿಂ

    ಗೋಹತ್ಯೆ ನಿಷೇಧಕ್ಕೆ ನಮ್ಮ ಬೆಂಬಲ ಇದೆ: ಸಿಎಂ ಇಬ್ರಾಹಿಂ

    – ಮುಸ್ಲಿಮರಲ್ಲಿ ಕೈ ಮುಗಿದು ಬೇಡ್ತೇನೆ ಗೋವು ತಿನ್ಬೇಡಿ

    ಹುಬ್ಬಳ್ಳಿ: ಗೋಹತ್ಯೆ ನಿಷೇಧಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಮುಸ್ಲಿಮರಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ ಗೋವು ಯಾರೂ ತಿನ್ನಬಾರದು ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.

    ನಗರದಲ್ಲಿಂದು ಮಾತನಾಡಿದ ಅವರು, ಗೋಹತ್ಯೆ ನಿಷೇಧಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಆದರೆ ಬಂಜೆಯಾದ ಗೋವು ನೋಡಿಕೊಳ್ಳುವವರು ಯಾರು? ಅದಕ್ಕಾಗಿ ಪ್ರತಿ ಪಂಚಾಯತಿಗೆ ಒಂದರಂತೆ ಗೋಶಾಲೆ ತೆರೆಯಬೇಕು. ವಯಸ್ಸಾದ ಜಾನುವಾರುಗಳನ್ನು ಸಾಕಲು ಗೋಶಾಲೆ ತೆರೆಯಬೇಕು. ಸರ್ಕಾರ ಗೋಸಾಕಾಣಿಕೆಯ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲದಿದ್ದರೆ ರೈತರು, ಚರ್ಮಕಾರಿಗಳು ಏನು ಮಾಡಬೇಕು? ಎಂದು ಪ್ರಶ್ನಿಸಿದರು.

    ಕೊಡವರು ಗೋಮಾಂಸ ಸೇವನೆ ಕುರಿತ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದು ನನಗೆ ಗೊತ್ತಿಲ್ಲ. ಯಾವುದೇ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ. ಅದರ ಬಗ್ಗೆ ನಾನು ಚರ್ಚೆ ಮಾಡೋದಿಲ್ಲ ಎಂದರು.

    ಲವ್ ಜಿಹಾದ್ ಕಾನೂನು ಕುರಿತು ಮಾತನಾಡಿದ ಅವರು, ಲವ್ ಜಿಹಾದ್ ಕಾನೂನು ತಂದು ಏನು ಮಾಡಲು ಸಾದ್ಯ? ಲವ್ ಜಿಹಾದ್ ಗಂಡ ಹೆಂಡತಿ ರಾಜಿ ಆದರೆ ಏನು ಮಾಡೋದಕ್ಕೆ ಆಗುತ್ತದೆ. ಒತ್ತಾಯಪೂರ್ವಕವಾಗಿ ಮಾಡಿದರೆ ಕ್ರಮ ಕೈಗೊಳ್ಳಬಹುದು ಎಂದರು.

    ಇದೇ ವೇಳೆ ಮೈತ್ರಿ ಸರ್ಕಾರ ಪತನದ ಬಗ್ಗೆ ಮಾತನಾಡಿದ ಇಬ್ರಾಹಿಂ, ಮೈತ್ರಿ ಸರ್ಕಾರ ಪತನಕ್ಕೆ ಯಾರು ಕಾರಣ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಅದರ ಬಗ್ಗೆ ನಾನು ಯಾಕೆ ವಿಶ್ಲೇಷಣೆ ಮಾಡಲಿ. ಮತ್ತೆ ಪುನರ್ ವಿವಾಹಕ್ಕೆ ಸಾಧ್ಯ ಇದೆಯಾ ಅನ್ನೋದನ್ನು ನಾವು ನೋಡುತ್ತಿದ್ದೇವೆ. ನಾವೇನಿದ್ದರೂ ಸೇರಿಸುವುದಕ್ಕೆ ನೋಡುವವರು, ಮುರಿಯುವವರಲ್ಲ ಎಂದರು.

  • ಹೆಚ್‍ಡಿಕೆ ಆಫರ್ – ಸಿದ್ದರಾಮಯ್ಯ ಟೇಸ್ಟ್ ಬದಲಾಗಿದೆ ಅಂದ್ರು ಇಬ್ರಾಹಿಂ

    ಹೆಚ್‍ಡಿಕೆ ಆಫರ್ – ಸಿದ್ದರಾಮಯ್ಯ ಟೇಸ್ಟ್ ಬದಲಾಗಿದೆ ಅಂದ್ರು ಇಬ್ರಾಹಿಂ

    ಬೆಂಗಳೂರು: ಆಪರೇಷನ್ ಕಾಂಗ್ರೆಸ್‍ಗೆ ಜೆಡಿಎಸ್ ಕೈ ಹಾಕಿದೆ. ಇತ್ತೀಚಿಗೆ ಕಾಂಗ್ರೆಸ್ ನಾಯಕರಿಂದ ಅಂತರ ಕಾಯ್ದುಕೊಂಡಿದ್ದ ಸಿಎಂ ಇಬ್ರಾಹಿಂ ಜೆಡಿಎಸ್ ಸೇರುವ ಸುಳಿವು ನೀಡಿದ್ದಾರೆ.

    ವಿಧಾನ ಪರಿಷತ್ ಸದಸ್ಯ, ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ನಿವಾಸಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಇಬ್ರಾಹಿಂ ನಿವಾಸಕ್ಕೆ ಮೂರು ಗಂಟೆ ಸುಮಾರಿಗೆ ಭೇಟಿ ಕೊಟ್ಟ ಹೆಚ್‍ಡಿಕೆ ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.

    ಹೆಚ್‍ಡಿಕೆ ಭೇಟಿ ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ಹಲವು ದಿನಗಳಿಂದ ನನ್ನನ್ನು ಭೇಟಿಯಾಗಬೇಕೆಂದು ಕುಮಾರಸ್ವಾಮಿ ಅಂದುಕೊಂಡಿದ್ದರು. ಹಾಗಾಗಿ ಇಂದು ನನ್ನ ನಿವಾಸಕ್ಕೆ ಬಂದಿದ್ದರು. ನಾನು ಯಾರನ್ನು ಬಿಟ್ಟಿಲ್ಲ. ಕೆಲವರು ನನ್ನನ್ನು ಬಿಟ್ಟು ಹೋಗಿದ್ದಾರೆ. ಬದಾಮಿಗೆ ಸಿದ್ದರಾಮಯ್ಯರನ್ನ ಕರೆದುಕೊಂಡು ಹೋಗಿದ್ದು. ಸಮಯಕ್ಕೆ ತಕ್ಕಂತೆ ಕೆಲವರ ಟೇಸ್ಟ್ ಬದಲಾಗುತ್ತೆ. ಅದೇ ರೀತಿ ಸಿದ್ದರಾಮಯ್ಯ ಅವರ ಟೇಸ್ಟ್ ಬದಲಾಗಿದೆ. ನನ್ನ ಟೇಸ್ಟ್ ಬದಲಾಗಿದ್ದು, ಅದೇ ರಾಜಕೀಯ ಸಿದ್ದಾಂತಗಳನ್ನು ಹೊಂದಿದ್ದೇನೆ. ಕೆಲವರು ನನ್ನ ಜತೆ ಅಂತರ ಕಾಯ್ದುಕೊಂಡಿದ್ದೇನೆ. ಜೆಡಿಎಸ್ ಸೇರುವ ಬಗ್ಗೆ ಡಿಸೆಂಬರ್ 15 ರ ನಂತರ ನಾನು ರಾಜ್ಯ ಪ್ರವಾಸ ಮಾಡಿ ತೀರ್ಮಾನ ಮಾಡ್ತೀನಿ. ಮುಂದೆ ಏನು ಮಾಡಬೇಕು ಎಂಬುದರ ಕುರಿತು ಎಲ್ಲರ ಜೊತೆ ಚರ್ಚಿಸಿ ದೇವೇಗೌಡರ ಜೊತೆ ಮಾತನಾಡುತ್ತೇನೆ ಎಂದರು.

    ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, 1994ರ ರೀತಿ ಅವರು ಮತ್ತೆ ಪಾತ್ರ ನಿರ್ವಹಿಸಿ ಅಂತ ಮನವಿ ಮಾಡಿದ್ದೇನೆ. ಸೂಕ್ತ ಸಂದರ್ಭದಲ್ಲಿ ಇಬ್ರಾಹಿಂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ

  • ದೇಶಕ್ಕೆ ಆರು ವರ್ಷಗಳ ಹಿಂದೆ ಕೋವಿಡ್ ಬಂದಿದೆ: ಸಿಎಂ ಇಬ್ರಾಹಿಂ

    ದೇಶಕ್ಕೆ ಆರು ವರ್ಷಗಳ ಹಿಂದೆ ಕೋವಿಡ್ ಬಂದಿದೆ: ಸಿಎಂ ಇಬ್ರಾಹಿಂ

    ಬೆಂಗಳೂರು: ದೇಶಕ್ಕೆ ಆರು ವರ್ಷಗಳ ಹಿಂದೆಯೇ ಕೋವಿಡ್ ಬಂದಿದೆ ಎಂದು ಮಾಜಿ ಶಾಸಕ ಸಿಎಂ ಇಬ್ರಾಹಿಂ ಅವರು ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

    ಇಂದು ಕಾಂಗ್ರೆಸ್ ಪಕ್ಷದಿಂದ ಆರಮನೆ ಮೈದಾನದಲ್ಲಿ ರಾಜ್ಯ ಕಾಂಗ್ರೆಸ್ ನೂತನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಪಕ್ಷದ ಹಾಲಿ, ಮಾಜಿ ಶಾಸಕರು, ಸಂಸದರು, ಪರಿಷತ್ ಸದಸ್ಯರು, ಲೋಕಸಭೆ, ವಿಧಾನಸಭೆ ಪರಾಜಿತ ಅಭ್ಯರ್ಥಿಗಳು ಪಕ್ಷದ ಜಿಲ್ಲಾಧ್ಯಕ್ಷರು, ಮುಂಚೂಣಿ ಘಟಕಗಳ ಮುಖಂಡರು ಭಾಗಿಯಾಗಿದ್ದಾರೆ. ಪಕ್ಷ ಸಂಘಟನೆ ಕುರಿತು ಸಭೆಯಲ್ಲಿ ಹಿರಿಯರು ಸಲಹೆ ಮತ್ತು ಸೂಚನೆ ನೀಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿಎಂ ಇಬ್ರಾಹಿಂ, ಕೋವಿಡ್ ಮನುಷ್ಯನಿಗೆ ಆರು ತಿಂಗಳ ಹಿಂದೆ ಬಂದಿದೆ. ಆದರೆ ದೇಶಕ್ಕೆ ಆರು ವರ್ಷಗಳ ಹಿಂದೆ ಕೋವಿಡ್ ಬಂದಿದೆ. ಡಿಕೆ ಶಿವಕುಮಾರ್ ಅವರನ್ನು ನಾನು ಅಂಭಿನಂದಿಸುತ್ತೇನೆ. ಕೊರೊನಾ ಸಂದರ್ಭದಲ್ಲಿ ತುಂಬಾ ಓಡಾಡಿ ಕೆಲಸ ಮಾಡುತ್ತಿದ್ದಾರೆ. ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಬಲ ಪಡಿಸಿದರೆ ನಿಜವಾಗಿಯೂ ನಾವು ಅಧಿಕಾರಕ್ಕೆ ಬರುತ್ತೇವೆ. ಡಿಸೆಂಬರ್ ನಲ್ಲಿ ರಾಜಕೀಯದಲ್ಲಿ ಬದಲಾವಣೆ ಆಗುತ್ತೆ ಎಂದು ಭವಿಷ್ಯ ನುಡಿದರು.

    ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾಳೆಯ ರೈತರ ಪ್ರತಿಭಟನೆ ಹಾಗೂ ಬಂದ್‍ಗೆ ಕಾಂಗ್ರೆಸ್ಸಿನ ಬೆಂಬಲ ಇದೆ. ದೇಶಾದ್ಯಂತ ಕಾಂಗ್ರೆಸ್ ಬೆಂಬಲಿಸಿದೆ. ರಾಜ್ಯದಲ್ಲಿ ನಾವು ಬೆಂಬಲಿಸುತ್ತೇವೆ ಎಂದು ತಿಳಿಸಿದರು.

    ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಕಾಂಗ್ರೆಸ್ಸಿನಲ್ಲಿ ಅತಿರಥ ಮಹಾರಥರು ಇದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹೌದು ನಿಜ ನಮ್ಮ ಕಾಂಗ್ರೆಸ್ಸಿನಲ್ಲಿ ಅತಿರಥ ಮಹಾರಾಥರು ಇದ್ದಾರೆ. ಇವರಿಗೆ ಕಣ್ಣು, ಕಿವಿ, ಹೃದಯ ಇದೆ. ಆದರೆ ಬಿಜೆಪಿಯವರಿಗೆ ಇವುಗಳು ಏನ್ ಇಲ್ಲ ಎಂದರು.

    ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್, ಮುನಿಯಪ್ಪ, ಡಿ.ಕೆ.ಸುರೇಶ್, ಹೆಚ್.ಕೆ.ಪಾಟೀಲ್ ಮತ್ತು ಎಸ್.ಆರ್. ಪಾಟೀಲ್ ಸೇರಿದಂತೆ ಹಿರಿಯರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

  • ನಾನು ಮಹಾಭಾರತದ ಜಯವಿಜಯ ಇದ್ದಂತೆ, ಕೆಲವು ಮೊದಲೇ ಗೊತ್ತಾಗುತ್ತೆ: ಸಿಎಂ ಇಬ್ರಾಹಿಂ

    ನಾನು ಮಹಾಭಾರತದ ಜಯವಿಜಯ ಇದ್ದಂತೆ, ಕೆಲವು ಮೊದಲೇ ಗೊತ್ತಾಗುತ್ತೆ: ಸಿಎಂ ಇಬ್ರಾಹಿಂ

    -ಶೃಂಗೇರಿ ಶ್ರೀಗಳಿಂದ ಟಿಪ್ಪು ಬಗ್ಗೆ ಕೇಳಿ ತಿಳಿಯಿರಿ
    -ವಿಶ್ವನಾಥ್ ಪುಸ್ತಕ ಬರೆದವರು, ಇತಿಹಾಸ ಅರಿತವರು
    -ಟಿಪ್ಪು ಪಠ್ಯ ಕೈ ಬಿಡಲು ಸುರೇಶ್ ಕುಮಾರ್ ಮೇಲೆ ಒತ್ತಡ

    ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದಿದ್ದು ಕೋಮು ಗಲಭೆ ಅಲ್ಲ ಎಂದು ನಾನು ಅವತ್ತೆ ಹೇಳಿದ್ದೆ. ಅಂದು ನಡೆದಿದ್ದು ಡ್ರಗ್ ಮಾಫಿಯಾ ಹಾಗೂ ಪೊಲೀಸರ ನಡುವಿನ ಹೊಡೆದಾಟ. ಅವನಿಗೆ ಡ್ರಗ್ಸ್ ಮಾರೋಕೆ ಬಿಡ್ತಾರೆ, ನನಗೆ ಬಿಡಲ್ಲ ಅಂತ ಗಲಾಟೆ ಶುರುವಾಯ್ತು ಇಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ. ನಾನು ಮಹಾಭಾರತದ ಜಯ ವಿಜಯ ಇದ್ದ ಹಾಗೆ. ಕೆಲ ವಿಷಯಗಳ ನನಗೆ ಮೊದಲೇ ಗೊತ್ತಾಗುತ್ತೆ, ಹೇಳಿದ್ರೆ ಯಾರು ನಂಬಲ್ಲ ಎಂದು ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಹೇಳಿದ್ರು.

    ಶೃಂಗೇರಿಯಲ್ಲಿ ಶಂಕರಾಚಾರ್ಯ ಮೂರ್ತಿ ಮೇಲೆ ಧ್ವಜ ಹಾಕಿದ ಪ್ರಕರಣದಲ್ಲಿ ಗೂಬೆ ಕೂರಿಸೋಕೆ ಹೋಗಿದ್ದರು. ನಂತರ ಕುಡಿದವನು ತರೋದು ನೋಡಿ ಸುಮ್ಮನಾದ್ರು. ಕಿಡಿಗೇಡಿಗಳು ಎಲ್ಲ ಸಮಾಜದಲ್ಲೂ ಇದ್ದಾರೆ. ಹಿಂದೂಗಳಲ್ಲೂ ಇದ್ದಾರೆ, ಮುಸ್ಲಿಮರಲ್ಲೂ ಇದ್ದಾರೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮಾಜವನ್ನ ದೂಷಿಸೋದು ಬೇಡ. ಯಾರ ಹೃದಯ ಚೆನ್ನಾಗಿದೆ ಅವರಿಗೆ ಟಿಪ್ಪು ಚೆನ್ನಾಗಿದ್ದಾನೆ. ಯಾರಿಗೆ ಜಾತಿ ವೈರಸ್ ಇದ್ಯೋ ಅವರಿಗೆ ಟಿಪ್ಪು ವಿರೋಧಿ. ಮಾಜಿ ಸಚಿವ ಹೆಚ್ ವಿಶ್ವನಾಥ್ ಮೈಸೂರಿನವರಾಗಿದ್ದು, ಪುಸ್ತಕ ಬರೆದವರು, ಇತಿಹಾಸ ಅರಿತವರು. ಅವರು ಯಾವ ಪಾರ್ಟಿಯಲ್ಲಿದ್ದಾರೆ ಬೇಕಿಲ್ಲ. ಈ ಹಿಂದೆ ಯಡಿಯೂರಪ್ಪ ಮತ್ತು ರಾಷ್ಟ್ರೊಪತಿಗಳು ಟಿಪ್ಪು ಗುಣಗಾನ ಮಾಡಿದ್ದರು ಎಂದರು.

    ಇಷ್ಟು ದಿನ ವೋಟ್ ಬ್ಯಾಂಕ್ ಅಂತ ಕಾಂಗ್ರೆಸ್ ನವರನ್ನ ದೂರುತ್ತಿದ್ದರು. ಇಲ್ಲಿಯವರೆಗೆ ಹಿಂದುತ್ವದ ಬಗ್ಗೆ ಮಾತನಾಡಿದ್ರು. ಶೃಂಗೇರಿ ಶ್ರೀಗಳ ಬಗ್ಗೆ ನಿಮಗೆ ನಂಬಿಕೆಯಿದೆಯಲ್ಲ .ಆ ಶ್ರೀಗಳ ಬಳಿಯೇ ಟಿಪ್ಪು ಬಗ್ಗೆ ಕೇಳಿ ಬಿಜೆಪಿಯವರು ತಿಳಿದುಕೊಳ್ಳಬೇಕಿದೆ. ನಂಜನಗೂಡು ದೇಗುಲಕ್ಕೆ ಟಿಪ್ಪು ಕೊಟ್ಟ ಪಚ್ಚೆವಜ್ರಕ್ಕೆ ಇವತ್ತಿಗೂ ಮಂಗಳಾರತಿ ನಡೆಯುತ್ತೆ. ನಂತರ ಶ್ರೀಕಂಠೇಶ್ವರನಿಗೆ ಪೂಜೆ ಆಗುತ್ತೆ. ಶೃಂಗೇರಿಯಲ್ಲಿ 1000 ಬ್ರಾಹ್ಮಣರ ಊಟಕ್ಕೆ ಟಿಪ್ಪು ಖಜಾನೆಯಿಂದ ಹಣ ಹೋಗ್ತಿತ್ತು. ಮಲಗಿದವರನ್ನ ಎಬ್ಬಿಸಬಹುದು. ಆದ್ರೆ ಕಣ್ಣು ಮುಚ್ಚಿ ಕುಳಿತವರನ್ನ ಎಬ್ಬಿಸೋದು ಕಷ್ಟ. ವಿಶ್ವನಾಥ್ ಅವರು ಸತ್ಯವನ್ನ ಹೊರಗೆ ಹಾಕಿದ್ದಾರೆ ಎಂದು ತಿಳಿಸಿದರು.

    ಹೆಚ್.ವಿಶ್ವನಾಥ್ ಸಚಿವರಾಗಬೇಕು ಅನ್ನೋದು ನನ್ನ ಆಸೆಯೂ ಹೌದು. ಸುಮ್ಮನೆ ಬಿಜೆಪಿ ಅಂತ ವಿರೋಧ ಮಾಡೋದಲ್ಲ. ಸಚಿವ ಸುರೇಶ್ ಕುಮಾರ್ ಅವರ ಬಗ್ಗೆ ನನಗೆ ಪ್ರೀತಿಯಿದೆ. ನಾನು ಪಕ್ಷಾತೀತ ರಾಜಕಾರಣ ಮಾಡುವವನು. ಪಠ್ಯದಿಂದ ಟಿಪ್ಪು ಕೈಬಿಡೋಕೆ ಸುರೇಶ್ ಕುಮಾರ್ ಮೇಲೆ ಒತ್ತಡವಿದೆ ಎಂದು ಆರೋಪಿಸಿದರು.

     

  • ಸಾಮೂಹಿಕ ವಿಶೇಷ ಪ್ರಾರ್ಥನೆಗೆ ಬಿಎಸ್‍ವೈಗೆ ಪತ್ರ ಬರೆದ ಶಾಸಕ ಹ್ಯಾರಿಸ್

    ಸಾಮೂಹಿಕ ವಿಶೇಷ ಪ್ರಾರ್ಥನೆಗೆ ಬಿಎಸ್‍ವೈಗೆ ಪತ್ರ ಬರೆದ ಶಾಸಕ ಹ್ಯಾರಿಸ್

    ಬೆಂಗಳೂರು: ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಬೆನ್ನಲ್ಲೇ ಶಾಸಕ ಎನ್.ಎ.ಹ್ಯಾರಿಸ್ ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

    ಸಿಎಂ ಇಬ್ರಾಹಿಂ ಅವರ ಪತ್ರಕ್ಕೆ ಕಾಂಗ್ರೆಸ್‍ನ ಮುಸ್ಲಿಂ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಿದ್ದರೂ ಶಾಸಕ ಹ್ಯಾರಿಸ್ ಅವರು ಸಾಮೂಹಿಕ ಪ್ರಾರ್ಥನೆಗೆ ಪತ್ರ ಬರೆದಿರುವುದು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕೊರೊನಾ ಮಧ್ಯೆ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಲೆಟರ್ ಫೈಟ್

    ಪತ್ರದಲ್ಲಿ ಏನಿದೆ?:
    ಮುಸ್ಲಿಂ ಬಾಂಧವರು ಚಂದ್ರ ದರ್ಶನ ನಂತರ ಮೇ 24 ಅಥವಾ 25ರಂದು ಈದುರ್ ಫಿತರ್/ ರಂಜಾನ್ ಹಬ್ಬವನ್ನು ಆಚರಿಸುತ್ತಿದ್ದಾರೆ. ರಂಜಾನ್ ಹಬ್ಬದ ದಿನದಂದು ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಮಾಡುತ್ತಾರೆ. ಹೀಗಾಗಿ ಈದ್ಗಾ ಮೈದಾನಗಳಲ್ಲಿ ಅಥವಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ನಮ್ಮ ಮುಸ್ಲಿಂ ಸಮುದಾಯವನ್ನು ನಿಂದಿಸುವುದು ಸೂಕ್ತವಲ್ಲ. ತಜ್ಞರು ಮತ್ತು ವೈದ್ಯರ ಸಲಹೆಯನ್ನು ಪಡೆದು ಪರಿಸ್ಥಿತಿ ಅನುಕೂಲಕರವಾಗಿದ್ದರೆ ಮಾತ್ರ ರಂಜಾನ್ ದಿನದಂದು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವ ಬಗ್ಗೆ ನಿರ್ಧರಿಸಬಹುದಾಗಿದೆ.

    ಸರ್ಕಾರದ ಆದೇಶದಂತೆ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಮಾಸದಲ್ಲಿ ಪ್ರತಿ ದಿನ ಕಡ್ಡಾಯ ನಮಾಜ್ ಅನ್ನು ಮಸೀದಿಯ ಬದಲು ಮನೆಯಲ್ಲೇ ಮಾಡುತ್ತಿದ್ದಾರೆ. ಅಲ್ಲದೆ ರಾಜ್ಯದ ಮುಸ್ಲಿಮರು ಸರ್ಕಾರದ ಈ ನಿರ್ಧಾರಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.