Tag: CM ibrahim

  • ಸಿಎಂ ಇಬ್ರಾಹಿಂ ಜೆಡಿಎಸ್‍ಗೆ ಬಂದರೆ ಉತ್ತಮ ಸ್ಥಾನ ನೀಡ್ತೇವೆ: ಎಚ್‍ಡಿಕೆ ಆಫರ್

    ಸಿಎಂ ಇಬ್ರಾಹಿಂ ಜೆಡಿಎಸ್‍ಗೆ ಬಂದರೆ ಉತ್ತಮ ಸ್ಥಾನ ನೀಡ್ತೇವೆ: ಎಚ್‍ಡಿಕೆ ಆಫರ್

    ಬೆಂಗಳೂರು: ಜೆಡಿಎಸ್ ಬಗ್ಗೆ ಸಿಎಂ ಇಬ್ರಾಹಿಂ ಅವರಿಗೆ ಪ್ರೀತಿ ವಿಶ್ವಾಸ ಇದೆ. ಅವರು ಜೆಡಿಎಸ್‍ಗೆ ಬಂದರೆ ಉತ್ತಮ ಸ್ಥಾನ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಜೊತೆ ಮಾತಾಡಿದ್ದೇನೆ. ಈ ಹಿಂದೆ ನಮ್ಮ ಪಕ್ಷದಲ್ಲಿ ಇದ್ದರು. ದೇವೇಗೌಡರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದರು. ನಾನು 3-4 ಬಾರಿ ಭೇಟಿ ಆಗಿದ್ದೆ. ಕಾಂಗ್ರೆಸ್‍ನಲ್ಲಿ ವಿಪಕ್ಷ ಸ್ಥಾನದ ಸಿಕ್ಕರೆ ಅಲ್ಲೆ ಇರಿ ಎಂದು ಹೇಳಿದ್ದೆ ಎಂದು ನೆನಪಿಸಿಕೊಂಡರು.

    ಈ ಬಗ್ಗೆ ಅನೇಕ ಬಾರಿ ಇಬ್ರಾಹಿಂ ಜೊತೆ ಮಾತಾಡಿದ್ದೇವೆ. ಅವರು ಜೆಡಿಎಸ್‍ಗೆ ಬಂದ್ರೆ ಸ್ವಾಗತ. ಈ ಬಗ್ಗೆ ಅವರು ನಿರ್ಧಾರ ಮಾಡಲಿ ಎಂದು ಜೆಡಿಎಸ್‍ಗೆ ಆಹ್ವಾನ ನೀಡಿದರು.

    ಮತ್ತೆ ಒಂದಾಗಲ್ಲ: ಜನತಾ ಪರಿವಾರ ಮತ್ತೆ ಒಗ್ಗೂಡಿಸಲು ಸಾಧ್ಯವಿಲ್ಲ. ಈಗ ಎಲ್ಲರೂ ಬೇರೆ ಬೇರೆ ಕಡೆ ಹೋಗಿದ್ದಾರೆ. ಹೊಸ ನಾಯಕತ್ವ ಬೆಳೆಸುವ ಶಕ್ತಿ ಕಾರ್ಯಕರ್ತರಲ್ಲಿ ಇದೆ. ಹೊಸ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಮನೆ ಬಾಗಿಲಿಗೆ ಹೋಗಲ್ಲ: ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳ ಮನೆ ಬಾಗಿಲಿಗೆ ಹೋಗಲು ಜೆಡಿಎಸ್ ಸಿದ್ಧವಿಲ್ಲ. ಈಗಲೂ ಹೋಗಿಲ್ಲ ಮುಂದೆಯೂ ಹೋಗಲ್ಲ. ಅತಂತ್ರ ಸ್ಥಿತಿ ಬಂದಾಗಲೂ ನಾವು ಯಾರ ಮನೆ ಬಾಗಿಲಿಗೂ ಹೋಗಿಲ್ಲ. 123 ಸ್ಥಾನ ಗೆಲ್ಲಲು ನಾನು ಸಂಘಟನೆ ಹಾಗೂ ಶ್ರಮ ವಹಿಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

    ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ಅಂತಂತ್ರ ಆದಾಗ ಸ್ವತಂತ್ರ ರಾಗ್ತಾರೆ ಎಂದಿದ್ದಾರೆ. ನಾವೆಂದೂ ಅತಂತ್ರರಾಗಿಲ್ಲ. ಅವರು ಅಂತಂತ್ರರಾದಾಗ ಜೆಡಿಎಸ್ ಬಾಗಿಲು ಬಡಿದಿದ್ದಾರೆ. ಗೊಂದಲ ಸೃಷ್ಟಿ ಮಾಡುವುದಕ್ಕೆ ನಾವು ಅವಕಾಶ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಮುಗಿದ ಅಧ್ಯಾಯ – ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ

    ಬಿಜೆಪಿ ನಾಯಕರಲ್ಲೇ ಕಡಿವಾಣ ಹಾಕುವ ಸ್ಥಿತಿ ಇಲ್ಲ. ಅವರನ್ನೇ ಹದ್ದು ಬಸ್ತಲ್ಲಿ ಇಟ್ಟುಕೊಳ್ಳಲು ಬಿಜೆಪಿಗೆ ಆಗಿಲ್ಲ. ಅವರ ಪಕ್ಷದ ಉಳಿವಿಗಾಗಿ ಏನು ಮಾಡುತ್ತಿದ್ದಾರೋ ಹಾಗೇ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.

  • ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

    ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

    ಕಲಬುರಗಿ: ಯಾರು ಕಾಂಗ್ರೆಸ್ ಬಿಟ್ಟು ಹೋಗುತ್ತಾರೆ ಅವರಿಗೆ ಬೂಸ್ಟರ್ ಡೋಸ್ ಬೇಕಾಗಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್‍ಗೆ ಕೊರೊನಾ ಬಂದಿದೆ ಎಂಬ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲ ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸಿಗೆ ಹಿನ್ನಡೆ ಅನ್ನುವ ಭ್ರಮೆಯಿದೆ. ಆದರೆ ಅವರಿಗೆ ಬೂಸ್ಟರ್ ಡೋಸ್ ನೀಡಬೇಕಾಗಿದೆ. ಬಿಜೆಪಿ ವೈರಸ್‍ಗೆ ಕಾಂಗ್ರೆಸ್ ಮಾತ್ರ ವ್ಯಾಕ್ಸಿನ್ ಇದ್ದಂತೆ ಎಂದರು. ಇದನ್ನೂ ಓದಿ:  ಮುಗಿದ ಅಧ್ಯಾಯ – ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ

    ಯಾರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಅವರಿಗೆ ಬೂಸ್ಟರ್ ಡೋಸ್ ಬೇಕಾಗಿದೆ. ಕಾಂಗ್ರೆಸ್ ಪಕ್ಷವೇ ಎಲ್ಲರಿಗೂ ಎಲ್ಲದಕ್ಕೂ ವ್ಯಾಕ್ಸಿನ್ ಇದ್ದ ಹಾಗೇ. ಬಡವರಿಗೆ ದೀನ ದಲಿತರಿಗೆ ಎಲ್ಲರಿಗೂ ಕಾಂಗ್ರೆಸ್ ಬೇಕಾಗಿದೆ. ನಮ್ಮ ಪಕ್ಷಕ್ಕೆ ಯಾವುದೇ ಡೋಸ್ ಬೇಕಾಗಿಲ್ಲ ಎಂದು ಸಿಡಿದರು.

    ವಿಧಾನ ಪರಿಷತ್‍ನ ವಿಪಕ್ಷ ನಾಯಕ ಸ್ಥಾನ ಕೈತಪ್ಪಿದ ಹಿನ್ನೆಲೆ ಸಿಎಂ ಇಬ್ರಾಹಿಂ ಕಾಂಗ್ರೆಸ್‍ಗೆ ಗುಡ್ ಬೈ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ನಿರ್ಧಾರ ನೋಡಿ ನನಗೆ ಸಂತೋಷ ಆಯಿತು. ಇದರಿಂದ ಶಿವಕುಮಾರ್ ಹಾಗೂ ಹರಿಪ್ರಸಾದ್ ಅವರಿಗೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಅವರಿಬ್ಬರ ವಿಚಾರಧಾರೆ ಒಂದೇ ಆಗಿರುವುದರಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ಅಶ್ಲೀಲ ಫೋಟೋ ವಾಟ್ಸಪ್ ಗ್ರೂಪ್‍ಗೆ ಹಾಕಿ ಪೇಚೆಗೆ ಸಿಲುಕಿದ ಬಿಜೆಪಿ ಮುಖಂಡ

    ಚಾಮುಂಡೇಶ್ವರಿ ಸೋಲುತ್ತಾರೆ ಎಂದು ಬಾದಾಮಿಗೆ ಕರೆದೊಯ್ದಿದ್ದೇನೆ. ಅದಕ್ಕೆ ಅವರು ಒಳ್ಳೆ ಉಡುಗೊರೆ ಕೊಟ್ಟಿದ್ದಾರೆ. ಪಾದಯಾತ್ರೆಯಿಂದ ಕಾಂಗ್ರೆಸ್‍ಗೆ ಕೋವಿಡ್ ಸೋಂಕು ಬಂದಿದೆ. ಯಾವ ಡೋಸ್‍ನಿಂದಲೂ ಸೋಂಕು ಇಳಿತಿಲ್ಲ. ನಾನು ಕೊಡುವ ಡೋಸ್‍ನಿಂದ ಸೋಂಕು ಇಳಿಯುತ್ತಾ ನೋಡೋಣ ಎಂದು ಕಿಡಿಕಾರಿದ್ದರು.

  • ಮುಗಿದ ಅಧ್ಯಾಯ – ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ

    ಮುಗಿದ ಅಧ್ಯಾಯ – ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ

    ಬೆಂಗಳೂರು: ವಿಧಾನ ಪರಿಷತ್‍ನ ವಿಪಕ್ಷ ನಾಯಕ ಸ್ಥಾನ ಕೈತಪ್ಪಿದ ಹಿನ್ನೆಲೆ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ನಿರ್ಧಾರ ನೋಡಿ ನನಗೆ ಸಂತೋಷ ಆಯಿತು. ಇದರಿಂದ ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಅವರಿಬ್ಬರ ವಿಚಾರಧಾರೆ ಒಂದೇ ಆಗಿರುವುದರಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ವ್ಯಂಗ್ಯವಾಡಿದರು.

    ಆದಷ್ಟು ಶೀಘ್ರವೇ ಎಂಎಲ್‍ಸಿಗೆ ರಾಜೀನಾಮೆ ಕೊಡುತ್ತೇನೆ. ಈ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

    ಶಿವಕುಮಾರ್‌ಗೂ ನಮಗೂ ಯಾವತ್ತು ಹೊಂದಾಣಿಕೆ ಆಗಲ್ಲ. ಅವರ ವಿಚಾರಧಾರೆಗಳು ನಮಗೆ ಆಗಲ್ಲ. ನಮಗೆ ಸಿದ್ದರಾಮಯ್ಯ ಜೊತೆ ಹೊಂದಾಣಿಕೆ ಇತ್ತು. ಆದರೆ ಕಾಂಗ್ರೆಸ್‍ಗೂ ನನಗೂ ಮುಗಿದ ಅಧ್ಯಾಯವಾಗಿದೆ. ಸಿದ್ದರಾಮಯ್ಯ ಅವರಿಂದ ನಾನು ಕಾಂಗ್ರೆಸ್‍ಗೆ ಹೋಗಿದ್ದೆ. ಸೋನಿಯಾ ಗಾಂಧಿ ಅವರು ನನ್ನ ಭಾರ ಇಳಿಸಿದ್ದಾರೆ. ನನ್ನ ಹಿತೈಷಿಗಳ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಮೂಲ ಕಾಂಗ್ರೆಸ್ಸಿಗರ ಟಕ್ಕರ್‌

    ಸಿದ್ದರಾಮಯ್ಯಗಾಗಿ ಜೈಲಿಗೆ ಹೋಗಿ ಕಟ್ಟಿದ ಪಕ್ಷ ದಳ ಹಾಗೂ ದೇವೇಗೌಡರನ್ನು ಬಿಟ್ಟೆ. ನನ್ನ ನಿರ್ಣಯವನ್ನು ಶೀಘ್ರವಾಗಿ ನಿರ್ಧರಿಸುತ್ತೇನೆ. ಈ ಬಗ್ಗೆ ಕಾಂಗ್ರೆಸ್‍ಗೆ ಉತ್ತರ ಕೊಡಬೇಕು. ಸಿದ್ದರಾಮಯ್ಯ ಅವರನ್ನು ಬಾದಾಮಿಗೆ ಕರೆದೊಯ್ದಿದ್ದೆ. ಅವರಿಗೆ ರಾಜಕೀಯ ಜೀವನ ಕೊಡಲು ಅವರ ಕಾಲಿಗೆ ಬೀಳುತ್ತೇನೆ ಎಂದರು. ಇದನ್ನೂ ಓದಿ: ಕೈನಿಂದಲೇ ಉತ್ತರಾಖಂಡ್ ಮಾಜಿ ಕಾಂಗ್ರೆಸ್‌ ಮುಖ್ಯಸ್ಥನ ಉಚ್ಛಾಟನೆ

    ಚಾಮುಂಡೇಶ್ವರಿ ಸೋಲುತ್ತಾರೆ ಎಂದು ಬಾದಾಮಿಗೆ ಕರೆದೊಯ್ದಿದ್ದೇನೆ. ಅದಕ್ಕೆ ಅವರು ಒಳ್ಳೆ ಉಡುಗೊರೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ನಾಮಿನೇಷನ್ ಮಾಡಿದ ಫೋಟೋ ತೋರಿಸಿದ ಇಬ್ರಾಹಿಂ ಪಾದಯಾತ್ರೆಯಲ್ಲಿ ಕಾಂಗ್ರೆಸ್‍ಗೆ ಬಂದ ಕೋವಿಡ್‍ಗೆ ಯಾವ ಡೋಸ್‍ನಿಂದಲೂ ಸೋಂಕು ಇಳಿತಿಲ್ಲ. ನಾನು ಕೊಡುವ ಡೋಸ್‍ನಿಂದ ಸೋಂಕು ಇಳಿಯುತ್ತಾ ನೋಡೋಣ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಶ್ಲೀಲ ಫೋಟೋ ವಾಟ್ಸಪ್ ಗ್ರೂಪ್‍ಗೆ ಹಾಕಿ ಪೇಚೆಗೆ ಸಿಲುಕಿದ ಬಿಜೆಪಿ ಮುಖಂಡ

  • ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ

    ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ

    ಬೆಳಗಾವಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಸರ್ಕಾರ ಜಾರಿಗೆ ತರಲಿ. ಹೊರಗಿಂದ ಬಂದು ಪಕ್ಷ ಸೇರಿದವರು ಆರು ತಿಂಗಳು ಮಂತ್ರಿಗಳಾಗುವಂತಿಲ್ಲ ಅಂತ ಕಾನೂನು ತರಲಿ ಎಂದು ಕಾಂಗ್ರೆಸ್ ಎಂಎಲ್‍ಸಿ ಸಿಎಂ ಇಬ್ರಾಹಿಂ ಸರ್ಕಾರಕ್ಕೆ ಸವಾಲೊಡ್ಡಿದ್ದಾರೆ.

    ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾನೂನಿಗೆ ವಿರೋಧ ಇದೆ. ಪರಿಷತ್ ನಲ್ಲಿ ಮಸೂದೆ ಮಂಡಿಸಿದರೆ ಬೇಡ ಎಂದು ವಿರೋಧಿಸುತ್ತೇವೆ. ಬಿಜೆಪಿಯವರು ದಾರಿ ತಪ್ಪಿದ ಮಕ್ಕಳು. ಅವರಿಗೆ ಏನೂ ಹೇಳುವುದಕ್ಕೆ ಆಗುವುದಿಲ್ಲ. ಬೊಮ್ಮಾಯಿ ಅವರು ಹೇಗೋ ಹೋಗುತ್ತಿದ್ದಾರೆ. ಅವರು ಹೋಗುವ ಮುನ್ನ ಒಳ್ಳೆ ಕೆಲಸ ಮಾಡಿ ಹೋಗಲಿ ಎಂದು ವ್ಯಂಗ್ಯವಾಡಿದ್ದಾರೆ.

    ಮತಾಂತರ ತಡೆ ಮಸೂದೆ ತರುವ ಮುನ್ನ ವಿದೇಶಿ ಕನ್ನಡಿಗರ ಬಗ್ಗೆಯೂ ಸರ್ಕಾರ ಯೋಚಿಸಲಿ. ಇಲ್ಲಿ ಆ ಕಾಯ್ದೆ ತಂದರೆ ವಿದೇಶಗಳಲ್ಲಿ ಕನ್ನಡಿಗರು ನೆಮ್ಮದಿಯಾಗಿ ಇರಲು ಸಾಧ್ಯವೇ? ಜೊತೆಗೆ ಈ ಕಾನೂನು ಕ್ರಿಶ್ಚಿಯನ್ ಸಮುದಾಯ ಗುರಿಯಾಗಿಸಿಕೊಂಡು ತರುತ್ತಿದ್ದಾರೆ. ಬಿಜೆಪಿಯವರು ತಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗಳಲ್ಲಿ ಓದಿಸುತ್ತಾರೆ. ಅವರ ವಿರುದ್ಧವೇ ಕಾನೂನು ತರುತ್ತಿರುವುದು ಸರೀನಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ

    ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ. ಹೊರಗಿಂದ ಬಂದು ಪಕ್ಷ ಸೇರಿದವರು ಆರು ತಿಂಗಳು ಮಂತ್ರಿಗಳಾಗುವಂತಿಲ್ಲ ಅಂತ ಕಾನೂನು ತರಲಿ. ಆರು ಜನ ಮಂತ್ರಿಗಳು ವೀಡಿಯೋ ಪ್ರಸಾರಕ್ಕೆ ಸ್ಟೇ ತಂದಿದ್ದಾರೆ. ಮೊದಲು ಆ ಸ್ಟೇ ತೆರವು ಮಾಡಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಲಸಿಗರಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನಿಲ್ಲದ ಪುಂಡಾಟ – ಕನ್ನಡಿಗರ ಮೇಲೆ ಹಲ್ಲೆಗೈದು ನಿಂದಿಸಿದ ಶಿವಸೇನೆ ಕಾರ್ಯಕರ್ತರು!

  • ಸಿಎಂ ಭಾವುಕ ಭಾಷಣಕ್ಕೆ ಸಿ.ಎಂ ಇಬ್ರಾಹಿಂ ಲೇವಡಿ

    ಸಿಎಂ ಭಾವುಕ ಭಾಷಣಕ್ಕೆ ಸಿ.ಎಂ ಇಬ್ರಾಹಿಂ ಲೇವಡಿ

    ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಭಾವುಕ ಭಾಷಣ ಮಾಡಿದ್ದು, ಈ ಕುರಿತು ಇಂದು ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

    ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂಗೆ ಅಧಿಕಾರದಿಂದ ಕೆಳಗಿಳಿಯುವ ಮುನ್ಸೂಚನೆ ಸಿಕ್ಕಿದೆ. ಅದಕ್ಕೇ ನಿನ್ನೆ ಹಾಗೆ ಮಾತಾಡಿದ್ದಾರೆ. ಅಧಿಕಾರ ಶಾಶ್ವತ ಅಲ್ಲ ಎಂದು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಈ ಬದುಕು ಶಾಶ್ವತವಲ್ಲ, ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ: ಸಿಎಂ ವೈರಾಗ್ಯದ ಮಾತು

    ಮುಂದೆ ಜಾಗ ಖಾಲಿ ಮಾಡುವ ಸೂಚನೆ ಸಿಕ್ಕಿದೆ. ಅಧಿಕಾರ ಶಾಶ್ವತವಲ್ಲ ಅಂತ ಹೇಳ್ತಾರೆ. ಜೀವನವೇ ಶಾಶ್ವತವಲ್ಲ, ಕುರ್ಚಿ ಯಾವಾಗ ಶಾಶ್ವತ ಹೇಳಿ. ಅದನ್ನ ನೋಡಿ ಬಸವ ಕೃಪದವರು ಬಸವಕೃಪದಲ್ಲೇ ಇರಿ. ಕೇಶವ ಕೃಪ ನಂಬಿಹೋದ್ರೆ ಅಲ್ಲೂ ಇಲ್ಲ, ಇಲ್ಲೂ ಇಲ್ಲ. ನಾ ಘರ್ ಕಾ, ನಾ ಘಾಟ್ ಕಾ… ಬಸ್ ಸ್ಟಾಂಡ್ ಕಾ ಆಗುತ್ತೆ ಎಂದು ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.

    ಇದೇ ವೇಳೆ ಎಂಇಎಸ್ ಪುಂಡಾಟಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಿಗೆ ಎಂಇಎಸ್ ಬಗ್ಗೆ ಮಾತನ್ನಾಡಲು ಧಮ್ ಇಲ್ಲ. ವಾಟಾಳ್ ನಾಗರಾಜ್ ಗೆ ಇರುವ ಧೈರ್ಯ ಇಲ್ಲಿನ ನಾಯಕರಿಗ ಇಲ್ಲ ಎಂದು ವಾಗ್ದಾಳಿ ನಡೆಸಿದರು.

  • ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು

    ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು

    – ನನಗೀಗ ಪರಿಷತ್ ನಲ್ಲಿ ಯೌವ್ವನ ತುಂಬಿದೆ

    ಬೆಂಗಳೂರು: ಮದುವೆಯಾಗೋರು ಲವ್ ಇಲ್ದೇನೇ ಮದುವೆ ಆಗ್ತಾರಾ? ಎಂದು ಸಿ.ಎಂ.ಇಬ್ರಾಹಿಂ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

    ಮತಾಂತರ ನಿಷೇಧ ಮಸೂದೆಯಲ್ಲಿ ಲವ್ ಜಿಹಾದ್ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದ್ರೀ ಲವ್, ಯಾವುದ್ರೀ ಜಿಹಾದ್? ಮದುವೆಯಾಗೋರು ಲವ್ ಇಲ್ದೇನೇ ಮದುವೆ ಆಗ್ತಾರಾ? ಲವ್ ಇರೋದ್ರಿಂದಾನೇ ಮದುವೆ ಆಗೋದು. ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದ್ರು, ನಾವೇನಾದ್ರೂ ಮಾತಾಡಿದ್ವಾ: ಸಿ.ಎಂ ಇಬ್ರಾಹಿಂ

    ಗೂಳಿಹಟ್ಟಿ ಶೇಖರ್ ತಾಯಿ ಮತಾಂತರ ಆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂತಹ ಕೇಸ್ ಇದ್ರೆ ಕ್ರಮ ತಗೊಳ್ಳಲಿ. ಅವರ ತಾಯಿ ದೂರು ಕೊಟ್ರೆ ತನಿಖೆ ಮಾಡಲಿ. ಯಾರು ಬೇಡ ಅಂತಾರೆ? ದೇಶದಲ್ಲಿ ಸಾಕಷ್ಟು ಸಮಸ್ಯೆ ಇದೆ. ಊಟದ ಸಮಸ್ಯೆ, ಕೋವಿಡ್ ಸಮಸ್ಯೆ ಇದೆ. ಹುಚ್ಮುಂಡೆ ಮದುವೇಲಿ ವಾಲಗದೋರು ಬಡಿದಿದ್ರು ಅನ್ನೋ ಹಾಗಾಯ್ತು ಈ ಬಿಜೆಪಿ ಸರ್ಕಾರ ಹೇಳುವುದು. ತಿನ್ನೋಕ್ಕೆ ಅನ್ನ ಇಲ್ಲ, ನಿರುದ್ಯೋಗ ಸಮಸ್ಯೆ ಇದೆ, ರೈತರ ಸಮಸ್ಯೆ ಇದೆ. ಈ ಕುರಿತು ಸರ್ಕಾರ ಮಾತಾಡಬೇಕು. ಮತಾಂತರ ಸರ್ಕಾರದ ಸಮಸ್ಯೆ ಅಲ್ಲ ಎಂದು ಕಿಡಿಕಾರಿದರು.

    BJP - CONGRESS

    ಈ ರೀತಿಯ ಸಮಸ್ಯೆಯನ್ನು ನೋಡಿಕೊಳ್ಳಲು ಧರ್ಮಗಳು, ಧರ್ಮಗುರುಗಳು ಇದ್ದಾರೆ. ಇದನ್ನೆಲ್ಲ ಅವರು ನೋಡಿಕೊಳ್ತಾರೆ. ಯಾರ್ಯಾರಿಗೆ ಇಚ್ಚೆ ಇದೆಯೋ ಮತಾಂತರ ಆಗ್ತಾರೆ. ಬಲವಂತ ಇದ್ದರೆ ಪೊಲೀಸರು ಕ್ರಮ ತೆಗೆದುಕೊಳ್ಳಲಿ ಎಂದರು.

    ಪರಿಷತ್ ವಿಪಕ್ಷ ಸ್ಥಾನಕ್ಕೆ ಬೇಡಿಕೆ ವಿಚಾರವಾಗಿ ಮಾತನಾಡಿದ ಅವರು, ಯೌವ್ವನದಲ್ಲಿ ಮದುವೆಯಾಗಲ್ಲ ಅಂತ ಹೇಳೋರು ಯಾರಿದ್ದಾರೆ ಹೇಳಿ? ನನಗೀಗ ಪರಿಷತ್ ನಲ್ಲಿ ಯೌವ್ವನ ತುಂಬಿದೆ. ನೋಡೋಣ, ಅದರ ಬಗ್ಗೆ ಪಕ್ಷದ ನಿರ್ಧಾರಕ್ಕೆ ಬಿಟ್ಟಿದೀನಿ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೋ ನೋಡೋಣ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಬಳಿ ಈ ವಿಚಾರ ಮಾತಾಡಿದ್ದೀನಿ. ನಿನ್ನೆ ದೆಹಲಿಯಿಂದಲೂ ಕರೆ ಬಂದಿತ್ತು, ಮಾತಾಡಿದ್ದೀನಿ. ಹೈಕಮಾಂಡ್ ಇದರ ಬಗ್ಗೆ ಏನು ನಿರ್ಧಾರ ಕೈಗೊಳ್ಳುತ್ತೆ ಅಂತ ಕಾದು ನೋಡ್ತೀನಿ ಎಂದು ವಿಪಕ್ಷ ಸ್ಥಾನದ ಆಸೆಯನ್ನು ತಿಳಿಸಿದರು. ಇದನ್ನೂ ಓದಿ: ಯೋಗಿ ಸರ್ಕಾರದಿಂದ ಇಲ್ಲಿಯವರೆಗೆ 15246 ಕಿ.ಮೀ.ಗೂ ಹೆಚ್ಚು ಗ್ರಾಮೀಣ ರಸ್ತೆಗಳನ್ನು ನಿರ್ಮಾಣ

    ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನನಗೆ ಈಗಲೂ ವಿಶ್ವಾಸವಿದೆ. ರಾಜಕೀಯ ಬೇರೆ, ವಿಶ್ವಾಸ ಬೇರೆ. ಅಡ್ವಾಣಿ ಮೇಲೆಯೂ ನನಗೆ ವಿಶ್ವಾಸವಿದೆ. ಈಗಲೂ ಅವರ ಮನೆಗೆ ಹೋಗ್ತೇನೆ. ದೇಶ ಉಳಿಸಿ ಅಂತ ಬಿಜೆಪಿ ಸಮಾನ ಮನಸ್ಕರಿಗೂ ನಾನು ಮನವಿ ಮಾಡ್ತೇನೆ. ಇದು ಬಜಾರ್‍ನಲ್ಲಿ ಚರ್ಚೆ ಮಾಡೋ ವಿಚಾರ ಅಲ್ಲ. ಸಂಕ್ರಾಂತಿ ಎಲ್ಲರಿಗೂ ಒಳ್ಳೆದಾಗುತ್ತೆ. ಲೆಟ್ ಅಸ್ ವಿ ವಿಲ್ ಸೀ(ಮುಂದೆ ನೋಡೋಣ) ಕಾಲಾಯ ತಸ್ಮೈ ನಮಃ ಎಂದು ನುಡಿದರು.

    ನನಗೆ ಈಗಲೂ ಜೆಡಿಎಸ್ ನಾಯಕರ ಜೊತೆ ವಿಶ್ವಾಸ ಹಾಗೆಯೇ ಇದೆ. ನಾನು ಪಕ್ಷ ಬಿಡ್ತಿದೀನಿ ಅಂತ ಎಲ್ಲಿ ಚರ್ಚೆ ಮಾಡಿದ್ದೀನಿ. ಮಾಧ್ಯಮದವರು ಅದರ ಬಗ್ಗೆ ಚರ್ಚೆ ಮಾಡ್ತಿರೋದು. ಕಾಂಗ್ರೆಸ್ ಪಕ್ಷ ಬಿಡುವ ಮಾತಿಲ್ಲ ಎಂದು ಹೇಳಿದರು.

     

  • ನಾವು ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕೀಯ ಮಾಡುತ್ತೇವೆ: ಡಿಕೆಶಿ

    ನಾವು ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕೀಯ ಮಾಡುತ್ತೇವೆ: ಡಿಕೆಶಿ

    ಕಲಬುರಗಿ: ನಾವು ಜಾತಿ ಮೇಲೆ ಲೆಕ್ಕಾಚಾರ ಇಟ್ಟು ರಾಜಕೀಯ ಮಾಡಲ್ಲ. ನಾವು ನೀತಿ ಮೇಲೆ ರಾಜಕೀಯ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂದಗಿ ಮತ್ತು ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಅಲ್ಪಸಂಖ್ಯಾತರು ಪ್ರಜ್ಞಾವಂತರಿದ್ದಾರೆ. ಯಾರಿಗೆ ಮತ ಹಾಕಿದ್ರೆ ಉತ್ತಮ ಅನ್ನೋದು ಅವರಿಗೆ ಗೊತ್ತಿದೆ ಎಂದು ತಿಳಿಸಿದರು.

    ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ನಲ್ಲಿ ಬೆಲೆ ಇಲ್ಲ ಅನ್ನೋ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

    ಇದೇ ವೇಳೆ ಮಾಜಿ ಸಚಿವ ಮನಗೂಳಿ ಸಾಯುವ ಮೊದಲು ಡಿ.ಕೆ.ಭೇಟಿ ಮಾಡಿರಲಿಲ್ಲ ಅನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೂ ಡಿಕೆಶಿ ಪ್ರತಿಕ್ರಿಯಿಸಿದರು. ಮನಗೂಳಿ ಇವತ್ತು ಇಲ್ಲಾ, ಅವರ ಮಗ ಇದ್ದಾರೆ. ಮನಗೂಳಿ ಅವರೇ ನಮ್ಮ ಮಗನ ಜವಾಬ್ದಾರಿ ನಿಮ್ಮದು ಅಂತ ನನಗೆ ಹೇಳಿದ್ದರು. ನಿಮ್ಮ ಮಡಿಲಿಗೆ ನನ್ನ ಮಗನನ್ನು ಹಾಕಿದ್ದೇನೆ ಅಂತ ಹೇಳಿದ್ರು. ಸಾಯುವ ಮುನ್ನ ಸ್ವತ ಮನಗೂಳಿ ಅವರೇ ಹೇಳಿದ್ದರು ಎಂದು ಸ್ಪಷ್ಟಪಡಿಸಿದರು.

  • ಕಾಂಗ್ರೆಸ್ಸಿಗೆ ಹೆಚ್‍ಡಿಕೆ ಟಕ್ಕರ್ – ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರೋದು ಪಕ್ಕಾ!

    ಕಾಂಗ್ರೆಸ್ಸಿಗೆ ಹೆಚ್‍ಡಿಕೆ ಟಕ್ಕರ್ – ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರೋದು ಪಕ್ಕಾ!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ‘ಆಪರೇಷನ್ ಜೆಡಿಎಸ್’ಗೆ ಮುಂದಾದ ಕಾಂಗ್ರೆಸ್ಸಿಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ.

    ಹೌದು. ರಿವರ್ಸ್ ಆಪರೇಷನ್ ಮೂಲಕ ಕಾಂಗ್ರೆಸ್‍ಗೆ ಮಾಜಿ ಸಿಎಂ ಟಕ್ಕರ್ ಕೊಡಲು ರೆಡಿಯಾಗಿದ್ದಾರೆ. ಜೆಡಿಎಸ್ ರಿವರ್ಸ್ ಆಪರೇಷನ್‍ಗೆ ನವೆಂಬರ್ 1ರ ಮುಹೂರ್ತ ಫಿಕ್ಸ್ ಆಗಿದ್ದು, ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಜೆಡಿಎಸ್‍ಗೆ ಹೆಚ್‍ಡಿಕೆ ಕೌಂಟರ್ ನೀಡಿದ್ದಾರೆ. ಇದನ್ನೂ ಓದಿ: ಭೋಜನ ಕೂಟದಲ್ಲೂ ಆಪರೇಷನ್ ಹಸ್ತದ ಬಗ್ಗೆ ಎಚ್ಚರಿಕೆ ನೀಡಿದ ಬಿಎಸ್‍ವೈ

    ಕಾಂಗ್ರೆಸ್‍ನ ಸಿ.ಎಂ ಇಬ್ರಾಹಿಂ ಜೆಡಿಎಸ್‍ಗೆ ಜಂಪ್ ಆಗೋದು ಪಕ್ಕಾ ಆಗಿದ್ದು, ನವೆಂಬರ್ 1ರ ನಂತರ ಎಂಎಲ್‍ಸಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿದ್ದಾರೆ. ಮೊದಲಿಗೆ ಎಂಎಲ್‍ಸಿ ಸ್ಥಾನ, ಆಮೇಲೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಡಿಕೆಶಿಗಾಗಿ ಒಕ್ಕಲಿಗ ಕಾಂಗ್ರೆಸ್ ನಾಯಕರ ಸಭೆ – ಶಿವಕುಮಾರ್ ಟ್ರೆಂಡ್ ಕ್ರಿಯೇಟ್‍ಗೆ ರಣತಂತ್ರ

    ಜೆಡಿಎಸ್‍ಗೆ ಬರುವ ಸಿಎಂ ಇಬ್ರಾಹಿಂಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದ್ದು, ಡಿಸೆಂಬರ್‍ನಲ್ಲಿ ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಪಟ್ಟಾಭಿಷೇಕ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಈ ಮೂಲಕ ಅಲ್ಪಸಂಖ್ಯಾತರ ವೋಟ್ ಭದ್ರ ಮಾಡಿಕೊಳ್ಳಲು ಎಚ್‍ಡಿಕೆ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂಬುದಾಗಿ ಜೆಡಿಎಸ್ ಮೂಲಗಳಿಂದ ತಿಳಿದುಬಂದಿದೆ.

  • ಯಡಿಯೂರಪ್ಪನವರಿಗೆ ಈಗ ಮದ್ವೆ ಮಾಡಿದ್ರೂ 2 ಮಕ್ಕಳು ಮಾಡುವ ಶಕ್ತಿ ಇದೆ: ಇಬ್ರಾಹಿಂ

    ಯಡಿಯೂರಪ್ಪನವರಿಗೆ ಈಗ ಮದ್ವೆ ಮಾಡಿದ್ರೂ 2 ಮಕ್ಕಳು ಮಾಡುವ ಶಕ್ತಿ ಇದೆ: ಇಬ್ರಾಹಿಂ

    – ಒತ್ತಡ ಹಾಕಿ ರಾಜೀನಾಮೆ ಪಡೆದಿರುವುದು ಸತ್‍ಸಂಪ್ರದಾಯವಲ್ಲ

    ಬೆಂಗಳೂರು: ಒತ್ತಡ ಹಾಕಿ ಯಡಿಯೂರಪ್ಪನವರ ರಾಜೀನಾಮೆ ಪಡೆದಿರುವುದು ಒಳ್ಳೆಯ ಸಂಪ್ರದಾಯವಲ್ಲ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

    ಕಾವೇರಿ ನಿವಾಸಕ್ಕೆ ಆಗಮಿಸಿ ಯಡಿಯೂರಪ್ಪ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂಧಿಗೆ ಮಾತನಾಡಿದ ಅವರು, ಏಕಾಏಕಿ ಒತ್ತಡ ಹಾಕಿ ರಾಜೀನಾಮೆ ಪಡೆಯದಿರುವುದು ಒಳ್ಳೆಯ ಸಂಪ್ರದಾಯವಲ್ಲ. ಇದೀಗ ಯಡಿಯೂರಪ್ಪನವರನ್ನು ಭೇಟಿಯಾದ ಲವಲವಿಕೆಯಿಂದ ಇದ್ದಾರೆ. ನಮ್ಮ ಜಿಲ್ಲೆಯವರೇ ಅವರು. ಆರೋಗ್ಯ ಕಾಪಾಡಿಕೊಳ್ಳಿ, ರಾಜ್ಯಪಾಲ ಹುದ್ದೆಯನ್ನು ಬೇಡವೆಂದು ಹೇಳಿದ್ದೀರಿ. ಲೋಪದೋಷಗಳಿರಬಹುದು, ಆರೋಪ ಪ್ರತ್ಯಾರೋಪಗಳು ಇರಬಹುದು. ರಾಜ್ಯ ಹಿತದೃಷ್ಟಿಯಿಂದ ಸ್ವಾಭಿಮಾನ ಕಾಪಾಡಿಕೊಳ್ಳುವುದು ಮುಖ್ಯ ಎಂದರು.

    ಯಡಿಯೂರಪ್ಪನವರಿಗೆ ಈಗ ಮದುವೆ ಮಾಡಿದರೂ ಎರಡು ಮಕ್ಕಳು ಮಾಡುವ ಶಕ್ತಿ ಇದೆ. ಫುಲ್ ಆಕ್ಟಿವ್ ಆಗಿದ್ದಾರೆ. ಕೆಲವು ಲೋಪದೋಷಗಳು ಇರಬಹುದು. ಆದರೆ, ರಾಜ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

    ಸಿಎಂ ಆಗಿದ್ದಾಗ ಯಡಿಯೂರಪ್ಪನವರನ್ನು ಎಂದೂ ಭೇಟಿ ಮಾಡಿರಲಿಲ್ಲ. ನಮ್ಮ ಜಿಲ್ಲೆಯವರು, ಮಲೆನಾಡಿವರು ಎಂಬ ಕಾರಣಕ್ಕೆ ಬಂದಿದ್ದೇನೆ. ಓರಜಿನಲ್ ಗಿರಾಕಿ ಹೋದ ಮೇಲೆ ಡೂಪ್ಲಿಕೇಟ್ ಗಿರಾಕಿ ಬಂದರೇನು ಎಂದು ನಾಯಕತ್ವ ಬದಲಾವಣೆ ಕುರಿತು ವ್ಯಂಗ್ಯವಾಡಿದ್ದಾರೆ.

  • ಸಿಎಂ ಇಬ್ರಾಹಿಂಗೆ ಮಾತೃ ವಿಯೋಗ

    ಸಿಎಂ ಇಬ್ರಾಹಿಂಗೆ ಮಾತೃ ವಿಯೋಗ

    ಬೆಂಗಳೂರು: ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಅವರ ತಾಯಿ ಬೀಬಿ ಸಾರಾ ವಿಧಿವಶರಾಗಿದ್ದಾರೆ.

    ಬೀಬಿ ಸಾರಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಬಿಬಿ ಸಾರಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಂಗಳೂರಿನ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಬೀಬಿ ಸಾರಾ ಅವರಿಗೆ 90 ವರ್ಷ ವಯಸ್ಸಾಗಿತ್ತು.

    ಸಿಎಂ ಇಬ್ರಾಹಿಂ ಕಾಂಗ್ರೆಸ್ ಎಂಎಲ್‍ಸಿ ಯಾಗಿದ್ದು, ಮಾಜಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್‍ನ ಅಲ್ಪಸಂಖ್ಯಾತರ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ.