Tag: CM ibrahim

  • ಪಾಕಿಸ್ತಾನದ ಮುಂಡೆವನ್ನ ನಿಂಬೆಹಣ್ಣು ಹಿಂಡಿದ ಹಾಗೆ ಹಿಂಡಬಹುದು: ಸಿಎಂ ಇಬ್ರಾಹಿಂ

    ಪಾಕಿಸ್ತಾನದ ಮುಂಡೆವನ್ನ ನಿಂಬೆಹಣ್ಣು ಹಿಂಡಿದ ಹಾಗೆ ಹಿಂಡಬಹುದು: ಸಿಎಂ ಇಬ್ರಾಹಿಂ

    ರಾಮನಗರ: ಪಾಕಿಸ್ತಾನವನ್ನ (Pakistan) 24 ಗಂಟೆಯಲ್ಲಿ ಒದ್ದು ಒಳಗೆ ಹಾಕಬಹುದು. ಮುಂಡೆವನ್ನ ನಿಂಬೆಹಣ್ಣು ಹಿಂಡಿದ ಹಾಗೆ ಹಿಂಡಬಹುದು. ಈಗ ಒಬ್ಬ ನರಪಿಳ್ಳೆಯನ್ನೂ ಹಿಡಿದಿಲ್ಲ ಎಂದು ಕೇಂದ್ರದ ವಿರುದ್ಧ ಮಾಜಿ ಸಚಿವ ಸಿಎಂ ಇಬ್ರಾಹಿಂ (CM Ibrahim) ಕಿಡಿಕಾರಿದ್ದಾರೆ.

    ಆಪರೇಷನ್ ಸಿಂಧೂರದ (Operation Sindoor) ಬಗ್ಗೆ ಕೈ ಶಾಸಕರ ಅನುಮಾನ ವಿಚಾರವಾಗಿ ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ಸಿಗರಿಗೆ ಮಾತ್ರ ಅಲ್ಲ, ದೇಶಕ್ಕೆ ಅನುಮಾನ ಇದೆ. ಪಹಲ್ಗಾಮ್‌ಗೆ ಉಗ್ರರು ಬಂದು ಅವರ ಕೆಲಸ ಮುಗಿಸಿ ಸುಸೂತ್ರವಾಗಿ ವಾಪಸ್ ಹೋಗಿದ್ದಾರೆ. ದೇಶದ ಭದ್ರತಾ ವ್ಯವಸ್ಥೆ ಏನು ಮಾಡುತ್ತಿತ್ತು? ಪುಲ್ವಾಮ ದಾಳಿ ಸೇರಿ ಸಾಕಷ್ಟು ದಾಳಿ ಆಗಿದೆ. ಅದನ್ನು ಮಾಡಿದ್ಯಾರು, ಅವರು ದೇಶದ ಒಳಗೆ ಹೇಗೆ ಬಂದರು? ಕಾಶ್ಮೀರದ ಭದ್ರತಾ ವ್ಯವಸ್ಥೆ ಕಾಶ್ಮೀರಿ ಪೊಲೀಸರ ಕೈಯಲಿಲ್ಲ, ಲೆಫ್ಟಿನೆಂಟ್ ಗವರ್ನರ್ ಕೈಯಲ್ಲಿದೆ. ಇದಕ್ಕೆ ಲೆಫ್ಟಿನೆಂಟ್ ಗವರ್ನರ್ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅವೈಜ್ಞಾನಿಕ ನೀತಿಯಿಂದ ಅಬಕಾರಿ ಆದಾಯದ ಮೂಲಕ್ಕೆ ಸರ್ಕಾರ ಕೊಡಲಿ ಪೆಟ್ಟು ನೀಡಲು ಮುಂದಾಗಿದೆ – ಅಶೋಕ್

    ದೇಶದ ಸೈನಿಕರಿಂದಲೇ ಈ ದೇಶ ಉಳಿದಿದೆ. ಇದರಲ್ಲಿ ಕೇಂದ್ರ ಸರ್ಕಾರದ ವೈಫಲ್ಯತೆ ಎದ್ದು ಕಾಣಿಸುತ್ತಿದೆ. ಯುದ್ಧ ಆರಂಭವಾದಾಗ ಇಡೀ ದೇಶದ ಜನ ಮೋದಿಗೆ ಸಂಪೂರ್ಣ ಬೆಂಬಲ ಕೊಟ್ಟರು. ಆದರೆ ಇದ್ದಕ್ಕಿದ್ದಂತೆ ಟ್ರಂಪ್ ಹೇಳಿದ ಎಂದು ಯುದ್ಧ ನಿಲ್ಲಿಸಿದರು. ಟ್ರಂಪ್ ಯಾರು? ನಮ್ಮ ದೊಡ್ಡಪ್ಪನಾ, ಚಿಕ್ಕಪ್ಪನಾ? ನಮ್ಮ ದೇಶದ ವಿಚಾರಕ್ಕೆ ಕೈ ಹಾಕುವ ಟ್ರಂಪ್ ಯಾರು? ಟ್ರಂಪ್ ಹೇಳಿದ ಅಂತ ನಿಲ್ಲಿಸಲು ಇವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮೇ 21 ರಂದು ವಿಧಾನಸೌಧದ ಮುಂದೆ ಆಂಧ್ರಕ್ಕೆ ಆನೆಗಳ ಹಸ್ತಾಂತರ

    ಇಂದಿರಾಗಾಂಧಿ 93 ಸಾವಿರ ಬಾಂಗ್ಲಾ ಸೈನಿಕರ ಸೆರೆಹಿಡಿದಿದ್ದರು. ವಾಜಪೇಯಿ ನಮ್ಮ ದೇಶದ ವಿಚಾರಕ್ಕೆ ಮೂರನೇ ವ್ಯಕ್ತಿಗಳ ಪ್ರವೇಶ ಬೇಡ ಅಂದಿದ್ದರು. ಆದರೆ ಮೋದಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಮೊದಲು ಇತಿಹಾಸ ನೋಡಿಕೊಂಡು ಬರಲಿ. ಟ್ರಂಪ್ ಬಳಿ ಅಚ್ಚೇದಿನ ಪಡೆಯುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೈನಿಕರ ಸುರಕ್ಷೆಗೆ ಉಡುಪಿ ಪೇಜಾವರ ಶ್ರೀ ಮಾರ್ಗದರ್ಶನದಲ್ಲಿ ಸುದರ್ಶನ ಯಾಗ

    ಯುದ್ಧ ನಿಲ್ಲಿಸಿದರೆ ಟೆರರಿಸ್ಟ್ ಸಿಗ್ತಾರಾ? ಉಗ್ರರನ್ನು ನಮಗೆ ಒಪ್ಪಿಸಿ ಅಂತ ಪಾಕಿಸ್ತಾನಕ್ಕೆ ಕೇಳಬೇಕಲ್ಲ. ಯಾಕೆ ಹಾಗೆ ಮಾಡಲಿಲ್ಲ, ನಮ್ಮ 25 ಮಂದಿ ಸಾವಿಗೆ ನ್ಯಾಯ ಕೊಟ್ರಾ? ಪಹಲ್ಗಾಮ್ ದಾಳಿ ಆದಮೇಲೆ ಮೋದಿ ಬಿಹಾರಕ್ಕೆ ಹೋದರು. ಮೃತಪಟ್ಟ ಪ್ರವಾಸಿಗರ ಮನೆಗೆ ಯಾಕೆ ಹೋಗಲಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕಾಂಗ್ರೆಸ್‌ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ಕೊಡುತ್ತಿದ್ದಾರೆ – ಬಿವೈ ವಿಜಯೇಂದ್ರ ಕಿಡಿ

    ನವಾಜ್ ಶರೀಫ್ ಮನೆಗೆ ಹೋಗಿ ಮೋದಿ ಬಿರಿಯಾನಿ ತಿಂತಾರೆ. ಅವರನ್ನು ಯಾರು ಕರೆದಿದ್ದರು? ಕರೆಯದೆಯೂ ಹೋಗಿ ಬಂದಿದ್ದಾರೆ. ಇದನ್ನು ನೋಡಿದರೆ ಸರ್ವಜ್ಞ ಹೇಳಿದ್ದು ನೆನಪಾಗುತ್ತದೆ ಎಂದು ಗುಡುಗಿದರು. ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ – ಎಲ್ಲೆಲ್ಲಿ?

  • ವಕ್ಫ್ ಆಸ್ತಿ ವಿವಾದ – ಮಂತ್ರಾಲಯದ ಜಾಗ ಆದೊನಿ ನವಾಬರು ಕೊಟ್ಟಿದ್ದು: ಸಿಎಂ ಇಬ್ರಾಹಿಂ

    ವಕ್ಫ್ ಆಸ್ತಿ ವಿವಾದ – ಮಂತ್ರಾಲಯದ ಜಾಗ ಆದೊನಿ ನವಾಬರು ಕೊಟ್ಟಿದ್ದು: ಸಿಎಂ ಇಬ್ರಾಹಿಂ

    ರಾಯಚೂರು: ಮಂತ್ರಾಲಯ (Mantralaya) ರಾಯರ ಮಠದ ಜಾಗ ಆದೊನಿ ನವಾಬರು ಕೊಟ್ಟಿದ್ದು ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ (CM Ibrahim) ಹೊಸ ಬಾಂಬ್ ಸಿಡಿಸಿದ್ದಾರೆ.

    ರಾಯಚೂರಿನಲ್ಲಿ (Raichuru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂತ್ರಾಲಯ ಮಠದ ಜಾಗ ಆದೊನಿ ನವಾಬರು ಕೊಟ್ಟಿದ್ದು, ಅದನ್ನು ಹೇಗೆ ವಕ್ಫ್ ಬೋರ್ಡ್ ಆಸ್ತಿ ಎಂದು ಯಾರದರೂ ಕೇಳಲು ಹೋಗಿದ್ರಾ? ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ಬಂದಾಗ ನಮ್ಮ ಬೃಂದಾವನ ಇಲ್ಲಿ ಮಾಡುತ್ತೇವೆ ಎಂದು ಹೇಳಿದ್ದರು. ಆಗ ಮಂತ್ರಾಲಯವನ್ನು ಖಾಜಿಗೆ ಕೊಟ್ಟ ಜಾಗ ರದ್ದುಗೊಳಿಸಿ, ಆದೊನಿ ನವಾಬರು ಮಂತ್ರಾಲಯ ಸ್ವಾಮೀಜಿಗೆ ಕೊಟ್ಟರು. ಈ ಕಥೆಯನ್ನ ಮಂತ್ರಾಲಯ ಸ್ವಾಮೀಜಿಗಳೇ ಹೇಳುತ್ತಾರೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಲಷ್ಕರ್ ಉಗ್ರರ ಹೆಸರಲ್ಲಿ ಆರ್‌ಬಿಐ ಗ್ರಾಹಕ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆ

    ಶೃಂಗೇರಿ (Sringeri) ಶಾರದಾ ಪೀಠದ ಮೇಲೆ ಪೇಶಾವರರು ದಾಳಿಗೆ ಬಂದಾಗ ಟಿಪ್ಪು ಸುಲ್ತಾನ್ ಸೈನ್ಯ ಕಳುಹಿಸಿ ಮತ್ತೆ ಶಾರದಾ ಪೀಠವನ್ನ ಸ್ಥಾಪನೆ ಮಾಡಿದ್ದರು. ಇದು ಇತಿಹಾಸ, ಇದು ನಮ್ಮ ಪರಂಪರೆ, ಇದು ನಮ್ಮ ಸಂಸ್ಕೃತಿ. ಈ ಚಿಲ್ಲರೆಗಳು ರಾಜಕಾರಣಕ್ಕೆ ಬಂದು ಈ ಸಂಸ್ಕೃತಿಯನ್ನ ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇದರಿಂದ ಯಾರೂ ಆತಂಕ ಪಡುವಂತದ್ದಿಲ್ಲ. ತಹಶೀಲ್ದಾರ, ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರಕರಣದಿಂದ ಪ್ರಕರಣಕ್ಕೆ ವ್ಯತ್ಯಾಸ ಇರುತ್ತದೆ. ಅನುಭವ ಇಲ್ಲದಿರುವ ಒಬ್ಬ ಮಂತ್ರಿ ಆವೇಶದಲ್ಲಿ ಏನೋ ಮಾಡಲು ಹೋಗಿ ಏನೋ ಮಾಡಿದ್ದಾನೆ ಎಂದು ತಿಳಿಸಿದರು.

    ಹೆಚ್‌ಡಿ ಕುಮಾರಸ್ವಾಮಿ ಬಗೆಗಿನ ಜಮೀರ್ ಅಹ್ಮದ್ (Zameer Ahmed) ಹೇಳಿಕೆಯನ್ನು ಖಂಡಿಸುತ್ತೇನೆ. ಅವರ ಹೇಳಿಕೆ ತಪ್ಪು, ಒಕ್ಕಲಿಗರ ಸಮಾಜ, ಮುಸ್ಲಿಂ ಸಮಾಜ, ಟಿಪ್ಪು ಸುಲ್ತಾನ್ ಕಾಲದಿಂದ ಕೂಡಿಕೊಂಡು ಬಂದಿದೆ. ಆ ಸಮಾಜಕ್ಕೆ ನೋವಾಗಿದೆ ನಾನೇ ಕ್ಷಮೆ ಕೇಳುತ್ತೇನೆ. ದೇವೇಗೌಡರ ವಯಸ್ಸಿಗಾದರೂ ನಾವು ಗೌರವ ಕೊಡಬೇಕು. ಕಾಂಗ್ರೆಸ್ ಅಧ್ಯಕ್ಷರು ಕೂಡ ಇದನ್ನ ತಪ್ಪು ಎಂದು ಹೇಳಿದ್ದಾರೆ. ಈಗಾಗಲೇ ಮತದಾನವಾಗಿ ಪರಿಣಾಮ ಬಗ್ಗೆ ನಾನೇನು ಹೇಳಲ್ಲ. ದೇವೇಗೌಡರು (HD Devegowda) ಪುತ್ರ ವಾತ್ಸಲ್ಯದಲ್ಲಿ ಸಿಕ್ಕಾಕಿಕೊಂಡಿದ್ದಾರೆ ಎಂದರು.ಇದನ್ನೂ ಓದಿ: ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ದುರ್ಮರಣ; ರೆಸಾರ್ಟ್ ಸೀಲ್‌ಡೌನ್, ಮಾಲೀಕ ವಶಕ್ಕೆ

  • ಇವಿಎಂ ಯಂತ್ರದಿಂದ ಮೋದಿ ಚುನಾವಣೆ ಗೆಲ್ಲುತ್ತಿದ್ದಾರೆ: ಸಿ.ಎಂ ಇಬ್ರಾಹಿಂ

    ಇವಿಎಂ ಯಂತ್ರದಿಂದ ಮೋದಿ ಚುನಾವಣೆ ಗೆಲ್ಲುತ್ತಿದ್ದಾರೆ: ಸಿ.ಎಂ ಇಬ್ರಾಹಿಂ

    ಬೆಂಗಳೂರು: ಇವಿಎಂ ಯಂತ್ರದಿಂದ (EVM) ಮೋದಿ (Narendra modi) ಗೆಲ್ತಿರೋದು, ಮೊದಲು ಇವಿಎಂ ಮಿಷನ್ ವಿರುದ್ಧ ವಿರೋಧ ಪಕ್ಷಗಳು ಹೋರಾಟ ಮಾಡಬೇಕು ಎಂದು ಜೆಡಿಎಸ್ ಉಚ್ಚಾಟಿತ ನಾಯಕ ಸಿ.ಎಂ ಇಬ್ರಾಹಿಂ (C.M Ibrahim) ಇಂಡಿಯಾ ಕೂಟಕ್ಕೆ ಸಲಹೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಇಡಿ, ಐಟಿ, ಸಿಬಿಐ, ವೋಟಿಂಗ್ ಮಿಷನ್ ಈ 4 ಬಿಜೆಪಿಯವರಿಗೆ ದೊಡ್ಡ ಅಸ್ತ್ರವಾಗಿದೆ. ವಿಪಕ್ಷಗಳು ಬ್ಯಾಲೆಟ್ ಪೇಪರ್ ಬೇಕು ಎಂದು ಹೋರಾಟ ಮಾಡಬೇಕು. ಇಲ್ಲದೇ ಹೋದರೆ ಮನೆಯಲ್ಲಿ ಇವರೇ ಮಿಷನ್ ಒತ್ತುತ್ತ ಕೂತುಕೊಳ್ಳಬೇಕು. ಪ್ರಪಂಚದ ಯಾವುದೇ ದೇಶದಲ್ಲಿ ಇವಿಎಂ ಮಿಷನ್ ಇಲ್ಲ. ಎಲ್ಲಾ ಕಡೆ ಬ್ಯಾಲೆಟ್ ಪೇಪರ್ ಇದೆ. ವಿಪಕ್ಷಗಳು ಸೀಟು ಕಿತ್ತಾಟ ಬಿಟ್ಟು ಇವಿಎಂ ಮಿಷನ್ ಬೇಡ ಎಂದು ಬೀದಿಗಿಳಿದು ಹೋರಾಟ ಮಾಡಬೇಕು. ಇವಿಎಂ ಮಿಷನ್ ಇದ್ದರೆ ಚುನಾವಣೆ ಎದುರಿಸದೇ ಬಾಯ್ಕಾಟ್ ಮಾಡಬೇಕು. ಆಗ ದೇಶದಾದ್ಯಂತ ಸುದ್ದಿ ಆಗುತ್ತದೆ. ಚುನಾವಣಾ ಆಯೋಗಕ್ಕೆ ಏಕೆ ಇವಿಎಂ ಮೇಲೆ ಅಷ್ಟು ಪ್ರೀತಿ? ಚುನಾವಣಾ ಆಯುಕ್ತರು ಯಾಕೆ ರಾಜೀನಾಮೆ ಕೊಟ್ಟರು ಎಂದು ಅವರು ಪ್ರಶ್ನಿಸಿದ್ದಾರೆ.

    ಮೋದಿ ಬಾರಿ ಬುದ್ಧಿವಂತರು, ಎಲ್ಲಾ ವಿಷಯಕ್ಕೂ ಕೈ ಹಾಕೋದಿಲ್ಲ. ಆಯ್ದ ಸೀಟುಗಳಲ್ಲಿ ಮಾತ್ರ ಹ್ಯಾಕ್ ಮಾಡ್ತಾರೆ. 2004 ರಿಂದಲೂ ಇವಿಎಂ ಹ್ಯಾಕ್ ಆಗ್ತಿತ್ತು. ಆಗ ಕಾಂಗ್ರೆಸ್ ಗೆಲ್ಲುತ್ತಿತ್ತು. ಅದಕ್ಕೆ ಅವರು ಮಾತಾಡ್ತಿರಲಿಲ್ಲ. ಈಗ ಅವರಿಗೆ ಇವಿಎಂ ಹ್ಯಾಕ್ ಮಾಡಬಹುದು ಎಂದು ಅರಿವಾಗಿದೆ. ಅದಕ್ಕೆ ಇವಿಎಂ ಬೇಡ. ಬ್ಯಾಲೆಟ್ ಪೇಪರ್‍ಬೇಕು ಎಂದು ಕಾಂಗ್ರೆಸ್ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದ್ದಾರೆ.

    ಮೋದಿ ಅಹಂ ಬ್ರಹ್ಮಾಸ್ಮಿ ಆಗಿದ್ದಾರೆ. ಆರ್‍ಎಸ್‍ಎಸ್‍ನ್ನು ಮೀರಿ ಅವರು ಹೋಗ್ತಿದ್ದಾರೆ. ಹೀಗಾಗಿಯೇ ಆರ್‍ಎಸ್‍ಎಸ್‍ನವರು ಚುನಾವಣಾ ಬಾಂಡ್ ವಿರುದ್ಧವಾಗಿ ಮಾತಾಡ್ತಿದ್ದಾರೆ. ಆರ್‍ಎಸ್‍ಎಸ್‍ನಲ್ಲೂ ಒಳ್ಳೆಯವರಿದ್ದಾರೆ. ಮೋದಿ ಇಂದು ಆರ್‍ಎಸ್‍ಎಸ್ ಮೀರಿ ಬೆಳೆದಿದ್ದೇನೆ ಎನ್ನುತ್ತಿದ್ದಾರೆ ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದರು.

  • ಜೆಡಿಎಸ್‌ನಲ್ಲಿ ಉಳಿದಿರೋ ನಿಷ್ಠಾವಂತರು ‘ಇಂಡಿಯಾ’ ಕೂಟಕ್ಕೆ ಬೆಂಬಲ ಕೊಡ್ತೀವಿ: ಸಿಎಂ ಇಬ್ರಾಹಿಂ

    ಜೆಡಿಎಸ್‌ನಲ್ಲಿ ಉಳಿದಿರೋ ನಿಷ್ಠಾವಂತರು ‘ಇಂಡಿಯಾ’ ಕೂಟಕ್ಕೆ ಬೆಂಬಲ ಕೊಡ್ತೀವಿ: ಸಿಎಂ ಇಬ್ರಾಹಿಂ

    – ಕುಮಾರಸ್ವಾಮಿ, ಡಾ.ಮಂಜುನಾಥ್ ಗೆಲ್ಲುವುದು ಕಷ್ಟ

    ಬೆಂಗಳೂರು: ಜೆಡಿಎಸ್‌ನಲ್ಲಿ (JDS) ಉಳಿದಿರೋ ನಿಷ್ಠಾವಂತರು ಇಂಡಿಯಾ (INDIA) ಕೂಟಕ್ಕೆ ಬೆಂಬಲ ಕೊಡ್ತೀವಿ. ನಾವೇ ಇಂಡಿಯಾ ಕೂಟದ ಪರ ಪ್ರಚಾರ ಮಾಡ್ತೀವಿ ಎಂದು ಜೆಡಿಎಸ್ ಉಚ್ಚಾಟಿತ ನಾಯಕ ಸಿಎಂ ಇಬ್ರಾಹಿಂ (CM Ibrahim) ಇಂಡಿಯಾ ಒಕ್ಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಬಗ್ಗೆ ನಾನೇನು ಹೇಳಿದ್ದೆನೋ ಅದು ಸತ್ಯವಾಗಿದೆ. ಕಾಂಗ್ರೆಸ್ ಅವರು 2-3 ಸೀಟು ಆದರೂ ಮುಸ್ಲಿಮರಿಗೆ ಕೊಡಬೇಕಿತ್ತು. 21% ಮತ ಇರೋರಿಗೆ ಕಡಿಮೆ ಸೀಟು ಕೊಟ್ಟಿದ್ದೀರಾ. 5% ಇರೋರಿಗೆ ಹೆಚ್ಚು ಸೀಟು ಕೊಡುತ್ತಿದ್ದೀರಾ. ವಿಧಿ ಇಲ್ಲದೆ ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತಿದ್ದೇವೆ. ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದರೆ 6 ಸ್ಥಾನ ಗೆಲ್ಲುತ್ತಿದ್ದೆವು. ಮೈಸೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಬಿಜಾಪುರ, ತುಮಕೂರು ಗೆಲ್ಲುತ್ತಿದ್ದೆವು. ಮಂಡ್ಯಕೋಸ್ಕರ ಕಿತ್ತಾಟ ಮಾಡಿದ್ರಿ. ಸುಮಲತಾ ಏನು ಮಾಡುತ್ತಾರೋ ಗೊತ್ತಿಲ್ಲ. ಬಿಜೆಪಿಗೂ ಜೆಡಿಎಸ್‌ಗೂ ಸಂಬಂಧವೇ ಬರಲ್ಲ. ಮಂಡ್ಯದಲ್ಲಿ 2 ಲಕ್ಷ ವೋಟ್ ಜೆಡಿಎಸ್ ಕಳೆದುಕೊಂಡಿದೆ. ಒಕ್ಕಲಿಗರು ಬಿಜೆಪಿಗೆ ವೋಟ್ ಹಾಕಲ್ಲ. ಕುಮಾರಸ್ವಾಮಿಗೆ ಆರೋಗ್ಯ ಕೊಡಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. ದೇವೇಗೌಡರಿಗೆ ಈ ವಯಸ್ಸಿನಲ್ಲಿ ಇಂತಹ ಸ್ಥಿತಿ ಆಗಬಾರದು ಎಂದರು. ಇದನ್ನೂ ಓದಿ: ಹಾಸನ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ

    ಮೋದಿ (Narendra Modi) ಬಾರಿ ಬುದ್ದಿವಂತರು. ಎಲ್ಲಾ ವಿಷಯಕ್ಕೆ ಕೈ ಹಾಕಲ್ಲ. ಸೆಲೆಕ್ಟ್ ಸೀಟುಗಳಲ್ಲಿ ಮಾತ್ರ ಹ್ಯಾಕ್ ಮಾಡುತ್ತಾರೆ. 2004 ರಿಂದಲೂ ಇವಿಎಂ ಹ್ಯಾಕ್ ಆಗುತ್ತಿತ್ತು. ಕಾಂಗ್ರೆಸ್ ಗೆಲ್ಲುತ್ತಿತ್ತು. ಅದಕ್ಕೆ ಅವರು ಮಾತನಾಡುತ್ತಿರಲಿಲ್ಲ. ಇವಿಎಂ ಹ್ಯಾಕ್ ಮಾಡಬಹುದು. ಅದಕ್ಕೆ ಇವಿಎಂ ಬೇಡ. ಬ್ಯಾಲೆಟ್ ಪೇಪರ್ ಬೇಕು ಅಂತ ಕಾಂಗ್ರೆಸ್ ಧ್ವನಿ ಎತ್ತಬೇಕು. ಮೋದಿ ಅಹಂ ಬ್ರಹ್ಮಾಸ್ಮಿ ಆಗಿದ್ದಾರೆ. ಆರ್‌ಎಸ್‌ಎಸ್ ಮೀರಿ ಅವರು ಹೋಗುತ್ತಿದ್ದಾರೆ. ಹೀಗಾಗಿಯೇ ಆರ್‌ಎಸ್‌ಎಸ್ ಅವರು ಚುನಾವಣೆ ಬಾಂಡ್ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್‌ನಲ್ಲೂ ಒಳ್ಳೆಯವರು ಇದ್ದಾರೆ. ಮೋದಿ ಇವತ್ತು ಆರ್‌ಎಸ್‌ಎಸ್ ಮೀರಿ ಬೆಳೆದಿದ್ದೇನೆ ಎಂದು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಾರತ ಸಮನ್ಸ್‌ ನೀಡಿದರೂ ಕೇಜ್ರಿವಾಲ್‌ ಬಂಧನ ಬಗ್ಗೆ ಅಮೆರಿಕ ಮತ್ತೆ ಪ್ರತಿಕ್ರಿಯೆ

    ಮಂಡ್ಯದಲ್ಲಿ ಕುಮಾರಸ್ವಾಮಿ (HD Kumaraswamy) ಗೆಲ್ಲೋದು ಕಷ್ಟ ಇದೆ. ಅದಕ್ಕೆ ನಾನು ಕುಮಾರಸ್ವಾಮಿ ನಿಲ್ಲೋದು ಬೇಡ ಎಂದು ಹೇಳಿದೆ. ಅವರ ಆರೋಗ್ಯ ಸರಿಯಿಲ್ಲ. ಸೀಟು ಹಂಚಿಕೆಯ ವಿಚಾರದಲ್ಲಿ ನೀವು ಹೇಳಿದ್ದೇ ನಿಜ ಅಂತ ನನ್ನ ಬಳಿ ಜೆಡಿಎಸ್ ಅವರೇ ಮಾತನಾಡಿದ್ದಾರೆ. ಯಾರು ಮಾತಾಡಿದ್ದಾರೆ ಎಂದು ನಾನು ಹೇಳಲ್ಲ. ಕುಮಾರಸ್ವಾಮಿ ಮಾತಾಡಿಲ್ಲ. ಬೇರೆಯವರು ಮಾತಾಡಿದ್ದಾರೆ. ಚುನಾವಣೆ ಆದ ಮೇಲೆ ಎಲ್ಲವೂ ಬದಲಾವಣೆ ಆಗಲಿದೆ. ಜೆಡಿಎಸ್ ಸಭೆಯಲ್ಲೂ ನಾನು ಹೇಳಿದ್ದು ಸತ್ಯ ಅಂತ ಚರ್ಚೆ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ನಿಧನ

    ಡಾ.ಮಂಜುನಾಥ್ (Dr Manjunath) ಅವರನ್ನು ಯಾಕೆ ಜೆಡಿಎಸ್‌ನಿಂದ ನಿಲ್ಲಿಸಿಲ್ಲ? ಜೆಡಿಎಸ್‌ನಿಂದ ನಿಲ್ಲಿಸಬಹುದಿತ್ತು. ಯಾಕೆ ಬಿಜೆಪಿಯಿಂದ ನಿಲ್ಲಿಸಿದ್ರಿ? ಈಗ ಅವರಿಗೆ ಆಪರೇಷನ್ ಮಾಡಿದಂತೆ ಇದೆ. ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಗೆಲ್ಲೋದು ಕಷ್ಟ ಇದೆ. ಜನರು ಬುದ್ಧಿವಂತರು. ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ. ಇಂಡಿಯಾ ಕೂಟದಲ್ಲಿ ಇನ್ನು ಸರಿ ಆಗಬೇಕು. ಬಿಜೆಪಿಯಲ್ಲಿ ಒನ್‌ಮ್ಯಾನ್ ಆರ್ಮಿ ಆಗಿದೆ. ಪ್ರಜಾಪ್ರಭುತ್ವ ಉಳಿಸಲು ಇಂಡಿಯಾ ಕೂಟಕ್ಕೆ ಬೆಂಬಲ ಕೊಡಿ ಎಂದು ಪ್ರಚಾರ ಮಾಡುತ್ತೇವೆ. ಏಪ್ರಿಲ್ ಆದ ಮೇಲೆ ಏನೇನು ಆಗುತ್ತೋ ನೋಡಿ. ಯಾರ‍್ಯಾರು ಎಲ್ಲಿ ಹೋಗುತ್ತಾರೆ ನೋಡಿ. ಸಿದ್ದರಾಮಯ್ಯ ಅವರನ್ನು ನಾನು ಹೊರಗಡೆ ಬಂದಾಗಿನಿಂದ ಮಾತನಾಡಿಸಿಲ್ಲ. ಅವರ ಮೇಲೆ ಗೌರವ ಇದೆ. ನಾನು ಅವರ ಜೊತೆ ಮಾತಾಡಿಲ್ಲ. ಸಿದ್ದರಾಮಯ್ಯ ಅವರಿಗೂ ಪಕ್ಷದಲ್ಲಿ ಅವರದ್ದೇ ಆದ ಗೊಂದಲ ಇವೆ. ಕೋಲಾರದಲ್ಲಿ ಗೊಂದಲ ಆಗ್ತಿದೆ ಎಂದರು. ಇದನ್ನೂ ಓದಿ: KSRTC ನೌಕರರಿಗೆ ಗುಡ್‌ನ್ಯೂಸ್ – ಡಬಲ್ ಡ್ಯೂಟಿಯಿಂದ ಮುಕ್ತಿ

    ಅಧ್ಯಕ್ಷ ಸ್ಥಾನದ ಕೇಸ್ ವಿಚಾರವಾಗಿ ಮಾತನಾಡಿ, ಸಿಟಿ ಕೋರ್ಟ್‌ನಲ್ಲಿ ವಿಚಾರಣೆ ಆಗದೇ ತೀರ್ಪು ಕೊಟ್ಟರು. ಇದು ವಿಚಿತ್ರವಾಗಿದೆ. ಹೈಕೋರ್ಟ್‌ಗೆ ಮೇಲ್ಮನವಿ ಹಾಕಿದ್ದೇನೆ. ನನಗೆ ಕೋರ್ಟ್ ಮೇಲೆ ನಂಬಿಕೆ ಇದೆ. ಏಪ್ರಿಲ್ 12ರ ಬಳಿಕ ಜಿಲ್ಲಾ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನಲ್ಲಿ ಸಾಕಷ್ಟು ಹಣವಿಲ್ಲ.. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ: ಕೇಂದ್ರ ಹಣಕಾಸು ಸಚಿವೆ

  • ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ಹೆಚ್‌ಡಿಕೆ ನೇಮಕ ಪುರಸ್ಕಾರ – ಕೋರ್ಟ್‌ನಿಂದ ಸಿಎಂ ಇಬ್ರಾಹಿಂ ಅರ್ಜಿ ವಜಾ

    ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ಹೆಚ್‌ಡಿಕೆ ನೇಮಕ ಪುರಸ್ಕಾರ – ಕೋರ್ಟ್‌ನಿಂದ ಸಿಎಂ ಇಬ್ರಾಹಿಂ ಅರ್ಜಿ ವಜಾ

    ಬೆಂಗಳೂರು: ಜೆಡಿಎಸ್ (JDS) ಪಕ್ಷದ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಚಾಟನೆ ಮಾಡಿರುವ ಕ್ರಮ ಹಾಗೂ ನೂತನ ರಾಜ್ಯಾಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಿಎಂ ಇಬ್ರಾಹಿಂ ಅರ್ಜಿಯನ್ನು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾ ಮಾಡಿದೆ.

    ನ್ಯಾಯಾಲಯವು ಶುಕ್ರವಾರ ಇಬ್ರಾಹಿಂ (C.M.Ibrahim) ಅವರ ಅರ್ಜಿಯನ್ನು ವಜಾ ಮಾಡಿದ್ದು, ಅವರ ಅರ್ಜಿಯನ್ನು ಪುರಸ್ಕಾರ ಮಾಡಿಲ್ಲ. ಹೆಚ್‌ಡಿಕೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದನ್ನು ಪುರಸ್ಕಾರ ಮಾಡಿದೆ. ಇದನ್ನೂ ಓದಿ: ಬಿಜೆಪಿಗೆ ಪ್ರಜಾತಂತ್ರ, ಸಂವಿಧಾನದ ಮೇಲೆ ನಂಬಿಕೆ ಇಲ್ಲ – ಸರ್ವಾಧಿಕಾರದಲ್ಲಿ ಮಾತ್ರ ನಂಬಿಕೆ: ಸಿಎಂ ವಾಗ್ದಾಳಿ

    ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್‌.ಡಿ.ದೇವೇಗೌಡ (H.D.Deve Gowda) ಅವರು ನಿಯಮಗಳಿಗೆ ವಿರುದ್ಧವಾಗಿ ತಮ್ಮನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ವಜಾ ಮಾಡಿದ್ದರು ಎಂದು ಇಬ್ರಾಹಿಂ ಅವರು ದೂರಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದಿಂದ ಇಬ್ರಾಹಿಂ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು ಉಚ್ಚಾಟನೆ ಮಾಡಿದ್ದರು.

    ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದು ಸರಿಯಿಲ್ಲ ಎಂದು ಸಿಎಂ ಇಬ್ರಾಹಿಂ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯ ಅವರ ಅರ್ಜಿ ವಜಾ ಮಾಡಿದೆ. ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ನೇಮಕವನ್ನು ಕೋರ್ಟ್‌ ಎತ್ತಿ ಹಿಡಿದಿದೆ. ಇದನ್ನೂ ಓದಿ: ಕಾಂಗ್ರೆಸ್‌ನವರು ತೆರಿಗೆ ಕಟ್ಟದೇ ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡ್ತಿದ್ದಾರೆ: ಬೊಮ್ಮಾಯಿ

  • ಯಾವುದೇ ಪಕ್ಷದ ಚಿಹ್ನೆ ಬಳಸದಂತೆ ಸಿಎಂ ಇಬ್ರಾಹಿಂಗೆ ಕೋರ್ಟ್ ಆದೇಶ

    ಯಾವುದೇ ಪಕ್ಷದ ಚಿಹ್ನೆ ಬಳಸದಂತೆ ಸಿಎಂ ಇಬ್ರಾಹಿಂಗೆ ಕೋರ್ಟ್ ಆದೇಶ

    ಬೆಂಗಳೂರು: ಯಾವುದೇ ಪಕ್ಷದ ಚಿಹ್ನೆ ಬಳಸದಂತೆ ಸಿಎಂ ಇಬ್ರಾಹಿಂಗೆ (CM Ibrahim) ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.

    ಹೆಚ್‍ಡಿಡಿ ಕುಟುಂಬದ ವಿರುದ್ಧವೇ ಸಿಎಂ ಇಬ್ರಾಹಿಂ ತೊಡೆ ತಟ್ಟಿದರು. ಈ ಹಿನ್ನೆಲೆಯಲ್ಲಿ ಹೆಚ್.ಡಿ ದೇವೇಗೌಡರ (HD Devegowda) ನೇತೃತ್ವದಲ್ಲಿ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಆದರೆ ಜೆಡಿಎಸ್‍ನಿಂದ (JDS) ಉಚ್ಛಾಟನೆಯಾದರೂ ಸಿಎಂ ಇಬ್ರಾಹಿಂ ಜೆಡಿಎಸ್ ಪಕ್ಷದ ಚಿನ್ನೆ ಬಳಸುತ್ತಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

    ಇದೀಗ ಯಾವುದೇ ಪಕ್ಷದ ಚಿಹ್ನೆ ಬಳಸದಂತೆ ಆದೇಶ ನೀಡುವುದರ ಜೊತೆಗೆ ಜೆಡಿಎಸ್ ಪಕ್ಷದ ಚಿಹ್ನೆ, ಲೆಟರ್ ಹೆಡ್ ಬಳಕೆ ಮಾಡುವಂತಿಲ್ಲ. ಹಾಗೂ ಪಕ್ಷದ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸುವಂತಿಲ್ಲ. ಇಷ್ಟು ಮಾತ್ರವಲ್ಲದೇ ಪದಾಧಿಕಾರಿಗಳನ್ನೂ ನೇಮಕ ಮಾಡುವಂತಿಲ್ಲ ಎಂದು ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಇದನ್ನೂ ಓದಿ: ಜ.22 ರಂದು ಅಯೋಧ್ಯೆಗೆ ಹೋಗುತ್ತಿದ್ದು, ಬರ್ತ್‌ ಡೇ ಆಚರಿಸಿಕೊಳ್ತಿಲ್ಲ: ನಿಖಿಲ್‌

  • `ದಳಪತಿ’ಗಳಿಗೆ ಸೆಡ್ಡು ಹೊಡೆದ ಸಿ.ಎಂ ಇಬ್ರಾಹಿಂ ಬಣ- ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ನೇಮಕ

    `ದಳಪತಿ’ಗಳಿಗೆ ಸೆಡ್ಡು ಹೊಡೆದ ಸಿ.ಎಂ ಇಬ್ರಾಹಿಂ ಬಣ- ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ನೇಮಕ

    ಬೆಂಗಳೂರು: `ದಳಪತಿ’ಗಳಿಗೆ ಸಿ.ಎಂ ಇಬ್ರಾಹಿಂ (CM Ibrahim) ಬಣ ಸೆಡ್ಡು ಹೊಡೆದಿದೆ. ಜೆಡಿಎಸ್ (JDS) ರೆಬೆಲ್ ಟೀಮ್ ರಾಷ್ಟ್ರೀಯ ಅಧ್ಯಕ್ಷರನ್ನೇ ಬದಲಾವಣೆ ಮಾಡಿದೆ.

    ಜೆಡಿಎಸ್‍ನಿಂದ ಉಚ್ಛಾಟನೆಗೊಂಡ ಅಸಮಾಧಾನಿತರು ಬೆಂಗಳೂರಿನ ಕೆ.ಜೆ ಹಳ್ಳಿ ಬಳಿ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿದ್ದರು. ಈ ವೇಳೆ ದೇವೇಗೌಡರನ್ನು ಕೆಳಗಿಳಿಸಿ ಸಿ.ಕೆ.ನಾಣು (C.K Nanu) ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

    ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ನನ್ನ ನಿರ್ಣಯ ಅಲ್ಲ, ಇದು ರಾಷ್ಟ್ರೀಯ ಕೌನ್ಸಿಲ್ ನ ನಿರ್ಧಾರ. ಜಯಪ್ರಕಾಶ್ ನಾರಾಯಣರ ಸಿದ್ಧಾಂತದ ಮೇಲೆ ಜನತಾ ಪಕ್ಷ ಕಟ್ಟಲಾಯಿತು. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕವನ್ನ ನಾಣುರವರಿಗೆ ನೀಡಲಾಗಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತದೆ. ರಾಹುಲ್ ಗಾಂಧಿಯವರಿಗೂ ಆಹ್ವಾನ ನೀಡಲಾಗುತ್ತದೆ ಎಂದರು.

    ಅಖಿಲೇಶ್ ಯಾದವ್ (Akhilesh Yadav), ನಿತೀಶ್ ಕುಮಾರ್ (Nitish KUmar) ಕೂಡ ಬರುತ್ತಾರೆ. ಹಲವು ಹಿರಿಯರ ಆದರ್ಶ ನಮ್ಮ ಆದರ್ಶ. ಅದರ್ಶವಾದಿಗಳು ಸತ್ರೂ ಅವರ ಅದರ್ಶ ಶಾಶ್ವತವಾಗಿ ಇರುತ್ತದೆ. ಕೆಲವರು ಬದುಕಿದ್ರೂ, ಅದರ್ಶ ಬಿಟ್ಟು ಸತ್ತಂತೆ ಇರ್ತಾರೆ. 92ನೇ ವಯಸ್ಸಿನಲ್ಲಿ ತಮ್ಮ ಸಿದ್ಧಾಂತ ಬಿಟ್ಟು ಕೊಟ್ರಿ, 5 ಮಂದಿ ಶಾಸಕರು ನಮ್ಮ ಬಳಿ ಇದ್ದಾರೆ. ನಾನು ಹುಟ್ಟಿದ್ದು ಸಿದ್ಧಾಂತಕ್ಕಾಗಿ. ವಾಜಪೇಯಿಯವರು ಮಂತ್ರಿಯಾಗಲು ಕರೆದ್ರು ನಾ ಹೋಗಲಿಲ್ಲ, ರಾಜ್ಯಪಾಲರು ಆಗಲು ಕರೆದ್ರು ನಾ ಹೋಗಲಿಲ್ಲ ಎಂದರು. ಇದನ್ನೂ ಓದಿ: ಮುಂದಿನ ವರ್ಷದಿಂದ್ಲೇ ಶಾಲಾ ಮಕ್ಕಳಿಗೆ ಉಚಿತ ʻಸೈಕಲ್‌ ಭಾಗ್ಯʼ – ಮಧು ಬಂಗಾರಪ್ಪ ಭರವಸೆ

    ದೇವೆಗೌಡ್ರು (HD Devegowda) ಹೇಳಿದ್ರು ಸತ್ತವರ ಫೋಟೋ ಹಾಕಿದ್ದಾರೆ. ಜಯ ಪ್ರಕಾಶ್ ನಾರಾಯಣ್, ಗಾಂಧೀಜಿ, ರಾಮ ಕೃಷ್ಣ ಹೆಗಡೆ ಇವರು ಸತ್ರೂ ಸಿದ್ಧಾಂತಗಳಿಂದ ಜೀವಂತವಾಗಿರುತ್ತಾರೆ. ಅನ್ನೋದನ್ನ ತೋರಿಸ್ತೀವಿ. ಕೆಲವರು ಬದುಕಿದ್ರೂ ಸತ್ತ ಹೆಣಗಳು ಅನ್ನೋದನ್ನ ಹೇಳೊಕೆ ಇಷ್ಟಪಡ್ತೀನಿ. ಮಕ್ಕಳ ಹಿತಕ್ಕಾಗಿ…ಎರಡು ಸೀಟ್ ಗಾಗಿ ಸಿದ್ಧಾಂತ ಬಲಿ ಕೊಟ್ಟಿದ್ದೀರಿ. ನಾವು ಮೂರು ಅವಕಾಶ ಕೊಟ್ವಿ. ಕೊನೆಗೆ ಇವತ್ತು 11 ನೇ ತಾರೀಖು, ಅವರನ್ನ ಅಧ್ಯಕ್ಷಗಿರಿಯಿಂದ ತೆಗೆದು ಸಿಕೆ ನಾಣು ಅವರಿಗೆ ಅಧಿಕಾರ ಕೊಟ್ಟಿದ್ದೀವಿ ಎಂದು ಹೇಳಿದರು.

  • ಜೆಡಿಎಸ್ ಪಕ್ಷದಿಂದ ಸಿಎಂ ಇಬ್ರಾಹಿಂ ಉಚ್ಚಾಟನೆ ಅಧಿಕೃತ

    ಜೆಡಿಎಸ್ ಪಕ್ಷದಿಂದ ಸಿಎಂ ಇಬ್ರಾಹಿಂ ಉಚ್ಚಾಟನೆ ಅಧಿಕೃತ

    – ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತದ ತೀರ್ಮಾನ

    ಬೆಂಗಳೂರು: ಇಲ್ಲಿನ ಜೆ.ಪಿ ಭವನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡರ (HD DeveGowda) ನೇತೃತ್ವದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸಿ.ಎಂ ಇಬ್ರಾಹಿಂ (CM Ibrahim) ಅವರನ್ನು ಅಧಿಕೃತವಾಗಿ ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

    ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡು ಇಬ್ರಾಹಿಂ ಅವರನ್ನು ಉಚ್ಚಾಟನೆಗೊಳಿಸಲಾಗಿದೆ. ಇದನ್ನೂ ಓದಿ: ಕುಮಾರಸ್ವಾಮಿ ಬಿಜೆಪಿಯವರಿಗೆ ಬಕೆಟ್ ಹಿಡಿಯಲು ಹೋಗಿದ್ದಾರೆ: ಸಿಎಂ ಇಬ್ರಾಹಿಂ

    2024ರ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಘೋಷಣೆಯಾದಾಗಿನಿಂದಲೂ ಇಬ್ರಾಹಿಂ ಅವರು ಪಕ್ಷದ ವಿರುದ್ಧ, ಪಕ್ಷದ ನಾಯಕರಾದ ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಕೇರಳ ಸೇರಿದಂತೆ ವಿವಿಧ ಸಂಘಟನೆಗಳ ಜೊತೆ ಪಕ್ಷಕ್ಕೆ ವಿರುದ್ಧವಾಗಿ ಸಭೆ ಮಾಡಿದ್ದಾರೆ. ಅಲ್ಲದೇ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದರೂ ನಮ್ಮದೇ ಒರಿಜಿನಲ್ ಜೆಡಿಎಸ್ ಅಂತ ಪದೇ ಪದೇ ಹೇಳಿಕೊಂಡು ಬಂದಿದ್ದಾರೆ. ಈ ಎಲ್ಲ ಆರೋಪಗಳನ್ನು ಆಧಾರವಾಗಿಟ್ಟುಕೊಂಡು ಒಮ್ಮತದ ತೀರ್ಮಾನದೊಂದಿಗೆ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಲಾಗಿದೆ.

    ಇಬ್ರಾಹಿಂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಅವರನ್ನು ಅಮಾನತುಗೊಳಿಸಲಾಗಿತ್ತು. ಇಂದು (ಶನಿವಾರ) ಪಕ್ಷದಿಂದ ಉಚ್ಚಾಟನೆಗೊಳಿಸಿರುವುದಾಗಿ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಸಭೆಯ ಬಳಿಕ ತಿಳಿಸಿದ್ದಾರೆ. ಇದನ್ನೂ ಓದಿ: Breaking: ಜೆಡಿಎಸ್‌ ಪಕ್ಷದಿಂದ ಸಿಎಂ ಇಬ್ರಾಹಿಂ ಅಮಾನತು – ದೊಡ್ಡಗೌಡರ ಆದೇಶ

    ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಸಂಸದ ಪ್ರಜ್ವಲ್ ರೇವಣ್ಣ ಮಾತ್ರವಲ್ಲದೇ ಪಂಜಾಬ್, ಯುಪಿ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಪಶ್ಚಿಮ ಬಂಗಾಳದ ಜೆಡಿಎಸ್ ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರು ಭಾಗಿಯಾಗಿದ್ದರು.

  • ಕುಮಾರಸ್ವಾಮಿ ಬಿಜೆಪಿಯವರಿಗೆ ಬಕೆಟ್ ಹಿಡಿಯಲು ಹೋಗಿದ್ದಾರೆ: ಸಿಎಂ ಇಬ್ರಾಹಿಂ

    ಕುಮಾರಸ್ವಾಮಿ ಬಿಜೆಪಿಯವರಿಗೆ ಬಕೆಟ್ ಹಿಡಿಯಲು ಹೋಗಿದ್ದಾರೆ: ಸಿಎಂ ಇಬ್ರಾಹಿಂ

    ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿಯವರಿಗೆ (BJP) ಬಕೆಟ್ ಹಿಡಿಯಲು ಹೋಗಿದ್ದಾರೆ. ಬಿಜೆಪಿ ಮೈತ್ರಿಯಿಂದ ಅಶೋಕ್, ಯಡಿಯೂರಪ್ಪ ಮಗನ ಹಿಂದೆ ನೀವು ಓಡಾಡ್ಬೇಕು ಅಷ್ಟೇ ಎಂದು ಸಿಎಂ ಇಬ್ರಾಹಿಂ (CM Ibrahim) ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಸಿಎಂ ಇಬ್ರಾಹಿಂ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿಯವರೇ ಮೊದಲು ನಿಮ್ಮ ಆರೋಗ್ಯ ನೋಡಿಕೊಳ್ಳಿ. ನೀವು ಕೇಶವ ಕೃಪದಲ್ಲಿ ಬಾಳಲಾರಿರಿ. ನೀವು ಏನು, ನಿಮ್ಮ ಮನಸ್ಥಿತಿ ಏನು ಅನ್ನೋದು ನನಗೆ ಗೊತ್ತಿದೆ. ಮತ್ತೆ ನೀವು ಇಲ್ಲಿಗೇ ಬರಬೇಕು, ಬೇರೆ ವಿಧಿಯಿಲ್ಲ ಎಂದು ಕಾಲೆಳೆದಿದ್ದಾರೆ.

    ದೇವೇಗೌಡರಿಗೆ ವಯಸ್ಸಾಗಿದೆ, ಸ್ವಯಂ ನಿರ್ಧಾರ ತೆಗೆದುಕೊಳ್ಳಲಾರರು. ಐವರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಜನವರಿ ನಂತರ ಒಂದು ಅಂತಿಮ ತೀರ್ಮಾನ ತಿಳಿಸುತ್ತೇವೆ. ದೇವೆಗೌಡರು, ಕುಮಾರಸ್ವಾಮಿಯವರ ಆರೋಗ್ಯದ ದೃಷ್ಠಿಯಿಂದ ನಾನು ಕೆಲಸ ನಿಧಾನಕ್ಕೆ ಮಾಡುತ್ತಿದ್ದೇನೆ. ಅವರಿಗೆ ಟೆನ್ಷನ್ ಕೊಡಬಾರದು ಅಂತ ಕೆಲಸ ನಿಧಾನ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಕನ್ನಡದ ಹೆಸರಾಂತ ನಟಿ ಲೀಲಾವತಿ ನಿಧನ

    ನನ್ನನ್ನು ಯಾರೂ ಉಚ್ಚಾಟನೆ ಮಾಡಿಲ್ಲ. ನಮ್ಮಪ್ಪ ನನ್ನ ಜೆಡಿಎಸ್ ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ. 9 ಕ್ಕೆ ಅವರು ಮೀಟಿಂಗ್ ಕರೆದಿದ್ದಾರೆ. ಅವರ ಮೀಟಿಂಗ್‌ಗೆ ಯಾರು ಬರ್ತಾರೆ, ನಮ್ಮ ಮೀಟಿಂಗ್‌ಗೆ ಯಾರು ಬರ್ತಾರೆ ಅಂತ ನೋಡಿ. ನಾನು ಯಾವ ಶಾಸಕರನ್ನೂ ಸಭೆಗೆ ಕರೆದಿಲ್ಲ. 5 ಮಂದಿ ಶಾಸಕರು ನಮ್ಮ ಜೊತೆಗೆ ಇದ್ದಾರೆ. ಅದರೆ 12 ಜನ ಆಗಲಿ ಎಂದು ಕಾಯುತ್ತಿದ್ದೇನೆ. 12 ಜನ ಬಂದ ಕೂಡಲೇ ನಾನೇ ಪ್ರೆಸ್‌ಮೀಟ್ ಮಾಡುತ್ತೇನೆ. ನನ್ನನ್ನು ಕುಮಾರಸ್ವಾಮಿ ಯಾವ ಮೀಟಿಂಗ್‌ಗೂ ಕರೆದಿಲ್ಲ ಎಂದು ತಿಳಿಸಿದರು.

    ನಾನು ಅಮಿತ್ ಶಾಗೆ ಕೇಳ್ತಿದ್ದೆ. ನಮ್ಮ ಜಾತ್ಯತೀತ ತತ್ವ ಒಪ್ತೀರ ಅಂತ. ಕುಮಾರಸ್ವಾಮಿಯವರೇ ನೀವು ಅಶೋಕ್, ಯಡಿಯೂರಪ್ಪ ಮಗನ ಹಿಂದೆ ಓಡಾಡ್ಬೇಕು. ಬಿಜೆಪಿಯವರೇ ಅವರ ಹಿಂದೆ ನಿಲ್ಲೋಕೆ ರೆಡಿ ಇಲ್ಲ. ಅದರೆ ನೀವು ಅವರ ಹಿಂದೆ ನಿಲ್ಲೋಕೆ ರೆಡಿಯಾಗಿದ್ದೀರಿ. ಎಲ್ಲರಿಗೂ ಬಕೆಟ್ ಹಿಡಿಯಲು ಕುಮಾರಸ್ವಾಮಿ ಹೋಗಿದ್ದಾರೆ. ಕುಮಾರಸ್ವಾಮಿ ನನ್ನ ಬ್ರದರ್, ಅವರ ಮೇಲೆ ಕೋಪ ಇಲ್ಲ. ಅವರಿಗೆ ಗೊತ್ತಾಗುತ್ತದೆ ಅವರ ಜೊತೆ ಹೋಗಿದ್ದು ತಪ್ಪು ಅಂತ ಎಂದರು.

    ಕುಮಾರಸ್ವಾಮಿ ದತ್ತಮಾಲೆ ಹಾಕ್ತೀನಿ ಅಂದಿದ್ದಾರೆ. ಸಂತೋಷ, ಹಾಕಿ. 15 ದಿನ ಅಲ್ಲ, ವರ್ಷಪೂರ್ತಿ ಹಾಕಿ. ಅಯ್ಯಪ್ಪ ಮಾಲೆಯನ್ನೂ ಹಾಕಿ. ಮಾಲೆ ಹಾಕಿದಾಗ ಯಾರೂ ಸುಳ್ಳು ಹೇಳೋಹಾಗಿಲ್ಲ ಎಂದು ಸಿಎಂ ಇಬ್ರಾಹಿಂ ಕುಮಾರಸ್ವಾಮಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲ್ಲ- ಜಮೀರ್ ಮೇಲ್ಮನವಿ ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂ

  • ಪುತ್ರನ ಚುನಾವಣೆಗೆ ಸಿಎಂ ಇಬ್ರಾಹಿಂ ನನ್ನಿಂದ ಹಣ ಪಡೆದಿದ್ದಾರೆ: ಟಿಎ ಶರವಣ

    ಪುತ್ರನ ಚುನಾವಣೆಗೆ ಸಿಎಂ ಇಬ್ರಾಹಿಂ ನನ್ನಿಂದ ಹಣ ಪಡೆದಿದ್ದಾರೆ: ಟಿಎ ಶರವಣ

    ಬೆಂಗಳೂರು: ಸಿಎಂ ಇಬ್ರಾಹಿಂ (CM Ibrahim) ಅವರ ಮಗನ ಚುನಾವಣೆಗೆ ನನ್ನಿಂದ ಆರ್ಥಿಕ ಸಹಾಯ ಪಡೆದಿದ್ದಾರೆ ಎಂದು ಪರಿಷತ್ ಸದಸ್ಯ ಶರವಣ (T A Sharavana) ವಾಗ್ದಾಳಿ ನಡೆಸಿದ್ದಾರೆ.

    ಎಂಎಲ್‌ಸಿ (MLC) ಮಾಡೋಕೆ ಶರವಣರಿಂದ ಕುಮಾರಸ್ವಾಮಿ ಹಣ ಪಡೆದಿಲ್ಲ ಅಂತ ಮಗನ ಮೇಲೆ ತಲೆ ಕೈ ಇಟ್ಟು ಆಣೆ ಮಾಡಿ ಎಂಬ ಇಬ್ರಾಹಿಂ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಬೇರೆ ಪಕ್ಷದಿಂದ ಬಂದವನಲ್ಲ. ಸಮಯಕ್ಕೆ ತಕ್ಕಂತೆ ಪಕ್ಷ ಬದಲಾವಣೆ ಮಾಡೋನೂ ನಾನಲ್ಲ. 25 ವರ್ಷಗಳಿಂದ ದೇವೇಗೌಡ, ಕುಮಾರಸ್ವಾಮಿ (HD Kumaraswamy) ಜೊತೆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತಿದ್ದೇನೆ. ನನ್ನ ರಕ್ತವೇ ಜೆಡಿಎಸ್ ಆಗಿದೆ. ಅಧಿಕಾರಕ್ಕಾಗಿ ಯಾವುದೇ ಪಕ್ಷಕ್ಕೆ ಹೋಗಲ್ಲ. ವಿರೋಧ ಪಕ್ಷ ನಾಯಕ ಮಾಡಿಲ್ಲ ಅಂತ ಹೀಗೆ ಮಾತನಾಡುತ್ತಿದ್ದಾರಾ? ಕಾಂಗ್ರೆಸ್‌ನಲ್ಲಿ (Congress) ಅಧಿಕಾರ ಕೊಡಲಿಲ್ಲ ಅಂತ ಜೆಡಿಎಸ್‌ಗೆ ಬಂದ್ರಿ. ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇದ್ದಾಗ ಇಬ್ರಾಹಿಂ ಕೇಳಿಯೇ ಎಲ್ಲವನ್ನು ವರಿಷ್ಠರು ಮಾಡಿದ್ದರು. ದೇವೇಗೌಡರು ನನ್ನ ತಂದೆ ಸಮಾನ ಎಂದು ಹೇಳಿದ್ದಿರಿ. ಎಂಎಲ್‌ಸಿ ಸ್ಥಾನಕ್ಕೆ ನನ್ನ ಹೆಸರು ಘೋಷಣೆ ಮಾಡಿದ್ದು ಇಬ್ರಾಹಿಂ. ಈಗ ಯಾಕೆ ಹೀಗೆ ಮಾತನಾಡುತ್ತಿದ್ದೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜಸ್ಥಾನ ವಿಧಾನಸಭೆ ಚುನಾವಣೆ – 7 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್

    ನಿಮ್ಮ ಮಗನಿಗೆ ಹುಮ್ನಾಬಾದ್‌ನಲ್ಲಿ ಟಿಕೆಟ್ ಕೊಟ್ಟಿದ್ದು ಪುತ್ರ ವ್ಯಾಮೋಹ ಅಲ್ಲವಾ? ಕುಮಾರಸ್ವಾಮಿ ಪಕ್ಷ ನಡೆಸೋಕೆ ನನ್ನಂತಹ ಕಾರ್ಯಕರ್ತರನ್ನು ಬೆಳೆಸಿದ್ದಾರೆ. ಪಕ್ಷಕ್ಕೆ ತನು ಮನ, ಧನ ಸಹಾಯ ಮಾಡಿರುತ್ತೇವೆ. ಅದನ್ನು ಹಣ ಪಡೆದಿದ್ದಾರೆ ಅಂದರೆ ಹೇಗೆ? ಕುಮಾರಸ್ವಾಮಿ ಮನೆ ಕಟ್ಟೋಕೆ ಹಣ ಬಳಸಿಕೊಂಡಿಲ್ಲ. ಪಕ್ಷಕ್ಕಾಗಿ ಹಣ ಬಳಕೆ ಮಾಡಿದ್ದಾರೆ. ನಿಮ್ಮ ಮಗನ ಚುನಾವಣೆಗೆ ಸಹಾಯ ಮಾಡಿ ಅಂದಾಗ ನಾನು ನಿಮಗೆ ಆರ್ಥಿಕ ಸಹಾಯ ಮಾಡಿರಲಿಲ್ಲವಾ? ಪಕ್ಷ ಕಟ್ಟೋಕೆ ನಮ್ಮಂತಹವರಿಂದ ಕುಮಾರಸ್ವಾಮಿ ಪಡೆದಿದ್ದಾರೆ. ನಾವು ಪಕ್ಷ ಕಟ್ಟೋಕೆ ಕೈಲಾದ ಸೇವೆ ಮಾಡಿರುತ್ತೇವೆ. ಅದನ್ನು ಕುಮಾರಸ್ವಾಮಿ ಹಣ ತೆಗೆದುಕೊಂಡರು ಎನ್ನುತ್ತೀರಾ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಮಾತಾಡೋಕೆ ಯಾರಿಗೂ ಯೋಗ್ಯತೆ ಇಲ್ಲ: ನರೇಂದ್ರಸ್ವಾಮಿ

    ಜೆಪಿ ಭವನ ಕಟ್ಟಿದಾಗ ಮೊದಲು 10 ಲಕ್ಷ ರೂ. ಚೆಕ್ ಕೊಟ್ಟಿದ್ದೇನೆ. ನಿಮ್ಮ ಮಗನ ಚುನಾವಣೆಗೆ ಹಣ ಕೊಟ್ಟಿಲ್ಲವಾ ನಾನು. ಈಗ ಕುಮಾರಸ್ವಾಮಿ ಮಗನ ಮೇಲೆ ಆಣೆ ಮಾಡಿ ಎನ್ನುತ್ತಿದ್ದೀರಿ. ಇದು ಸರಿಯಾದ ವರ್ತನೆ ಅಲ್ಲ. ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟು ಇವತ್ತು ಕುಮಾರಸ್ವಾಮಿ ವಿರುದ್ಧ ಮಾತನಾಡುತ್ತಿದ್ದೀರಿ. ಅನೇಕ ವರ್ಷಗಳಿಂದ ಅಪ್ಪಾಜಿ ಕ್ಯಾಂಟೀನ್ ನಡೆಸುತ್ತಿದ್ದೇನೆ. ಪಕ್ಷದಿಂದ ಹೊರಗೆ ಹೋಗಿದ್ದೀರಿ. ನಿಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಿ ಎಂದರು. ಇದನ್ನೂ ಓದಿ: ಬಿಜೆಪಿಯವ್ರು ಹೇಳಿದ್ರೆ ಕುಮಾರಸ್ವಾಮಿ ಚಡ್ಡಿನೂ ಹಾಕ್ತಾರೆ, ದತ್ತ ಮಾಲೆನೂ ಹಾಕ್ತಾರೆ: ಚಲುವರಾಯಸ್ವಾಮಿ