Tag: CM Devendra Fadnavis

  • ಮುಂದಿನ ಕುಂಭಮೇಳ ಎಲ್ಲಿ ನಡೆಯುತ್ತೆ? – ಈಗಲೇ ತಯಾರಿ ಆರಂಭಿಸಿದ ಸರ್ಕಾರ

    ಮುಂದಿನ ಕುಂಭಮೇಳ ಎಲ್ಲಿ ನಡೆಯುತ್ತೆ? – ಈಗಲೇ ತಯಾರಿ ಆರಂಭಿಸಿದ ಸರ್ಕಾರ

    ಮುಂಬೈ: 2027ರಲ್ಲಿ ಪೂರ್ಣ ಕುಂಭಮೇಳವು (Kumbh Mela) ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nasik) ನಡೆಯಲಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ತಿಳಿಸಿದ್ದಾರೆ.

    ಮುಂಬೈನಲ್ಲಿ ನಡೆದ ನಾಸ್ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2027ರಲ್ಲಿ, ನಾವು ನಾಸಿಕ್‌ನಲ್ಲಿ ಕುಂಭಮೇಳವನ್ನು ನಡೆಸುತ್ತೇವೆ. ಪ್ರಯಾಗ್‌ರಾಜ್ ಕುಂಭವನ್ನು 15,000 ಹೆಕ್ಟೇರ್ ಪ್ರದೇಶದಲ್ಲಿ ಆಯೋಜಿಸಲಾಗಿತ್ತು ಮತ್ತು ನಾಸಿಕ್‌ನಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ನಡೆಸುತ್ತೇವೆ. 2015ರಲ್ಲಿ ಕುಂಭಮೇಳ ಆಯೋಜಿಸಿದ ಅನುಭವ ನನಗಿದೆ. ಆದರೆ ನಾಸಿಕ್‌ನಲ್ಲಿ ನಡೆಯುವ ಕುಂಭಮೇಳವು ತಾಂತ್ರಿಕವಾಗಿ ಮುಂದುವರಿದ ಕುಂಭವಾಗಲಿದೆ ಎಂದರು. ಇದನ್ನೂ ಓದಿ: `ಪುಟ್ಟಕ್ಕ’ ಉಮಾಶ್ರೀ ಹೋರಾಟಕ್ಕೆ ನಟ ರವಿಚಂದ್ರನ್ ಸಾಥ್

    2027ರ ಪೂರ್ಣ ಕುಂಭಮೇಳವು ನಾಸಿಕ್‌ನಿಂದ ಸುಮಾರು 38 ಕಿ.ಮೀ ದೂರದಲ್ಲಿರುವ ಗೋದಾವರಿ ನದಿಯ ದಡದಲ್ಲಿರುವ ತ್ರಯಂಬಕೇಶ್ವರದಲ್ಲಿ ನಡೆಯಲಿದೆ. ನಾಸಿಕ್ ಕುಂಭಮೇಳವು 2027ರ ಜು.17 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 17ರಂದು ಕೊನೆಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

    ಮಹಾರಾಷ್ಟ್ರ ಸರ್ಕಾರವು 2027ರಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಈಗಾಗಲೇ ತಯಾರಿಯನ್ನು ನಡೆಸುತ್ತಿದೆ. ರಸ್ತೆ, ಸಂಚಾರ ನಿರ್ವಹಣೆ ಮತ್ತು ಸಂಪರ್ಕವನ್ನು ಯೋಜನೆಗಳನ್ನು ಚರ್ಚಿಸಲು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೀಷಾ ಪತಂಕರ್ ಮಹೈಸ್ಕರ್ ನಾಸಿಕ್‌ಗೆ ಭೇಟಿ ನೀಡಿದ್ದರು. ಪಾರ್ಕಿಂಗ್ ಪ್ರದೇಶದಿಂದ ಕುಂಭಸ್ಥಳಕ್ಕೆ ಯಾತ್ರಿಕರನ್ನು ಕರೆದೊಯ್ಯಲು ವಿಶೇಷ ಬಸ್‌ಗಳನ್ನು ವ್ಯವಸ್ಥೆಗೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.

    ನಾಸಿಕ್ ಮಹಾನಗರ ಪಾಲಿಕೆಯು ಮೂಲಸೌಕರ್ಯ ಸುಧಾರಣೆಗಾಗಿ 7,500 ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಕುಂಭಮೇಳದ ಪೂರ್ವತಯಾರಿ ಕಾರ್ಯವು ಎಪ್ರಿಲ್‌ನಿಂದ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡಿಕೆಶಿಗೆ ಕರಿಬೆಕ್ಕುಗಳ ಕಾಟ, ಕರ್ನಾಟಕದಲ್ಲಿ ಡಿಕೆಶಿ ಕೂಡ ಒಬ್ಬ ಏಕನಾಥ್ ಶಿಂಧೆ : ಆರ್.ಅಶೋಕ್

  • ಮಹಾ ಸಿಎಂ ಭೇಟಿ ಬಳಿಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಅಣ್ಣಾ ಹಜಾರೆ

    ಮಹಾ ಸಿಎಂ ಭೇಟಿ ಬಳಿಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಅಣ್ಣಾ ಹಜಾರೆ

    ನವದೆಹಲಿ: ಲೋಕಪಾಲ ರಚನೆ, ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ನೇಮಕ ಹಾಗೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಸತ್ಯಾಗ್ರಹ ಆರಂಭಿಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.

    ಇಂದು ದೆಹಲಿಯ ರಾಮಲೀಲಾ ಮೈದಾನಕ್ಕೆ ಭೇಟಿ ನೀಡಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಜೊತೆ ಚರ್ಚೆ ನಡೆಸಿದ ಬಳಿಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

    ಈ ವೇಳೆ ಮಾತನಾಡಿದ ಅಣ್ಣಾ ಹಜಾರೆ ಅವರು, ಲೋಕಪಾಲ ರಚನೆ ವಿವಾದ ಇನ್ನೂ ಬಾಕಿ ಉಳಿದಿದೆ. ಸಿಎಂ ಫಡ್ನವೀಸ್ ಅವರು ವಿವಾದವನ್ನು ಇನ್ನೂ 6 ತಿಂಗಳಲ್ಲಿ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಸರ್ಕಾರದ ಮತ್ತು ಪ್ರಜೆಗಳು ಬೇರೆ ಅಲ್ಲ. ಜನರಿಗೆ ಒಳ್ಳೆಯದು ಮಾಡುವುದು ಸರ್ಕಾರ ಕರ್ತವ್ಯ ಎಂದು ಹೇಳಿದರು.

    ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವ ಗಜೇಂದ್ರ ಸಿಂಗ್ ಶೆಖಾವಾತ್ ಅವರು ಸಾಥ್ ನೀಡಿದ್ದರು.

  • ಸರ್ಕಾರದ ವಿರುದ್ಧ ಬೀದಿಗಿಳಿದ ರೈತರು – ಪ್ರತಿಭಟನೆಯ ಮಾದರಿಯನ್ನು ಶ್ಲಾಘಿಸಿದ ಮಹಾರಾಷ್ಟ್ರ ಸಿಎಂ

    ಸರ್ಕಾರದ ವಿರುದ್ಧ ಬೀದಿಗಿಳಿದ ರೈತರು – ಪ್ರತಿಭಟನೆಯ ಮಾದರಿಯನ್ನು ಶ್ಲಾಘಿಸಿದ ಮಹಾರಾಷ್ಟ್ರ ಸಿಎಂ

    ಮುಂಬೈ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಡಳಿತರೂಢ ಬಿಜೆಪಿ ಸರ್ಕಾರ ವಿರುದ್ಧ ಮಹಾರಾಷ್ಟ್ರ ರೈತರು ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆಯ ಮಾದರಿಯನ್ನು ಮಹಾರಾಷ್ಟ್ರ ಸಿಎಂ ಶ್ಲಾಘಿಸಿದ್ದಾರೆ.

    ರೈತರ ಪ್ರತಿಭಟನೆ ಕುರಿತು ವಿಧಾನಸಭೆಯಲ್ಲಿ ಪ್ರತಿ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಅವರು, ಮಹಾರಾಷ್ಟ್ರ ರೈತರ ಪ್ರತಿಭಟನೆ ದೇಶಕ್ಕೆ ಮಾದರಿಯಾಗಿದ್ದು, ರೈತರ ಎಲ್ಲಾ ಬೇಡಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾವುದು ಎಂದು ಆಶ್ವಾಸನೆ ನೀಡಿದ್ದಾರೆ.

    ಕಳೆದ ಆರು ದಿನಗಳಿಂದ ಸಾವಿರಾರು ರೈತರು ನಸೀಕ್ ಜಿಲ್ಲೆಯಿಂದ ಮುಂಬೈ ವರೆಗೂ ಸುಮಾರು 180 ಕಿಮೀ ದೂರವನ್ನು `ಕಿಸಾನ್ ಲಾಂಗ್ ಮಾರ್ಚ್’ ಹೆಸರಿನಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಿ ಪ್ರತಿಭಟನೆ ನಡೆಸಿದ್ದರು.

    ಪ್ರಸ್ತುತ ಮಹಾರಾಷ್ಟ್ರದಲ್ಲಿ ಸೋಮವಾರ ದಿಂದ ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆಗಳು ನಡೆಯುತ್ತಿದ್ದು, ಬೃಹತ್ ರೈತರ ಪ್ರತಿಭಟನೆ ದೈನಂದಿನ ಜೀವನಕ್ಕೆ ಧಕ್ಕೆ ತರುವ ಸಾಧ್ಯತೆ ಇತ್ತು. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸುಮಾರು 50 ಸಾವಿರಕ್ಕೂ ಅಧಿಕ ರೈತರು ರಾತ್ರಿ ವೇಳೆ, ಯಾವುದೇ ಘೋಷಣೆಗಳನ್ನು ಕೂಗದೆ ತಮ್ಮ ಯಾತ್ರೆಯನ್ನು ಕೈಗೊಂಡಿದ್ದರು. ಈ ಮೂಲಕ ಪರೀಕ್ಷೆ ಎದುರಿಸಲು ಒಂದು ವರ್ಷದಿಂದ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನಡೆದುಕೊಂಡಿದ್ದರು.

    ರೈತರು ತಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರೂ ಸಹ ಅವರ ಈ ಕ್ರಮಕ್ಕೆ ಫಡ್ನಾವಿಸ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರೈತರ ಬೇಡಿಕೆಗಳನ್ನು ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದಾರೆ. ರೈತರ ಈ ಮಾದರಿ ಪ್ರತಿಭಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಹಲವರು ಪ್ರತಿಭಟನೆಗೆ ಸಾಥ್ ನೀಡಿ ಟ್ವೀಟ್ ಮಾಡಿದ್ದಾರೆ.

    ರೈತರು ಪ್ರಮುಖವಾಗಿ ಸಾಲ ಮನ್ನಾ, ಬೆಳೆ ನಷ್ಟ ಪರಿಹಾರ ಹಾಗೂ ತಾವು ಬೆಳೆಯುವ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವಂತಹ ಹಲವು ಬೇಡಿಕೆಗಳನ್ನು ಮುಂಡಿಟ್ಟು ಪ್ರತಿಭಟನೆ ನಡೆಸಿದ್ದಾರೆ.

    ಈ ಪ್ರತಿಭಟನೆಯೂ ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್) ಹಾಗೂ ಸಿಪಿಐ(ಎಂ) ಪಕ್ಷದ ಮುಂದಾಳತ್ವದಲ್ಲಿ ಕೈಗೊಳ್ಳಲಾಗಿದೆ. ಕೈಯಲ್ಲಿ ಕೆಂಪು ಧ್ವಜ ಹಿಡಿದ ಸಾವಿರರು ರೈತರು ಮುಂಬೈ ತಲುಪಿ ತಮ್ಮ ಸಮಸ್ಯೆಗಳ ಕುರಿತು ಸರ್ಕಾರದ ಗಮನವನ್ನು ಸೆಳೆದಿದ್ದಾರೆ.

     

    https://twitter.com/ranveer_78/status/973049081084854273?

  • ಮಹದಾಯಿ ಸಂಧಾನಕ್ಕೆ ಸಮಯ, ಸ್ಥಳ ನಿಗದಿ ಮಾಡಿ ಹೇಳಿ – ಫಡ್ನವಿಸ್‍ಗೆ ಸಿಎಂ ಪತ್ರ

    ಮಹದಾಯಿ ಸಂಧಾನಕ್ಕೆ ಸಮಯ, ಸ್ಥಳ ನಿಗದಿ ಮಾಡಿ ಹೇಳಿ – ಫಡ್ನವಿಸ್‍ಗೆ ಸಿಎಂ ಪತ್ರ

    ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ಸಂಧಾನ ಚರ್ಚೆ ನಡೆಸಲು ಸಮಯ ಹಾಗೂ ಸ್ಥಳವನ್ನು ನಿಗದಿ ಮಾಡಿ ತಿಳಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

    ಮಹದಾಯಿ ಸಮಸ್ಯೆ ಕುರಿತು ಚರ್ಚೆ ನಡೆಸಲು ಈಗಾಗಲೇ ಗೋವಾ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಪತ್ರದಲ್ಲಿ ಸ್ಪಷ್ಟಪಡಿಸಿಲಾಗಿದ್ದು, ಮಾತುಕತೆ ಮೂಲಕ ಮಹದಾಯಿ ವಿವಾದ ಬಗೆಹರಿಸಿಕೊಳ್ಳುವ ಅಗತ್ಯತೆ ಇದೆ. ನ್ಯಾಯಾಧಿಕರಣದ ವಿಚಾರಣೆಯು 2018 ಫೆಬ್ರವರಿ 06 ರಿಂದ 21 ರ ಒಳಗೆ ನಡೆಯಲಿದ್ದು ಈ ಅವಧಿಗೂ ಮುನ್ನ ವಿವಾದ ಬಗೆಹರಿಸಿಕೊಳ್ಳಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಉತ್ತರ ಕನ್ನಡದ ನೀರಿನ ಸಮಸ್ಯೆ ಬಗೆ ಹರಿಸುವ ಮಹದಾಯಿ ನದಿ ಹಂಚಿಕೆ ವಿವಾದ ಕುರಿತು ಗೋವಾ ಸಿಎಂ ಮನೋಹರ್ ಪರಿಕ್ಕರ್ ಸಂಧಾನ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದರು. ಈ ಹೇಳಿಕೆ ಉತ್ತರವಾಗಿ ಸಿಎಂ ಸಿದ್ದರಾಮಯ್ಯ ಅವರು ಗೋವಾ ಸರ್ಕಾರಕ್ಕೆ ಮಾತುಕತೆ ನಡೆಸುವಂತೆ ಪತ್ರ ಬರೆದಿದ್ದರು.