Tag: CM Arvind Kejriwal

  • ದೆಹಲಿಯಲ್ಲಿ ಅನ್‍ಲಾಕ್ ಆರಂಭ – ಸಿಎಂ ಕೇಜ್ರಿವಾಲ್ ಘೋಷಣೆ

    ದೆಹಲಿಯಲ್ಲಿ ಅನ್‍ಲಾಕ್ ಆರಂಭ – ಸಿಎಂ ಕೇಜ್ರಿವಾಲ್ ಘೋಷಣೆ

    ನವದೆಹಲಿ: ದೇಶದ ರಾಜಧಾನಿ ಜನತೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಶುಭ ಸುದ್ದಿ ನೀಡಿದ್ದು, ಅನ್‍ಲಾಕ್ ಪ್ರಕ್ರಿಯೆ ಆರಂಭಿಸಿದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆ ಕೆಲವೊಂದು ವಲಯಗಳ ಪುನಾರಾರಂಭಕ್ಕೆ ಷರತ್ತುಬದ್ಧ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    ದೊಡ್ಡ ಪರಿಶ್ರಮದಿಂದಾಗಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಆದ್ರೆ ಹೋರಾಟದ ಪೂರ್ಣ ಗೆಲುವು ಸಿಕ್ಕಿಲ್ಲ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯ ಲಾಕ್‍ಡೌನ್ ಹಂತ ಹಂತವಾಗಿ ಅನ್‍ಲಾಕ್ ಮಾಡಲಾಗುತ್ತದೆ. ಮೊದಲಿಗೆ ಬಡವರು, ದಿನಗೂಲಿ ನೌಕರರು ಮತ್ತು ಪ್ರವಾಸಿ ಕಾರ್ಮಿಕರಿಗೆ ಆದ್ಯತೆ. ಹಾಗಾಗಿ ಸೋಮವಾರದಿಂದ ಕಟ್ಟಡ ಕಾಮಗಾರಿ ಮತ್ತು ಫ್ಯಾಕ್ಟರಿಗಳನ್ನು ತೆರೆಯಬಹುದಾಗಿದೆ. ಮುಂದಿನ ವಾರ ಮತ್ತೆ ಎರಡು ವಲಯಗಳು ಅನ್‍ಲಾಕ್ ಆಗಲಿವೆ ಎಂದು ಸಿಎಂ ತಿಳಿಸಿದ್ದಾರೆ.

    ಈ ವಾರದ ಅನ್‍ಲಾಕ್ ಬಳಿಕ ಜನರು ಮತ್ತು ತಜ್ಞರ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ಕೊರೊನಾ ಪಸರಿಸುವ ಪ್ರಮಾಣ ಏರಿಕೆಯಾದ್ರೆ ಅನ್‍ಲಾಕ್ ಪ್ರಕ್ರಿಯೆಯನ್ನ ರದ್ದುಗೊಳಿಸಲಾಗುವುದು. ಹಾಗಾಗಿ ದೆಹಲಿ ಜನತೆ ಅನ್‍ಲಾಕ್ ನಲ್ಲಿ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರದ ಜೊತೆ ಕೈ ಜೋಡಿಸಬೇಕೆಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.

  • ದೆಹಲಿಯಲ್ಲಿ ಮೇ 17ರವರೆಗೆ ಲಾಕ್‍ಡೌನ್ ವಿಸ್ತರಣೆ

    ದೆಹಲಿಯಲ್ಲಿ ಮೇ 17ರವರೆಗೆ ಲಾಕ್‍ಡೌನ್ ವಿಸ್ತರಣೆ

    ನವದೆಹಲಿ: ಕೊರೊನಾ ನಿಯಂತ್ರಣ ಹಿನ್ನೆಲೆ ದೇಶದ ರಾಜಧಾನಿ ನವದೆಹಲಿಯ ಲಾಕ್‍ಡೌನ್ ಅವಧಿಯನ್ನ ಮೇ 17ರವರೆಗೆ ವಿಸ್ತರಿಸಲಾಗಿದೆ. ಇಂದು ಬೆಳಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲಾಕ್‍ಡೌನ್ ವಿಸ್ತರಿಸೋದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮೇ 10ರಂದು ದೆಹಲಿ ಲಾಕ್‍ಡೌನ್ ಅಂತ್ಯವಾಗಲಿತ್ತು. ಆದ್ರೆ ಮಹಾಮಾರಿಯ ರೌದ್ರ ನರ್ತನ ಕಡಿಮೆಯಾಗದ ಹಿನ್ನೆಲೆ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು. ಈ ಹಿಂದಿನ ಮಾರ್ಗಸೂಚಿಗಳೇ ಮುಂದುವರಿಯಲಿವೆ. ಸೋಮವಾರದಿಂದ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗುತ್ತಿದೆ.

    ಲಾಕ್‍ಡೌನ್ ಘೋಷಣೆಯಿಂದ ಒಳ್ಳೆಯ ಪರಿಣಾಮ ಬಂದಿದ್ದು, ಹಂತ ಹಂತವಾಗಿ ಕೊರೊನಾ ತೀವ್ರತೆ ಇಳಿಕೆಯಾಗ್ತಿದೆ. ಏಪ್ರಿಲ್ 26ರ ನಂತರ ಹೊಸ ಪ್ರಕರಣಗಳ ಸಂಖ್ಯೆಯೂ ಸಹ ಇಳಿಕೆಯಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಸೋಂಕಿನ ತೀವ್ರತೆ ಶೇ.35 ರಿಂದ ಶೇ.23ಕ್ಕೆ ಬಂದಿದೆ. ಕೊರೊನಾ ನಿಯಂತ್ರಣಕ್ಕಾಗಿ ಮತ್ತಷ್ಟು ದಿನ ಲಾಕ್‍ಡೌನ್ ಅನಿವಾರ್ಯವಾಗಲಿದೆ ಎಂದು ಅರವಿಂದ ಕೇಜ್ರಿವಾಲ್ ಸರ್ಕಾರ ಹೇಳಿದೆ.

    ಸೋಂಕಿನ ಪಸರಿಸುವ ಪ್ರಮಾಣ ಕಡಿಮೆಯಾಗ್ತಿದೆಯಂತ ನಿಯಮಗಳನ್ನ ಸಡಿಲಗೊಳಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಕೊರೊನಾ ನಿಯಮಗಳನ್ನ ಪಾಲಿಸೋದರೊಂದಿಗೆ ಸರ್ಕಾರದ ಪ್ರಯತ್ನಕ್ಕೆ ಕೈಜೋಡಿಸಬೇಕು. ಇಲ್ಲವಾದಲ್ಲಿ ಇಷ್ಟು ದಿನದ ಲಾಕ್‍ಡೌನ್ ವ್ಯರ್ಥವಾಗಲಿದೆ. ಎರಡನೇ ಅಲೆ ಭಯಾನಕವಾಗಿದ್ದು, ಜೀವ ಇದ್ದರೆ ಜೀವನದಲ್ಲಿ ಏನಾದ್ರೂ ಮಾಡಿಕೊಳ್ಳಬಹುದು. ಹಾಗಾಗಿ ನಿಮ್ಮ ಜೀವನಕ್ಕಾಗಿ ಮನೆಯಲ್ಲಿಯೇ ಆರೋಗ್ಯದಿಂದಿರಿ ಎಂದು ಸಿಎಂ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ದೆಹಲಿ ಸರ್ಕಾರದಿಂದ ‘ಮನೆ ಮನೆಗೆ ಪಡಿತರ ಯೋಜನೆ’

    ದೆಹಲಿ ಸರ್ಕಾರದಿಂದ ‘ಮನೆ ಮನೆಗೆ ಪಡಿತರ ಯೋಜನೆ’

    -ಅಂಗಡಿಗಳ ಮುಂದೆ ಕ್ಯೂ ನಿಲ್ಲುವಂತಿಲ್ಲ
    -ಕೇಜ್ರಿವಾಲ್ ಸರ್ಕಾರದಿಂದ ಮಹತ್ವದ ಘೋಷಣೆ

    ನವದೆಹಲಿ: ದೆಹಲಿಯ ಸರ್ಕಾರ ಪಡಿತರವನ್ನು ಫಲಾನುಭವಿಗಳಿಗೆ ಮನೆಗೆ ತಲುಪಿಸಲಾಗುವುದು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.

    ಮುಖ್ಯಮಂತ್ರಿ ಮನೆ ಮನೆಗೆ ಪಡಿತರ ಯೋಜನೆಗೆ ಅರವಿಂದ್ ಕೇಜ್ರಿವಾಲ್ ಸಂಪುಟ ಇಂದು ಗ್ರೀನ್ ಸಿಗ್ನಲ್ ನೀಡಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕ್ಯಾಬಿನೆಟ್ ಸಭೆಯ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್ ಯೋಜನೆಯ ಮಾಹಿತಿ ನೀಡಿದರು. ಮುಂದಿನ ಏಳೆಂಟು ತಿಂಗಳಲ್ಲಿ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಲಿದೆ.

    ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಬಡವರಿಗೆ ಗೌರವಯುತವಾಗಿ ಪಡಿತರ ನೀಡುವುದು ನಮ್ಮ ಬಹು ದಿನಗಳ ಕನಸಾಗಿತ್ತು. ಇಂದು ನಾವು ಕಂಡ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಈ ಯೋಜನೆಯ ಜೊತೆಯಲ್ಲಿ ಕೇಂದ್ರ ಸರ್ಕಾರ ‘ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್’ ಸಹ ಅನ್ವಯಿಸಿಕೊಳ್ಳಲಾಗುತ್ತದೆ. ಮುಂದಿನ ಏಳೆಂಟು ತಿಂಗಳಲ್ಲಿ ಫಲಾನಭವಿಗಳಿಗೆ ಮನೆಯ ಬಾಗಿಲಿಗೆ ರೇಷನ್ ತಲುಪಲಿದೆ. ಫಲಾನುಭವಿ ಬೇಕಾದಲ್ಲಿ ಅಂಗಡಿಗಳಿಗೆ ತೆರಳಿ ತಮ್ಮ ಪಡಿತರವನ್ನು ತೆಗೆದುಕೊಳ್ಳಬಹುದು. ಗೋಧಿ ಬದಲಾಗಿ ಹಿಟ್ಟು ನೀಡಲಾಗುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.

  • ಸಿಎಂ ಕೇಜ್ರಿವಾಲ್ 21ನೇ ಶತಮಾನದ ತುಘ್ಲಕ್: ಗೌತಮ್ ಗಂಭೀರ್

    ಸಿಎಂ ಕೇಜ್ರಿವಾಲ್ 21ನೇ ಶತಮಾನದ ತುಘ್ಲಕ್: ಗೌತಮ್ ಗಂಭೀರ್

    ನವದೆಹಲಿ: ಬಿಜೆಪಿ ಸಂಸದ ಗೌತಮ್ ಗಂಭೀರ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು 21ನೇ ಶತಮಾನದ ತುಘ್ಲಕ್ ರಾಜ ಎಂದು ಕರೆದಿದ್ದಾರೆ.

    ದೆಹಲಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳ ವರದಿ ಆಗಿವೆ. ಕೆಲ ದಿನಗಳಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಆಪ್ ಸರ್ಕಾರ ಮತ್ತು ಬಿಜೆಪಿ ಇದರ ಕ್ರೆಡಿಟ್ ತೆಗೆದುಕೊಳ್ಳಲು ಟ್ವಿಟ್ಟರ್ ನಲ್ಲಿ ಯುದ್ಧಕ್ಕೆ ಇಳಿದಿವೆ. ನಿನ್ನೆ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ದೆಹಲಿಯ ಆಪ್ ಸರ್ಕಾರ ಜಾಹಿರಾತು ಮತ್ತು ಹ್ಯಾಶ್ ಟ್ಯಾಗ್ ಗಾಗಿ ಮಾಡಿದ ಖರ್ಚನ್ನು ಕೆಲಸದಲ್ಲಿ ತೊಡಗಿಸಬೇಕಿತ್ತು. ಈ ಟ್ವೀಟ್ ನನ್ನು ಸಿಎಂ ಕೇಜ್ರಿವಾಲ್‍ಗೆ ಟ್ಯಾಗ್ ಮಾಡಿ 21ನೇ ಶತಮಾನದ ತುಘ್ಲಕ್ ಎಂದಿದ್ದಾರೆ. ಮಾಧ್ಯಮಗಳ ಮುಂದೆ ಯಾವುದೇ ಕ್ರೆಡಿಟ್ (ಹೆಸರು) ಬೇಡ ಅಂತಾ ಹೇಳ್ತಾರೆ. ಟ್ವಿಟ್ಟರ್ ನಲ್ಲಿ ಎಲ್ಲವೂ ನಾನೇ ಮಾಡಿದ್ದು ಅಂತಾರೆ ಎಂದು ಟೀಕಿಸಿದ್ದಾರೆ.

    ಮಗದೊಂದು ಟ್ವೀಟ್ ನಲ್ಲಿ ಚುನಾವಣೆಗೂ ಮುನ್ನ ಉಚಿತ ವಿದ್ಯುತ್ ಮತ್ತು ಶುದ್ಧ ನೀರು ಎಂದು ಹೇಳಿದ್ದರು. ಇದೀಗ ತುಘ್ಲಕ್ ರೀತಿಯಲ್ಲಿ ಮನಸ್ಸಿಗೆ ಬಂದಂತೆ ಆಡಳಿಯ ನಡೆಸುತ್ತಿದ್ದಾರೆ ಎಂದು ಗಂಭೀರ್ ಆರೋಪಿಸಿದ್ದರು.

    ಎರಡು ದಿನಗಳ ಹಿಂದೆ ಸಿಎಂ ಕೇಜ್ರಿವಾಲ್ ದೆಹಲಿಯ ಎಲ್ಲ ಸಂಸದರು ಮತ್ತು ಆಪ್ ಪಕ್ಷದ ರಾಜ್ಯಸಭಾ ಸದಸ್ಯರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದರು. ಈ ವೇಳೆ ಕಾಂತಿನಗರದಲ್ಲಿ ಕೂಡಲೇ ಐಸೋಲೇಶನ್ ಕೇಂದ್ರ ಆರಂಭಿಸಬೇಕು ಎಂದು ಗಂಭೀರ್ ಸರ್ಕಾರವನ್ನು ಒತ್ತಾಯಿಸಿದ್ದರು.

  • ಲಾಕ್‍ಡೌನ್ 4.O ಜಾರಿಗೂ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆದ ಆಮ್ ಅದ್ಮಿ ಸರ್ಕಾರ

    ಲಾಕ್‍ಡೌನ್ 4.O ಜಾರಿಗೂ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆದ ಆಮ್ ಅದ್ಮಿ ಸರ್ಕಾರ

    ನವದೆಹಲಿ: ನಾಲ್ಕನೇ ಹಂತದ ಲಾಕ್‍ಡೌನ್ ಜಾರಿಗೂ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜನಾಭಿಪ್ರಾಯ ಪಡೆಯುತ್ತಿದ್ದು, ಲಾಕ್‍ಡೌನ್ ವಿನಾಯತಿ ಸಂಬಂಧ ಸಾರ್ವಜನಿಕರಿಂದ ಸಲಹೆ ಪಡೆದು ಅನುಷ್ಠಾನಕ್ಕೆ ತರುವ ಪ್ರಯತ್ನ ಆರಂಭಿಸಿದ್ದಾರೆ.

    ಈ ಸಂಬಂಧ ದೆಹಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿದ್ದು, ಈವರೆಗೂ ಆನ್‍ಲೈನ್ ಮೂಲಕ ಐದು ಲಕ್ಷ ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಾಲ್ಕನೇ ಹಂತದ ಲಾಕ್‍ಡೌನ್ ವೇಳೆ ಮನೆಯಿಂದ ಹೊರ ಬರುವ ಜನರು ಮಾಸ್ಕ್ ಧರಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳವುದು ಕಡ್ಡಾಯಗೊಳಿಸಲು ಹೆಚ್ಚಿನ ಪ್ರಮಾಣದ ಸಲಹೆ ನೀಡಿದ್ದಾರೆ ಎಂದರು.

    ಶಾಲೆ ಕಾಲೇಜು, ಸ್ಪಾ, ಸಲೂನ್, ಸ್ವಿಮೀಂಗ್ ಪೂಲ್, ಮಾಲ್‍ಗಳನ್ನು ಬಂದ್ ಮುಂದುವರಿಸಲು ಜನರು ಮನವಿ ಮಾಡಿದ್ದಾರೆ ಎಂದರು. ಹೋಟೆಲ್‍ಗಳು ಬಂದ್ ಕೂಡ ಮುಂದುವರಿಯಲಿ. ಆದರೆ ರೆಸ್ಟೋರೆಂಟ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ ನೀಡುವಂತೆ ದೆಹಲಿ ಜನರು ಕೇಳಿಕೊಂಡಿದ್ದಾರಂತೆ. ದೆಹಲಿಯಲ್ಲಿ ಸಮ ಬೆಸ ಮಾದರಿಯಲ್ಲಿ ಮಾರ್ಕೇಟ್‍ಗಳನ್ನು ತೆರೆಯಲು ಕೆಲವು ಜನರು ಮನವಿ ಮಾಡಿದ್ದಾರೆ.

    ನಾಲ್ಕನೇ ಹಂತದ ಲಾಕ್‍ಡೌನ್ ವಿನಾಯತಿಯಲ್ಲಿ ಹಲವು ಕಚೇರಿಗಳು, ಅಂಗಡಿಗಳು ತೆರವುಗೊಂಡಿದ್ದು, ಆರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳಯತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿ ಬಸ್, ಮೆಟ್ರೊ ಸಂಚಾರ ಆರಂಭಿಸಲು ದೆಹಲಿ ಜನರು ಮನವಿ ಮಾಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.

    ಈ ಸಲಹೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಜೊತೆಗೆ ಕೇಂದ್ರದ ಮಾರ್ಗಸೂಚಿಗಳ ಜೊತೆಗೆ ರಾಜ್ಯ ಸರ್ಕಾರ ಹಲವು ಸಾರ್ವಜನಿಕ ಅಭಿಪ್ರಾಯಗಳನ್ನು ಪರಿಗಣಿಸುವುದಾಗಿ ಹೇಳಿದ್ದಾರೆ.

  • ಬಸ್‍ಗಳಲ್ಲಿ ಮಹಿಳೆಯರ ಸುರಕ್ಷತೆಗೆ 13 ಸಾವಿರ ಮಾರ್ಷಲ್‍ಗಳ ನೇಮಿಸಿದ ಕೇಜ್ರಿವಾಲ್ ಸರ್ಕಾರ

    ಬಸ್‍ಗಳಲ್ಲಿ ಮಹಿಳೆಯರ ಸುರಕ್ಷತೆಗೆ 13 ಸಾವಿರ ಮಾರ್ಷಲ್‍ಗಳ ನೇಮಿಸಿದ ಕೇಜ್ರಿವಾಲ್ ಸರ್ಕಾರ

    – ನಾಳೆಯಿಂದ ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

    ನವದೆಹಲಿ: ಸಾರ್ವಜನಿಕರ ಸಂಪರ್ಕ ಸಾರಿಗೆ ಬಸ್‍ಗಳಲ್ಲಿ ನಿತ್ಯ ಓಡಾಡುವ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಸಿಎಂ ಕೇಜ್ರಿವಾಲ್ ಸರ್ಕಾರ, ಮತ್ತೆ 13 ಸಾವಿರ ಮಂದಿ ಮಾರ್ಷಲ್ ಗಳನ್ನ ನೇಮಕ ಮಾಡಿಕೊಳ್ಳುತ್ತಿದೆ.

    ಈ ಕುರಿತು ಮಾಹಿತಿ ನೀಡಿರುವ ಕೇಜ್ರಿವಾಲ್, ಮಂಗಳವಾರದಿಂದ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡುವ ದೃಷ್ಟಿಯಿಂದ 13 ಸಾವಿರ ಮಾರ್ಷಲ್ ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ಈ ಯೋಜನೆ ಜಾರಿ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು.

    ಮಹಿಳೆಯರಿಗೆ ರಕ್ಷಣೆ ನೀಡುವುದೆ ನಮ್ಮ ಮೊದಲ ಆದ್ಯತೆ. ನಮ್ಮ ಸರ್ಕಾರ ಸಂತಸದಿಂದ ತೆಗೆದುಕೊಂಡ ನಿರ್ಧಾರವಾಗಿದ್ದು, ಇದುವರೆಗೂ ವಿಶ್ವದ ಯಾವುದೇ ನಗರದಲ್ಲಿ ನೀಡಿರದ ಮಾದರಿಯಲ್ಲಿ ವ್ಯವಸ್ಥೆ ಮಾಡುತ್ತಿದ್ದೇವೆ ಎಂದಿದ್ದಾರೆ.

    ಮಹಿಳೆಯರು ಸಾರಿಗೆ ವಾಹನದಲ್ಲಿ ಪ್ರಯಾಣಿಸುವ ವೇಳೆ ಸ್ವಂತ ವಾಹನದಲ್ಲಿ ಪ್ರಯಾಣಿಸುತ್ತಿರುವ ಅನುಭವ ಪಡೆಯಬೇಕು ಎಂದು ತಿಳಿಸಿದರು. ನವದೆಹಲಿಯಲ್ಲಿ ಸರ್ಕಾರಿ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ನೀಡುವ ಯೋಜನೆ ಜಾರಿಯಾಗುವ ಒಂದು ದಿನ ಮುನ್ನ ಕೇಜ್ರಿವಾಲ್ ಈ ತೀರ್ಮಾನ ಪ್ರಕಟಿಸಿರುವುದು ವಿಶೇಷವಾಗಿದೆ. ಅಲ್ಲದೇ ಕೇಜ್ರಿವಾಲ್ ಇಂದಿನಿಂದಲೇ ಮುಂದಿನ ಚುನಾವಣೆಗೆ ಜನಪ್ರಿಯ ಯೋಜನೆಯನ್ನು ಪ್ರಕಟಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

  • ಹಿಟ್ಲರ್ ಹಾದಿಯಲ್ಲೇ ಮೋದಿ ನಡೆ: ಕೇಜ್ರಿವಾಲ್

    ಹಿಟ್ಲರ್ ಹಾದಿಯಲ್ಲೇ ಮೋದಿ ನಡೆ: ಕೇಜ್ರಿವಾಲ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    ಗುರುಗ್ರಾಮದ ಧಾಮಸ್‍ಪುರದ ಘಟನೆಯನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    ಸರ್ವಾಧಿಕಾರಿ ಹಿಟ್ಲರ್‍ನ ಗೂಂಡಾಗಳು ಮುಗ್ಧ ಜನರ ಮೇಲೆ ಹಲ್ಲೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಹಿಟ್ಲರ್ ನಂತೆ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬರಲು ಮೋದಿ ಹಿಟ್ಲರ್ ನನ್ನು ಅನುಸರಿಸುತ್ತಿದ್ದಾರೆ. ಆದರೆ ಮೋದಿ ಬೆಂಬಲಿಸುವ ಜನರಿಗೆ ಭಾರತ ಯಾವ ಸ್ಥಿತಿಗೆ ಹೋಗುತ್ತಿದೆ ಎನ್ನುವುದು ಕಾಣುತ್ತಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಅಸಮಾಧಾನ ಹೊರ ಹಾಕಿದ್ದಾರೆ.

    ತಮ್ಮ ಟ್ವೀಟ್‍ನಲ್ಲಿ ಒಂದು ವಿಡಿಯೋ ಲಿಂಕ್ ಹಾಕಿರುವ ಅರವಿಂದ್ ಕೇಜ್ರಿವಾಲ್ ಅವರು, ಈ ವೀಡಿಯೊ ವೀಕ್ಷಿಸಿ. ಹಿಂದೂ ಧರ್ವದ ಯಾವ ಗ್ರಂಥಗಳಲ್ಲಿ ಮುಸ್ಲಿಮರನ್ನು ಕೊಲ್ಲುವಂತೆ ಬರೆಯಲಾಗಿದೆ? ಭಗವತ್ ಗೀತೆಯಲ್ಲಿ? ರಾಮಾಯಣದಲ್ಲಿ? ಚಾಲಿಸ್ ಹನುಮಾನ್‍ದಲ್ಲಿ? ಹಾಗಾದರೇ ಯಾವ ಗ್ರಂಥದಲ್ಲಿದೆ ಹೇಳಿ ಎಂದು ಪ್ರಶ್ನಿಸಿದ್ದಾರೆ.

    ಈ ಜನರು ಹಿಂದೂಗಳಲ್ಲ, ಹಿಂದೂಗಳ ಉಡುಪಿನಲ್ಲಿರುವ ಗೂಂಡಾಗಳು. ಅವರ ಪಕ್ಷವು ದುರ್ಬಲಗೊಂಡಾಗ ಹೀಗೆ ಮಾಡುತ್ತಾರೆ. ದೇಶ ಮತ್ತು ಹಿಂದೂ ಧರ್ಮವನ್ನು ಉಳಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

    ಧಾಮಸ್‍ಪುರದಲ್ಲಿ ಆಗಿದ್ದೇನು?:
    ಹರಿಯಾಣದ ಧಾಮಸ್‍ಪುರದಲ್ಲಿ ಮಕ್ಕಳು ಮನೆಯ ಎದುರು ಕ್ರಿಕೆಟ್ ಆಡುತ್ತಿದ್ದರು. ಆದರೆ ಅದಕ್ಕೆ ಅಡ್ಡಿಪಡಿಸಿದ ಸ್ಥಳೀಯರು, ಪಾಕಿಸ್ತಾನಕ್ಕೆ ಹೋಗಿ ಆಟವಾಡಿ ಎಂದು ಹೇಳಿದ್ದರು ಎನ್ನಲಾಗಿದೆ.

    ಸ್ಥಳೀಯರು ಹೇಳಿದ ಬಳಿಕವೂ ಮಕ್ಕಳು ಆಟ ಮುಂದುವರಿಸಿದ್ದರು. ಇದರಿಂದಾಗಿ ಕೋಪಗೊಂಡ ಸ್ಥಳೀಯ ಬಲಪಂಥೀಯ ಯುವಕರ ಗುಂಪೊಂದು ಮಕ್ಕಳ ಕುಟುಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಹಿಳೆ ರಕ್ಷಣೆಗೆ ಬಂದರೂ ಲೆಕ್ಕಿಸದೇ ಹಾಕಿ ಸ್ಟಿಕ್, ರಾಡ್‍ಗಳಿಂದ ಹೊಡೆದಿದ್ದಾರೆ. ಮನೆಯ ಮಹಡಿಯ ಮೇಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

  • ಕಾಂಗ್ರೆಸ್ ಅಹಂಕಾರಿ ಪಕ್ಷ, ಕೈ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ: ಕೇಜ್ರಿವಾಲ್

    ಕಾಂಗ್ರೆಸ್ ಅಹಂಕಾರಿ ಪಕ್ಷ, ಕೈ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ: ಕೇಜ್ರಿವಾಲ್

    ನವದೆಹಲಿ: ದೆಹಲಿ ಲೋಕಸಭಾ ಕ್ಷೇತ್ರಗಳ ಮೈತ್ರಿ ನಿರಾಕರಿಸಿದ ಕಾಂಗ್ರೆಸ್ ವಿರುದ್ಧ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

    ಮುಸ್ತಫಾಬಾದ್ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಕಾಂಗ್ರೆಸ್‍ಗೆ ಮನವಿ ಮಾಡಿದ್ದೆವು. ಆದರೆ ಕಾಂಗ್ರೆಸ್ ನಮ್ಮೊಂದಿಗೆ ಅಹಂಕಾರದಿಂದ ವರ್ತಿಸಿತು. ಹೀಗಾಗಿ ದೆಹಲಿ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವ ಕೈ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಮಧ್ಯ ಮತ ವಿಭಜನತೆಯಾಗದಂತೆ ಎಚ್ಚರವಹಿಸಬೇಕು. ದೆಹಲಿಯಲ್ಲಿ ಬಿಜೆಪಿಯನ್ನು ಮಣಿಸುವ ಸಾಮಥ್ರ್ಯ ಎಎಪಿಗೆ ಇದೆ. ಹೀಗಾಗಿ ನಮ್ಮ ಪಕ್ಷಕ್ಕೇ ಮತ ನೀಡಿ ಎಂದು ಕೇಜ್ರಿವಾಲ್ ಮತದಾರರಿಗೆ ಮನವಿ ಮಾಡಿಕೊಂಡರು.

    ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಸೋಲಿಸಲು ದೇಶದ ಜನರು ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುವ ಮೂಲಕ ಕೇಸರಿ ಬಣಕ್ಕೆ ಸಹಾಯ ಮಾಡುತ್ತಿದೆ ಎಂದರು.

    ಎಎಪಿ ಮುಖಂಡ ಗೋಪಾಲ್ ರೈ ಮಾತನಾಡಿ, ಕಾಂಗ್ರೆಸ್ ಕೇವಲ ದೆಹಲಿಯಲ್ಲಿ ಬಿಜೆಪಿಗೆ ಸಹಾಯ ಮಾಡುತ್ತಿಲ್ಲ. ದೇಶದ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಜಯಗಳಿಸಲು ಕಾಂಗ್ರೆಸ್ ಸಹಾಯ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv