Tag: clp meeting

  • ಧರ್ಮಸ್ಥಳ ಬುರುಡೆ ರಹಸ್ಯ – 13ನೇ ಸ್ಥಳದಲ್ಲಿ ಮೂಳೆ ಸಿಗದೇ ಇದ್ರೆ ತನಿಖೆ ಸ್ಥಗಿತ?

    ಧರ್ಮಸ್ಥಳ ಬುರುಡೆ ರಹಸ್ಯ – 13ನೇ ಸ್ಥಳದಲ್ಲಿ ಮೂಳೆ ಸಿಗದೇ ಇದ್ರೆ ತನಿಖೆ ಸ್ಥಗಿತ?

    ಬೆಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಶೋಧ ನಡೆಯುತ್ತಿರುವ 13ನೇ ಸ್ಥಳದಲ್ಲಿ ಯಾವುದೇ ಮೂಳೆ ಸಿಗದೇ ಇದ್ದರೆ ವಿಶೇಷ ತನಿಖಾ ತಂಡದ (SIT) ಕಾರ್ಯಾಚರಣೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

    ಹೌದು. ಇಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ (CLP Meeting) ಖಾಸಗಿ ಹೋಟೆಲಿನಲ್ಲಿ ನಡೆಯಿತು. ಈ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಧರ್ಮಸ್ಥಳ ಎಸ್‌ಐಟಿ ತನಿಖೆಯನ್ನು ಪ್ರಸ್ತಾಪಿಸಿ ಸಿಎಂ ಸಿದ್ದರಾಮಯ್ಯನವರನ್ನು (CM Siddaramaiah) ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: 6 ಗಂಟೆ ಕಾರ್ಯಾಚರಣೆ – 22 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳದ ಗುಂಡಿ ತೋಡಿದರೂ ಸಿಗದ ಮೂಳೆ

     

    ಇದಕ್ಕೆ ಸಿದ್ದರಾಮಯ್ಯ, 13 ಸ್ಥಳಗಳಲ್ಲಿ ಎಸ್ಐಟಿ ಶೋಧನೆ ಮಾಡಿದೆ. ಅದರಲ್ಲಿ ಒಂದು ಕಡೆ ಮಾತ್ರ ಮೂಳೆಗಳು ಸಿಕ್ಕಿವೆ. ಅದೂ ಕೂಡ ಮಹಿಳೆಯದ್ದಲ್ಲ ಪುರುಷನದ್ದು. 13ನೇ ಪಾಯಿಂಟ್‌ನಲ್ಲೂ ಮೂಳೆಗಳು ಸಿಗದೇ ಹೋದರೆ ಎಸ್ಐಟಿ ಪರಿಶೋಧನೆ ನಿಲ್ಲಿಸಬೇಕಾಗಬಹುದು. ಎಸ್ಐಟಿಯಿಂದ ಮೂಳೆ ಶೋಧನೆಯನ್ನು ಮುಂದುವರಿಸಬೇಕಾ? ಬೇಡವಾ ಎಬುದನ್ನು ತೀರ್ಮಾನ ಮಾಡುತ್ತೇವೆ ಎಂಬುದಾಗಿ ಸಿಎಂ ಸ್ಪಷ್ಟವಾಗಿ ಹೇಳಿರುವುದಾಗಿ ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ರಾಹುಲ್‌ ಗಾಂಧಿ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಲಾಗಿದೆ: ಸಿದ್ದರಾಮಯ್ಯ

    ಸರ್ಕಾರ ಎಸ್‌ಐಟಿ ರಚನೆ ಮಾಡಿದ ಬಗ್ಗೆ ಜನರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಧರ್ಮಸ್ಥಳದ ವಿಚಾರದಲ್ಲಿ ಯಾರೂ ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ. ಸೋಶಿಯಲ್ ಮೀಡಿಯ ನೋಡಿ ಅಭಿಪ್ರಾಯ ಹಂಚಿಕೊಳ್ಳಬೇಡಿ ಎಂದು ಸಿಎಂ ಸೂಚಿಸಿದ್ದಾರೆ.

  • ಎಐಸಿಸಿ ನಾಯಕರ ಮುಂದೆ ಸಿಎಂ, ಡಿಸಿಎಂ ಕದನ – ತ್ರಿಮೂರ್ತಿ ಸಭೆಯ ಇನ್‌ಸೈಡ್ ಸ್ಟೋರಿ ಓದಿ

    ಎಐಸಿಸಿ ನಾಯಕರ ಮುಂದೆ ಸಿಎಂ, ಡಿಸಿಎಂ ಕದನ – ತ್ರಿಮೂರ್ತಿ ಸಭೆಯ ಇನ್‌ಸೈಡ್ ಸ್ಟೋರಿ ಓದಿ

    – ಡಿಕೆ ಮಾತಿನಿಂದಲೇ ರಾದ್ಧಾಂತ ಎಂದ ಸಿದ್ದರಾಮಯ್ಯ
    – ಬುಧವಾರ ಹೈಕಮಾಂಡ್ ನಾಯಕರ ಭೇಟಿ

    ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ (Karnataka Congress) ಪವರ್ ಶೇರಿಂಗ್ ಸಂಘರ್ಷ ತಾರಕಕ್ಕೇರಿದೆ. ಕಾಂಗ್ರೆಸ್ ಮನೆಯಲ್ಲಿ ಸೀಟ್ ಫೈಟು, ದೊಡ್ಡ ಘಾಟು ಎಬ್ಬಿಸಿದೆ. ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆ (CLP Meeting) ಮತ್ತು ಸಿಎಂ-ಡಿಸಿಎಂ ಪ್ರತ್ಯೇಕ ಸಭೆಯಲ್ಲಿ ರಣದೀಪ್ ಸುರ್ಜೆವಾಲಾ (Randeep Surjewala) ಮುಂದೆ ಪಕ್ಷದ ಒಳಜಗಳ ಬಹಿರಂಗವಾಗಿದೆ.

    ಸಿಎಂ ಬದಲಾವಣೆ ಬಗ್ಗೆ ಯಾರೂ ಬಾಯಿ ಬಿಡುವಂತಿಲ್ಲ ಅಂತ ಹೇಳಿ ಸುರ್ಜೇವಾಲ ಎಚ್ಚರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಪವರ್ ಶೇರಿಂಗ್ ಗದ್ದಲದ ಬಗ್ಗೆ ಸಮಜಾಯಿಷಿ ನೀಡಿದ್ದು, ಡಿಸಿಎಂ ನೀಡಿದ ಹೇಳಿಕೆಯಿಂದ ಎಲ್ಲಾ ಶುರುವಾಯ್ತು ಎಂದು ನೇರಾನೇರ ಆರೋಪ ಮಾಡಿದ್ದಾರೆ.ಸಿಎಂ ಹೇಳುತ್ತಿದ್ದಂತೆ ಹಾಗೇ ನಾನು ಹೇಳಲಿಲ್ಲ ಎಂದು ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

    ಸಭೆಯಲ್ಲಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾದ್ದರೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ತೆರಳಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ: ಜೈಲಿನಿಂದ ಬಿಡುಗಡೆ ಬಳಿಕ ದರ್ಶನ್‌ ಮೊದಲ ಮಾತು

    ಬುಧವಾರ ಇಬ್ಬರು ನಾಯಕರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಇತ್ತ ದಲಿತ ಸಚಿವರ ಡಿನ್ನರ್ ಸಭೆ (Dinner Meeting) ಬಗ್ಗೆ ಸುರ್ಜೆವಾಲಾಗೆ ವಿವರಣೆ ಕೊಡುತ್ತೇವೆ ಎಂದು ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

    ತ್ರಿಮೂರ್ತಿ ಸಭೆಯಲ್ಲಿ ಏನಾಯ್ತು?
    ಪವರ್ ಶೇರ್ ವಿಚಾರ ಇದ್ದಕ್ಕಿದ್ದಂತೆ ಏಕೆ ಬಂತು ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ಶಿವಕುಮಾರ್‌ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಕ್ಕೆ ನಾನು ಪ್ರತಿಕ್ರಿಯಿಸಿದ್ದೆ. ಅಲ್ಲಿಂದ ಏನೇನೋ ಸೃಷ್ಟಿಯಾಗಿ, ಉಪ್ಪು ಖಾರ ಸೇರಿಸಿದರು. ಇದಕ್ಕೆ ನಾನು ಜವಾಬ್ದಾರಿಯೇ ಎಂದು ಪ್ರಶ್ನಿಸಿದ್ದಾರೆ.

     

    ಮೊನ್ನೆ ಕ್ಯಾಬಿನೆಟ್ ಮುಗಿದ ಬಳಿಕ ನಾವು ಡಿನ್ನರ್‌ಗೆ ಸೇರಿದ್ದೆವು. ಅಲ್ಲಿ ಯಾವ ಗುಂಪು ಇರಲಿಲ್ಲ. ಸಚಿವರು ಸೇರಿ ಐದಾರು ಜನ ಇದ್ವಿ ಅಷ್ಟೇ. ಅದಕ್ಕೂ ಕೆಲವರು ಬಣ್ಣ ಕಟ್ಟಿದ್ರು. ಹೈಕಮಾಂಡ್ ಏನ್ ಹೇಳುತ್ತೋ ಅದಕ್ಕೆ ಬದ್ಧ ಎಂದು ನಾನು ಕ್ಲಿಯರ್ ಆಗಿ ಹೇಳಿದ್ದೀನಿ. ಅದು ಬಿಟ್ಟು ಎಲ್ಲ ಕಡೆ ಯಾರೂ ಮಾತಾಡೋದು ಬೇಡ ಎಂದು ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್‌ ಮಾತನಾಡಿ, ಪವರ್ ಶೇರ್ ಒಪ್ಪಂದ ಆಗಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಇಬ್ಬರ ನಡುವೆ ಒಂದು ಅಂಡರ್‌ಸ್ಟ್ಯಾಂಡಿಗ್‌ ಇದೆ ಎಂದಿದ್ದೆ ಅಷ್ಟೇ. ನೀವು ಹೇಳಿದ್ಮೇಲೆ ಮುಗೀತು ಅಂತಾ ಅವತ್ತೇ ಹೇಳಿದ್ದೇನೆ. ನಾನು ಪಕ್ಷ ಹಾಕಿದ ಗೆರೆ ದಾಟುವುದಿಲ್ಲ ಪವರ್ ಶೇರ್ ವಿಚಾರಕ್ಕೆ ತಲೆ ಹಾಕುವುದಿಲ್ಲ. ಯಾರೇ ಮಾತಾಡಿದ್ರೂ ಹೈಕಮಾಂಡ್ ಇದೆ ಎಂದಷ್ಟೇ ನಾನು ಹೇಳಿದ್ದೇನೆ ಎಂದಿದ್ದಾರೆ.

    ಇಬ್ಬರ ಮಾತುಗಳನ್ನು ಕೇಳಿಸಿಕೊಂಡ ಸುರ್ಜೇವಾಲ ಸರಿ ಆಯ್ತು, ಬೆಳಗಾವಿ ಸಮಾವೇಶ, ಬಜೆಟ್ ಕಡೆ ಗಮನ ಕೊಡಿ. ಸಚಿವರ ಆಕ್ಷನ್- ರಿಯಾಕ್ಷನ್ ವಿಚಾರ ನಮಗೆ ಬಿಡಿ ಎಂದು ಹೇಳಿದರು. ಇದಕ್ಕೆ ಸಿಎಂ ನಾನು ಯಾರನ್ನೂ ಎಂಟರ್‌ಟೈನ್ ಮಾಡಿಲ್ಲ, ಮಾಡಲ್ಲ ಎಂದು ಹೇಳಿದ್ದಾರೆ.

     

  • ಸಂಕ್ರಾಂತಿ ಹಬ್ಬದ ದಿನವೂ ಕಾಂಗ್ರೆಸ್ ಭರ್ಜರಿ ರಾಜಕೀಯ ಚಟುವಟಿಕೆ – ಸಿಎಂ ಮನೆಗೆ ಸಚಿವರ ಭೇಟಿ

    ಸಂಕ್ರಾಂತಿ ಹಬ್ಬದ ದಿನವೂ ಕಾಂಗ್ರೆಸ್ ಭರ್ಜರಿ ರಾಜಕೀಯ ಚಟುವಟಿಕೆ – ಸಿಎಂ ಮನೆಗೆ ಸಚಿವರ ಭೇಟಿ

    ಬೆಂಗಳೂರು: ಸಂಕ್ರಾಂತಿ ಹಬ್ಬದ ದಿನವೂ ಕಾಂಗ್ರೆಸ್‌ನಲ್ಲಿ ಭರ್ಜರಿ ರಾಜಕೀಯ ಚಟುವಟಿಕೆ ನಡೆದಿದೆ. ಸಂಪುಟದ ಕೆಲ ಸಚಿವರು, ಸಿಎಂ ಸಿದ್ದರಾಮಯ್ಯ (Siddaramaiah) ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

    ಸಚಿವರಾದ ಎಂ.ಬಿ.ಪಾಟೀಲ್, ಬೈರತಿ ಸುರೇಶ್, ಸತೀಶ್ ಜಾರಕಿಹೊಳಿ ಅವರು ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾಗಿದ್ದಾರೆ. ಇದನ್ನೂ ಓದಿ: ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್‌, ಸಹೋದರ ಶೀಘ್ರ ಗುಣಮುಖರಾಗಲಿ: ಸಿ.ಟಿ.ರವಿ ಪ್ರಾರ್ಥನೆ

    ಶಾಸಕಾಂಗ ಸಭೆ ಮುಗಿದ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸಕ್ಕೆ ಆಪ್ತ ಸಚಿವರು ಆಗಮಿಸಿ ಚರ್ಚೆ ನಡೆಸಿದ್ದಾರೆ. ನಿನ್ನೆ ತಡರಾತ್ರಿ ವರೆಗೂ ಶಾಸಕಾಂಗ ಸಭೆ ನಡೆಸಲಾಗಿತ್ತು. ಸಭೆ ಬಳಿಕವೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರನ್ನು ಸಿಎಂ, ಡಿಸಿಎಂ ಭೇಟಿಯಾಗಿದ್ದರು.

    ಸುರ್ಜೇವಾಲಾ ಜೊತೆಗೆ ಸಿಎಂ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಇದೀಗ ಸಿದ್ದರಾಮಯ್ಯ ನಿವಾಸಕ್ಕೆ ಸಿದ್ದರಾಮಯ್ಯ ಆಪ್ತಬಳಗದ ಸಚಿವರು ಆಗಮಿಸಿ ಮಾತುಕತೆ ನಡೆಸಿದ್ದಾರೆ.

  • ಡಿನ್ನರ್‌ ಮೀಟಿಂಗ್‌,  ಪ್ರತ್ಯೇಕ ಸಭೆಗೆ ಬ್ರೇಕ್‌ ಹಾಕಿ – ಯಾವುದಕ್ಕೂ ಅವಕಾಶವಿಲ್ಲ: ಸುರ್ಜೇವಾಲ ತಾಕೀತು

    ಡಿನ್ನರ್‌ ಮೀಟಿಂಗ್‌, ಪ್ರತ್ಯೇಕ ಸಭೆಗೆ ಬ್ರೇಕ್‌ ಹಾಕಿ – ಯಾವುದಕ್ಕೂ ಅವಕಾಶವಿಲ್ಲ: ಸುರ್ಜೇವಾಲ ತಾಕೀತು

    ಬೆಂಗಳೂರು: ಎಲ್ಲಾ ರೀತಿಯ ಪ್ರತ್ಯೇಕ ಸಭೆ, ಊಟ, ಡಿನ್ನರ್ ಮೀಟಿಂಗ್ ಯಾವುದಕ್ಕೂ ಅವಕಾಶ ಇಲ್ಲ. ಎಲ್ಲದಕ್ಕೂ ಬ್ರೇಕ್‌ ಹಾಕಿ ಎಂದು ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ (Randeep Surjewala) ತಾಕೀತು ಮಾಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಖಾಸಗಿ ಹೋಟೆಲಿನಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ (CLP Meeting) ಮಾತನಾಡಿದ ಅವರು, ಸಮುದಾಯದ ಸಭೆ, ಸಮುದಾಯದ ನಾಯಕರ ಸಭೆ ಮಾಡಬೇಕಾದ ಯಾವುದೇ ಪರಿಸ್ಥಿತಿ ಬಂದರೂ ಹೈಕಮಾಂಡ್ ಅನುಮತಿ‌ ಪಡೆದು ಮಾಡಬೇಕು. ಬಹಿರಂಗವಾಗಿ ಮಾತನಾಡುವ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಪವರ್ ಶೇರಿಂಗ್ ಚರ್ಚೆ ಹೊತ್ತಲ್ಲೇ ಸಿಎಂ ತ್ಯಾಗದ ಮಾತು!

    ನೀವು ಏನೇ ಮಾತನಾಡಿದರೂ ಅದು ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ. ಏನಿದ್ದರೂ ಬಿಜೆಪಿಯವರ (BJP) ವಿರುದ್ದ ಮಾತನಾಡಿ. ಅವರು ಆರೋಪ ಮಾಡುತ್ತಿರುತ್ತಾರೆ. ನೀವು ನಿಮ್ಮ‌ ಪಾಡಿಗೆ ಸುಮ್ಮನೆ ಇರುತ್ತೀರಿ. ಪಕ್ಷದ ಬಗ್ಗೆ ಮಾತನಾಡುವುದಲ್ಲ. ಬಿಜೆಪಿಯವರ ಆರೋಪದ ವಿರುದ್ದ ಮೊದಲು ಮಾತನಾಡಿ ಎಂದು ಹೇಳಿದರು.

    ಏನೇ ಗೊಂದಲಗಳಿದ್ದರೂ ನಾಲ್ಕು ಗೋಡೆಯ ಮಧ್ಯೆ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಿ. ಹ ಕಮಾಂಡ್ ಮುಂದೆ, ಸಿಎಂ ಹಾಗೂ ಡಿಸಿಎಂ ಮುಂದೆ ಮಾತನಾಡಿ ಎಂದು ಎಲ್ಲಾ ಶಾಸಕರಿಗೆ ತಾಕೀತು ಮಾಡಿದರು.  ಇದನ್ನೂ ಓದಿ: ಸುರ್ಜೇವಾಲ ಮಹತ್ವದ ಸಭೆಗೆ ಪರಂ, ರಾಜಣ್ಣ ಗೈರು!

     

  • ಸಿಎಂ ತಂಡಕ್ಕೆ ವಾರ್ನಿಂಗ್‌ ಕೊಟ್ಟ ಸುರ್ಜೇವಾಲ

    ಸಿಎಂ ತಂಡಕ್ಕೆ ವಾರ್ನಿಂಗ್‌ ಕೊಟ್ಟ ಸುರ್ಜೇವಾಲ

    ಬೆಂಗಳೂರು: ಇಂದು ಸಂಜೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೂ (CLP Meeting) ಮುನ್ನ ಸಿಎಂ ಸಿದ್ದರಾಮಯ್ಯ (CM Siddaramaiah) ತಂಡಕ್ಕೆ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ (Randeep Surjewala) ಅವರು ಎಚ್ಚರಿಕೆ ನೀಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ (KPCC Office) ನಡೆದ ಸರ್ವಸದಸ್ಯರ ಸಭೆಯಲ್ಲಿ ಪವರ್ ಶೇರಿಂಗ್ ಬಗ್ಗೆ ಸಚಿವರು ನೀಡಿದ ಬಹಿರಂಗ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಜಮೀರ್ ನೇರ ಕಾರಣ: ಭಾಸ್ಕರ್ ರಾವ್ ಆರೋಪ

     

    ಸರ್ಕಾರಕ್ಕಿಂತ ಪಕ್ಷ ದೊಡ್ಡದು. ಪಕ್ಷ ಇದ್ದಾಗ ಮಾತ್ರ ಯಾವುದೇ ಸರ್ಕಾರವನ್ನು ಬೇಕಾದ್ರೂ ರಚಿಸಬಹುದು. ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಸಿದ್ದರಾಮಯ್ಯ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರ ಸಮ್ಮುಖದಲ್ಲೇ ಸಚಿವರ ಹೆಸರು ಹೇಳದೇ ಸುರ್ಜೇವಾಲ ವಾರ್ನಿಂಗ್ ಕೊಟ್ಟಿದ್ದಾರೆ.

  • ಡಿನ್ನರ್‌ಗೆ ಬ್ರೇಕ್‌, ಕಾಂಗ್ರೆಸ್‌ ಭಿನ್ನಮತ ತಾರಕಕ್ಕೆ – ಸಿಎಲ್‌ಪಿಯಲ್ಲಿ ಶಕ್ತಿ ಪ್ರದರ್ಶನ?

    ಡಿನ್ನರ್‌ಗೆ ಬ್ರೇಕ್‌, ಕಾಂಗ್ರೆಸ್‌ ಭಿನ್ನಮತ ತಾರಕಕ್ಕೆ – ಸಿಎಲ್‌ಪಿಯಲ್ಲಿ ಶಕ್ತಿ ಪ್ರದರ್ಶನ?

    ಬೆಂಗಳೂರು: ಗೃಹ ಸಚಿವ ಪರಮೇಶ್ವರ್‌ (Parameshwar) ಆಯೋಜಿಸಿದ್ದ ಡಿನ್ನರ್‌ ಸಭೆಗೆ (Dinner Meeting) ಬ್ರೇಕ್‌ ಹಾಕಿದ ಬಳಿಕ ಕಾಂಗ್ರೆಸ್‌ ಭಿನ್ನಮತ ತಾರಕಕ್ಕೆ ಏರಿದೆ.

     ಡಿನ್ನರ್ ಪಾಲಿಟಿಕ್ಸ್ ಮಾಡಿದ್ದ ಸಿಎಂ ಬಣಕ್ಕೆ, ವಿದೇಶದಿಂದ ವಾಪಸ್ ಆಗುತ್ತಲೇ ಹೈಕಮಾಂಡ್‌ ಮೂಲಕ ಸೈಲೆಂಟಾಗಿ ಶಾಕ್ ನೀಡುವ ಕೆಲಸವನ್ನು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಮಾಡಿದ್ದರು. ಈಗ ಡಿನ್ನರ್‌ಗೆ ಬ್ರೇಕ್‌ ಹಾಕಿದ್ದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಬಣ ಕೆರಳಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಜ.13 ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವ ಮೂಲಕ ಕುತೂಹಲ ಮೂಡಿಸಿದ್ದಾರೆ.

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಈ ಸಿಎಲ್‌ಪಿ ಸಭೆಯಲ್ಲಿ ಎರಡು ಬಣಗಳ ನಡುವೆ ಬಲಾಬಲ ಪ್ರದರ್ಶನ ಆಗಿಯೇ ಬಿಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಈ ಸಭೆಯಲ್ಲಿ ಡಿಕೆಶಿ ವಿರುದ್ಧ ನಾಯಕರು ಸಿಡಿಮಿಡಿಗೊಳ್ಳುವ ಸಾಧ್ಯತೆಯಿದೆ. ಸಚಿವರ ಜೊತೆಗೆ ಕೆಲ ಶಾಸಕರೂ ಧ್ವನಿಗೂಡಿಸಿದರೆ ಸಭೆಯ ದಿಕ್ಕು ಬದಲಾಗಬಹುದು.

    ಸಭೆಗೂ ಮೊದಲೇ ಯಾವ ವಿಚಾರ ಚರ್ಚಿಸಬೇಕು? ಯಾವುದು ಬೇಡ ಎಂದು ಮೊದಲೇ ಅಜೆಂಡಾ ಹಾಕಿ ಸಿಎಂ ಸಂದೇಶ ರವಾನಿಸಿದರೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ. ಹೈಕಮಾಂಡ್‌ನಿಂದ ರಾಜ್ಯ ಉಸ್ತುವಾರಿ ಸುರ್ಜೇವಾಲಾ (Randeep Surjewala) ಆಗಮಿಸಿದರೆ ಸಭೆ ಶಾಂತವಾಗಿ ನಡೆಯಬಹುದು. ಹೀಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವ ವಿಚಾರ ಚರ್ಚೆಯಾಗಬಹುದು ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!

    ಡಿನ್ನರ್‌ ಸಭೆ ರದ್ದಾಗಿದ್ದಕ್ಕೆ ಗರಂ ಆದ ಪರಮೇಶ್ವರ್‌, ಡಿನ್ನರ್‌ ಬಗ್ಗೆ ಹೈಕಮಾಂಡ್ ಅಪಾರ್ಥ ಮಾಡಿಕೊಂಡಿರುವುದು ಗೊತ್ತಿಲ್ಲ. ಡಿಸಿಎಂ ದೂರು ಕೊಟ್ಟಿರುವುದು ಗೊತ್ತಿಲ್ಲ. ಯಾರು ಕೂಡ ನಮ್ಮ ಸಭೆ ಸಹಿಸಲ್ಲ ಎಂದಿಲ್ಲ. ಒಂದೊಮ್ಮೆ ಯಾರಾದ್ರೂ ಹಾಗೆ ಮಾತನಾಡಿದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಆ ಶಕ್ತಿ ನಮಗೂ ಇದೆ ಎಂದು ಯಾರ ಹೆಸರು ಹೇಳದೇ ಪ್ರತಿಕ್ರಿಯಿಸಿದ್ದಾರೆ.

    ರಾಜಣ್ಣ ಮಾತನಾಡಿ, ನಾವೇನೂ ಅವರ ಆಸ್ತಿ ಬರೆಸಿಕೊಂಡಿದ್ದೀವಾ? ಎಸ್‌ಸಿ, ಎಸ್‌ಟಿ ಮಕ್ಕಳ ಸಮಸ್ಯೆ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದೆವು. ಇದನ್ನು ಮಾಡ್ಬೇಡಿ ಅಂದ್ರೆ ಹೇಗೆ? ಇವೆಲ್ಲಾ ಬಹಳಷ್ಟು ದಿನ ನಡೆಯುವುದಿಲ್ಲ ಎಂದರು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣು – ಪತಿ ಆತ್ಮಹತ್ಯೆಗೆ ಯತ್ನ

    ನಮ್ಮ ಊಟ ನಮ್ಮದು. ಬೇರೆಯವರಿಗೆ ಏನು ಸಂಬಂಧ? ಅವರಿಗೇಕೆ ಆತಂಕ ಎಂದು ಸತೀಶ್‌ ಜಾರಕಿಹೊಳಿ ಖಾರವಾಗಿ ಹೇಳಿಕೆ ನೀಡಿದ್ದಾರೆ.

     

  • MUDA Scam| ಇವತ್ತು ಸಿಎಂ ಬ್ಯಾಕ್ ಟು ಬ್ಯಾಕ್ ಸಭೆ – ಒಂದೇ ಉದ್ದೇಶ, ಒಂದೇ ಸಂದೇಶ

    MUDA Scam| ಇವತ್ತು ಸಿಎಂ ಬ್ಯಾಕ್ ಟು ಬ್ಯಾಕ್ ಸಭೆ – ಒಂದೇ ಉದ್ದೇಶ, ಒಂದೇ ಸಂದೇಶ

    ಬೆಂಗಳೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥವರ್‌ ಚಂದ್‌ ಗೆಹ್ಲೋಟ್‌ ಅನುಮತಿ ನೀಡಿದ ಬೆನ್ನಲ್ಲೇ ಸಿದ್ದರಾಮ್ಯ (Siddaramaiah) ಇಂದು ಎರಡು ಮಹತ್ವದ ಸಭೆ ನಡೆಸಲಿದ್ದಾರೆ.

    ಹೌದು. ಇಂದು ಬೆಳಗ್ಗೆ 11ಗಂಟೆಗೆ ಸಚಿವ ಸಚಿವ ಸಂಪುಟ ಸಭೆ (Cabinet Meeting) ನಡೆಸಿದರೆ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಭೆಯನ್ನು (CLP Meeting) ಕರೆದಿದ್ದಾರೆ. ಈಗಾಗಲೇ ಶಾಸಕರುಗಳಿಗೂ ಸಿಎಲ್‌ಪಿ ಕಾರ್ಯದರ್ಶಿ ಮಾಹಿತಿ ರವಾನಿಸಿದ್ದು ತಪ್ಪದೇ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್ – ದರ್ಶನ್ A1 ಆರೋಪಿ? 

    ಈ ಸಭೆಯಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಗೆ ಕ್ಯಾಬಿನೆಟ್‌ನಲ್ಲಿ ಖಂಡನೆ ವ್ಯಕ್ತಪಡಿಸಿ ಪ್ರಕರಣದಲ್ಲಿ ಸಿಎಂ ಅವರನ್ನು ಬೆಂಬಲಿಸಲು ಶಾಸಕರಿಂದ ಒಕ್ಕೊರಲ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಅಗತ್ಯಬಿದ್ದರೇ ಮುಲಾಜಿಲ್ಲದೇ ಕುಮಾರಸ್ವಾಮಿ ಅರೆಸ್ಟ್‌ – ಸಿದ್ದರಾಮಯ್ಯ ವಾರ್ನಿಂಗ್‌

    ಕೆಂದ್ರದ ಅಣತಿಯಂತೆ ರಾಜ್ಯಪಾಲರು ತನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಮುಡಾ ಪ್ರಕರಣದಲ್ಲಿ ತನ್ನ ಪಾತ್ರ ಏನು ಇಲ್ಲ ಎಂದು ಸಿಎಂ ಅವರು ಶಾಸಕರಿಗೆ ಮನವರಿಕೆ ಮಾಡಲಿದ್ದಾರೆ.

    ಸಂದೇಶ ಯಾರಿಗೆ ?
    ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ಸಿಎಂ ಬಳಿ ಹೈಕಮಾಂಡ್‌ (Congress High Command) ವರದಿ ಕೇಳಿದೆ. ಈ ಸಂಬಂಧ ಶುಕ್ರವಾರ ಸಿಎಂ ದೆಹಲಿಗೆ ತೆರಳಿ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ, ಪಕ್ಷದೊಳಗಿನ ವಿದ್ಯಮಾನಗಳ ಬಗ್ಗೆ ವರದಿ ಸಲ್ಲಿಸಲಿದ್ದಾರೆ.

     

    ಈಗಾಗಲೇ ಕಾಂಗ್ರೆಸ್ ಹೈಕಮಾಂಡ್‌ಗೆ ಸಚಿವರು, ಆಪ್ತರು ತನ್ನ ಜೊತೆ ಇದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ. ಈಗ ಶಾಸಕರ ಜೊತೆ ಸಭೆ ನಡೆಸುವ ಮೂಲಕ ಸಿಎಂ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರದ ಭಾಗವಾಗಿ ಒಳ-ಹೊರ ವಿರೋಧಿಗಳಿಗೆ ಸಿದ್ದರಾಮಯ್ಯ ಸಂದೇಶ ಕಳುಹಿಸಲೆಂದೇ ಈ ಸಭೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

     

  • ಸದನದಲ್ಲಿ ವಿಪಕ್ಷಗಳನ್ನು ಕಟ್ಟಿ ಹಾಕಲು ಚರ್ಚೆ: ಸಿಎಲ್‌ಪಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

    ಸದನದಲ್ಲಿ ವಿಪಕ್ಷಗಳನ್ನು ಕಟ್ಟಿ ಹಾಕಲು ಚರ್ಚೆ: ಸಿಎಲ್‌ಪಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

    ಬೆಳಗಾವಿ:  ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ (CLP Meeting) ಬೆಳಗಾವಿ ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ರಾತ್ರಿ ನಡೆಯಿತು.

    ಈ ಸಭೆಯಲ್ಲಿ ಸಭೆಯಲ್ಲಿ ಸದನದಲ್ಲಿ ವಿಪಕ್ಷಗಳನ್ನು ಕಟ್ಟಿಹಾಕುವ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಒಂದೇ ಪೋಸ್ಟ್‌ಗೆ ಇಬ್ಬರ ನೇಮಕ- ಅಧಿಕಾರಿಗಳ ವರ್ಗಾವಣೆ ವೇಳೆ BMTC ಎಡವಟ್ಟು

    ಏನೇನು ಚರ್ಚೆ ನಡೆದಿದೆ?
    ಡಿಕೆಶಿ ಸಿಬಿಐ ಕೇಸ್‌ (DK Shivakumar CBI Case) ವಾಪಸ್‌, ಸಿದ್ದರಾಮಯ್ಯ ಮುಸ್ಲಿಂ ಸಮಾವೇಶದ ಹೇಳಿಕೆ ವಿಚಾರ ಸೇರಿದಂತೆ 4-5 ವಿಚಾರಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಪ್ರಯತ್ನಿಸಬಹುದು. ಅದಕ್ಕೆ ತಕ್ಕಂತೆ ನಮ್ಮ ಕಡೆಯಿಂದಲು ಸಿದ್ದತೆ ಮಾಡಿಕೊಳ್ಳಬೇಕು. ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸದನದಲ್ಲಿ ಇದ್ದು ಬೆಂಬಲಿಸಬೇಕು. ಸೋಮವಾರದಿಂದ ಜಟಾಪಟಿ ಜೋರಾಗಬಹುದು ಎಲ್ಲರೂ ಕಡ್ಡಾಯವಾಗಿ ಹಾಜರಿರುವಂತೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಮಾವುತನೇ ಅನುಮಾನ ವ್ಯಕ್ತಪಡಿಸಿದರೂ ವಿಸ್ತೃತ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ ಯಾಕೆ? – ಅರ್ಜುನ ಸಾವಿನ ಸುತ್ತ ಎದ್ದಿವೆ ಹಲವು ಪ್ರಶ್ನೆಗಳು

    ಸಭೆಯಲ್ಲಿ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ವರ್ತನೆ ಬಗ್ಗೆ ಕೆಲವು ಶಾಸಕರ ಅಸಮಾಧಾನ ಹೊರಹಾಕಿದ್ದಾರೆ. ಹಿರಿಯ ಶಾಸಕರಾದರೂ ಸರ್ಕಾರಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಈ ವರ್ತನೆ ಸರಿಯಲ್ಲ ಎಂದು ಹೇಳಿದ್ದಾರೆ. ಇದಕ್ಕೆ ರಾಯರೆಡ್ಡಿ ಹತ್ತಿರ ನಾನು ಮಾತನಾಡುತ್ತೇನೆ ಎಂದು ಸಿಎಂ ಸಮಾಧಾನ ಮಾಡಿದ್ದಾರೆ. ಶಾಸಕ ಬಿ.ಆರ್.ಪಾಟೀಲ್ (BR Patel) ರಾಜೀನಾಮೆ ನೀಡುವ ಪತ್ರದ ಬಗ್ಗೆಯೂ ಚರ್ಚೆ ನಡೆದಿದೆ.

     

    ಕರ್ನಾಟಕದಿಂದ ರಾಜ್ಯಸಭೆಗೆ (Rajya Sabha) ಸೋನಿಯಾ ಗಾಂಧಿ (Sonia Gandhi) ಅವರನ್ನು ಕರೆತರುವ ವಿಚಾರದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸೋನಿಯಾರನ್ನು ಕರ್ನಾಟಕದಿಂದಲೇ (Karnataka) ರಾಜ್ಯ ಸಭೆಗೆ ಕಳುಹಿಸೋಣ. ಇದರಿಂದ ಪಕ್ಷಕ್ಕೂ ಅನುಕೂಲ ಎಂದು ಶಾಸಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

  • ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದು ಆಯ್ಕೆ – ಸಿದ್ದರಾಮಯ್ಯ ಸಿಎಂ ಎಂದು ಘೋಷಿಸಿದ ಡಿಕೆಶಿ

    ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದು ಆಯ್ಕೆ – ಸಿದ್ದರಾಮಯ್ಯ ಸಿಎಂ ಎಂದು ಘೋಷಿಸಿದ ಡಿಕೆಶಿ

    ಬೆಂಗಳೂರು: ಕರ್ನಾಟಕ ಸಿಎಂ ಫೈಟ್‌ ಹೈಡ್ರಾಮಕ್ಕೆ ಕೊನೆಗೂ ತೆರೆ ಬಿದ್ದಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಿದ್ದರಾಮಯ್ಯ ಸಿಎಂ ಎಂದು ಡಿ.ಕೆ.ಶಿವಕುಮಾರ್‌ ಅವರಿಂದಲೇ ಘೋಷಣೆ ಮಾಡಿಸಲಾಯಿತು.

    ಕರ್ನಾಟಕ ಸಿಎಂ ಸಿದ್ದರಾಮಯ್ಯ ಎಂದು ಡಿಕೆಶಿ ಘೋಷಿಸಿ, ನಂತರ ಸಿದ್ದು ಕೈ ಕುಲುಕಿ ವಿಶ್‌ ಮಾಡಿದರು. ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘೋಷಿಸಿದರು. ಆ ಮೂಲಕ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಿದರು.

    ಇದಕ್ಕೂ ಮುನ್ನ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅಕ್ಕ ಪಕ್ಕ ಕುಳಿತಿರಲಿಲ್ಲ. ಸಭೆಯಲ್ಲಿ ಮೊದಲು ಮಾತನಾಡಿದ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ, ಸರ್ಕಾರ ತರುವಲ್ಲಿ ಟೀಂ ಕಾಂಗ್ರೆಸ್ ಪಾತ್ರ ಬಹಳ ದೊಡ್ಡದು. ಸಿದ್ದರಾಮಯ್ಯ, ಡಿಕೆಶಿ ಕೂಡ ಸಮರ್ಥವಾಗಿ ಮುನ್ನಡೆಸಿದ್ದಾರೆ. ಇದೊಂದು ದೊಡ್ಡ ಮಟ್ಟದ ವಿಜಯ. ಕರ್ನಾಟಕದ ಜನ, ನಮ್ಮ ಕಾರ್ಯಕರ್ತರನ್ನ ಮರೆಯದಿರಿ. ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಎಂದು ಹೈಕಮಾಂಡ್ ತೀರ್ಮಾನ‌ ಆಗಿದೆ. ಸರ್ವಾನುಮತದಿಂದ ಆಯ್ಕೆ ಮಾಡೋಣ ಎಂದು ತಿಳಿಸಿದರು.

    ನಂತರ ಮಾತನಾಡಿದ ಡಿಕೆಶಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಸೂಚಿಸಿದರು. ನಂತರ ಸಿದ್ದುಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಪಕ್ಷ ಹಾಗೂ ಶಾಸಕರಿಗೆ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದರು.

  • ಹ್ಯಾರಿಸ್ ಮಾತು ಕೇಳಿ ಕಕ್ಕಾಬಿಕ್ಕಿಯಾದ ಸಿದ್ದರಾಮಯ್ಯ

    ಹ್ಯಾರಿಸ್ ಮಾತು ಕೇಳಿ ಕಕ್ಕಾಬಿಕ್ಕಿಯಾದ ಸಿದ್ದರಾಮಯ್ಯ

    ಏ ಕಷಾಯ ತರಿಸು, ಮಾತ್ರೆ ತಾ
    – ಕಾಂಗ್ರೆಸ್‌ ಸಭೆ ನಡೆಯುತ್ತಿದ್ದಾಗ ಬಂತು ಮೆಸೇಜ್‌

    ಬೆಂಗಳೂರು: ಶಾಂತಿನಗರದ ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಮಾತು ಕೇಳಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಚ್ಚಿ ಬಿದ್ದ ಪ್ರಸಂಗ ನಡೆದಿದೆ.

    ಇಂದು ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸುವ ಮೊದಲು ಹ್ಯಾರಿಸ್‌ ಅವರು ಕೋವಿಡ್‌ 19 ಪರೀಕ್ಷೆ ಸಂಬಂಧ ಗಂಟಲ ದ್ರವವನ್ನು ನೀಡಿದ ಬಳಿಕ ಪಾಲ್ಗೊಂಡಿದ್ದರು.

    ಮಧ್ಯಾಹ್ನ ಊಟ ಮಾಡಿದ ನಂತರ ಹ್ಯಾರಿಸ್‌ ಅವರ ಮೊಬೈಲಿಗೆ ಕೊರೊನಾ ಪಾಸಿಟಿವ್‌ ಬಂದಿರುವ ಮೆಸೇಜ್‌ ಬಂದಿದೆ. ಮೆಸೇಜ್‌ ಬಂದಿರುವುದನ್ನು ನೋಡಿದ ಹ್ಯಾರಿಸ್‌ ನನಗೆ ಕೊರೊನಾ ಬಂದಿದೆ. ನಾನು ಸಭೆಯಿಂದ ತೆರಳುತ್ತೇನೆ ಎಂದು ಹೇಳಿ ಹೋಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಸೇರಲು ಮುಂದಾಗಿದ್ರಾ ರಾಗಿಣಿ? – ಕೆಪಿಸಿಸಿ ಚರ್ಚೆಯ ಇನ್‌ಸೈಡ್‌ ಸ್ಟೋರಿ

    ಹ್ಯಾರಿಸ್ ಮಾತು ಕೇಳಿ ಕೈ ನಾಯಕರುಗಳು ಹಾಗೂ ಶಾಸಕರುಗಳು ಒಮ್ಮೆ ಕಕ್ಕಾಬಿಕ್ಕಿಯಾಗಿದ್ದಾರೆ. ಮೆಸೇಜ್‌ ಬರುವ ಮೊದಲು ಸಿದ್ದರಾಮಯ್ಯ ಸಮೀಪ ಬಂದ ಹ್ಯಾರಿಸ್ ಕಿವಿಯಲ್ಲಿ ಗುಟ್ಟು ಹೇಳಿದ್ದರು.

    ಹ್ಯಾರಿಸ್ ಪಾಸಿಟಿವ್ ಅಂತ ಗೊತ್ತಾಗುತ್ತಿದ್ದಂತೆ ಬೆಚ್ಚಿಬಿದ್ದ ಸಿದ್ದರಾಮಯ್ಯ, ಅಯ್ಯೋ ಅವನ, ಇಲ್ಲಿ ಬಂದು ಏನೋ ಮಾತಾಡಿ ಹೋದ್ನಲ್ಲ. ಏ ಕಷಾಯ ತರಿಸು, ಮಾತ್ರೆ ಇರಬೇಕು ತರಿಸು ಎಂದು ಶಾಸಕ ಬೈರತಿ ಸುರೇಶ್‌ಗೆ ಸೂಚಿಸಿದ್ದಾರೆ.

    ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಬಂದ ಬಳಿಕ ಸಿದ್ದರಾಮಯ್ಯನವರಿಗೂ ಸೋಂಕು ಬಂದಿತ್ತು. ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದರಾಮಯ್ಯ ಆಗಸ್ಟ್‌ 13 ರಂದು ಡಿಸ್ಚಾರ್ಜ್‌ ಆಗಿದ್ದರು.

    ಡಿಸ್ಚಾರ್ಜ್‌ ಬಳಿಕ ಸಿದ್ದರಾಮಯ್ಯ ಎಲ್ಲರ ಜೊತೆ ಅಂತರ ಕಾಯ್ದುಕೊಂಡೇ ಇರುತ್ತಿದ್ದರು. ಮನೆಯಲ್ಲೇ ಸಭೆ ನಡೆಸದೇ ಹೊರಗಡೆ ನಡೆಸುತ್ತಿದ್ದಾರೆ. ಮನೆಯಲ್ಲಿದ್ದರೂ ಮತ್ತು ಹೊರಗಡೆ ಹೋದಾಗಲೂ ಕೈಗೆ ಗ್ಲೌಸ್‌, ಮುಖಕ್ಕೆ ಫೇಸ್‌ ಮಾಸ್ಕ್‌ ಧರಿಸಿಕೊಂಡೇ ಓಡಾಡುತ್ತಿದ್ದಾರೆ.