Tag: CLP

  • Maharashtraː ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಕಾಂಗ್ರೆಸ್‌ಗೆ ಗುಡ್‌ಬೈ

    Maharashtraː ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಕಾಂಗ್ರೆಸ್‌ಗೆ ಗುಡ್‌ಬೈ

    ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕ ಬಾಳಾಸಾಹೇಬ್ ಥೋರಟ್ (Balasaheb Thorat) ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ (Nana Patole) ಅವರೊಂದಿಗಿನ ಅಸಮಾಧಾನ ಸ್ಫೋಟಗೊಂಡ ಒಂದು ದಿನದ ನಂತರ ಬೆಳವಣಿಗೆ ಕಂಡುಬಂದಿದೆ. ಇದನ್ನೂ ಓದಿ: ಬ್ರಾಹ್ಮಣ ಸಮಾಜಕ್ಕೆ ಅವಹೇಳನ ಮಾಡಿಲ್ಲ- ಭಾರೀ ವಿರೋಧದ ಬಳಿಕ ಹೆಚ್‍ಡಿಕೆ ಸ್ಪಷ್ಟನೆ

    ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ (Nana Patole) ಅವರಿಂದ ತನಗೆ ಅವಮಾನವಾಗಿದೆ ಎಂದು ದೂರಿರುವ ಥೋರಟ್, ಪಟೋಲೆ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಜೊತೆಗೆ ರಾಜೀನಾಮೆ ಪತ್ರವನ್ನೂ ಸಲ್ಲಿಸಿದ್ದಾರೆ. ಅವರು ತಮ್ಮ ನಿಲುವಿಗೆ ಬದ್ಧರಾಗಿದ್ದು, ರಾಜೀನಾಮೆ ಹಿಂಪಡೆಯುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ.

    ಥೋರಟ್ ಪಕ್ಷದಲ್ಲಿ ತಮಗೆ ಅವಮಾನವಾಗಿದ್ದು, ರಾಜೀನಾಮೆ ನೀಡುತ್ತಿರುವುದಾಗಿ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಪಾರ್ಟಿ ನೆಪದಲ್ಲಿ ಕರೆಸಿ, ಕಾಶ್ಮೀರ ಮೂಲದ ಯುವತಿಯರ ಮೇಲೆ ಅತ್ಯಾಚಾರ ಯತ್ನ

    ಬಾಳಾಸಾಹೇಬ್ ಥೋರಟ್ ಅವರ ಸಂಬಂಧಿಯಾಗಿರುವ ನಾಸಿಕ್ ಪದವೀಧರ ಕ್ಷೇತ್ರದ ಎಂಎಲ್‌ಸಿ (MLC) ಸುಧೀರ್ ತಾಂಬೆ ಅವರು ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದರು. ಆದರೂ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ತಾಂಬೆ ಅವರು ತಮ್ಮ ಮಗ ಸತ್ಯಜಿತ್ ತಾಂಬೆಯನ್ನು ಸ್ವತಂತ್ರವಾಗಿ ಸ್ಪರ್ಧಿಸುವಂತೆ ಮಾಡಿದರು. ಸತ್ಯಜಿತ್ ಅವರು ಚುನಾವಣೆಯಲ್ಲಿ ಗೆದ್ದರು. ಫೆಬ್ರವರಿ 2 ರಂದು ಫಲಿತಾಂಶ ಪ್ರಕಟಿಸಲಾಯಿತು.

    ಎಂಎಲ್‌ಸಿ ಚುನಾವಣೆಯಲ್ಲಿ ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದಾರೆ ಎಂದು ಸುಧೀರ್ ತಾಂಬೆ ಹಾಗೂ ಸತ್ಯಜಿತ್ ತಾಂಬೆ ಅವರನ್ನು ಕಾಂಗ್ರೆಸ್ ಅಮಾನತುಗೊಳಿಸಿತ್ತು. ಹಾಗಾಗಿ ರಾಜ್ಯ ಕಾಂಗ್ರೆಸ್ ನಾಯಕತ್ವದಿಂದ ನನಗೆ ಅವಮಾನವಾಗಿದೆ. ತಾಂಬೆ ವಿಚಾರದಲ್ಲಿ ನನ್ನ ಕುಟುಂಬದ ವಿರುದ್ಧ ಹೇಳಿಕೆ ನೀಡಲಾಗುತ್ತಿದೆ ಎಂದು ಥೋರಟ್ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

    ಅಲ್ಲದೇ ಪಟೋಲೆ ಅವರು ನಾನು ಬಿಜೆಪಿ ವಿರುದ್ಧ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬಿಂಬಿಸಲು ಕೆಟ್ಟದ್ದಾಗಿ ಪ್ರಚಾರ ನಡೆಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತನ್ನನ್ನು ಸಂಪರ್ಕಿಸಿಲ್ಲ ಎಂದು ಥೋರಟ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಎಲ್‍ಪಿ ಸಭೆಯಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಗರಂ

    ಸಿಎಲ್‍ಪಿ ಸಭೆಯಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಗರಂ

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಗರಂ ಆಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪಕ್ಷದ ನಾಯಕರ ಎದುರೇ ಸಿಎಲ್ ಪಿ ಸಭೆಯಲ್ಲಿ ಅಖಂಡ ತನ್ನ ಆಕ್ರೋಶ ಹೊರಹಾಕಿದ್ದಾರೆ. ನನಗೊಂದು ನ್ಯಾಯ, ಸೌಮ್ಯ ರೆಡ್ಡಿಗೆ ಒಂದು ನ್ಯಾಯನಾ..?, ನನ್ನ ಪರ ಯಾವ ಒಬ್ಬ ಶಾಸಕರು ಹೇಳಿಕೆ ಕೊಟ್ಟಿಲ್ಲ. ಸೌಮ್ಯ ರೆಡ್ಡಿ ಪರ ಹೋರಾಟ ನಡೆದಿದೆ ಎಂದು ಕಿಡಿಕಾರಿದರು ಎನ್ನಲಾಗಿದೆ.

    ಅಖಂಡ ಶ್ರೀನಿವಾಸ್ ಮೂರ್ತಿ ಮಾತಿಗೆ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಕೂಡ ದನಿಗೂಡಿಸಿದರು. ಆದರೆ ಅಖಂಡ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂಬುದಾಗಿ ತಿಳಿದುಬಂದಿದೆ.

    ಸಭೆಯಲ್ಲಿ ಸಿ ಎಲ್ ಪಿ ನಾಯಕ ಸಿದ್ದರಾಮಯ್ಯ, ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, ಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಹಾಗೂ ಕೆ ಸಿ ಕೊಂಡಯ್ಯ ಮತ್ತಿತರರು ಉಪಸ್ಥಿತರಿದ್ದರು.

  • ಕೈ ನಾಯಕರಿಗೆ ಬೇಡವಾದ ಹುದ್ದೆಗೆ ಪಟ್ಟಾಭಿಷೇಕ ಮಾಡಲು ಹೈಕಮಾಂಡ್ ನಿರ್ಧಾರ

    ಕೈ ನಾಯಕರಿಗೆ ಬೇಡವಾದ ಹುದ್ದೆಗೆ ಪಟ್ಟಾಭಿಷೇಕ ಮಾಡಲು ಹೈಕಮಾಂಡ್ ನಿರ್ಧಾರ

    ಬೆಂಗಳೂರು: ಯಾರಿಗೂ ಬೇಡದ ಹುದ್ದೆಯನ್ನು ನಾಯಕರ ತಲೆಗೆ ಕಟ್ಟಲು ಕಾಂಗ್ರೆಸ್ ಹೈಕಮಾಂಡ್ ಮುಂದಾದಂತಿದೆ. ಬೇಡ ಬೇಡ ಅಂದರೂ ಹುದ್ದೆ ಸೃಷ್ಟಿಸಿ ಹೈಕಮಾಂಡ್ ಹೇಗಾದರೂ ಮಾಡಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಸಮಾಧಾನ ಪಡಿಸಲು ಮುಂದಾಗಿದೆ.

    ಕೆಪಿಸಿಸಿ, ವಿಪಕ್ಷ ಹಾಗೂ ಸಿಎಲ್‍ಪಿ ನಾಯಕನ ಸ್ಥಾನದ ಆಯ್ಕೆಗೆ ಕಾಂಗ್ರೆಸ್ ಹೈ ಕಮಾಂಡ್ ಕಸರತ್ತು ನಡೆಸುತ್ತಿದೆ. ಆದರೆ ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಎಲ್ಲರನ್ನು ಸಮಾಧಾನ ಪಡಿಸಲು ಕೈ ಹೈಕಮಾಂಡ್ ಕೂಡ ಹರ ಸಾಹಸ ಪಡುತ್ತಿದೆ. ಇದಕ್ಕಾಗಿ ಈಗ ಹೊಸ ಹುದ್ದೆಯೊಂದರ ಸೃಷ್ಟಿಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಅದೇ ಪ್ರಚಾರ ಸಮಿತಿ ಅಧ್ಯಕ್ಷನ ಹುದ್ದೆ.

    ಕೆಪಿಸಿಸಿ ಅಧ್ಯಕ್ಷ, ಸಿಎಲ್‍ಪಿ ನಾಯಕ, ವಿಪಕ್ಷ ನಾಯಕ ಹೀಗೆ ನಿರೀಕ್ಷೆಯ ಹುದ್ದೆ ವಂಚಿತವಾದ ನಾಯಕನಿಗೆ ಪ್ರಚಾರ ಸಮಿತಿ ಅಧ್ಯಕ್ಷನ ಸ್ಥಾನ ಕೊಟ್ಡು ಸಮಾಧಾನ ಪಡಿಸಲು ಕೈ ಹೈಕಮಾಂಡ್ ಮುಂದಾಗಿದೆ. ಆದರೆ ಇನ್ನು ಮೂರು ವರ್ಷಗಳ ಕಾಲ ಯಾವುದೇ ಪ್ರಮುಖ ಚುನಾವಣೆ ಇಲ್ಲದ ಕಾರಣ ಪ್ರಚಾರ ಸಮಿತಿ ಅಧ್ಯಕ್ಷನಾದರೂ ಯಾವುದೆ ಪ್ರಯೋಜನ ಇಲ್ಲ ಎನ್ನುವುದು ಕೈ ನಾಯಕರ ಅಭಿಪ್ರಾಯ.

    ಆದ್ದರಿಂದ ಪ್ರಚಾರ ಸಮಿತಿ ಅಧ್ಯಕ್ಷನ ಸ್ಥಾನ ನೀಡುತ್ತೇವೆ ಎಂದರೂ ಅದನ್ನ ಪಡೆಯಲು ಯಾರು ಸಿದ್ದರಿಲ್ಲ. ಹೈಕಮಾಂಡ್ ಲೆಕ್ಕಾಚಾರ ಕಂಡು ಕೈ ನಾಯಕರೇ ಬೆಚ್ಚಿ ಬಿದ್ದಿದ್ದಾರೆ. ಯಾವುದೇ ಸ್ಥಾನಮಾನ ಸಿಗದಿದ್ದರೂ ಪರವಾಗಿಲ್ಲ, ಆದರೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಮಾತ್ರ ಬೇಡ ಎಂದು ಕೈ ನಾಯಕರು ಒಳಗೊಳಗೆ ಆತಂಕಕ್ಕೆ ಒಳಗಾಗಿದ್ದಾರೆ.

  • ಖರ್ಗೆ-ಸಿದ್ದು ಉಪಹಾರ ಪಾಲಿಟಿಕ್ಸ್- ಡಿಕೆಶಿಗೆ ಚೆಕ್‍ಮೇಟ್?

    ಖರ್ಗೆ-ಸಿದ್ದು ಉಪಹಾರ ಪಾಲಿಟಿಕ್ಸ್- ಡಿಕೆಶಿಗೆ ಚೆಕ್‍ಮೇಟ್?

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಜೆಪಿಯಲ್ಲಿಗ ಸಂಪುಟ ವಿಸ್ತರಣೆ ಹಗ್ಗಜಗ್ಗಾಟ ಆಗುತ್ತಿದ್ದರೆ, ಕಾಂಗ್ರೆಸ್‍ನಲ್ಲಿ ಕೆಪಿಸಿಸಿ, ಸಿಎಲ್‍ಪಿ, ವಿಪಕ್ಷ ನಾಯಕನ ಕಸರತ್ತು ಮುಗಿಯೋ ಲಕ್ಷಣಗಳೇ ಕಾಣುತ್ತಿಲ್ಲ. ಕಾಂಗ್ರೆಸ್‍ನಲ್ಲಿ ಬಣಗಳ ಗುದ್ದಾಟ ಜೋರಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರ ಜತೆ ಸಾಫ್ಟ್ ಆಗೋದಕ್ಕೆ ಶುರು ಮಾಡಿದ್ದಾರೆ. ಅದರ ಫಲವೇ ಬೆಂಗಳೂರಿನಲ್ಲಿ ಖರ್ಗೆ-ಸಿದ್ದರಾಮಯ್ಯ ಇಬ್ಬರೂ ಒಟ್ಟಿಗೆ ಉಪಹಾರ ಸೇವಿಸಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

    ಬೆಂಗಳೂರಿನ ಜನಾರ್ದನ ಹೋಟೆಲ್‍ನಲ್ಲಿ ಉಭಯ ನಾಯಕರು ಉಪಹಾರ ಸೇವಿಸಿದ್ದಾರೆ. ಕೆಪಿಸಿಸಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಹೋಟೆಲ್‍ಗೆ ತೆರಳಿದ್ದಾರೆ. ಉಪಹಾರ ನೆಪದಲ್ಲಿ ಕಾಂಗ್ರೆಸ್‍ನ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ರು ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಹೊಂದಾಣಿಕೆ ರಾಜಕೀಯದ ತಂತ್ರ ತೋರಿದ್ರಾ ಸಿದ್ದರಾಮಯ್ಯ ಅನ್ನೋ ಚರ್ಚೆ ಜೋರಾಗ್ತಿದೆ. ಮೂಲ ಕಾಂಗ್ರೆಸಿಗರ ವಿಶ್ವಾಸ ಪಡೆಯಲು ದೊಡ್ಡ ನಾಯಕನ ಬಳಿಯೇ ಸಿದ್ದು ದಾಳ ಉರುಳಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

    ಮಲ್ಲಿಕಾರ್ಜುನ ಖರ್ಗೆ ಜತೆ ಮಾತುಕತೆ ವೇಳೆ ವಿಪಕ್ಷ ನಾಯಕರಾಗಲು ಅಡ್ಡಿಯಾಗಿರುವ ಕಾಂಗ್ರೆಸ್ ಮಹಾರಾಷ್ಟ್ರ ಮಾದರಿ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಿದರು ಎನ್ನಲಾಗಿದೆ. ಸಿಎಲ್.ಪಿ, ಎಲ್.ಓ.ಪಿ ಪ್ರತ್ಯೇಕ ಬೇಡ. ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿ ಬೇಡ. ಸಿಎಲ್.ಪಿ ನಾಯಕರೇ ವಿಪಕ್ಷ ನಾಯರನ್ನಾಗಿ ಮುಂದುವರಿಸುವ ಬಗ್ಗೆ ಹೈಕಮಾಂಡ್ ಗೆ ಮನವರಿಕೆ ಮಾಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ರು ಎನ್ನಲಾಗಿದೆ. ಅಷ್ಟೇ ಅಲ್ಲ ಕಾರ್ಯಾಧ್ಯಕ್ಷ ಸ್ಥಾನಗಳ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿರುವ ಸಿದ್ದರಾಮಯ್ಯ, ನೀವು ರಾಜ್ಯಸಭೆಗೆ ಹೋಗಬೇಕು ಬಿಜೆಪಿಯ ವಿರುದ್ಧ ಹೊರಾಡಲು ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಗೆ ನಿಮ್ಮ ಅಗತ್ಯತೆ ಇದೆ ಎಂದು ಖರ್ಗೆಗೆ ಸಲಹೆ ನೀಡಿದ್ರು ಎನ್ನಲಾಗಿದೆ. ಇನ್ನೊಂದೆಡೆ ಮೂಲ ವಲಸಿಗ ಬಣದ ಇಬ್ಬರು ನಾಯಕರ ಉಪಹಾರ ಪಾಲಿಟಿಕ್ಸ್ ನಿಂದ ಡಿ.ಕೆ ಶಿವಕುಮಾರ್ ಅಧ್ಯಕ್ಷರಾಗಲು ಇಬ್ಬರು ನಾಯಕರ ಮಾತುಕತೆಯಿಂದ ಅಡೆತಡೆ ಎದುರಾಗುತ್ತಾ? ಡಿಕೆಶಿಗೆ ಸಿದ್ದರಾಮಯ್ಯ ಚೆಕ್ ಮೇಟ್ ಇಟ್ಟರಾ.? ಖರ್ಗೆ ಅಷ್ಟು ಸುಲಭವಾಗಿ ಸಿದ್ದರಾಮಯ್ಯ ಸಲಹೆ ಪರಿಗಣಿಸ್ತಾರಾ ಅನ್ನೋ ಕುತೂಹಲ ಹುಟ್ಟುಹಾಕಿದೆ.

  • 4 ಕಾರ್ಯಾಧ್ಯಕ್ಷ ಸ್ಥಾನ ಬೇಡ- ಸಿಎಲ್‍ಪಿ, ವಿಪಕ್ಷ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಸಿದ್ದುಗೆ ಹೆಚ್‍ಕೆಪಿ ಗುದ್ದು

    4 ಕಾರ್ಯಾಧ್ಯಕ್ಷ ಸ್ಥಾನ ಬೇಡ- ಸಿಎಲ್‍ಪಿ, ವಿಪಕ್ಷ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಸಿದ್ದುಗೆ ಹೆಚ್‍ಕೆಪಿ ಗುದ್ದು

    ಬೆಂಗಳೂರು: ಕೆಪಿಸಿಸಿಯಲ್ಲಿ ಕಾರ್ಯಾಧ್ಯಕ್ಷ ಸ್ಥಾನ ಗಲಾಟೆ ಜೋರಾಗಿದೆ. ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮತ್ತು ಪರಮೇಶ್ವರ್ ಬಹಿರಂಗ ವಿರೋಧದ ಬಳಿಕ ಈಗ ಮತ್ತೊಬ್ಬ ಕಾಂಗ್ರೆಸ್ ನಾಯಕ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಹೆಚ್.ಕೆ ಪಾಟೀಲ್ 4 ಕಾರ್ಯಾಧ್ಯಕ್ಷ ಸ್ಥಾನಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ(ಸಿಎಲ್‍ಪಿ) ಮತ್ತು ವಿಪಕ್ಷ ನಾಯಕನ ಸ್ಥಾನವೂ ಪ್ರತ್ಯೇಕವಾಗಲಿ ಅಂತ ಬಹಿರಂಗವಾಗಿ ಸಿದ್ದರಾಮಯ್ಯ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ಕಾರ್ಯಾಧ್ಯಕ್ಷ ಸ್ಥಾನದ ಅವಶ್ಯಕತೆ ಇಲ್ಲ. ಯಾಕೆ ನಾಲ್ಕು ಕಾರ್ಯಾಧ್ಯಕ್ಷ ಬೇಕು ಅಂತಿದ್ದಾರೋ ಗೊತ್ತಿಲ್ಲ. ಈಗ ಇರೋ ಒಂದು ಕಾರ್ಯಾಧ್ಯಕ್ಷ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಂದುವರಿಸಲಿ. 4 ಕಾರ್ಯಾಧ್ಯಕ್ಷ ಸ್ಥಾನ ಬೇಡವೇ ಬೇಡ ಅಂತ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟರು.

    ಇನ್ನು ಸಿಎಲ್‍ಪಿ ಮತ್ತು ವಿಪಕ್ಷ ಸ್ಥಾನ ಪ್ರತ್ಯೇಕವಾಗಲಿ ಅಂತ ಮತ್ತೆ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ಸಮ್ಮಿಶ್ರ ಸರ್ಕಾರ ಇದ್ದಾಗ ಹುದ್ದೆಗಳು ಪ್ರತ್ಯೇಕವಾಗಿತ್ತು. ಕೇಂದ್ರದಲ್ಲಿ ಯುಪಿಎ ಅವಧಿಯಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಹಲವರಿಗೆ ಹುದ್ದೆ ಹಂಚಿಕೆ ಆಗಿತ್ತು. ಮಹಾರಾಷ್ಟ್ರದಲ್ಲೂ ಹಿಂದೆ ಸಿಎಲ್‍ಪಿ ಮತ್ತು ವಿಪಕ್ಷ ಸ್ಥಾನ ಹಂಚಿಕೆ ಆಗಿತ್ತು. ಹೀಗಾಗಿ ಮಹಾರಾಷ್ಟ್ರ ಮತ್ತು ಯುಪಿಎ ಮಾದರಿಯಲ್ಲಿಯೇ ರಾಜ್ಯದಲ್ಲೂ ಸ್ಥಾನ ಆಗಲಿ ಅಂತ ಸಲಹೆ ನೀಡಿದ್ದಾರೆ.

    ಇದೇ ವೇಳೆ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಅಲ್ಲ. ಆದಷ್ಟು ಬೇಗ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ಮಾಡಲಿ ಅಂತ ಹೈಕಮಾಂಡ್‍ಗೆ ಮನವಿ ಮಾಡಿದ್ರು.

  • 60 ಸೈನಿಕರೊಂದಿಗೆ ಸಿದ್ದರಾಮಯ್ಯ ದೆಹಲಿ ಯುದ್ಧ

    60 ಸೈನಿಕರೊಂದಿಗೆ ಸಿದ್ದರಾಮಯ್ಯ ದೆಹಲಿ ಯುದ್ಧ

    ಬೆಂಗಳೂರು: ರಾಜ್ಯ ಕಾಂಗ್ರೆಸ್ ಅಂತರ್ ಯುದ್ಧಕ್ಕೆ ಈಗ ದೆಹಲಿಯೇ ಅಖಾಡವಾಗಿದೆ. ಇಷ್ಟು ದಿನ ಇಲ್ಲಿಯೇ ಕಚ್ಚಾಡುತ್ತಿದ್ದ ಹಾಗೂ ತಮ್ಮ ತಮ್ಮಲ್ಲಿಯೇ ಕತ್ತಿ ಮಸೆಯುತ್ತಿದ್ದವರು ಇದೀಗ ದೆಹಲಿ ಅಖಾಡದಲ್ಲಿ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

    60 ಸೈನಿಕ ಬಲದೊಂದಿಗೆ ತಮ್ಮ ಶಕ್ತಿ ಪ್ರದರ್ಶನಕ್ಕೆ ದೆಹಲಿ ಅಖಾಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಾಳೆಯಿಂದ 10 ದಿನಗಳ ಕಾಲ ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ರಾಜ್ಯ ಕೈ ನಾಯಕರ ಜೊತೆ ಇಂದೇ ಮಾತುಕತೆಗೆ ಮುಂದಾಗಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಸ್ಥಾನ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ(ಸಿಎಲ್‍ಪಿ) ನಾಯಕನ ಸ್ಥಾನದ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಸಿದ್ದರಾಮಯ್ಯ ದೆಹಲಿಗೆ ತಲುಪಿದ್ದು ಅವರಿಗಿಂತಲೂ ಮೊದಲೇ ಸಿದ್ದರಾಮಯ್ಯ ಬೆಂಬಲಿತ 60 ಮುಖಂಡರುಗಳು ದೆಹಲಿ ತಲುಪಿದ್ದಾರೆ. ಹೀಗೆ 60 ಬೆಂಬಲಿಗರ ಲಾಬಿ ಮೂಲಕ ವಿಪಕ್ಷ ಹಾಗೂ ಸಿಎಲ್ ಪಿ ಎರಡು ನಾಯಕನ ಸ್ಥಾನವನ್ನ ತಾವೇ ಪಡೆಯುವುದು ಸಿದ್ದರಾಮಯ್ಯ ಗುರಿ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ತಮ್ಮ ಆಪ್ತರಿಗೆ ಕೊಡಿಸಲು ಕಸರತ್ತು ನಡೆಸುತ್ತಿದ್ದಾರೆ.

    ಸಿದ್ದರಾಮಯ್ಯ ಬೆಂಬಲಿಗರ ಬಲಾಬಲ ಏನೇ ಇದ್ದರೂ ಹೈಕಮಾಂಡ್ ಕೃಪಕಟಾಕ್ಷ ಸಿಕ್ಕವರಿಗೆ ಅವಕಾಶ ಅನ್ನೋದು ಕೈ ನಾಯಕರ ನಂಬಿಕೆಯಾಗಿದೆ. ಒಟ್ಟಾರೆ ಕೆಪಿಸಿಸಿಗೆ ಯಾರು ಅಧಿಪತಿ. ವಿಪಕ್ಷ ಹಾಗೂ ಸಿಎಲ್‍ಪಿಗೆ ಯಾರು ನಾಯಕ ಎಂಬ ಈ ಎಲ್ಲಾ ಕುತೂಹಲಕ್ಕೆ ಬಹುತೇಕ ಇಂದೇ ತೆರೆ ಬೀಳಲಿದೆ.

  • ಸೋನಿಯಾ ಗಾಂಧಿ ಕೈ ಸೇರಲಿದೆ ಸೀಕ್ರೆಟ್ ರಿಪೋರ್ಟ್

    ಸೋನಿಯಾ ಗಾಂಧಿ ಕೈ ಸೇರಲಿದೆ ಸೀಕ್ರೆಟ್ ರಿಪೋರ್ಟ್

    ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯದ ತಮ್ಮ ನಂಬಿಕಸ್ಥ ಬಂಟ ಮಾಜಿ ಡಿಸಿಎಂ ಪರಮೇಶ್ವರ್ ರಿಂದ ಸೀಕ್ರೆಟ್ ರಿಪೋರ್ಟ್ ತರಿಸಿಕೊಳ್ಳಲು ಮುಂದಾಗಿದ್ದಾರೆ. ಇದರ ಭಾಗವಾಗಿಯೇ ಶನಿವಾರ ಪರಮೇಶ್ವರ್ ನಿವಾಸದಲ್ಲಿ 21 ಹಿರಿಯ ನಾಯಕರ ಸಭೆ ನಡೆದಿದೆ.

    ಸಿಎಲ್ ಪಿ ನಾಯಕನ ಸ್ಥಾನ, ವಿಪಕ್ಷ ನಾಯಕನ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಲ್ಲದರ ಆಯ್ಕೆಗೂ ಒಬ್ಬರ ಸ್ಥಾನಮಾನವನ್ನ ಇನ್ನೊಬ್ಬರು ತಪ್ಪಿಸಲು ರಾಜ್ಯ ಕಾಂಗ್ರೆಸ್ ನಾಯಕರುಗಳು ಭರ್ಜರಿ ಲಾಬಿ ಮಾಡುತ್ತಿದ್ದಾರೆ. ಇದರಿಂದ ಅಸಮಾಧಾನಗೊಂಡ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ನಂಬಿಕೆಯ ನಾಯಕ ಪರಮೇಶ್ವರ್ ಗೆ ನೀವೇ ಎಲ್ಲಾ ನಾಯಕರ ಜೊತೆ ಸಭೆ ನಡೆಸಿ ಸಭೆಯ ರಿಪೋರ್ಟ್ ಕೊಡಿ ಅಂತ ಕೇಳಿದ್ದಾರೆ.

    ಸಭೆಯಲ್ಲಿ ನಾಯಕರುಗಳು ವ್ಯಕ್ತಪಡಿಸಿದ ಅಭಿಪ್ರಾಯವನ್ನ ಯಥಾವತ್ತಾಗಿ ಹೈಕಮಾಂಡ್ ಗೆ ಪರಮೇಶ್ವರ್ ವರದಿ ಮಾಡಲಿದ್ದಾರೆ. ಇದನ್ನೂ ಓದಿ: ನಂಬಿಕಸ್ಥ ಬಂಟನ ಮೊರೆ ಹೋದ ಸೋನಿಯಾ ಗಾಂಧಿ

    ನಾಯಕರುಗಳ ಅಭಿಪ್ರಾಯ ಕುರಿತ ವರದಿ ಆಧರಿಸಿ ಹೈಕಮಾಂಡ್ ರಾಜ್ಯದಲ್ಲಿ ಸೂಕ್ತ ಸ್ಥಾನಮಾನ ನೀಡಲಿದೆ. ನಿನ್ನೆಯ ಸಭೆಯಲ್ಲಿನ ನಾಯಕರ ಅಭಿಪ್ರಾಯದ ಸೀಕ್ರೆಟ್ ರಿಪೋರ್ಟ್ ಶೀಘ್ರವಾಗಿ ಸೋನಿಯಾ ಗಾಂಧಿ ಕೈ ಸೇರಲಿದೆ. ರಾಜ್ಯ ಕಾಂಗ್ರೆಸ್ ನಾಯಕರ ಭವಿಷ್ಯ ಪರಮೇಶ್ವರ್ ಸೀಕ್ರೆಟ್ ರಿಪೋರ್ಟ್ ಮೇಲೆ ನಿಂತಿದೆ.

  • ಹೈಕಮಾಂಡ್ ಕೈ ಸೇರಲಿದೆ ಮಿಸ್ತ್ರಿ ವರದಿ- ಸಿದ್ದುಗೆ ವಿಪಕ್ಷ ಸ್ಥಾನ ಸಾಧ್ಯತೆ

    ಹೈಕಮಾಂಡ್ ಕೈ ಸೇರಲಿದೆ ಮಿಸ್ತ್ರಿ ವರದಿ- ಸಿದ್ದುಗೆ ವಿಪಕ್ಷ ಸ್ಥಾನ ಸಾಧ್ಯತೆ

    ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‍ಪಿ)ಸಭೆ ನಾಯಕ ಹಾಗೂ ವಿಪಕ್ಷ ನಾಯಕ ಸ್ಥಾನ ಆಯ್ಕೆ ಬಗ್ಗೆ ಹೈಕಮಾಂಡ್‍ಗೆ ಇಂದು ವರದಿ ತಲುಪಲಿದೆ.

    ಎಐಸಿಸಿ ವೀಕ್ಷಕರಾಗಿ ಬಂದಿದ್ದ ಮಧುಸೂದನ್ ಮಿಸ್ತ್ರಿ ವರದಿ ಸಿದ್ಧಪಡಿಸಿದ್ದು, ಸಿದ್ದರಾಮಯ್ಯಗೆ ವಿಪಕ್ಷ ಸ್ಥಾನ ಸಿಗಲಿದ್ದು, ಸಿಎಲ್‍ಪಿ ಸ್ಥಾನ ತಪ್ಪಲಿದೆ. ಸಿಎಲ್‍ಪಿ ನಾಯಕರಾಗಿ ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕ ಎಚ್.ಕೆ ಪಾಟೀಲ್ ಅವರಿಗೆ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಇದೇ 10ಕ್ಕೆ ಅಧಿವೇಶನ ಆರಂಭವಾಗಲಿದ್ದು, 9ರ ಸಂಜೆ ಪ್ರಕಟವಾಗಲಿದೆ ಎನ್ನಲಾಗುತ್ತಿದೆ.

    ಇತ್ತ ಕಾಂಗ್ರೆಸ್ಸಿಗೆ ಯಾವ ವ್ಯಕ್ತಿಯೂ ಅನಿವಾರ್ಯವಲ್ಲ ಎಂದು ಸಿದ್ದರಾಮಯ್ಯಗೆ ಮಾಜಿ ಸಂಸದ ಮುನಿಯಪ್ಪ ತಿವಿದಿದ್ದಾರೆ. ಈ ಮಧ್ಯೆ, ಸಚಿವ ಈಶ್ವರಪ್ಪ ತಮ್ಮ ಅಳಿಯನಿಗಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಆಪ್ತ ಅಧಿಕಾರಿಯನ್ನು ಎತ್ತಂಗಡಿ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಬೆಂಗಳೂರು ವಿಭಾಗದಲ್ಲಿದ್ದ ಎಂಟಿಬಿ ಆಪ್ತ, ಪದ್ಮನಾಭ್ ಜಾಗಕ್ಕೆ ನಗರಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯಪಾಲಕ ಎಂಜಿನಿಯರ್ ಆಗಿದ್ದ ಅಳಿಯ ಕೆ.ಸಿ ಶ್ರೀನಿವಾಸ್ ಅವರನ್ನು ತಂದಿದ್ದಾರೆ. ಇದನ್ನೂ ಓದಿ: ‘ಕಾಂಗ್ರೆಸ್ ಪಕ್ಷಕ್ಕೆ ಯಾವ ವ್ಯಕ್ತಿಯೂ ಅನಿವಾರ್ಯ ಅಲ್ಲ’- ಪರೋಕ್ಷವಾಗಿ ಸಿದ್ದರಾಮಯ್ಯಗೆ ತಿವಿದ ಮುನಿಯಪ್ಪ

  • ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಕಳೆದುಕೊಳ್ತಾರಾ ಸಿದ್ದರಾಮಯ್ಯ?

    ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಕಳೆದುಕೊಳ್ತಾರಾ ಸಿದ್ದರಾಮಯ್ಯ?

    ಬೆಂಗಳೂರು: ಅಸಮಾಧಾನದ ಬೇಗುದಿಯಲ್ಲೇ ಇರುವ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಅನ್ನೋ ಮಾತು ಕೇಳಿಬಂದಿದೆ.

    ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಹುದ್ದೆಯಲ್ಲಿದ್ದುಕೊಂಡು ಜವಾಬ್ದಾರಿಗಳನ್ನು ನಿರ್ವಹಿಸುತ್ತಿಲ್ಲವಂತೆ. ಅಧಿವೇಶನದ ವೇಳೆ ಶಾಸಕಾಂಗ ಪಕ್ಷದ ನಾಯಕರಾಗಿ ಶಾಸಕರ ಸಭೆ ನಡೆಸಿದ್ದು ಬಿಟ್ರೆ ಬೇರೇನೂ ಮಾಡಿಲ್ಲ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಪಕ್ಷದ ಕಡೆಯಿಂದ ಯಾರು ಮಾತಾಡಬೇಕು ಅನ್ನೋದನ್ನು ತೀರ್ಮಾನಿಸಿಲ್ಲ ಎಂಬ ಆರೋಪಗಳು ಪಕ್ಷದಲ್ಲಿ ಕೇಳಿ ಬಂದಿವೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಈ ಸಂಬಂಧ ಪಕ್ಷದಲ್ಲಿಯ ಕೆಲ ಮುಖಂಡರು ಹೈಕಮಾಂಡ್ ಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಸಿ ಆ ಜಾಗದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರನ್ನು ಕೂರಿಸುವ ಕಸರತ್ತು ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

    ಬುಧವಾರ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಜಾಗಕ್ಕೆ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಿದೆ. ಸಿದ್ದರಾಮಯ್ಯರ ಆಪ್ತರಾದ ಗುಂಡೂರಾವ್ ಕೆಪಿಸಿಸಿ ನೂತನ ಸಾರಥಿ ನೇಮಕವಾದ ಬಳಿಕ ಪರಮೇಶ್ವರ್ ಬಣಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.