Tag: Cloud

  • ಆಪರೇಷನ್ ಅಮರನಾಥ ಚಾಲೆಂಜ್ ಆಗಿದೆ: ಕರ್ನಲ್ ವಿ.ಎಂ. ನಾಯಕ್

    ಆಪರೇಷನ್ ಅಮರನಾಥ ಚಾಲೆಂಜ್ ಆಗಿದೆ: ಕರ್ನಲ್ ವಿ.ಎಂ. ನಾಯಕ್

    ಬೆಂಗಳೂರು: ಅಮರನಾಥ ಧಾಮ ಹಿಮಾಲಯದ ದುರ್ಗಮ ಪರ್ವತ ಶ್ರೇಣಿಗಳ ನಡುವೆ ಇರುವುದರಿಂದ ಇಲ್ಲಿ ರಕ್ಷಣಾ ಕಾರ್ಯವೇ ಚಾಲೆಂಜ್ ಆಗಿದೆ ಎಂದು ಕರ್ನಲ್ ವಿ.ಎಂ. ನಾಯಕ್ ತಿಳಿಸಿದರು.

    ಶುಕ್ರವಾರ ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥನ ಹಿಮಲಿಂಗದ ಗುಹೆ ಬಳಿ ಮೇಘಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಇನ್ನೂ 40 ಮಂದಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅಮರನಾಥ ಆಪರೇಷನ್ ಅತ್ಯಂತ ಕಠಿಣವಾಗಿದ್ದು, ಇಲ್ಲಿ ಪದೇ ಪದೇ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಆಪರೇಷನ್‍ಗೆ ಬಲುಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

    ಅಷ್ಟೇ ಅಲ್ಲದೇ ಈ ಅಮರನಾಥ ಧಾಮದಲ್ಲಿ ಮೋಡ ಯಾವುದು, ಬೆಟ್ಟ ಯಾವುದೂ ಎಂದು ಗೊತ್ತಾಗದ ಪರಿಸ್ಥಿತಿಯೂ ಇದೆ. ಇದರಿಂದಾಗಿ ಈ ಭಾಗದ ರಕ್ಷಣಾ ಕಾರ್ಯಾಚರಣೆಗೆ ಅತ್ಯಂತ ನುರಿತ ಯೋಧರನ್ನೇ ಬಳಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಊರಿಗೆ ವಾಪಾಸಾಗಲು ಅನುಮತಿಗಾಗಿ ಕಾಯುತ್ತಿದ್ದೇವೆ – ಯಾತ್ರೆಯಿಂದಲೇ ಪಬ್ಲಿಕ್ ಟಿವಿಗೆ ಲೈವ್ ಕೊಟ್ಟ ಕನ್ನಡಿಗರು

    ಅಮರನಾಥ ಯಾತ್ರೆಯಲ್ಲಿ ಸಿಲುಕಿದವರನ್ನು ರೋಪ್ ಮುಖಾಂತರ ರಕ್ಷಣೆ ಮಾಡಬೇಕು. ಶ್ರೀನಗರದ ಆಸ್ಪತ್ರೆಗೆ ಗಾಯಾಳುಗಳನ್ನು ಕೊಂಡೊಯ್ಯಬೇಕು. ಅಮರನಾಥದಲ್ಲಿ ಕೇವಲ ಫಸ್ಟ್‌ ಏಡ್ ಮಾತ್ರ ಲಭ್ಯವಿದೆ. ಅಲ್ಲಿ ಮರ ಇರಲ್ಲ. ಬದಲಿಗೆ ಎಲ್ಲಾ ಕಡೆ ಬಂಡೆ ಬೆಟ್ಟಗಳ ಜೊತೆಗೆ ಕಡಿದಾದ ದುರ್ಗಮ ಮಾರ್ಗದಿಂದ ಕೂಡಿದೆ. ಹೀಗಾಗಿ ರಕ್ಷಣಾ ಕಾರ್ಯ ಕಷ್ಟವಾಗುತ್ತದೆ ಎಂದರು. 

    ಅಮರನಾಥ ಭಾಗದಲ್ಲಿ ಹೆಲಿಕಾಪ್ಟರ್‌ನ್ನು ಬ್ಯಾಲೆನ್ಸ್ ಮಾಡುವುದು ಕಷ್ಟವಾಗಿದೆ. ಇದೇ ಪ್ರಯಾಸವಾದ ಕೆಲಸವಾಗಿದೆ. ಏಕೆಂದರೆ ವೇಗವಾಗಿ ಬೀಸುವ ಗಾಳಿಯ ಜೊತೆಗೆ ಮಳೆ ಬರುತ್ತದೆ. ಇದೆಲ್ಲದರ ಮಧ್ಯೆ ಮೋಡವೂ ಇರುತ್ತದೆ. ಈ ಎಲ್ಲಾ ಹವಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್‌ನ್ನು ಅಲ್ಲಿ ತರುವುದು ಕಷ್ಟವಾಗಿದೆ ಎಂದರು. ಇದನ್ನೂ ಓದಿ: ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ, 40 ಮಂದಿ ನಾಪತ್ತೆ – ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ನಗರಗಳ ಹವಾಮಾನ ವರದಿ: 22-09-2020

    ರಾಜ್ಯದ ನಗರಗಳ ಹವಾಮಾನ ವರದಿ: 22-09-2020

    ನಿವಾರ, ಭಾನುವಾರ ಉಡುಪಿ ಭಾಗದಲ್ಲಿ ಅಬ್ಬರಿಸಿದ್ದ ವರುಣ ರಾಯ ಬಿಡುವು ನೀಡಿದ್ದಾನೆ. ಅಲ್ಲಲ್ಲಿ ಕೊಂಚ ಮಳೆ ಬೀಳುತ್ತಿದೆ. ಇಂದು ಸಹ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಸ ಮುಸುಕಿದೆ ವಾತಾವರಣವಿರಲಿದೆ. ಮಲೆನಾಡು, ಕೊಡಗು ಭಾಗದಲ್ಲಿ ಮಳೆಯಾಗಲಿದೆ. ಉತ್ತರ ಕರ್ನಾಟಕದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳಿವೆ.

    ಬಿಸಿಲ ನಾಡು ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ 21 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಲಿದೆ.

    ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
    ಬೆಂಗಳೂರು: 27-19
    ಮಂಗಳೂರು: 28-24
    ಶಿವಮೊಗ್ಗ: 26-21
    ಬೆಳಗಾವಿ: 23-20
    ಮೈಸೂರು: 27-20

    ಮಂಡ್ಯ: 28-20
    ರಾಮನಗರ: 28-20
    ಮಡಿಕೇರಿ: 21-17
    ಹಾಸನ: 23-19
    ಚಾಮರಾಜನಗರ: 27-20

    ಚಿಕ್ಕಬಳ್ಳಾಪುರ: 26-18
    ಕೋಲಾರ: 28-19
    ತುಮಕೂರು: 27-19
    ಉಡುಪಿ: 28-25
    ಕಾರವಾರ: 28-26

    ಚಿಕ್ಕಮಗಳೂರು: 23-18
    ದಾವಣಗೆರೆ: 27-21
    ಚಿತ್ರದುರ್ಗ: 27-21
    ಹಾವೇರಿ: 26-21
    ಬಳ್ಳಾರಿ: 29-22

    ಧಾರವಾಡ: 24-20
    ಗದಗ: 26-21
    ಕೊಪ್ಪಳ: 27-22
    ರಾಯಚೂರು: 30-23
    ಯಾದಗಿರಿ: 29-23

    ವಿಜಯಪುರ: 27-19
    ಬೀದರ್: 28-21
    ಕಲಬುರಗಿ: 28-22
    ಬಾಗಲಕೋಟೆ: 28-22

  • ಅಪರೂಪದ ಸುಂಟರಗಾಳಿ, ಸುಳಿ ಮೋಡ – ಪ್ರಕೃತಿ ವೈಭವಕ್ಕೆ ಗ್ರಾಮಸ್ಥರು ಅಚ್ಚರಿ

    ಅಪರೂಪದ ಸುಂಟರಗಾಳಿ, ಸುಳಿ ಮೋಡ – ಪ್ರಕೃತಿ ವೈಭವಕ್ಕೆ ಗ್ರಾಮಸ್ಥರು ಅಚ್ಚರಿ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ರಾಮನಾಳ ಗ್ರಾಮದಲ್ಲಿ ಕಂಡು ಬಂದ ಪ್ರಕೃತಿಯ ಅಪರೂಪದ ದೃಶ್ಯಕ್ಕೆ ಇಡೀ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.

    ಒಂದೆಡೆ ವಿಚಿತ್ರ ಸುಂಟರಗಾಳಿ ಇನ್ನೊಂದೆಡೆ ಆಕಾಶದಲ್ಲಿ ಸುರಳಿಯಾಕಾರದಲ್ಲಿ ಭೂಮಿಗೆ ಇಳಿಯಲು ಸಜ್ಜಾದ ಮೋಡದ ದೃಶ್ಯ ಬೆರಗು ಮೂಡಿಸಿದೆ. ಪ್ರಕೃತಿಯ ವೈಶಿಷ್ಟ್ಯಕ್ಕೆ ಬೆರಗಾದ ಗ್ರಾಮಸ್ಥರು ವಿಚಿತ್ರ ಸುಳಿ ಗಾಳಿ ಕಂಡು ಗಾಬರಿಗೊಂಡಿದ್ದಾರೆ.

    ಜಮೀನೊಂದರಲ್ಲಿ ಕಂಡು ಬಂದ ಸುಂಟರಗಾಳಿ ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಗ್ರಾಮೀಣ ಭಾಗದಲ್ಲಿ ಸುಳಿಗಾಳಿಗೆ ದೆವ್ವದ ಗಾಳಿ ಅಂತಲೇ ಕರೆಯುತ್ತಾರೆ. ಇನ್ನೂ ಆಗಸದಲ್ಲಿ ಸುರಳಿ ಆಕಾರದಲ್ಲಿ ಕಂಡು ಬಂದ ಮೋಡ ಅಚ್ಚರಿಯನ್ನ ಮೂಡಿಸಿತು.

    ಗ್ರಾಮಸ್ಥರು ಈ ಅಪರೂಪದ ದೃಶ್ಯಗಳನ್ನ ತಮ್ಮ ಮೊಬೈಲ್‍ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ಮಳೆ ಮೋಡದ ಮರೆಯಲ್ಲಿ ವರ್ಷದ ಮೊದಲ ಕೌತುಕ- ಉಡುಪಿಯಲ್ಲಿ ಸೂರ್ಯಗ್ರಹಣ ದರ್ಶನ

    ಮಳೆ ಮೋಡದ ಮರೆಯಲ್ಲಿ ವರ್ಷದ ಮೊದಲ ಕೌತುಕ- ಉಡುಪಿಯಲ್ಲಿ ಸೂರ್ಯಗ್ರಹಣ ದರ್ಶನ

    ಉಡುಪಿ: ಜಿಲ್ಲೆಯಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಗೋಚರವಾಗಿದೆ. ಬೆಳಗ್ಗೆ 10.04 ನಿಮಿಷಕ್ಕೆ ಸರಿಯಾಗಿ ಸೂರ್ಯಗ್ರಹಣ ಆರಂಭವಾಗಿದೆ. ಮಳೆ ಮೋಡದ ನಡುವೆ ಗ್ರಹಣದ ಸೂರ್ಯ ಆಗಾಗ ದರ್ಶನ ಕೊಟ್ಟಿದ್ದಾನೆ.

    ಈ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ ಆರಂಭವಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮುಂಗಾರು ಅಬ್ಬರಿಸುತ್ತಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇರುವುದರಿಂದ ಸೂರ್ಯ ಮೋಡದ ಮರೆಯಿಂದ ಆಗಾಗ ಹೊರಬಂದು ಕಾಣಿಸಿಕೊಳ್ಳುತ್ತಿದ್ದಾನೆ. ನಿಗದಿತ ಸಮಯಕ್ಕೆ ಅಂದರೆ 10.04ಕ್ಕೆ ಗ್ರಹಣ ಆರಂಭವಾಗಿದ್ದು, ಲಕ್ಷಾಂತರ ಜನ ಗ್ರಹಣವನ್ನು ವೀಕ್ಷಣೆ ಮಾಡಿದ್ದಾರೆ.

    11.37ಕ್ಕೆ ಉಡುಪಿ ಜಿಲ್ಲೆಯಲ್ಲಿ ಶೇ.40ರಷ್ಟು ಗ್ರಹಣ ಕಾಣಿಸಿಕೊಳ್ಳಲಿದೆ. ಮಧ್ಯಾಹ್ನ 1.22 ಗ್ರಹಣ ಮೋಕ್ಷ ಕಾಲ. ದಕ್ಷಿಣ ಭಾರತದಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗುವುದಿಲ್ಲ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಹೆಚ್ಚು ಅಂಶ ಗೋಚರವಾಗುತ್ತದೆ. ಕುರುಕ್ಷೇತ್ರದಲ್ಲಿ ಇಡೀ ದೇಶದ ಅತಿ ಹೆಚ್ಚು ಸೂರ್ಯ ಗ್ರಹಣ ಗೋಚರವಾಗಲಿದೆ ಎಂದು ಹಿರಿಯ ಭೌತಶಾಸ್ತ್ರಜ್ಞ ಎ.ಪಿ.ಭಟ್ ಮಾಹಿತಿ ನೀಡಿದರು.

  • ಶಿವ-ಗಂಗಾ ವಿವಾಹ ಮಹೋತ್ಸವದ ವೇಳೆ ಆಕಾಶದಲ್ಲಿ ಶಿವಲಿಂಗ ದರ್ಶನ

    ಶಿವ-ಗಂಗಾ ವಿವಾಹ ಮಹೋತ್ಸವದ ವೇಳೆ ಆಕಾಶದಲ್ಲಿ ಶಿವಲಿಂಗ ದರ್ಶನ

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಭಾನುವಾರ ಸಂಜೆ ನಡೆದ ಶಿವ-ಗಂಗಾ ವಿವಾಹ ಮಹೋತ್ಸವದ ಸಂದರ್ಭದಲ್ಲಿ ಅಚ್ಚರಿಯೊಂದು ನಡೆದಿದೆ.

    ಕಡಲತೀರದಲ್ಲಿ ಶಿವ-ಗಂಗಾ ವಿವಾಹ ಮಹೋತ್ಸವ ನೆರವೇರುವ ಸಂದರ್ಭದಲ್ಲಿ ಆಕಾಶದಲ್ಲಿ ಮೋಡವು ಶಿವಲಿಂಗದ ಆಕಾರದಲ್ಲಿ ಗೋಚರಿಸಿದೆ. ಇದನ್ನು ಕಂಡು ಭಕ್ತಾದಿಗಳು ವಿಸ್ಮಯಗೊಂಡಿದ್ದಾರೆ. ಅಚ್ಚರಿಯಿಂದ ಮೋಡದಲ್ಲಿ ಮೂಡಿದ್ದ ಶಿವಲಿಂಗಕ್ಕೆ ನಮಿಸಿದ್ದಾರೆ.

    ಸೂರ್ಯಾಸ್ತದ ಬಳಿಕ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿಶ್ಚಿತ ವಧುವಾಗಿ ಬಂದ ಗಂಗಾಮಾತೆ ಶಿವನನ್ನು ವಿವಾಹವಾಗುವ ವೇಳೆಗೆ ಮೋಡದಲ್ಲಿ ಶಿವಲಿಂಗದ ರೂಪ ಮೂಡಿತ್ತು. ಇದನ್ನು ಕಂಡ ಸ್ಥಳದಲ್ಲಿ ನೆರೆದಿದ್ದ ಭಕ್ತರು ಅಚ್ಚರಿಪಟ್ಟರು. ಅಲ್ಲದೆ ಕೆಲವರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಂಡಿದ್ದರೆ, ಕೆಲವರು ವಿಡಿಯೋ ಮಾಡಿಕೊಂಡಿದ್ದಾರೆ.

    ಈ ವಿಸ್ಮಯ ದೃಶ್ಯವನ್ನು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಮೋಡದಲ್ಲಿ ಮೂಡಿದ್ದ ಶಿವಲಿಂಗ ವಿಚಾರ ಎಲ್ಲೆಡೆ ಸುದ್ದಿಯಾಗಿದೆ.

  • ಮೋಡಕ್ಕೆ ಮುತ್ತಿಕ್ಕಿ ಹೊರಟ ಧೂಳಿನ ಕಣ: ವಿಡಿಯೋ ನೋಡಿ

    ಮೋಡಕ್ಕೆ ಮುತ್ತಿಕ್ಕಿ ಹೊರಟ ಧೂಳಿನ ಕಣ: ವಿಡಿಯೋ ನೋಡಿ

    ಚಿಕ್ಕಮಗಳೂರು: ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಗಾಳಿ, ನೀರು, ಬೆಂಕಿ ಪ್ರಕೃತಿ ಮುಂದೆ ಮನುಷ್ಯ ಸೊನ್ನೆಯೇ. ಚಿಕ್ಕಮಗಳೂರಿನಲ್ಲಿ ಈಗ 28-30 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಈ ಬಿಸಿಲಿಗೆ ಜನ ಬಸವಳಿದಿದ್ದಾರೆ.

    ಬೀಸುತ್ತಿರುವ ಗಾಳಿ ಕೂಡ ಬೆಂಕಿಯನ್ನು ಉಗುಳುತ್ತಿದೆ. ಹೀಗಿರುವಾಗ ಕಾಫಿನಾಡ ರಣಬಿಸಿಲ ಮಧ್ಯೆಯೂ ನೋಡ ನೋಡ್ತಿದ್ದಂತೆ ಜಿಲ್ಲಾ ಆಟದ ಮೈದಾನದಲ್ಲಿ ಬಿಸಿದ ಬಿರುಗಾಳಿಗೆ ಧೂಳಿನ ಕಣ ಕೂಡ ಮೋಡಕ್ಕೆ ಮುತ್ತಿಕ್ಕಿ ಹೊರಟಂತೆ ಭಾಸವಾಗಿದೆ.

    ಕ್ಷಣಾರ್ಧದಲ್ಲಿ ಬೀಸಿದ ಬಿರುಗಾಳಿ ಜನ ಅತ್ತ ದೃಷ್ಟಿ ಹಾಯುಸುವಷ್ಟರಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಈ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳಿಯರು ಪ್ರಕೃತಿಯಲ್ಲಿನ ಸತ್ಯ ಕಂಡು ಆಶ್ಚರ್ಯಕ್ಕೀಡಾಗಿದ್ದಾರೆ. ಅಲ್ಲದೆ ಈ ಘಳಿಗೆಯನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದ್ದಾರೆ.

  • ಮೋಡಗಳ ಮರೆಯಲ್ಲಿ ಹಂಪಿ ಕಂಡು ಬಂದಿದ್ದು ಹೀಗೆ

    ಮೋಡಗಳ ಮರೆಯಲ್ಲಿ ಹಂಪಿ ಕಂಡು ಬಂದಿದ್ದು ಹೀಗೆ

    ಬಳ್ಳಾರಿ: ಕಣ್ಣು ಇದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು ಅನ್ನೋ ನಾಣ್ಣುಡಿಯಿದೆ. ವಿಶ್ವ ವಿಖ್ಯಾತ ಹಂಪಿಯನ್ನು ನೋಡುವುದೇ ಒಂದು ವೈಶಿಷ್ಟ್ಯ.

    ವಿಶ್ವ ವಿಖ್ಯಾತ ಹಂಪಿಯನ್ನು ನೋಡಲು ಎರಡು ಕಣ್ಣು ಸಾಲದೂ ಅಂತಾರೆ. ಆದರೆ ಮೋಡಗಳ ಮರೆಯಲ್ಲಿ ನಿಮಿಷ ನಿಮಿಷಕ್ಕೂ ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ನೋಡುವುದೇ ಒಂದು ಹಬ್ಬವಾಗಿದೆ. ಛಾಯಾ ಚಿತ್ರಗ್ರಾಹಕ ಮತ್ತು ಪತ್ರಕರ್ತ ಅವರು ತಮ್ಮ ಕ್ಯಾಮೆರಾದಲ್ಲಿ ಮೋಡಗಳ ಚೆಲ್ಲಾಟಗಳ ಮಧ್ಯೆ ಹಂಪಿಯ ಕೆಲವು ಸ್ಥಳಗಳನ್ನು ಸೆರೆ ಹಿಡಿದಿದ್ದಾರೆ.

    ಕಮಲಾಪುರದ ನಿವಾಸಿ ರಾಚಯ್ಯ ತಮ್ಮ ಕ್ಯಾಮೆರಾಗಳಲ್ಲಿ ಮೋಡಗಳ ಚೆಲ್ಲಾಟಗಳ ಮಧ್ಯೆ ಹಂಪಿ ಹೇಗೆ ಬಿಂಬಿಸುತ್ತವೆ ಅನ್ನೋ ವಿಶೇಷವಾದ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

    ವಿಜಯ ವಿಠ್ಠಲ ದೇವಾಲಯ ಹಾಗೂ ಹಂಪಿಯ ಕಲ್ಲಿನ ರಥದ ಮೇಲೆ ಮೋಡಗಳು ಹಾಯ್ದು ಹೋಗುವ ವೇಳೆ ಈ ಚಿತ್ರಗಳನ್ನು ರಾಚಯ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಮನೋಜ್ಞವಾಗಿ ಮೂಡಿಬಂದಿದೆ.