Tag: Clothing Store

  • ವೇಗವಾಗಿ ಬೈಕ್‍ನಲ್ಲಿ ಬಂದು ಬಟ್ಟೆ ಅಂಗಡಿಗೆ ನುಗ್ಗಿದ – ವೀಡಿಯೋ ವೈರಲ್

    ವೇಗವಾಗಿ ಬೈಕ್‍ನಲ್ಲಿ ಬಂದು ಬಟ್ಟೆ ಅಂಗಡಿಗೆ ನುಗ್ಗಿದ – ವೀಡಿಯೋ ವೈರಲ್

    ಹೈದರಾಬಾದ್: ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿ ವೇಗವಾಗಿ ಬಂದು ಅಂಗಡಿಗೆ ನುಗ್ಗಿದ ಭಯಾನಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಘಟನೆ ವೇಳೆ ಬಟ್ಟೆ ಅಂಗಡಿಯ ಕೌಂಟರ್ ಬಳಿ ನಿಂತಿದ್ದ ಮೂವರು ಗ್ರಾಹಕರು ಸಮಯಕ್ಕೆ ಸರಿಯಾಗಿ ಪಕ್ಕಕ್ಕೆ ಸರಿದ್ದರಿಂದ ಬಚಾವ್ ಆಗಿದ್ದಾರೆ. ಈ ಘಟನೆ ಸೋಮವಾರ ರಾತ್ರಿ 8.30ರ ಸುಮಾರಿಗೆ ತೆಲಂಗಾಣದ ಖಮ್ಮಂ ಜಿಲ್ಲೆಯ ರಾವಿಚೆಟ್ಟು ಬಜಾರ್‌ನಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, 4 ಜನರು ಅಂಗಡಿಯೊಳಗೆ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಇವರಲ್ಲಿ 3 ಗ್ರಾಹಕರಾಗಿದ್ದರೆ, ಓರ್ವ ಸಿಬ್ಬಂದಿಯಾಗಿದ್ದಾನೆ. ಇದನ್ನೂ ಓದಿ: ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

    Bike

    ಬ್ರೇಕ್ ಫೇಲ್ ಆಗಿದ್ದರ ಪರಿಣಾಮ ನಿಯಂತ್ರಣ ತಪ್ಪಿ ಬಜಾಜ್ ಪಲ್ಸರ್ ಬೈಕ್ ಅಂಗಡಿಯ ಒಳಗೆ ನುಗ್ಗಿದ್ದು, ವಾಹನ ಸವಾರ ಕೌಂಟರ್‍ಗೆ ಜಿಗಿದಿರುವುದನ್ನು ಕಾಣಬಹುದಾಗಿದೆ. ಅಷ್ಟು ಭಯಾಂಕರವಾದ ಅಪಘಾತ ಸಂಭವಿಸಿದ್ದರು. ಸದ್ಯ ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಬೈಕ್ ಸವಾರನಿಗೂ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು

    ಕೊನೆಗೆ ಅಪಘಾತದ ಬಳಿಕ ಬೈಕ್ ಸವಾರ ಅಂಗಡಿ ಅವರಿಗೆ ಕ್ಷಮೆಯಾಚಿಸಿದ್ದಾನೆ. ಘಟನೆ ಕುರಿತಂತೆ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಸೋಂಕಿತ ಭೇಟಿ ನೀಡಿದ್ದಕ್ಕೆ ಬಟ್ಟೆ ಅಂಗಡಿ ಮೊಬೈಲ್ ಶಾಪ್ ಸೀಲ್‍ಡೌನ್

    ಸೋಂಕಿತ ಭೇಟಿ ನೀಡಿದ್ದಕ್ಕೆ ಬಟ್ಟೆ ಅಂಗಡಿ ಮೊಬೈಲ್ ಶಾಪ್ ಸೀಲ್‍ಡೌನ್

    ಹಾಸನ: ಜಿಲ್ಲೆಯ ಅರಕಲಗೂಡಿನಲ್ಲಿರುವ ಬಟ್ಟೆ ಅಂಗಡಿ ಮತ್ತು ಮೊಬೈಲ್ ಅಂಗಡಿಗೆ ಕೊರೊನಾ ಸೋಂಕಿತ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಸೀಲ್‍ಡೌನ್ ಮಾಡಲಾಗಿದೆ.

    ಕೊಡಗಿನಲ್ಲಿ ಪಾಸಿಟಿವ್ ಬಂದ ಕೊರೊನಾ ಸೋಂಕಿತರೊಬ್ಬರು ಎರಡು ಬಾರಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಪಟ್ಟಣದಲ್ಲಿರುವ ಬಟ್ಟೆ ಅಂಗಡಿ ಮತ್ತು ಮೊಬೈಲ್ ಶಾಪ್‍ಗೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಎರಡು ಅಂಗಡಿಗಳನ್ನು ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ.

    ಸೋಂಕಿತನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ ನಿಟ್ಟಿನಲ್ಲಿ ಬಟ್ಟೆ ಅಂಗಡಿಯವರನ್ನು ಮತ್ತು ಮೊಬೈಲ್ ಶಾಪ್‍ನವರನ್ನು ಸೇರಿದಂತೆ ಒಟ್ಟು 12 ಜನರನ್ನು ಕೋವಿಡ್ ಟೆಸ್ಟ್ ಮಾಡಿಸಲು ಅರಕಲಗೂಡು ಪಟ್ಟಣದ ಆಸ್ಪತ್ರೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ವೈದ್ಯಾಧಿಕಾರಿಗಳು ಸೋಂಕಿತನ ಜೊತೆ ಇನ್ನು ಎಷ್ಟು ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಟ್ರಯಲ್ ರೂಮಿನಲ್ಲಿ ಹಿಡನ್ ಕ್ಯಾಮೆರಾ ಪತ್ತೆ ಹಚ್ಚಿದ ಪತ್ರಕರ್ತೆ

    ಟ್ರಯಲ್ ರೂಮಿನಲ್ಲಿ ಹಿಡನ್ ಕ್ಯಾಮೆರಾ ಪತ್ತೆ ಹಚ್ಚಿದ ಪತ್ರಕರ್ತೆ

    ನವದೆಹಲಿ: ಪ್ರತಿಷ್ಟಿತ ಒಳ ಉಡುಪುಗಳ ಮಳಿಗೆಯ ಟ್ರಯಲ್ ರೂಂನಲ್ಲಿ ಹಿಡನ್ ಕ್ಯಾಮೆರಾ ಇರುವುದನ್ನು ಪತ್ರಕರ್ತೆಯೊಬ್ಬರು ಪತ್ತೆ ಹಚ್ಚಿದ್ದಾರೆ.

    ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್-2 ಪೋಶ್ ಎಂ-ಬ್ಲಾಕ್ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಹಿಡನ್ ಕ್ಯಾಮೆರಾ ಇರುವುದು ಪತ್ತೆಯಾಗಿದ್ದು, ಈ ಕ್ಯಾಮೆರಾ ಮೂಲಕ ಅಂಗಡಿಯವನು ಟ್ರಯಲ್ ರೂಂನ ಲೈವ್ ಫೂಟೇಜ್ ವೀಕ್ಷಿಸುತ್ತಿದ್ದ ಎಂದು ಪತ್ರಕರ್ತೆ ಆರೋಪಿಸಿದ್ದಾರೆ. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಆಗಸ್ಟ್ 31ರಂದು ನಡೆದಿದ್ದು, ಮೂರು ದಿನಗಳ ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354 ಸಿ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ. ಈವರೆಗೆ ಆರೋಪಿ ಅಂಗಡಿಯವರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.

    ಕೆಲವು ಉಡುಪುಗಳನ್ನು ಆಯ್ಕೆ ಮಾಡಿಕೊಂಡ ನಂತರ ಟ್ರಯಲ್ ರೂಂಗೆ ತೆರಳಿದೆ. ಆಗ 10 ನಿಮಿಷಗಳ ನಂತರ ಅಂಗಡಿಯ ಒಬ್ಬ ಮಹಿಳಾ ಅಟೆಂಡರ್ ಬಂದು ನನ್ನನ್ನು ಬೇರೆ ರೂಂಗೆ ತೆರಳುವಂತೆ ಸೂಚಿಸಿದರಳು. ಅನುಮಾನದಿಂದ ಇಲ್ಲಿ ಏನಾದರೂ ಇದೆಯೇ ಎಂದು ನಾನು ಗಮನಿಸಿದೆ. ಆಗ ಮೊದಲನೇ ರೂಂನಲ್ಲಿ ಕ್ಯಾಮೆರಾ ಇರುವ ಕುರಿತು ಸಿಬ್ಬಂದಿ ನನ್ನ ಗಮನಕ್ಕೆ ತಂದರು ಎಂದು ತನ್ನ ದೂರಿನಲ್ಲಿ ಪತ್ರಕರ್ತೆ ತಿಳಿಸಿದ್ದಾರೆ.

    ಆ ಟ್ರಯಲ್ ರೂಂನಲ್ಲಿ ಕ್ಯಾಮೆರಾ ಇದೆ ಎಂದಾದರೆ ಅದೇ ರೂಂಗೆ ತೆರಳುವಂತೆ ನನಗೆ ಯಾಕೆ ನಿರ್ದೇಶಿಸಿದಿರಿ ಎಂದು ಅಂಗಡಿಯ ಮಾಲೀಕ ಹಾಗೂ ಸಿಬ್ಬಂದಿಯನ್ನು ಕೇಳಿದೆ. ಆದರೆ ಯಾರೂ ಉತ್ತರಿಸಲಿಲ್ಲ. ನಂತರ ನಾನು ಪೊಲೀಸರಿಗೆ ಕರೆ ಮಾಡಿ ಘಟನೆ ಕುರಿತು ವಿವರಿಸಿದೆ. ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಅಂಗಡಿ ಮಾಲೀಕ ತನ್ನ ಮಗನಿಗೆ ಕರೆ ಮಾಡಿ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ ಎಂದು ಪತ್ರಕರ್ತೆ ದೂರಿನಲ್ಲಿ ವಿವರಿಸಿದ್ದಾರೆ.

    ಪೊಲೀಸ್ ಮೂಲಗಳ ಪ್ರಕಾರ, ಮಹಿಳಾ ಸಿಬ್ಬಂದಿ ಬೇರೆ ಸ್ಟೋರ್ ರೂಂನಲ್ಲಿ ಬಟ್ಟೆ ಹಾಕಿ ನೋಡುವಂತೆ ಕಳುಹಿಸಿದ್ದಾರೆ. ಹೀಗಾಗಿ ಇದು ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಮಾಡಿದ ತಪ್ಪು ಎಂದು ಪೊಲೀಸರು ಶಂಕಿಸಿದ್ದಾರೆ.

    ನಾವು ಅಂಗಡಿಯ ಸಿಸಿಟಿವಿ ಫೂಟೇಜ್‍ಗಳನ್ನು ಸಂಗ್ರಹಿಸಿ, ಮಹಿಳೆಯ ಆರೋಪದ ಕುರಿತು ಪರಿಶೀಲಿಸುತ್ತಿದ್ದೇವೆ. ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.