Tag: Clothing

  • ಮಹಿಳೆಯರು ಏನೂ ಧರಿಸದಿದ್ರೂ ಚೆನ್ನಾಗಿ ಕಾಣಿಸುತ್ತಾರೆ: ಬಾಬಾ ರಾಮ್‌ದೇವ್

    ಮಹಿಳೆಯರು ಏನೂ ಧರಿಸದಿದ್ರೂ ಚೆನ್ನಾಗಿ ಕಾಣಿಸುತ್ತಾರೆ: ಬಾಬಾ ರಾಮ್‌ದೇವ್

    ಮುಂಬೈ: ತಮ್ಮ ಹೇಳಿಕೆಗಳಿಂದ ಆಗಾಗ ಸುದ್ದಿಯಾಗುವ ಪತಂಜಲಿ ಮುಖ್ಯಸ್ಥ, ಯೋಗ ಗುರು ಬಾಬಾ ರಾಮ್‌ದೇವ್ (Baba Ramdev) ಇದೀಗ ಮಹಿಳೆಯರ ಉಡುಪುಗಳ (Women’s Clothing) ಕುರಿತಾಗಿ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದೆ.

    ಮಹಾರಾಷ್ಟ್ರದ (Maharashtra) ಥಾಣೆಯಲ್ಲಿ (Thane) ನಡೆದ ಯೋಗ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ರಾಮ್ ದೇವ್ ಬಾಬಾ, ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್ ಸೂಟ್‌ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.

    ರಾಮ್‌ದೇವ್ ಅವರು ಈ ಹೇಳಿಕೆಯನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಸಮ್ಮುಖದಲ್ಲಿಯೇ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಹಾಗೂ ಸಂಸದ ಶ್ರೀಕಾಂತ್ ಶಿಂಧೆ ಕೂಡಾ ಭಾಗಿಯಾಗಿದ್ದರು.

    ವರದಿಗಳ ಪ್ರಕಾರ ಮಹಿಳೆಯರಿಗಾಗಿ ಯೋಗ ತರಬೇತಿ ಕಾರ್ಯಕ್ರಮ ನಡೆಸಲಾಗಿತ್ತು. ಇದಾದ ಬಳಿಕ ಸಮಾವೇಶ ಆಯೋಜಿಸಲಾಗಿತ್ತು. ಯೋಗ ತರಬೇತಿಯಲ್ಲಿ ಭಾಗಿಯಾಗಿದ್ದ ಮಹಿಳೆಯರು ಸಮಾವೇಶಕ್ಕಾಗಿ ಸೀರೆಯನ್ನೂ ತಂದಿದ್ದರು. ಆದರೆ ಯೋಗ ತರಬೇತಿ ಮುಗಿದ ತಕ್ಷಣವೇ ಸಭೆ ಆರಂಭವಾಗಿತ್ತು. ಇದರಿಂದ ಮಹಿಳೆಯರಿಗೆ ಸೀರೆ ಉಟ್ಟುಕೊಳ್ಳಲು ಸಮಯ ಸಿಕ್ಕಿರಲಿಲ್ಲ. ಇದನ್ನೂ ಓದಿ: ಓಲಾ, ಉಬರ್‌ ಆಟೋಗಳಿಗೆ ಶೇ.5 ಕಮಿಷನ್‌ ದರ ನಿಗದಿ

    ಈ ಕುರಿತು ಹೇಳಿಕೆ ನೀಡಿದ ಬಾಬಾ ರಾಮ್‌ದೇವ್, ಸೀರೆ ಉಡಲು ಸಮಯವಿಲ್ಲದಿದ್ದರೂ ಸಮಸ್ಯೆ ಇಲ್ಲ. ಈಗ ನೀವು ಮನೆಗೆ ಹೋಗಿ ಸೀರೆ ಉಟ್ಟುಕೊಳ್ಳಿ. ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್ ಸೂಟ್‌ಗಳಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

    ಪತಂಜಲಿ ಯೋಗ ಪೀಠ ಮತ್ತು ಮುಂಬೈ ಮಹಿಳಾ ಪತಂಜಲಿ ಯೋಗ ಸಮಿತಿ ವತಿಯಿಂದ ಶುಕ್ರವಾರ ಥಾಣೆಯ ಹೈಲ್ಯಾಂಡ್ ಪ್ರದೇಶದಲ್ಲಿ ಯೋಗ ವಿಜ್ಞಾನ ಶಿಬಿರ ಮತ್ತು ಮಹಿಳಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಅಮೃತಾ ಫಡ್ನವೀಸ್ ಉಪಸ್ಥಿತರಿದ್ದರು. ಈ ವೇಳೆ ಬಾಬಾ ರಾಮದೇವ್ ಮಹಿಳೆಯರೊಂದಿಗೆ ಸಂವಾದ ನಡೆಸುತ್ತಿದ್ದಾಗ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಳ್ಳನೇ ತಿರುಗಿ ಬೊಬ್ಬೆ ಹೊಡೆದ ರೀತಿಯಲ್ಲಿ ಬೊಮ್ಮಾಯಿ ಬೊಬ್ಬೆ ಹೊಡೆಯುತ್ತಿದ್ದಾರೆ: ನಾಲಿಗೆ ಹರಿಬಿಟ್ಟ ಶಿವಸೇನೆ ಪುಂಡ

    Live Tv
    [brid partner=56869869 player=32851 video=960834 autoplay=true]

  • ಸೋಂಕಿತ ಶವಗಳ ಬಟ್ಟೆ ಕದಿಯುತ್ತಿದ್ದ 7 ಮಂದಿ ಅರೆಸ್ಟ್

    ಸೋಂಕಿತ ಶವಗಳ ಬಟ್ಟೆ ಕದಿಯುತ್ತಿದ್ದ 7 ಮಂದಿ ಅರೆಸ್ಟ್

    ಲಕ್ನೋ: ಶವಾಗರ ಮತ್ತು ಸ್ಮಶಾನದ ಬಳಿ ಶವಗಳ ಬಟ್ಟೆಗಳನ್ನು ಕದಿಯುತ್ತಿದ್ದ ಏಳು ಜನರನ್ನು ಪಶ್ಚಿಮ ಉತ್ತರ ಪ್ರದೇಶದ ಬಾಗ್‍ಪತ್‍ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏಳು ಜನರನ್ನು ಬಂಧಿಸಲಾಗಿದೆ. ಅವರು ಸತ್ತವರ ಮೈಮೇಲಿನ ಉಡುಪು, ಬೆಡ್‍ಶೀಟ್‍ಗಳು, ಶವಕ್ಕೆ ಹೊದಿಸಿದ್ದ ಬಟ್ಟೆಗಳನ್ನು ಕದಿಯಲೆತ್ನಿಸಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸುಮಾರು 520 ಬೆಡ್‍ಶೀಟ್‍ಗಳು, 127 ಕುರ್ತಾಗಳು, 52 ಬಿಳಿ ಸೀರೆಗಳು ಮತ್ತು ಇತರ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವೃತ್ತಾಧಿಕಾರಿ ಅಲೋಕ್ ಸಿಂಗ್ ಹೇಳಿದ್ದಾರೆ.

    ಬಟ್ಟೆಗಳನ್ನು ಚೆನ್ನಾಗಿ ತೊಳೆದು, ಇಸ್ತ್ರಿ ಮಾಡಿದ ನಂತರ ಗ್ವಾಲಿಯರ್ ಕಂಪನಿಯ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು. ಕದೀಮರು ಶವಗಳ ಬಟ್ಟೆ ಲೂಟಿ ಮಾಡುವುದಕ್ಕಾಗಿ ಈ ಪ್ರದೇಶದ ಕೆಲವು ಬಟ್ಟೆ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಪ್ರತಿದಿನ 300 ರೂ ಪಡೆಯುತ್ತಿದ್ದರು ಎಂದೂ ತಿಳಿಸಿದ್ದಾರೆ.

  • ಮಹಿಳೆಯರಿಗೆ ಬೇಸಿಗೆಯಲ್ಲಿ ಯಾವ ರೀತಿಯ ಸನ್ ಗ್ಲಾಸ್ ಬೆಸ್ಟ್ ಗೊತ್ತಾ?

    ಮಹಿಳೆಯರಿಗೆ ಬೇಸಿಗೆಯಲ್ಲಿ ಯಾವ ರೀತಿಯ ಸನ್ ಗ್ಲಾಸ್ ಬೆಸ್ಟ್ ಗೊತ್ತಾ?

    ಹಿಳೆಯರಿಗೆ ಸನ್ ಗ್ಲಾಸ್‍ಗಳಲ್ಲಿ ಯಾವುದು ಸೂಕ್ತ ಎಂದು ನೋಡಲು ಹೋದರೆ, ಹಲವಾರು ರೀತಿಯ ಸ್ಟೈಲಿಷ್ ಸನ್ ಗ್ಲಾಸ್‍ಗಳಿರುವುದನ್ನು ಕಾಣಬಹುದು. ಅದರಲ್ಲಿಯೂ ಈಗಿನ ಟ್ರೆಂಡ್ಸ್‍ನಲ್ಲಿ ವಿವಿಧ ಆಕಾರದ ಬಹಳಷ್ಟು ಸೈಲಿಷ್ ಹಾಗೂ ಕ್ಲಾಸಿಕ್ ಸನ್ ಗ್ಲಾಸ್‍ಗಳಿದೆ.

    ನೀವೆನಾದರೂ ಪ್ರತಿನಿತ್ಯ ಧರಿಸುವ ಉಡುಪುಗಳಿಗೆ ಕ್ಲಾಸಿಕ್ ಸ್ಟೈಲಿಷ್ ಸನ್ ಗ್ಲಾಸ್ ಹಾಕಿಕೊಳ್ಳಲು ಬಯಸಿದರೆ, ಇದು ಬೇಸಿಗೆಯ ಸಮಯದಲ್ಲಿ ಧರಿಸಲು ಪರ್ಫೆಕ್ಟ್ ಸನ್ ಗ್ಲಾಸ್‍ಗಳೆಂದೇ ಹೇಳಬಹುದು. ರೌಂಡ್ ಫ್ರೆಮ್‍ಗಳಲ್ಲಿಯೇ 70 ಸ್ಟೈಲಿಷ್ ಕಲರ್ ಲೆನ್ಸ್ ಇರುವ ಸನ್ ಗ್ಲಾಸ್‍ಗಳಿದ್ದು, ಅವುಗಳನ್ನು ನೀವು ಬೇಸಿಗೆಯಲ್ಲಿ ಬಳಸಬಹುದು. ಸದ್ಯ ಈ ಕೆಳಗೆ ಬೇಸಿಗೆಯಲ್ಲಿ ಉಪಯೋಗಿಸಬಹುದಾದ ಕೆಲವೊಂದು ಸನ್ ಗ್ಲಾಸ್ ಕುರಿತ ಡೀಟೆಲ್ಸ್ ಇದೆ.

    ಹಳದಿ ಲೆನ್ಸ್‌ನ ಸನ್ ಗ್ಲಾಸ್: ಈ ದೊಡ್ಡ ಗಾತ್ರದ ಸನ್ ಗ್ಲಾಸ್ ಜ್ಯೊಮೆಟ್ರಿಕ್ ಫ್ರೇಮ್‍ನಂತಿದ್ದು, ಇದು ನಿಮ್ಮ ಬಟ್ಟೆಗಳ ಬಣ್ಣಕ್ಕೆ ಬೇಗ ಮ್ಯಾಚ್ ಆಗುತ್ತದೆ. ಈ ಸನ್ ಗ್ಲಾಸ್ ಹಳದಿ ಬಣ್ಣದ ಲೆನ್ಸ್ ಹಾಗೂ ಗೋಲ್ಡನ್ ಕಲರ್ ಫ್ರೇಮ್‍ನನ್ನು ಹೊಂದಿರುತ್ತದೆ. ಇದು ಬೇಸಿಗೆಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತದೆ.

    ಕ್ಯಾಟ್ ಹೈ ಗ್ರೀನ್ ಸನ್ ಗ್ಲಾಸ್: ಕ್ಯಾಟ್ ಹೈ ಸನ್ ಗ್ಲಾಸ್ ಬೇಸಿಗೆ ವೇಳೆ ನಿಮಗೆ ಬೋಲ್ಡ್ ಲುಕ್ ನೀಡುತ್ತದೆ. ಇದು ನೀಲಿ ಬಣ್ಣದ ಫ್ರೇಮ್ ಹಾಗೂ ಹಸಿರು ಬಣ್ಣದ ಲೆನ್ಸ್‍ನನ್ನು ಒಳಗೊಂಡಿದೆ. ಈ ಸನ್ ಗ್ಲಾಸ್ ಶೇ 100ರಷ್ಟು ಸುರಕ್ಷಿತವಾಗಿದ್ದು, ಬೇಸಿಗೆಯಲ್ಲಿ ಹೆಚ್ಚಾಗಿ ಬೀಳುವ ಸೂರ್ಯನ ಕಿರಣಗಳನ್ನು ತಡೆಯುತ್ತದೆ.

    ಮೀರರ್ ಫ್ರೇಮ್‍ನ ರೌಂಡ್ ಗ್ಲಾಸ್: ರೌಂಡ್ ಗ್ಲಾಸ್ ಟ್ರೆಂಡಿಯಾಗಿದ್ದು, ಹಲವಾರು ಸೆಲೆಬ್ರೆಟಿಗಳು ಈ ಗ್ಲಾಸ್‍ನನ್ನು ಧರಿಸುತ್ತಾರೆ. ಈ ಕಂದು ಬಣ್ಣದ ಸುಂದರವಾದ ಸನ್ ಗ್ಲಾಸ್ ಎಲ್ಲ ರೀತಿಯ ಡ್ರಸ್‍ಗಳಿಗೂ ಸೂಟ್ ಆಗುತ್ತದೆ.

    ಪಿಂಕ್ ಸನ್ ಗ್ಲಾಸ್: ಇದರಲ್ಲಿ ಹಲವು ವಿಧವಾದ ಶೇಡ್‍ಗಳಿದ್ದು, ಪಿಂಕ್ ಕಲರ್ ಸನ್ ಗ್ಲಾಸ್ ನಿಮ್ಮ ವ್ಯಕ್ತಿತ್ವವನ್ನು ಭಾಗವನ್ನು ತೋರಿಸುತ್ತದೆ ಹಾಗೂ ಡಲ್ ಆಗಿರುವ ನಿಮ್ಮ ಮುಖ ಬ್ರೈಟ್ ಆಗಿ ಕಾಣುವಂತೆ ಮಾಡುತ್ತದೆ.

    ಕ್ಯಾಟ್ ಹೈ ಸನ್ ಗ್ಲಾಸ್: ಕ್ಯಾಟ್ ಹೈ ಸನ್ ಗ್ಲಾಸ್ ರೆಟ್ರೋ ಶೈಲಿಯಂತಿರುವ ಸನ್ ಗ್ಲಾಸ್ ಆಗಿದ್ದು, ಎಲ್ಲರ ಮಧ್ಯೆ ಈ ಗ್ಲಾಸ್ ಎದ್ದು ಕಾಣಿಸುತ್ತದೆ.

  • ಡ್ರೆಸ್ ಚೆನ್ನಾಗಿಲ್ಲ- ವಿದ್ಯಾರ್ಥಿನಿಯನ್ನ ತರಗತಿಯಿಂದ ಹೊರಹಾಕಿದ ಶಿಕ್ಷಕಿ

    ಡ್ರೆಸ್ ಚೆನ್ನಾಗಿಲ್ಲ- ವಿದ್ಯಾರ್ಥಿನಿಯನ್ನ ತರಗತಿಯಿಂದ ಹೊರಹಾಕಿದ ಶಿಕ್ಷಕಿ

    – ಶಿಕ್ಷಕಿ ನಡೆಗೆ ಪೋಷಕರ ವಿರೋಧ

    ಒಟ್ಟಾವಾ: ತರಗತಿಗೆ ವಿಭಿನ್ನವಾದ ಡ್ರೆಸ್ ಧರಿಸಿ ಹೋಗಿದ್ದ 17 ವರ್ಷದ ವಿದ್ಯಾರ್ಥಿನಿಯನ್ನು ಶಿಕ್ಷಕಿ ಶಾಲೆಯಿಂದ ಹೊರ ಹಾಕಿರುವ ಘಟನೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಕಮ್ಲೂಪ್ಸ್‍ನಲ್ಲಿರುವ ನಾರ್ಕಾಮ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ನಡೆದಿದೆ.

    ಕರಿಸ್ ವಿಲ್ಸನ್ ಎಂಬ ವಿದ್ಯಾರ್ಥಿನಿ ಬಿಳಿ ಬಣ್ಣದ ಉದ್ದ ತೋಳಿನ ಟಿ-ಶರ್ಟ್ ಹಾಗೂ ಮೊಣಕಾಲು ಉದ್ದ ಬರುವ ಕಪ್ಪು ಬಣ್ಣದ ಟಾಪ್ ಧರಿಸಿದ್ದಳು. ಅಲ್ಲದೆ ಈ ನೀ ಲೆಂಥ್ ಟಾಪ್‍ನನ್ನು ಭುಜದ ಮೇಲೆ ಲೇಸ್ ಮಾದರಿ ವಿನ್ಯಾಸಗೊಳಿಸಲಾಗಿತ್ತು. ವಿದ್ಯಾರ್ಥಿನಿ ಧರಿಸಿದ್ದ ಈ ಡ್ರೆಸ್ ಟೈಟ್ ಫಿಟ್‍ನಿಂದ ಕೂಡಿದ್ದು, ಶಾಲೆಯಲ್ಲಿರುವ ಪುರುಷ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಜುಗರವನ್ನುಂಟು ಮಾಡುತ್ತದೆ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯನ್ನು ಪ್ರಿನ್ಸಿಪಾಲ್ ಕಚೇರಿಗೆ ಕರೆದುಕೊಂಡು ಹೋಗಿ ನಿಂದಿಸಿದ್ದಾರೆ. ಬಳಿಕ ಆಕೆಯನ್ನು ಶಾಲೆಯಿಂದ ಹೊರಹಾಕಿದ್ದಾರೆ.

    ಈ ವಿಚಾರವಾಗಿ ಬಾಲಕಿಯ ತಂದೆ ಕ್ರಿಸ್ಟೋಫರ್ ವಿಲ್ಸನ್ ವೀಡಿಯೋವೊಂದನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನನ್ನ ಮಗಳು ಇಂದು ಶಾಲೆಗೆ ಹೊರಡುವಾಗ ಬಹಳ ಉತ್ಸುಕಳಾಗಿ ಹೋದಳು. ಆದರೆ ಮನೆಗೆ ಹಿಂದಿರುಗುವ ವೇಳೆ ಕಣ್ಣೀರಿಡುತ್ತಾ ಬಂದಿದ್ದಾಳೆ. ನನ್ನ ಮಗಳು ಧರಿಸಿದ್ದ ಡ್ರೆಸ್ ಪುರುಷ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಜುಗರವನ್ನುಂಟು ಮಾಡುವಂತಿದೆ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ಶಾಲೆಯಿಂದ ಹೊರದಬ್ಬಿದ್ದಾರೆ. ಆದರೆ ಆಕೆ ಧರಿಸಿದ್ದ ಡ್ರೆಸ್ ಕೆಟ್ಟ ರೀತಿಯಲ್ಲಿರಲಿಲ್ಲ. ಇದೊಂದು ಸಾಧಾರಣ ಉಡುಪಾಗಿದೆ. ನಾನು ಈ ವ್ಯವಸ್ಥೆಯನ್ನು ಖಂಡಿಸುತ್ತೇನೆ. 2021ನೇ ಇಸವಿಯಲ್ಲಿ ಕೂಡ ಇಂತಹ ಘಟನೆಗಳು ನಡೆಯುತ್ತಿದೆ ಎಂಬುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

  • ಆರಂಭದಲ್ಲಿ ಬಟ್ಟೆ ತೆಗೆದುಕೊಳ್ಳಲು ಹಣವಿಲ್ಲದ ಪರಿಸ್ಥಿತಿಯನ್ನು ನೆನೆದ ಕಂಗನಾ

    ಆರಂಭದಲ್ಲಿ ಬಟ್ಟೆ ತೆಗೆದುಕೊಳ್ಳಲು ಹಣವಿಲ್ಲದ ಪರಿಸ್ಥಿತಿಯನ್ನು ನೆನೆದ ಕಂಗನಾ

    ಮುಂಬೈ: ಬಾಲಿವುಡ್‍ನಲ್ಲಿ ಕ್ವೀನ್ ಎಂದೇ ಕರೆಸಿಕೊಳ್ಳುವ ಕಂಗನಾ ರಣಾವತ್ ಯಾವುದೇ ಗಾಡ್ ಫಾದರ್ ಇಲ್ಲದೇ  ಸ್ಟಾರ್ ಆಗಿ ಬೆಳೆದವರು. ಆದರೆ ಇದೇ ಕಂಗನಾ ಒಂದು ಕಾಲದಲ್ಲಿ ಹಾಕಿಕೊಳ್ಳಲು ಬಟ್ಟೆ ತೆಗೆದುಕೊಳ್ಳಲು ಹಣವಿಲ್ಲದ ಪರಿಸ್ಥಿತಿಯಲ್ಲಿ ಜೀವನ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.

    ನಟಿ ಕಂಗನಾ ತನ್ನ ನೇರಮಾತು ಡ್ಯಾಶಿಂಗ್ ಸ್ವಾಭಾವದ ಮೂಲಕ ಕಲರ್ ಫುಲ್ ಲೋಕ ಬಾಲಿವುಡ್‍ನಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ನಟ ಸುಶಾಂತ್ ಸಿಂಗ್ ಸಾವಿನ ವಿಚಾರದಲ್ಲೂ ತನ್ನ ನೇರನುಡಿಯ ಮೂಲಕ ಸುದ್ದಿಯಾಗಿದ್ದ ಕಂಗನಾ, ಬಾಲಿವುಡ್‍ನಲ್ಲಿರುವ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

    ಈಗ ಖಾಸಗಿ ವಾಹಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕಂಗನಾ, ತನ್ನ ಕಷ್ಟದ ದಿನಗಳನ್ನು ನೆನದುಕೊಂಡಿದ್ದಾರೆ. ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಕಂಗನಾ, ಕನಸು ಕಂಡಿದ್ದು ಮಾತ್ರ ಬಾಲಿವುಡ್‍ನಲ್ಲಿ ರಾಣಿಯಾಗಬೇಕೆಂದು. ಆದರೆ ಬಾಲಿವುಡ್ ಎಂಬ ಸಮುದ್ರದಲ್ಲಿ ಯಾರ ಸಹಾಯವಿಲ್ಲದೇ ಅಲೆಗಳ ಎದುರು ಈಜುವುದು ಅಷ್ಟು ಸುಲಭವಾಗಿ ಇರಲಿಲ್ಲ. ಆ ದಿನವೇ ಕಂಗನಾ ನನಗೆ 50 ವರ್ಷ ತುಂಬುವುದರ ಒಳಗೆ ದೇಶದ ಶ್ರೀಮಂತರಲ್ಲಿ ಒಬ್ಬಳಗಿರಬೇಕು ಎಂದು ಕನಸು ಕಂಡಿದ್ದೆ ಎಂದು ಹೇಳಿದ್ದಾರೆ.

    ಬಹಳ ಕಷ್ಟಗಳ ನಡುವೆ ಬಾಲಿವುಡ್‍ಗೆ ಬಂದ ಕಂಗನಾ, ಮೊದಲ ಬಾರಿಗೆ 2006ರಲ್ಲಿ ಬಿಡುಗಡೆಯಾದ ಗ್ಯಾಂಗ್‍ಸ್ಟಾರ್ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು. ಆ ಸಮಯದಲ್ಲಿ ನಾನು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ ಅಲ್ಲಿಗೆ ಹೋಗಲು ನನ್ನು ಬಳಿ ಬಟ್ಟೆ ತೆಗದುಕೊಳ್ಳಲು ಹಣವಿಲ್ಲದೇ ಬಹಳ ಯೋಚನೆ ಮಾಡಿದ್ದೆ. ಆಗ ನನ್ನ ಫ್ಯಾಷನ್ ಡಿಸೈನರ್ ಆಗಿದ್ದ ರಿಕ್ ರಾಯ್ ನನಗೆ ಬಟ್ಟೆಗಳನ್ನು ವಿನ್ಯಾಸ ಮಾಡಿ ಕೊಟ್ಟಿದ್ದರು ಎಂದು ಕಂಗನಾ ತಿಳಿಸಿದ್ದಾರೆ.

    ಕಂಗನಾ ರಣಾವತ್ ಅವರು, 1987 ಮಾರ್ಚ್ 23ರಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸೂರಜ್‍ಪುರದಲ್ಲಿ ಒಂದು ಮಧ್ಯದ ವರ್ಗದ ಕುಟುಂಬದಲ್ಲಿ ಜನಿಸಿದರು. ತಾಯಿ ಆಶಾ ರಣಾವತ್ ಅವರು ಶಾಲಾ ಶಿಕ್ಷಕಿಯಾಗಿದ್ದರು. ತಂದೆ ಅಮರ್ ದೀಪ್ ರಣಾವತ್ ಅವರು ವ್ಯಾಪಾರಿಯಾಗಿದ್ದರು. ಈ ದಂಪತಿಯ ಮೊದಲ ಮಗಳಾದ ಕಂಗನಾ ಯಾವುದೇ ಸಹಾಯವಿಲ್ಲದೇ ಬಾಲಿವುಡ್‍ನಲ್ಲಿ ಬೆಳೆದು ಇಂದು ತಮ್ಮ ಸಿನಿಮಾವನ್ನು ತಾನೇ ನಿರ್ಮಾಣ ಮಾಡುವ ಹಂತಕ್ಕೆ ಬಂದಿದ್ದಾರೆ.

    ಸದ್ಯ ಕಂಗನಾ ಅವರು ಸಾಲು ಸಾಲು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ತಲೈವಿ, ಧಾಖಡ್, ತೇಜಸ್ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಅವರು ಕೊನೆಯದಾಗಿ ಪಂಗ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಬಾಲಿವುಡ್ ಪ್ಲಾನ್ ಮಾಡಿ ಮರ್ಡರ್ ಮಾಡಿದೆ ಎಂಬ ಆರೋಪ ಮಾಡಿದ್ದರು.

  • ದೇವಸ್ಥಾನಕ್ಕೆ ಇನ್ಮುಂದೆ ಜೀನ್ಸ್, ಶರ್ಟ್ ಹಾಕ್ಕೊಂಡು ಹೋಗಂಗಿಲ್ಲ!

    ದೇವಸ್ಥಾನಕ್ಕೆ ಇನ್ಮುಂದೆ ಜೀನ್ಸ್, ಶರ್ಟ್ ಹಾಕ್ಕೊಂಡು ಹೋಗಂಗಿಲ್ಲ!

    ಬೆಂಗಳೂರು: ರಾಜ್ಯದ ಪ್ರಮುಖ ಮುಜರಾಯಿ ದೇಗುಲದಲ್ಲಿ ಇನ್ನೂ ಮುಂದೆ ವಸ್ತ್ರ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ.

    ಜೀನ್ಸ್, ಟೀ ಶರ್ಟ್ ಧರಿಸಿದರೆ ದೇವರ ದರ್ಶನ ಸಿಗುವುದು ಅನುಮಾನವಾಗಿದೆ. ಮುಜರಾಯಿ ಇಲಾಖೆ ಸಚಿವರು ಈ ಸಂಬಂಧ ಸಭೆ ಕರೆಯಲ್ಲಿದ್ದು, ಶೀಘ್ರದಲ್ಲಿಯೇ ವಸ್ತ್ರ ಸಂಹಿತೆ ಯಾವ ರೀತಿ ಇರಬೇಕು ಎನ್ನುವ ನಿಯಮವನ್ನು ರೂಪಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಲಿದೆ: ವಿಎಚ್‍ಪಿ

    ಈಗಾಗಲೇ ಕುಕ್ಕೆಯಿಂದ ಮನವಿ ಕೂಡ ಮಾಡಲಾಗಿದ್ದು, ಭಕ್ತಾದಿಗಳು ದೇವರ ದರ್ಶನಕ್ಕೆ ಬರುವಾಗ ತುಂಡು ಬಟ್ಟೆ ಜೀನ್ಸ್, ಟೀ ಶರ್ಟ್ ಧರಿಸಿ ಬರುತ್ತಿದ್ದಾರೆ. ವಸ್ತ್ರ ಸಂಹಿತೆ ಜಾರಿ ಮಾಡಿ ಎಂದು ಇಲಾಖೆಗೆ ಮನವಿ ಕೂಡ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೆ ಮುಜರಾಯಿ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತಿಸಿದೆ.

    ಮಹಿಳೆಯರಿಗೆ ಕುರ್ತಾ, ಸೀರೆ ಅಥವಾ ಸಲ್ವಾರ್ ಹಾಗೂ ಪುರುಷರಿಗೆ ಪಂಚೆ, ಶರ್ಟ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಮಂಗಳವಾರ ಬಹುತೇಕ ವಿಧಾನಸೌಧದಲ್ಲಿ ಸಚಿವರ ಸಭೆ ನಡೆಯಲಿದ್ದು, ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

  • ಬಟ್ಟೆ ಬಿಚ್ಚುವಂತೆ ಹೇಳಿದ್ದ ಶಿಕ್ಷಕನ ವಿರುದ್ಧ ಯುವತಿ ದೂರು

    ಬಟ್ಟೆ ಬಿಚ್ಚುವಂತೆ ಹೇಳಿದ್ದ ಶಿಕ್ಷಕನ ವಿರುದ್ಧ ಯುವತಿ ದೂರು

    ಹೈದರಾಬಾದ್: ಡ್ಯಾನ್ಸ್ ಶಿಕ್ಷಕನೊಬ್ಬ 21 ವರ್ಷದ ಯುವತಿಯನ್ನು ಬಟ್ಟೆ ಬಿಚ್ಚುವಂತೆ ಹೇಳಿದ್ದು, ಇದೀಗ ಆತನ ವಿರುದ್ಧ ಯುವತಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.

    ಯುವತಿ ತೆಲಂಗಾಣದ ನಾರಾಯಂಗುಡಾ ಪೊಲೀಸ್ ಠಾಣೆಯಲ್ಲಿ ಬುಧವಾರ ನೃತ್ಯ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾಳೆ. ಆರೋಪಿ ಡಾನ್ಸ್ ಅಕಾಡೆಮಿ ಶಿಕ್ಷಕನಾಗಿದ್ದು, ವಿದ್ಯಾರ್ಥಿಗಳಿಗೆ ಬಟ್ಟೆಯನ್ನು ಬಿಚ್ಚುವಂತೆ ಹೇಳಿದ್ದನು ಎಂದು ಯುವತಿ ಆರೋಪಿಸಿದ್ದಾಳೆ.

    ದೂರಿನಲ್ಲಿ ಏನಿದೆ?
    ನಾಟಕ ಅಕಾಡೆಮಿ ಶಿಕ್ಷಕ ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗುವ ಮುನ್ನ ತಮ್ಮ ಬಟ್ಟೆಯನ್ನು ಬಿಚ್ಚುವಂತೆ ಕೇಳಿದ್ದನು. ಆದರೆ ನಾನು ಶಿಕ್ಷಕನ ಮಾತನ್ನು ತಿರಸ್ಕರಿಸಿದೆ. ಹೀಗಾಗಿ ನನ್ನನ್ನು ತರಗತಿಯಿಂದ ಹೊರಗೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಯುವತಿ ದೂರ ಸಲ್ಲಿಸಿದ ನಂತರ ಪೊಲೀಸರು ಆರೋಪಿಯ ವಿರುದ್ಧ ಸೆಕ್ಷನ್ 509 (ಮಹಿಳೆ ಅವಮಾನ ಮಾಡುವ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

  • ಬೆಡ್ ರೂಮಿನಲ್ಲಿ ಪತ್ನಿಯ ಉಡುಪು ನೋಡಿ ದಂಗಾದ ಪತಿ!

    ಬೆಡ್ ರೂಮಿನಲ್ಲಿ ಪತ್ನಿಯ ಉಡುಪು ನೋಡಿ ದಂಗಾದ ಪತಿ!

    ಕ್ಯಾನ್ಬೆರಾ: ಸಾಮಾನ್ಯವಾಗಿ ಪತ್ನಿಯರು ತಮ್ಮ ಪತಿಯನ್ನು ಆಕರ್ಷಿಸಲು ತುಂಬಾ ಚೆನ್ನಾಗಿರುವ ಅಥವಾ ಹಾಟ್ ಆಗಿರುವ ವಿವಿಧ ರೀತಿ ಉಡುಪುಗಳನ್ನು ಧರಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಪತಿಯನ್ನು ಆಕರ್ಷಿಸಲು ವಿಚಿತ್ರ ಉಡುಪು ಧರಿಸಿದ್ದು, ಇದರಿಂದ ಪತಿ ಹೆಂಡತಿಯನ್ನೇ ನೋಡಿ ದಂಗಾಗಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಇತ್ತೀಚಿಗೆ ಫ್ಯಾಷನ್ ಜಗತ್ತಿನಲ್ಲಿ ವಿಭಿನ್ನವಾದ ರೀತಿಯ ಉಡುಪುಗಳು ಅಂದರೆ ಪ್ರಾಣಿ, ಪಕ್ಷಿಗಳ ಚಿತ್ರವಿರುವ ಉಡುಪುಗಳು ಮಾರುಕಟ್ಟೆಗೆ ಬರುತ್ತಿದೆ. ಇಂತಹ ಉಡುಪುಗಳು ಮಹಿಳೆಯರನ್ನು ಬಹುಬೇಗ ಆಕರ್ಷಿಸುತ್ತವೆ. ಆದರೆ ಆಸ್ಟ್ರೇಲಿಯಾ ಮಹಿಳೆ ಇಂತಹ ವಿಚಿತ್ರ ಉಡುಪು ಧರಿಸಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾಳೆ.

    ಮಹಿಳೆ ಹಾವಿನ ರೂಪದ ಉದ್ದನೆಯ ಸ್ಟಾಕಿಂಗ್ಸ್ ತೊಟ್ಟು ಹಾಸಿಗೆ ಮೇಲೆ ಮಲಗಿದ್ದಾಳೆ. ಈ ವೇಳೆ ಆಕೆಯ ಪತಿ ಬೆಡ್ ರೂಂಗೆ ಬಂದಿದ್ದಾನೆ. ಆಗ ಹಾಸಿಗೆಯ ಮೇಲಿನ ಪತ್ನಿಯ ಕಾಲುಗಳನ್ನು ನೋಡಿ ನಿಜವಾದ ಎರಡು ಹಾವು ಬಂದಿದೆ ಎಂದು ತಿಳಿದು ಪತಿ ದಂಗಾಗಿದ್ದಾನೆ. ಬಳಿಕ ಮೆಲ್ಲಗೆ ಬಂದು ಬೇಸ್‍ಬಾಲ್ ಬ್ಯಾಟ್ ತೆಗೆದುಕೊಂಡು ಹಾವಿನ ತಲೆ ಎಂದುಕೊಂಡು ಪತ್ನಿಯ ಕಾಲಿಗೆ ಹೊಡೆದಿದ್ದಾನೆ. ಪರಿಣಾಮ ಪತ್ನಿಯ ಕಾಲಿಗೆ ಬಲವಾದ ಏಟು ಬಿದ್ದು ರಕ್ತ ಬಂದಿದೆ.

    ನಂತರ ನಿಜಾಂಶ ತಿಳಿದುಕೊಂಡ ಪತಿ ತಕ್ಷಣ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಧರಿಸಿದ್ದ ಹಾವಿನ ಚಿತ್ರದ ಸ್ಟಾಕಿಂಗ್ಸ್ ಮತ್ತು ಇನ್ನೊಂದು ಕಡೆ ಆಕೆಗೆ ಪೆಟ್ಟಾಗಿ ಬ್ಯಾಂಡೇಜ್ ಮಾಡಿರುವ ಫೋಟೋವನ್ನು ಆಸ್ಟ್ರೇಲಿಯಾದ ಫೇಸ್‍ಬುಕ್ ಪೇಜ್ ನಲ್ಲಿ ‘ಗಂಭೀರವಾದ ಪೋಸ್ಟ್’ ಎಂದು ಬರೆದು ನಡೆದ ಘಟನೆಯ ಬಗ್ಗೆ ವಿವರಿಸಿದೆ. ಅಷ್ಟೇ ಅಲ್ಲದೇ ಇನ್ನು ಮುಂದೆ ಮಹಿಳೆಯರು ಪ್ರಾಣಿ ಚಿತ್ರದ ಪ್ರಿಂಟ್ ಇರುವ ಸ್ಟಾಕಿಂಗ್ಸ್ ಉಡುಪನ್ನು ಖರೀದಿಸುವಾಗ ಮತ್ತು ಧರಿಸುವಾಗ ಎಚ್ಚರವಾಗಿರಿ ಎಂದು ತಿಳಿಸಿದೆ.

    ಮಹಿಳೆ ಧರಿಸಿರುವ ಸಾಕ್ಸ್ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದ್ದು, ಈ ಪೋಸ್ಟನ್ನು ಸುಮಾರು 800ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು, 300ಕ್ಕೂ ಅಧಿಕ ಜನರು ಕಮೆಂಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಿಥಾಲಿ ರಾಜ್ ಬಳಿಕ ಟ್ರೋಲ್‍ಗೊಳಗಾದ ಸಾಕ್ಷಿ ಧೋನಿ

    ಮಿಥಾಲಿ ರಾಜ್ ಬಳಿಕ ಟ್ರೋಲ್‍ಗೊಳಗಾದ ಸಾಕ್ಷಿ ಧೋನಿ

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಫೋಟೋ ನೋಡಿ ಅಭಿಮಾನಿಗಳು ಗರಂ ಆಗಿ ಟ್ರೋಲ್ ಮಾಡಿದ್ದಾರೆ.

    ತಮ್ಮ ಸ್ನೇಹಿತೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಕ್ಷಿ ಧೋನಿ ಅವರು ಸಮಾರಂಭದಲ್ಲಿ ತೆಗೆದುಕೊಂಡಿದ್ದ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋ ಕಂಡ ಹಲವರು ಸಾಕ್ಷಿ ಧೋನಿ ಧರಿಸಿದ್ದ ಬಟ್ಟೆ ಭಾರತೀಯ ಸಂಸ್ಕೃತಿಗೆ ಸರಿಹೊಂದುವುದಿಲ್ಲ. ಈ ಫೋಟೋ ಡಿಲೀಟ್ ಮಾಡಿ. ಈ ಡ್ರೆಸ್ ನಿಮಗೆ ಸರಿಹೊಂದುವುದಿಲ್ಲ. ಅಲ್ಲದೇ ಸಾಕ್ಷಿ ಅವರಿಗೆ ಡ್ರೆಸ್ ಸೆನ್ಸ್ ಇಲ್ಲ ಕಾಲೆಳೆದಿದ್ದಾರೆ.

    https://www.instagram.com/p/Blk0dihF105/?hl=en&taken-by=sakshisingh_r

    ಅಂದಹಾಗೇ ಸಾಕ್ಷಿ ಧೋನಿ ತಮ್ಮ ಗೆಳತಿ ರಾಜಕಾರಣಿ ಪ್ರಫುಲ್ ಪಟೇಲ್ ಪುತ್ರಿಯಾದ ಪೂರ್ಣಾ ಪಟೇಲ್ ಅವರ ಮದುವೆಯಲ್ಲಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿಲ್ವರ್, ಪಿಂಕ್ ಬಣ್ಣದ ಗ್ಲಾಮರ್ ಲೆಹಂಗಾ ಧರಿಸಿದ್ದರು. ಆದರೆ ಈ ಫೋಟೋ ಕಂಡ ಕೆಲ ಅಭಿಮಾನಿಗಳು ಸಾಕ್ಷಿರನ್ನು ಟ್ರೋಲ್ ಮಾಡಿದ್ದಕ್ಕೆ ಖಡಕ್ ಆಗಿ ಪ್ರತ್ಯುತ್ತರ ನೀಡಿದ್ದು, ನಿಮ್ಮ ಡ್ರೆಸ್ ಉತ್ತಮವಾಗಿದೆ. ನಾವು ನಿಮ್ಮನ್ನು ಇಷ್ಟಪಡುತ್ತೇವೆ ಮತ್ತು ಗೌರವಿಸುತ್ತೇವೆ ಎಂದು ಕಾಮೆಂಟ್ ಮಾಡಿ ತಿರುಗೇಟು ನೀಡಿದ್ದಾರೆ.

    ಈ ಹಿಂದೆ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ತಮ್ಮ ಗೆಳತಿಯರೊಂದಿಗೆ ತೆಗೆದುಕೊಂಡಿದ್ದ ಸೆಲ್ಫಿ ಫೋಟೋವನ್ನು ಕಂಡು ಕೆಲ ಅಭಿಮಾನಿಗಳು ಗರಂ ಆಗಿದ್ದರು. ಈ ವೇಳೆಯೂ ಮಿಥಾಲಿ ಅವರ ಡ್ರೆಸ್ ಸೆನ್ಸ್ ಬಗ್ಗೆ ಹಲವರು ಕಾಮೆಂಟ್ ಮಾಡಿದ್ದರು.

    https://www.instagram.com/p/Blm9Ay2ldvq/?hl=en&taken-by=sakshisingh_r

    https://www.instagram.com/p/BleHXuSFln7/?hl=en&taken-by=sakshisingh_r

  • ಪವಿತ್ರ ಕ್ಷೇತ್ರಗಳಲ್ಲಿ ತುಂಡುಡುಗೆಗೆ ಬ್ರೇಕ್- ತಲಕಾವೇರಿ, ತ್ರಿವೇಣಿ ಸಂಗಮದಲ್ಲಿ ಡ್ರೆಸ್ ಕೋಡ್!

    ಪವಿತ್ರ ಕ್ಷೇತ್ರಗಳಲ್ಲಿ ತುಂಡುಡುಗೆಗೆ ಬ್ರೇಕ್- ತಲಕಾವೇರಿ, ತ್ರಿವೇಣಿ ಸಂಗಮದಲ್ಲಿ ಡ್ರೆಸ್ ಕೋಡ್!

    ಮಡಿಕೇರಿ: ರಾಜ್ಯದ ಪ್ರಮುಖ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಕೊಡಗಿನ ತಲಕಾವೇರಿ ಹಾಗು ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಡ್ರೆಸ್ ಕೋಡ್ ಜಾರಿಗೆ ಆಗಿದೆ. ಪುಣ್ಯ ಕ್ಷೇತ್ರಗಳಿಗೆ ತುಂಡುಡುಗೆ ತೊಟ್ಟು ಬರುವವರಿಗೆ ನಿರ್ಬಂಧ ಹೇರಲು ದೇವಾಲಯ ವ್ಯವಸ್ಥಾಪನಾ ಸಮಿತಿ ಮುಂದಾಗಿದೆ.

    ಪ್ರಕೃತಿ ಸೌಂದರ್ಯದಿಂದಾಗಿ ರಾಜ್ಯವಲ್ಲದೆ ದೇಶದ ಜನರನ್ನ ತನ್ನತ್ತ ಸೆಳೆದಿದ್ದ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಿಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ದೇಶ ವಿದೇಶಗಳ ಪ್ರವಾಸಿಗರು ಅತ್ಯಾಧುನಿಕ ಬಟ್ಟೆಗಳನ್ನು ಧರಿಸಿ ಇಲ್ಲಿಗೆ ಬರುತ್ತಿದ್ದರು. ತುಂಡುಡುಗೆ ತೊಟ್ಟು ಕ್ಷೇತ್ರಕ್ಕೆ ಬರುವುದರಿಂದ ಕ್ಷೇತ್ರದ ಪಾವಿತ್ರತೆಗೆ ಧಕ್ಕೆಯಾಗುತ್ತಿದೆ ಎಂದು ತೀರ್ಮಾನಿಸಿದ ದೇವಾಲಯ ವ್ಯವಸ್ಥಾಪನಾ ಸಮಿತಿ ಇದೀಗ ಡ್ರೆಸ್ ಕೋಡ್ ಮಾಡಿದೆ.

    ಈ ಬಗ್ಗೆ ತೀರ್ಮಾನ ಕೈಗೊಂಡಿರುವ ಭಗಂಡೇಶ್ವರ ಹಾಗು ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ, ಹೀಗೆ ತುಂಡುಡುಗೆ ತೊಟ್ಟುಬರುವವರಿಗಾಗಿಯೇ ದೇವರ ದರ್ಶನದ ವೇಳೆ ವಿಶೇಷ ಬಟ್ಟೆಗಳನ್ನು ಬಾಡಿಗೆಗೆ ನೀಡಲು ಮುಂದಾಗಿದೆ. ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು, ಇಲ್ಲಿಗೆ ಬರುವವರು ಸಾಂಪ್ರದಾಯಿಕ ಉಡುಗೆ ತೊಟ್ಟು ಬರುವಂತೆ ಭಕ್ತರಲ್ಲಿ ಮನವಿ ಮಾಡಿದೆ.

    ತಲಕಾವೇರಿ ಹಾಗು ಬಾಗಮಂಡಲ ಪ್ರವಾಸಿತಾಣಗಳಲ್ಲ. ಬದಲಾಗಿ ರಾಜ್ಯದ ಪ್ರಸಿದ್ಧ ಪುಣ್ಯ ಧಾರ್ಮಿಕ ಕ್ಷೇತ್ರಗಳು ಮೋಜು ಮಸ್ತಿ ಮಾಡುವವರಿಗೆ ಇಲ್ಲಿ ಅವಕಾಶವಿಲ್ಲ ಎಂದಿರುವ ಸಮಿತಿ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಲು ಭಕ್ತರಲ್ಲಿ ಮನವಿ ಮಾಡಿದೆ ಎಂದು ದೇವಾಲಯದ ಮುಖ್ಯಸ್ಥ ಮೋಟಯ್ಯ ಹೇಳಿದ್ದಾರೆ.

    ದಿನದಿಂದ ದಿನಕ್ಕೆ ಕ್ಷೇತ್ರಗಳಿಗೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ದಿನಕಳೆದಂತೆ ಫ್ಯಾಷನ್ ಹೆಸರಿನ ವಸ್ತ್ರ ಮಾಲೀನ್ಯ ಮಿತಿಮೀರುತ್ತಿದೆ. ಟೂರಿಸ್ಟ್ ಸ್ಥಳಗಳಾದರೆ ಉಡುಪು ಹೇಗಿದ್ದರೂ ನಡೆಯುತ್ತೆ. ಆದರೆ ತಲಕಾವೇರಿ ಹಾಗು ಭಾಗಮಂಡಲ ಪುಣ್ಯ ಕ್ಷೇತ್ರಗಳು ಇಲ್ಲಿಗೆ ಬರುವವರ ಉಡುಪು ಸಾಂಪ್ರದಾಯಿಕವಾಗಿರಬೇಕು. ಕೊಡಗಿನ ಜನರ ಮನೆದೇವತೆ ಕಾವೇರಿ ತಾಯಿಯ ಕ್ಷೇತ್ರಕ್ಕೆ ತನ್ನದೆಯಾದ ಸ್ಥಳ ಮಹಿಮೆಯಿದೆ.

    ಮೋಜು ಮಸ್ತಿಗೆಂದು ಬರುವ ಕೆಲವೇ ಕೆಲವು ಜನರಿಂದ ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆಯಾಗುತ್ತಿದೆ ಎಂದು ಆಪಾದಿಸಿರುವ ಸಮಿತಿ, ವಸ್ತ್ರ ಸಂಹಿತೆ ಜಾರಿಗಾಗಿ ಎರಡೂ ಕ್ಷೇತ್ರದಲ್ಲಿ ಹೆಚ್ಚಿನ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಭಾಗಮಂಡಲ ಹಾಗು ತಲಕಾವೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆದಿರುವ ಸಮಿತಿ ತುಂಡುಡುಗೆ ತೊಟ್ಟುಬರುವವರಿಗೆ ಶಲ್ಯ ಹಾಗು ಪಂಚೆಯನ್ನು ಬಾಡಿಗೆ ನೀಡುತ್ತಿದೆ. ಜಿಲ್ಲೆಯ ವಿವಿಧ ಸುಂದರ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಲ್ಲಿಗೂ ಬರುವ ಪ್ರವಾಸಿಗರು ಇಲ್ಲಿನ ಪಾವಿತ್ರ್ಯತೆ ಅರ್ಥಮಾಡಿಕೊಳ್ಳಬೇಕು ಎಂಬುದು ಸ್ಥಳೀಯರು ಅಭಿಪ್ರಾಯವಾಗಿದೆ.