Tag: clothes

  • ತೃತೀಯಲಿಂಗಿಗಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೊಲೀಸರು!

    ತೃತೀಯಲಿಂಗಿಗಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೊಲೀಸರು!

    ತಿರುವನಂತಪುರಂ: ತೃತೀಯಲಿಂಗಿಗಳನ್ನು ಪೊಲೀಸರು ವಿವಸ್ತ್ರಗೊಳಿಸಿ ಅವರ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಘಟನೆ ಕೇರಳದ ಅಲೆಪ್ಪಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಕುಡಿದು ಮದ್ಯದ ನಶೆಯಲ್ಲಿ ತೃತೀಯಲಿಂಗಿಗಳು ಗಲಾಟೆ ಮಾಡುತ್ತಿದ್ದರು. ಅವರ ಗಲಾಟೆಯಿಂದ ನೊಂದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಹೀಗಾಗಿ ಪೆಟ್ರೋಲಿಂಗ್ ತಂಡ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

    ಪೊಲೀಸ್ ಠಾಣೆಯಲ್ಲೂ ತೃತೀಯ ಲಿಂಗಿಗಳು ವಾಗ್ವಾದ ನಡೆಸಿದ್ದಾರೆ. ಹೀಗಾಗಿ ಇವರು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎನ್ನುವ ಭಯದಿಂದ ಅಲ್ಲಿದ್ದ ಮಹಿಳಾ ಪೊಲೀಸರು ಅವರನ್ನು ವಿವಸ್ತ್ರಗೊಳಿಸಿ ಫೋಟೋ ಹಾಗೂ ವಿಡಿಯೋ ತೆಗೆದಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂದು ಪೊಲೀಸ್ ವರಿಷ್ಠಾಧಿಕಾರಿ ಎ. ಸುರೇಂದ್ರ, ಗುರುವಾರ ಈ ಘಟನೆ ನಡೆದಿದ್ದು, ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯಾರೂ ಹಾಕಿದ್ದಾರೆಂಬುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಎ. ಸುರೇಂದ್ರ ಹೇಳಿದ್ದಾರೆ.

    ಪೆಟ್ರೋಲಿಂಗ್ ಪೊಲೀಸ್ ತಂಡ ತೃತೀಯ ಲಿಂಗದವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ನಂತರ ಅಲ್ಲಿ ಅವರನ್ನು ವಿವಸ್ತ್ರಗೊಳಿಸಿ ಫೋಟೋ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು ಎಂದು ತೃತೀಯ ಲಿಂಗಿಗಳು ತಿಳಿಸಿದ್ದಾರೆ.

  • ಎಲ್ಲಾ ಬಟ್ಟೆ ಕಳಚಿ, ಗಗನಸಖಿಯನ್ನ ತಬ್ಬಿಕೊಳ್ಳಲು ಯತ್ನಿಸಿದ ಪ್ರಯಾಣಿಕ ಅರೆಸ್ಟ್

    ಎಲ್ಲಾ ಬಟ್ಟೆ ಕಳಚಿ, ಗಗನಸಖಿಯನ್ನ ತಬ್ಬಿಕೊಳ್ಳಲು ಯತ್ನಿಸಿದ ಪ್ರಯಾಣಿಕ ಅರೆಸ್ಟ್

    ಢಾಕಾ: ಬಾಂಗ್ಲಾದೇಶ ಮೂಲದ ಪ್ರಯಾಣಿಕನೊಬ್ಬ ವಿಮಾನದಲ್ಲಿ ವಿವಸ್ತ್ರಗೊಂಡಿದ್ದಲ್ಲದೇ ಗಗನಸಖಿಯನ್ನೇ ತಬ್ಬಿಕೊಳ್ಳಲು ಯತ್ನಿಸಿ ಅಸಭ್ಯ ವರ್ತನೆ ತೋರಿದ್ದಾನೆ.

    ಶನಿವಾರದಂದು ಮಲೇಷ್ಯಾದ ಕೌಲಾಲಾಂಪುರ್ ನಿಂದ ಢಾಕಾಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ಹೊರಟ ಬಳಿಕ 20 ವರ್ಷದ ವ್ಯಕ್ತಿ ತನ್ನ ಬಟ್ಟೆಗಳನ್ನೆಲ್ಲಾ ಕಳಚಿ ಸಂಪೂರ್ಣ ನಗ್ನವಾಗಿ ಕುಳಿತು ತನ್ನ ಲ್ಯಾಪ್‍ಟಾಪ್‍ನಲ್ಲಿ ಪೋರ್ನ್ ವಿಡಿಯೋ ನೋಡಲು ಶುರು ಮಾಡಿದ್ದ. ಆರೋಪಿ ಮಲೇಷ್ಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ವಿಮಾನ ಸಿಬ್ಬಂದಿ ಮನವಿ ಮಾಡಿದ ನಂತರ ತನ್ನ ಬಟ್ಟೆಗಳನ್ನ ಮರಳಿ ಹಾಕಿಕೊಂಡಿದ್ದ. ಆದ್ರೆ ನಂತರ ಮಹಿಳಾ ಸಿಬ್ಬಂದಿಯನ್ನ ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಇದಕ್ಕೆ ಆಕೆ ವಿರೋಧಿಸಿದಾಗ ಆಕ್ರೋಶಗೊಂಡು ಆಕೆಯ ಮೇಲೆ ದಾಳಿ ಮಾಡಿದ್ದಾನೆ.

    ಈ ವೇಳೆ ವಿಮಾನದ ಸಿಬ್ಬಂದಿ ಹಾಗೂ ಇತರೆ ಪ್ರಯಾಣಿಕರು ಆತನನ್ನ ಹಿಡಿದುಕೊಂಡು ಬಟ್ಟೆಯಿಂದ ಆತನ ಕೈಗಳನ್ನ ಕಟ್ಟಿ ಹಾಕಿದ್ದಾರೆ. ಆರೋಪಿ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತಿಸಲು ಡ್ರಗ್ಸ್ ಅಥವಾ ಮದ್ಯಪಾನ ಸೇವನೆ ಮಾಡಿದ್ದ ಲಕ್ಷಣಗಳು ಇರಲಿಲ್ಲ.

    ವಿಮಾನಯಾನ ಸಂಸ್ಥೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದು, ಢಾಕಾಗೆ ಹೊರಟಿದ್ದ ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕನ ಕೈ ಕಟ್ಟಿಹಾಕಲಾಗಿತ್ತು. ಬಳಿಕ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಆತನನ್ನು ಬಂಧಿಸಲಾಯಿತು ಎಂದಷ್ಟೇ ಹೇಳಿದೆ.

  • ಬಟ್ಟೆ ಹಾಕಿಕೊಳ್ಳದೆ ನಗ್ನವಾಗಿ ಡೇಟಿಂಗ್ ಗೆ ಹೋದ್ಳು- ಎಷ್ಟೇ ಹೊತ್ತಾದ್ರೂ ಬಾಯ್‍ಫ್ರೆಂಡ್ ಗೆ ಗೊತ್ತೇ ಆಗ್ಲಿಲ್ಲ!!

    ಬಟ್ಟೆ ಹಾಕಿಕೊಳ್ಳದೆ ನಗ್ನವಾಗಿ ಡೇಟಿಂಗ್ ಗೆ ಹೋದ್ಳು- ಎಷ್ಟೇ ಹೊತ್ತಾದ್ರೂ ಬಾಯ್‍ಫ್ರೆಂಡ್ ಗೆ ಗೊತ್ತೇ ಆಗ್ಲಿಲ್ಲ!!

    ವಾಷಿಂಗ್ಟನ್: ಕೆಲವರು ಗೆಳೆಯನನ್ನು ಭೇಟಿ ಮಾಡಲು ಯಾವ ಬಟ್ಟೆ ಧರಿಸಬೇಕು ಎಂದು ಚಿಂತಿಸುತ್ತಾರೆ. ಇನ್ನು ಕೆಲವರು ತಮ್ಮ ವಾರ್ಡ್ ರೋಬ್ ತೆಗೆದು ತಮ್ಮ ಸ್ನೇಹಿತರ ಅಭಿಪ್ರಾಯವನ್ನು ಕೇಳುತ್ತಾರೆ. ಆದರೆ ಯುವತಿಯೊಬ್ಬಳು ತನ್ನ ಗೆಳೆಯನನ್ನು ಭೇಟಿ ಮಾಡಲು ಬಟ್ಟೆ ಹಾಕಿಕೊಳ್ಳದೇ ನಗ್ನವಾಗಿ ಹೋಗಿದ್ದಾಳೆ.

    ಅಮೆರಿಕದ ಜಾಯ್ ತುಂಬಾ ಧೈರ್ಯದಿಂದ ಗೆಳೆಯನನ್ನ ಭೇಟಿ ಮಾಡಲು ನಗ್ನವಾಗಿ ಹೋಗಿದ್ದಾಳೆ. ಆದ್ರೆ ಆಕೆ ಉಡುಪು ಧರಿಸಿರುವಂತೆ ಕಾಣಲು ದೇಹದ ಮೇಲೆ ಪೇಂಟ್ ಮಾಡಿಸಿಕೊಂಡಿದ್ದಳು.


    ಅಮೆರಿಕದ ಪ್ರಸಿದ್ಧ ಕಲಾವಿದೆ ಜೆನ್ ಸೀಡಲ್ ಹಾಗೂ ಆಕೆಯ ಮಗಳು ಕೆನ್ನೆಡಿ ಯುವತಿಗೆ ಈ ರೀತಿಯಾಗಿ ಪೇಂಟಿಂಗ್ ಮಾಡಿದ್ದಾರೆ. ಇದನ್ನ ನೋಡಿದ ಯಾರೋಬ್ಬರು ಸಹ ಯುವತಿ ನಗ್ನವಾಗಿದ್ದಾಳೆ ಎಂದು ಊಹಿಸಲು ಕೂಡ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೇ ಆಕೆಯ ಬಾಯ್‍ಫ್ರೆಂಡ್‍ಗೂ ಕೂಡ ಬಟ್ಟೆ ಧರಿಸಿಲ್ಲ ಎಂದು ತಿಳಿಯಲಿಲ್ಲ. ಆ ರೀತಿ ಥೇಟ್ ಬಟ್ಟೆಯಂತೆಯೇ ಕಾಣುವ ಹಾಗೇ ಪೇಂಟಿಂಗ್ ಮಾಡಲಾಗಿತ್ತು. ಜೀನ್ಸ್ ಹಾಗೂ ಹೂವಿನ ಚಿತ್ತಾರವಿರುವ ಟಾಪ್ ಹಾಕಿಕೊಂಡಿರುವಂತೆ ಪೇಟಿಂಗ್ ಮಾಡಲಾಗಿತ್ತು.

    ಜಾಯ್ ಒಂದು ಕೋಟ್ ಧರಿಸಿ ತನ್ನ ಗೆಳೆಯನನ್ನ ಭೇಟಿ ಮಾಡಿದ್ದಾಳೆ. ನಂತರ ತನ್ನ ಕೋಟ್ ತೆಗೆಯಲು ಸಹಾಯ ಮಾಡುವಂತೆ ಕೇಳಿದ್ದಾಳೆ. ಆಗ ಆತ ನಿನ್ನ ಡ್ರೆಸ್ ತುಂಬಾ ಚೆನ್ನಾಗಿದೆ. ಆದ್ರೆ ಒಂದು ಕ್ಷಣ ನೀನು ನಗ್ನವಾಗಿದ್ದೀಯ ಎಂದುಕೊಂಡೆ ಎಂದು ಹೇಳುತ್ತಾನೆ. ಆಗ ಜಾಯ್ ನಕ್ಕು ಸುಮ್ಮನಾಗಿದ್ದಾಳೆ. ನಂತರ ಮಾಲ್‍ನಲ್ಲಿ ಇಬ್ಬರು ಕೆಲ ಸಮಯ ಕಳೆದಿದ್ದಾರೆ. ಇದೆಲ್ಲವನ್ನೂ ಜಾಯ್ ಸ್ನೇಹಿತರೊಬ್ಬರು ದೂರದಿಂದಲೇ ವಿಡಿಯೋ ಮಾಡಿದ್ದಾರೆ.

    ಕಾಫಿ ಕುಡಿದ ಬಳಿಕ ಇಬ್ಬರೂ ಮಾಲ್‍ನಲ್ಲಿ ಕೆಲ ಕಾಲ ತಿರುಗಾಡಿದ್ದಾರೆ. ಈ ವೇಳೆ ಕೆಲ ಹುಡುಗಿಯರು ಜಾಯ್ ದೇಹದ ಮೇಲೆ ಪೇಂಟಿಂಗ್ ಮಾಡಿಕೊಂಡಿದ್ದಾಳೆ ಎಂದು ಕಂಡುಹಿಡಿದು ಸೆಲ್ಫೀ ಕೇಳಿದ್ದಾರೆ. ಆಗ ಜಾಯ್ ಗೆಳೆಯ ಇದು ಬಾಡಿ ಪೇಂಟ್ ಅಲ್ವಾ ಎಂದು ಪ್ರಶ್ನಿಸಿದ್ದು, ಆಗಲೂ ಆಕೆ ಸತ್ಯವನ್ನ ಬಹಿರಂಗಪಡಿಸಿರಲಿಲ್ಲ.

    ಕೊನೆಗೆ ಇಬ್ಬರೂ ಕಾರ್ ಪಾರ್ಕಿಂಗ್ ಬಳಿ ಬಂದಾಗ ಮಳೆ ಸುರಿಯುತ್ತಿತ್ತು. ಮಳೆ ನೀರು ಬಿದ್ದು ಮುಜುಗರವಾಗೋದು ಬೇಡ ಎಂದುಕೊಂಡು ಕೊನೆಗೂ ಜಾಯ್ ಸತ್ಯವನ್ನ ಹೇಳಿದ್ದಾಳೆ.

    ಕಳೆದ ಕೆಲ ವರ್ಷಗಳ ಹಿಂದೆ ಮಾಡೆಲ್ ಒಬ್ಬಳು ಪ್ಯಾಂಟ್ ಹಾಕಿಕೊಳ್ಳದೇ ಜೀನ್ಸ್ ತೊಟ್ಟಿರುವಂತೆ ಪೇಂಟಿಂಗ್ ಮಾಡಿಸಿಕೊಂಡು ರಸ್ತೆ ಸುತ್ತಿದ್ದಳು.

  • ಹಣ ಕದ್ದರೆಂಬ ಆರೋಪ- ಇಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿಯರ ವಿರುದ್ಧ ದೂರು

    ಹಣ ಕದ್ದರೆಂಬ ಆರೋಪ- ಇಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿಯರ ವಿರುದ್ಧ ದೂರು

    ಭೋಪಾಲ್: 11ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು 1000 ರೂ. ಹಣ ಕಳ್ಳತನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕಿಯರೇ ಅವರ ಬಟ್ಟೆ ಬಿಚ್ಚಿಸಿರುವ ಆರೋಪ ಕೇಳಿಬಂದಿದೆ.

    ಮಧ್ಯಪ್ರದೇಶದ ಅಲಿರಾಜ್ಪುರ್ ಜಿಲ್ಲೆಯ ಜೋಬಾತ್‍ನಲ್ಲಿ ಜನವರಿ 8 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ವಿದ್ಯಾರ್ಥಿನಿಯರು ಜೋಬಾತ್ ಪೊಲೀಸ್ ಠಾಣೆಗೆ ಬುಧವಾರದಂದು ದೂರು ನೀಡಿದ್ದಾರೆ.

    ತನ್ನ ಬಳಿ ಇದ್ದ 1000 ರೂಪಾಯಿ ಕಳವು ಮಾಡಿದ್ದಾರೆಂದು 11 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಅವರ ಸಹಪಾಠಿಯಿಂದಲೇ ಆರೋಪ ಮಾಡಲಾಗಿತ್ತು. ಹೀಗಾಗಿ ಹಣವನ್ನು ಪತ್ತೆ ಮಾಡುವ ಭರದಲ್ಲಿ ಶಿಕ್ಷಕಿಯರು ಇಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾರೆ. ಆದರೆ ವಿದ್ಯಾರ್ಥಿನಿಯರ ಬಳಿ ಯಾವುದೇ ಹಣ ಸಿಕ್ಕಿಲ್ಲ ಎಂದು ಸಬ್ ಇನ್ಸ್ ಪೆಕ್ಟರ್ ಶಂಕರ್ ಸಿಂಗ್ ಜಮ್ರಾ ತಿಳಿಸಿದ್ದಾರೆ.

    ವಿದ್ಯಾರ್ಥಿನಿಯರು ಹಣ ಕದ್ದಿದ್ದೀರಾ ಎಂದು ಶಿಕ್ಷಕಿಯರು ಮೊದಲು ತರಗತಿಯಲ್ಲೇ ಇಬ್ಬರನ್ನೂ ಪ್ರಶ್ನೆ ಮಾಡಿದ್ದಾರೆ. ಅವರ ಸ್ಕೂಲ್ ಬ್ಯಾಗ್ ಶೋಧಿಸಿದ್ದಾರೆ. ನಂತರ ಶಾಲೆಯ ಇನ್ನೊಂದು ಕೊಠಡಿಗೆ ಕರೆದೊಯ್ದು ಬಟ್ಟೆ ಬಿಚ್ಚಿಸಿ, ಹಣಕ್ಕಾಗಿ ಹುಡುಕಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಶಾಲೆಯ ಮುಖ್ಯೋಪಾಧ್ಯಾಯರು ಈ ಆರೋಪವನ್ನ ತಳ್ಳಿಹಾಕಿದ್ದಾರೆ. ಶಾಲೆಯಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 1000 ರೂ. ಕದ್ದರೆಂದು ಸಾಮಾನ್ಯವಾಗಿ ಚೆಕ್ ಮಾಡಲಾಗಿದೆ. ಆದ್ರೆ ಬಟ್ಟೆ ಬಿಚ್ಚಿಸಿದ್ರು ಅನ್ನೋ ಆರೋಪ ಆಧಾರರಹಿತ ಎಂದು ಹೇಳಿದ್ದಾರೆ.

    ಈ ಬಗ್ಗೆ ಎಲ್ಲಾ ರೀತಿಯಲ್ಲೂ ತನಿಖೆ ನಡೆಸಲಾಗುತ್ತಿದೆ. ತನಿಖೆಯ ನಂತರ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಜಮ್ರಾ ತಿಳಿಸಿದ್ದಾರೆ.

  • ಬಟ್ಟೆ ಶಾಪಿಂಗ್ ಮಾಡೋವಾಗ ಈ 6 ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ

    ಬಟ್ಟೆ ಶಾಪಿಂಗ್ ಮಾಡೋವಾಗ ಈ 6 ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ

    ಶಾಪಿಂಗ್‍ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್‍ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ. ಸೋ…. ಮುಂದಿನ ಸಲ ಶಾಪಿಂಗ್ ಹೋದಾಗ ಈ 6 ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ.

    1. ಗಡಿಬಿಡಿಯಲ್ಲಿ ಶಾಪಿಂಗ್ ಖಂಡಿತ ಮಾಡ್ಬೇಡಿ
    ಅಯ್ಯೋ ಟೈಂ ಇಲ್ಲ.. ಬೇಗ ಹೋಗ್ಬೇಕು ಅಂದುಕೊಂಡು ಎಂದೂ ಶಾಪಿಂಗ್ ಮಾಡ್ಬೇಡಿ. ಇಂತ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಡಿಸೈನ್‍ಗಳನ್ನ ನೋಡದೆ ಮೊದಲು ಅಂಗಡಿಗೆ ಹೋದಾಗ ಯಾವುದು ಕಣ್ಣಿಗೆ ಚೆನ್ನಾಗಿ ಕಾಣುತ್ತೋ ಅದನ್ನೇ ಕೊಂಡುಕೊಳ್ತೀವಿ. ಆದ್ರೆ ಇನ್ನೂ ಸ್ವಲ್ಪ ಸಮಯ ಹುಡುಕಿದ್ರೆ ಅದಕ್ಕಿಂತ ಚೆಂದದ ಡಿಸೈನ್‍ವುಳ್ಳ ಬಟ್ಟೆ ಸಿಗಬಹುದು. ಅಥವಾ ಒಳ್ಳೇ ಆಫರ್ ಕೂಡ ಲಭ್ಯವಾಗಿ ಖರ್ಚು ಕೂಡ ಕಡಿಮೆಯಾಗಬಹುದು.

    2. ಟ್ರಯಲ್ ಮಾಡದೆ ಪರ್ಚೇಸ್ ಮಾಡ್ಬೇಡಿ
    ಕಣ್ಣಿಗೆ ಚೆಂದವಾಗಿ ಕಂಡ ಬಟ್ಟೆಯನ್ನ ಧರಿಸಿ ನೋಡಿದಾಗ ಅದು ನಿಮಗೆ ಸೂಟ್ ಆಗದಿರಬಹುದು. ಅಥವಾ ಫಿಟಿಂಗ್‍ನಲ್ಲಿ ವ್ಯತ್ಯಾಸವಿರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಯಾವಾಗ್ಲೂ ಟ್ರಯಲ್ ನೋಡಿಯೇ ಬಟ್ಟೆ ಖರೀದಿ ಮಾಡಿ. ಅದರಲ್ಲೂ ವಿವಿಧ ಬ್ರ್ಯಾಂಡ್‍ಗಳ ಜೀನ್ಸ್ ಮತ್ತು ಟಾಪ್‍ಗಳ ಸೈಜ್‍ನಲ್ಲಿ ವ್ಯತ್ಯಾಸವಿರುತ್ತದೆ. ಒಂದು ಬ್ರ್ಯಾಂಡಿನ ಸ್ಮಾಲ್ ಸೈಜಿನ ಟಾಪ್ ಮತ್ತೊಂದು ಬ್ರ್ಯಾಂಡ್‍ನಲ್ಲಿ ಮೀಡಿಯಮ್ ಸೈಜ್‍ನಷ್ಟು ಇರುತ್ತದೆ. ಹೀಗಾಗಿ ಟ್ರಯಲ್ ನೋಡುವುದು ಉತ್ತಮ.

    3. ಒಂದೇ ಡಿಸೈನ್‍ನಲ್ಲಿ ಬೇರೆ ಬೇರೆ ಬಣ್ಣದ ಬಟ್ಟೆ ತಗೋಬೇಡಿ
    ಒಂದು ಟೀ ಶರ್ಟ್/ಟಾಪ್/ಪ್ಯಾಂಟ್ ಇಷ್ಟವಾದ್ರೆ ಅದೇ ಡಿಸೈನ್‍ನಲ್ಲಿ ಮೂರ್ನಾಲ್ಕು ವಿವಿಧ ಬಣ್ಣದ ಟೀ-ಶರ್ಟ್/ಟಾಪ್ ತೆಗೆದುಕೊಳ್ಳೋದನ್ನ ಮಾಡ್ಬೇಡಿ. ಸಾಕಷ್ಟು ವೆರೈಟಿಯ ಡಿಸೈನ್‍ಗಳು ಇರುವಾಗ ಒಂದೇ ಡಿಸೈನ್‍ಗೆ ಅಂಟಿಕೊಳ್ಳೋದು ಯಾಕೆ?

    4. ನಿಮಗೆ ಫಿಟ್ ಆಗದ ಬಟ್ಟೆಯನ್ನ ಅಲ್ಲೇ ಬಿಡಿ
    ಅಯ್ಯೋ ಈ ಟಾಪ್ ಎಷ್ಟೊಂದು ಚೆನ್ನಾಗಿದೆ… ಆದ್ರೆ ನನಗೆ ಸ್ವಲ್ಪ ಟೈಟ್ ಆಗ್ತಿದೆ… ಪರ್ವಾಗಿಲ್ಲ, ಮುಂದೆ ಸಣ್ಣ ಆಗ್ತೀನಿ…. ಎಂತೆಲ್ಲಾ ಅಂದುಕೊಂಡು ನಿಮಗೆ ಫಿಟ್ ಆಗದಿರುವ ಬಟ್ಟೆಯನ್ನ ಖರೀದಿಸಬೇಡಿ. ತುಂಬಾ ಇಷ್ಟವಾದ ಬಟ್ಟೆ ಸ್ವಲ್ಪ ಇದ್ದು, ನಿಮ್ಮ ಸೈಜ್ ನಲ್ಲಿ ಲಭ್ಯವಿಲ್ಲದಿದ್ರೆ ಅದನ್ನ ಟೈಲರ್ ಬಳಿ ಕೊಟ್ಟು ಫಿಟ್ ಮಾಡಿಸಿಕೊಳ್ಳಬಹುದು. ಆದ್ರೆ ಹಾಗಂತ ಯಾವಾಗ್ಲೂ ನಿಮ್ಮ ಸೈಜ್‍ಗೆ ಹೊಂದದ ಬಟ್ಟೆಯನ್ನ ಖರೀದಿಸಬೇಡಿ. ಹಾಗೇ ನೀವು ಪದೇ ಪದೇ ಧರಿಸದ ಬಟ್ಟೆಗೆ, ನಿಮ್ಮ ಸ್ಟೈಲ್‍ಗೆ ಹೊಂದದ ಬಟ್ಟೆಗೆ ದುಡ್ಡು ಸುರೀಬೇಡಿ. ನೀವು ಸಾಮಾನ್ಯವಾಗಿ ಜೀನ್ಸ್ ಧರಿಸಲ್ಲವಾದ್ರೆ ಸುಮ್ಮನೆ ಅದನ್ನ ಖರೀದಿಸಿ ಯಾಕೆ ಮೂಲೆಗಿಡ್ತೀರ? ಯಾವಾಗ್ಲೋ ಟ್ರಿಪ್ ಹೋದಾಗ ಇದನ್ನ ಹಾಕೋಬಹುದು ಅಂತ ಖರೀದಿ ಮಾಡಿದ್ರೆ ತಿಂಗಳಾನುಗಟ್ಟಲೆ ಕಬೋರ್ಡ್‍ನಲ್ಲೇ ಇರುತ್ತೆ.

    5. ಸೇಲ್ ಇದ್ದಾಗ ಶಾಪಿಂಗ್ ಹೋಗಿ
    ಹೊಸ ಡಿಸೈನ್‍ನ ಬಟ್ಟೆಗಳ ಬೆಲೆ ತುಂಬಾ ದುಬಾರಿ ಎನಿಸಿದ್ರೆ ಸ್ವಲ್ಪ ಕಾಯಿರಿ. ಸ್ವಲ್ಪ ಸಮಯದ ನಂತರ ಡಿಸ್ಕೌಂಟ್ ಸೇಲ್ ಹಾಕಿದಾಗ ಅದೇ ಬಟ್ಟೆ ಕಡಿಮೆ ಬೆಲೆ/ ಅರ್ಧ ಬೆಲೆಗೂ ಸಿಗಬಹುದು. ಹಾಗಂತ ಎಲ್ಲಾ ಬಟ್ಟೆಗಳು ಸೇಲ್‍ನಲ್ಲಿ ಬರುತ್ತವೆ ಅಂದ್ಕೋಬೇಡಿ. ಇಂತದ್ದೊಂದು ಜಾಕೇಟ್ ಖರೀದಿಸಬೇಕು ಅಂದ್ಕೊಂಡು ಅದು ತುಂಬಾ ದಿನಗಳ ನಂತರ ಸಿಕ್ಕರೆ ಅದನ್ನ ಆಗಲೇ ಖರೀದಿಸಿದ್ರೆ ಉತ್ತಮ. ಸಾಮಾನ್ಯವಾಗಿ ಸಿಗೋ ಉಡುಪುಗಳಾದ್ರೆ ಸೇಲ್ ಹಾಕಿದಾಗಲೇ ಖರೀದಿ ಮಾಡಿ.

    6. ಫ್ರೆಂಡ್‍ಗೆ ಇಷ್ಟವಾಗ್ಲಿಲ್ಲ ಅಂತ ನೀವು ಇಷ್ಟಪಟ್ಟಿದ್ದನ್ನ ಖರೀದಿಸದೇ ಇರಬೇಡಿ
    ನಿಮ್ಮ ಸ್ಟೈಲ್ ಅಥವಾ ಟೇಸ್ಟ್ ನಿಮ್ಮ ಸ್ನೇಹಿತರಿಗೆ ಇಷ್ಟವಾಗದಿರಬಹುದು. ಅಥವಾ ನೀವು ಆರಿಸಿದ ಬಟ್ಟೆ ಚೆನ್ನಾಗಿಲ್ಲ ಅಂತಲೂ ಅವರು ಹೇಳಿಬಿಡಬಹುದು. ಆದ್ರೆ ಆ ಬಟ್ಟೆಯನ್ನ ಯಾವ ರೀತಿ ಸ್ಟೈಲ್ ಮಾಡಬೇಕು , ಯಾವುದರೊಂದಿಗೆ ಮ್ಯಾಚ್ ಮಾಡಿ ಹಾಕೋಬೇಕು ಅನ್ನೋದು ಅವರಿಗಿಂತ ಚೆನ್ನಾಗಿ ನಿಮಗೆ ಗೊತ್ತಿರುತ್ತದೆ. ಹೀಗಾಗಿ ಗೆಳೆಯ/ ಗೆಳತಿಗೆ ಇಷ್ಟವಾಗ್ಲಿಲ್ಲ ಅಂತ ನೀವು ಇಷ್ಟಪಟ್ಟಿದ್ದನ್ನ ಖರೀದಿಸದೆ ಇದ್ರೆ ನಿಮಗೇ ಲಾಸ್. ಸ್ನೇಹಿತರಿಗಿಂತ ನಿಮ್ಮ ಟೇಸ್ಟ್ ಭಿನ್ನವಾಗಿದ್ರೆ ಒಬ್ಬರೇ ಶಾಪಿಂಗ್ ಮಾಡಲು ಹೋಗಿ.

    ಈ ಮಿಸ್ಟೇಕ್ಸ್ ಗಳನ್ನ ಮಾಡದಿದ್ರೆ ನೀವು ಬಟ್ಟೆ ಖರೀದಿಯಲ್ಲಿ ಖಂಡಿತವಾಗ್ಲೂ ಭೇಷ್ ಎನಿಸಿಕೊಳ್ಳಬಹುದು.

  • 62 ಸಾವಿರ ರೂ. ಮೊತ್ತದ ಬಟ್ಟೆ ಖರೀದಿಸಿದ ಚೆಂದುಳ್ಳಿ ಚೆಲುವೆ- ಆನ್‍ಲೈನ್ ಪೇಮೆಂಟ್ ಮಾಡ್ತೀನೆಂದು ಮಾಲೀಕನಿಗೆ ಟೋಪಿ

    62 ಸಾವಿರ ರೂ. ಮೊತ್ತದ ಬಟ್ಟೆ ಖರೀದಿಸಿದ ಚೆಂದುಳ್ಳಿ ಚೆಲುವೆ- ಆನ್‍ಲೈನ್ ಪೇಮೆಂಟ್ ಮಾಡ್ತೀನೆಂದು ಮಾಲೀಕನಿಗೆ ಟೋಪಿ

    ಬೆಂಗಳೂರು: ಕಲರ್ ಫುಲ್ ಬಟ್ಟೆ ಮಾರುವ ಮಾಲಿಕನಿಗೆ ಮಹಿಳೆಯೊಬ್ಬಳಿಂದ ಟೋಪಿ ಬಿದ್ದಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸೆಪ್ಟಂಬರ್ 20 ರಂದು ಈ ಘಟನೆ ನಡೆದಿದೆ. ಇಲ್ಲಿನ ಡಿಜೈನ್ ಫ್ಯಾಬ್ರಿಕ್ ಅಂಗಡಿ ಮಾಲಿಕ ಉಜೂರ್ ಮೋಸಹೋದವರು. ಬಟ್ಟೆ ಖರೀದಿ ಮಾಡಲು ಬಂದಿದ್ದ ಮಹಿಳೆ 62 ಸಾವಿರದ 300 ರೂಪಾಯಿ ಬೆಲೆ ಬಾಳೋ ಬಟ್ಟೆ ಖರೀದಿಸಿದ್ದಳು. ಈ ಮೊತ್ತವನ್ನ ಆನ್‍ಲೈನ್ ಟ್ರಾನ್ಸಾಕ್ಷನ್ ಮಾಡೋದಾಗಿ ಹೇಳಿದ್ದಳು. ನಾಲ್ಕು ದಿನದ ನಂತರ ಹಣ ಖಾತೆಗೆ ಬರೋದಾಗಿ ಹೇಳಿ ತೆರಳಿದ್ದಳು.

    ಆದ್ರೆ ಹದಿನೈದು ದಿನ ಕಳೆದರು ಹಣ ಮಾಲಿಕನ ಖಾತೆಗೆ ಜಮೆ ಆಗೇ ಇಲ್ಲ. ಹೀಗಾಗಿ ವಂಚನೆಗೊಳಗಾದ ಮಾಲೀಕ ಉಜೂರ್ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    https://www.youtube.com/watch?v=zY3Vhei8v28