Tag: clothes

  • ಭಿಕ್ಷುಕನನ್ನು ಸ್ವಾವಲಂಬಿಯನ್ನಾಗಿ ಮಾಡಿದ ವಿದ್ಯಾರ್ಥಿ

    ಭಿಕ್ಷುಕನನ್ನು ಸ್ವಾವಲಂಬಿಯನ್ನಾಗಿ ಮಾಡಿದ ವಿದ್ಯಾರ್ಥಿ

    ಹುಬ್ಬಳ್ಳಿ: ಭಿಕ್ಷೆ ಬೇಡುವವರನ್ನು ಕಂಡರೆ ಮೂದಲಿಸುವವರೇ ಹೆಚ್ಚು. ಆದರೆ ಭಿಕ್ಷುಕನಿಗೆ ವಿದ್ಯಾರ್ಥಿಯೊಬ್ಬ ತೂಕದ ಯಂತ್ರ ಕೊಡಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ ಅಪರೂಪದ ಘಟನೆಯೊಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ನವನಗರದಲ್ಲಿ ಭಿಕ್ಷೆ ಬೇಡಿಕೊಂಡು ಅಲೆಯುತ್ತಿದ್ದ ಭೀಕ್ಷುಕನಿಗೆ ತೂಕದ ಯಂತ್ರ ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಡುವ ಮೂಲಕ ವಿದ್ಯಾರ್ಥಿ ಸುನೀಲ್ ಜಿಂಗಾನಿ ಸಮಾಜ ಕಾರ್ಯ ಮಾಡಿ ಸುದ್ದಿಯಾಗಿದ್ದಾರೆ.

    ಶಿರಸಿ ಮೂಲದ ಗಂಗಾಧರಪ್ಪ ವಿಕಲಚೇತನಾಗಿದ್ದು, ಪ್ರತಿನಿತ್ಯ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇದನ್ನು ಅರಿತ ಸುನೀಲ್ ಜಂಗಾನಿ ಭೀಕ್ಷುಕನಿಗೂ ಉದ್ಯೋಗ ಕಲ್ಪಿಸಿ, ಬದುಕು ಕಟ್ಟಿಕೊಳ್ಳಲು ಆಸೆರೆಯಾಗುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.

    ಕಟಿಂಗ್ ಮಾಡಿಸಿ, ಎರಡು ಜೊತೆ ಹೊಸ ಬಟ್ಟೆ ಕೊಟ್ಟು, ಅವರಿಗೆ ಹೊಸ ರೂಪ ನೀಡಿದ್ದಾರೆ. ಅವರಿಗೆ ತೂಕದ ಯಂತ್ರ ಕೊಡಿಸಿ ಭಿಕ್ಷೆ ಬೇಡುವ ಬದಲು ಅದರಿಂದ ಬರುವ ಹಣದಿಂದ ಜೀವನ ನಿರ್ವಹಣೆ ಮಾಡಲು ತಿಳಿಸಿದ್ದಾರೆ.

    ಲಾಕ್ ಡೌನ್ ಸಮಯದಲ್ಲಿ ದಾನಿಗಳು, ಸ್ವಹೃದಯರು ಪ್ರತಿದಿನ ನಿರ್ಗತಿಕರಿಗೆ, ಬಡವರಿಗೆ, ಭಿಕ್ಷುಕರಿಗೆ ಮತ್ತು ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದರು. ಆದರೆ ಇಂತ ಬಡವರು ಹಾಗೂ ಭಿಕ್ಷುಕರಿಗೆ ನೆರವಾಗುವ ಕೆಲಸ ಮಾಡಲಿಲ್ಲ. ಆದರೆ ಇದುವರೆಗೂ ಯಾವುದೇ ಪ್ರಚಾರವಿಲ್ಲದೇ ಸುನೀಲ್ ಜಂಗಾನಿ ಎಲೆ ಮರೆಯ ಕಾಯಿಯಂತೆ ಜನ ಸಾಮಾನ್ಯರ ಸೇವೆ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಹೈವೇ ದರೋಡೆಕೋರರ ಹಾವಳಿಗೆ ಬೆಚ್ಚಿಬಿದ್ದ ಜನರು

  • ಮಕ್ಕಳಾಗದ ಕೊರಗು – 58ರ ಮಹಿಳೆ ಆತ್ಮಹತ್ಯೆ

    ಮಕ್ಕಳಾಗದ ಕೊರಗು – 58ರ ಮಹಿಳೆ ಆತ್ಮಹತ್ಯೆ

    ಚಿಕ್ಕಮಗಳೂರು: ಮಕ್ಕಳಾಗಿಲ್ಲ ಎಂದು ಮನನೊಂದು 58 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನ 58 ವರ್ಷದ ಮಲ್ಲಿಗಮ್ಮ ಎಂದು ಗುರುತಿಸಲಾಗಿದೆ. ಮೃತ ಮಲ್ಲಿಗಮ್ಮ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹುಂಡಿಗನಾಳು ಗ್ರಾಮದ ಮಹಾದೇವಪ್ಪ ಎಂಬವರೊಂದಿಗೆ ಸುಮಾರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಮಕ್ಕಳಾಗಿರಲಿಲ್ಲ. ಮಕ್ಕಳಾಗದ ಹಿನ್ನೆಲೆಯಲ್ಲಿ ದಂಪತಿ ನಡುವೆ ಆಗಾಗ ವೈವಾಹಿಕ ಜೀವನದಲ್ಲಿ ಬಿರುಕು ಕಂಡಿತ್ತು. ಜಗಳ ಕೂಡ ನಡೆಯುತ್ತಿತ್ತು. ಒಂದೆಡೆ ಮಕ್ಕಳಾಗಿಲ್ಲ. ಮತ್ತೊಂದೆಡೆ ಗಂಡನ ಜೊತೆ ಜಗಳದಿಂದ ಮನನೊಂದು ಮಲ್ಲಿಗಮ್ಮ ಕಳೆದ ನಾಲ್ಕು ವರ್ಷಗಳಿಂದ ಬಿಳುವಾಲ ಗ್ರಾಮದ ತಂಗಿ ಮನೆಗೆ ಬಂದು ವಾಸವಿದ್ದರು.

    ಗುರುವಾರ ಗ್ರಾಮದ ಸಮೀಪವಿರುವ ಗುಡ್ಡೆಕಲ್ಲು ಹತ್ತಿರ ಬಟ್ಟೆ ತೊಳೆಯಲು ಹೋಗಿದ್ದ ಮಲ್ಲಿಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಮಲ್ಲಿಗಮ್ಮನ ತಂಗಿ ಮಗ ಶಿವರಾಜ್‍ಕುಮಾರ್ ಕಡೂರು ಠಾಣೆಗೆ ದೂರು ನೀಡಿದ್ದಾರೆ. ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನೀನು ವ್ಯಭಿಚಾರಿ, ನಿನ್ನ ಧ್ವನಿ ನಾಯಿಯಂತಿದೆ – ಮಹಿಳೆಗೆ ನೆರೆಮನೆಯರಿಂದ ಕಿರುಕುಳ

    ನೀನು ವ್ಯಭಿಚಾರಿ, ನಿನ್ನ ಧ್ವನಿ ನಾಯಿಯಂತಿದೆ – ಮಹಿಳೆಗೆ ನೆರೆಮನೆಯರಿಂದ ಕಿರುಕುಳ

    ಮುಂಬೈ: ಮಹಿಳೆಯೊಬ್ಬಳು ತನ್ನ ಕೂದಲನ್ನು ಕತ್ತರಿಸಿದ್ದಕ್ಕೆ ನೆರೆಮನೆಯವರಿಂದ ಕಿರುಕುಳಕ್ಕೆ ಒಳಗಾಗಿದ್ದಾಳೆ.

    ಸಂತ್ರಸ್ತೆಯು ಖಾಸಗಿ ಸಂಸ್ಥೆಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಡಿಸೆಂಬರ್‍ನಲ್ಲಿ ಮನೆ ಬದಲಾಯಿಸಿ ಅಪಾರ್ಟ್‍ಮೆಂಟ್ ನಲ್ಲಿ ವಾಸಿಸಲು ಆರಂಭಿಸಿದ್ದಾಳೆ. ಈ ವೇಳೆ 53 ವರ್ಷದ ಮಹಿಳೆಯೊಬ್ಬಳು ಸಂತ್ರಸ್ತೆ ನೋಡಲು ಮಂಗಳಮುಖಿಯಂತಿದ್ದಾಳೆ. ಆಕೆಯ ಧ್ವನಿ ನಾಯಿಯ ಧ್ವನಿಯಂತೆ ಇದೆ ಎಂದು ಹೇಳಿದ್ದಾಳೆ. ಇದರಿಂದ ಬೇಸರಗೊಂಡ ಸಂತ್ರಸ್ತೆ ಇದೀಗ ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಈ ವಿಚಾರವಾಗಿ ಸಂತ್ರಸ್ತೆಯ ವಕೀಲರಾದ ಸಿದ್ದೇಶ್ ಬೋರ್ಕರ್, ಮಹಿಳೆ ಸಂತ್ರಸ್ತೆ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದು, ಆಕೆಯನ್ನು ಮಂಗಳಮುಖಿ ಎಂದು ಅವಮಾನ ಮಾಡಿದ್ದಾಳೆ. ಸಂತ್ರಸ್ತೆಯು ಒಬ್ಬಂಟಿಯಾಗಿ ವಾಸಿಸುತ್ತಿರುವುದನ್ನೇ ಗುರಿಯಾಗಿಸಿಕೊಂಡು ಆರೋಪಿ ಆಕೆಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

    ಮನೆ ಬದಲಿಸಿ ಸಂತ್ರಸ್ತೆ ಮೊದಲು ಅಪಾರ್ಟ್‍ಮೆಂಟ್ ಗೆ ಬಂದಾಗ ಮಹಿಳೆ ಆಕೆಗೆ ತಿಂಡಿ ನೀಡುತ್ತಿದ್ದಳು. ಆದರೆ ಸಂತ್ರಸ್ತೆ ತಿಂಡಿ ಇಷ್ಟವಾಗುತ್ತಿಲ್ಲ ಎಂದು ತಿಳಿಸಿದಾಗ ಮಹಿಳೆ ಸಂತ್ರಸ್ತೆಗೆ ತಿಂಡಿ ನೀಡುವುದನ್ನು ನಿಲ್ಲಿಸಿ ಅಷ್ಟು ದಿನ ನೀಡಿದ ತಿಂಡಿಗೆ ಹಣ ಪಾವತಿಸುವಂತೆ ತಿಳಿಸಿದ್ದಳು. ಅಲ್ಲದೆ ಡಿಸೆಂಬರ್ 12 ರಂದು ಮಹಿಳೆ ಮನೆಯಲ್ಲಿ ಆಕೆಯ ಮಗ ಪಾರ್ಟಿಯನ್ನು ಆಯೋಜಿಸಿ ಜೋರು ವಾಲ್ಯೂಮ್ ನೀಡಿ ಮುಂಜಾನೆ 3ವರೆಗೂ ಮ್ಯೂಸಿಕ್ ಹಾಕಿದ್ದಾನೆ. ಮುಂಜಾನೆಯಾದರೂ ಮ್ಯೂಸಿಕ್ ನಿಲ್ಲದ ಕಾರಣ ಸಂತ್ರಸ್ತೆ ಮಹಿಳೆ ಮನೆಯ ಬಾಗಿಲು ತಟ್ಟಿ ವಾಲ್ಯೂಮ್ ಕಡಿಮೆ ಮಾಡಲು ವಿನಂತಿಸಿದ್ದಾಳೆ. ಆದರೆ ಸಂತ್ರಸ್ತೆ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ತದನಂತರ ಸಂತ್ರಸ್ತೆ ಆರೋಪಿ ಕುಟುಂಬದೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ.

    ಈ ಕಾರಣಕ್ಕೆ ಆರೋಪಿ ನನ್ನನ್ನು ಹುಚ್ಚಿ, ಪುರುಷ ಅಥವಾ ಮಹಿಳೆಯೋ ಎಂದು ಪ್ರಶ್ನಿಸಿದ್ದಾಳೆ. ಜೊತೆಗೆ ನನ್ನ ಧ್ವನಿ ನಾಯಿ ಧ್ವನಿಯನ್ನು ಹೋಲುತ್ತದೆ ಎಂದು ಹೇಳಿದ್ದಾಳೆ. ಜೊತೆಗೆ ನನ್ನನ್ನು ವೇಶ್ಯೆ ಎಂಬ ಅವಾಚ್ಯ ಪದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾಳೆ ಎಂದು ಸಂತ್ರಸ್ತೆ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾಳೆ.

  • ಬೆಂಗಳೂರಿನಲ್ಲೊಬ್ಬ ಸೈಕೋ – ಲೇಡೀಸ್ ಪಿಜಿಗಳಲ್ಲಿ ನುಗ್ಗಿ ಬಟ್ಟೆ ಕದ್ದು ಎಸ್ಕೇಪ್

    ಬೆಂಗಳೂರಿನಲ್ಲೊಬ್ಬ ಸೈಕೋ – ಲೇಡೀಸ್ ಪಿಜಿಗಳಲ್ಲಿ ನುಗ್ಗಿ ಬಟ್ಟೆ ಕದ್ದು ಎಸ್ಕೇಪ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಬ್ಬ ಸೈಕೋಪಾತ್ ಕಾಣಿಸಿಕೊಂಡಿದ್ದು, ಲೇಡೀಸ್ ಪಿಜಿಗಳಿಗೆ ನುಗ್ಗಿ ಬಟ್ಟೆ ಕದ್ದು ಪರಾರಿಯಾಗುತ್ತಿದ್ದಾನೆ.

    ನಗರದ ಸುದ್ದಗುಂಟೆಪಾಳ್ಯದಲ್ಲಿ ಸೈಕೋಪಾತ್ ಸದ್ದು ಮಾಡುತ್ತಿದ್ದು, ಲೇಡೀಸ್ ಪಿಜಿಗಳೇ ಇವನ ಟಾರ್ಗೆಟ್ ಆಗಿದೆ. ತಡರಾತ್ರಿ ಪಿಜಿಗೆ ನುಗ್ಗುತ್ತಾನೆ. ನಂತರ ಬಟ್ಟೆಗಳನ್ನು ಕದಿಯುತ್ತಿದ್ದಾನೆ. ಇದರಿಂದ ಪಿಜಿಗಳಲ್ಲಿ ವಾಸವಾಗಿರುವ ಯುವತಿಯರು, ಸ್ಥಳೀಯ ವಾಸಿಗಳಿಗೆ ಅಪರಿಚಿತ ಸೈಕೋಪಾತ್ ಆತಂಕ ಮೂಡಿಸಿದ್ದಾನೆ.

    ಒಂದು ದಿನ ತಡರಾತ್ರಿ ಬಂದರೆ ಮತ್ತೊಮ್ಮೆ ಮುಂಜಾನೆ ಲೇಡೀಸ್ ಪಿಜಿಗಳಿಗೆ ಎಂಟ್ರಿಯಾಗುತ್ತಾನೆ. ಸೆರೆಹಿಡಿಯಲು ಸಾಕಷ್ಟು ಭಾರೀ ಪ್ರಯತ್ನಪಟ್ಟರೂ ಕೈಗೆ ಸಿಗದೇ, ಜಂಪ್ ಮಾಡಿ ಎಸ್ಕೇಪ್ ಆಗುತ್ತಿದ್ದಾನೆ. ಈ ಸೈಕೋಪಾತ್ ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಹಿಳೆಯರ ಬಟ್ಟೆ ಕದಿಯುತ್ತಿದ್ದ ಯುವಕನಿಗೆ ಬಿದ್ವು ಗೂಸಾ

    ಮಹಿಳೆಯರ ಬಟ್ಟೆ ಕದಿಯುತ್ತಿದ್ದ ಯುವಕನಿಗೆ ಬಿದ್ವು ಗೂಸಾ

    ಹುಬ್ಬಳ್ಳಿ: ಮಹಿಳೆಯರ ಬಟ್ಟೆ ಕದಿಯುತ್ತಿದ್ದ ವಿಕೃತ ಮನಸ್ಸಿನ ಯುವಕನೊಬ್ಬನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ಯುವಕನು ಕಳೆದ ಹಲವು ದಿನಗಳಿಂದ ಹುಬ್ಬಳ್ಳಿಯ ಈಶ್ವರ ನಗರ, ನೇಕಾರನಗರದ ವಿವಿಧ ಬಡಾವಣೆಗಳಲ್ಲಿ ಮಹಿಳೆಯರ ಬಟ್ಟೆ ಕಳ್ಳತನ ಮಾಡುತ್ತಿದ್ದ. ಇದರಿಂದಾಗಿ ಕಳ್ಳನನ್ನು ಹಿಡಿಯಲು ಸಾರ್ವಜನಿಕರು ಕಾಯುತ್ತಿದ್ದರು.

    ಯುವಕ ಇಂದು ಕೂಡ ಬಟ್ಟೆ ಕದಿಯಲು ನೇಕಾರನಗರದ ಬಡಾವಣೆಗೆ ಬಂದಿದ್ದ. ಬಟ್ಟೆ ಕದ್ದು ಇನ್ನೇನು ಪರಾರಿಯಾಗುತ್ತಿದ್ದಂತೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನನ್ನು ಕಂಬಕ್ಕೆ ಕಟ್ಟಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ಒಪ್ಪಿಸಿದ್ದಾರೆ.

  • ಮನುಷ್ಯರಂತೆಯೇ ಬಟ್ಟೆ ತೊಳೆಯುತ್ತೆ ಚಿಂಪಾಜಿ

    ಮನುಷ್ಯರಂತೆಯೇ ಬಟ್ಟೆ ತೊಳೆಯುತ್ತೆ ಚಿಂಪಾಜಿ

    – ಹೇಳಿಕೊಡದಿದ್ದರೂ, ನೋಡಿಯೇ ಕಲಿತ ಬುದ್ಧಿವಂತ

    ನವದೆಹಲಿ: ಬುದ್ಧಿವಂತ ಪ್ರಾಣಿ, ಮನುಷ್ಯರು ಮಾಡಿದ್ದನ್ನು ಅನುಸರಿಸುವ ಪ್ರಾಣಿ ಎಂದು ಕರೆಸಿಕೊಳ್ಳುವ ಚಿಂಪಾಂಜಿ ಪಝಲ್ ಸೇರಿದಂತೆ ವಿವಿಧ ರೀತಿಯ ಚಟುವಟಿಕೆ ಮಾಡುವುದನ್ನು ನೋಡಿದ್ದೀರಿ. ಇದೀಗ ಮಾನವರಂತೆ ಬಟ್ಟೆಯನ್ನೂ ತೊಳೆದಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.

    ಚೀನಾದ ಚಾಂಗ್ಕಿಂಗ್‍ನ ಲೆಹೆ ಲೆಡು ಥೀಮ್ ಪಾರ್ಕ್ ನಲ್ಲಿರುವ ಯೂಹುಯಿ ಎಂಬ 18 ವರ್ಷದ ಚಿಂಪಾಂಜಿ ಮನುಷ್ಯರಂತೆ ಬಟ್ಟೆ ತೊಳೆದ ವಿಡಿಯೋ ವೈರಲ್ ಆಗಿದೆ. ಆಗಸ್ಟ್‍ನಲ್ಲಿ ಈ ವಿಡಿಯೋವನ್ನು ಅಪ್‍ಲೋಡ್ ಮಾಡಲಾಗಿದೆ. ಇದಕ್ಕೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹೇಳಿಕೊಟ್ಟಿದ್ದನ್ನು ಬೇಗ ಕಲಿಯುವ ಪ್ರಾಣಿ ಚಿಂಪಾಜಿ. ಕೆಲವು ಸಲ ಮನುಷ್ಯರು ಮಾಡುವ ಕೆಲಸವನ್ನು ನೋಡಿಯೂ ಕಲಿಯುತ್ತದೆ. ಹೇಳಿಕೊಡದಿದ್ದರೂ ಈ ಯೂಹುಯಿ ಮನುಷ್ಯರು ಬಟ್ಟೆ ತೊಳೆಯುವುದನ್ನು ಕಂಡು ತಾನೂ ಸಹ ಅದೇ ರೀತಿ ಬಟ್ಟೆ ತೊಳೆಯುತ್ತದೆ. ಇದನ್ನು ಅಲ್ಲಿನ ಸ್ಥಳೀಯರು ವಿಡಿಯೋ ಮಾಡಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.

    ಚಿಂಪಾಂಜಿಗಳ ಜಾಣ್ಮೆ ಪ್ರದರ್ಶಿಸುವ ವಿಡಿಯೋಗಳು ಹಾಗೂ ಪಝಲ್ ಆಡುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿವೆ. ಇದೀಗ ಮನುಷ್ಯರಂತೆ ಬಟ್ಟೆ ತೊಳೆಯುವ ಮೂಲಕ ಯೂಹುಯಿ ಚಿಂಪಾಂಜಿ ನೆಟ್ಟಿಗರನ್ನು ಸೆಳೆದಿದೆ. ಮನುಷ್ಯರು ಯಾವ ರೀತಿ ಬಟ್ಟೆಯನ್ನು ತೊಳೆಯುತ್ತಾರೆಯೋ ಅದೇ ರೀತಿ ವ್ಯವಸ್ಥಿತವಾಗಿ ಈ ಚಿಂಪಾಂಜಿ ತೊಳೆಯುತ್ತದೆ. ಚಿಂಪಾಜಿ ಬಟ್ಟೆ ತೊಳೆಯುವ ವಿಡಿಯೋ ಕಂಡ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಅಲ್ಲದೆ ಚಿಂಪಾಂಜಿಯ ಕಾರ್ಯವೈಖರಿ ಕಂಡು ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಿಂಪಾಂಜಿ 30 ನಿಮಿಷಗಳ ಕಾಲ ಬಟ್ಟೆ ತೊಳೆಯುವ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಕೀಪರ್ ಚಿಂಪಾಂಜಿ ಮುಂದೆ ಟಿ-ಶರ್ಟ್, ಸೋಪ್ ಹಾಗೂ ಬ್ರಷ್ ತಂದಿಡುತ್ತಾರೆ. ಯೂಹುಯಿ ಅಗಸನ ರೀತಿಯಲ್ಲಿ ಸೋಪ್ ಹಾಗೂ ಬ್ರಷ್ ತೆಗೆದುಕೊಂಡು ಬಟ್ಟೆ ತೊಳೆಯುತ್ತದೆ.

    ಬಟ್ಟೆ ತೊಳೆಯುವುದನ್ನು ಯೂಹುಯಿಗೆ ನಾನೆಂದೂ ಹೇಳಿಕೊಟ್ಟಿರಲಿಲ್ಲ. ಆದರೆ ನಾನು ಬಟ್ಟೆ ತೊಳೆಯುವುದನ್ನು ನೋಡಿದ್ದ. ಸ್ವತಃ ಅವನೇ ಬಟ್ಟೆ ತೊಳೆದಿದ್ದನ್ನು ಕಂಡು ಆಶ್ಚರ್ಯಚಿಕಿತನಾಗಿದ್ದೇನೆ. ಯೂಹುಯಿ ಕೇವಲ ಬಟ್ಟೆ ತೊಳೆಯುವುದು ಮಾತ್ರವಲ್ಲ, ಒಂಟಿ ಕಾಲಲ್ಲಿ ನಿಲ್ಲುವುದು, ಬೆರಳುಗಳ ಮೂಲಕ ಹೃದಯದ ಸಂಕೇತ ಮಾಡುವುದು ಸೇರಿದಂತೆ ವಿವಿಧ ರೀತಿಯ ಆಕ್ಷನ್ ಮಾಡುತ್ತಾನೆ ಎಂದು ಕೀಪರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    https://www.youtube.com/watch?time_continue=1&v=myy6bfs4tf4&feature=emb_title

  • ಲಗೇಜ್ ಶುಲ್ಕ ತಪ್ಪಿಸಲು 2.5 ಕೆಜಿ ಬಟ್ಟೆ ಧರಿಸಿದ ಯುವತಿ

    ಲಗೇಜ್ ಶುಲ್ಕ ತಪ್ಪಿಸಲು 2.5 ಕೆಜಿ ಬಟ್ಟೆ ಧರಿಸಿದ ಯುವತಿ

    ನವದೆಹಲಿ: ಲಗೇಜ್ ಶುಲ್ಕ ತಪ್ಪಿಸಲು ಯುವತಿಯೊಬ್ಬಳು 2.5 ಕೆಜಿ ಬಟ್ಟೆ ಧರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ವಿಮಾನದಲ್ಲಿ ಪ್ರಯಾಣಿಸುವಾಗ 7 ಕೆಜಿ ಭಾರವಿರುವ ಲಗೇಜ್ ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋಗಬೇಕಾದರೆ ಪ್ರಯಾಣಿಕರು ಅದಕ್ಕೆ ಶುಲ್ಕ ಪಾವತಿಸಬೇಕು. ಈ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು ಯುವತಿ ಉಪಯೋಗಿಸಿದ ಪ್ಲ್ಯಾನ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

    ಫಿಲಿಪೈನ್ಸ್‌ನ ಯುವತಿ ಜೆಲ್ ರೊಡ್ರಿಗಸ್, ಅಕ್ಟೋಬರ್ 2ರಂದು ಒನ್ ಏರ್ ಲೈನ್ಸ್‌ನಲ್ಲಿ ನಡೆದ ಪ್ರಸಂಗವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೆಲ್ ರೊಡ್ರಿಗಸ್ 9 ಕೆಜಿ ತೂಕದ ಲಗೇಜ್ ಹಿಡಿದು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ವಿಮಾನಯಾನ ಸಿಬ್ಬಂದಿ, ಲಗೇಜ್ 7 ಕೆಜಿ ಗಿಂತ ಹೆಚ್ಚು ಭಾರವಾಗಿದೆ. ಹೀಗಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕು ಎಂದು ತಿಳಿಸಿದ್ದರು.

    ಹೆಚ್ಚುವರಿ ಶುಲ್ಕ ನೀಡಬಾರದು ಎಂಬ ಕಾರಣಕ್ಕಾಗಿ ಜೆಲ್ ರೊಡ್ರಿಗಸ್, ತಮ್ಮ ಮೈಮೇಲೆ ಬರೋಬ್ಬರಿ 2.5 ಕೆಜಿ ಬಟ್ಟೆ ಹಾಕಿಕೊಂಡಿದ್ದಾರೆ. ಬಳಿಕ ತಾನು ಹಾಕಿಕೊಂಡಿರುವ ಬಟ್ಟೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣ ಫೇಸ್‍ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಕೇವಲ 2 ಕೆಜಿ ಬಟ್ಟೆಗೆ ನಾನು ಹೆಚ್ಚುವರಿಯಾಗಿ ಶುಲ್ಕ ನೀಡಲು ಇಷ್ಟಪಡುವುದಿಲ್ಲ. ಹೀಗಾಗಿ ಈ ರೀತಿಯಾಗಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಜೆಲ್ ರೊಡ್ರಿಗಸ್ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋವನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಶೇರ್ ಮಾಡಿದ್ದಾರೆ. ಕೆಲ ನೆಟ್ಟಿನಗರು ತಮ್ಮ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

  • ವಾಷಿಂಗ್ ಮೆಷಿನ್ ಒಳಗಡೆಯಿಂದ ಬುಸ್ ಎಂದ ನಾಗರಾಜ

    ವಾಷಿಂಗ್ ಮೆಷಿನ್ ಒಳಗಡೆಯಿಂದ ಬುಸ್ ಎಂದ ನಾಗರಾಜ

    ಮೈಸೂರು: ಇತ್ತೀಚೆಗೆ ಹಾವುಗಳು ನೆಲೆ ಇಲ್ಲದೆ ಬೈಕ್, ಶೂಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಮೈಸೂರಿನಲ್ಲಿಯೂ ಇದೇ ರೀತಿಯ ಘಟನೆ ನಡೆದಿದ್ದು, ಬಟ್ಟೆ ತೊಳೆಯುವ ವಾಷಿಂಗ್ ಮೆಷಿನ್ ಒಳಗೆಯೇ ನಾಗರಹಾವು ಕಾಣಿಸಿಕೊಂಡಿದೆ.

    ಮೈಸೂರಿನ ಶ್ರೀ ಶಿವರಾತ್ರೀಶ್ವರ ನಗರದ ನಿವಾಸಿ ಸ್ಟಾಲಿನ್ ಕೆ.ಪೌಲ್ ಅವರ ಮನೆಯ ವಾಷಿಂಗ್ ಮೆಷಿನ್ ಒಳಗೆ ಹಾವು ಸೇರಿಕೊಂಡಿದ್ದು, ಸ್ಟಾಲಿನ್ ಅವರ ಪತ್ನಿ, ಪತಿಯ ಬಟ್ಟೆ ಒಗೆಯಲು ಹಾಕಿ ಮಗುವಿನ ಬಟ್ಟೆ ಹಾಕಲು ಹೋದಾಗ ನಾಗರಹಾವು ವಾಷಿಂಗ್ ಮೆಷಿನ್‍ನಲ್ಲಿ ಕಾಣಿಸಿಕೊಂಡಿದೆ.

    ಮೆಷಿನ್ ಒಳಗೆ ಹಾವು ಕಂಡು ಗಾಬರಿಯಾದ ಮಹಿಳೆ ತಕ್ಷಣ ಗಂಡನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಪತಿ ಕೂಡಲೇ ಈ ವಿಷಯವನ್ನು ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಆಗಮಿಸಿದ ಸ್ನೇಕ್ ಶ್ಯಾಂ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

  • ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ, ಬಟ್ಟೆಯನ್ನು ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ, ಬಟ್ಟೆಯನ್ನು ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ ಹಾಗೂ ಬಟ್ಟೆಯನ್ನು ಕಿತ್ತುಕೊಂಡು ಕಳುಹಿಸುತ್ತಿದ್ದ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ.

    ಪೊಲೀಸರ ಅತಿಥಿಯಾಗಿರುವ ಈ ಗ್ಯಾಂಗ್ ಥ್ರೂತ್ ಪಾಯಿಂಟ್ ಎನ್ನುವ ವೆಬ್ ಸೈಟ್ ಮೂಲಕ ಸಲಿಂಗ ಕಾಮಿಗಳನ್ನು ಆಹ್ವಾನ ಮಾಡುತ್ತಿದ್ದರು. ಸಲಿಂಗ ಕಾಮದಲ್ಲಿ ಆಸಕ್ತಿ ಇರುವವರು ಅವರು ಕರೆದ ಅಡ್ರೆಸ್‍ಗೆ ಕೂಡ ಹೋಗುತ್ತಿದ್ದರು.

    ಸಲಿಂಗಕಾಮಕ್ಕೆ ಎಂದು ಆ ಅಡ್ರೆಸ್‍ಗೆ ಹೋದಾಗ ರಾಬರಿ ಗ್ಯಾಂಗ್ ಅಲ್ಲಿಗೆ ಎಂಟ್ರಿ ಕೊಟ್ಟು ಅವರ ಚಿನ್ನಾಭರಣವನ್ನು ದೋಚುತ್ತಿದ್ದರು. ಅಲ್ಲದೇ ವಿಡಿಯೋ ಮಾಡಿದ್ದೀವಿ ಹಣ ಕೊಡು ಎಂದು ಪೀಡಿಸಿ ಅವರ ಚಿನ್ನಾಭರಣವನ್ನು ಕಿತ್ತುಕೊಂಡು ಕಳುಹಿಸುತ್ತಿದ್ದರು.

    ಇದೇ ರೀತಿ ಮಾಡುತ್ತಿದ್ದ ಪ್ರಭಾಕರ್ ಮತ್ತು ನಾಲ್ವರು ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಬ್ಬದಂದೇ ಅಂಗಡಿಯಲ್ಲಿ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ಬಟ್ಟೆಗಳು ಭಸ್ಮ

    ಹಬ್ಬದಂದೇ ಅಂಗಡಿಯಲ್ಲಿ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ಬಟ್ಟೆಗಳು ಭಸ್ಮ

    ಚಿಕ್ಕೋಡಿ: ಗಣೇಶ ಹಬ್ಬದಂದೇ ಬಟ್ಟೆ ಅಂಗಡಿಗೆ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಬೆಲೆ ಬಾಳುವ ಬಟ್ಟೆಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

    ಈ ಅವಘಡ ಬೆಳಗ್ಗೆ 8.30 ಕ್ಕೆ ಸಂಭವಿಸಿದ್ದು, ಪಿಂಟು ರಾಥೋಡ್ ಎಂಬವರಿಗೆ ಸೇರಿದ ಆರ್ ಆರ್ ಕಲೆಕ್ಷನ ಬಟ್ಟೆ ಅಂಗಡಿಗೆ ಬೆಂಕಿ ತಗುಲಿದೆ. ಇದರ ಪರಿಣಾಮ ಲಕ್ಷಾಂತರ ಮೌಲ್ಯದ ಬೆಲೆ ಬಾಳುವ ಬಟ್ಟೆಗಳು ಬೆಂಕಿಗೆ ಆಹುತಿಯಾಗಿದ್ದು, ಭಾರೀ ಅನಾಹುತ ತಪ್ಪಿದೆ. ಆದ್ರೆ ಅದೃಷ್ಟವಶಾತ್ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿ ಇದ್ದರೂ ಬೇರೆ ಎಲ್ಲೂ ವ್ಯಾಪಿಸದ ಬೆಂಕಿ ರಾಥೋಡ್ ಅವರ ಅಂಗಡಿಯಲ್ಲಿ ಕಾಣಿಸಿಕೊಂಡಿದೆ.

    ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv