Tag: clothes

  • ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಬಟ್ಟೆ ತೊಳೆಯುತ್ತಾರಾ? – ಬಟ್ಟೆ ಕೊಳೆಯಾದ್ರೆ ಏನ್‌ ಮಾಡ್ತಾರೆ?

    ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಬಟ್ಟೆ ತೊಳೆಯುತ್ತಾರಾ? – ಬಟ್ಟೆ ಕೊಳೆಯಾದ್ರೆ ಏನ್‌ ಮಾಡ್ತಾರೆ?

    ಭಾರತ ಮೂಲದ ಅಮೆರಿಕ ಗಗನಯಾನಿ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಹೊತ್ತಲ್ಲೇ, ಬಾಹ್ಯಾಕಾಶದ ಬಗ್ಗೆ ಹಲವಾರು ಪ್ರಶ್ನೆಗಳು ಕೇಳಿಬರುತ್ತಿವೆ. ಕಳೆದ 9 ತಿಂಗಳಿಂದ ಗಗನಯಾತ್ರಿ ಸುನಿತಾ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ಅಲ್ಲಿ ಅವರ ದಿನಚರಿ ಹೇಗಿರುತ್ತೆ? ಆರೋಗ್ಯ ಕಾಪಾಡಿಕೊಳ್ಳಲು ಏನೇನು ಕ್ರಮ ಅನುಸರಿಸುತ್ತಾರೆ? ಈಗ ಅವರು ಹೇಗಿದ್ದಾರೆ ಎಂಬುದು ಎಲ್ಲರ ಸದ್ಯದ ಕುತೂಹಲದ ಪ್ರಶ್ನೆಗಳು. ಕೆಲವು ದಿನಗಳ ಮಟ್ಟಿಗೆ ಸಂಶೋಧನೆಗೆಂದು ತೆರಳುವ ಗಗನಯಾತ್ರಿಗಳು, ಈ ರೀತಿ ದೀರ್ಘ ಸಮಯದ ವರೆಗೆ ಬಾಹ್ಯಾಕಾಶದಲ್ಲಿ ತಗಲಾಕಿಕೊಂಡರೆ ಹೇಗಿರುತ್ತೆ ಪರಿಸ್ಥಿತಿ?

    ಗಗನಯಾತ್ರಿಗಳು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಇರಬೇಕಾದ ಪರಿಸ್ಥಿತಿ ಬಂದರೆ, ಅಲ್ಲಿ ಅವರು ತಿನ್ನುತ್ತಾರೆ, ಮಲಗುತ್ತಾರೆ, ಕೆಲಸ ಮಾಡುತ್ತಾರೆ, ವ್ಯಾಯಾಮ ಮಾಡುತ್ತಾರೆ ಮತ್ತು ಆಟಗಳನ್ನೂ ಆಡುತ್ತಾರೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಭೂಮಿಯಿಂದ ಹೊರಡುವಾಗಲೇ ಮಾಡಿಕೊಂಡಿರುತ್ತಾರೆ. ಆದರೆ ಕುತೂಹಲಕಾರಿ ಪ್ರಶ್ನೆಯೊಂದು ಹುಟ್ಟುಕೊಂಡಿದೆ. ಅವರು ಬಾಹ್ಯಾಕಾಶದಲ್ಲಿ ತಮ್ಮ ಬಟ್ಟೆಗಳನ್ನು ತೊಳೆಯುತ್ತಾರೆಯೇ? ಈ ಪ್ರಶ್ನೆಗೆ ಉತ್ತರ ಸರಳವಾಗಿದ್ದರೂ, ಅದರ ಹಿಂದಿನ ಕೌತುಕಗಳು ಎಲ್ಲರನ್ನೂ ಬೆರಗುಗೊಳಿಸುವಂತಿವೆ.

    ಮೊದಲೆಲ್ಲ ಬಾಹ್ಯಾಕಾಶ ಕಾರ್ಯಾಚರಣೆಗಳು ಕೆಲವೇ ದಿನಗಳ ಕಾಲ ನಡೆಯುತ್ತಿದ್ದವು. ಆದ್ದರಿಂದ ಗಗನಯಾತ್ರಿಗಳು ಬಟ್ಟೆಗಳನ್ನು ತೊಳೆಯುವ ಬಗ್ಗೆ ಚಿಂತಿಸದೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಕಾರ್ಯಾಚರಣೆಗಳು ಮೂರರಿಂದ ಎಂಟು ತಿಂಗಳ ವರೆಗೆ ವಿಸ್ತರಿಸಿರುವುದರಿಂದ ಲಾಂಡ್ರಿ ಸೌಲಭ್ಯಗಳಿಲ್ಲದೆ ಅವರು ಹೇಗೆ ನಿಭಾಯಿಸುತ್ತಾರೆ?

    ಬಾಹ್ಯಾಕಾಶದಲ್ಲಿ ಬಟ್ಟೆಗಳನ್ನು ತೊಳೆಯಬಹುದೇ?
    ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಬಟ್ಟೆಗಳನ್ನು ತೊಳೆಯಲು ಸಾಧ್ಯವಿಲ್ಲ. ತಮ್ಮ ಸಂಪೂರ್ಣ ಕಾರ್ಯಾಚರಣೆಗೆ ಸಾಕಷ್ಟು ಬಟ್ಟೆಗಳನ್ನು ಭೂಮಿಯಿಂದಲೇ ಕೊಂಡೊಯ್ಯುವುದು ಸರಳವಾದ ಪರಿಹಾರ ಮಾರ್ಗ. ಬಾಹ್ಯಾಕಾಶದ ಜಾಗದಲ್ಲಿ ನೀರು ಸಿಗಲ್ಲ. ಗಗನಯಾತ್ರಿಗಳು ಕುಡಿಯಲು ಬಳಸುವ ಪ್ರತಿಯೊಂದು ಹನಿ ನೀರನ್ನೂ ಮರುಬಳಕೆ ಮಾಡಬೇಕು. ಪರಿಸ್ಥಿತಿ ಹೀಗಿರುವಾಗ ಅಲ್ಲಿ ಬಟ್ಟೆ ತೊಳೆಯುವುದು ಹೇಗೆ ಸಾಧ್ಯ?

    ಒಂದು ಬಟ್ಟೆಯನ್ನು ಎಷ್ಟು ಸಮಯ ಧರಿಸಬಹುದು?
    ಬಾಹ್ಯಾಕಾಶದಲ್ಲಿ ಒಂದು ಬಟ್ಟೆಯನ್ನು ಹಲವು ದಿನಗಳು ಅಥವಾ ಒಂದು ವಾರದ ವರೆಗೆ ಧರಿಸಬಹುದು. ಭೂಮಿಯಂತೆ ಬಾಹ್ಯಾಕಾಶದಲ್ಲಿ ಧೂಳು ಇರುವುದಿಲ್ಲ. ಆದ್ದರಿಂದ ಬಟ್ಟೆಗಳು ಬಹುಬೇಗ ಕೊಳೆ ಆಗುವುದಿಲ್ಲ. ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಐಎಸ್‌ಎಸ್) ನಿಯಂತ್ರಿತ ತಾಪಮಾನವನ್ನು ಸಹ ನಿರ್ವಹಿಸುತ್ತದೆ. ಆದ್ದರಿಂದ ಆಗಾಗ್ಗೆ ಬಟ್ಟೆ ಬದಲಾಯಿಸುವ ಅಗತ್ಯವನ್ನು ಕಡಿಮೆ ಮಾಡುತ್ತದೆ.

    ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಬೆವರುತ್ತಾರಾ?
    ಬಾಹ್ಯಾಕಾಶದಲ್ಲಿ ಗುರುತ್ವಾರ್ಷಣೆ ಬಲ ಇರಲ್ಲ ಎಂಬುದು ನಿಮಗೆಲ್ಲ ತಿಳಿದೇ ಇದೆ. ಗಗನಯಾತ್ರಿಗಳು ಮೈಕ್ರೊಗ್ರಾವಿಟಿಯಲ್ಲಿ ನಿತ್ಯದ ಚಟುವಟಿಕೆಯಲ್ಲಿ ಹೆಚ್ಚು ಶ್ರಮವಹಿಸುವ ಅಗತ್ಯವಿರುವುದಿಲ್ಲ. ಹೀಗಾಗಿ, ಅವರು ಬೆವರುವ ಸಾಧ್ಯತೆ ತುಂಬಾ ಕಡಿಮೆ. ಆದರೆ, ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚಿನ ವ್ಯಾಯಾಮ ಮಾಡಬೇಕಾಗುತ್ತದೆ. ಈ ತೀವ್ರವಾದ ದೈಹಿಕ ಚಟುವಟಿಕೆಯು ಅವರನ್ನು ಹೆಚ್ಚು ಬೆವರುವಂತೆ ಮಾಡುತ್ತದೆ. ಪರಿಣಾಮ ಅವರ ಬಟ್ಟೆಗಳು ಕೊಳೆಯಾಗುತ್ತವೆ.

    ಬಳಸಿದ ಬಟ್ಟೆಗಳ ಕಥೆಯೇನು?
    ಗಗನಯಾತ್ರಿಗಳು ಬಳಸುವ ಬಟ್ಟೆಗಳನ್ನು ಕೊಳಕಾಯಿತು ಎಂದರೆ, ಅಲ್ಲಿಗೆ ಅವುಗಳ ಕಥೆ ಮುಗಿಯಿತು ಎಂದೇ ಅರ್ಥ. ಅವುಗಳನ್ನು ಮರುಬಳಕೆ ಮಾಡುವಂತಿಲ್ಲ. ಬಟ್ಟೆಗಳನ್ನು ತೊಳೆಯಬೇಕು ಎಂದರೆ ಭೂಮಿಗೆ ವಾಪಸ್ ತರಬೇಕಾಗುತ್ತದೆ. ಗಗನಯಾತ್ರಿಗಳು ಕಾರ್ಯಾಚರಣೆ ಮುಗಿಸಿ ವಾಪಸ್ ಆಗುವಾಗ ಸರಕು ವಾಹನಗಳಲ್ಲಿ ಬಟ್ಟೆಗಳನ್ನೂ ಪ್ಯಾಕ್ ಮಾಡಿ ತರಲಾಗುತ್ತದೆ. ಬಾಹ್ಯಾಕಾಶದಲ್ಲಿ ತ್ಯಾಜ್ಯ ಉಂಟಾಗುವಂತೆ ಮಾಡಬಾರದು ಎಂಬುದು ಇದರ ಉದ್ದೇಶ. ಭೂಮಿಗೆ ಹಿಂತಿರುಗಿ ತಂದ ಮೇಲೆ ಅವುಗಳನ್ನು ಸುಡಲಾಗುತ್ತದೆ.

    ಬಾಹ್ಯಾಕಾಶದಲ್ಲೂ ಬಟ್ಟೆ ತೊಳೆಯಲು ನಡೆದಿದ್ಯಾ ಸಂಶೋಧನೆ?
    ಭವಿಷ್ಯದಲ್ಲಿ ಮಂಗಳ ಗ್ರಹದ ಮೇಲೆ ಹಲವಾರು ಕಾರ್ಯಾಚರಣೆಗಳನ್ನು ನಡೆಸಲು ವಿಜ್ಞಾನಿಗಳು ಯೋಜಿಸಿದ್ದಾರೆ. ಹೆಚ್ಚಿನ ಪ್ರಮಾಣದ ಬಟ್ಟೆಗಳನ್ನು ಒಯ್ಯುವುದು ಬಾಹ್ಯಾಕಾಶ ನೌಕೆಗೆ ಅನಗತ್ಯ ಭಾರವನ್ನು ಸೇರಿಸಿದಂತೆಯೇ ಅರ್ಥ. ಆದ್ದರಿಂದ, ಹೆಚ್ಚಿನ ಪ್ರಮಾಣದ ನೀರನ್ನು ಬಳಸದೇ ಬಾಹ್ಯಾಕಾಶದಲ್ಲಿ ಪರಿಣಾಮಕಾರಿಯಾಗಿ ಬಟ್ಟೆಗಳನ್ನು ತೊಳೆಯುವ ಮಾರ್ಗ ಕಂಡುಕೊಳ್ಳಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.

    2023ರಲ್ಲಿ ‘ಟೈಡ್ ಇನ್ಫಿನಿಟಿ’ ಎಂಬ ವಿಶೇಷ ಡಿಟರ್ಜೆಂಟ್ ಅನ್ನು ಅಭಿವೃದ್ಧಿಪಡಿಸಲಾಯಿತು. ಸಾಮಾನ್ಯ ಪ್ರಮಾಣಕ್ಕಿಂತ ಅರ್ಧ ನೀರಿನಿಂದ ಬಟ್ಟೆಗಳನ್ನು ತೊಳೆಯಲು ಇದನ್ನು ವಿನ್ಯಾಸಗೊಳಿಸಲಾಯಿತು. ಆದರೆ, ನಾಸಾ ಇದನ್ನು ಇನ್ನೂ ಜಾರಿಗೆ ತಂದಿಲ್ಲ. ಅಷ್ಟೇ ಅಲ್ಲ, ಸಂಶೋಧಕರು ‘ವಾಷರ್-ಡ್ರೈಯರ್’ ಸಂಯೋಜನೆಯ ಮೇಲೆ ರಿಸರ್ಚ್ ಮಾಡುತ್ತಿದ್ದಾರೆ. ಅದು ಚಂದ್ರ ಮತ್ತು ಮಂಗಳದ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನವು ಭೂಮಿಯ ಮೇಲಿನ ಶುಷ್ಕ ಪ್ರದೇಶಗಳಲ್ಲಿ ಸಹ ಪ್ರಯೋಜನಕಾರಿಯಾಗಿದೆ.

    ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಯಾವಾಗ?
    ಬಾಹ್ಯಾಕಾಶದಲ್ಲಿ ಸಿಲುಕಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಮಾರ್ಚ್ ತಿಂಗಳಲ್ಲಿ ಭೂಮಿಗೆ ಮರಳುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ. 2024ರ ಜೂ.5 ರಂದು ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಸುನಿತಾ ಮತ್ತು ವಿಲ್ಮೋರ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ (ಐಎಸ್‌ಎಸ್) ಪ್ರಯಾಣ ಬೆಳೆಸಿದ್ದರು. 8 ದಿನಗಳ ಕಾರ್ಯಾಚರಣೆ ಅದಾಗಿತ್ತು. ಎಂಟು ದಿನಗಳ ಬಳಿಕ ಅವರು ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ಗಗನನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದ ಅವರು ಹಿಂತಿರುಗಲು ಸಾಧ್ಯವಾಗಿಲ್ಲ.

    ಈ ಹಿಂದೆಯೇ ಏಪ್ರಿಲ್‌ನಲ್ಲಿ ಇಬ್ಬರನ್ನೂ ಕರೆತರುವುದಾಗಿ ನಾಸಾ ತಿಳಿಸಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಇಬ್ಬರೂ ಗಗನಯಾತ್ರಿಗಳನ್ನು ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ಕ್ಯಾಪ್ಲ್ಯುಯಲ್‌ನಲ್ಲಿ ವಾಪಸ್ ಭೂಮಿಗೆ ಕರೆತರಲು ನಾಸಾ ಸಿದ್ಧತೆ ನಡೆಸಿದೆ. ಕಳೆದ 8 ತಿಂಗಳಿಂದ ಇಬ್ಬರೂ ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ಈ ಹಿಂದೆ ಅಲ್ಲಿಂದಲೇ ಬಿಡುಗಡೆ ಮಾಡಿದ ವೀಡಿಯೋಗಳಲ್ಲಿ, ‘ನಾವು ಆರೋಗ್ಯವಾಗಿದ್ದೇವೆ’ ಸ್ಪಷ್ಟಪಡಿಸಿದ್ದಾರೆ.

  • ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ

    ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ

    – ದಿಕ್ಕು ತಪ್ಪಿಸಲು ಡಮ್ಮಿ ಫೋನ್ ಬಳಕೆ

    ಬೆಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾಮಾರಿಸಲು ಆರೋಪಿ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಆರೋಪಿ ಶರ್ಟ್ ಮತ್ತು ಮತ್ತು ಪ್ಯಾಂಟ್ ಬದಲಿಸಿ ಹೋಗಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ದಾರಿ ಮಧ್ಯೆ ಆರೋಪಿ ಬಟ್ಟೆ (Clothes) ಬದಲಿಸಿ ಹೋಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ದೊರೆತಿದ್ದು, ಶರ್ಟ್ ಮೇಲೆ ಶರ್ಟ್, ಪ್ಯಾಂಟ್ ಮೇಲೆ ಪ್ಯಾಂಟ್ ಹಾಕಿಕೊಂಡು ಮುಂದೆ ಹೋಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಸಾಕ್ಷ್ಯ ಸಿಕ್ಕಿದೆ. ಅಲ್ಲದೇ 3-4 ಬಸ್ ಬದಲಿಸಿ ಪ್ರಯಾಣ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಗಡಿ ಬಿಟ್ಟು ಹೊರರಾಜ್ಯಕ್ಕೆ ಎಸ್ಕೇಪ್ ಆಗಿರುವ ಬಗ್ಗೆ ಶಂಕಿಸಿದ್ದು, ಸಿಸಿಬಿ, ಪೊಲೀಸ್ ಇಲಾಖೆಯ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ತಲಾಶ್ ನಡೆಸಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಬಾಂಬರ್‌ ಒಂಟಿ ತೋಳ ಭಯೋತ್ಪಾದಕ!

    ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ 48 ಗಂಟೆಗಳು ಕಳೆದರೂ ಈವರೆಗೂ ಆರೋಪಿಯ ಬಗ್ಗೆ ಸುಳಿವು ಸಿಕ್ಕಿಲ್ಲ. ಸಿಸಿಟಿವಿ, ಮೊಬೈಲ್ ಟವರ್ ಡಂಪ್ ಅನಾಲಿಸಿಸ್ ಮಾಡಿದರೂ ಯಾವುದೇ ಸುಳಿವು ದೊರೆತಿಲ್ಲ. ಇದನ್ನೂ ಓದಿ: ಹೋಟೆಲ್ ಉದ್ಯಮದಲ್ಲಿ ನಾವೆಲ್ಲ ಅಣ್ಣ-ತಮ್ಮಂದಿರು, ಅನ್ನ ನೀಡುತ್ತೇವೆ ಹೊರತು ಕಿತ್ತುಕೊಳ್ಳುವುದಿಲ್ಲ: ರಾಮೇಶ್ವರಂ ಕೆಫೆ ಮಾಲೀಕ

    ಸಿಸಿಟಿವಿಯಲ್ಲಿ ಆತ ಯಾರೊಂದಿಗೂ ಫೋನಿನಲ್ಲಿ ಮಾತನಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಆದರೆ ತನಿಖೆಗೆ ಇಳಿದಾಗ ಆತ ಡಮ್ಮಿ ಫೋನ್ ಅನ್ನು ಬಳಸಿದ್ದು, ಈ ಫೋನ್ ಬಳಸಿದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಮ್ಮ ಕಾಲ್‌ ಮಾಡದಿದ್ದರೆ…- ಕೆಫೆ ಬ್ಲಾಸ್ಟ್‌ ಭಯಾನಕ ಸತ್ಯ ಬಿಚ್ಚಿಟ್ಟ ಟೆಕ್ಕಿ

    ಸಿಸಿಟಿವಿಯಲ್ಲಿ ಮೊಬೈಲ್ ತೋರಿಸಿರುವ ದೃಶ್ಯ ಕಂಡು ತನಿಖಾಧಿಕಾರಿಗಳು ಆರೋಪಿ ಸಿಕ್ಕಿಬಿದ್ದ ಎಂಬ ವಿಶ್ವಾಸದಲ್ಲಿದ್ದರು. ಆದರೆ ಬಾಂಬರ್ ಪಕ್ಕಾ ಪ್ಲಾನ್ ಮಾಡಿಕೊಂಡು ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಇದೀಗ ಘಟನಾ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ, ಬಸ್‌ನಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಿ ಆರೋಪಿಯ ವಾಕಿಂಗ್ ಸ್ಟೈಲ್ ಆಧರಿಸಿ ಸುಳಿವು ಪತ್ತೆಹಚ್ಚಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೇ ಸ್ಥಳೀಯ ಪೊಲೀಸ್ ಠಾಣೆಗಳಿಗೂ ಸಿಸಿಟಿವಿ ದೃಶ್ಯ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಹಿಂದಿದ್ಯಾ ಐಸಿಸ್ ಕೈವಾಡ?

  • ಜೈನಮುನಿ ಹತ್ಯೆ ಪ್ರಕರಣ – ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಬಟ್ಟೆಗಳನ್ನು ಸುಟ್ಟಿದ್ದ ಹಂತಕರು

    ಜೈನಮುನಿ ಹತ್ಯೆ ಪ್ರಕರಣ – ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಬಟ್ಟೆಗಳನ್ನು ಸುಟ್ಟಿದ್ದ ಹಂತಕರು

    ಚಿಕ್ಕೋಡಿ: ಜೈನಮುನಿ (Jain Muni) ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಸೋಮವಾರ) ಆರೋಪಿಗಳ 7 ದಿನಗಳ ಪೊಲೀಸ್ ಕಸ್ಟಡಿ (Police Custody) ಅಂತ್ಯವಾಗಲಿದೆ. ಇಂದು ಮತ್ತೆ ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ (Court) ಮುಂದೆ ಹಾಜರು ಪಡಿಸಲಿದ್ದಾರೆ.

    ಈ 7 ದಿನಗಳಲ್ಲಿ ಆರೋಪಿಗಳಿಂದ ಪಿನ್ ಟು ಪಿನ್ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಬಗೆದಷ್ಟು ರಹಸ್ಯ ಪತ್ತೆಯಾಗಿದ್ದು, ಚಿಕ್ಕೋಡಿ (Chikkodi) ಡಿವೈಎಸ್ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ತನಿಖೆ ನಡೆದಿದೆ. ಎ1 ಆರೋಪಿ ನಾರಾಯಣ ಮಾಳಿ ಹಾಗೂ ಎ2 ಆರೋಪಿ ಹಸನಸಾಬ್ ಡಾಲಾಯತ್‌ನನ್ನು ತೀವ್ರ ವಿಚಾರಣೆ ಮಾಡಲಾಗಿದೆ. ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಳ್ಳಬಾರದು ಎಂದು ಆರೋಪಿಗಳು ಹತ್ಯೆ ಮಾಡಿ ಬಂದು ತಮ್ಮ ಬಟ್ಟೆಗಳನ್ನೆಲ್ಲಾ ಸುಟ್ಟು ಹಾಕಿರುವ ರಹಸ್ಯವೊಂದು ತನಿಖೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಕ್ಯಾಸಿನೋಗಾಗಿ ಕಳ್ಳತನ – ಮೂವರು ಆರೋಪಿಗಳು ಅರೆಸ್ಟ್

    ಸಾಕ್ಷ್ಯ ನಾಶ ಮಾಡಲು ಖತರ್ನಾಕ್ ಐಡಿಯಾ ಮಾಡಿದ್ದ ಹಂತಕರು, ಸ್ವಾಮೀಜಿಯ ಹತ್ಯೆ ಮಾಡಿ ಮಧ್ಯರಾತ್ರಿ 3 ಗಂಟೆಗೆ ಹೀರೆಕೋಡಿ (Hirekodi) ಗ್ರಾಮಕ್ಕೆ ಬಂದಿದ್ದರು. ಚಿಕ್ಕೋಡಿ ತಾಲೂಕಿನ ಹೀರೆಕೋಡಿ ಗ್ರಾಮದಿಂದ ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದವರೆಗೆ ಸ್ವಾಮೀಜಿಯ ಶವ ಸಾಗಿಸಿ ಬಳಿಕ ಅವರ ಮೃತದೇಹವನ್ನು ಪೀಸ್ ಪೀಸ್ ಮಾಡಿ ಕೊಳವೆ ಬಾವಿಗೆ ಎಸೆದಿದ್ದರು. ಇದನ್ನೂ ಓದಿ: ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕ ದುರ್ಮರಣ

    ನಂತರ ಎ1 ಆರೋಪಿ ನಾರಾಯಣ ಮಾಳಿ ಮನೆಗೆ ಬಂದು ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಎಲ್ಲಾ ಬಟ್ಟೆಗಳಿಗೆ ಬೆಂಕಿ ಹಾಕಿ ಸುಟ್ಟಿದ್ದಾನೆ. ಬಳಿಕ ಬೇರೆ ಬಟ್ಟೆ ತೊಟ್ಟು ಚಿಕ್ಕೋಡಿಯ ಎ2 ಆರೋಪಿ ಹಸನ್ ಡಾಲಾಯತ್ ಮನೆಗೆ ತೆರಳಿದ್ದ. ಸಾಕ್ಷಿ ನಾಶ ಮಾಡಿದ ಬಟ್ಟೆ ಹಾಗೂ ಡೈರಿಯ ಬೂದಿಯನ್ನು ಪೊಲೀಸರು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಕೊಪ್ಪಳದಲ್ಲಿ ಪೋಲಿ ಹುಡುಗರ ಹಾವಳಿ- ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿ ಅಶ್ಲೀಲ ಬರಹ

    ತಾವೇ ಕೊಂದು ಸ್ವಾಮೀಜಿ ಹುಡುಕಾಟದ ನಾಟಕವಾಡಲು ಹೋಗಿ ಆರೋಪಿಗಳು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಸಾಕ್ಷಿ ನಾಶ ಮಾಡಿದ ಕುರಿತು ಮಾಹಿತಿ ಸಂಗ್ರಹಿಸಿ ಪುರಾವೆಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ತನಿಖೆ ವೇಳೆ ಕೊಲೆ ಮಾಡಿದ್ದ ಕುಡಗೋಲು ಕಾಲುವೆಯಲ್ಲಿ ಪತ್ತೆಯಾಗಿದ್ದು, ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಪೊಲೀಸರು ಸಾಕ್ಷಿ ಸಂಗ್ರಹ ಮಾಡಿದ್ದಾರೆ. ಇದನ್ನೂ ಓದಿ: 15 ಸಾವಿರಕ್ಕಾಗಿ ಭಾರತೀಯ ಸೇನೆ ರಹಸ್ಯ ಮಾಹಿತಿಯನ್ನ ಪಾಕಿಸ್ತಾನಕ್ಕೆ ಕೊಡ್ತಿದ್ದ ವ್ಯಕ್ತಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ವ್ಯಕ್ತಿಯನ್ನು ಬಟ್ಟೆಯ ಸಹಾಯದಿಂದ ರಕ್ಷಿಸಿದ ಸ್ಥಳೀಯರು

    ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ವ್ಯಕ್ತಿಯನ್ನು ಬಟ್ಟೆಯ ಸಹಾಯದಿಂದ ರಕ್ಷಿಸಿದ ಸ್ಥಳೀಯರು

    ಹುಬ್ಬಳ್ಳಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Rain) ಧಾರವಾಡ (Dharwad) ಜಿಲ್ಲೆ ಅಕ್ಷರಶಃ ನಲುಗಿ ಹೋಗಿದೆ. ವರುಣಾರ್ಭಟಕ್ಕೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಜನತೆ ಕಂಗಾಲಾಗಿದೆ.

    ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು, ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ (Drowning) ವ್ಯಕ್ತಿಯನ್ನು ಸ್ಥಳೀಯರೇ ರಕ್ಷಣೆ (Rescue) ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಹಾಗೂ ಬಗಡಗೇರಿ ಗ್ರಾಮದ ಮಧ್ಯೆ ನಡೆದಿದೆ. ಇಂದು ಬೆಳಗ್ಗೆ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ (Bridge) ದಾಟುವಾಗ ವ್ಯಕ್ತಿ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಬಟ್ಟೆಗಳನ್ನು (Clothes) ಜೋಡಿಸಿ, ಹಗ್ಗ ತಯಾರಿಸಿ ಅದರಿಂದ ಆ ವ್ಯಕ್ತಿಯನ್ನು ಕಾಪಾಡಿದ್ದಾರೆ.

    ಈ ಘಟನೆಯಾದ ಬಳಿಕ ಅದೇ ಸೇತುವೆ ಮೇಲೆ ಹಳ್ಳ ದಾಟಲು ಪ್ರಯತ್ನಿಸಿದ ಬೈಕ್ ಸವಾರ ಕೊಚ್ಚಿಹೋಗಿದ್ದಾನೆ. ಇದನ್ನು ಕಂಡ ಸ್ಥಳೀಯರು ಆತನನ್ನು ಕೂಡಾ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಸಕ್ಕರೆನಾಡಲ್ಲಿ ಮಹಾಕುಂಭ ಮೇಳ ಸಂಭ್ರಮ- 4 ದಿನಗಳ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ

    ಕಳೆದ 2 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಅನ್ನದಾತರು ಕಂಗಾಲಾಗಿದ್ದಾರೆ. ರಕ್ಕಸ ಮಳೆಗೆ ಶೇಂಗಾ ಬೆಳೆ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಬೆಳೆ ನೀರಿನಲ್ಲಿ ಕೊಚ್ಚಿಹೋದ ಘಟನೆ ಕುಂದಗೋಳ ತಾಲೂಕಿನಲ್ಲಿ ನಡೆದಿದೆ. ಈ ಬಾರಿ ತಾಲೂಕಿನಲ್ಲಿ ಅತಿ ಹೆಚ್ಚು ಶೇಂಗಾ ಬೆಳೆಯಲಾಗಿತ್ತು. ಶೇಂಗಾ ಬೆಳೆ ಕಟಾವು ಮಾಡಿ ರಾಶಿ ಮಾಡುವ ಸಮಯದಲ್ಲಿಯೇ ವಕ್ಕರಿಸಿರುವ ಮಳೆರಾಯ ರೈತರಿಗೆ ವಿಪರೀತ ತೊಂದರೆ ನೀಡುತ್ತಿದ್ದಾನೆ. ಇದನ್ನೂ ಓದಿ: ಹಿಜಬ್‌ ವಿವಾದ – ಗುರುವಾರ ಸುಪ್ರೀಂ ತೀರ್ಪು ಪ್ರಕಟ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

  • ಸಂಪೂರ್ಣ ಬೆತ್ತಲಾಗಿ ಮನೆಗಳಿಗೆ ನುಗ್ಗೋ ಅಸಾಮಿ – ಬಟ್ಟೆ ಕದ್ದೊಯ್ಯುತ್ತಿದ್ದ

    ಸಂಪೂರ್ಣ ಬೆತ್ತಲಾಗಿ ಮನೆಗಳಿಗೆ ನುಗ್ಗೋ ಅಸಾಮಿ – ಬಟ್ಟೆ ಕದ್ದೊಯ್ಯುತ್ತಿದ್ದ

    ಚಿಕ್ಕಬಳ್ಳಾಪುರ: ಸಂಪೂರ್ಣ ಬೆತ್ತಲಾಗಿ ಮನೆಗಳಿಗೆ ನುಗ್ಗುವ ವ್ಯಕ್ತಿಯೋರ್ವ ಬಟ್ಟೆಗಳನ್ನು ಕದ್ದೊಯ್ಯುತ್ತಿದ್ದ ಘಟನೆ ಬೆಂಗಳೂರಿನ (Bengaluru) ಉತ್ತರ ತಾಲೂಕಿನ ಬೆಟ್ಟ ಹಲಸೂರು (Halasuru) ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಬೆಟ್ಟಹಲಸೂರು ಗ್ರಾಮದಲ್ಲಿ ರಾತ್ರಿ ವೇಳೆ ಸಂಪೂರ್ಣ ಬೆತ್ತಲಾಗಿ ತಲೆಗೆ ಟಾರ್ಚ್ ಹಾಕಿಕೊಂಡು ಎಂಟ್ರಿ ಕೊಡುವ 25 ವರ್ಷದ ಯುವಕ ಮನೆಗಳಿಗೆ ನುಗ್ಗಿ ಮನೆಯ ಮೇಲೆ ಮುಂಭಾಗ ಇರುವ ಬಟ್ಟೆಗಳನ್ನು ಕಳ್ಳತನ ಮಾಡುತ್ತಾನೆ. ಇನ್ನೂ ನಾಯಿಗಳ ಬೊಗಳುವ ಶಬ್ಧದಿಂದ ಎಚ್ಚೆತ್ತ ಜನ ಬೆತ್ತಲೆಯಾಗಿ ಓಡಾಡುತ್ತಿದ್ದ ಅಸಾಮಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಜನರೆಲ್ಲಾ ಜಮಾಯಿಸಿ ಬೆತ್ತಲೆ ಅಸಾಮಿಯನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತೆಗೆ ಬೆಂಕಿಯಿಟ್ಟ ಆರೋಪಿ ತಾಯಿ, ಸಹೋದರಿ

    ಬಟ್ಟೆ ಕೊಡಿಸಿ ಮಾನ ಮುಚ್ಚಿಸಿ ಪೊಲೀಸರು ಆರೋಪಿಯನ್ನು ಕರೆದೊಯ್ದಿದ್ದು, ವಿಚಾರಣೆ ವೇಳೆ ಆರೋಪಿ ಅಸ್ಸಾಂ (Assam) ಮೂಲದವನು ಎಂದು ತಿಳಿದುಬಂದಿದೆ. ಸ್ಥಳೀಯವಾಗಿ ಕೆಲಸ ಮಾಡುತ್ತಿದ್ದ ಆರೋಪಿ ರಾತ್ರಿಯಾದರೆ, ಈ ರೀತಿ ಕೃತ್ಯ ಮಾಡುತ್ತಿದ್ದ ಹೇಳಲಾಗುತ್ತಿದ್ದು, ಅರೆ ಮಾನಸಿಕ ಅಸ್ವಸ್ಥ ಅಂತ ತಿಳಿದುಬಂದಿದೆ. ಹೀಗಾಗಿ ಪೊಲೀಸರು ಬುದ್ದಿವಾದ ಹೇಳಿ ಬಿಟ್ಟು ಕಳುಹಿಸಿದ್ದಾರೆ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಬೆತ್ತಲೆ ಅಸಾಮಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 8 ಜನರಿಗೆ ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ

    Live Tv
    [brid partner=56869869 player=32851 video=960834 autoplay=true]

  • ನಡುರಸ್ತೆಯಲ್ಲಿ ಮಹಿಳೆ ಬಟ್ಟೆ ಬಿಚ್ಚಿ ರಾಡ್‍ನಿಂದ ಹಲ್ಲೆ – ನಾಲ್ವರು ಅರೆಸ್ಟ್

    ನಡುರಸ್ತೆಯಲ್ಲಿ ಮಹಿಳೆ ಬಟ್ಟೆ ಬಿಚ್ಚಿ ರಾಡ್‍ನಿಂದ ಹಲ್ಲೆ – ನಾಲ್ವರು ಅರೆಸ್ಟ್

    ಭೋಪಾಲ್: ಮಹಿಳೆಯ ಬಟ್ಟೆ ಬಿಚ್ಚಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

    ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಎಲ್ಲರೂ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಕೂಲಿ ಕಾರ್ಮಿಕರಾಗಿದ್ದಾರೆ. ಸಂತ್ರಸ್ತೆ ರೂಪರೇಲ್ ಗ್ರಾಮದ ನಿವಾಸಿಯಾಗಿದ್ದು, ಕೆಲವು ತಿಂಗಳ ಹಿಂದೆ ಪತಿಯನ್ನು ತೊರೆದು ಬೇರೊಬ್ಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ಇದನ್ನೂ ಓದಿ: ಬೈಕ್, ರಿಕ್ಷಾಗೆ ಗುದ್ದಿದ ಕಾರ್ – 6 ಜನರ ಸಾವಿಗೆ ಕಾರಣವಾದ ಕಾಂಗ್ರೆಸ್ ಶಾಸಕನ ಅಳಿಯ

    ಬುಧವಾರ ಮತ್ತೆ ಮಹಿಳೆ ತನ್ನ ಗಂಡನ ಮನೆಗೆ ಹೋದಳು. ಇದರಿಂದ ಕೋಪಗೊಂಡ ಆಕೆಯೊಂದಿಗೆ ವಾಸವಿದ್ದ ಮುಖೇಶ್ ತನ್ನೊಂದಿಗೆ ಇತರರನ್ನು ಕರೆದುಕೊಂಡು ಗ್ರಾಮಕ್ಕೆ ಹೋಗಿ ಮಹಿಳೆ ಮತ್ತು ಆಕೆಯ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ

    ಘಟನೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೀಡಿಯೊದಲ್ಲಿ ಹಾಡಹಗಲೇ ವ್ಯಕ್ತಿಗಳು ಗ್ಯಾಂಗ್ ಮಹಿಳೆಯ ಬಟ್ಟೆ ಬಿಚ್ಚಿ ರಸ್ತೆಯಲ್ಲಿಯೇ ರಾಡ್‍ನಿಂದ ಹೊಡೆಯುತ್ತಿದ್ದರೆ, ಮತ್ತೆ ಕೆಲವರು ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಲು ಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ನಂತರ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಚಿಕಿತ್ಸೆಗಾಗಿ ಪೆಟ್ಲವಾಡ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಈ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ತಿವಾರಿ ಅವರು, ಮುಖೇಶ್ ತನೆಗೆ ಕಿರುಕುಳ ನೀಡುತ್ತಿದ್ದರಿಂದ ಗಂಡನ ಮನೆಗೆ ಮರಳಿದ್ದಾಗಿ ಮಹಿಳೆ ಹೇಳಿದ್ದಾಳೆ. ಮಹಿಳೆಯನ್ನು ಆಕೆಯ ಪತಿ ಕೂಡ ಒಪ್ಪಿಕೊಂಡಿದ್ದರಿಂದ ಮುಖೇಶ್ ಗಲಾಟೆ ಮಾಡಲು ಆರಂಭಿಸಿದ್ದಾನೆ. ನಂತರ ಮಹಿಳೆಯ ಬಟ್ಟೆಯನ್ನು ಬಿಚ್ಚಿ ನಡುರಸ್ತೆಯಲ್ಲಿಯೇ ಹಲ್ಲೆ ನಡೆಸಿದ್ದಾನೆ. ಇದೀಗ ಈ ಸಂಬಂಧ ಐವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಟ್ಟೆ ಧರಿಸಿದರೆ ಸೋಮಾರಿತನ ಬರುತ್ತೆ ಎಂದು 5 ವರ್ಷದಿಂದ ಬಟ್ಟೆನೇ ಧರಿಸಿಲ್ಲ ಈ ಮಹಿಳೆ

    ಬಟ್ಟೆ ಧರಿಸಿದರೆ ಸೋಮಾರಿತನ ಬರುತ್ತೆ ಎಂದು 5 ವರ್ಷದಿಂದ ಬಟ್ಟೆನೇ ಧರಿಸಿಲ್ಲ ಈ ಮಹಿಳೆ

    ಬರ್ನಿನ್: ಇತ್ತೀಚೆಗೆ ಮಹಿಳೆಯೊಬ್ಬರಿಗೆ ನೀರು ಎಂದರೆ ಅಲರ್ಜಿ ಇತ್ತು. ಈಗ ಇಲ್ಲೊಬ್ಬ ಮಹಿಳೆಗೆ ಬಟ್ಟೆ ಎಂದರೇ ಅಲರ್ಜಿ. ಮಹಿಳೆಯೊಬ್ಬಳಿಗೆ ಬಟ್ಟೆ ಎಂದರೆ ಆಗುವುದಿಲ್ಲ ಎಂದು ಆಕೆಯೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದು ಭಾರೀ ಸುದ್ದಿಯಾಗಿದೆ.

    ಜರ್ಮನಿ ನಿವಾಸಿ ಕೆರ್ಸ್ಟಿನ್ ಅವರಿಗೆ ಬಟ್ಟೆ ಎಂದರೆ ಆಗುವುದಿಲ್ಲ. ಇವರಿಗೆ ಬಟ್ಟೆ ಹಾಕಿಕೊಂಡರೆ ಸೋಮಾರಿತನ ಬರುತ್ತೆ ಎಂದು ಕಳೆದ 5 ವರ್ಷಗಳಿಂದ ಬಟ್ಟೆಯನ್ನು ಹಾಕಿಕೊಂಡಿಲ್ಲ. ಬಟ್ಟೆ ಬದಲಿಗೆ ಕೆರ್ಸ್ಟಿನ್ ತಮ್ಮ ಮೈ ಮುಚ್ಚಿಕೊಳ್ಳಲು ಟ್ಯಾಟೂ ಹಾಕಿಸಿಕೊಂಡಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಪಾಪದ ಕೊಡ ನಮ್ಮದಾ ನಿಮ್ಮದಾ?: ಅಶೋಕ್‍ಗೆ ತಿರುಗೇಟು ಕೊಟ್ಟ ಸಿದ್ದು 

    ಈ ಫೋಟೋಗಳನ್ನು ಕೆರ್ಸ್ಟಿನ್ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೆರ್ಸ್ಟಿನ್ ಟ್ಯಾಟೂಗಾಗಿ 25,000 ಡಾಲರ್(ರೂ.24 ಲಕ್ಷಕ್ಕೂ ಹೆಚ್ಚು) ಖರ್ಚು ಮಾಡಿದ್ದಾಳೆ ಎಂದು ಆಕೆಯೇ ನೆಟ್ಟಿಗರಿಗೆ ತಿಳಿಸಿದ್ದಾರೆ.

    1992, 2014 ಮತ್ತು 2022 ರಲ್ಲಿ ಕೆರ್ಸ್ಟಿನ್ ಟ್ರಿಸ್ಟಾನ್ ಹೇಗಿದ್ದರು ಎಂಬುದನ್ನು ತೋರಿಸಲು ಆಕೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಫುಲ್ ವೈರಲ್ ಆಗಿದೆ. ಕೆರ್ಸ್ಟಿನ್ ಭಿನ್ನ ಫೋಟೋಗಳು ನೆಟ್ಟಿಗರನ್ನು ಆಕರ್ಪಿಸುವ ಕೇಂದ್ರವಾಗುತ್ತಿದೆ. ಪ್ರಸ್ತುತ ಕೆರ್ಸ್ಟಿನ್ ಅವರಿಗೆ 50 ವರ್ಷವಾಗಿದ್ದು, ಇನ್‍ಸ್ಟಾದಲ್ಲಿ ಸುಮಾರು ಎರಡು ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇದನ್ನೂ ಓದಿ: ಬೆಣ್ಣೆ ಹಳ್ಳದಲ್ಲಿ ಪ್ರವಾಹ – ನಾಲ್ವರು ಕಾರ್ಮಿಕರನ್ನ ರಕ್ಷಿಸಿದ ಅಗ್ನಿಶಾಮಕ ದಳ 

  • ಬೇಸಿಗೆಯಲ್ಲೂ ಕಂಫರ್ಟ್ ಆಗಿರಲು ಫ್ಯಾಷನ್ ಟಿಪ್ಸ್

    ಬೇಸಿಗೆಯಲ್ಲೂ ಕಂಫರ್ಟ್ ಆಗಿರಲು ಫ್ಯಾಷನ್ ಟಿಪ್ಸ್

    ಪ್ರತಿ ಸೀಸನ್‌ನಲ್ಲೂ ಪ್ರತಿಯೊಬ್ಬರೂ ಹವಾಮಾನಕ್ಕೆ ಅನುಗುಣವಾಗಿ ತಮ್ಮ ಉಡುಗೆ ತೊಡುಗೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಏಕೆಂದರೆ ಪ್ರತಿಯೊಂದು ಉಡುಗೆ ಎಲ್ಲಾ ಋತುಗಳಲ್ಲೂ ಹೊಂದಿಕೆಯಾಗುವುದಿಲ್ಲ.

    ನಿಮ್ಮ ಉಡುಗೆ ತೊಡುಗೆ ಹವಾಮಾನಕ್ಕೆ ಅನುಗುಣವಾಗಿ ಬದಲಾಯಿಸುವುದರಿಂದ ನಿಮ್ಮನ್ನು ನೀವು ಯಾವುದೇ ಸೀಸನ್‌ನಲ್ಲೂ ಆರಾಮದಾಯಕವಾಗಿ ಇರಿಸುವಲ್ಲಿ ಸುಲಭವಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ದಿನನಿತ್ಯದ ಉಡುಗೆ ಕೆಲವು ಸೀಸನ್‌ಗಳಲ್ಲಿ ಕಿರಿಕಿರಿ ಎನಿಸಬಹುದು. ಇದೀಗ ಬೇಸಿಗೆ ಆರಂಭವಾಗಿದ್ದು, ಈ ಸಮಯದಲ್ಲಿ ಯಾವ ರೀತಿಯಾಗಿ ಉಡುಗೆ ತೊಡುಗೆ ಧರಿಸಬೇಕೆಂಬ ಟಿಪ್ಸ್ ಇಲ್ಲಿವೆ. ಈ ಟಿಪ್ಸ್‌ಗಳು ಯಾವುದೇ ಕಾಲಕ್ಕೂ ಹಳೆಯದೆನಿಸುವುದಿಲ್ಲ. ಬೇಸಿಗೆಯಲ್ಲಿ ನೀವು ಕಂಫರ್ಟೇಬಲ್ ಆಗಿ ಕಾಲಕಳೆಯಲು ಇಷ್ಟಪಡುತ್ತೀರಾದರೆ ಈ ಟಿಪ್ಸ್ ನಿಮಗೆ ಸಹಾಯವಾಗಲಿದೆ.

    ಲೂಸ್ ಹಾಗೂ ಹಗುರ ಬಟ್ಟೆಗಳು ಬೇಸಿಗೆಗೆ ಪರ್ಫೆಕ್ಟ್:
    ಬೇಸಿಗೆ ಕಾಲದಲ್ಲಿ ಹಗುರ ಹಾಗೂ ಲೂಸ್ ಬಟ್ಟೆಗಳನ್ನು ಧರಿಸುವುದು ಉತ್ತಮ. ಏಕೆಂದರೆ ಬೆಚ್ಚನೆಯ ವಾತಾವರಣದಲ್ಲಿ ದಪ್ಪ ಅಥವಾ ಉಣ್ಣೆಯಂತಹ ಬಟ್ಟೆಗಳ ಅಗತ್ಯ ಬೀಳುವುದಿಲ್ಲ. ಬಟ್ಟೆ ಹಗುರವಾಗಿದ್ದಷ್ಟು ದೇಹಕ್ಕೂ ಆರಾಮ ಎನಿಸುತ್ತದೆ. ಜೊತೆಗೆ ಶೆಕೆಯ ಅನುಭವ ಕಡಿಮೆಯೆನಿಸುತ್ತದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಇಂತಹ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸಲು ಪ್ರಯತ್ನಿಸಿ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

    ಹಗುರವಾದ ಮೇಕಪ್ ಇರಲಿ:
    ನಿಮಗೆ ಅತೀ ಮೇಕಪ್‌ನ ಅಭ್ಯಾಸವಿದೆಯೆ? ಆದರೆ ಬೇಸಿಗೆಯಲ್ಲಿ ಹೆವಿ ಮೇಕಪ್ ಬಳಕೆಯನ್ನು ಕಡಿಮೆ ಮಾಡುವುದೇ ಉತ್ತಮ. ಏಕೆಂದರೆ ಬೇಸಿಗೆಯಲ್ಲಿ ಅತಿ ಹೆಚ್ಚು ಬೆವರುವುದರಿಂದ ನಿಮ್ಮ ಮೇಕಪ್ ಕೂಡಾ ಬೆವರಿನೊಂದಿಗೆ ಕಳಚಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಇನ್ನೊಬ್ಬರ ಗಮನಕ್ಕೆ ಬಂದಲ್ಲಿ ಮುಜುಗರಕ್ಕೊಳಗಾಗಬಹುದು. ಹೀಗಾಗಿ ಆದಷ್ಟು ಲೈಟ್ ಮೇಕಪ್ ಮಾಡಿಕೊಳ್ಳುವುದು ಉತ್ತಮ.

    ಗಾಢ ಬಣ್ಣದ ಬಟ್ಟೆ ಬೇಡ:
    ಬೇಸಿಗೆಯಲ್ಲಿ ಗಾಢ ಬಣ್ಣದ ಬಟ್ಟೆಯನ್ನು ಧರಿಸಬಾರದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕಪ್ಪು, ನೇರಳೆ ಅಥವಾ ಯಾವುದೇ ಗಾಢ ಬಣ್ಣದ ಬಟ್ಟೆಗಳು ಸೂರ್ಯನ ಶಾಖವನ್ನು ಹೀರಿಕೊಳ್ಳುತ್ತದೆ. ಇದರಿಂದ ನೀವು ಸಾಮಾನ್ಯಕ್ಕಿಂತಲೂ ಹೆಚ್ಚು ಬೆವರುವ ಸಾಧ್ಯತೆ ಇರುತ್ತದೆ. ಹೀಗಾಗಿ ತಿಳಿ ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಹೆಚ್ಚು ಹೆಚ್ಚು ಬಳಸಿ. ಇದು ಬೇಸಿಗೆಯಲ್ಲೂ ತಂಪಾಗಿಡಲು ಸಹಕಾರಿಯಾಗುತ್ತದೆ. ಇದನ್ನೂ ಓದಿ: ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು

    ಸ್ಲೀವ್ ಲೆಸ್ ಅಥವಾ ಬಲೂನ್ ಸ್ಲೀವ್ಸ್‌ನ ಬಟ್ಟೆ ಉತ್ತಮ:
    ಬೇಸಿಗೆಯಲ್ಲಿ ಬೆವರುವುದು ಸಹಜ. ನೀವು ಉದ್ದನೆಯ ತೋಳಿನ ಬಟ್ಟೆ ಧರಿಸಿದಾಗ ಕಂಕುಳದ ಬೆವರು ಬಟ್ಟೆಗೆ ಅಂಟಿ ಮುಜುಗರವಾಗುವಂತೆ ಮಾಡುತ್ತದೆ. ಹೀಗಾಗಿ ಬೇಸಿಗೆ ಸಮಯದಲ್ಲಿ ಸ್ಲೀವ್‌ಲೆಸ್ ದಿರಿಸನ್ನು ಬಳಸುವುದು ಸೂಕ್ತವೆನಿಸುತ್ತದೆ. ಆದರೆ ಕೆಲವರು ಸ್ಲೀವ್ ಲೆಸ್ ಬಟ್ಟೆಗಳನ್ನು ಧರಿಸಲು ಇಷ್ಟ ಪಡುವುದಿಲ್ಲ. ಹೀಗಿರುವಾಗ ಬಲೂನ್ ಸ್ಲೀವ್ಸ್ ಇರುವ ಬಟ್ಟೆಗಳನ್ನು ಟ್ರೈ ಮಾಡಬಹುದು. ಇವು ಶೆಕೆಯ ಅನುಭವ ಕಡಿಮೆ ಮಾಡುವುದಲ್ಲದೇ ದೇಹವನ್ನು ಕೂಲ್ ಆಗಿಡಲು ಸಹಾಯ ಮಾಡುತ್ತದೆ.

    ಬಿಸಿಲಿಗೆ ಹೋಗುವಾಗ ಸನ್‌ಗ್ಲಾಸ್, ಟೋಪಿ ಅಗತ್ಯ:
    ನೀವು ಬೇಸಿಗೆ ಬಿಸಿಲಿನಲ್ಲಿ ಹೊರಗಡೆ ಹೋಗುತ್ತಿದ್ದೀರಾದರೆ ಟೊಪಿ ಹಾಗೂ ಸನ್‌ಗ್ಲಾಸ್ ಬಳಸುವುದು ಉತ್ತಮವಾಗುತ್ತದೆ. ಇವು ಸೂರ್ಯನ ಕಿರಣಗಳಂದ ರಕ್ಷಿಸುವುದಲ್ಲದೇ ಟ್ಯಾನ್ ಆಗುವುದನ್ನು ತಪ್ಪಿಸುತ್ತದೆ. ಬೇಸಿಗೆ ಕಾಲಕ್ಕಾಗಿಯೇ ನೀವು ಒಂದು ಜೊತೆ ಟೋಪಿ ಹಾಗೂ ಸನ್ ಗ್ಲಾಸ್‌ಗಳನ್ನು ತೆಗೆದಿಡಿ. ನಿಮ್ಮ ಟೇಸ್ಟ್ಗೆ ತಕ್ಕಂತಹ ಟೋಪಿ ಖರೀದಿ ಮಾಡಿ ಬಿಸಿಲಿನ ಸಮಯದಲ್ಲಿ ಹೊರಗಡೆ ಹೋಗುವಾಗ ಧರಿಸಿ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು

     

  • ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮಕ್ಕಳಿಗೆ ಇಂತಹ ಬಟ್ಟೆಗಳನ್ನು ಕೊಡಿಸಿ

    ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮಕ್ಕಳಿಗೆ ಇಂತಹ ಬಟ್ಟೆಗಳನ್ನು ಕೊಡಿಸಿ

    ಬ್ಬ ಬಂದಾಗ ಮಕ್ಕಳು ಪ್ರತೀ ಸಲ ಬಯಸುವುದು ಏನು? ಇದರ ಬಗ್ಗೆ ಯೋಚನೆಯೇ ಬೇಡ. ಪ್ರತೀ ಮಕ್ಕಳು ಹಬ್ಬಗಳಲ್ಲಿ ಪೋಷಕರಿಂದ ನಿರೀಕ್ಷಿಸುವುದು ಮೊದಲಿಗೆ ಹೊಸ ಬಟ್ಟೆಗಳನ್ನು. ಇನ್ನೆನು ಕ್ರಿಸ್‌ಮಸ್‌ ಬಂದೇ ಬಿಟ್ಟಿತು. ಹೀಗಿರುವಾಗ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಖರೀದಿಸುವ ಯೋಜನೆಯಂತೂ ನೀವು ಮಾಡೇ ಇರುತ್ತೀರಿ. ಆದರೆ ಮಕ್ಕಳಿಗೆ ಯಾವ ತರಹದ ಬಟ್ಟೆಯನ್ನು ಕೊಳ್ಳುವುದು ಎಂಬ ಗೊಂದಲ ನಿಮ್ಮಲ್ಲಿ ಇದ್ದರೆ, ಇಲ್ಲಿರುವ ಕೆಲವು ಟಿಪ್ಸ್ ಪುಟ್ಟ ಮಕ್ಕಳಿಗೆ ಹೊಸ ಬಟ್ಟೆ ಕೊಳ್ಳಲು ನಿಮಗೆ ಖಂಡಿತಾ ಸಹಾಯ ಮಾಡಬಲ್ಲದು.

    ಚಿಕ್ಕ ಚಿಕ್ಕ ಪ್ರಿಂಟ್‍ಗಳಿರುವ ಸ್ಲೀಪ್ ಸೂಟ್ ಸೆಟ್:
    ಹತ್ತಿಯ ಬಟ್ಟೆಯ ಸ್ಲೀಪ್ ಸೂಟ್‍ಗನ್ನು ಧರಿಸಲು ಕೇವಲ ಮಕ್ಕಳಿಗೆ ಮಾತ್ರವಲ್ಲದೇ ಎಲ್ಲಾ ವಯೋಮಾನದ ಜನರಿಗೂ ಸಜೆಸ್ಟ್ ಮಾಡಬಹುದು. ಮಕ್ಕಳಿಗೆ ಹತ್ತಿಯ ಬಟ್ಟೆಯ ಸ್ಲೀಪ್ ಸೂಟ್‍ನಲ್ಲಿ ಪುಟ್ಟ ಪುಟ್ಟ ಗಾತ್ರದ ಪ್ರಿಂಟ್ ಗಳಿದ್ದರೆ ಮಕ್ಕಳು ಎಷ್ಟು ಮುದ್ದಾಗಿ ಕಾಣಿಸುತ್ತಾರಲ್ಲಾ? ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ಕ್ರಿಸ್‌ಮಸ್‌ ಹಬ್ಬಕ್ಕಾದರೆ ಪ್ರಿಂಟ್‍ಗಳಲ್ಲಿ ಕ್ರಿಸ್‌ಮಸ್‌ ಟ್ರೀ, ಸಾಂತಾ, ಉಡುಗೊರೆ ಇಂತಹ ಹಲವು ಚಿತ್ರಗಳಿದ್ದರೆ ಮಕ್ಕಳೂ ಅದನ್ನು ಇಷ್ಟ ಪಡುತ್ತಾರೆ ಜೊತೆಗೆ ಅವರ ನಿದ್ರೆಯೂ ಆರಾಮದಾಯಕವಾಗುತ್ತದೆ.

    ಸಾಂತಾ ಕ್ಲಾಸ್ ಬಟ್ಟೆ:
    ನಿಮ್ಮ ಮಕ್ಕಳನ್ನೇ ಸಾಂತಾ ಕ್ಲಾಸ್‍ನಂತೆ ಡ್ರೆಸ್‍ಅಪ್ ಮಾಡಿದರೆ ಹೇಗಿರುತ್ತೆ? ಕೆಂಪು ದಿರಸಿನ ಸಾಂತಾ ನಿಮ್ಮ ಮನೆಯಲ್ಲೇ ಪುಟ್ಟ ಪುಟ್ಟ ಹೆಜ್ಜೆನ್ನಿಡುತ್ತ ಓಡಾಡಿಕೊಂಡಂತೆ ಭಾಸವಾಗುವುದಿಲ್ಲವೇ? ಸಾಂತಾವನ್ನು ಇಷ್ಟ ಪಡುವ ಮಕ್ಕಳೂ ಖುಷ್, ಅವರನ್ನು ನೋಡಿ ಆನಂದಿಸುವ ಹಿರಿಯರೂ ಖುಷ್.

    ಹೆಣ್ಣು ಮಕ್ಕಳಿಗೆ ಸಾಂತಾ ಫ್ರಾಕ್:
    ಸಾಂತಾ ಕ್ಲಾಸ್ ಸೂಟ್ ಯಾವಗಾಲೂ ಗಂಡು ಮಕ್ಕಳಿಗೆ ಸರಿ ಹೊಂದುತ್ತದೆ. ಹಾಗಿದ್ದರೆ ಹೆಣ್ಣು ಮಕ್ಕಳಿಗೆ? ಅವರಿಗೂ ಮಿಸ್ ಸಾಂತಾ ಕಾಸ್ಟ್ಯೂಮ್ ಕೊಡಿಸಿ. ಇದರಲ್ಲಿ ಕೆಂಪು ಬಣ್ಣದ ಫ್ರಾಕ್, ಟೊಪ್ಪಿ ಕಪ್ಪು ಶೂ ಮತ್ತು ಬೆಲ್ಟ್ ಇದ್ದರೆ ಮುಗೀತು. ಹೆಣ್ಣು ಮಕ್ಕಳೂ ಜಿಂಗಲ್ ಬೆಲ್ ಕ್ಲಬ್‍ನ ಭಾಗವಾಗಬಹುದು. ಇದನ್ನೂ ಓದಿ: 30 ನಿಮಿಷದಲ್ಲಿ ಮಾಡಿ ಬಿಸಿ ಬಿಸಿಯಾದ ಪನೀರ್ ಬಿರಿಯಾನಿ

    ಬೇಬಿ ರೋಂಪರ್:
    ನಡೆದಾಡುವ, ಶಾಲೆಗೆ ಹೋಗುವ ಮಕ್ಕಳಿಗೆ ಫ್ಯಾನ್ಸಿ ಬಟ್ಟೆಗಳನ್ನು ಖರೀದಿಸಬಹುದು. ಆದರೆ ನವಜಾತ ಶಿಶುಗಳಿಗೆ ಹಬ್ಬಕ್ಕೆ ಏನು ಕೊಳ್ಳುವುದು? ಈ ಗೊಂದಲಕ್ಕೆ ಪರಿಹಾರ ಒಂದೇ. ಇನ್ನೂ ತೊಟ್ಟಿಲಿರುವ ಮಕ್ಕಳಿಗೆ ಮಾರುಕಟ್ಟೆಯಲ್ಲಿ ಬೇಬಿ ರೋಂಪರ್ ಲಭ್ಯವಿರುತ್ತದೆ. ಹಬ್ಬಕ್ಕೆ ಸರಿ ಹೊಂದುವ ವಿನ್ಯಾಸದ, ಹತ್ತಿ ಬಟ್ಟೆಯ ರೋಂಪರ್ ಪುಟ್ಟ ಮಕ್ಕಳಿಗೆ ಪರ್ಫೆಕ್ಟ್ ಮ್ಯಾಚ್.

  • ರೇಪ್ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು

    ರೇಪ್ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು

    ಪಾಟ್ನಾ: ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು ನೀಡಿರುವ ಘಟನೆ ನಡೆದಿದೆ.

    ಗ್ರಾಮದಲ್ಲಿ ಇರುವ ಎಲ್ಲ ಮಹಿಳೆಯರ ಬಟ್ಟೆಗಳನ್ನು ತೊಳೆಯಬೇಕು ಮತ್ತು ಇಸ್ತ್ರಿ ಮಾಡಬೇಕು ಎಂಬ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. 20 ವರ್ಷದ ಲಾಲನ್ ಕುಮಾರ್ ಸಫೀ ಈ ಷರತ್ತಿನನ್ವಯ ಜಾಮೀನು ಪಡೆದಿದ್ದಾನೆ. ಆರು ತಿಂಗಳ ಕಾಲ ಮಹಿಳೆಯರ ಬಟ್ಟೆ ಒಗೆಯಬೇಕು, ಅದಕ್ಕೆ ಬೇಕಾದ ಡಿಟರ್ಜೆಂಟ್ ಮತ್ತು ಇತರೆ ವಸ್ತುಗಳನ್ನು ಸ್ವಯಂ ಖರೀದಿಸಬೇಕು ಎಂದೂ ಷರತ್ತಿನಲ್ಲಿ ಹೇಳಲಾಗಿದೆ. ಗ್ರಾಮದಲ್ಲಿ ಸರಿಸುಮಾರು 2000 ಮಹಿಳೆಯರು ಇದ್ದಾರೆ. ಇದನ್ನೂ ಓದಿ: ಸಾಮಾನ್ಯ ಶೀತವಾಗಲಿದೆ ಕೊರೊನಾ ವೈರಸ್ – ತಜ್ಞರ ಭವಿಷ್ಯ

    ಬಿಹಾರದ ಮಜ್ಹೋರ್ ಗ್ರಾಮದ ಕುಮಾರ್ ಧೋಬಿಯಾಗಿ ಕೆಲಸ ಮಾಡುತ್ತಿದ್ದನು. ಅತ್ಯಾಚಾರ ಯತ್ನ ಸೇರಿ ವಿವಿಧ ಆರೋಪಗಳಡಿ 2021 ಏಪ್ರಿಲ್ ತಿಂಗಳಲ್ಲಿ ಬಂಧಿಸಲಾಗಿತ್ತು. ಲಾಲನ್ ಕುಮಾರ್ ಷರತ್ತು ಜಾರಿಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಕೋರ್ಟಿನ ತೀರ್ಮಾನವು ಗ್ರಾಮದ ಎಲ್ಲ ಮಹಿಳೆಯರಿಗೆ ಸಂತಸ ತಂದಿದೆ ಎಂದು ಮಧುಬನಿ ಜಿಲ್ಲೆಯ ಪೊಲೀಸ್ ಅಧಿಕಾರಿಯಾದ ಸಂತೋಷ್ ಕುಮಾರ್ ಸಿಂಗ್ ತಿಳಿಸಿದರು.

    ಗ್ರಾಮ ಪರಿಷತ್‍ನ ಮುಖ್ಯಸ್ಥೆಯಾಗಿರುವ ನಸೀಮಾ ಖತೂನ್. ಇದು ಐತಿಹಾಸಿಕ ನಿರ್ಧಾರ. ಮಹಿಳೆಯರ ಬಗೆಗಿನ ಗೌರವ ಹೆಚ್ಚಿಸಲಿದೆ ಎಂದಿದ್ದಾರೆ. ಈ ಆದೇಶವು ಸಕಾರಾತ್ಮಕ ಪರಿಣಾಮ ಬೀರಿದೆ. ಮಹಿಳೆಯರ ವಿರುದ್ಧ ದೌರ್ಜನ್ಯವು ಚರ್ಚೆಗೆ ಗ್ರಾಸವಾಗಿದೆ. ಇದು ಗಮನಾರ್ಹ ಹೆಜ್ಜೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ಅಂಜುಂ ಪರ್ವೀನ್ ಹೇಳಿದರು.

    ನಿರ್ಭಯಾ ಪ್ರಕರಣದ ಬಳಿಕ ದೇಶದಲ್ಲಿ ಅತ್ಯಾಚಾರ ಪ್ರಕರಣ ಸಂಬಂಧಿತ ಕಾಯ್ದೆ ಬಿಗಿಗೊಂಡಿವೆ. 2020ರಲ್ಲಿ 28,000ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.