Tag: Close

  • ದಕ್ಷಿಣ ಕನ್ನಡ, ಕಾಸರಗೋಡಿಗೆ ಹೊಂದಿಕೊಂಡಿರುವ ಮದ್ಯದಂಗಡಿಗಳು ಕ್ಲೋಸ್

    ದಕ್ಷಿಣ ಕನ್ನಡ, ಕಾಸರಗೋಡಿಗೆ ಹೊಂದಿಕೊಂಡಿರುವ ಮದ್ಯದಂಗಡಿಗಳು ಕ್ಲೋಸ್

    ಮಂಗಳೂರು: ಕೊರೊನಾ ಎಫೆಕ್ಟ್‌ನಿಂದಾಗಿ ದಕ್ಷಿಣ ಕನ್ನಡ ಮತ್ತು ಕಾಸರಗೋಡಿಗೆ ಹೊಂದಿಕೊಂಡಿರುವ ಮದ್ಯದಂಗಡಿಗಳನ್ನು ಕ್ಲೋಸ್ ಮಾಡಲಾಗಿದೆ.

    ಕೇರಳ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಟಫ್ ರೂಲ್ಸ್ ಗೆ ತಜ್ಞರು ಶಿಪಾರಸ್ಸು ನೀಡಿದ್ದಾರೆ. ಈ ಬೆನ್ನಲ್ಲೆ ಕಠಿಣ ಕಾಯ್ದೆಯನ್ನು ಜಿಲ್ಲಾಡಳಿತ ಹೇರಲು ಮುಂದಾಗಿದೆ. ಇದನ್ನೂ ಓದಿ:  ಅಪ್ಪ ಅರೆಸ್ಟ್, ಅಮ್ಮ ಕಣ್ಣೀರು – ಪೋಸ್ಟ್ ಮಾಡಿ ಸುದ್ದಿಯಾದ ಶಿಲ್ಪಾ ಶೆಟ್ಟಿ ಮಗ

    ಕೇರಳದಿಂದ ದಕ್ಷಿಣ ಕನ್ನಡದ ಬಾರ್ಡರ್‍ನ ಮದ್ಯದಂಗಡಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಈಗ ಮದ್ಯದಂಗಡಿಯನ್ನು ಬಂದ್ ಮಾಡಲು ಸೂಚನೆ ಕೊಟ್ಟಿದೆ. ಇಂದಿನಿಂದ ದಿನಾಂಕ 15ರ ತನಕ ಮದ್ಯದಂಗಡಿ ಮುಚ್ಚಿಸಲು ಆದೇಶ ಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಸುಳ್ಯ, ಪುತ್ತೂರು ತಾಲೂಕು ವ್ಯಾಪ್ತಿಯ ಕೆಲ ಮದ್ಯದಂಗಡಿ ಮುಚ್ಚಲು ಜಿಲ್ಲಾಡಳಿತ ಆದೇಶಿಸಿದೆ.

  • ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರಿಗೆ ಶಾಕ್ – ಪೊಲೀಸರಿಂದ ಮದ್ಯದಂಗಡಿ ಕ್ಲೋಸ್

    ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರಿಗೆ ಶಾಕ್ – ಪೊಲೀಸರಿಂದ ಮದ್ಯದಂಗಡಿ ಕ್ಲೋಸ್

    ಮೈಸೂರು: ಜಿಲ್ಲೆಯಲ್ಲಿ ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರಿಗೆ ಶಾಕ್ ಆಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಮದ್ಯದಂಗಡಿಯನ್ನು ಪೊಲೀಸರು ಕ್ಲೋಸ್ ಮಾಡಿಸಿದ್ದಾರೆ.

    ಮೈಸೂರಿನ ದೇವರಾಜ ಠಾಣಾ ವ್ಯಾಪ್ತಿಯಲ್ಲಿರುವ ಟ್ರೂ ಸ್ಪಿರೀಟ್ಸ್ ಮದ್ಯದಂಗಡಿಯನ್ನು ಪೊಲೀಸರು ಕ್ಲೋಸ್ ಮಾಡಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಪ್ರಸನ್ನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಾಲ್ಕೈದು ಬಾರಿ ಮಾಲೀಕನಿಗೆ ವಾರ್ನ್ ಮಾಡಿದ್ದರು. ಇನ್ಸ್‌ಪೆಕ್ಟರ್ ಮಾತಿಗೂ ಲೆಕ್ಕಿಸದೆ ಮಾಲೀಕ ಮದ್ಯ ಮಾರಾಟ ಮಾಡುತ್ತಿದ್ದನು. ಹೀಗಾಗಿ ಪೊಲೀಸರು ಮದ್ಯದಂಗಡಿಯನ್ನು ಮುಚ್ಚಿಸಿದ್ದಾರೆ.

    ಮದ್ಯದಂಗಡಿಯಲ್ಲಿ ಸಿಬ್ಬಂದಿಯಿಲ್ಲದೆ ಕೇವಲ ಇಬ್ಬರಿಂದ ಮಾತ್ರ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಮುಗಿಬಿದ್ದಿದ್ದರು. ಆಗ ಪೊಲೀಸರು ಸಿಬ್ಬಂದಿಯನ್ನ ಕರೆಸಿಕೊಳ್ಳುವಂತೆ ಮಾಲೀಕನಿಗೆ ಹೇಳಿದ್ದರು. ಮಾಲೀಕ ಟೀಗೆ ಹೋಗಿದ್ದಾರೆ ಬರುತ್ತಾರೆ ಎಂದು ಸುಳ್ಳು ನೆಪ ಹೇಳಿದ್ದನು. ಈ ವೇಳೆ ಪೊಲೀಸರು ಖಡಕ್ ವಾರ್ನ್ ಮಾಡಿ ಮದ್ಯದಂಗಡಿಯನ್ನು ಮುಚ್ಚಿಸಿದ್ದಾರೆ.

    ಇವತ್ತಿಗೆ ವ್ಯಾಪಾರ ಸಾಕು, ಲೆಕ್ಕ ಹಾಕಿಕೊಂಡು ಮನೆಗೆ ಹೋಗಿ ಎಂದು ವಾರ್ನ್ ಮಾಡಿ ಕಳುಹಿಸಿದ್ದಾರೆ. ಅಲ್ಲದೇ ಮಳಿಗೆ ಮಾಲೀಕನಿಗೆ ಠಾಣೆಗೆ ಬಂದು ಅನುಮತಿ ಪಡೆಯುವಂತೆ ಎಚ್ಚರಿಸಿ ಹೋಗಿದ್ದಾರೆ. ಪದೇ ಪದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.

  • ಮಾಜಿ ಸಿಎಂ ತವರಲ್ಲೇ ಇಂದಿರಾ ಕ್ಯಾಂಟಿನ್ ಬಂದ್

    ಮಾಜಿ ಸಿಎಂ ತವರಲ್ಲೇ ಇಂದಿರಾ ಕ್ಯಾಂಟಿನ್ ಬಂದ್

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ತವರಿನಲ್ಲೇ ಇಂದಿರಾ ಕ್ಯಾಂಟಿನ್ ಬಂದ್ ಆಗಿದೆ.

    ಟೆಂಡರ್‌ದಾರ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗಿದೆ. ವ್ಯವಸ್ಥಾಪಕರು ಕ್ಯಾಂಟೀನ್ ಬಂದ್ ಮಾಡಲು ನಿರ್ಧಾರ ಮಾಡಿಕೊಂಡಿದ್ದಾರೆ.

    ಟೆಂಡರ್‌ದಾರ ಸುಮಾರು 6 ತಿಂಗಳ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ವ್ಯವಸ್ಥಾಪಕರು ಕ್ಯಾಂಟೀನ್ ಬಂದ್ ಮಾಡಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಸಿನ ಕೂಸಿಗೆ ಕೊಡಲಿ ಏಟು ಬಿದ್ದಿದೆ.

    ನವಾಜ್ ಫಯಾಜ್ ಎಂಬವರು ಕರ್ನಾಟಕದ ಹಲವು ಕ್ಯಾಂಟೀನ್ ಅವರು ತೆಗೆದುಕೊಂಡಿದ್ದಾರೆ. ಹೆಚ್.ಡಿ ಕೋಟೆ, ಟಿ. ನರಸೀಪುರ ಇದು ಎಲ್ಲ ನಮ್ಮ ತಂಡ ಹಾಗೂ ಇಲ್ಲಿನ ಸಿಬ್ಬಂದಿಗೆ ಸಂಬಳ ಸಿಗುತ್ತಿಲ್ಲ. ಸಂಬಳ ಸಿಗದೇ ಹಲವು ಸಿಬ್ಬಂದಿ ಕೆಲಸ ಬಿಟ್ಟಿದ್ದಾರೆ. ಇಲ್ಲಿ ಕೂಡ ಸಿಬ್ಬಂದಿ ಬಿಟ್ಟು ಹೋಗದಂತೆ ನೋಡಿಕೊಂಡಿದ್ದೇನೆ. ಅಲ್ಲದೆ ಸಾಲ ಮಾಡಿ ನಾನೇ ಅವರಿಗೆ ಸಂಬಳ ನೀಡಿದ್ದೇನೆ. ನನ್ನ ಕೈಯಲ್ಲಿ ಆದಷ್ಟು ಮಾಡಿದ್ದೇನೆ. ಆದರೆ ಈಗ ನನ್ನಿಂದ ಆಗುತ್ತಿಲ್ಲ. ಹಾಗಾಗಿ ಕ್ಯಾಂಟೀನ್ ಕ್ಲೋಸ್ ಮಾಡಿದ್ದೇನೆ ಎಂದು ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಹೇಳಿದ್ದಾರೆ.

    ಇಂದಿರಾ ಕ್ಯಾಂಟೀನ್‍ಗೆ ಬಡವರು, ಗ್ಯಾರೆ ಕೆಲಸ ಮಾಡುವವರು ಬರುತ್ತಿದ್ದರು. ಬಡವರಿಗೆ ಅನುಕೂಲ ಆಗಲಿ ಎಂದು ಕ್ಯಾಂಟೀನ್ ನಡೆಸಲಾಗುತ್ತಿತ್ತು. ಆದರೆ ಈಗ ನನ್ನಿಂದ ಆಗುತ್ತಿಲ್ಲ. ಹಾಗಾಗಿ ಇಂದಿನಿಂದ ಕ್ಯಾಂಟೀನ್ ಕ್ಲೋಸ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

  • ಇಬ್ಬರು ಮಹಿಳೆಯರ ಪ್ರವೇಶ: ಶಬರಿಮಲೆ ಅಯ್ಯಪ್ಪ ದೇವಾಲಯ ಬಂದ್

    ಇಬ್ಬರು ಮಹಿಳೆಯರ ಪ್ರವೇಶ: ಶಬರಿಮಲೆ ಅಯ್ಯಪ್ಪ ದೇವಾಲಯ ಬಂದ್

    ತಿರುವಂತಪುರಂ: 50 ವರ್ಷ ಮೀರದ ಮಹಿಳೆಯರು ಪ್ರವೇಶಿಸಿದ ಹಿನ್ನೆಲೆಯಲ್ಲಿ ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ಬಂದ್ ಮಾಡಲಾಗಿದೆ. ಸಂಪ್ರದಾಯಕ್ಕೆ ಅಡ್ಡಿಯಾಗಿದೆ ಎಂದು ಹೇಳಿ ಅರ್ಚಕರು ದೇವಾಲಯವನ್ನು ಬಂದ್ ಮಾಡಿ  ಕಲಶ ಶುದ್ಧಿ ಮಾಡಿ ತೆರಿದಿದ್ದಾರೆ.

    ಮಹಿಳೆಯರ ಪ್ರವೇಶದಿಂದ ದೇವಾಲಯ ಅಪವಿತ್ರಗೊಂಡಿದೆ. ಹೀಗಾಗಿ ಕಲಶ ಶುದ್ಧಿಗಾಗಿ ಬಂದ್ ಮಾಡಿದ್ದೇವೆ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ. ಕಲಶ ಶುದ್ಧಿಯ ಬಳಿಕ ಬೆಳಗ್ಗೆ 11 ಗಂಟೆಯ ವೇಳೆಗೆ ದೇವಾಲಯವನ್ನು ಭಕ್ತರಿಗೆ ತೆರೆಯಲಾಗಿದೆ.

    ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಬುಧವಾರ ಬೆಳಗ್ಗೆ 3.45ಕ್ಕೆ ದೇವಾಲಯವನ್ನು ಪ್ರವೇಶಿಸಿದ್ದರು. ಈ ಸಮಯದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು ಮತ್ತು ಯಾವುದೇ ಮಾಧ್ಯಮಗಳು ಸಹ ಇರಲಿಲ್ಲ. ವಿಐಪಿ ಮತ್ತು ಮಾಧ್ಯಮಗಳ ಪ್ರವೇಶಕ್ಕೆ ಇರುವ ದ್ವಾರದಿಂದ ಇವರಿಬ್ಬರು ದೇವಾಲಯವನ್ನು ಪ್ರವೇಶಿಸಿದ್ದರು.

    ಮಹಿಳೆಯರ ಪ್ರವೇಶವನ್ನು ಖಚಿತಪಡಿಸಿದ ಕೇರಳ ಸಿಎಂ ಪಿಣಾರಯ್ ವಿಜಯನ್, ಇಬ್ಬರು ಮಹಿಳೆಯರು ಪೊಲೀಸ್ ಭದ್ರತೆಯಲ್ಲಿ ಶಬರಿಮಲೆ ಪ್ರವೇಶಿಸಿದ್ದಾರೆ. ಅವರಿಗೆ ರಕ್ಷಣೆ ನೀಡಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದು ಅವರು ತಿಳಿಸಿದ್ದಾರೆ.

    44 ವರ್ಷ ಬಿಂದು ಕಾಲೇಜು ಉಪನ್ಯಾಸಕಿ ಮತ್ತು ಸಿಪಿಐ(ಎಂ) ಕಾರ್ಯಕರ್ತೆಯಾಗಿದ್ದು, 42 ವರ್ಷದ ಕನಕದುರ್ಗ ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

    ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ 10 ವರ್ಷದಿಂದ ಮೇಲ್ಪಟ್ಟು 50 ವರ್ಷದ ಒಳಗಿನ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಈ ನಿರ್ಬಂಧವನ್ನು ತೆರವುಗೊಳಿಸಿ ಎಲ್ಲ ವಯಸ್ಸಿನ ಮಹಿಳೆಯರು ದೇವಾಲಯವನ್ನು ಪ್ರವೇಶಿಸಬಹುದು ಎನ್ನುವ ಐತಿಹಾಸಿಕ ತೀರ್ಪನ್ನು ಪ್ರಕಟಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ಪಾಜಿ ಕ್ಯಾಂಟೀನ್ ದಿಢೀರ್ ಕ್ಲೋಸ್ – ಶರವಣ ಹೇಳಿದ್ದು ಏನು?

    ಅಪ್ಪಾಜಿ ಕ್ಯಾಂಟೀನ್ ದಿಢೀರ್ ಕ್ಲೋಸ್ – ಶರವಣ ಹೇಳಿದ್ದು ಏನು?

    ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡ ಅವರ ಹೆಸರಿನಲ್ಲಿ ನಗರದ ಜೆಪಿ ಭವನದಲ್ಲಿ ಆರಂಭವಾಗಿದ್ದ ಅಪ್ಪಾಜಿ ಕ್ಯಾಂಟೀನ್ ಕ್ಲೋಸ್ ಆಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಟೀನಿಗೆ ಆಗಮಿಸದೆ ಇರುವುದೇ ಮುಚ್ಚಲು ಕಾರಣ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ತಿಳಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಶರವಣ ಅವರು, ಜೆಡಿಎಸ್ ಕಚೇರಿಯ ಆವರಣದಲ್ಲಿ ಆರಂಭವಾಗಿದ್ದ ಕ್ಯಾಂಟೀನ್ ಬರೋಬ್ಬರಿ 1 ವರ್ಷ ನಡೆದಿದ್ದು, ಆದರೆ ಕ್ಯಾಂಟೀನ್‍ಗೆ ಹೆಚ್ಚಿನ ಜನರು ಬಾರದ ಕಾರಣ ಆಹಾರ ವ್ಯರ್ಥವಾಗುತ್ತಿದೆ. ದಿನಕ್ಕೆ ಕೇವಲ 50 ರಿಂದ 100 ಜನರು ಮಾತ್ರ ಬರುತ್ತಿದ್ದರು. ಆದ್ದರಿಂದ 20 ದಿನಗಳ ಹಿಂದೆಯೇ ಕ್ಯಾಂಟೀನ್ ಮುಚ್ಚುವ ತೀರ್ಮಾನ ಮಾಡಲಾಗಿತ್ತು ಎಂದರು.

    ಇದೇ ವೇಳೆ ಕ್ಯಾಂಟೀನ್ ಮುಚ್ಚಲು ದೇವೇಗೌಡ ಅವರೊಂದಿನ ಅಸಮಾಧಾನ ಕಾರಣ ಎಂಬುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಿರಿಯರಾಗಿದ್ದು, ಅವರೊಂದಿಗೆ ಯಾವುದೇ ಅಸಮಾಧಾನ ಇಲ್ಲ. ಈ ಬಗ್ಗೆ ರೇವಣ್ಣ ಅವರಿಗೆ ತಿಳಿಸಿಯೇ ತೀರ್ಮಾನ ಕೈಗೊಂಡಿದ್ದೇನೆ. ಆದರೆ ನಗರದ ಬೇರೆ ಕಡೆ ಮಾಡಲು ಚಿಂತನೆ ಇದೆ. ಊಟ ವ್ಯರ್ಥವಾಗುತ್ತಿದ್ದ ಕಾರಣವಾಗಿ ಕ್ಲೋಸ್ ಮಾಡಿದ್ದೇನೆ. ಬಸವನಗುಡಿಯಲ್ಲಿ ಇರುವ ಕ್ಯಾಂಟೀನ್‍ನಲ್ಲಿ ಪ್ರತಿ ದಿನ 3,500 ಮಂದಿ ಊಟ ಸೇವಿಸುತ್ತಾರೆ. ದಿನಕ್ಕೆ 100 ಜನರು ಹೆಚ್ಚಾಗುತ್ತಿದ್ದಾರೆ. ಅದ್ದರಿಂದ ಹಸಿದವರಿಗೆ ಊಟ ನೀಡುವ ನನ್ನ ಉದ್ದೇಶ ಮುಂದುವರೆಯುತ್ತದೆ ಎಂದರು.

    ಸಚಿವ ಸ್ಥಾನದ ಆಕಾಂಕ್ಷೀಯಾಗಿದ್ದೆ. ಆದರೆ ಈ ಹಂತದಲ್ಲಿ ನನಗೆ ಅವಕಾಶ ನೀಡಲು ಸಾಧ್ಯವಾಗಿಲ್ಲ. ಈ ಬಗ್ಗೆ ನನ್ನ ಸಮಾಜದ ಹಲವರು ಪ್ರಶ್ನೆ ಮಾಡುತ್ತಾರೆ. ಇತ್ತ ಸಿಎಂ ಕುಮಾರಸ್ವಾಮಿ ಅವರಿಗೆ ಸರ್ಕಾರ ನಡೆಸೋದು ಕಷ್ಟ ಆಗುತ್ತಿದೆ. ಸಚಿವ ಸ್ಥಾನ ಬಗ್ಗೆ ದೇವೇಗೌಡರಿಗೂ ತಿಳಿದಿದೆ. ಆದರೆ ಅವರಿಗೂ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಚಿನ ಒತ್ತಡ ಇದೆ. ಪಕ್ಷದ ವಿಚಾರದಲ್ಲಿ ಈ ಕುರಿತು ಚರ್ಚೆ ನಡೆಸಿ ಮುಂದಿನ ಹಂತದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಆದರೆ ನಮ್ಮ ಸಮುದಾಯದ ಜನರು ಈ ಬಗ್ಗೆ ಪ್ರಶ್ನೆ ಮಾಡಿದ ವೇಳೆ ನೋವಾಗುತ್ತದೆ. ಆದರೆ ಕಿತ್ತಾಟ ನಡೆಸಿ ಸಚಿವ ಸ್ಥಾನ ಪಡೆಯುವುದು ಜೆಡಿಎಸ್ ಪಕ್ಷದಲ್ಲಿ ಇಲ್ಲ. ಅದ್ದರಿಂದ ಮುಂದೇ ಸೂಕ್ತ ಸ್ಥಾನಮಾನ ಸಿಗುವ ಬಗ್ಗೆ ವಿಶ್ವಾಸ ಇದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಯರ್ ಎಂಡ್‍ನಲ್ಲಿ ಬೆಂಗಳೂರಿನ ಎಟಿಎಂಗಳಿಗೆ ಸರ್ಜಿಕಲ್ ಸ್ಟ್ರೈಕ್!

    ಇಯರ್ ಎಂಡ್‍ನಲ್ಲಿ ಬೆಂಗಳೂರಿನ ಎಟಿಎಂಗಳಿಗೆ ಸರ್ಜಿಕಲ್ ಸ್ಟ್ರೈಕ್!

    – ನಗರದಲ್ಲಿ ಶೇ.30 ರಿಂದ 40 ರಷ್ಟು ಎಟಿಎಂ ಕ್ಲೋಸ್?
    – ಬಹುತೇಕ ಎಟಿಎಂ ಮುಂದೆ ರಾರಾಜಿಸುತ್ತಿದೆ ನೋ ಕ್ಯಾಶ್ ಬೋರ್ಡ್

    ಬೆಂಗಳೂರು: ಈಗಾಗಲೇ ನಗರದ ಅನೇಕ ಎಟಿಎಂಗಳಲ್ಲಿ ನೋ ಕ್ಯಾಶ್ ಬೋರ್ಡ್ ಬಿದ್ದಿದೆ. ಈಗ ವರ್ಷದ ಕೊನೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನೋಟ್ ಬ್ಯಾನಿನ ನಂತರ ಮತ್ತೆ ಹಣ ಪಡೆಯಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ಇತ್ತೀಚೆಗೆ ನಗರದ ಕೆಲ ಎಟಿಎಂಗೆ ಹೋದರೆ ಅಲ್ಲಿ ನೋ ಕ್ಯಾಶ್ ಬೋರ್ಡ್ ಹಾಕಿರುತ್ತದೆ. ಈಗ ಸದ್ದಿಲ್ಲದೇ ನಗರದಲ್ಲಿ ಎಟಿಎಂಗಳು ಮಾಯವಾಗುತ್ತಿದ್ದು, ಈಗಾಗಲೇ ನಗರದಲ್ಲಿ ಶೇ.30 ರಿಂದ 40 ರಷ್ಟು ಎಟಿಎಂಗಳು ಕ್ಲೋಸ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದರಲ್ಲೂ ರಾಷ್ಟ್ರೀಕೃತ ಬ್ಯಾಂಕ್‍ಗಳ ಎಟಿಎಂಗಳೇ ಹೆಚ್ಚು ಅನ್ನೋ ಮಾಹಿತಿಯನ್ನು ಬ್ಯಾಂಕ್ ಯೂನಿಯನ್‍ಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ. ಇದನ್ನೂ ಓದಿ: ಎಟಿಎಂಗೆ ಹಣ ತುಂಬಲು ಸಮಯ ನಿಗದಿ- ಗೃಹ ಸಚಿವಾಲಯದಿಂದ ಆದೇಶ

    ಎಟಿಎಂ ಕ್ಲೋಸ್ ಆಗಿದ್ಯಾಕೆ?
    1. ಆರ್ ಬಿಐ ಮಾರ್ಚ್ 2019ಕ್ಕೆ ಎಟಿಎಂಗಳಿಗೆ ಕೆಲವೊಂದು ಸುರಕ್ಷತಾ ಮಾನದಂಡ ಅಳವಡಿಸಲು ಡೆಡ್‍ಲೈನ್ ನೀಡಿದೆ. ಇದರಿಂದ ನಿರ್ವಹಣಾ ವೆಚ್ಚ ಹೆಚ್ಚಾಗಲಿದ್ದು, ಇದನ್ನು ಭರಿಸಲು ಸಾಧ್ಯವಿಲ್ಲ ಅನ್ನೋದು ಎಟಿಎಂ ಉದ್ಯಮ ಒಕ್ಕೂಟ ಹಾಗೂ ಬ್ಯಾಂಕುಗಳ ವಾದವಾಗಿದೆ.
    2. ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ನಷ್ಟದ ಪ್ರಮಾಣ ತಡೆಯಲು ಸಾಧ್ಯವಿಲ್ಲ ಎಂದು ಹೇಳಿ ಎಟಿಎಂ ಕ್ಲೋಸ್.
    3. ಆರ್ ಬಿಐನಿಂದ ನಗದು ವಿತರಣೆ ಕಡಿಮೆಯಾಗುತ್ತಿದೆ. ಉದ್ದೇಶ ಪೂರ್ವಕವಾಗಿ ದುಡ್ಡು ಸರಬಾರಾಜು ಕಡಿಮೆ ಮಾಡಿದ್ದಾರೆ. ಎಟಿಎಂಗಳಿಗೆ ಕ್ಯಾಶ್ ತುಂಬಿಸಲು ಆಗುತ್ತಿಲ್ಲ ಅನ್ನೋದು ಬ್ಯಾಂಕ್‍ಗಳ ದೂರು.

    ಬ್ಯಾಂಕ್‍ಗಳ ವಾದ ಇದಾಗಿದ್ದರೆ ಜನ ಬೇಸತ್ತು ಹೋಗಿದ್ದಾರೆ. ಬಹುತೇಕ ಎಟಿಎಂಗಳು ಕ್ಲೋಸ್ ಆಗಿರುವುದರಿಂದ ತೊಂದರೆಯಾಗುತ್ತಿದೆ. ಬ್ಯಾಂಕ್‍ಗಳಲ್ಲಿ ಕ್ಯೂ ಇರುವುದರಿಂದ ಕ್ಯಾಶ್ ತೆಗೆದುಕೊಳ್ಳೋಕೆ ಸಾಧ್ಯವಾಗುವುದಿಲ್ಲ ಎಂದು ಗ್ರಾಹಕ ನವೀನ್ ದೂರಿದ್ದಾರೆ.

    ಏಕೆ ಎಟಿಎಂ ಮುಚ್ಚಲಾಗುತ್ತಿದೆ?:
    ಎಟಿಎಂಗಳ ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್, ಹಣ ಸಾಗಾಣಿಕೆ ವಾಹನ, ಎಟಿಎಂನ ಕೆಸೆಟ್ ಸಾಕೆಟ್ ಅಭಿವೃದ್ಧಿ (ಹೊಸ ನೋಟುಗಳನ್ನು ಇಡಲು ಆಗುವಂತೆ ಟ್ರೇಗಳನ್ನು ಮರುಹೊಂದಾಣಿಕೆಗೆ) ಭಾರೀ ವೆಚ್ಚ ಮಾಡಲಾಗುತ್ತಿದೆ. ಹೀಗಾಗಿ ದೇಶದಲ್ಲಿರುವ ಎಲ್ಲಾ ಎಟಿಎಂಗಳನ್ನು ಅಭಿವೃದ್ಧಿ ಪಡಿಸಲು ಆರ್ಥಿಕ ಹೊರೆ ಆಗಲಿದೆ. ಕೇವಲ ಕೆಸೆಟ್ ಅಭಿವೃದ್ಧಿಗೆ ಒಟ್ಟು 3.5 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ ಎಂದು ಎಟಿಎಂ ಉದ್ಯಮ ಒಕ್ಕೂಟ(ಸಿಎಟಿಎಂಐ) ನಿರ್ದೇಶಕ ವಿ.ಬಾಲಸುಬ್ರಹ್ಮಣ್ಯಂ ತಿಳಿಸಿದ್ದರು.

    ಗೃಹ ಸಚಿವಾಲಯ ಇತ್ತೀಚೆಗೆ ಸೂಚನೆ ನೀಡಿದಂತೆ ಜಿಪಿಎಸ್, ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ 300 ವಾಹನಗಳ ಖರೀದಿಗೆ 100 ಕೋಟಿ ರೂ. ಅಗತ್ಯವಾಗುತ್ತದೆ. ಅದರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ, ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಚಾಲಕ ಪ್ರಯಾಣಿಸಬಲ್ಲರು. ಜೊತೆಗೆ ಸಾಫ್ಟ್ ವೇರ್ ಅನ್ನು ವಿಂಡೋಸ್ ಎಕ್ಸ್ ಪಿ ಯಿಂದ ವಿಂಡೋಸ್-10 ಗೆ ಅಭಿವೃದ್ಧಿಪಡಿಸಲು ಹಣ ಖರ್ಚು ಮಾಡಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

    ಸಾಫ್ಟ್ ವೇರ್, ಹಾರ್ಡ್ ವೇರ್ ಬದಲಾವಣೆ, ನಿರ್ವಹಣೆಗೆ ಒಂದು ಎಟಿಎಂಗೆ ಪ್ರತಿ ತಿಂಗಳಿಗೆ 1.50 ಲಕ್ಷ ರೂ. ವೆಚ್ಚವಾಗುತ್ತದೆ. ಇದೇ ರೀತಿ ದೇಶದ 2.38 ಲಕ್ಷ ಎಟಿಎಂಗಳನ್ನು ನಿರ್ವಹಣೆ ಮಾಡುವುದು ಕಷ್ಟಕರ. ಈ ರೀತಿಯ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಎಟಿಎಂ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

    ದೇಶದಲ್ಲಿರುವ ಎಟಿಎಂಗಳಲ್ಲಿ ಶೇ.10ರಷ್ಟು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ದೇಶದ ಜನಸಂಖ್ಯೆ ಪ್ರಕಾರ ಒಂದು ಲಕ್ಷ ಎಟಿಎಂಗಳು ನಿರಂತರವಾಗಿ ಕಾರ್ಯನಿರ್ವಹಿಸಿದರೆ ಸಾಕಾಗುತ್ತದೆ ಎನ್ನಲಾಗುತ್ತದೆ. 2.38 ಲಕ್ಷ ಎಟಿಎಂಗಳಲ್ಲಿ ಶೇ. 80ರಷ್ಟು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯ ಎಟಿಎಂಗಳು ಮುಚ್ಚಲಿವೆ. ಇದರಿಂದ ಸರ್ಕಾರದ ಆರ್ಥಿಕ ಸೇರ್ಪಡೆ ಪ್ರಯತ್ನದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರಲಿದೆ. ಫಲಾನುಭವಿಗಳಿಗೆ ಸರ್ಕಾರದ ಸಬ್ಸಿಡಿ ಹಣ ಪಡೆಯುವುದು ಕಷ್ಟವಾಗಲಿದೆ ಎಂದು ವಿ.ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಯಲಾಯ್ತು ಪ್ರಹ್ಲಾದ್ ಜೋಷಿ ಆಪ್ತರ ಆಟ

    ಬಯಲಾಯ್ತು ಪ್ರಹ್ಲಾದ್ ಜೋಷಿ ಆಪ್ತರ ಆಟ

    – ನಕಲಿ ದಾಖಲೆ ಸೃಷ್ಟಿಸಿ ವಿವಿಯಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದ ಪರಮಾಪ್ತರು

    ಬೆಂಗಳೂರು: ಬೀದರ್ ನಲ್ಲಿರುವ ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಸಂಸದ ಪ್ರಹ್ಲಾದ್ ಜೋಶಿಯವರ ಪರಮಾಪ್ತರು ನಕಲಿ ದಾಖಲೆ ಸೃಷ್ಟಿಸಿ ಹುದ್ದೆ ಪಡೆದುಕೊಂಡಿದ್ದ ವಿಷಯ ಈಗ ಬಯಲಾಗಿದೆ.

    ಧಾರವಾಡದ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿರುವ ಈರೇಶ್ ಅಂಚಟಗೇರಿ ಹಾಗೂ ಟಿ ಮುಕುಂದ ವರ್ಮ ಸುಳ್ಳು ಪ್ರಮಾಣ ಪತ್ರ ಕೊಟ್ಟು ವಿವಿಯಲ್ಲಿ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. ಇವರಿಬ್ಬರೂ ಸಹ ಪ್ರಹ್ಲಾದ್ ಜೋಷಿಯವರ ಬಲಗೈ ಬಂಟರಾಗಿದ್ದಾರೆ.

    ವಿವಿಯಲ್ಲಿ ಪ್ರಗತಿಪರ ಮೀನುಗಾರರು, ರೈತರು ಹಾಗೂ ಶಿಕ್ಷಣ ತಜ್ಞರು ಸದಸ್ಯರಾಗಲು ಅವಕಾಶ ಇದೆ. ಆದರೆ ಇಬ್ಬರೂ ಒಂದು ಬಾರಿ ಪ್ರಗತಿಪರ ರೈತ ಹಾಗೂ ಇನ್ನೊಂದು ಬಾರಿ ಶಿಕ್ಷಣ ತಜ್ಞ ಎಂದು ಹೇಳಿ ಎರಡು ಬಾರಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೇ ಪ್ರಹ್ಲಾದ್ ಜೋಷಿಯವರ ಪ್ರಭಾವದ ಮೂಲಕ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ರಾಜ್ಯಪಾಲರೂ ಅಂಕಿತ ಹಾಕಿದ್ದರೆನ್ನುವ ಆರೋಪವು ಕೇಳಿ ಬರುತ್ತಿದೆ.

    ವಿವಿ ನಿಯಮಗಳ ಪ್ರಕಾರ ಒಂದು ಬಾರಿ ಮಾತ್ರ ಬೋರ್ಡ್ ಮೆಂಬರ್ ಆಗಿ ಆಯ್ಕೆಯಾಗಬಹುದು. ಆದರೆ ಜೋಷಿ ಆಪ್ತರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ವಿವಿಯ ಬೋರ್ಡ್ ಸದಸ್ಯ ಸ್ಥಾನಗಳು ಕೇವಲ ಪ್ರಗತಿಪರ ರೈತರು, ಮೀನುಗಾರರು ಹಾಗೂ ಶಿಕ್ಷಣ ತಜ್ಞರಿಗೆ ಮೀಸಲಿದೆ. ಆದರೆ ಇವರಿಬ್ಬರೂ ರಾಜಕೀಯ ಪ್ರಭಾರ ಬೀರಿ ತಮ್ಮ ವಶ ಮಾಡಿಕೊಂಡಿದ್ದಾರೆ. ಸದ್ಯ ಜೋಷಿ ಆಪ್ತರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ವಿವಿಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಎಸ್.ಈಶ್ವರಪ್ಪ, ಅರ್ಹರಿಗೆ ಸಿಗಬೇಕಾದ ಹುದ್ದೆಗಳು ಪುಡಾರಿಗಳು, ರಾಜಕೀಯ ಪ್ರಭಾವಿಗಳಿಗೆ ಸಿಗುತ್ತಿವೆ. ರಾಜಕೀಯ ಪ್ರಭಾವ ಬೀರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎರಡೆರಡು ಬಾರಿ ಸದಸ್ಯರಾಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈತರ ಸಾಲ ವಸೂಲಾಗದ್ದಕ್ಕೆ ಶಾಖೆ ಮುಚ್ಚಲು ಮುಂದಾದ ಎಸ್‍ಬಿಐ!

    ರೈತರ ಸಾಲ ವಸೂಲಾಗದ್ದಕ್ಕೆ ಶಾಖೆ ಮುಚ್ಚಲು ಮುಂದಾದ ಎಸ್‍ಬಿಐ!

    ತುಮಕೂರು: ರೈತರ ಸಾಲ ವಸೂಲಾಗದ ಕಾರಣ ಜಿಲ್ಲೆಯ ಪಾವಗಡ ತಾಲೂಕಿನ ಅರಿಸಿಕೆರೆಯ ಶಾಖೆಯನ್ನು ಮುಚ್ಚಲು ಸ್ಟೇಟ್ ಬ್ಯಾಂಕ್ ಇಂಡಿಯಾ ಮುಂದಾಗಿದೆ.

    ಹೌದು, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿ, ಋಣಮುಕ್ತ ಪತ್ರವನ್ನು ರೈತರ ಮನೆಬಾಗಿಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯದ ಕೆಲವು ಬ್ಯಾಂಕುಗಳು ರೈತರಿಂದ ಸಾಲ ವಸೂಲಿಯಾಗದೇ ಇರುವ ಕಾರಣಕ್ಕೆ ಬ್ಯಾಂಕ್ ಶಾಖೆಗಳನ್ನೇ ಮುಚ್ಚಲು ಮುಂದಾಗುತ್ತಿವೆ.

    ಪಾವಗಡ ತಾಲೂಕಿನ ಅರಿಸಿಕೆರೆಯ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯನ್ನು ಮುಚ್ಚಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಶಾಖೆಯಲ್ಲಿ ಸುಮಾರು 2 ಕೋಟಿ ರೂಪಾಯಿ ಸಾಲವನ್ನು ರೈತರಿಗೆ ನೀಡಿದ್ದು, ಇದೂವರೆಗೂ ರೈತರಿಂದ ಸಾಲ ವಸೂಲಿ ಆಗಿಲ್ಲ. ಹೀಗಾಗಿ ಬ್ಯಾಂಕ್ ನಷ್ಟದಲ್ಲಿದೆ ಎಂದು ವರದಿ ನೀಡಿ ಬಂದ್ ಮಾಡಲು ನಿರ್ಧರಿಸಿದ್ದಾರೆ.

    ಬ್ಯಾಂಕ್ ಮುಚ್ಚುವ ಅಧಿಕಾರಿಗಳ ನಿರ್ಧಾರಕ್ಕೆ, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಆವರಣದಲ್ಲಿ ಶಾಖೆ ಮುಚ್ಚದಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲೇ ಈ ಬ್ಯಾಂಕಿನಲ್ಲಿ ವಾರ್ಷಿಕ 17 ಕೋಟಿ ರೂ. ವಹಿವಾಟು ನಡೆಯುತ್ತಿದೂ, ಆದರೂ ಅಧಿಕಾರಿಗಳು ಬ್ಯಾಂಕ್ ಮುಚ್ಚಲು ಮುಂದಾಗುತ್ತಿದ್ದಾರೆ. ಅಲ್ಲದೇ ವಾರ್ಷಿಕ ಕೇವಲ 6 ಕೋಟಿ ರೂ. ವ್ಯವಹಾರ ನಡೆಯುವ ಮಂಗಳವಾಡಾ ಶಾಖೆಗೆ ವಿಲೀನಗೊಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುತ್ತತ್ತಿ ಆಂಜನೇಯ ಸ್ವಾಮಿ ದೇವಸ್ಥಾನ ಬಂದ್

    ಮುತ್ತತ್ತಿ ಆಂಜನೇಯ ಸ್ವಾಮಿ ದೇವಸ್ಥಾನ ಬಂದ್

    ಮಂಡ್ಯ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಳವಳ್ಳಿ ತಾಲೂಕಿನ ಪ್ರಸಿದ್ಧ ಮುತ್ತತ್ತಿ ಆಂಜನೇಯ ಸ್ವಾಮಿ ದೇವಾಲಯವನ್ನು ಬಂದ್ ಮಾಡಿರುವುದಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

    ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಅಲ್ಲದೇ ಕೆಆರ್‍ಎಸ್ ಅಣೆಕಟ್ಟಿನಿಂದಲೂ ಕಾವೇರಿ ನದಿಗೆ 1.20 ಲಕ್ಷ ಕ್ಯೂಸೆಕ್ ನೀರನ್ನು ಹರಿದುಬಿಡಲಾಗಿದೆ. ಹೀಗಾಗಿ ಕಾವೇರಿ ತಟದಲ್ಲೇ ಬರುವ ಮಳವಳ್ಳಿ ತಾಲೂಕಿನ ಅರಣ್ಯವ್ಯಾಪ್ತಿಯಲ್ಲಿನ ಮುತ್ತತ್ತಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪ್ರವಾಸಿಗರು ಹಾಗೂ ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.

    ಮುತ್ತತ್ತಿಗೆ ಪ್ರತಿನಿತ್ಯ ಬರುವ ಸಾವಿರಾರು ಜನರು ಕಾವೇರಿ ನದಿಯಲ್ಲಿ ಮಿಂದು ಆಂಜನೇಯ ಸ್ವಾಮಿಯನ್ನು ದರ್ಶನ ಪಡೆಯುವುದು ಪ್ರತೀತಿ. ಆದರೆ ಕಾವೇರಿ ನದಿಯು ಅಪಾಯದ ಮಟ್ಟಮೀರಿ ಹರಿಯುತ್ತಿರುವುದರಿಂದ ಪ್ರವಾಸಿಗರನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟರೆ ಅವರು ನದಿಗಿಳಿದು ಪ್ರಾಣ ಕಳೆದುಕೊಳ್ಳುವ ಸಂಭವ ಹೆಚ್ಚುತ್ತದೆ. ಅಷ್ಟೇ ಅಲ್ಲದೇ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಇರುವ ರಸ್ತೆಗಳ ಮೇಲೂ ಸಹ ನೀರು ಹರಿಯುತ್ತಿದೆ. ಹೀಗಾಗಿ ಮುತ್ತತ್ತಿ ಅರಣ್ಯ ಪ್ರದೇಶ ಪ್ರವೇಶಕ್ಕೆ ಪ್ರವಾಸಿಗರಿಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಿಷೇಧ ಹೇರಿದೆ.

    ಈಗಾಗಲೇ ಮುತ್ತತ್ತಿ ಪ್ರವಾಸಕ್ಕೆ ಬರುತ್ತಿರುವವರನ್ನು ಚೆಕ್‍ಪೋಸ್ಟ್ ಬಳಿಯೇ ತಡೆದು ವಾಪಸ್ ಕಳುಹಿಸಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಮುತ್ತತ್ತಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv