Tag: Clear

  • ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್ ತೆರವುಗೊಳಿಸುವ ಕೆಲಸ ಇನ್ನಷ್ಟು ವೇಗವಾಗಿ ನಡೆಯಲಿ: ಗೌರವ್ ಗುಪ್ತ

    ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್ ತೆರವುಗೊಳಿಸುವ ಕೆಲಸ ಇನ್ನಷ್ಟು ವೇಗವಾಗಿ ನಡೆಯಲಿ: ಗೌರವ್ ಗುಪ್ತ

    ಬೆಂಗಳೂರು: ನಗರದಲ್ಲಿನ ಅನಧಿಕೃತ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್‍ಗಳನ್ನು ತೆರವುಗೊಳಿಸುವ ಕೆಲಸ ಇನ್ನಷ್ಟು ವೇಗವಾಗಿ ನಡೆಯಬೇಕಿದ್ದು, ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಅಧಿಕಾರಿಗಳು ತತ್‍ಕ್ಷಣ ಕಾರ್ಯಪ್ರವೃತ್ತರಾಗಿ ತೆರವು ಕಾರ್ಯಾಚರಣೆ ನಡೆಸಬೇಕೆಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತರವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಮತ್ತು ಬ್ಯಾನರ್ಸ್‍ಗಳ ತೆರವುಗೊಳಿಸುವಿಕೆ ಬಗ್ಗೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್‍ಗಳನ್ನು ವ್ಯಾಪಕವಾಗಿ ಅಳವಡಿಸಲಾಗುತ್ತಿದೆ. ಆಯಾ ವಲಯ ವ್ಯಾಪ್ತಿಯಲ್ಲಿಯ ಸ್ಥಳೀಯ ಅಧಿಕಾರಿಗಳು ಯಾವುದೇ ಫ್ಲೆಕ್ಸ್‍ಗಳನ್ನು ಅಳವಡಿಸಲು ಬಿಡಬಾರದು. ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸುವಂತಹವರ ಮೇಲೆ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಫ್‍ಐಆರ್ ದಾಖಲಿಸಲು ಸೂಚನೆ ನೀಡಿದರು. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ

    ಚುನಾವಣೆಯ ಸಂದರ್ಭದಲ್ಲಿ ಹೇಗೆ ನಗರವು ಬ್ಯಾನರ್ಸ್, ಫ್ಲೆಕ್ಸ್‍ಗಳಿಂದ ಮುಕ್ತವಾಗಿರುತ್ತದೆಯೋ ಅದೇ ರೀತಿ ಈಗಲೂ ಕೂಡ ನಗರವು ಬ್ಯಾನರ್ಸ್, ಫ್ಲೆಕ್ಸ್‍ಗಳಿಂದ ಮುಕ್ತವಾಗಿರಬೇಕು. ನಗರದಲ್ಲಿ ಎಲ್ಲೆಲ್ಲಿ ಹೆಚ್ಚಾಗಿ ಫ್ಲೆಕ್ಸ್, ಬ್ಯಾನರ್‍ಗಳನ್ನು ಅಳವಡಿಸಲಾಗಿದೆಯೋ ಅಂತಹ ಸ್ಥಳಗಳಲ್ಲಿ ಪೊಲೀಸ್ ಸಹಯೋಗದ ಜೊತೆಗೆ ಮಾರ್ಷಲ್‍ಗಳನ್ನು ಸಹ ನಿಯೋಜನೆ ಮಾಡಿಕೊಂಡು ತೆರವುಗೊಳಿಸಲು ಮುಂದಾಗಬೇಕು. ಪಾಲಿಕೆಯ ಶಿಲ್ಟ್ ಅಂಡ್ ಟ್ರ್ಯಾಕ್ಟರ್, ಪ್ರಹಾರಿ ಸೇರಿದಂತೆ ಹೆಚ್ಚುವರಿಯಾಗಿ ಇನ್ನಿತರೆ ವಾಹನಗಳು ಹಾಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ತೆರವು ಕಾರ್ಯಾರಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದಲ್ಲಿ ಫ್ಲೆಕ್ಸ್, ಬ್ಯಾನರ್ಸ್, ಬಂಟಿಗ್ಸ್, ಭಿತ್ತಿಪತ್ರ, ಬಾವುಟಗಳು ಸೇರಿದಂತೆ ಇತ್ಯಾದಿ ಜಾಹೀರಾತು/ಪ್ರಕಟಣೆಗಳ ಅಳವಡಿಕೆಯು ಬಿಬಿಎಂಪಿ ಕಾಯ್ದೆ 2020 ಮತ್ತು ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಕಲಂ(3)ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದರು.

    ಆದರೂ ಸಹ ನಗರದಲ್ಲಿ ಮತ್ತೆ ಮತ್ತೆ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾರ್ನರ್‍ಗಳನ್ನು ಅಳವಡಿಸಿ ನಗರದ ಸೌಂದರ್ಯ ಹಾಳಾಗುವಂತಹ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ಪಾಲಿಕೆಯ ಎಲ್ಲಾ ವಲಯಗಳಲ್ಲಿಯೂ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡು ತೆರವು ಕಾರ್ಯಾಚರಣೆ ಮಾಡಿ, ಯಾವುದೇ ಅನಧಿಕೃತ ಫ್ಲೆಕ್ಸ್‍ಗಳು ಇರದಂತೆ ಕ್ರಮವಹಿಸಲು ಸೂಚನೆ ನೀಡಿದರು.  ಇದನ್ನೂ ಓದಿ: ನಮ್ಮ ಸ್ವಂತ ಜನರನ್ನು ನಾವು ಬಿಟ್ಟುಕೊಡಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

    ಪೊಲೀಸ್ ಇಲಾಖೆಯಿಂದ ಸಹಯೋಗ ನೀಡಲು ಮನವಿ:
    ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಸ್, ಬಂಟಿಗ್ಸ್‍ಗಳನ್ನು ಅಳವಡಿಸುವ ಪ್ರಕ್ರಿಯೆ ಹೆಚ್ಚಾಗಿದ್ದು, ಇದರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಸಿಬ್ಬಂದಿಯು ಅನಧಿಕೃತ ಫ್ಲೆಕ್ಸ್‍ಗಳನ್ನು ತೆರವುಗೊಳಿಸುವ ವೇಳೆ ಪಾಲಿಕೆ ಅಧಿಕಾರಿಗಳ ಜೊತೆ ತೆರಳಿ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು.

    ಇದಕ್ಕೆ ಪೊಲೀಸ್ ಇಲಾಖೆಗೆ ಸಹಕಾರ ಅತ್ಯಗತ್ಯ ಎಂದು ಮುಖ್ಯ ಆಯುಕ್ತರು ನಗರ ಪೆÇಲೀಸ್ ಆಯುಕ್ತರಾದ ಕಮಲ್ ಪಂತ್‍ರವರಿಗೆ ಮನವಿ ಮಾಡಿದರು. ಈ ವೇಳೆ ನಗರ ಪೆÇಲೀಸ್ ಆಯುಕ್ತರಾದ ಕಮಲ್ ಪಂತ್‍ರವರು ಪ್ರತಿಕ್ರಿಯಿಸಿ, ಪಾಲಿಕೆಯ ಜೊತೆಗೆ ನಮ್ಮ ಅಧಿಕಾರಿಗಳು ಕೈಜೋಡಿಸಿ ಕಾರ್ಯನಿರ್ವಹಿಸಲಿದ್ದು, ಪಾಲಿಕೆ ಅಧಿಕಾರಿಗಳಿಗೆ ಬೇಕಾದಂತಹ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

    ಸಭೆಯಲ್ಲಿ ಪಾಲಿಕೆಯ ಎಲ್ಲಾ ವಲಯ ಆಯುಕ್ತರುಗಳು, ಹಣಕಾಸು ವಿಭಾಗದ ಅಪರ ಆಯುಕ್ತರು ವೆಂಕಟೇಶ್. ಎಸ್, ಎಲ್ಲಾ ವಲಯ ಜಂಟಿ ಆಯುಕ್ತರುಗಳು, ಎಲ್ಲಾ ವಲಯ ಮುಖ್ಯ ಇಂಜಿನಿಯರ್‌ಗಳು ಎಲ್ಲಾ ವಿಭಾಗೀಯ ಕಾರ್ಯಪಾಲಕ ಇಂಜಿನಿಯರ್‍ಗಳು ಇತರ ಅಧಿಕಾರಿಗಳು ಉಪಸ್ಥಿರಿದ್ದರು.

  • ‘ಮೋದಿ ಹೇಳಿಕೆಯನ್ನು ತಿರುಚಲಾಗಿದೆ’ – ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ

    ‘ಮೋದಿ ಹೇಳಿಕೆಯನ್ನು ತಿರುಚಲಾಗಿದೆ’ – ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ

    ನವದೆಹಲಿ: ನಮ್ಮ ಸಶಸ್ತ್ರ ಪಡೆಗಳ ಧೈರ್ಯದ ಪರಿಣಾಮ ಎಲ್‍ಎಸಿ(ಗಡಿ ವಾಸ್ತವಿಕ ರೇಖೆ) ದಾಟಲು ಚೀನಾ ಸೈನಿಕರಿಂದ ಸಾಧ್ಯವಾಗಲಿಲ್ಲ. 16 ಬಿಹಾರ ರೆಜಿಮೆಂಟ್‍ನ ಸೈನಿಕರ ತ್ಯಾಗವೂ ಚೀನಾ ಸೈನಿಕರು ಭಾರತದ ಗಡಿ ದಾಟುವ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಸ್ಪಷ್ಟನೆ ನೀಡಿದೆ.

    ಭಾರತದ ಒಂದಿಂಚು ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಹೇಳಿದ್ದರು ಎನ್ನಲಾದ ಸುದ್ದಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

    ಚೀನಾ ಆಕ್ರಮಣಕ್ಕೆ ಪ್ರಧಾನಿ ಮೋದಿ ಭಾರತದ ಭೂ ಭಾಗವನ್ನು ಒಪ್ಪಿಸಿದ್ದಾರೆ. ಚೀನಾ ಭಾರತದ ಭೂಭಾಗ ಆಕ್ರಮಣ ಮಾಡಿಕೊಳ್ಳದಿದ್ದರೆ ಸೈನಿಕರ ಹತ್ಯೆ ಆಗಿದ್ದು ಏಕೆ? ಮತ್ತು ನಮ್ಮವರು ಎಲ್ಲಿ ಕೊಲ್ಲಲ್ಪಟ್ಟರು ಎಂದು ಖಾರವಾಗಿ ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದಂತೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಸ್ಪಷ್ಟನೆ ನೀಡಿದೆ.

    ಎರಡು ಪುಟಗಳ ಸ್ಪಷ್ಟೀಕರಣ ಹೇಳಿಕೆಯಲ್ಲಿ ಯಾರು ಚೀನಾ ಸೈನಿಕರು ಭಾರತದ ಗಡಿಯನ್ನು ದಾಟಿಲ್ಲ ಮತ್ತು ನಮ್ಮ ಯಾವ ಸೈನಿಕರನ್ನು ಚೀನಾ ಸೆರೆಹಿಡಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ತಿಳಿಸಿದ್ದಾರೆ. ಆದರೆ ಮೋದಿ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಸ್ಪಷ್ಟನೆಯಲ್ಲಿ ತಿಳಿಸಿದೆ.

    ಜೂನ್ 15ರಂದು ಗಾಲ್ವಾನ್‍ನಲ್ಲಿ ಭಾರತ ಚೀನಾದ ಗಡಿ ಭಾಗದಲ್ಲಿ ಚೀನಾ ಬಲ ಹೆಚ್ಚಿಸಿಕೊಂಡಿತ್ತು ಮತ್ತು ಗಡಿ ದಾಟುವ ಪ್ರಯತ್ನ ಮಾಡಿತ್ತು. ನಮ್ಮ ಸಶಸ್ತ್ರ ಪಡೆಗಳ ಅವರನ್ನು ಹಿಮ್ಮೆಟ್ಟಿಸುವ ಕಾರ್ಯ ಮಾಡಿದ್ದಾರೆ. ಈ ವೇಳೆ ಸೈನಿಕರು ಮುಖಾಮುಖಿಯಾಗಿ ಘರ್ಷಣೆ ಸಂಭವಿಸಿದ್ದು 20 ಭಾರತೀಯ ಸೈನಿಕರ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಮೋದಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಲಾಗಿದೆ.

    ಗಡಿಯಲ್ಲಿ ಬಲ ಹೆಚ್ಚಿಸಿಕೊಂಡು ಚೀನಾ ಅತಿಕ್ರಮಣಕ್ಕೆ ಪ್ರಯತ್ನ ಮಾಡುತ್ತಿದೆ. ಇದು ಪರಿಸ್ಥಿತಿ ಉದ್ವಿಗ್ನತೆಗೆ ಕಾರಣವಾಗಿದೆ. ಆದರೆ ಭಾರತ ಗಡಿಯಲ್ಲಿ ಸೂಕ್ತ ಉತ್ತರ ನೀಡುತ್ತಿದೆ ಎಂದು ವಿರೋಧ ಪಕ್ಷಗಳ ಸಭೆಯಲ್ಲಿ ಪ್ರಧಾನಿ ಹೇಳಿದರು ಎಂದು ಪ್ರಧಾನಮಂತ್ರಿ ಕಾರ್ಯಲಯ ಹೇಳಿದೆ.

    ಭಾರತದ ಒಂದಿಂಚು ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಹೇಳಿದರು ಎನ್ನುವ ಮಾಹಿತಿ ವರದಿಯಾಗುತ್ತದ್ದಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗಿತ್ತು ಮೋದಿ ಚೀನಾ ಆಕ್ರಮಣಕ್ಕೆ ಶರಣಾಗಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಟ್ವೀಟ್‍ಗಳಾಗಿತ್ತಿತ್ತು.

  • ಸುಪ್ರೀಂಕೋರ್ಟ್ ಆದೇಶ – ಐತಿಹಾಸಿಕ ದೇವಾಲಯ ತೆರವು

    ಸುಪ್ರೀಂಕೋರ್ಟ್ ಆದೇಶ – ಐತಿಹಾಸಿಕ ದೇವಾಲಯ ತೆರವು

    ದಾವಣಗೆರೆ: ರಾಜ್ಯದ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಉಚ್ಚಂಗಿಯಲ್ಲಮ್ಮ ದೇವಿಯ ಪಾದುಗಟ್ಟೆ ದೇವಸ್ಥಾನವನ್ನು ಇಂದು ತೆರವು ಮಾಡಲಾಯಿತು.

    ಉಚ್ಚಂಗಿದುರ್ಗ ಗ್ರಾಮದ ಮಧ್ಯದಲ್ಲಿರುವ ಉಚ್ಚಂಗಿದೇವಿಯ ಪಾದುಗಟ್ಟೆ ದೇವಸ್ಥಾನ ರಸ್ತೆ ಬದಿಯಲ್ಲಿ ಇತ್ತು. ಹರಪ್ಪನಹಳ್ಳಿ ಹಾಗೂ ಉಚ್ಚಂಗಿ ದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ದೇವಾಲಯವಿದೆ. ಹೀಗಾಗಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಅಲ್ಲದೆ ಸುಪ್ರೀಂಕೋರ್ಟ್ ನ ಆದೇಶದ ಪ್ರಕಾರ ಇಂದು ತಹಶೀಲ್ದಾರ್ ಹಾಗೂ ಪೊಲೀಸರ ಭದ್ರತೆಯಲ್ಲಿ ದೇವಸ್ಥಾನವನ್ನು ಜೆಸಿಬಿ ಮುಖಾಂತರ ತೆರವುಗೊಳಿಸಿದರು.

    ನೂರಾರು ವರ್ಷಗಳ ಇತಿಹಾಸವಿರುವ ಉಚ್ಚಂಗಿ ದೇವಿಯ ದೇವಸ್ಥಾನ ಗುಡ್ಡದ ಮೇಲಿದ್ದು, ಆ ದೇವಿಯ ಪಾದಗಟ್ಟೆ ಗ್ರಾಮದ ಮಧ್ಯ ಇತ್ತು. ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನದಂದು ನೂರಾರು ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಈಗ ಏಕಾಏಕಿ ದೇವಸ್ಥಾನ ತೆರವು ಮಾಡಲು ಸುಪ್ರೀಂಕೋರ್ಟ್ ಆದೇಶ ಬರುತ್ತಿದ್ದಂತೆ ಭಕ್ತರು ಹಾಗೂ ಗ್ರಾಮಸ್ಥರು ವಿರೋಧ ಮಾಡಿದರು.

    ಜಿಲ್ಲಾಧಿಕಾರಿಗಳು, ಎಸ್.ಪಿ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶವನ್ನು ಮೀರಲು ಸಾಧ್ಯವಿಲ್ಲ ಎಂದು ಭಕ್ತರು ಹಾಗೂ ಗ್ರಾಮಸ್ಥರ ಮನವೊಲಿಸಿದ್ದರು. ಇಂದು ಬೆಳಗ್ಗೆಯಿಂದಲೇ ಜೆಸಿಬಿ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿದರು. ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯ ಈ ರೀತಿಯಾಗಿ ನೆಲಸಮ ಆಗಿರುವುದಕ್ಕೆ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು.

  • ಸಣ್ಣ ಸುದ್ದಿಯನ್ನು ಇಂಟರ್‌ನ್ಯಾಷನಲ್‌ ಸುದ್ದಿ ಮಾಡಿದ್ದಕ್ಕೆ ಧನ್ಯವಾದಗಳು: ಡಿಸಿಎಂ

    ಸಣ್ಣ ಸುದ್ದಿಯನ್ನು ಇಂಟರ್‌ನ್ಯಾಷನಲ್‌ ಸುದ್ದಿ ಮಾಡಿದ್ದಕ್ಕೆ ಧನ್ಯವಾದಗಳು: ಡಿಸಿಎಂ

    ಬೆಂಗಳೂರು: ನಗರ ಪ್ರದಕ್ಷಿಣೆ ವೇಳೆ ಅಚಾನಕ್ ಸಿಡಿದಿದ್ದ ಕೆಸರನ್ನು ಗನ್‍ಮ್ಯಾನ್ ಒರೆಸಿದ್ದಕ್ಕೆ, ಅಂಧ ದರ್ಬಾರ್ ಎಂದು ಅಂತರಾಷ್ಟ್ರೀಯ ಮಟ್ಟದ ಸುದ್ದಿಯನ್ನಾಗಿ ಮಾಡಿದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

    ಮಂಗಳವಾರ ಬೆಳಗ್ಗೆ ಡಿಸಿಎಂ ಪರಮೇಶ್ವರ್ ರವರು ತಮ್ಮ ಎರಡನೇ ದಿನದ ಸಿಟಿ ರೌಂಡ್ಸ್ ಮುಂದುವರಿಸಿದ್ದರು. ಈ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಸ್ತೆ ಮೇಲಿದ್ದ ನೀರು ಸಚಿವರ ಬಟ್ಟೆ ಹಾಗೂ ಶೂಗೆ ಸಿಡಿದಿತ್ತು. ಅಲ್ಲೇ ಇದ್ದ ತಮ್ಮ ಗನ್‍ಮ್ಯಾನ್ ಹಾಗೂ ಸಹಾಯಕರಿಗೆ ಸ್ವಚ್ಛಮಾಡುವಂತೆ ಹೇಳಿದ್ದರು. ಕೂಡಲೇ ಗನ್‍ಮ್ಯಾನ್ ತಮ್ಮ ಕರವಸ್ತ್ರದ ಮೂಲಕವೇ ಸಚಿವರ ಬಟ್ಟೆ ಹಾಗೂ ಶೂಗಳನ್ನು ಸ್ವಚ್ಛ ಮಾಡಿದ್ದರು. ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆಯೇ ಡಿಸಿಎಂ ತಮ್ಮ ಅಂಧಾ ದರ್ಬಾರ್ ಮೆರೆದಿದ್ದರು.

    ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ಏನೋ ಅಚಾನಕ್ ಆಗಿ ಕೆಸರು ಸಿಡಿದಿತ್ತು, ಕೂಡಲೇ ನಮ್ಮ ಸಿಬ್ಬಂದಿ ಬಂದು ಅದನ್ನು ಸರಿಪಡಿಸಿದರು. ಅದನ್ನೇ ನೀವು ಡಿಸಿಎಂ ಅಂಧ ದರ್ಬಾರ್ ನಡೆಸಿದ್ದಾರೆ. ಎನ್ನುವ ಮೂಲಕ ಸಣ್ಣ ಸುದ್ದಿಯನ್ನು ಅಂತರಾಷ್ಟ್ರೀಯ ಸುದ್ದಿಯನ್ನಾಗಿ ತೋರಿಸಿದ್ದೀರಿ. ಇದಕ್ಕೆ ನಾನು ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ನಗರ ಪ್ರದಕ್ಷಿಣೆಯಲ್ಲಿ ಡಿಸಿಎಂ ಪರಮೇಶ್ವರಿಂದ ಅಂಧ ದರ್ಬಾರ್!

    ಪರಮೇಶ್ವರ್ ರವರ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ಅವರು ನಗರ ಪ್ರದಕ್ಷಿಣೆಗಾಗಿಯೇ ಬಂದಿದ್ದರು. ಈ ತರಹದ ಘಟನೆಗಳು ಸಾಮಾನ್ಯ, ಕೇವಲ ಕೆಸರು ನೀರು ಸಿಡಿದಿದ್ದಕ್ಕೆ, ತಮಗಿಂತ ಕೆಳವರ್ಗದ ಅಧಿಕಾರಿಯಿಂದ ಕೆಲಸ ಮಾಡಿಸಿಕೊಂಡಿದ್ದು ಸರಿಯಲ್ಲ. ಉನ್ನತ ಸ್ಥಾನದಲ್ಲಿರುವ ಅವರು ತಮ್ಮ ಯೋಗ್ಯತೆಗೆ ತಕ್ಕಂತೆ ನಡೆದುಕೊಂಡು, ಎಲ್ಲರಿಗೂ ಮಾದರಿಯಾಗಬೇಕು. ಕೇವಲ ಕೆಸರು ನೀರು ಸಿಡಿದ್ದಿದ್ದಕ್ಕೆ ಚಡಪಡಿಸಿದ ಅವರಿಗೆ ನಮ್ಮ ಕಷ್ಟಗಳು ಹೇಗೆ ಅರ್ಥವಾಗುತ್ತವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಸಕ ಬೈರತಿ ಬೆಂಬಲಿಗರಿಂದ ಮತ್ತೆ ಗೂಂಡಾಗಿರಿ – ಫ್ಲೆಕ್ಸ್ ತೆರವು ವೇಳೆ ಬಿಬಿಎಂಪಿ ಸಿಬ್ಬಂದಿಗೆ ಥಳಿತ

    ಶಾಸಕ ಬೈರತಿ ಬೆಂಬಲಿಗರಿಂದ ಮತ್ತೆ ಗೂಂಡಾಗಿರಿ – ಫ್ಲೆಕ್ಸ್ ತೆರವು ವೇಳೆ ಬಿಬಿಎಂಪಿ ಸಿಬ್ಬಂದಿಗೆ ಥಳಿತ

    ಬೆಂಗಳೂರು: ಹೈಕೋರ್ಟ್ ಆದೇಶದ ಅನ್ವಯ ನಗರದ ವಿವಿಧಕಡೆ ಬಿಬಿಎಂಪಿ ಸಿಬ್ಬಂದಿ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಕೆ.ಆರ್ ಪುರಂ ಕಾಂಗ್ರೆಸ್ ಶಾಸಕ ಬೈರತಿ ಬಸವರಾಜ್ ಬೆಂಬಲಿಗರು ಗೂಂಡಾಗಿರಿ ನಡೆಸಿದ್ದಾರೆ.

    ನಗರದ ಪೈ ಲೇಔಟ್ ಬಳಿ ಬಿಬಿಎಂಪಿ ಕಾರ್ಮಿಕರಾದ ಮನು, ವಿಶ್ವ, ಚಂದನ್ ಫ್ಲೆಕ್ಸ್ ತೆರವು ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಶಾಸಕ ಬೈರತಿ ಬೆಂಬಲಿಗ ಸಂತೋಷ್ ರೆಡ್ಡಿ ಹಲ್ಲೆ ನಡೆಸಿದ್ದಾನೆ.

    ನ್ಯಾಯಾಲಯದ ಆದೇಶಕ್ಕೂ ಬೆಲೆ ನೀಡದ ಕಾಂಗ್ರೆಸ್ ಪಕ್ಷದ ಶಾಸಕರ ಪ್ರಭಾವಿ ಬೆಂಬಲಿಗರು ಬಿಬಿಎಂಪಿ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ತೆರವು ಮಾಡದಂತೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋರ್ಟ್ ಆದೇಶವಿದ್ದರೂ ಸಹ ಫ್ಲೆಕ್ಸ್ ತೆರವು ಮಾಡಲು ಸಿಬ್ಬಂದಿ ಹೆದರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಬಿಜೆಪಿ ಮುಖಂಡ ಕಟ್ಟಾ ಸುಬ್ರಮಣ್ಯನಾಯ್ಡು ಮನೆ ಸುತ್ತಮುತ್ತ ಫೆಕ್ಸ್ ಗಳಿದ್ದರೂ ಅದನ್ನು ತೆಗೆದಿಲ್ಲ. ನಗರದ ಸದಾಶಿವನಗರದಲ್ಲಿರುವ ಕಟ್ಟಾ ಸುಬ್ರಮಣ್ಯನಾಯ್ಡು ಮನೆ ಬಳಿ ಇರುವ ಫ್ಲೆಕ್ಸ್ ಗಳನ್ನು ತೆರವು ಮಾಡುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಇದನ್ನೂ ಓದಿ: ಬೆಂಗ್ಳೂರಲ್ಲಿ ಫ್ಲೆಕ್ಸ್ ಹಾಕಿದ್ರೆ ಜೈಲು? ಬಿಬಿಎಂಪಿ ದಿಢೀರ್ ಕಾರ್ಯಾಚರಣೆ ನಡೆಸ್ತಿರೋದು ಯಾಕೆ?  

    https://www.youtube.com/watch?v=QSxzTWxaPjo