Tag: Clean Survey 2021

  • ಸ್ವಚ್ಛ ಸರ್ವೇಕ್ಷಣೆ 2021- ಸತತ 5ನೇ ಬಾರಿ ಸ್ವಚ್ಛ ನಗರ ಪ್ರಶಸ್ತಿ ಪಡೆದ ಇಂದೋರ್

    ಸ್ವಚ್ಛ ಸರ್ವೇಕ್ಷಣೆ 2021- ಸತತ 5ನೇ ಬಾರಿ ಸ್ವಚ್ಛ ನಗರ ಪ್ರಶಸ್ತಿ ಪಡೆದ ಇಂದೋರ್

    ನವದೆಹಲಿ: ಮಧ್ಯಪ್ರದೇಶದ ಇಂದೋರ್ ಸತತ 5 ಬಾರಿ ಭಾರತದ ಅತ್ಯಂತ ಸ್ವಚ್ಛ ನಗರ ಪ್ರಶಸ್ತಿ ಗೆಲ್ಲುವುದರ ಮೂಲಕ ಭಾರತದ ಅತ್ಯಂತ ಸ್ವಚ್ಛ ನಗರ ಎಂದು ಗುರುತಿಸಲ್ಪಟ್ಟಿದೆ.

    ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿ ದೇಶದ ಸ್ವಚ್ಛ ನಗರಗಳು ಮತ್ತು ರಾಜ್ಯಗಳಿಗೆ 2021 ರ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಪ್ರಶಸ್ತಿ ಪ್ರದಾನದಲ್ಲಿ ಇಂದೋರ್ ಗೆ ಮೊದಲ ಪ್ರಶಸ್ತಿ ಎಂದು ಫೋಷಿಸಲಾಗಿದೆ. ಈ ಮೂಲಕ ಇಂದೋರ್ ಸತತ ಐದನೇ ಬಾರಿಗೆ ಭಾರತದ ಅತ್ಯಂತ ಸ್ವಚ್ಛ ನಗರ ಎಂದು ಗುರುತಿಸಲ್ಪಟ್ಟಿದೆ. ಸೂರತ್(ಗುಜರಾತ್) ಮತ್ತು ವಿಜಯವಾಡ(ಆಂಧ್ರಪ್ರದೇಶ) ಕ್ರಮವಾಗಿ ದೇಶದ ಎರಡನೇ ಮತ್ತು ಮೂರನೇ ಸ್ವಚ್ಛ ನಗರಗಳ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದನ್ನೂ ಓದಿ:  ರಸ್ತೆಯಲ್ಲಿದ್ದ ಸಸಿ ಕಿತ್ತುಕೊಂಡು ನೆಟ್ಟಿಗರ ಕಣ್ಣಿಗೆ ಗುರಿಯಾದ ಮಹಿಳೆಯರು – ವೀಡಿಯೋ ವೈರಲ್

    ಭಾರತದ ರಾಜ್ಯಗಳಲ್ಲಿ, ಛತ್ತೀಸ್‍ಗಢವು ದೇಶದ ಸ್ವಚ್ಛ ರಾಜ್ಯವಾಗಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಸ್ವಚ್ಛ ಗಂಗಾ ಪಟ್ಟಣ ವಿಭಾಗದಲ್ಲಿ ವಾರಣಾಸಿ ಪ್ರಥಮ ಸ್ಥಾನ ಪಡೆದಿದೆ. 2021 ರ ಸ್ವಚ್ಛ ಸರ್ವೇಕ್ಷಣೆ ಆವೃತ್ತಿಯಲ್ಲಿ ಒಟ್ಟು 4,320 ನಗರಗಳು ಭಾಗವಹಿಸಿದ್ದು, ಪ್ರಶಸ್ತಿಯನ್ನು ಸಾಮಾನ್ಯವಾಗಿ ನಗರಗಳಿಗೆ ಸ್ಟಾರ್ ರೇಟಿಂಗ್ ನೀಡುವ ಮೂಲಕ ನಿರ್ಧರಿಸಲಾಗಿತ್ತು.

    ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜ್ಯ ಸಚಿವ ಕೌಶಲ್ ಕಿಶೋರ್, ಮುಖ್ಯಮಂತ್ರಿಗಳು ಮತ್ತು ನಗರಾಭಿವೃದ್ಧಿ ಸಚಿವರು, ರಾಜತಾಂತ್ರಿಕರು, ರಾಜ್ಯ ಮತ್ತು ನಗರ ಆಡಳಿತಗಾರರು ಮತ್ತು ಹಿರಿಯ ಅಧಿಕಾರಿಗಳು, ವಲಯ ಪಾಲುದಾರರು ಮತ್ತು ಬ್ರಾಂಡ್ ಅಂಬಾಸಿಡರ್‍ಗಳು, ಎನ್‍ಜಿಒಗಳು ಮತ್ತು ಸಿಎಸ್‍ಒಗಳನ್ನು ಒಳಗೊಂಡ 1,200 ಅತಿಥಿಗಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಕಳೆದ ವರ್ಷ, ಇಂದೋರ್(ಮಧ್ಯಪ್ರದೇಶ), ರಾಜ್‍ಕೋಟ್ ಮತ್ತು ಸೂರತ್ (ಗುಜರಾತ್), ಮೈಸೂರು(ಕರ್ನಾಟಕ), ಮುಂಬೈ (ಮಹಾರಾಷ್ಟ್ರ) ಮತ್ತು ಅಂಬಿಕಾಪುರ (ಛತ್ತೀಸ್‍ಗಢ) ಗೆ 5 ರೇಟಿಂಗ್‍ಗಳನ್ನು ನೀಡಲಾಗಿತ್ತು. ಇದನ್ನೂ ಓದಿ:  ನೀನು ನನ್ನ ಮಗ ಎಂದು ಹೇಳಲು ಹೆಮ್ಮೆ ಪಡುತ್ತೇನೆ: ಬಿಗ್ ಬಿ