Tag: clean city

  • ದೇಶದ ಸ್ವಚ್ಛನಗರಗಳ ಪಟ್ಟಿಯಲ್ಲಿ ತಪ್ಪಿತು ಟಾಪ್‌ 10ರ ಸ್ಥಾನ – 27ನೇ ಸ್ಥಾನಕ್ಕೆ ಕುಸಿದ ಮೈಸೂರು

    ದೇಶದ ಸ್ವಚ್ಛನಗರಗಳ ಪಟ್ಟಿಯಲ್ಲಿ ತಪ್ಪಿತು ಟಾಪ್‌ 10ರ ಸ್ಥಾನ – 27ನೇ ಸ್ಥಾನಕ್ಕೆ ಕುಸಿದ ಮೈಸೂರು

    ಮೈಸೂರು: ದೇಶದ ಸ್ವಚ್ಚನಗರಗಳ‌ (Clean City) ಪೈಕಿ ಟಾಪ್ 10 ರ ಪಟ್ಟಿಯಲ್ಲಿರುತ್ತಿದ್ದ ಸಾಂಸ್ಕೃತಿಕ ನಗರಿ ಮೈಸೂರು ಇದೀಗ 27 ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ 7 ನೇ ಸ್ಥಾನದಲ್ಲಿದ್ದ ಮೈಸೂರಿಗೆ (Mysuru) ಸ್ವಚ್ಛನಗರಿ ಪಟ್ಟ ಕೈ ತಪ್ಪಿದ್ದು, ಸಾರ್ವಜನಿಕರು ಪಾಲಿಕೆ ಅಧಿಕಾರಿಗಳ ಬೇಜವಬ್ದಾರಿ, ಅಸಡ್ಡೆಗೆ ಸ್ವಚ್ಛತೆಯಲ್ಲಿ ಮತ್ತೆ ಕುಸಿತಕ್ಕೆ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.

    ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ನಗರ ಸರ್ವೇಕ್ಷಣೆ (Swachh Survekshan) ಫಲಿತಾಂಶ ಪ್ರಕಟಗೊಂಡಿದೆ. ದೇಶದ ಸ್ವಚ್ಛನಗರಗಳ ಪೈಕಿ 7 ನೇ ಸ್ಥಾನದಲ್ಲಿದ್ದ ಮೈಸೂರು ಇದೀಗ 27 ನೇ ಸ್ಥಾನಕ್ಕೆ ಕುಸಿತ ಕಂಡಿದೆ. 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳ ವರ್ಗದಲ್ಲಿ ಪ್ರಥಮ ಸ್ಥಾನ ಕಳೆದುಕೊಂಡು ಎರಡನೇ ಸ್ಥಾನಕ್ಕೆ ಕುಸಿತ ಕಂಡಿದೆ. ಇದನ್ನೂ ಓದಿ: ನಿರುದ್ಯೋಗ ಸಮಸ್ಯೆ ಬಗೆಹರಿಸ್ಬೇಕು, ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು: ಸಿಎಂ

    ರಾಷ್ಟ್ರಮಟ್ಟದಲ್ಲಿ ಈ ಬಾರಿಯೂ ಇಂದೋರ್‌ಗೆ ಮೊದಲ ಸ್ವಚ್ಛನಗರ ಪ್ರಶಸ್ತಿ ಲಭಿಸಿದೆ. ಜನಸಂಖ್ಯೆ ಆಧಾರಿತ ನಗರಗಳಲ್ಲಿ ಆಂಧ್ರಪ್ರದೇಶದ ತಿರುಪತಿ ಮೊದಲ ಸ್ಥಾನಕ್ಕೆರಿದೆ. ಸಿಎನ್‌ಡಿ ವೇಸ್ಟ್ ನಿರ್ವಹಣೆ, ನಗರದಲ್ಲಿ ಹಸಿರೀಕರಣ ಕಡಿಮೆಯಾದ ಹಿನ್ನೆಲೆಯಲ್ಲಿ ಸಮರ್ಥವಾಗಿ ಅಧಿಕಾರಿಗಳು ಕೆಲಸ ಮಾಡದ ಪರಿಣಾಮ ಮೈಸೂರಿಗೆ ಈ ಸ್ಥಾನ ಬಂದಿದೆ ಎಂದು ಮಾಜಿ ಮೇಯರ್ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು. ಆದರೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ವಚ್ಛತೆ ವಿಚಾರದಲ್ಲಿ ಬದ್ಧತೆಯನ್ನು ಪ್ರದರ್ಶನ ಮಾಡದೇ ಇರುವುದರಿಂದ ಮೈಸೂರಿಗೆ ಈ ಸ್ಥಿತಿ ಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಹಾವೇರಿ ನೈತಿಕ ಪೊಲೀಸ್‍ಗಿರಿ ಪ್ರಕರಣದಲ್ಲಿ ಯಾರ ರಕ್ಷಣೆಯನ್ನೂ ಸರ್ಕಾರ ಮಾಡಲ್ಲ: ಪರಮೇಶ್ವರ್

    ಈವರೆಗೂ ಸ್ಚಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಟಾಪ್ 10 ನಗರಗಳ ಪಟ್ಟಿಯಲ್ಲಿ ಸ್ಥಾ‌ನ ಕಾಯ್ದುಕೊಂಡು ಬಂದಿತ್ತು. ಆದರೆ ಇದೇ ಮೊದಲ ಬಾರಿ 27ನೇ ಸ್ಥಾನಕ್ಕೆ ಕುಸಿತಕಂಡಿದೆ. ಯಾವ ವಿಭಾಗದಲ್ಲೂ ಮೈಸೂರು ಸ್ಪರ್ಧೆ ಒಡ್ಡದಿರುವುದು ಮೈಸೂರು ನಗರಕ್ಕೆ ಇದೊಂದು ಕಳಂಕವಾಗಿದೆ. 2014 ರಲ್ಲಿ ಮೊದಲ ಸ್ಥಾನದಲ್ಲಿದ್ದ ಮೈಸೂರು ಬಳಿಕ 7ನೇ ಸ್ಥಾ‌ನಕ್ಕಿಳಿದಿತ್ತು. ಮೈಸೂರು ಪಾಲಿಕೆಗೆ ಹೊಸದಾಗಿ ಬಂದಿರುವ ಪಾಲಿಕೆ ಆಯುಕ್ತ ಎಂ.ರೆಹಮಾನ್ ಷರೀಫ್, ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

  • ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮತ್ತೊಂದು ಗೌರವದ ಗರಿ

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮತ್ತೊಂದು ಗೌರವದ ಗರಿ

    – ಸ್ವಚ್ಛತಾ ಸಮೀಕ್ಷೆಯಲ್ಲಿ 3ನೇ ರ‍್ಯಾಂಕ್

    ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ. ಸ್ವಚ್ಛ ಭಾರತ ಸಮೀಕ್ಷೆಯಲ್ಲಿ ಮೂರನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

    ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಭಾರತ ಸರ್ವೇಕ್ಷಣೆಯಲ್ಲಿ (ಸಮೀಕ್ಷೆಯಲ್ಲಿ) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮೂರನೇ ಸ್ಥಾನ ಬಂದಿದೆ. ಗಣೇಶ ಚತುರ್ಥಿಯ ಮೊದಲ ದಿನ ಕೇಂದ್ರ ಸರ್ಕಾರ ಪ್ರಕಟಿಸಿರುವ ಸ್ವಚ್ಛತಾ ವರದಿಯಲ್ಲಿ ಮೈಸೂರಿಗೆ ಮೊದಲ ಸ್ಥಾನ, ತುಮಕೂರಿಗೆ ಎರಡನೇ ಸ್ಥಾನ ಬಂದಿದೆ. ಇನ್ನೂ ರಾಜ್ಯದ ಐದು ಸ್ವಚ್ಛ ನಗರಗಳ ಸಾಲಿನಲ್ಲಿ ಹು-ಧಾ ಮಹಾನಗರ ಮೂರನೇ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ.

    ದೇಶದ ರ‍್ಯಾಕಿಂಗ್‍ನಲ್ಲಿ 172ನೇ ಸ್ಥಾನದಲ್ಲಿದೆ. ಚುನಾಯಿತ ಪ್ರತಿನಿಧಿಗಳ ಕೌನ್ಸಿಲ್ ಇಲ್ಲದೇ ಒಂದೂವರೆ ವರ್ಷಗಳಾಗಿದ್ದು, ಆಡಳಿತ ಮಂಡಳಿಯ ದೃಷ್ಟಿ ಕೊರೊನಾ ನಿಯಂತ್ರಣದತ್ತ ನೆಟ್ಟಿದೆ. ಇದರ ಮಧ್ಯೆ ಹು-ಧಾ ಮಹಾನಗರ ಪಾಲಿಕೆ ರಾಜ್ಯದಲ್ಲಿ ಮೂರನೇ ರ‍್ಯಾಂಕ್ ಪಡೆದಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಹು-ಧಾ ಮಹಾನಗರದ ಸ್ವಚ್ಛತಗೆ ಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳು ಪಾಲಿಕೆಗೆ ಗೌರವದ ಗರಿ ಮುಡಿಗೇರಿಸಿಕೊಳ್ಳಲು ಸೂಕ್ತ ನಿದರ್ಶನವಾಗಿದೆ.

    ಸ್ಮಾರ್ಟ್ ಸಿಟಿ ಕಾಮಗಾರಿ ಜೊತೆ ಜೊತೆಗೆ ಸ್ವಚ್ಛ ಭಾರತದ ಯೋಜನೆಗಳಲ್ಲಿ ಸೂಕ್ತ ನಿರ್ಧಾರವನ್ನು ಪಾಲಿಕೆ ತೆಗೆದುಕೊಳ್ಳುವ ಮೂಲಕ ಒಳ್ಳೆಯ ಫಲಿತಾಂಶವನ್ನು ಪಾಲಿಕೆ ಪಡೆದುಕೊಂಡಿದೆ. ಅಲ್ಲದೇ ಮನೆ ಮನೆಗೆ ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ, ಜನರಲ್ಲಿ ಮೂಡಿದ ಅರಿವು, ಸ್ವಚ್ಛತಾ ಸಾಮಗ್ರಿ ಹಾಗೂ ಯಂತ್ರೋಪಕರಣಗಳು ಸಮರ್ಪಕ ಬಳಕೆಯಿಂದ ಹು-ಧಾ ಮಹಾನಗರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪೌರಕಾರ್ಮಿಕರ ಕಾರ್ಯವನ್ನು ಇಲ್ಲಿ ಸ್ಮರಿಸಬಹುದಾಗಿದೆ.

  • ಎಲ್ಲೆಂದರಲ್ಲಿ ತುಪುಕ್ ಅನ್ನೋರಿಗೆ ಪಾಠ- ರಸ್ತೆಯಲ್ಲಿ ಉಗುಳಿದವನಿಂದ್ಲೇ ಕ್ಲೀನ್ ಮಾಡಿಸಿದ್ರು..!

    ಎಲ್ಲೆಂದರಲ್ಲಿ ತುಪುಕ್ ಅನ್ನೋರಿಗೆ ಪಾಠ- ರಸ್ತೆಯಲ್ಲಿ ಉಗುಳಿದವನಿಂದ್ಲೇ ಕ್ಲೀನ್ ಮಾಡಿಸಿದ್ರು..!

    ಪುಣೆ: ನಗರವನ್ನು ಶುಚಿತ್ವವಾಗಿಟ್ಟುಕೊಳ್ಳುವ ಹಿನ್ನೆಲೆಯಲ್ಲಿ ಇದೀಗ ಪುಣೆ ನಗರ ಸಭೆ ಶಿಕ್ಷೆ ನೀಡಲು ಮುಂದಾಗಿದೆ. ಈ ಶಿಕ್ಷೆಯಿಂದ ವ್ಯಕ್ತಿ ಮತ್ತೆ ಅಂತಹ ತಪ್ಪು ಮಾಡಲಾರ. ಯಾಕಂದ್ರೆ ಆ ಶಿಕ್ಷೆ ಅಷ್ಟೊಂದು ಅಸಹ್ಯವಾಗಿದೆ.

    ಏನ್ ಶಿಕ್ಷೆ..?:
    ಪುಣೆ ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ನಾಗರಿಕ ಸಂಸ್ಥೆ ಈ ಕ್ರಮ ಕೈಗೊಂಡಿದೆ. ಮನುಷ್ಯ ಎಲ್ಲೆಂದರಲ್ಲಿ ಉಗುಳುತ್ತಾನೆ. ಇದಕ್ಕೆ ಕ್ರಮ ಕೈಗೊಳ್ಳಬೇಕೆಂದು ಉಪಾಯ ಹೂಡಿದ ಸಂಸ್ಥೆ, ಉಗಿದವನಿಂದಲೇ ಅದನ್ನು ಕ್ಲೀನ್ ಮಾಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಆತನಿಗೆ 150 ರೂ ದಂಡ ಕಟ್ಟುವಂತೆ ಹೇಳುತ್ತಾರೆ.

    ಈ ಶಿಕ್ಷೆಯನ್ನು ಕಳೆದ ವಾರದಿಂದ ಆರಂಭ ಮಾಡಲಾಗಿದೆ. ಸದ್ಯ 5 ವಾರ್ಡ್ ಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆರಂಭಿಸಿದ 8 ದಿನದಲ್ಲಿ ನಗರಸಭೆಯವರು ರಸ್ತೆಯಲ್ಲಿ ಉಗುಳುತಿದ್ದ ಸುಮಾರು 156 ಮಂದಿಯನ್ನು ಹಿಡಿದಿದ್ದು, ಅವರಿಂದಲೇ ಉಗುಳಿದ ಜಾಗವನ್ನು ಕ್ಲೀನ್ ಮಾಡಿಸಿದ್ದಾರೆ. ಅಲ್ಲದೇ ಪ್ರತಿಯೊಬ್ಬರಿಂದಲೂ 150 ರೂ. ದಂಡ ವಸೂಲಿ ಮಾಡಿದ್ದಾರೆ ಅಂತ ಪುಣೆ ನಗರಸಭೆಯ ದಯಾನೇಶ್ವರ್ ಮೊಲಾಕ್ ತಿಳಿಸಿದ್ದಾರೆ.

    ಶಿಕ್ಷೆಯ ಉದ್ದೇಶವೇನು..?
    ಜನರಲ್ಲಿ ಕ್ಲೀನ್ ಬಗ್ಗೆ ಜಾಗೃತಿ ಮೂಡಿಸುವುದೇ ಈ ಶಿಕ್ಷೆಯ ಪ್ರಮುಖ ಉದ್ದೇಶವಾಗಿದೆ. ಯಾಕಂದ್ರೆ ಹೆಚ್ಚಿನವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎಲ್ಲೆಂದರಲ್ಲಿ ಉಗುಳುತ್ತಾರೆ. ಹೀಗಾಗಿ ಇದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಉಗುಳನ್ನು ತಾವೇ ಶುಚಿಗೊಳಿಸಲು ಅಸಹ್ಯಪಡುತ್ತಾರೆ. ಇದರಿಂದ ಪಾಠ ಕಲಿಯುತ್ತಾರೆ. ಅಲ್ಲದೇ ಮತ್ತೊಮ್ಮೆ ಉಗುಳುವ ಮುನ್ನ 2 ಬಾರಿ ಯೋಚನೆ ಮಾಡುತ್ತಾರೆ ಅಂತ ಅವರು ತಿಳಿಸಿದ್ದಾರೆ.

    2018ರ ಸ್ವಚ್ಛ ಗ್ರಾಮದಲ್ಲಿ ಪುಣೆಗೆ 10 ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದ ಇಂದೋರ್ ನಗರ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಪುಣೆ ಸ್ವಚ್ಛ ನಗರ ಮಾಡುವಲ್ಲಿ ಮೊಲಾಕ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews