Tag: Class 10 girl

  • ನಕ್ಸಲ್‌ ದಂಪತಿ ಮಗಳು 10 ನೇ ತರಗತಿ ಪಾಸ್‌; ಅಪ್ಪ-ಅಮ್ಮನ ಥರ ಆಗಲ್ಲ, ಡಾಕ್ಟರ್‌ ಆಗ್ತೀನಿ ಅಂದ್ಳು ಬಾಲಕಿ

    ನಕ್ಸಲ್‌ ದಂಪತಿ ಮಗಳು 10 ನೇ ತರಗತಿ ಪಾಸ್‌; ಅಪ್ಪ-ಅಮ್ಮನ ಥರ ಆಗಲ್ಲ, ಡಾಕ್ಟರ್‌ ಆಗ್ತೀನಿ ಅಂದ್ಳು ಬಾಲಕಿ

    ರಾಯ್ಪುರ: ಅಪ್ಪ-ಅಮ್ಮ ನಕ್ಸಲರು. ಆದರೆ ಮಗಳು ಮಾತ್ರ ಚೆನ್ನಾಗಿ ಓದಿ ಡಾಕ್ಟರ್‌ ಆಗಬೇಕು ಎಂದು ಕನಸು ಹೊತ್ತು ಸಾಗುತ್ತಿದ್ದಾಳೆ. ಛತ್ತೀಸಗಢದ ಬಾಲಕಿಯೊಬ್ಬಳು 10 ತರಗತಿ ಬೋರ್ಡ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ. ತಾನು ಡಾಕ್ಟರ್‌ ಆಗಬೇಕೆಂಬ ಆಸೆಯನ್ನೂ ಹೊಂದಿದ್ದಾಳೆ. ಆದರೆ ಆಕೆಯ ಪೋಷಕರು ನಕ್ಸಲರು.

    ನಾರಾಯಣಪುರ ಜಿಲ್ಲೆಯ ಅಬುಜ್ಮದ್‌ ಪ್ರದೇಶದ ಸೋನ್ವಾರಮ್, ಆರತಿ ಹೆಸರಿನ ನಕ್ಸಲ್‌ ದಂಪತಿ ಪುತ್ರಿಯಾಗಿರುವ ಬಾಲಕಿ 10ನೇ ತರಗತಿಯಲ್ಲಿ 54.5% ರಷ್ಟು ಅಂಕ ಪಡೆದು ತೇರ್ಗಡೆಯಾಗಿದ್ದಾಳೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಾಲಕಿ, ನಾನು 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಸಂತಸ ತಂದಿದೆ. ಅಪ್ಪ-ಅಮ್ಮನ ಥರ ಆಗಲ್ಲ. ನಾನು ವೈದ್ಯೆಯಾಗಬೇಕು. ನನ್ನ ಹಳ್ಳಿಯ ಜನರ ಸೇವೆ ಮಾಡಬೇಕು ಎಂದು ಆಕೆ ಆಕಾಂಕ್ಷೆ ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ: ಮಣಿಪುರದಲ್ಲಿ ಉಗ್ರರ ದಾಳಿ – ಓರ್ವ ಪೊಲೀಸ್ ಹುತಾತ್ಮ, ನಾಲ್ವರು ಗಂಭೀರ

    “ನನಗೆ ಶಿಕ್ಷಣ ಪಡೆಯಲು ಅನೇಕ ತೊಂದರೆಗಳಿವೆ. ಕೆಲವು ದಾಖಲೆಗಳ ಕೊರತೆಯಿಂದಾಗಿ ಮಾದಿಯಾ ಬುಡಕಟ್ಟಿನ ಸದಸ್ಯೆ ಎಂದು ಗುರುತಿಸುವ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರ ಮತ್ತು ನಿವಾಸ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗದ ಕಾರಣ ಮುಂದಿನ ಅಧ್ಯಯನದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಈ ಪ್ರಮಾಣಪತ್ರಗಳು ನನಗೆ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಸಹಾಯ ಮಾಡುತ್ತದೆ. ಆ ಮೂಲಕ ನನ್ನ ಅಧ್ಯಯನವನ್ನು ಮುಂದುವರಿಸಲು ಮತ್ತು ವೈದ್ಯೆಯಾಗುವ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತದೆ” ಎಂದು ಬಾಲಕಿ ಹೇಳಿಕೊಂಡಿದ್ದಾಳೆ.

    ಬಾಲಕಿ, ತನ್ನ ಹೆತ್ತವರ ಬಗ್ಗೆ ಹೆಚ್ಚು ಬಹಿರಂಗಪಡಿಸಿಲ್ಲ. ಆಕೆಯ ಕಿರಿಯ ಸಹೋದರ ಗ್ರಾಮದ ರಾಮಕೃಷ್ಣ ಮಿಷನ್ ಆಶ್ರಮ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಬಾಲಕಿ ತಂದೆ ಸೋನ್ವಾರಮ್ ಸಲಾಮ್ ಪ್ರಸ್ತುತ ಅಬುಜ್‌ಮದ್‌ನ ಅಕಬೇಡ ಮತ್ತು ಕುತುಲ್ ಪ್ರದೇಶಗಳಲ್ಲಿ ಮಾವೋವಾದಿ ಸಂಘಟನೆಯಲ್ಲಿ ಕಮಾಂಡರ್ ಆಗಿ ಸಕ್ರಿಯನಾಗಿದ್ದಾನೆ. ಆತನ ಪತ್ನಿ, ಕೆಳ ಹಂತದ ಕೇಡರ್ ಆಗಿದ್ದಾಳೆ. ಈ ನಕ್ಸಲ್ ದಂಪತಿ ಬಗ್ಗೆ ಸುಳಿವು ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯ ಕುರ್ಚಿಯಲ್ಲೇ ರಾಜಾರೋಷವಾಗಿ ಕುಳಿತು ಮದ್ಯಪಾನ- ವ್ಯಕ್ತಿ ಅರೆಸ್ಟ್

  • ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಂದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‍ರೇಪ್!

    ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಂದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‍ರೇಪ್!

    ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ವಸತಿ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಾಲ್ವರು ಹಿರಿಯ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸೆಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಗಳನ್ನು ಬಂಧಿಸಲಾಗಿದ್ದು, ಅವರೆಲ್ಲರೂ 17 ವರ್ಷದವರಾಗಿದ್ದಾರೆ. ಹಾಸ್ಟೆಲ್‍ನಲ್ಲಿ ಇದ್ದ ಸಂತ್ರಸ್ತ ವಿದ್ಯಾರ್ಥಿ ಅಸ್ವಸ್ಥಗೊಂಡು ಮಲಗಿದ್ದಾಗ, ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಸಹೋದರಿಗೆ ತಿಳಿಸಿದ್ದಾಳೆ. ಅಷ್ಟೇ ಅಲ್ಲದೆ ವಿದ್ಯಾರ್ಥಿ ಮೂರು ತಿಂಗಳ ಗರ್ಭಿಣಿ ಎಂದು ವರದಿಯಾಗಿದೆ.

    ಆಗಸ್ಟ್ 14ರಂದು ಶಾಲೆಯ ಆವರಣದಲ್ಲಿಯೇ ನಾಲ್ವರು ಹಿರಿಯ ವಿದ್ಯಾರ್ಥಿಗಳು 16 ವರ್ಷದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪ್ರಕರಣವನ್ನು ಶಾಲೆಯ ಆಡಳಿತ ಮಂಡಳಿ ಮುಚ್ಚಿಹಾಕಲು ಯತ್ನಿಸಿದ ಆರೋಪ ಕೇಳಿಬಂದಿದ್ದು, ಶಾಲೆಯ ನಿರ್ದೇಶಕ, ಪ್ರಾಚಾರ್ಯ, ಆಡಳಿತಾಧಿಕಾರಿ ಹಾಗೂ ಅವರ ಪತ್ನಿ ಮತ್ತು ಹಾಸ್ಟೆಲ್ ವಾರ್ಡನ್‍ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

    ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯುವತಿಯ ಪೋಷಕರು ಶಾಲೆಗೆ ದೌಡಾಯಿಸಿದ್ದಾರೆ. ಪೊಲೀಸರ ಜೊತೆಗೆ ಬಂದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಹಾಗೂ ಮಕ್ಕಳ ಕಲ್ಯಾಣ ಆಯೋಗ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿನಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

    ಬಂಧಿತ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv