Tag: clarify

  • ಮಂಗಳಮುಖಿಯರ ಮೇಲೆ ಹಣ ಎಸೆದಿದ್ದಕ್ಕೆ ಸ್ಪಷ್ಟನೆ ನೀಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ

    ಮಂಗಳಮುಖಿಯರ ಮೇಲೆ ಹಣ ಎಸೆದಿದ್ದಕ್ಕೆ ಸ್ಪಷ್ಟನೆ ನೀಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ

    ನೆಲಮಂಗಲ: ಡ್ಯಾನ್ಸ್ ಮಾಡುವ ವೇಳೆ ಮಂಗಳಮುಖಿಯರ ಮೇಲೆ ಹಣ ಎಸೆದು ದುರ್ವತನೆ ಮಾಡಿದ್ದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬೈಲಪ್ಪ ನಾನು ಯಾವುದೇ ದುರುದ್ದೇಶದಿಂದ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಕುಲುವನಹಳ್ಳಿ ಬಳಿ ಸಂತೋಷಿ ಮಾತಾಜಿ ದೇಗುಲದಲ್ಲಿ ನಡೆದಿದ್ದ ಮಂಗಳ ಮುಖಿಯರ ಪೂಜೆ ವೇಳೆ ನೃತ್ಯ ಮಾಡುತ್ತಾ ಅವರ ಮೇಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೈಲಪ್ಪ ಹಣದ ನೋಟುಗಳನ್ನು ಎಸೆದಿದ್ದರು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಟೀಕೆ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೈಲಪ್ಪ ನಾನು ಯಾವುದೇ ದುರುದ್ದೇಶದಿಂದ ಮಾಡಿಲ್ಲ. ನಾನು ಯಾವುದೇ ಕಾರಣಕ್ಕೂ ಅಸಭ್ಯ ವರ್ತನೆ ಮಾಡುವವನಲ್ಲ. ಈ ವೇಳೆ ಮಂಗಳಮುಖಿಯರು ಹಣ ಎಸೆಯುವಂತೆ ಹೇಳಿದ್ದರು. ಹೀಗಾಗಿ ಅವರ ಪದ್ದತಿಯಂತೆ ನಾನು ಹಣ ಎಸೆದಿದ್ದೆ ಎಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬೈಲಪ್ಪ ಸ್ಪಷ್ಟನೆ ನೀಡಿದ್ದಾರೆ.

    ನನ್ನ ರಾಜಕೀಯ ಬೆಳವಣಿಗೆ ಸಹಿಸಲಾರದೆ ಕೆಲ ಕಿಡಿಗೇಡಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಹೀಗಾಗಿ ನಾನು ಯಾವುದೇ ತಪ್ಪು ಮಾಡುವ ವ್ಯಕ್ತಿ ಅಲ್ಲ. ನಾನು ಎಲ್ಲರನ್ನೂ ಗೌರವಿಸುವ ವ್ಯಕ್ತಿ ಈ ವಿಡಿಯೋದಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ.

  • ನಾವು ತಪ್ಪು ಮಾಡಿದ್ದೇವೆ, ನನ್ನ ಹೇಳಿಕೆಗೆ ಈಗಲೂ ಬದ್ಧ: ಡಿಕೆ ಶಿವಕುಮಾರ್

    ನಾವು ತಪ್ಪು ಮಾಡಿದ್ದೇವೆ, ನನ್ನ ಹೇಳಿಕೆಗೆ ಈಗಲೂ ಬದ್ಧ: ಡಿಕೆ ಶಿವಕುಮಾರ್

    ಬೆಂಗಳೂರು: ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರಕ್ಕೆ ಕೈ ಹಾಕಿ ತಪ್ಪು ಮಾಡಿದ್ದೇವೆ ಎನ್ನುವ ಹೇಳಿಕೆಗೆ ನಾನು ಬದ್ಧನಾಗಿದ್ದು, ಪ್ರಜ್ಞಾ ಪೂರ್ವಕವಾಗಿಯೇ ಆತ್ಮಲೋಕನ ಮಾಡಿಕೊಂಡು ನಾನು ಹೇಳಿಕೆ ನೀಡಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಮರ್ಥನೆ ನೀಡಿದ್ದಾರೆ.

    ಪತ್ಯೇಕ ಲಿಂಗಾಯತ ಧರ್ಮಕ್ಕೆ ವಿಚಾರಕ್ಕೆ ಕೈ ಹಾಕಿ ತಪ್ಪು ಮಾಡಿದ್ವಿ ಎನ್ನುವ ಹೇಳಿಕೆಗೆ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ಅವರು, ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಪ್ರಜ್ಞಾ ಪೂರ್ವಕವಾಯೇ ಆತ್ಮಾವಲೋಕನ ಮಾಡಿಕೊಂಡು ನಾನು ಹೇಳಿಕೆ ನೀಡಿದ್ದೇನೆ. ಯಾವತ್ತು ಧರ್ಮ, ಜಾತಿ ವಿಚಾರದಲ್ಲಿ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಹಸ್ತಕ್ಷೇಪ ಮಾಡಬಾರದು. ರಾಜಕೀಯದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕೀಯ ಇರಬಾರದು ಎಂದು ತಮ್ಮ ಹೇಳಿಕೆಗೆ ಸಮರ್ಥಿಸಿಕೊಂಡರು.

    ಈ ಬಗ್ಗೆ ಬೇರೆಯವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಿಲ್ಲ. ನನ್ನ ಮನಸ್ಸಿಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ. ಹಿಂದಿನ ಸರ್ಕಾರ ಪ್ರತ್ಯೇಕ ಧರ್ಮ ಮಾಡುವಾಗ ನಾನು ಬೇಡವೆಂದು ಹೇಳಬೇಕಿತ್ತು. ಆದರೆ ಹಲವು ಸಚಿವರ ಅಭಿಪ್ರಾಯ ಪ್ರತ್ಯೇಕ ಧರ್ಮ ಬೇಕು ಎಂದು ಹೇಳಿದ್ದರು. ಹೀಗಾಗಿ ನಾನು ಅದಕ್ಕೆ ಬೆಂಬಲ ಸೂಚಿಸಿದ್ದೆ. ಯಾವುದೇ ಕಾರಣಕ್ಕೂ ಧರ್ಮದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಅಂತಹ ಕೆಲಸ ಮಾಡಿ, ನಾವು ದೊಡ್ಡ ತಪ್ಪು ಮಾಡಿದ್ದೇವು ಪಶ್ಚಾತ್ತಾಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಿವಕುಮಾರ್ Vs ಎಂಬಿ ಪಾಟೀಲ್ – ಕಾಂಗ್ರೆಸ್‍ನಲ್ಲಿ ಮತ್ತೆ ಧರ್ಮ ಯುದ್ಧ ಶುರು

    ನನ್ನ ಹೇಳಿಕೆಯನ್ನು ತೆಗಳುವವರು ತೆಗಳಲಿ, ಮಾನನಷ್ಟ ಮೊಕದ್ದಮೆ ಹಾಕುವವರು ಹಾಕಲಿ, ಬೈಯುವವರು ಬೈಯಲಿ. ಯಾರು ಏನೇ ಅಂದರೂ, ನಾನು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದು ಖಡಕ್ ಆಗಿಯೇ ತಿಳಿಸಿದರು.

    ಬಳ್ಳಾರಿ ಚುನಾವಣೆ ಬಗ್ಗೆ ಮಾತನಾಡಿ, ನವೆಂಬರ್ 6ನೇ ತಾರೀಖಿನವರೆಗೂ ಕಾಯೋಣ, ಶ್ರೀರಾಮುಲು ಅಣ್ಣನವರು ಕನಕಪುರದ ಗೌಡರಿಗೇನು ಕೆಲಸ ಎಂದು ಹೇಳುತ್ತಿದ್ದಾರೆ. ಅವರನ್ನು ನಾನೇಕೆ ತುಳಿಯೋಕೆ ಹೋಗೋಣ. ಅವರನ್ನು ಬೇಕಾದರೆ ಹೆಗಲ ಮೇಲೆ ಕೂಡಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫಸ್ಟ್ ನೈಟ್‍ಗೂ ಮುನ್ನ ಕಿಡ್ನ್ಯಾಪ್ ಆಗಿದ್ದಲ್ಲ, ಆಕೆಗೆ ಮೊದಲೇ ಮದುವೆಯಾಗಿತ್ತು!

    ಫಸ್ಟ್ ನೈಟ್‍ಗೂ ಮುನ್ನ ಕಿಡ್ನ್ಯಾಪ್ ಆಗಿದ್ದಲ್ಲ, ಆಕೆಗೆ ಮೊದಲೇ ಮದುವೆಯಾಗಿತ್ತು!

    – ಕೊಪ್ಪಳ ಜಿಲ್ಲಾ ಎಸ್‍ಪಿ ಕಚೇರಿಗೆ ಬಂದು ರಕ್ಷಣೆ ಕೊಡಿ ಅಂದ್ಳು ವಧು

    ಕೊಪ್ಪಳ: ಫಸ್ಟ್ ನೈಟ್ ದಿನದಂದೇ ವಧು ಕಿಡ್ನ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ನವ ವಧು ಗಾಯತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ದಿಢೀರ್ ಅಂತಾ ಗುರುವಾರ ಸಂಜೆ ಆಗಮಿಸಿದ್ದಾರೆ.

    ಮಾಧ್ಯಮಗಳಲ್ಲಿ ವಧು ನಾಪತ್ತೆ ಪ್ರಕರಣ ವರದಿಯಾಗುತ್ತಿದ್ದಂತೆ ಎಚ್ಚೆತ್ತ ವಧು ನಾಪತ್ತೆ ಕುರಿತು ಸ್ಪಷ್ಟನೆ ನೀಡಲು ಖುದ್ದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದಾರೆ. ಅಲ್ಲದೇ ನಮ್ಮ ಜೀವಕ್ಕೆ ಅಪಾಯವಿದ್ದು, ನಮಗೆ ರಕ್ಷಣೆ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗಾಯತ್ರಿ, ನನ್ನನ್ನು ಯಾರೂ ಅಪಹರಣ ಮಾಡಿಲ್ಲ, ನಾನು ಸ್ವ-ಇಚ್ಛೆಯಿಂದಲೇ ಅವರೊಂದಿಗೆ ಹೋಗಿದ್ದೇನೆ. ನಾನು ಅಂಜುಕುಮಾರ್ ಮೊದಲಿನಿಂದಲೂ ಪ್ರೀತಿಸುತ್ತಿದ್ದೆವು. ನಾವು ಈಗಾಗಲೇ ಮದುವೆಯಾಗಿದ್ದೇವೆ. ನಮ್ಮ ಮನೆಯಲ್ಲಿ ನಮ್ಮ ಪ್ರೀತಿಗೆ ವಿರೋಧವಿತ್ತು. ವಿಷಯ ಗೊತ್ತಿದ್ದರೂ ಸಹ ನಮ್ಮ ಕುಟುಂಬದವರು ನಮ್ಮ ಮಾವನ ಜೊತೆ ಬಲವಂತವಾಗಿ ಮದುವೆ ಮಾಡಿಕೊಟ್ಟಿದ್ದರು. ಹೀಗಾಗಿ ನಾನು ಒಪ್ಪಿಯೇ ಅಂಜನ್ ಜೊತೆ ಹೋಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಿಡ್ನ್ಯಾಪ್ ದೂರು ನೀಡಿದ್ದ ಸಂಬಂಧಿಕರು ಪೇಚಿಗೆ ಸಿಲುಕಿದ್ದಾರೆ. ಅಲ್ಲದೇ ಕಾರಟಗಿಯಲ್ಲಿ ಸಂಬಂಧಿಕರ ವಿರುದ್ಧವೂ ಪ್ರತಿ ದೂರು ಕೊಡಲು ಗಾಯತ್ರಿ ಹಾಗೂ ಅಂಜುಕುಮಾರ್ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಏನಿದು ಪ್ರಕರಣ?
    ಕಳೆದ 15 ದಿನದ ಹಿಂದಷ್ಟೇ ಮಲ್ಲನಗೌಡ ಮತ್ತು ಗಾಯತ್ರಿ ಮದುವೆ ನಡೆದಿತ್ತು. ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿ 2 ಕುಟುಂಬಗಳ ಒಪ್ಪಿ ಮದುವೆ ಮಾಡಿಕೊಟ್ಟಿದ್ದರು. ಗಂಗಾವತಿ ತಾಲೂಕಿನ ಗುಡುರು ಗ್ರಾಮದಲ್ಲಿ ಹಿರಿಯರು ನಿಶ್ಚಯಿಸಿದಂತೆ ವಧುವಿನ ತವರು ಮನೆಯಲ್ಲೇ ಫಸ್ಟ್ ನೈಟ್ ನಿಗದಿಯಾಗಿತ್ತು. ಆದರೆ ಆ ಮೊದಲ ರಾತ್ರಿಯಂದೇ ಯುವಕರ ಗುಂಪೊಂದು ಬಂದು ನವ ವಧು ಗಾಯತ್ರಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದರು.

    ಸೋಮನಾಳ ಗ್ರಾಮದ ಅಂಜುಕುಮಾರ್ ರೆಡ್ಡಿ ಮತ್ತು 6 ಜನ ಸಹಚರರು ಸೇರಿ ವಧುವನ್ನು ಕಿಡ್ನಾಪ್ ಮಾಡಿದ್ದರು. ಮನೆಯಲ್ಲಿದ್ದವರು ಇದನ್ನು ತಡೆಯಲು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದಂತೆಯೇ ಸಂಬಂಧಿಕರು ಸಮೀಪದ ಕಾರಟಗಿ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣವನ್ನು ದಾಖಲಿಸಿದ್ದರು. ಇದನ್ನೂ ಓದಿ: ಮದ್ವೆ ಆಯ್ತು ಅಂತಾ ನೆಮ್ಮದಿಯಿಂದಿದ್ದ ನವಜೋಡಿಗೆ ಮೊದಲ ರಾತ್ರಿ ದಿನವೇ ಕಾದಿತ್ತು ಆಪತ್ತು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಂಸಾಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂದು ದೇವರು ಹೇಳಿಲ್ಲ: ಸಿಎಂ

    ಮಾಂಸಾಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂದು ದೇವರು ಹೇಳಿಲ್ಲ: ಸಿಎಂ

    ಧಾರವಾಡ: ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಭೇಟಿಗೆ ಮುನ್ನ ಮಾಂಸಾಹಾರ ಸೇವನೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

    ಧಾರವಾಡದಲ್ಲಿ ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇವರು ಮಾಂಸ ಆಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂದು ಹೇಳಿಲ್ಲ ಎಂದರು. ಬೇಡರ ಕಣ್ಣಪ್ಪ ಕೂಡಾ ಶಿವನಿಗೆ ಜಿಂಕೆ ಮಾಂಸ ನೈವೇದ್ಯ ಮಾಡಿದ್ದ. ಮಾಂಸ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ ಎಂದರು.

    ಯಾವ ದೇವರೂ ಮಾಂಸ ಆಹಾರ ಸೇವನೆ ಮಾಡಬೇಡಿ ಎಂದು ಹೇಳುತ್ತಾ ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡರು.

    ಘಟನೆ ಏನಾಗಿತ್ತು?: ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ ಬಂಟ್ವಾಳದಲ್ಲಿ ಕಾರ್ಯಕ್ರಮ ಮುಗಿಸಿ, ಬಂಟ್ವಾಳ ಐಬಿಯಲ್ಲಿ ಕರಾವಳಿ ಖಾದ್ಯ ಮೀನಿನ ಊಟವನ್ನು ಸೇವಿಸಿದ್ದರು. ಆ ಬಳಿಕ ಸಿಎಂ ನೇರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದರು.

    ಸಿಎಂ ಸಿದ್ದರಾಮಯ್ಯ ಜೊತೆ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್ ಅವರು ಮಂಜುನಾಥನ ದರ್ಶನ ಪಡೆದಿದ್ದರು. ಪುಣ್ಯ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರು ಮಾಂಸಹಾರವನ್ನು ಸೇವಿಸದೇ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯ ಮೀನು ಮಾಂಸ ಸೇವಿಸಿ ಮಂಜುನಾಥನ ದರ್ಶನ ಪಡೆದಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.