Tag: clap

  • ಬಿಗ್‍ಬಾಸ್ ಮಂದಿಯನ್ನ ಬೆಚ್ಚಿ ಬೀಳಿಸಿದ ಚಪ್ಪಾಳೆ

    ಬಿಗ್‍ಬಾಸ್ ಮಂದಿಯನ್ನ ಬೆಚ್ಚಿ ಬೀಳಿಸಿದ ಚಪ್ಪಾಳೆ

    ಬಿಗ್‍ಬಾಸ್ ಮನೆಯಲ್ಲಿ ಲೈಟ್ ಆಫ್ ಆದ್ರೂ ಸ್ಪರ್ಧಿಗಳು ನಿದ್ದೆಗೆ ಜಾರಲ್ಲ. ಒಬ್ರು ಮತ್ತೊಬ್ಬರ ಆಟ. ಹೀಗೆ ಹಾಗೆ ಅಂತ ಗುಸು ಗುಸು ಸ್ಟಾರ್ಟ್ ಆಗಿರುತ್ತೆ. ನಿನ್ನೆ ಸಹ ರಾತ್ರಿ ಒಂದು ಗಂಟೆ ಆಗಿತ್ತು. ನಿಧಿ ಮತ್ತು ಶುಭಾ ಇಬ್ಬರ ಪಿಸು ಮಾತು ಮಾತ್ರ ಕೇಳಿಸಿತ್ತು. ಬಹುತೇಕ ಎಲ್ಲರೂ ನಿದ್ದೆ ಮಾಡ್ತಿದ್ದರಿಂದ ಮನೆ ಶಾಂತವಾಗಿತ್ತು. ಅಷ್ಟರಲ್ಲಿ ಕೇಳಿದ ಚಪ್ಪಾಳೆ ಸದ್ದು ಮನೆ ಮಂದಿಯನ್ನ ಬೆಚ್ಚಿ ಬೀಳಿಸಿತು.

    ರಾತ್ರಿ 1.5 ನಿಮಿಷಕ್ಕೆ ಎಲ್ಲರೂ ಮಲಗಿದ್ರೆ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಧ್ಯಾನ ಮಾಡ್ತಿದ್ರು. ಈ ವೇಳೆ ದಿಢೀರ್ ಅಂತ ಚಪ್ಪಾಳೆ ಹೊಡೆದ್ರು. ಮನೆ ಪೂರ್ಣ ಸೈಲೆಂಟ್ ಗಿದ್ದರಿಂದ ಚಪ್ಪಾಳೆ ಸೌಂಡ್ ಜೋರಾಗಿಯೇ ಕೇಳಿಸ್ತು. ಇನ್ನು ಪಿಸು ಮಾತುಗಳನ್ನಾಡುತ್ತಿದ್ದ ಶುಭಾ ಮತ್ತು ನಿಧಿ ಸಹ ಒಂದು ಕ್ಷಣ ತಬ್ಬಿಬ್ಬಾಗಿ ಯಾರು ಕ್ಲ್ಯಾಪ್ ಮಾಡಿದ್ದು ಅಂತ ಅತ್ತಿತ್ತ ನೋಡುತ್ತಿದ್ದರು.

    ಚಪ್ಪಾಳೆಯ ಸದ್ದಿನಿಂದ ಎಚ್ಚರಗೊಂಡ ಶಮಂತ್ ಮತ್ತು ಅರವಿಂದ್ ಯಾರ್ ಗುರು ಕ್ಲ್ಯಾಪ್ ಹಾಕಿದ್ರೂ ಅನ್ನೋ ರೀತಿ ಸನ್ನೆ ಮಾಡಿದ್ರು. ನಂತರ ಚಕ್ರವರ್ತಿ ಅವರೇ ಚಪ್ಪಾಳೆ ಹಾಕಿದ್ದು ಅಂತ ತಿಳಿದು ಎಲ್ಲರೂ ನಕ್ಕು ನಿದ್ದೆಗೆ ಜಾರಿದ್ರು.

    ಇನ್ನೂ ಬೆಳಗಾಗುತ್ತಲೇ ಚಪ್ಪಾಳೆ ವಿಷಯ ಮನೆಯ ಹಾಟ್ ಟಾಪಿಕ್ ಆಗಿ ಬದಲಾಯ್ತು. ಚಂದ್ರಚೂಡ ಮೆಡಿಟೇಷನ್ ಮಾಡುವಾಗ ಮಧ್ಯ ಒಂದು ಸಾರಿ ಚಪ್ಪಾಳೆ ತಟ್ಟುತ್ತೇನೆ. ಆದ್ರೆ ಮಂಜು ಕೂಗಿದ್ದು ಕೇಳಿಸಿಲ್ಲ. ನಿಮಗೆಲ್ಲ ತೊಂದರೆ ಆಗ್ತಿದ್ರೆ ಹೊರಗೆ ಮೆಡಿಟೇಷನ್ ಮಾಡ್ತೀನಿ ಅಂದ್ರು. ಇತ್ತ ಮಂಜು ಪಾವಗಡ ಮಾತ್ರ, ಕೇಳಿಸಿದ್ರೂ ಕೇಳಿಸದೇ ರೀತಿ ನಟಿಸರಬಹುದು ಅಂತ ಕಾಲೆಳೆದ್ರು.

  • ಡಾನ್ ಆದ್ರೂ ಸಿನಿಮಾರಂಗದವ್ರ ಜೊತೆ ನಿಕಟ ಸಂಬಂಧ ಹೊಂದಿದ್ದ ಮುತ್ತಪ್ಪ ರೈ

    ಡಾನ್ ಆದ್ರೂ ಸಿನಿಮಾರಂಗದವ್ರ ಜೊತೆ ನಿಕಟ ಸಂಬಂಧ ಹೊಂದಿದ್ದ ಮುತ್ತಪ್ಪ ರೈ

    – ರೈ ಕ್ಲಾಪ್ ಮಾಡಿದ ಮೊದಲ ಸಿನಿಮಾ ಯಾವ್ದು ಗೊತ್ತಾ?

    ಬೆಂಗಳೂರು: ಮೃತರಾದ ಮಾಜಿ ಭೂಗತ ಲೋಕದ ದೊರೆ ಮುತ್ತಪ್ಪ ರೈ ಅವರು ಡಾನ್ ಅದರೂ ಸಿನಿಮಾರಂಗದ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದರು.

    ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದ ಸಮಸ್ಯೆಯಿಂದ ಬಳಲುತ್ತಿದ್ದ ಮುತ್ತಪ್ಪ ರೈ ಇಂದು ನಸುಕಿನ ಜಾವ 2.10ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಒಂದು ಕಾಲದಲ್ಲಿ ಡಾನ್ ಆಗಿ ಮೆರೆದಿದ್ದ ರೈ ನಂತರ ಜಯಕರ್ನಾಟಕ ಸಂಘಟನೆ ಕಟ್ಟಿ ಸಮಾಜ ಸೇವೆಯ ಕಡೆ ಮುಖ ಮಾಡಿದ್ದರು. ಜೊತೆಗೆ ಸಿನಿಮಾದಲ್ಲೂ ಅಭಿನಯಿಸಿದ್ದರು.

    ಹೌದು. ಒಂದು ಕಾಲದಲ್ಲಿ ಭೂಗತ ಲೋಕದ ದೊರೆಯಾಗಿ ಇಡೀ ಬೆಂಗಳೂರನ್ನೇ ಆಳಿದ್ದ ರೈ, ಕನ್ನಡ ಮತ್ತು ತುಳು ಭಾಷೆಯಲ್ಲಿ ತಲಾ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. 2012ರಲ್ಲಿ ತೆರೆಕಂಡ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಕಠಾರಿವೀರ ಸುರಸುಂದರಾಂಗಿ’ ಎಂಬ ಸಿನಿಮಾದಲ್ಲಿ ಡಾನ್ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಅವರು 2014ರಲ್ಲಿ ತೆರೆಕಂಡ ‘ಕಂಚಿಲ್ದ ಬಾಲೆ’ ಎಂಬ ತುಳು ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದರು. ಆ ನಂತರ ಅನಾರೋಗ್ಯಕ್ಕೆ ತುತ್ತಾದ ರೈ ಯಾವ ಸಿನಿಮಾದಲ್ಲೂ ನಟಿಸಲಿಲ್ಲ.

    ರೈ ಕ್ಲಾಪ್ ಮಾಡಿದ ಮೊದಲ ಚಿತ್ರ:
    ಅಂದು ದುಬೈನಲ್ಲೇ ಕುಳಿತುಕೊಂಡು ಬೆಂಗಳೂರಿನ ಅಂಡರ್ ವರ್ಲ್ಡ್ ಅನ್ನು ನಡೆಸುತ್ತಿದ್ದ ಮುತ್ತಪ್ಪ ರೈ, 2008ರಲ್ಲಿ ತೆರೆಕಂಡ ‘ವಾರಸ್ದಾರ’ ಎಂಬ ಸಿನಿಮಾಗೆ ಕ್ಲಾಪ್ ಮಾಡಿದ್ದರು. ಈ ಸಿನಿಮಾವನ್ನು ಗುರುದೇಶ್ ಪಾಂಡೆ ನಿರ್ದೇಶನ ಮಾಡಿದ್ದರು. ಅಂದು ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ರವಿ ಬೆಳಗೆರೆಯವರು ಅಭಿನಯಿಸಿದ್ದರು. ಬೆಳಗೆರೆಯವರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ರೈ, ಅವರಿಗಾಗಿ ಬಂದು ‘ವಾರಸ್ದಾರ’ ಸಿನಿಮಾಗಿ ಕ್ಲಾಪ್ ಮಾಡಿ ಹೋಗಿದ್ದರು.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಬಂದು ಬೆಂಗಳೂರಿನಲ್ಲಿ ರೌಡಿಗಳನ್ನು ಎದುರಿಸಿ ಡಾನ್ ಪಟ್ಟಕ್ಕೆ ಬಂದಿದ್ದ ರೈ ಭಂಡ ಧೈರ್ಯವನ್ನು ಹೊಂದಿದ್ದ ವ್ಯಕ್ತಿ. ಅವರೇ ಹೇಳಿದ್ದ ಪ್ರಕಾರ ಅವರ ದೇಹಕ್ಕೆ 5 ಬುಲೆಟ್ ಹೊಡೆದಿದ್ದರೂ ಅವರು ಪ್ರಜ್ಞೆ ಕಳೆದುಕೊಂಡಿರಲಿಲ್ಲವಂತೆ. ಹೀಗಾಗಿ ರೈ ಜೀವನವನ್ನೇ ಸಿನಿಮಾ ಮಾಡಬಹುದು ಎಂದು ಹಲವಾರು ನಿರ್ದೇಶಕರು ಟ್ರೈ ಮಾಡಿದ್ದಾರೆ. ಒಂದು ಸಿನಿಮಾದಲ್ಲಿ ಅವರ ಜೀವನ ಆಧಾರಿತ ಕಥೆಯನ್ನು ಮಿಶ್ರಣ ಮಾಡಲಾಗಿದೆ.

     

  • ವಾಸುಕಿಗೆ ಕೊನೆಯ ಚಪ್ಪಾಳೆ ಜೊತೆಗೆ ಕಿಚ್ಚನಿಂದ ಸ್ಪೆಷಲ್ ಗಿಫ್ಟ್

    ವಾಸುಕಿಗೆ ಕೊನೆಯ ಚಪ್ಪಾಳೆ ಜೊತೆಗೆ ಕಿಚ್ಚನಿಂದ ಸ್ಪೆಷಲ್ ಗಿಫ್ಟ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಕೊನೆಯ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ವಾಸುಕಿ ವೈಭವ್‍ಗೆ ಸಿಕ್ಕಿದೆ. ಕಿಚ್ಚನ ಚಪ್ಪಾಳೆ ಜೊತೆಗೆ ವಾಸುಕಿಗೆ ಸುದೀಪ್ ಅವರು ಉಡುಗೊರೆಯನ್ನು ನೀಡಿದ್ದಾರೆ.

    ‘ಬಿಗ್‍ಬಾಸ್ ಸೀಸನ್ 7’ ಶುರುವಾದಗಿನಿಂದ ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ವಾರ ಪೂರ್ತಿ ಉತ್ತಮವಾಗಿ ಆಟವಾಡಿದ್ದ ಒಬ್ಬ ಸ್ಪರ್ಧಿಗೆ ಕಿಚ್ಚ ತಮ್ಮ ಚಪ್ಪಾಳೆಯನ್ನು ಕೊಡುತ್ತಾರೆ. ಅದೇ ರೀತಿ ಈ ವಾರ ಕೊನೆಯ ಕಿಚ್ಚನ ಚಪ್ಪಾಳೆ ವಾಸುಕಿ ವೈಭವ್‍ಗೆ ಸಿಕ್ಕಿದೆ.

    ಈ ವಾರ ಬಿಗ್‍ಬಾಸ್ ಟಾಸ್ಕ್ ಗಳು ತುಂಬಾ ಕಷ್ಟವಾಗಿತ್ತು. ಆದರೆ ನೀವು ತುಂಬಾ ಚೆನ್ನಾಗಿ ಆಟವಾಡಿದ್ದೀರಿ. ಅಲ್ಲದೇ ನಾಲ್ಕು ಪದಕಗಳನ್ನು ಗೆದ್ದು ಫಿನಾಲೆ ಟಿಕೆಟ್ ಕೂಡ ಪಡೆದುಕೊಂಡಿದ್ದಾರೆ. ಇದು ಈ ಸೀಸನ್‍ನ ಕೊನೆಯ ಚಪ್ಪಾಳೆ ಎಂದು ವಾಸುಕಿಗೆ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ.

    ಕಳೆದ ಬಾರಿ ಚಪ್ಪಾಳೆ ಜೊತೆಗೆ ಸುದೀಪ್ ತಮ್ಮ ಜಾಕೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಅಂದೇ ಮುಂದಿನ ವಾರ ಇನ್ನೊಂದು ಉಡುಗೊರೆ ಇರುತ್ತದೆ ಎಂದು ಮನೆ ಮಂದಿಗೆ ಹೇಳಿದ್ದರು. ಅದರಂತೆ ವಾಸುಕಿ ವೈಭವ್‍ಗೆ ಸುದೀಪ್ ಆಕರ್ಷಕವಾದ ಬೆಲ್ಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಇದಕ್ಕೂ ಮುನ್ನ ಮನೆಯ ಸದಸ್ಯರು ಕಿಚ್ಚನ ಚಪ್ಪಾಳೆ ಬಗ್ಗೆ ಮಾತನಾಡಿದರು. ಕಿಚ್ಚನ ಚಪ್ಪಾಳೆ ಸಿಕ್ಕಿದರೆ ಸಾಕು ನಾವು ಬಿಗ್‍ಬಾಸ್ ಗೆದ್ದಂತೆ. ಕಿಚ್ಚನ ಚಪ್ಪಾಳೆ ಸಿಕ್ಕ ಮರುದಿನವೇ ನಾವು ಮನೆಯಿಂದ ಹೊರಹೋದರೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ ಎಂದು ಕುರಿ ಪ್ರತಾಪ್ ಹೇಳಿದರು. ಅದೇ ರೀತಿ ಮನೆಯ ಇತರ ಸದಸ್ಯರು ಕೂಡ, ನಿಮ್ಮ ಚಪ್ಪಾಳೆ ನಮ್ಮ ಪಾಲಿಗೆ ಅತ್ಯಮೂಲ್ಯ ಎಂದು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡರು. ಇದಕ್ಕೆ ಸುದೀಪ್ ಸಹ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದರು.