ಚಾಮರಾಜನಗರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಕುಟುಂಬ ಸಮೇತರಾಗಿ ಬಿಳಿಗಿರಿರಂಗನ ಬೆಟ್ಟ, ಹರಳುಕೋಟೆ ಆಂಜನೇಯ ಸನ್ನಿಧಿಗೆ ಭೇಟಿ ನೀಡಿದರು.
ಯಳಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರೆ ಸ್ಥಳವಾದ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥನಿಗೆ ವಿಶೇಷ ಪೂಜೆ, ಅರ್ಚನೆ ಮಾಡಿಸಿದರು. ಬಳಿಕ, ಬಿಳಿಗಿರಿರಂಗನ ಬೆಟ್ಟದಿಂದ ಕೆ.ಗುಡಿಗೆ ಬಂದು ಅರಣ್ಯ ಸೌಂದರ್ಯ ವೀಕ್ಷಿಸಿದರು.
ಚಾಮರಾಜನಗರದ ಹರಳುಕೋಟೆ ಆಂಜನೇಯ ಸನ್ನಿಧಿಗೆ ಭೇಟಿ ನೀಡಿ ಹನುಮನ ದರ್ಶನ ಪಡೆದು ಅರ್ಚನೆ ಮಾಡಿಸಿದರು. ಹರಳುಕೋಟೆ ಆಂಜನೇಯಸ್ವಾಮಿ ದೇಗುಲವು ಬಬ್ರುವಾಹನನಿಂದ ಸ್ಥಾಪಿತಗೊಂಡ ಮೂರ್ತಿ ಎಂಬ ನಂಬಿಕೆ ಇದ್ದು ಪುರಾಣ ಐತಿಹ್ಯ ಹಾಗೂ ಇತಿಹಾಸ ಇದೆ.
– ವಂಚಕನ ವಿರುದ್ಧ ಸೈಬರ್ ಕ್ರೈಂ ಪ್ರಕರಣ ದಾಖಲಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಆನ್‍ಲೈನ್ ವಂಚಕನೊಬ್ಬ (Online Scams) ಸಿಜೆಐ ಚಂದ್ರಚೂಡ್ (CJI DY Chandrachud) ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಂದೇಶ ಕಳಿಸಿ ಹಣ ಕೇಳಿದ ಪ್ರಸಂಗ ನಡೆದಿದೆ. ಕೈಲಾಶ್ ಮೇಘವಾಲ್ ಎಂಬವರಿಗೆ ವಂಚಕ ಸಂದೇಶ ಕಳಿಸಿ ದೆಹಲಿಯ ಕನ್ನಾಟ್ ಬಳಿ ಸಿಲುಕಿ ಕೊಂಡಿದ್ದು, ಕ್ಯಾಬ್‍ಗೆ 500 ರೂ. ಕಳಿಸಿ. ನ್ಯಾಯಾಲಯಕ್ಕೆ ಹೋದ ಬಳಿಕ ಮರಳಿ ಹಾಕುವುದಾಗಿ ಹೇಳಿದ್ದಾನೆ.
ಸಂದೇಶ ಸ್ವೀಕರಿಸಿರುವ ಕೈಲಾಶ್ ಮೇಘವಾಲ್ ಅವರು ಇದನ್ನು ಎಕ್ಸ್ ಖಾತೆಯಲ್ಲಿ ಸ್ಕ್ರೀನ್‍ಶಾಟ್ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ನಂತರ, ಪೋಸ್ಟ್‌ನ್ನು ಎರಡು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸುಮಾರು 2,500 ಕ್ಕೂ ಹೆಚ್ಚು ಲೈಕ್ ಮಾಡಿದ್ದಾರೆ. ಅಲ್ಲದೇ ಲೈಕ್ ಸಂಖ್ಯೆಗಳು ಹೆಚ್ಚಾಗುತ್ತಿವೆ. ಅನೇಕ ಜನರು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು, ಅವನು ತೋರಿದ ಅತಿಯಾದ ಆತ್ಮವಿಶ್ವಾಸಕ್ಕಾಗಿ 1,000 ರೂ. ಕಳುಹಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್‍ನಲ್ಲಿ, ಅಪರಿಚಿತರೊಂದಿಗಿನ ಆನ್‍ಲೈನ್ ವ್ಯವಹಾರ ಅಪಾಯಕ್ಕೆ ಒಳಪಡಿಸುತ್ತದೆ. ಆರ್ಥಿಕ ನಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಮತ್ತೊಬ್ಬರು, ಮನವಿಯನ್ನು ಮೂರು ವಾರಗಳ ನಂತರ ಮುಂದೂಡಿ ಮತ್ತು ತೀರ್ಪು ನೀಡಲು ತ್ರಿಸದಸ್ಯ ಪೀಠವನ್ನು ರಚಿಸಿ ಎಂದು ತಮಾಷೆಯಾಗಿ ಪೋಸ್ಟ್ ಮಾಡಿದ್ದಾರೆ.
ಈ ಸಂಬಂಧ ಸುಪ್ರೀಂ ಕೋರ್ಟ್ (Supreme Court) ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೆಸರಿನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟ ವಂಚಕನ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ಸೈಬರ್ ಕ್ರೈಂ ಪ್ರಕರಣ ದಾಖಲಿಸಿದೆ.
– ಆಯುರ್ವೇದದಿಂದಲೇ ಕೊರೊನಾವನ್ನು ಮಣಿಸಿದೆ – ಕಳೆದ ಐದು ತಿಂಗಳಿಂದ ಸಂಪೂರ್ಣ ಸಸ್ಯಾಹಾರ ಸೇವನೆ
ನವದೆಹಲಿ: ಕೊರೊನಾ (Covid-19) ಕಾಲದಲ್ಲಿ ಹಾಗೂ ಅದರ ವಿರುದ್ಧದ ಹೋರಾಟದ ಬಳಿಕ ಆಯುಷ್ – ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯೊಂದಿಗಿನ ತಮ್ಮ ಅನುಭವವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (Chief Justice of India DY Chandrachud) ಹಂಚಿಕೊಂಡಿದ್ದಾರೆ. ಅಲ್ಲದೇ ಕೋವಿಡ್‍ನಿಂದ ಬಳಲುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕರೆ ಮಾಡಿ ಸೂಕ್ತ ಸಲಹೆ ನೀಡಿದ್ದರ ಬಗ್ಗೆ ಸಹ ಅವರು ಹೇಳಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ಆವರಣದಲ್ಲಿ ಆಯುಷ್ ಹೋಲಿಸ್ಟಿಕ್ ವೆಲ್ನೆಸ್ ಸೆಂಟರ್‌ನ್ನು (YUSH Holistic Wellness Centre) ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‍ನಿಂದ ಬಳಲುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ ಮಾತಾಡಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಪ್ರಧಾನಿಗಳು ಕರೆಮಾಡಿ ನಿಮ್ಮ ಆರೋಗ್ಯ ಉತ್ತಮ ಸ್ಥಿತಿಯಲ್ಲಿಲ್ಲ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಿಮಗೆ ಬೇಕಾದ ಅಗತ್ಯ ಸಹಾಯವನ್ನು ನಾವು ಮಾಡುತ್ತೇವೆ. ಆಯುಷ್‍ನ ವೈದ್ಯರು ಹಾಗೂ ಕಾರ್ಯದರ್ಶಿ ಒಬ್ಬರಿಗೆ ಕರೆ ಮಾಡಿ ಔಷಧವವನ್ನು ಕಳಿಸುತ್ತಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಕ್ಬರ್, ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡಿ- ಕೋಲ್ಕತ್ತಾ ಹೈಕೋರ್ಟ್ ಸೂಚನೆ
ಎರಡನೇ ಮತ್ತು ಮೂರನೇ ಬಾರಿ ನನಗೆ ಕೋವಿಡ್ ಬಂದಾಗ, ನಾನು ಯಾವುದೇ ಅಲೋಪತಿ ಔಷಧವನ್ನು ತೆಗೆದುಕೊಳ್ಳಲಿಲ್ಲ. ನಾನು ಪ್ರತಿನಿತ್ಯ ಬೆಳಗ್ಗೆ 3:30ಕ್ಕೆ ಎದ್ದು ಯೋಗ ಮಾಡುತ್ತೇನೆ. ಸಸ್ಯಾಹಾರವನ್ನು ಅನುಸರಿಸುತ್ತಿದ್ದೇನೆ, ಕಳೆದ ಐದು ತಿಂಗಳಿಂದ ಸಂಪೂರ್ಣವಾಗಿ ಸಸ್ಯಾಹಾರವನ್ನು ಸೇವಿಸುತ್ತಿದ್ದೇನೆ. ಈ ಕ್ರಮವನ್ನು ನಾನು ಮುಂದುವರಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಆಯುಷ್ ಹೋಲಿಸ್ಟಿಕ್ ವೆಲ್ನೆಸ್ ಸೆಂಟರ್ ನ್ಯಾಯಾಧೀಶರು, ಅವರ ಕುಟುಂಬಗಳು ಮತ್ತು ಸುಪ್ರೀಂ ಕೋರ್ಟ್‍ನ ಸಿಬ್ಬಂದಿ ಸದಸ್ಯರಲ್ಲಿ ಆಯುರ್ವೇದ ಮತ್ತು ಸಮಗ್ರ ಜೀವನಶೈಲಿ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಈ ಸೌಲಭ್ಯಗಳನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಉತ್ತಮ ಚಿಕಿತ್ಸಾ ಕೊಠಡಿಗಳು, ವಿಶ್ರಾಂತಿ ಕೊಠಡಿಗಳು ಉತ್ತಮವಾಗಿವೆ ಎಂದಿದ್ದಾರೆ. ಇದನ್ನೂ ಓದಿ: ಹ್ಯಾರಿಸ್‍ಗೆ ಸಂಕಷ್ಟ – ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಸ್ತು
ನವದೆಹಲಿ: ಇವಿಎಂಗಳ (EVM) ಖರೀದಿಯಲ್ಲಿ ಭಾರತ ಚುನಾವಣಾ ಆಯೋಗ (ECI) ಅಕ್ರಮ ನಡೆಸಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (Public Interest Litigation) ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.
ಚುನಾವಣಾ ವೆಚ್ಚ ಹೆಚ್ಚಾದರೆ ಅದು ಪ್ರಜಾಪ್ರಭುತ್ವಕ್ಕೆ ತೆರಬೇಕಾದ ಬೆಲೆಯಾಗಿದೆ. ಅದ್ದರಿಂದ ಇವಿಎಂ ಖರೀದಿಯಲ್ಲಿ ಹೇಗೆ ಹಣ ಖರ್ಚು ಮಾಡಿದ್ದೀರಿ ಎಂದು ಕೇಳಲು ಸಾದ್ಯವಿಲ್ಲ. ಅಲ್ಲದೆ ಇವಿಎಂಗಳನ್ನು ಖರೀದಿಸುವ ವಿಷಯವು ಮೂಲಭೂತ ಹಕ್ಕುಗಳ ಜಾರಿಗಾಗಿ ಸುಪ್ರೀಂ ಕೋರ್ಟ್‍ಗೆ ತೆರಳುವ ಆರ್ಟಿಕಲ್ 32 (Article 32)ರ ವ್ಯಾಪ್ತಿಯೊಳಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (Chief Justice of India DY Chandrachud) ನೇತೃತ್ವದ ಪೀಠ ಹೇಳಿದೆ. ಇದನ್ನೂ ಓದಿ: ಕುಡಿದ ಪೊಲೀಸರಿಂದ ಹಲ್ಲೆ ಆರೋಪ – ದೇಶದ ಅತ್ಯುನ್ನತ ಪ್ರಶಸ್ತಿ ಹಿಂದಿರುಗಿಸಲು ಮುಂದಾದ ಕುಸ್ತಿಪಟುಗಳು
ನವದೆಹಲಿ: ಗುಜರಾತ್ ಗಲಭೆ (Gujarat riots) ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬಾನೋ (Bilkis Bano) ಪ್ರಕರಣದ 11 ಅಪರಾಧಿಗಳ ಅವಧಿಗೂ ಮುನ್ನವೇ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಬುಧವಾರ ಸುಪ್ರೀಂ ಕೋರ್ಟ್ (Supreme Court) ಪುರಸ್ಕರಿಸಿದೆ. ವಿಚಾರಣೆಗೆ ಹೊಸ ಪೀಠ ರಚಿಸಲು ಅನುಮತಿ ಸೂಚಿಸಿದೆ.
2022ರ ಆಗಸ್ಟ್ 15ರಂದು ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ಬಿಲ್ಕಿಸ್ ಬಾನೋ ಅರ್ಜಿ ಸಲ್ಲಿಸಿದ್ದರು.
2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರು ಗರ್ಭಿಣಿಯಾಗಿದ್ದಾಗ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಅವರ ಮೂರು ವರ್ಷದ ಮಗಳು ಸೇರಿದಂತೆ ಅವರ ಕುಟುಂಬದವರನ್ನು ಕೊಲೆ ಮಾಡಲಾಗಿತ್ತು. ಒಟ್ಟು 11 ಜನರ ವಿರುದ್ಧ ಆರೋಪ ಸಾಬೀತಾಗಿ 2008 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಇದನ್ನೂ ಓದಿ: ಚುನಾವಣೆಗೆ ಮುನ್ನ ಭರ್ಜರಿ ಕಾರ್ಯಾಚರಣೆ – ಚೆಕ್‌ಪೋಸ್ಟ್‌ಗಳಲ್ಲಿ 15 ಲಕ್ಷ, ತಂಬಾಕು ಸೀಜ್