Tag: CJI Chandrachud

  • ರಾಮಜನ್ಮಭೂಮಿ ವಿವಾದ ಪರಿಹಾರಕ್ಕೆ ದೇವರಲ್ಲಿ ಪ್ರಾರ್ಥಿಸಿದ್ದೆ: ಸಿಜೆಐ ಚಂದ್ರಚೂಡ್‌

    ರಾಮಜನ್ಮಭೂಮಿ ವಿವಾದ ಪರಿಹಾರಕ್ಕೆ ದೇವರಲ್ಲಿ ಪ್ರಾರ್ಥಿಸಿದ್ದೆ: ಸಿಜೆಐ ಚಂದ್ರಚೂಡ್‌

    – ಸಿಜೆಐ ಹೇಳಿಕೆಗೆ ಕಾಂಗ್ರೆಸ್‌ ನಾಯಕ ಉದಿತ್‌ರಾಜ್ ವ್ಯಂಗ್ಯ

    ನವದೆಹಲಿ: ಅಯೋಧ್ಯೆ ವಿವಾದ (Ayodhya Dispute) ಇತ್ಯರ್ಥಪಡಿಸಲು ಕಷ್ಟಸಾಧ್ಯವಾದ ಪ್ರಕರಣವಾಗಿತ್ತು. ವಿವಾದ ಇತ್ಯರ್ಥಕ್ಕಾಗಿ ನಾನು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆ ಎಂದು ಸಿಜೆಐ ಚಂದ್ರಚೂಡ್ ( CJI Chandrachud) ಹೇಳಿದ್ದಾರೆ.

    ಹುಟ್ಟೂರಾದ ಮಹಾರಾಷ್ಟ್ರದ ಕನ್ಹೆರ್‌ಸರ್‌ನಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಅಯೋಧ್ಯೆ ವಿವಾದ ಇತ್ಯರ್ಥಪಡಿಸಲು ದೇವರೆದುರು ಕುಳಿತು ಪರಿಹಾರಕ್ಕೆ ಧ್ಯಾನಿಸಿದ್ದೆ. ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸೋದಾಗಿ ತಿಳಿಸಿದ್ದಾರೆ. ನನ್ನನ್ನು ನಂಬಿ, ನಿಮಗೆ ನಂಬಿಕೆ ಇದ್ರೆ ದೇವರು ಯಾವುದೋ ಒಂದು ವಿಧದಲ್ಲಿ ನಿಮಗೆ ದಾರಿ ತೋರಿಸುತ್ತಾನೆ ಎಂದಿದ್ದಾರೆ.

    ಇದೀಗ ಈ ವಿಚಾರದಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡಿದೆ. ಇತರೆ ವಿಷಯಗಳ ಪರಿಹಾರಕ್ಕಾಗಿಯೂ ಸಿಜೆಐ ಪ್ರಾರ್ಥನೆ ಮಾಡಿದರೆ, ಸುಪ್ರೀಂಕೋರ್ಟ್, ಹೈಕೋರ್ಟ್‌ಗಳಲ್ಲಿ ಜನಸಾಮಾನ್ಯರಿಗೆ ದುಡ್ಡಿಲ್ಲದೇ ನ್ಯಾಯ ಸಿಗ್ತಿತ್ತು. ಇಡಿ, ಸಿಬಿಐ, ಐಟಿಗಳ ದುರ್ಬಳಕೆಯೂ ನಿಲ್ತಿತ್ತು ಎಂದು ಕಾಂಗ್ರೆಸ್‌ನ (Congress) ಉದಿತ್‌ರಾಜ್ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ.

    ರಾಮಜನ್ಮಭೂಮಿ ವಿವಾದ (Ram Janmabhoomi) ಸಂಬಂಧ ಐತಿಹಾಸಿಕ ತೀರ್ಪು ನೀಡಿದ ಸಾವಿಂಧಾನಿಕ ಪಂಚಪೀಠದಲ್ಲಿ ಚಂದ್ರಚೂಡ್ ಕೂಡ ಇದ್ದರು. ಇದೀಗ ರಾಮಜನ್ಮಭೂಮಿ ವಿವಾದ ಇತ್ಯರ್ಥವಾಗಿ ಅಯೋಧ್ಯೆಯಲ್ಲಿ ರಾಮಮಂದಿರವೂ ನಿರ್ಮಾಣಗೊಂಡಿದೆ. ಇದೀಗ ಸಿಜೆಐ ಮಾತಿಗೆ, ಕಾಂಗ್ರೆಸ್‌ನ ನಾಯಕನ ಪ್ರತಿಕ್ರಿಯೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಸಿಜೆಐ ಚಂದ್ರಚೂಡ್‌ ಮನೆಯಲ್ಲಿ ಗಣೇಶನಿಗೆ ಮೋದಿ ಆರತಿ – ಸಂಜಯ್‌ ರಾವತ್‌ ಆಕ್ಷೇಪ

    ಸಿಜೆಐ ಚಂದ್ರಚೂಡ್‌ ಮನೆಯಲ್ಲಿ ಗಣೇಶನಿಗೆ ಮೋದಿ ಆರತಿ – ಸಂಜಯ್‌ ರಾವತ್‌ ಆಕ್ಷೇಪ

    ಮುಂಬೈ: ಸುಪ್ರೀಂ ಕೋರ್ಟ್‌ (Supreme Court) ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ (CJI Chandrachud) ನಿವಾಸಕ್ಕೆ ಪ್ರಧಾನಿ ಮೋದಿ (PM Narendra Modi) ತೆರಳಿದ್ದಕ್ಕೆ ಶಿವಸೇನೆ ಉದ್ಧವ್‌ ಠಾಕ್ರೆ ಬಣದ ನಾಯಕ ಸಂಜಯ್‌ ರಾವತ್‌ (Sanjay Raut) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಗಣೇಶೋತ್ಸವ ಸಮಯದಲ್ಲಿ ಸಿಜೆಐ ನಿವಾಸಕ್ಕೆ ಆಗಮಿಸಿದ ಮೋದಿ ಗಣಪತಿಗೆ ಆರತಿ ಎತ್ತಿದ್ದರು. ಈ ವಿಚಾರವನ್ನು ರಾವತ್‌ ಪ್ರಸ್ತಾಪ ಮಾಡಿ ಹಲವು ಪ್ರಶ್ನೆ ಎತ್ತಿದ್ದಾರೆ.

    ಗಣಪತಿ ಹಬ್ಬ (Ganesh Festival) ನಡೆಯುತ್ತಿದೆ, ಜನರು ಪರಸ್ಪರರ ಮನೆಗೆ ಭೇಟಿ ನೀಡುತ್ತಾರೆ. ಪ್ರಧಾನಿ ಇದುವರೆಗೆ ಎಷ್ಟು ಮನೆಗಳಿಗೆ ಭೇಟಿ ನೀಡಿದ್ದಾರೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ. ಆದರೆ ಪ್ರಧಾನಮಂತ್ರಿಯವರು ಸಿಜೆಐ ಮನೆಗೆ ತೆರಳಿ ಆರತಿ ಬೆಳಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಆಕಸ್ಮಿಕ ಪದ ಬಳಸಿ ಅನ್ಯಕೋಮಿನವರಿಗೆ ಬೆಂಬಲ – ಬೇಹುಗಾರಿಕೆ ಇಲಾಖೆಯನ್ನು ಮುಚ್ಚಿಬಿಡಿ ಎಂದ ಯತ್ನಾಳ್

    ಸಂವಿಧಾನದ ಪಾಲಕರು ರಾಜಕಾರಣಿಗಳನ್ನು ಭೇಟಿ ಮಾಡಿದರೆ, ಅದು ಜನರ ಮನಸ್ಸಿನಲ್ಲಿ ಅನುಮಾನವನ್ನು ಉಂಟುಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಮ್ಮ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಪ್ರತಿವಾದಿಯಾಗಿದೆ. ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದಿಂದ ದೂರವಿರಬೇಕು. ಯಾಕೆಂದರೆ ಪ್ರಕರಣದ ಪ್ರತಿವಾದಿಯ ಜೊತೆ ಅವರ ನಂಟು ಬಹಿರಂಗವಾಗಿ ಕಾಣುತ್ತಿದೆ. ಪ್ರಕರಣದಲ್ಲಿ ನಮಗೆ ಸಿಜೆಐ ನ್ಯಾಯ ನೀಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಸಂಜಯ್‌ ರಾವತ್‌ ಕೇಳಿದ್ದಾರೆ.

    ನಮ್ಮ ಪ್ರಕರಣವನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ಸರ್ಕಾರದಿಂದ ಶಿವಸೇನೆ ಮತ್ತು ಎನ್‌ಸಿಪಿ ತತ್ತರಿಸುತ್ತಿವೆ. ನಮಗೆ ನ್ಯಾಯ ಸಿಗುತ್ತಿಲ್ಲ. ಮಹಾರಾಷ್ಟ್ರದ ಅಕ್ರಮ ಸರ್ಕಾರದ ಬಗ್ಗೆ ಪ್ರಧಾನಿ ಮೋದಿ ಹೆಚ್ಚಿನ ಒಲವು ಹೊಂದಿದ್ದಾರೆ. ಪ್ರಧಾನಮಂತ್ರಿ ಮತ್ತು ಸಿಜೆಐ ನಡುವಿನ ನಂಟಿನಿಂದ ಮಹಾರಾಷ್ಟ್ರದ ಜನರ ಮನಸ್ಸಿನಲ್ಲಿ ಒಂದು ಸಂದೇಹ ವ್ಯಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

  • ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನಮಾನ ಯಾವಾಗ? – ಕಾಲಮಿತಿ ತಿಳಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

    ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನಮಾನ ಯಾವಾಗ? – ಕಾಲಮಿತಿ ತಿಳಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ಪ್ರಸ್ತುತ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲ್ಪಟ್ಟಿರುವ ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಮರಳಿ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ಕಾಲಮಿತಿಯನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್‌ (Supreme Court) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

    ವಿಶೇಷ ರಾಜ್ಯ ಸ್ಥಾನಮಾನವನ್ನು (Special Status of Jammu and Kashmir) ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI Chandrachud) ನೇತೃತ್ವದ ಸಂವಿಧಾನ ಪೀಠದಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಯೇ ವಿಶೇಷ ರಾಜ್ಯ ಸ್ಥಾನಮಾನ ರದ್ದುಪಡಿಸಲು ಪ್ರೇರೇಪಿಸಿತು: ಸುಪ್ರೀಂಗೆ ಕೇಂದ್ರ

    ವಿಚಾರಣೆಯ ಸಂದರ್ಭದಲ್ಲಿ ಕೇಂದ್ರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜಮ್ಮು ಕಾಶ್ಮೀರದಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕ್ರಮವು ತಾತ್ಕಾಲಿಕವಾಗಿದ್ದು, ಭವಿಷ್ಯದಲ್ಲಿ ರಾಜ್ಯವಾಗಿ ಮರುಕಳಿಸಲಿದೆ ಎಂದು ತಿಳಿಸಿದ್ದರು.

    ಮೆಹ್ತಾ ಅವರ ವಾದವನ್ನು ಆಲಿಸಿದ ಪೀಠ, ಇದು ಎಷ್ಟು ತಾತ್ಕಾಲಿಕ? ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಯಾವಾಗ ನಡೆಯಲಿದೆ ಎಂದು ಪ್ರಶ್ನಿಸಿತು.

    ಇದಕ್ಕೆ ಉತ್ತರಿಸಿದ ಮೆಹ್ತಾ, 2020 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗಳು ನಡೆದಿದೆ. ಇದು 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಮೊದಲ ಚುನಾವಣೆಯಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಜನ ಜೀವನ ಸಹಜ ಸ್ಥಿತಿಗೆ ಬಂದಿದೆ ಎಂದು ತಿಳಿಸಿದರು.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]