Tag: Civilians

  • ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು

    ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಗ್ರಾಮವೊಂದಕ್ಕೆ ನುಗ್ಗಿದ ಶಂಕಿತ ಉಗ್ರರು ದಾಳಿ ನಡೆಸಿದ ಪರಿಣಾಮ ಮೂವರು ನಾಗರಿಕರು (Civilians) ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ.

    ಇಂದು ಸಂಜೆ ಡ್ಯಾಂಗ್ರಿ ಗ್ರಾಮದಲ್ಲಿ ಶಂಕಿತ ಉಗ್ರರು (Suspected Terror) ಗ್ರಾಮಸ್ಥರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 3 ಮನೆಗಳ ಮೇಲೆ ದಾಳಿ ನಡೆದಿದೆ. ಪರಿಣಾಮ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

    ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಸ್ಥಳೀಯ ವರದಿ ಪ್ರಕಾರ ಗಾಯಗೊಂಡ 8 ಜನರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ- ಡಿಕ್ಕಿ ಹೊಡೆದು 12 ಕಿ.ಮೀ ಎಳೆದೊಯ್ದ ಕಾರು, ಯುವತಿ ದುರ್ಮರಣ

    ಕಳೆದ ಎರಡು ವಾರಗಳಲ್ಲಿ ಜಿಲ್ಲೆಯಲ್ಲಿ ನಾಗರಿಕರ ಹತ್ಯೆಯ ಎರಡನೇ ಘಟನೆ ಇದಾಗಿದೆ. ಡಿ. 16ರಂದು ರಾಜೌರಿಯ ಸೇನಾ ಶಿಬಿರದ ಹೊರಗೆ ಇಬ್ಬರು ನಾಗರಿಕರು ಕೊಲ್ಲಲ್ಪಟ್ಟರು. ಇದನ್ನೂ ಓದಿ: ಮಹದಾಯಿ ಯೋಜನೆಗೆ ಡಿಪಿಆರ್‌ ಆಗಿದೆ; ಕಾಂಗ್ರೆಸ್‌ ಟೀಕೆಗೆ ತಲೆಕೆಡಿಸಿಕೊಳ್ಳಲ್ಲ – ಸಿಎಂ

    Live Tv
    [brid partner=56869869 player=32851 video=960834 autoplay=true]

  • ಮುಂಬೈ ತಾಜ್ ಹೋಟೆಲ್ ಮಾದರಿಯಲ್ಲೇ ಭೀಕರ ಗುಂಡಿನ ದಾಳಿ – 8 ನಾಗರಿಕರ ಬಲಿ

    ಮುಂಬೈ ತಾಜ್ ಹೋಟೆಲ್ ಮಾದರಿಯಲ್ಲೇ ಭೀಕರ ಗುಂಡಿನ ದಾಳಿ – 8 ನಾಗರಿಕರ ಬಲಿ

    ಮೊಗಾಡಿಶು: ಮುಂಬೈನ ತಾಜ್ ಹೋಟೆಲ್ ಅನ್ನು ಉಗ್ರರು ವಶಕ್ಕೆ ಪಡೆದು ಹತ್ಯಾಕಾಂಡ ನಡೆಸಿದ್ದ ಮಾದರಿಯಲ್ಲೇ ಸೊಮಾಲಿಯಾ ರಾಜಧಾನಿ ಮೊಗಾದಿಶುನಲ್ಲಿ ಗುಂಡಿನ ದಾಳಿ ಹಾಗೂ ಬಾಂಬ್ ಸ್ಫೋಟ ನಡೆದಿದೆ.

    ಅಲ್‌ಖೈದಾ ಜೊತೆಗೆ ನೇರ ಸಂಪರ್ಕ ಹೊಂದಿರುವ ಅಲ್-ಶಬಾಬ್ ಸಂಘಟನೆಯ ಉಗ್ರರು ಹೋಟೆಲ್ ಮೇಲೆ ದಾಳಿ ನಡೆಸಿದ್ದು, 8 ಮಂದಿ ನಾಗಕರಿಕರು ಬಲಿಯಾಗಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: 21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ

    ಅಲ್-ಶಬಾಬ್ ಭಯೋತ್ಪಾದಕ ಗುಂಪಿನ ಉಗ್ರರು ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ, ಮನಬಂದಂತೆ ಗುಂಡು ಹಾರಿಸಿದ್ದಾರೆ. ಇದರಿಂದ ಹಲವಾರು ಸಾವು-ನೋವುಗಳು ವರದಿಯಾಗಿವೆ. ಹೋಟೆಲ್ ಒಳಗೆ ಸ್ಫೋಟದ ಸದ್ದು ಕೂಡ ಕೇಳಿಬಂದಿದೆ. ದಾಳಿಯಲ್ಲಿ 8 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮಥುರಾ ದೇವಾಲಯದಲ್ಲಿ ಜನದಟ್ಟಣೆ – ಉಸಿರುಗಟ್ಟಿ ಇಬ್ಬರ ಸಾವು

    BOMB BLAST
    ಸಾಂದರ್ಭಿಕ ಚಿತ್ರ

    ಹಯಾತ್ ಹೋಟೆಲ್ ಮೇಲಿನ ದಾಳಿಯು ಭದ್ರತಾ ಪಡೆಗಳು ಮತ್ತು ಜಿಹಾದಿ ಗುಂಪಿನ ಬಂದೂಕುಧಾರಿಗಳ ನಡುವೆ ಭಾರೀ ಗುಂಡಿನ ಚಕಮಕಿ ಉಂಟುಮಾಡಿದೆ. ಉಗ್ರರು ಇನ್ನೂ ಕಟ್ಟಡದೊಳಗೆ ಅಡಗಿಕೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿ ಮೊಹಮ್ಮದ್ ಅಬ್ದಿಕದಿರ್ ಹಸನ್ ತಿಳಿಸಿದ್ದಾರೆ.

    ಈ ವರ್ಷದ ಮೇನಲ್ಲಿ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಅಧಿಕಾರ ವಹಿಸಿಕೊಂಡ ನಂತರ ಸೊಮಾಲಿಯಲ್ಲಿ ನಡೆದ ಮೊದಲ ದಾಳಿ ಇದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರದಲ್ಲಿ ಮತ್ತೆ ಕಾಶ್ಮೀರಿ ಪಂಡಿತರು, ಅಲ್ಪಸಂಖ್ಯಾತರು ಟಾರ್ಗೆಟ್ – ಕಳೆದ 5 ತಿಂಗಳಲ್ಲಿ ಒಟ್ಟು 16 ಮಂದಿಯ ಹತ್ಯೆ

    ಕಾಶ್ಮೀರದಲ್ಲಿ ಮತ್ತೆ ಕಾಶ್ಮೀರಿ ಪಂಡಿತರು, ಅಲ್ಪಸಂಖ್ಯಾತರು ಟಾರ್ಗೆಟ್ – ಕಳೆದ 5 ತಿಂಗಳಲ್ಲಿ ಒಟ್ಟು 16 ಮಂದಿಯ ಹತ್ಯೆ

    ಶ್ರೀನಗರ: ಕಾಶ್ಮೀರದಲಿನ ಈಗಿನ ಪರಿಸ್ಥಿತಿ 1990ರ ದಿನಗಳಿಗಿಂತಲೂ ಅಪಾಯಕಾರಿಯಾಗಿದೆ. ಜನಸಾಮಾನ್ಯರ ಪಾಡು ಘನಘೋರವಾಗಿದೆ. ಮತ್ತೆ ಹಿಂದೂಗಳನ್ನು ಹುಡುಕಿ, ಹುಡುಕಿ ಕೊಲ್ಲಲಾಗುತ್ತಿದೆ. ಸರಣಿ ಹತ್ಯೆಗಳಿಗೆ ಭಯಬಿದ್ದು ಈಗ ಮತ್ತೆ ಅನೇಕ ಕುಟುಂಬಗಳು ಕಣಿವೆನಾಡಿನಿಂದ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಳೆದ ಮೂರು ದಿನಗಳಲ್ಲಿ ಮೂವರು ಹಿಂದೂಗಳ ಕೊಲೆಯಾಗಿದೆ. ಬುದ್ಗಾಂನಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಗುಂಡಿಟ್ಟ ಕೆಲವೇ ಗಂಟೆಗಳ ಅಂತರದಲ್ಲಿ ಕುಲ್ಗಾಂ ಜಿಲ್ಲೆಯಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರ ಮೇಲೆ ಗುಂಡು ಹಾರಿಸಲಾಗಿದೆ. ಓರ್ವ ಸಾವನ್ನಪ್ಪಿದ್ರೆ, ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಸರಣಿ ಹತ್ಯೆಗಳನ್ನು ಖಂಡಿಸಿ ಜಾತಿ ಧರ್ಮ ಮರೆತು ಕಣಿವೆ ನಾಡಿನ ಮಂದಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ 6 ವರ್ಷ ಕಳೆದ್ರೂ ಫಸ್ಟ್ ನೈಟ್ ಆಗಿಲ್ಲ – ಪತಿಯ ಮನೆ ತೊರೆಯುವಂತೆ ಪತ್ನಿಗೆ ಕೋರ್ಟ್ ಆರ್ಡರ್

    1990ರ ಜನವರಿ-ಮಾರ್ಚ್ ತಿಂಗಳಲ್ಲಿ ಕಾಶ್ಮೀರಿ ಪಂಡಿತರು, ಅಲ್ಪಸಂಖ್ಯಾತರ ಮೇಲೆ ದಾಳಿನಡೆಸಿ 32 ಮಂದಿಯನ್ನು ದಾರುಣವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಮತ್ತೆ ಅಂತಹದ್ದೆ ಪರಿಸ್ಥಿತಿ ನಿರ್ಮಾಣವಾದಂತೆ ಭಾಸವಾಗುತ್ತಿದೆ ಇದಕ್ಕೆ ಕಾರಣ 2022ರ ಮೊದಲ ಐದು ತಿಂಗಳಲ್ಲಿ ಒಟ್ಟು 16 ಮಂದಿಯ ಹತ್ಯೆ ನಡೆದಿರುವುದು. ಕಾಶ್ಮೀರಿ ಪಂಡಿತರು, ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿರುವ ಕಿಡಿಗೇಡಿಗಳು ಕಳೆದ ಮೂರು ದಿನಗಳಲ್ಲಿ ಮೂವರು ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ. ಕಳೆದ 22 ದಿನಗಳಲ್ಲಿ 9 ಜನರ ಕೊಲೆ ನಡೆದಿದ್ದು, ಜನವರಿಯಿಂದ ಈವರೆಗೂ 16 ಮಂದಿಯ ಹತ್ಯೆ ನಡೆದಿರುವುದು ಆತಂಕ ಮೂಡಿಸಿದೆ. ಇದರಿಂದಾಗಿ ಕೇವಲ 2 ದಿನಗಳಲ್ಲಿ 150ಕ್ಕೂ ಹೆಚ್ಚು ಕುಟುಂಬ ವಲಸೆ ಆರಂಭಿಸಿದೆ, ಈವರೆಗೂ 1,800ಕ್ಕೂ ಹೆಚ್ಚು ಹಿಂದೂಗಳ ಮಹಾವಲಸೆಯತ್ತ ಮುಖಮಾಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ – ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ಆಗ್ರಹ