Tag: Civilian Award

  • ಪ್ರಧಾನಿ ಮೋದಿಗೆ ಸೈಪ್ರಸ್‌ನ ಅತ್ಯುನ್ನತ ಗೌರವ

    ಪ್ರಧಾನಿ ಮೋದಿಗೆ ಸೈಪ್ರಸ್‌ನ ಅತ್ಯುನ್ನತ ಗೌರವ

    ನವದೆಹಲಿ: ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರಿಗೆ (PM Modi) ಸೈಪ್ರಸ್ (Cyprus)  ದೇಶದ ಅತ್ಯುನ್ನತ ಪ್ರಶಸ್ತಿ `ಗ್ರ‍್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III’ (Grand Cross of the Order of Makarios III) ನೀಡಿ ಗೌರವಿಸಲಾಗಿದೆ.

    ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು ಪ್ರಧಾನಿ ಮೋದಿ ಅವರಿಗೆ ಸೈಪ್ರಸ್‌ನ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸೈಪ್ರಸ್ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಇದು ನರೇಂದ್ರ ಮೋದಿಗೆ ಮಾತ್ರವಲ್ಲ, 140 ಕೋಟಿ ಭಾರತೀಯರಿಗೂ ಸಂದ ಗೌರವವಿದು. ಇದು ಅವರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳಿಗೆ ಸಂದ ಗೌರವ. ಇದು ನಮ್ಮ ಸಂಸ್ಕೃತಿ, ಸಹೋದರತ್ವ ಮತ್ತು ವಸುಧೈವ ಕುಟುಂಬಕಂ ಎಂಬ ಸಿದ್ಧಾಂತಕ್ಕೆ ಸಂದ ಗೌರವ ಎಂದರು.ಇದನ್ನೂ ಓದಿ: ರ‍್ಯಾಪಿಡೊ ಚಾಲಕನಿಂದ ಹಲ್ಲೆ – ಒಂದೇ ಏಟಿಗೆ ಕೆಳಗೆ ಬಿದ್ದ ಯುವತಿ, ಸ್ಥಳೀಯರಿಂದ ರಕ್ಷಣೆ

    ನಾನು ಇದನ್ನು ಭಾರತ ಮತ್ತು ಸೈಪ್ರಸ್ ನಡುವಿನ ಸ್ನೇಹ ಸಂಬಂಧಗಳು, ನಮ್ಮ ಮೌಲ್ಯಗಳು ಮತ್ತು ಪರಸ್ಪರ ತಿಳುವಳಿಕೆಗೆ ಅರ್ಪಿಸುತ್ತೇನೆ. ನಾನು ಈ ಗೌರವವನ್ನು ಎಲ್ಲಾ ಭಾರತೀಯರ ಪರವಾಗಿ ಬಹಳ ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಈ ಪ್ರಶಸ್ತಿಯು ಶಾಂತಿ, ಭದ್ರತೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ನಮ್ಮ ಜನರಿಗೆ ನಮ್ಮ ಅಚಲ ಬದ್ಧತೆಯ ಸಂಕೇತವಾಗಿದೆ ಎಂದು ಹೇಳಿದರು.

    ಆರ್ಡರ್ ಆಫ್ ಮಕರಿಯೋಸ್ III ಸೈಪ್ರಸ್ ನೀಡುವ ನೈಟ್‌ಹುಡ್ ಗೌರವವಾಗಿದ್ದು, ಇದಕ್ಕೆ ಸೈಪ್ರಸ್‌ನ ಮೊದಲ ಅಧ್ಯಕ್ಷ ಆರ್ಚ್ಬಿಷಪ್ ಮಕರಿಯೋಸ್ III ಅವರ ಹೆಸರಿಡಲಾಗಿದೆ. ಇದು ಗ್ರ‍್ಯಾಂಡ್ ಕಾಲರ್ ಪ್ರಶಸ್ತಿಯ ನಂತರ ಸೈಪ್ರಸ್‌ನ ಎರಡನೇ ಅತ್ಯುನ್ನತ ಶ್ರೇಣಿಯ ಪ್ರಶಸ್ತಿಯಾಗಿದ್ದು, ರಾಷ್ಟ್ರಾಧ್ಯಕ್ಷರು, ರಾಜತಾಂತ್ರಿಕರು, ಅಥವಾ ಸೈಪ್ರಸ್‌ಗೆ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.

    ಈ ಪ್ರಶಸ್ತಿಯನ್ನು 1991ರಲ್ಲಿ ಸೈಪ್ರಸ್ ಗಣರಾಜ್ಯವು ಔಪಚಾರಿಕವಾಗಿ ನೀಡಲು ಪ್ರಾರಂಭಿಸಿತು. ಸೈಪ್ರಸ್‌ನ ಮೊದಲ ರಾಷ್ಟ್ರಾಧ್ಯಕ್ಷ ಮತ್ತು ಸ್ವಾತಂತ್ರ‍್ಯ ಚಳವಳಿಯ ನಾಯಕ ಆರ್ಚ್ಬಿಷಪ್ ಮಕರಿಯೋಸ್ IIIರವರ ಗೌರವಾರ್ಥವಾಗಿ ನೀಡಲಾಗುತ್ತಿದೆ. ಸೈಪ್ರಸ್‌ಗೆ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿದವರಿಗೆ ಅಥವಾ ರಾಷ್ಟ್ರದ ಗೌರವವನ್ನು ಉನ್ನತೀಕರಿಸಿದವರಿಗೆ ನೀಡಲಾಗುತ್ತದೆ. ಪ್ರಶಸ್ತಿಯ ಚಿಹ್ನೆಯು ಸೈಪ್ರಸ್‌ನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.ಇದನ್ನೂ ಓದಿ: ವಿಮಾನ ದುರಂತದ ಹೆಣದ ಮೇಲೆ ನಾವು ರಾಜಕೀಯ ಮಾಡಲ್ಲ, ಅದು ಬಿಜೆಪಿ, ಜೆಡಿಎಸ್ ಕೆಲಸ: ಡಿಕೆಶಿ

  • ಪ್ರಧಾನಿ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

    ಪ್ರಧಾನಿ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

    ಥಿಂಪು: ಭೂತಾನ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ Order of the Druk Gyalpoವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನೀಡುವ ಮೂಲಕವಾಗಿ ಗೌರವವನ್ನು ಸಲ್ಲಿಸಿದೆ.

    ಭಾರತದ ಪ್ರಧಾನಿ ಮೋದಿಯವರು ಕೊರೊನಾ ಸಾಂಕ್ರಮಿಕ ಸಮಯದಲ್ಲಿ ನೀಡಿದ ಬೆಂಬಲ ಹಾಗೂ ಸ್ನೇಹದ ಗೌರವಾರ್ಥವಾಗಿ, ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಮೋದಿ ಅರ್ಹರು ಎಂದು ಭೂತಾನ್ ಪ್ರಧಾನಿ ಕಾರ್ಯಾಲಯ ಅಭಿನಂದನೆ ಸಲ್ಲಿಸಿದೆ. ಇದನ್ನೂ ಓದಿ: ಭಾರತಕ್ಕೆ ಕ್ರಾಂತಿಯ ಅವಶ್ಯಕತೆ ಇಲ್ಲ, ಬದಲಾಗಿ ವಿಕಾಸದ ಅಗತ್ಯವಿದೆ: ಮೋದಿ

    ಭೂತಾನ್‍ನ ಪ್ರಧಾನಿ ಕಾರ್ಯಾಲಯವು ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದು, Much deserving, ಭಾರತವು ಎಲ್ಲಾ ಸಂದರ್ಭದಲ್ಲಿ ಭೂತಾನ್‍ಗೆ ಬೆಂಬಲವಾಗಿ ನಿಂತಿದೆ. ಕೊರೊನಾ ಆಪತ್ಕಾಲದಲ್ಲಿ ಭೂತಾನ್‍ಗೆ ಆಪದ್ಭಾಂದವನಾಗಿ ಭಾರತ ನಿಂತಿದೆ. ಮೋದಿಯವರು ಅದ್ಭುತ ವ್ಯಕ್ತಿ. ಈ ಪ್ರಶಸ್ತಿಯ ಸಂಭ್ರಮಾಚರಣೆಗೆ ಎದುರು ನೋಡುತ್ತಿದ್ದೇವೆ ಎಂದು ಭೂತಾನ್ ಪ್ರಧಾನಿ ಕಾರ್ಯಾಲಯ ಬರೆದು ಟ್ವೀಟ್ ಮಾಡಿದೆ. ಇದನ್ನೂ ಓದಿ: ಮಹಿಳೆಯ ಕಾಲಿಗೆ ನಮಸ್ಕರಿಸಿದ ಮೋದಿ

    ಭಾರತವು ಭೂತಾನ್‍ನ ಪ್ರಮುಖ ವ್ಯಾಪಾರ ಪಾಲುದಾರ ದೇಶಗಳಲ್ಲಿ ಒಂದಾಗಿದೆ. ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರ ಆಡಳಿತವಿದೆ. ನರೇಂದ್ರ ಮೋದಿ ಸರ್ಕಾರದಲ್ಲಿ ಕೋವಿಶೀಲ್ಡ್ ಲಸಿಕೆಗಳನ್ನು ಸ್ವೀಕರಿಸಿದ ಮೊದಲ ದೇಶ ಭೂತಾನ್ ಆಗಿದ್ದು, ಆ ಲಸಿಕೆಗಳನ್ನು ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿತ್ತು. ಇದನ್ನೂ ಓದಿ: ಬಿಳಿಕೂದಲಿನಲ್ಲಿಯೇ ಹಸೆಮಣೆಯೇರಿದ ನಟನ ಮಗಳು

    ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ, ದೇಶವು ಭಾರತದಿಂದ 1.5 ಲಕ್ಷ ಡೋಸ್‍ಗಳ ಕೋವಿಶೀಲ್ಡ್ ಲಸಿಕೆಯನ್ನು ಸ್ವೀಕರಿಸಿದೆ. ಭೂತಾನ್ ಭಾರತದಿಂದ ಹೆಚ್ಚುವರಿಯಾಗಿ 4 ಲಕ್ಷ ಲಸಿಕೆಯನ್ನು ಸ್ವೀಕರಿಸಿತು. ಹೀಗಾಗಿ ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರವ್ಯಾಪಿ ಲಸಿಕಾ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲು ಭೂತಾನ್‍ಗೆ ಸಾಧ್ಯವಾಯಿತು. ಪ್ರಧಾನಿ ಮೋದಿ ಅವರು ಜಲವಿದ್ಯುತ್ ಕ್ಷೇತ್ರದ ಪಾಲುದಾರಿಕೆಯನ್ನು ವೈವಿಧ್ಯಗೊಳಿಸಲು ಮತ್ತು ಬಾಹ್ಯಾಕಾಶ, ಶಿಕ್ಷಣದಲ್ಲಿ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸಲು ಭೂತಾನ್‍ಗೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಸಿ ಭೂತಾನ್‍ನ ಪ್ರಧಾನಿ ಲೋಟೆ ತ್ಶೆರಿಂಗ್, ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

  • ಮೋದಿಗೆ ಯುಎಇಯ ಅತ್ಯುನ್ನತ ನಾಗರಿಕ ಪುರಷ್ಕಾರ ಪ್ರದಾನ

    ಮೋದಿಗೆ ಯುಎಇಯ ಅತ್ಯುನ್ನತ ನಾಗರಿಕ ಪುರಷ್ಕಾರ ಪ್ರದಾನ

    ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಅತ್ಯುನ್ನತ ನಾಗರಿಕ ಪುರಷ್ಕಾರ ‘ಆರ್ಡರ್ ಆಫ್ ಝಾಯೆದ್’ ನೀಡಿ ಗೌರವಿಸಲಾಯಿತು.

    ಯುಎಇಯ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಆಲ್ ನಹ್ಯಾನ್ ಅವರು ಪ್ರಧಾನಿ ಮೋದಿ ಅವರಿಗೆ ಆರ್ಡರ್ ಆಫ್ ಝಾಯೆದ್ ನೀಡಿ ಗೌರವಿಸಿದ್ದಾರೆ. ಯುಎಇ ಸಂಸ್ಥಾಪಕರಾದ ನಹ್ಯಾನ್ ತಂದೆ ಶೇಜಕ್ ಜಾಯೆದ್ ಜನ್ಮದಿನ ಸ್ಮರಣಾರ್ಥವಾಗಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

    ಈ ಬಾರಿಯ ‘ಆರ್ಡರ್ ಆಫ್ ಝಾಯೆದ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿಲಾಗುತ್ತದೆ ಎಂದು ಯುಎಇ ಸರ್ಕಾರ ಇದೇ ವರ್ಷ ಏಪ್ರಿಲ್‍ನಲ್ಲಿ ತಿಳಿಸಿತ್ತು. ಈ ವೇಳೆ ಝಾಯೆದ್ ಮೆಡಲ್ ಪುರಸ್ಕಾರ ಕುರಿತು ಟ್ವೀಟ್ ಮಾಡಿದ್ದ ಯುಎಇಯ ರಾಜಕುಮಾರ, ಭಾರತದೊಂದಿಗೆ ಐತಿಹಾಸಿಕ ಹಾಗೂ ಸಮಗ್ರವಾದ ಕಾರ್ಯತಂತ್ರದ ಬಾಂಧವ್ಯ ಹೊಂದಿದ್ದೇವೆ. ಉಭಯ ದೇಶಗಳ ಸಂಬಂಧ ವೃದ್ಧಿಗೆ ನಮ್ಮ ಆತ್ಮೀಯ ಗೆಳೆಯರಾದ ಪ್ರಧಾನಿ ನರೇಂದ್ರ ಮೋದಿ ಉತ್ತೇಜನ ನೀಡಿದರು. ಅವರ ಈ ಪ್ರಯತ್ನಕ್ಕಾಗಿ ಝಾಯೆದ್ ಮೆಡಲ್ ನೀಡಿ ಗೌರವಿಸುತ್ತಿದೆ ಎಂದು ಹೇಳಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಯುಎಇಗೆ ಭೇಟಿ ನೀಡಿದ್ದರು. ಈ ಮೂಲಕ ಉಭಯ ದೇಶಗಳ ಮಧ್ಯೆ ಉತ್ತಮ ಬಾಂಧವ್ಯ ಏರ್ಪಟ್ಟಿತ್ತು. ಬಳಿಕ ಯುಎಇ ಯುವರಾಜ ಮೊಹಮ್ಮದ್ ಬಿನ್ ಜಯೀದ್ ಅಲ್ ನಹ್ಯಾನ್ ಅವರು 2017ರಲ್ಲಿ ಗಣರಾಜ್ಯೋತ್ಸವ ಪರೇಡ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದಕ್ಕೂ ಮುನ್ನ 2016ರಲ್ಲಿ ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡಿದ್ದರು.

    ಝಾಯೆದ್ ಮೆಡಲ್ ಯಾರಿಗೆ ನೀಡುತ್ತಾರೆ?:
    ಸಂಯುಕ್ತ ಅರಬ್ ಸಂಸ್ಥಾನವು ಪ್ರತಿ ವರ್ಷವೂ ಝಾಯೆದ್ ಮೆಡಲ್ ಅನ್ನು ರಾಜರು, ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಸ್ಥರಿಗೆ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು 1995ರಲ್ಲಿ ಮೊದಲ ಬಾರಿ ಜಪಾನ್ ಯುವರಾಜ ನರುಹಿಟೊ ಅವರಿಗೆ ನೀಡಲಾಗಿತ್ತು. 2007ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, 2018ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರಿಗೆ ಈ ಗೌರವ ಸಿಕ್ಕಿತ್ತು. ಝಾಯೆದ್ ಮೆಡಲ್ ಪುರಸ್ಕಾರ ಪಡೆದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

    ಪ್ರಧಾನಿ ಮೋದಿ ಅವರು ಸದ್ಯ ಮೂರು ದೇಶಗಳ ಪ್ರವಾಸ ಕೈಗೊಂಡಿದ್ದು, ಶುಕ್ರವಾರ ಫ್ರಾನ್ಸ್ ಗೆ ಭೇಟಿ ನೀಡಿ ಅಲ್ಲಿಂದ ಇಂದು ಯುಎಇಗೆ ಆಗಮಿಸಿದ್ದಾರೆ. ಈ ಮೂಲಕ ಯುಎಇಯಲ್ಲಿ ಎರಡು ದಿನದ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ರಾಜಕುಮಾರ್ ನಹ್ಯಾನ್ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ವಿಷಯಗಳ ಕುರಿತು ಇಬ್ಬರು ನಾಯಕರು ಸಮಾಲೋಚನೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.