Tag: civilian

  • ನಾಗರಿಕರನ್ನು ಕೊಂದಿದ್ದ ಇಬ್ಬರು ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದ ರಾಜ್‍ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್‍ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‌ನಲ್ಲಿ ಟ್ರಾಲ್‍ನ ಶಾಹಿದ್ ರಾಥರ್ ಮತ್ತು ಶೋಪಿಯಾನ್‍ನ ಉಮರ್ ಯೂಸುಫ್ ಹತ್ಯೆಯಾದ ಉಗ್ರರು. ಹತನಾದ ಉಗ್ರರು ಇತರ ಭಯೋತ್ಪಾದಕ ಅಪರಾಧದ ಜೊತೆಗೆ, ಇಬ್ಬರು ನಾಗರಿಕರನ್ನು ಹತ್ಯೆಗೈದಿದ್ದಾರೆ.

    ಎನ್‍ಕೌಂಟರ್‌ನಲ್ಲಿ ಇಬ್ಬರು ಸ್ಥಳೀಯ ಉಗ್ರರು ಹತರಾಗಿದ್ದಾರೆ. ಎನ್‍ಕೌಂಟರ್ ನಡೆದ ಸ್ಥಳದಿಂದ ಎರಡು ಎಕೆ-47 ರೈಫಲ್‍ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತೀಚಿನ ಎನ್‍ಕೌಂಟರ್‌ಗಳಲ್ಲಿ, ಭದ್ರತಾ ಪಡೆಗಳು ಕಳೆದ ಐದು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಮತ್ತು ಜೈಶ್-ಎ-ಮೊಹಮ್ಮದ್‍ಗೆ ಸೇರಿದ 26 ಉಗ್ರರನ್ನು ಹತ್ಯೆ ಮಾಡಿದೆ. ಇದನ್ನೂ ಓದಿ: ಸೆ.15ವರೆಗೆ ಪದ್ಮ ಪ್ರಶಸ್ತಿ ನಾಮನಿರ್ದೇಶನ ಮಾಡಿ

    14 ಉಗ್ರರು ಮಸೂದ್ ಅಜರ್ ಸ್ಥಾಪಿಸಿದ ಭಯೋತ್ಪಾದಕ ಗುಂಪು ಜೈಶ್‍ಗೆ ಸೇರಿದವರಾಗಿದ್ದರೆ, 12 ಮಂದಿ ಹಫೀಜ್ ಸಯೀದ್ ಸ್ಥಾಪಿಸಿದ ಲಷ್ಕರ್-ಎ-ತೊಯ್ಬಾದಿಂದ ಬಂದವರಾಗಿದ್ದಾರೆ. ಇದನ್ನೂ ಓದಿ: ಶೀಘ್ರವೇ ಕೇಂದ್ರ ಸಚಿವ ಸಂಪುಟ ಪುನಾರಚನೆ?