Tag: Civil War

  • ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಸಿರಿಯಾದ ಮೇಲೆ ಅಮೆರಿಕ ವಾಯು ದಾಳಿ

    ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಸಿರಿಯಾದ ಮೇಲೆ ಅಮೆರಿಕ ವಾಯು ದಾಳಿ

    ವಾಷಿಂಗ್ಟನ್‌: ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಅಮೆರಿಕ(USA) ಸಿರಿಯಾದ (Syria) ಮೇಲೆ ವೈಮಾನಿಕ ದಾಳಿ (Airstrikes) ನಡೆಸಿದೆ.

    ಸಿರಿಯಾ ಸರ್ವಾಧಿಕಾರಿ ಬಶರ್ ಅಲ್ ಅಸ್ಸಾದ್ (Bashar al-Assad) ಅವರ ಆಡಳಿತ ಕೊನೆಗೊಂಡ ಬೆನ್ನಲ್ಲೇ ಅಮೆರಿಕ ಐಸಿಸ್‌ (ISIS) ಉಗ್ರ ಸಂಘಟನೆಯ ನೆಲೆಯ ಮೇಲೆ ದಾಳಿ ನಡೆಸಿದೆ. ಮಧ್ಯ ಸಿರಿಯಾದಲ್ಲಿರುವ 75ಕ್ಕೂ ಹೆಚ್ಚು ನೆಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿದೆ.

    ಸರ್ವಾಧಿಕಾರಿ ಅಸ್ಸಾದ್‌ ದೇಶ ತೊರೆದ ನಂತರ ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ಉಗ್ರರು ಸಿರಿಯಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಘಟನೆ ವಶಪಡಿಸಿಕೊಂಡರೂ ಅಲ್ಲಿ ಐಸಿಸ್‌ ಉಗ್ರರು ಇನ್ನೂ ಇದ್ದಾರೆ. ಮುಂದಿನ ದಿನಗಳಲ್ಲಿ ಐಸಿಸ್‌ ಉಗ್ರರು ಚಿಗುರಿ ಮತ್ತೆ ಹೋರಾಟಕ್ಕೆ ಇಳಿಯಬಾರದು ಎಂಬ ಕಾರಣಕ್ಕೆ ಅಮೆರಿಕ ಏರ್‌ಸ್ಟ್ರೈಕ್‌ ನಡೆಸಿದೆ. ಇದನ್ನೂ ಓದಿ: ಕಣ್ಮರೆಯಾಗಿದ್ದ ವಿಮಾನ ಮಾಸ್ಕೋದಲ್ಲಿ ಲ್ಯಾಂಡ್‌ – ಪದಚ್ಯುತ ಸಿರಿಯಾ ಅಧ್ಯಕ್ಷ ಅಸ್ಸಾದ್‌ಗೆ ಪುಟಿನ್‌ ರಾಜಾಶ್ರಯ

    ಪೂರ್ವ ಸಿರಿಯಾದಲ್ಲಿ ಅಮೆರಿಕ ಸುಮಾರು 900 ಪಡೆಗಳನ್ನು ಹೊಂದಿದೆ. ಈ ಸೈನಿಕರು ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

    ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪ್ರತಿಕ್ರಿಯಿಸಿ, ಸಿರಿಯಾದಲ್ಲಿ ಸೃಷ್ಟಿಯಾಗಿರುವ ನಿರ್ವಾತದ ಲಾಭವನ್ನು ಪಡೆಯಲು ಐಸಿಸ್‌ ಪ್ರಯತ್ನಿಸುತ್ತಿದೆ. ಐಸಿಸ್‌ ಮೇಲೆ ಅಮೆರಿಕ ಕಣ್ಣಿಟ್ಟು ಅವರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.

    ಅಸ್ಸಾದ್ ಅಸ್ಸಾಂ ಆಡಳಿತದ ಪತನದಿಂದ ಜನತೆಗೆ ನ್ಯಾಯ ಸಿಕ್ಕಿದೆ. ಇದು ಸಿರಿಯಾದಲ್ಲಿ ದೀರ್ಘಕಾಲದಿಂದ ಬಳಲುತ್ತಿರುವ ಜನರಿಗೆ ಸಿಕ್ಕಿದ ಐತಿಹಾಸಿಕ ಕ್ಷಣ ಎಂದು ಹೇಳಿದರು.

    ಇಸ್ರೇಲ್‌ನಿಂದಲೂ ದಾಳಿ:
    ಇನ್ನೊಂದು ಕಡೆ ಇಸ್ರೇಲ್‌ ಸಿರಿಯಾದ ಮೇಲೆ ವಾಯು ದಾಳಿ ನಡೆಸಿದೆ. ಸೇನೆಯ ಕೇಂದ್ರ ಕಚೇರಿ, ಗುಪ್ತಚರ ಸಂಸ್ಥೆ ಮತ್ತು ಕಸ್ಟಮ್ಸ್‌ನ ಕಚೇರಿಗಳನ್ನು ಒಳಗೊಂಡ ಕಟ್ಟಡದ ಮೇಲೆ ದಾಳಿ ನಡೆದಿದೆ. ಇರಾನ್‌ನ ವಿಜ್ಞಾನಿಗಳು ಈ ಸಂಕೀರ್ಣದಲ್ಲಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದರು ಎಂದು ಇಸ್ರೇಲ್‌ ಈ ಹಿಂದೆ ಹೇಳಿಕೊಂಡಿತ್ತು.

  • ಚುನಾವಣೆ ಘೋಷಣೆ ಮಾಡದೇ ಹೋದ್ರೆ ಅಂತರ್ಯುದ್ಧ ನಡೆಯುತ್ತೆ: ಪಾಕ್ ಮಾಜಿ ಪ್ರಧಾನಿ

    ಚುನಾವಣೆ ಘೋಷಣೆ ಮಾಡದೇ ಹೋದ್ರೆ ಅಂತರ್ಯುದ್ಧ ನಡೆಯುತ್ತೆ: ಪಾಕ್ ಮಾಜಿ ಪ್ರಧಾನಿ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹೊಸ ಚುನಾವಣೆಯನ್ನು ಘೋಷಿಸದೇ ಹೋದರೆ, ಇಡೀ ದೆಶವೇ ಅಂತರ್ಯುದ್ಧಕ್ಕೆ ಇಳಿಯಲಿದೆ ಎಂದು ಪಾಕ್ ಮಾಜಿ ಪ್ರಧಾನಿ, ತೆಹ್ರಿಕ್-ಎ-ಇನ್ಸಾಫ್(ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.

    ಕಾನೂನು ಹಾಗೂ ಸಾಂವಿಧಾನದ ವಿಧಾನಗಳ ಮೂಲಕ ಚುನಾವಣೆ ನಡೆಸಲು ನಮಗೆ ಅವಕಾಶ ನೀಡುತ್ತಾರೆಯೇ ಎಂಬುದನ್ನು ನಾವು ಕಾದು ನೋಡುತ್ತೇವೆ. ಇಲ್ಲದಿದ್ದರೆ ಈ ದೇಶ ಅಂತರ್ಯುದ್ಧದೆಡೆ ಹೋಗುತ್ತದೆ ಎಂದರು. ಇದನ್ನೂ ಓದಿ: ಯೋಧರು ಪ್ರಯಾಣಿಸುತ್ತಿದ್ದ ವಾಹನ ಸ್ಫೋಟ: 3 ಸೈನಿಕರ ಸ್ಥಿತಿ ಗಂಭೀರ

    ರಾಷ್ಟ್ರೀಯ ಅಸ್ಸೆಂಬ್ಲಿಗೆ ನಾನು ಹಿಂದಿರುಗುವ ಮಾತೇ ಇಲ್ಲ. ಏಕೆಂದರೆ ಈ ಹಿಂದಿನ ಸರ್ಕಾರವನ್ನು ಅದೇ ರಾಷ್ಟ್ರೀಯ ಅಸೆಂಬ್ಲಿ ಪಿತೂರಿಯಿಂದ ತೆಗೆದುಹಾಕಿತ್ತು. ಮತ್ತೆ ರಾಷ್ಟ್ರೀಯ ಅಸೆಂಬ್ಲಿಯನ್ನು ಒಪ್ಪಿಕೊಂಡರೆ, ಪಿತೂರಿಯನ್ನೇ ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದರು.

    ಇಮ್ರಾನ್ ಖಾನ್ ಅವಿಶ್ವಾಸ ಮತದಿಂದಾಗಿ ಏಪ್ರಿಲ್ ತಿಂಗಳಿನಲ್ಲಿ ಪ್ರಧಾನಿ ಸ್ಥಾನದಿಂದ ವಜಾಗೊಂಡಿದ್ದರು. ಆದರೆ ಅವಿಶ್ವಾಸ ಮತದ ಫಲಿತಾಂಶವನ್ನು ಒಪ್ಪಿಕೊಳ್ಳದ ಖಾನ್, ಅಮೆರಿಕ ತನ್ನ ಕೈವಾಡದಿಂದ ಸರ್ಕಾರವನ್ನು ಉರುಳಿಸಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ:  ಕಾಶ್ಮೀರದಲ್ಲಿ ಬ್ಯಾಂಕ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ

    ಅಧಿಕಾರದಿಂದ ಇಳಿದಾಗಿನಿಂದಲೂ ಇಮ್ರಾನ್ ಖಾನ್ ಹೊಸ ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಿನ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸಮ್ಮಿಶ್ರ ಸರ್ಕಾರ ವಿದೇಶದ ಪ್ರಭಾವ ಹೊಂದಿದೆ. ಷರೀಫ್ ಪಾಕಿಸ್ತಾನದ ಜನರ ನಿಜವಾದ ಪ್ರತಿನಿಧಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ.