Tag: civil service academy

  • ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ಮಹತ್ತರ ಸಾಧನೆ: 8 ಮಂದಿ ಯುಪಿಎಸ್‌ಸಿ ರ‍್ಯಾಂಕ್

    ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ಮಹತ್ತರ ಸಾಧನೆ: 8 ಮಂದಿ ಯುಪಿಎಸ್‌ಸಿ ರ‍್ಯಾಂಕ್

    ರಾಜ್‌ಕುಮಾರ್ ಹೆಸರಲ್ಲಿ ಬಡ ಮತ್ತು ಹಿಂದುಳಿದ ಮಕ್ಕಳಿಗೆ ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ಮೂಲಕ ತರಬೇತಿ ನೀಡಿದ್ದಾರೆ. ಈ ಬಾರಿ 8 ಮಂದಿ ಉತ್ತಮ ಫಲಿತಾಂಶದೊಂದಿಗೆ ಯುಪಿಎಸ್‌ಸಿ ಉತ್ತೀರ್ಣರಾಗಿದ್ದಾರೆ.

    ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ಮೂಲಕ ತರಬೇತಿ ಪಡೆದಿರುವ ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಇದೀಗ 2021ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಮೇ 30ರಂದು ಹೊರ ಬಿದ್ದಿದೆ. ರಾಜ್‌ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ 8 ಮಂದಿ ಉತ್ತಮ ಫಲಿತಾಂಶದ ಜೊತೆ ರಾಜ್ ಕುಟುಂಬದ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

    ಇನ್ನು ಬೆನಕ ಪ್ರಸಾದ್ 92ನೇ ರ‍್ಯಾಂಕ್ ಬಂದಿದ್ದಾರೆ. ನಿಖಿಲ್ ಬಿ ಪಾಟೀಲ್ 139ನೇ ರ‍್ಯಾಂಕ್, ರಾಜೇಶ್ ಪೊನ್ನಪ್ಪ 222ನೇ ರ‍್ಯಾಂಕ್, ದೀಪಕ್ ಆರ್.ಶೇಟ್ 311ನೇ ರ‍್ಯಾಂಕ್, ಮೇಘನಾ ಕೆ.ಟಿ 425ನೇ ರ‍್ಯಾಂಕ್, ಪ್ರೀತಿ ಪಂಚಾಲ್ 449ನೇ ರ‍್ಯಾಂಕ್,ರವಿನಂದನ್‌ ಬಿ.ಎಂ 455ನೇ ರ‍್ಯಾಂಕ್‌  ಶಾಂತ್ ಕುಮಾರ್ ಬಿ.ಒ 641ನೇ ರ‍್ಯಾಂಕ್ ಬಂದಿದ್ದಾರೆ. ಇದನ್ನೂ ಓದಿ: ಮಕ್ಕಳ ಜೊತೆ ಬ್ಯಾಡ್ ಬಾಯ್ಸ್ ಆಗ್ತಾರಂತೆ ಕ್ರೇಜಿಸ್ಟಾರ್ ರವಿಚಂದ್ರನ್

    ರಾಜ್‌ಕುಮಾರ್ ಅಕಾಡೆಮಿಯಿಂದ ಪ್ರಕಟಣೆ ಒಂದನ್ನು ಹೊರಡಿಸಲಾಗಿದೆ. ಈ ಪ್ರಕಟಣೆಯಲ್ಲಿ ಯಾರಿಗೆ ಯಾವ ರ‍್ಯಾಂಕ್, ಅವರ ರೋಲ್ ನಂಬರ್ ಜೊತೆ ಮೊಬೈಲ್ ನಂಬರ್ ಕೂಡ ಅಳವಡಿಸಲಾಗಿದೆ. ಹೀಗೆ ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ಕಡೆಯಿಂದ ಸಾಕಷ್ಟು ಬಡ ವಿದ್ಯಾರ್ಥಿಗಳ ಓದಿಗೆ ನೆರವಾಗಿ ನಿಲ್ಲಲಿ ಎಂಬುದೇ ಅಭಿಮಾನಿಗಳ ಆಶಯ.