Tag: civil service

  • 2 ಮದುವೆಯಾಗಿದ್ದರೆ ಪೌರಕಾರ್ಮಿಕರಿಗೆ ಕೆಲಸ ಸಿಗಲ್ಲ

    2 ಮದುವೆಯಾಗಿದ್ದರೆ ಪೌರಕಾರ್ಮಿಕರಿಗೆ ಕೆಲಸ ಸಿಗಲ್ಲ

    ಬೆಂಗಳೂರು: ಬಿಬಿಎಂಪಿ (BBMP) ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆದರೆ ಅದರಲ್ಲಿ ಎರಡು ಮದುವೆಯಾಗಿದ್ರೇ (Marriage) ಪೌರಕಾರ್ಮಿಕರಿಗೆ ಕೆಲಸ ಇಲ್ಲ ಎಂದು ಬಿಬಿಎಂಪಿ ಸೂಚಿಸಿದೆ.

    ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿ ಈವರೆಗೆ ಪ್ರಕ್ರಿಯೆಗಷ್ಟೇ ಸೀಮಿತವಾಗಿತ್ತು. ಈಗ ಪೌರ ಕಾರ್ಮಿಕರ ನೇಮಕಾತಿಗೆ ಕೊನೆಗೂ ಬಿಬಿಎಂಪಿ ಚಾಲನೆ ನೀಡಿದೆ. ಬಿಬಿಎಂಪಿಯಲ್ಲಿ ಖಾಲಿ ಇರುವ 3,673 ಪೌರಕಾರ್ಮಿಕ (Civil Service) ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಪೌರಕಾರ್ಮಿಕರು ಮದುವೆ ಆಗ್ಬೇಕಾರೆ ಕೆಲ ಷರತ್ತುಗಳನ್ನು ನೀಡಲಾಗಿದೆ. ಎರಡು ಮದುವೆಯಾಗಿದ್ದರೆ ಅಂತವರು ಅನರ್ಹರಾಗುತ್ತಾರೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಪೈಕಿ 2,600 ಕಾಯಂ ಪೌರಕಾರ್ಮಿಕರಿದ್ದಾರೆ. ಉಳಿದಂತೆ 18 ಸಾವಿರ ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ 3,673 ಪೌರಕಾರ್ಮಿಕ ಹುದ್ದೆಗೆ ಕಾಯಂ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಅದರಲ್ಲಿ ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನೇ ನೇಮಕಕ್ಕೆ ಪರಿಗಣಿಸಲಾಗುತ್ತಿದೆ. ಅದರ ಜತೆಗೆ 3,673 ಪೌರಕಾರ್ಮಿಕ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ 430 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಉಳಿದ 3,243 ಹುದ್ದೆಗಳನ್ನು ರಾಜ್ಯದ ಇತರ ಜಿಲ್ಲೆಗಳವರೆಗೆ ನಿಗದಿ ಮಾಡಲಾಗಿದೆ.

    ಪೌರಕಾರ್ಮಿಕ ನೇಮಕಾತಿಯಲ್ಲಿ ಹಲವು ಷರತ್ತುಗಳನ್ನೂ ಅನ್ವಯ ಮಾಡಿದ್ದು, ಅರ್ಜಿ ಸಲ್ಲಿಸುವವರ ಗುತ್ತಿಗೆ ಆಧಾರದಲ್ಲಿ ಕನಿಷ್ಠ 2 ವರ್ಷಗಳ ಕಾಲ ಪೌರಕಾರ್ಮಿಕರಾಗಿ ಹಾಲಿ ಕೆಲಸ ಮಾಡಿರಬೇಕಿದೆ. ಅಭ್ಯರ್ಥಿಯ ವಯಸ್ಸು 23 ರಿಂದ 55 ವರ್ಷಗಳಿಗಿಂತ ಹೆಚ್ಚಿರಬಾರದು ಎಂದು ತಿಳಿಸಲಾಗಿದೆ. ಜತೆಗೆ ಪ್ರತಿ ಅಭ್ಯರ್ಥಿಯೂ ಸಂಬಂಧಪಟ್ಟ ಆಸ್ಪತ್ರೆ ಅಥವಾ ಪ್ರಾಧಿಕಾರದಿಂದ ದೈಹಿಕ ದೃಢತೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಇದನ್ನೂ ಓದಿ: ಜೈನ ಸನ್ಯಾಸ ದೀಕ್ಷೆ ಪಡೆದ ಶ್ರೀಮಂತ ಕುಟುಂಬಕ್ಕೆ ಸೇರಿದ 20ರ ಯುವತಿ

    ಕನ್ನಡ ಮಾತನಾಡಲು ಬಲ್ಲವರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಹಾಗೆಯೇ ಅರ್ಜಿ ಸಲ್ಲಿಸುವ ಪುರುಷ ಪೌರಕಾರ್ಮಿಕರಿಗೆ ಇಬ್ಬರು ಪತ್ನಿಯರಿರಬಾರದು, ಅದರ ಜತೆಗೆ ಮಹಿಳಾ ಪೌರಕಾರ್ಮಿಕರು ಇಬ್ಬರು ಪತ್ನಿ ಇರುವವರನ್ನು ವಿವಾಹವಾಗಿರಬಾರದು ಎಂದೂ ತಿಳಿಸಲಾಗಿದೆ. ಅಲ್ಲದೆ, ಕ್ರಿಮಿನಲ್ ಪ್ರಕರಣ ಇರುವವರು, ಈ ಹಿಂದೆ ಸೇವೆಯಿಂದ ವಜಾಗೊಂಡವರು ಅರ್ಜಿ ಸಲ್ಲಿಸಲು ಅನರ್ಹರಾಗಿದ್ದಾರೆ ಎಂದೂ ಬಿಬಿಎಂಪಿ ಆಯುಕ್ತರು ಹೇಳಿದ್ದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಹಾಸನ ಕಾರಾಗೃಹದ ಮೇಲೆ ಪೊಲೀಸರಿಂದ ದಾಳಿ – ಮೊಬೈಲ್ ಫೋನ್, ಗಾಂಜಾ ಪತ್ತೆ

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ – ಕೆಲಸದಿಂದ ಪೌರಕಾರ್ಮಿಕ ವಜಾ

    ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ – ಕೆಲಸದಿಂದ ಪೌರಕಾರ್ಮಿಕ ವಜಾ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಅವರ ಫೋಟೋವನ್ನು ಕಸದ ಗಾಡಿಯಲ್ಲಿ ಸಾಗಿಸುತ್ತಿದ್ದ ಉತ್ತರ ಪ್ರದೇಶದ ಮಥುರಾದ ಪೌರಕಾರ್ಮಿಕನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

    ಈ ವೀಡಿಯೋ ವೈರಲ್ ಆಗುತ್ತಿದ್ದಂತಯೇ ಮುನ್ಸಿಪಲ್ ಕಾರ್ಪೋರೇಷನ್ ಉದ್ಯೋಗಿ ಕೆಲಸ ಕಳೆದುಕೊಂಡಿದ್ದಾನೆ. ಈ ಕುರಿತಂತೆ ಪ್ರತಿಕ್ರಿಯಿಸಿದ ಪೌರಕಾರ್ಮಿಕ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅದು ಕಸದ ತೊಟ್ಟಿಯಲ್ಲಿ ಬಿದ್ದಿತ್ತು. ಹಾಗಾಗಿ ಅವುಗಳನ್ನು ನಾನು ಕಸದ ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದೆ ಎಂದು ಸ್ಪಷ್ಟನೆ ನೀಡಿದ್ದಾನೆ. ಇದನ್ನೂ ಓದಿ: ಮದರಸಾಗಳಲ್ಲೂ ತ್ರಿವರ್ಣಧ್ವಜ ಹಾರಲೇಬೇಕು – ರಾಜ್ಯ ಸರ್ಕಾರದಿಂದ ಖಡಕ್ ಆದೇಶ

    ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋವನ್ನು ಪೌರಕಾರ್ಮಿಕ ಸಾಗಿಸುತ್ತಿರುವುದನ್ನು ಕಂಡು ಕೆಲವು ಸ್ಥಳೀಯರು ಈ ದೃಶ್ಯವನ್ನು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರ ಫೋಟೋ ಜೊತೆಗೆ ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋ ಕೂಡ ಇತ್ತು. ಇದನ್ನೂ ಓದಿ: ಬ್ರಿಟನ್‌ ಪಿಎಂ ರೇಸ್‌ – ದಿನ ಕಳೆದಂತೆ ಸುನಾಕ್‌ಗೆ ಹೆಚ್ಚಾಗುತ್ತಿದೆ ಬೆಂಬಲ

    Live Tv
    [brid partner=56869869 player=32851 video=960834 autoplay=true]

  • ಐಎಎಸ್ ಕನಸು ಕಾಣುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ ಕುಟುಂಬದಿಂದ ಗುಡ್‍ನ್ಯೂಸ್

    ಐಎಎಸ್ ಕನಸು ಕಾಣುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ ಕುಟುಂಬದಿಂದ ಗುಡ್‍ನ್ಯೂಸ್

    ಬೆಂಗಳೂರು: ಐಎಎಸ್, ಐಪಿಎಎಸ್ ಹುದ್ದೆಯ ಕನಸು ಕಾಣುತ್ತಿರುವ ಕರ್ನಾಟಕದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್. ಡಾ.ರಾಜ್ ಕುಮಾರ್ ಹೆಸರಿನಲ್ಲಿ ಸಿವಿಲ್ ಸರ್ವಿಸ್ ಅಕಾಡೆಮಿ ಸ್ಥಾಪಿಸಲು ರಾಜ್ ಕುಟುಂಬ ಮುಂದಾಗಿದೆ.

    ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಘವೇಂದ್ರ ರಾಜ್‍ಕುಮಾರ್, ದೇಶ ನಮ್ಮ ಕುಟುಂಬಕ್ಕೆ ಎಲ್ಲವನ್ನು ನೀಡಿದೆ. ಅದ್ದರಿಂದ ಈಗ ನಾವು ದೇಶಕ್ಕೆ ಸೇವೆ ಸಲ್ಲಿಸಲು ರಾಜ್ ಹೆಸರಿನಲ್ಲಿ ಸಿವಿಲ್ ಸರ್ವಿಸ್ ಅಕಾಡೆಮಿ ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.

    ಕರ್ನಾಟಕದಿಂದ ಸಿವಿಲ್ ಸರ್ವೀಸ್ ಗೆ ಆಯ್ಕೆಯಾಗುವವರ ಸಂಖ್ಯೆ ತುಂಬಾ ವಿರಳವಾಗಿದೆ. ನಮ್ಮ ವಿದ್ಯಾರ್ಥಿಗಳು ದೂರದ ರಾಜ್ಯಕ್ಕೆ ಹೋಗಿ ತರಬೇತಿ ಪಡೆಯುವ ಸ್ಥಿತಿ ಇರುವ ಕಾರಣ ನಮ್ಮ ರಾಜ್ಯದಲ್ಲೇ ತರಬೇತಿ ನೀಡಲು ಈ ಅಕಾಡೆಮಿ ಸ್ಥಾಪನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

    ನಮ್ಮ ಕೇಂದ್ರದಿಂದ ಅಭ್ಯರ್ಥಿಗಳಿಗೆ ಬೇರೆ ಕೇಂದ್ರಗಳಿಗಿಂತ ಶೇ.50ರಿಂದ ಶೇ.60 ರಷ್ಟು ಕಡಿಮೆ ವೆಚ್ಚದಲ್ಲಿ ತರಬೇತಿ ನೀಡಲಾಗುವುದು. ಮಾರ್ಚ್ 5 ರಂದು ಸಿಎಂ ಸಿದ್ದರಾಮಯ್ಯ ನವರು ಅಧಿಕೃತವಾಗಿ ಅಕಾಡೆಮಿಗೆ ಚಾಲನೆ ನೀಡಲಿದ್ದು, ಏಪ್ರಿಲ್ 24ರಿಂದ ತರಗತಿಗಳು ಆರಂಭವಾಗಲಿದೆ. ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ರಾಘವೇಂದ್ರ ರಾಜ್ ಕುಮಾರ್ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು.