Tag: city corporation

  • ಕಾಲಮಿತಿಯೊಳಗೆ ಜನನ-ಮರಣ ಪ್ರಮಾಣ ಪತ್ರ ವಿತರಿಸಿ – ಡಿಸಿ ಖಡಕ್‌ ಸೂಚನೆ

    ಕಾಲಮಿತಿಯೊಳಗೆ ಜನನ-ಮರಣ ಪ್ರಮಾಣ ಪತ್ರ ವಿತರಿಸಿ – ಡಿಸಿ ಖಡಕ್‌ ಸೂಚನೆ

    ಚಿಕ್ಕಬಳ್ಳಾಪುರ: ಜನನ ಮತ್ತು ಮರಣ ಪ್ರಕರಣಗಳ (Birth And Death Certificate) ನೋಂದಣಿಯನ್ನ ನಿಗದಿತ ಕಾಲಮಿತಿಯೊಳಗೆ ತಂತ್ರಾಂಶಗಳಲ್ಲಿ ನೋಂದಾಯಿಸಿ ಪ್ರಮಾಣ ಪತ್ರಗಳನ್ನ ವಿತರಿಸುವ ವ್ಯವಸ್ಥೆ ಆಗಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜನನ ಮರಣ ನೋಂದಣಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ನಿಗದಿತ ಕಾಲಮಿತಿಯಲ್ಲಿ ಪ್ರಮಾಣ ಪತ್ರ ವಿತರಣೆ ಆಗಬೇಕು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿರುವ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ನೋಂದಣಿ ಮಾಡುವ ಸಕ್ಷಮ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ವೈಖರಿಯನ್ನ ಪರಿಶೀಲಿಸಿ ಸಕಾಲಕ್ಕೆ ವರದಿ ನೀಡಬೇಕು ಎಂದು ಎಂದು ತಾಕೀತು ಮಾಡಿದ್ದಾರೆ. ಇದನ್ನೂಓದಿ: ಯಾರೋ ಹುಡುಗರು ಮಾಡಿದ್ದಾರೆ, ಟ್ವೀಟ್‌ ವಿಥ್‌ ಡ್ರಾ ಮಾಡಿಸಿದ್ದೇನೆ: ಡಿಕೆ ಶಿವಕುಮಾರ್‌

    ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಘಟಿಸುವ ಜನನ, ಮರಣ ಪ್ರಕರಣಗಳನ್ನ ಸಂಬಂಧಪಟ್ಟ ತಂತ್ರಾಂಶದಲ್ಲಿ ನಮೂದಿಸಿ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಆನ್‌ಲೈನ್‌ ಮೂಲಕ ರವಾನಿಸಬೇಕು. ಸದರಿ ವಿವರವನ್ನ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಿ ಪ್ರಮಾಣ ಪತ್ರಗಳನ್ನ ನಿಗದಿತ ಕಾಲಮಿತಿಯೊಳಗೆ ವಿತರಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂಓದಿ: ನಾರಾಯಣಪುರದ ಬಸವಸಾಗರ ಜಲಾಶಯ ಬಹುತೇಕ ಭರ್ತಿ – ರೈತರ ಮೊಗದಲ್ಲಿ ಮಂದಹಾಸ

    ಜನನ ಮತ್ತು ಮರಣ ಪ್ರಕರಣಗಳನ್ನ ಸ್ಥಳೀಯ ಆಡಳಿತಾಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯ ಘಟನೆಗಳ ಮಾಹಿತಿಯನ್ನ ಪಡೆದು ಪರಿಶೀಲಿಸಿ ತಂತ್ರಾಂಶದಲ್ಲಿ ನೋಂದಾಣಿ ಮಾಡುವ ಜೊತೆಗೆ ಪ್ರಮಾಣ ಪತ್ರಗಳನ್ನ ವಿತರಿಸುವ ಕೆಲಸವನ್ನೂ ಸಮರ್ಪಕವಾಗಿ ನಿರ್ವಹಿಸಬೇಕು. ಈ ನಿಯಮ ಉಲ್ಲಂಘಿಸುವ ಯಾವುದೇ ಸಂಸ್ಥೆ, ಅಧಿಕಾರಿ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮಕೈಗೊಳ್ಳಬೇಕು. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿನ ನಮೂದು ಕಾರ್ಯದ ಮೇಲೆ ಹೆಚ್ಚು ನಿಗಾವಹಿಸಬೇಕು ಎಂದು ಎಚ್ಚರಿಸಿದ್ದಾರೆ.

    ಸಭೆಯಲ್ಲಿ 2021-22ನೇ ಸಾಲಿನ ಜಿಲ್ಲೆಯ ಅಂಕಿ ಅಂಶಗಳ ನೋಟ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅವಲೋಕನ ಪುಸ್ತಕ, 2022-23ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ಅಂದಾಜು ಸಮೀಕ್ಷೆಯ ಕಾರ್ಯ ಯೋಜನಾ ಪಟ್ಟಿಯನ್ನ ಬಿಡುಗಡೆ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 10 ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ – ನಿಮ್ಮ ನಗರಕ್ಕೆ ಯಾರು?

    10 ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ – ನಿಮ್ಮ ನಗರಕ್ಕೆ ಯಾರು?

    ಬೆಂಗಳೂರು: ಕೊನೆಗೂ ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ವಿವಿಧ ಕ್ಯಾಟಗರಿಗಳಿಗೆ ಮೇಯರ್, ಉಪಮೇಯರ್ ಸ್ಥಾನವನ್ನ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.

    ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ವಿಜಯಪುರ ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಇದನ್ನೂ ಓದಿ: ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ವಿ.ಎಸ್ ಪಾಟೀಲ್‍ರನ್ನು ಕಿತ್ತುಹಾಕಿದ ಸರ್ಕಾರ

    ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಒಬಿಸಿ ಮೀಸಲು ಗೊಂದಲವಾಗಿತ್ತು. ಇದರಿಂದ ಹೊಸ ಮೀಸಲು ಪಟ್ಟಿ ಪ್ರಕಟ ಮಾಡಿರಲಿಲ್ಲ. ಇದೀಗ ಐದು ತಿಂಗಳು ವಿಳಂಬದ ಬಳಿಕ ಮೀಸಲಾತಿ ಪ್ರಕಟಿಸಲಾಗಿದೆ. ಹೊಸ ಮೀಸಲು ಪ್ರಕಟವಾಗುವವರೆಗೂ ಕೆಲವು ಮಹಾನಗರ ಪಾಲಿಕೆಗಳಲ್ಲಿ ಹಿಂದಿನ ಮೀಸಲಿನ ಮೇಯರ್‌ ಮತ್ತು ಉಪಮೇಯರ್‌ಗಳೇ ಮುಂದುವರಿದಿದ್ದರು. ಇನ್ನೂ ಕೆಲವು ಮಹಾನಗರ ಪಾಲಿಕೆಗಳಲ್ಲಿ ಚುನಾವಣೆ ನಡೆದು ಒಂದು ವರ್ಷವಾದರೂ ಮೇಯರ್, ಉಪಮೇಯರ್ ಆಯ್ಕೆ ಆಗಿರಲಿಲ್ಲ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡರು ಮನೆಯಲ್ಲಿ ಡ್ರಾಫ್ಟ್ ರೆಡಿ ಮಾಡಿ, ಮೋದಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ: ರೇಣುಕಾಚಾರ್ಯ

    ಯಾವ ನಗರಕ್ಕೆ ಯಾರು?
    ಬಳ್ಳಾರಿ: ಮೇಯರ್ -ಒಬಿಸಿ (ಮಹಿಳೆ) , ಉಪಮೇಯರ್ -ಸಾಮಾನ್ಯ (ಮಹಿಳೆ)
    ಬೆಳಗಾವಿ: ಮೇಯರ್ -ಸಾಮಾನ್ಯ , ಉಪಮೇಯರ್ -ಎಸ್‌ಸಿ (ಮಹಿಳೆ)
    ದಾವಣಗೆರೆ: ಮೇಯರ್ -‌ ಸಾಮಾನ್ಯ (ಮಹಿಳೆ) , ಉಪಮೇಯರ್ -ಒಬಿಸಿ (ಮಹಿಳೆ)
    ಹುಬ್ಬಳ್ಳಿ-ಧಾರವಾಡ: ಮೇಯರ್‌ -ಸಾಮಾನ್ಯ (ಮಹಿಳೆ), ಉಪಮೇಯರ್ -‌ಸಾಮಾನ್ಯ
    ಕಲಬುರಗಿ: ಮೇಯರ್‌ -ಎಸ್‌ಸಿ, ಉಪಮೇಯರ್ – ಸಾಮಾನ್ಯ
    ಮಂಗಳೂರು: ಮೇಯರ್ -ಸಾಮಾನ್ಯ , ಉಪಮೇಯರ್ – ಸಾಮಾನ್ಯ (ಮಹಿಳೆ)
    ಮೈಸೂರು: ಮೇಯರ್ -ಸಾಮಾನ್ಯ, ಉಪಮೇಯರ್ – ಒಬಿಸಿ (ಮಹಿಳೆ)
    ಶಿವಮೊಗ್ಗ: ಮೇಯರ್ -ಒಬಿಸಿ, ಉಪಮೇಯರ್ -ಸಾಮಾನ್ಯ (ಮಹಿಳೆ)
    ತುಮಕೂರು: ಮೇಯರ್ -ಎಸ್‌ಸಿ (ಮಹಿಳೆ), ಉಪಮೇಯರ್ – ಒಬಿಸಿ
    ವಿಜಯಪುರ: ಮೇಯರ್ -ಎಸ್‌ಟಿ, ಉಪಮೇಯರ್ – ಒಬಿಸಿ

    Live Tv
    [brid partner=56869869 player=32851 video=960834 autoplay=true]

  • ಕಲಬುರಗಿಯಲ್ಲಿ ಮೈತ್ರಿಗೆ ಸಿದ್ದರಾಮಯ್ಯ ವಿರೋಧ- ಮಾಜಿ ಸಿಎಂ ಲೆಕ್ಕಾಚಾರ ಏನು?

    ಕಲಬುರಗಿಯಲ್ಲಿ ಮೈತ್ರಿಗೆ ಸಿದ್ದರಾಮಯ್ಯ ವಿರೋಧ- ಮಾಜಿ ಸಿಎಂ ಲೆಕ್ಕಾಚಾರ ಏನು?

    ಬೆಂಗಳೂರು: ಕಲಬುರಗಿಯಲ್ಲಿ ಮೈತ್ರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದುತ್ತಿದ್ದು, ಜಾತ್ಯತೀತ ಸಿದ್ಧಾಂತಕ್ಕೆ ಪೆಟ್ಟು ಬೀಳುವ ಲೆಕ್ಕಾಚಾರವಿದೆ.

    ಒಂದು ಮಹಾನಗರ ಪಾಲಿಕೆ ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ಕೈಕೋಡಿಸದೆ ಸುಮ್ಮನಿರುವುದು ಒಳಿತು. ಆಗ ಜೆಡಿಎಸ್ ಸಹಜವಾಗಿಯೆ ಬಿಜೆಪಿ ಜೊತೆ ಕೈಜೋಡಿಸಿ ಅಧಿಕಾರ ಹಿಡಿಯಲು ಮುಂದಾಗುತ್ತೆ. ಮೊದಲೇ ಜೆಡಿಎಸ್ ಬಗ್ಗೆ ರಾಜ್ಯದ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸಾಕಷ್ಟು ಅನುಮಾನಗಳಿವೆ. ಅದರಲ್ಲೂ ಬಿಜೆಪಿಯ ಬಿ ಟೀಮ್ ನಂತೆ ವರ್ತಿಸಿ ಈಗಾಗಲೇ ಅಲ್ಪಸಂಖ್ಯಾತರ ವಿಶ್ವಾಸ ಕಳೆದುಕೊಂಡಿದೆ. ಈಗಲೂ ಮತ್ತೊಮ್ಮೆ ಬಿಜೆಪಿ ಜೊತೆ ಹೋಗಲಿ ಅಧಿಕಾರ ನಡೆಸಲಿ. ಆಗ ಸಹಜವಾಗಿಯೆ ಮುಸ್ಲಿಂ ಮತಗಳು ಜೆಡಿಎಸ್ ನಿಂದ ಮತ್ತಷ್ಟು ದೂರವಾಗುತ್ತೆ. ಹೀಗೆ ಕೈ ಪಾಳಯಕ್ಕೆ ಅಲ್ಪ ಸಂಖ್ಯಾತ ಮತ ಗುಡ್ಡೆ ಹಾಕುವ ತಂತ್ರ ಸಿದ್ದರಾಮಯ್ಯನವರದು ಎನ್ನಲಾಗುತ್ತಿದೆ.

    ಆದ್ದರಿಂದ ಕಲಬುರಗಿ ಪಾಲಿಕೆ ವಿಚಾರದಲ್ಲಿ ಕಾಂಗ್ರೆಸ್ ಮೌನವಾಗಿರವುದು ಒಳಿತು. ಬಿಜೆಪಿ ಜೆಡಿಎಸ್ ಮೈತ್ರಿಯಾದರೆ ಆಗಲಿ ಜೆಡಿಎಸ್ ಪಾಲಿನ ಅಲ್ಪ ಸಂಖ್ಯಾತ ವೋಟ್ ಬ್ಯಾಂಕ್ ಇದರಿಂದ ಛಿದ್ರವಾಗುತ್ತೆ. ಕಾಂಗ್ರೆಸ್ ಪರವಾದ ಅಲ್ಪಸಂಖ್ಯಾತರ ಒಲವು ಇನ್ನಷ್ಟು ಹೆಚ್ಚುತ್ತೆ ಅನ್ನೋದು ಸಿದ್ದರಾಮಯ್ಯ ಲೆಕ್ಕಾಚಾರ ಎನ್ನಲಾಗುತ್ತಿದೆ. ಇದನ್ನೂ ಓದಿ: ಹೆಚ್‍ಡಿಕೆಗೆ ಕಲಬುರಗಿ ಮೈತ್ರಿ ಪವರ್ – ಮೇಯರ್ ಪಟ್ಟದ ಬೇಡಿಕೆ ಅಸ್ತ್ರ ಏಕೆ?

  • ಹೆಚ್‍ಡಿಕೆಗೆ ಕಲಬುರಗಿ ಮೈತ್ರಿ ಪವರ್ – ಮೇಯರ್ ಪಟ್ಟದ ಬೇಡಿಕೆ ಅಸ್ತ್ರ ಏಕೆ?

    ಹೆಚ್‍ಡಿಕೆಗೆ ಕಲಬುರಗಿ ಮೈತ್ರಿ ಪವರ್ – ಮೇಯರ್ ಪಟ್ಟದ ಬೇಡಿಕೆ ಅಸ್ತ್ರ ಏಕೆ?

    ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿಯ ಅಧಿಕಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮೇಲಿದೆ.

    ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ದೋಸ್ತಿಗೆ ಪೈಪೋಟಿ ಶುರುವಾಗಿದ್ದು, 2 ರಾಷ್ಟ್ರೀಯ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಇತ್ತ ಜೆಡಿಎಸ್ ಮಾತ್ರ ರಾಜಕೀಯ ಚದುರಂಗದಾಟ ಶುರು ಮಾಡಿದೆ. ಕಲಬುರಗಿಯಲ್ಲಿ ‘ಪವರ್’ ಆಟ ಆಡಲು ಚಾಣಾಕ್ಷ ದಾಳ ಉರುಳಿಸಿರುವ ಹೆಚ್‍ಡಿಕೆ, ಮೇಯರ್ ಸ್ಥಾನ ಕೊಡೋ ಪಕ್ಷಕ್ಕೆ ನಮ್ಮ ಬೆಂಬಲ ಎಂದು ಜೆಡಿಎಸ್ ಷರತ್ತು ಹಾಕಿದೆ.

    ಅಷ್ಟಕ್ಕೂ ಹೆಚ್‍ಡಿಕೆ ಮೇಯರ್ ಸ್ಥಾನ ಬೇಕೆಂಬ ಅಸ್ತ್ರ ಹೂಡಿರುವ ಹಿಂದೆ ನಾನಾ ಲೆಕ್ಕಾಚಾರಗಳು ಇವೆ. ಕಲಬುರಗಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಜೆಡಿಎಸ್ ಗೆ ಅಸ್ತಿತ್ವ ಗಟ್ಟಿ ಮಾಡಿಕೊಳ್ಳಬೇಕಾಗಿದೆ. ಪಕ್ಷ ಸಂಘಟನೆ, ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಳೆದಿಕೊಂಡ ಪ್ರಭಾವ, ವರ್ಚಸ್ಸು ಮತ್ತೆ ಗಳಿಸಿಕೊಳ್ಳಬೇಕಿದೆ. ಆದರೆ ಕೈಯಲ್ಲಿ ಅಧಿಕಾರ, ಸಂಪನ್ಮೂಲ, ಮುಖಂಡರು, ಕಾರ್ಯಕರ್ತರು ಇಲ್ಲದಿದ್ದರೆ ಇವ್ಯಾವುದೂ ಕೂಡಲ್ಲ. ಹಾಗಾಗಿಯೇ ತಾನೇ ಮೊದಲು ಅಧಿಕಾರ ಹಿಡಿಯುವ ಉಮೇದಿಗೆ ಜೆಡಿಎಸ್ ಬಂದಿದೆ. ಇದನ್ನೂ ಓದಿ: JDS ಜೊತೆ ಹೊಂದಾಣಿಕೆ ಸಾಹಸಕ್ಕೆ ಕೈಹಾಕಿ, ನಿಮ್ಮ ಕುರ್ಚಿಗೆ ಕುತ್ತು ತಂದ್ಕೋಬೇಡಿ- ಸಿಎಂಗೆ ರೇವಣ್ಣ ಸಲಹೆ

    ಇತ್ತ ಹೆಚ್‍ಡಿಕೆ ಅಧಿಕಾರ ಹಿಡಿಯುವ ಆಟದಲ್ಲಿ ಗೆಲ್ಲಲೇಬೇಕೆಂಬ ಪಣ ತೊಟ್ಟಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ವೀಕ್ ನೆಸ್ ಗೊತ್ತಿದ್ದೇ ಮೇಯರ್ ಗಿರಿಗೆ ಷರತ್ತು ಹಾಕಿದ್ದಾರೆ. ಹೀಗಾಗಿಯೇ ಹೆಚ್‍ಡಿಕೆ ಅಧಿಕಾರರೂಢ ಪಕ್ಷ ಬಿಜೆಪಿ ಪರ ಒಲವು ಇಟ್ಟುಕೊಂಡಿದ್ದಾರೆ. ಆದರೆ ಜಾತ್ಯಾತೀತ ಮನಸ್ಥಿತಿಯ ದೇವೇಗೌಡರಿಗೆ ಕಾಂಗ್ರೆಸ್ ಪರ ಒಲವಿದೆ. ಬಿಜೆಪಿಗಿಂತಲೂ ಕಾಂಗ್ರೆಸ್ ಜತೆ ಕೈಜೋಡಿಸುವುದು ದೇವೇಗೌಡರ ಇಚ್ಛೆಯಾಗಿದೆ.

     

    ಮೈತ್ರಿ ಸರ್ಕಾರದಲ್ಲಿ ಆಗಿರೋ ಕೆಟ್ಟ ಅನುಭವ ಗೌಡರಿಗೆ ಚೆನ್ನಾಗಿಯೇ ಗೊತ್ತು. ಆದರೂ ಕಾಂಗ್ರೆಸ್ ಕಡೆಯೇ ಗೌಡರು ಹೆಚ್ಚು ವಾಲಲು ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿ ಕೋಮುವಾದಿ ಪಕ್ಷ ಅನ್ನೋದು ಕಾರಣವಾಗಿದೆ. ಆದರೆ ಸದ್ಯಕ್ಕೆ ಜೆಡಿಎಸ್ ನಲ್ಲಿ ಹೆಚ್‍ಡಿಕೆ ಮಾತೇ ನಡೆಯುತ್ತಿದ್ದು, ಅವರ ನಿರ್ಧಾರವೇ ಅಂತಿಮವಾಗಿದೆ. ದೊಡ್ಡಗೌಡರಿಗೂ ಕುಮಾರಸ್ವಾಮಿ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ದಳಪತಿಗಳ ಒಮ್ಮತದ ನಿರ್ಧಾರ ಬಿಜೆಪಿ ಪರವೇ ಇರೋ ಸಾಧ್ಯತೆಯೇ ಹೆಚ್ಚು. ಸದ್ಯಕ್ಕೆ ಜೆಡಿಎಸ್ ಷರತ್ತಿನ ಆಡ ಆಡುತ್ತಿದ್ದು, ಸಮಯ ನೋಡಿ ಅಧಿಕೃತ ನಿರ್ಧಾರ ಪ್ರಕಟಸಲಿದೆ.

  • ಕಲಬುರಗಿ ಪಾಲಿಕೆ ಪಟ್ಟಕ್ಕೆ ಮೈತ್ರಿ ಅನಿವಾರ್ಯ – ಜೆಡಿಎಸ್ ಜೊತೆ ಕೈ ಜೋಡಿಸಲು ಸಿದ್ದು ವಿರೋಧ

    ಕಲಬುರಗಿ ಪಾಲಿಕೆ ಪಟ್ಟಕ್ಕೆ ಮೈತ್ರಿ ಅನಿವಾರ್ಯ – ಜೆಡಿಎಸ್ ಜೊತೆ ಕೈ ಜೋಡಿಸಲು ಸಿದ್ದು ವಿರೋಧ

    ಬೆಂಗಳೂರು: ಜೆಡಿಎಸ್ ಜೊತೆ ಮೈತ್ರಿ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಇದ್ದು, ಆದರೆ ಕಲಬುರಗಿಯಲ್ಲಿ ಮೈತ್ರಿಗೆ ಕಾಂಗ್ರೆಸ್ಸಿನಲ್ಲೇ ಅಪಸ್ವರ ಎದ್ದಿದೆ. ಮೈತ್ರಿ ವಿಚಾರವಾಗಿ ನಾಯಕರಿಬ್ಬರ ನಡುವೆ ಅಸಮಾಧಾನ ಭುಗಿಲೆದ್ದಿದೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಸಹವಾಸಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ. ಬಹಿರಂಗ ಮೈತ್ರಿ ಬೇಡ, ಒಳ ಒಪ್ಪಂದ ಇರಲಿ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಬಹಿರಂಗ ಮೈತ್ರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಜೆಡಿಎಸ್ ಜೊತೆ ಮೈತ್ರಿಗೆ ಒಲವು ತೋರಿದ್ದಾರೆ. ಇದನ್ನೂ ಓದಿ: ಜಿ.ಟಿ.ದೇವೇಗೌಡ ಪಕ್ಷಕ್ಕೆ ಡ್ಯಾಮೇಜ್ ಮಾಡಿಲ್ಲ: ಎಚ್‍ಡಿಡಿ

    ಕಲಬುರಗಿ ಒಂದು ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಂಡರೆ ಅದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎಂಬ ಸಂದೇಶ ರವಾನೆ ಆಗಿತ್ತದೆ. ಈ ಸಂದೇಶ ಕಾಂಗ್ರೆಸ್ಸಿಗೆ ಯಾವತ್ತೂ ಲಾಭವಲ್ಲ. ಬದಲಿಗೆ ಜೆಡಿಎಸ್-ಕಾಂಗ್ರೆಸ್ ಜೊತೆಗೆ ಮೈತ್ರಿ ಎಂಬ ಅವಕಾಶವನ್ನೇ ಬಳಸಿಕೊಂಡು ಬೇರೆ ಕಡೆಯೂ ಲಾಭಕ್ಕೆ ಪ್ರಯತ್ನಿಸುತ್ತದೆ. ಆದ್ದರಿಂದ ಬಹಿರಂಗ ಮೈತ್ರಿ ಬೇಡವೇ ಬೇಡ, ಜೆಡಿಎಸ್ ಜೊತೆ ಒಳ ಒಪ್ಪಂದ ಬೇಕಾದರೆ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.

    ಇತ್ತ ಖರ್ಗೆ, ಕಲಬುರಗಿಯಲ್ಲಿ ಜೆಡಿಎಸ್ ಜೊತೆ ಬಹಿರಂಗ ಮೈತ್ರಿ ಆದರೆ ಅಧಿಕಾರ ಸಿಗುತ್ತೆ ಆಗೋಣ ಎಂದು ಪಟ್ಟು ಹಿಡಿಸಿದ್ದಾರೆ. ಆದರೆ ಮತ್ತೆ ಮೈತ್ರಿ ಮಾತು ಬೇಡ ಅದರಿಂದ ಪಕ್ಷಕ್ಕೆ ಹಿನ್ನಡೆ ಒಳ ಒಪ್ಪಂದ ಏನು ಬೇಕಾದರು ಮಾಡಿಕೊಳ್ಳಲಿ ಎಂದು ಪಟ್ಟು ಹಿಡಿದಿರುವ ಸಿದ್ದರಾಮಯ್ಯ, ಹಠಕ್ಕೆ ಬಿದ್ದಿದ್ದಾರೆ. ಒಂದು ಪಾಲಿಕೆಗಾಗಿ ಮೈತ್ರಿ ಧರ್ಮ ಪಾಲನೆ ಎಂಬುದು ಯಾವುದೂ ಬೇಡವೆ ಬೇಡ. ಸ್ಥಳೀಯವಾಗಿ ಏನಾದರು ಒಳ ಒಪ್ಪಂದ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಪಟ್ಟು ಬಿಗಿಗೊಳಿಸಿ ಕೂತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕಲಬುರಗಿ ಪಾಲಿಕೆ ಮೈತ್ರಿ ವಿಚಾರವಾಗಿ ಖರ್ಗೆ ನನಗೆ ಕಾಲ್ ಮಾಡಿದ್ರು: ಎಚ್‍ಡಿಡಿ

    ಒಟ್ಟಿನಲ್ಲಿ ಇದೀಗ ಮಲ್ಲಿಕಾರ್ಜುನ ಖರ್ಗೆಯವರ ಮೈತ್ರಿ ಧರ್ಮ ಪಾಲನೆ ಪ್ರಯತ್ನ ಗೆಲ್ಲುತ್ತಾ….? ಸಿದ್ದರಯ್ಯ ಒಳ ಒಪ್ಪಂದ ಮರ್ಮ ಗೆಲ್ಲುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ.

  • ಕೋವಿಡ್ ಇತಿಮಿತಿಯಲ್ಲಿ ನಮ್ಮ ಶ್ರಮಕ್ಕೆ ಸಮಾಧಾನಕರ ಫಲಿತಾಂಶ ಬಂದಿದೆ: ಡಿಕೆಶಿ

    ಕೋವಿಡ್ ಇತಿಮಿತಿಯಲ್ಲಿ ನಮ್ಮ ಶ್ರಮಕ್ಕೆ ಸಮಾಧಾನಕರ ಫಲಿತಾಂಶ ಬಂದಿದೆ: ಡಿಕೆಶಿ

    ಬೆಂಗಳೂರು: ಕೋವಿಡ್ ನಿಬಂಧ ಇತಿಮಿತಿಗಳ ಮಧ್ಯೆ ನಾವು ಬೆಳಗಾವಿ, ಕಲಬುರ್ಗಿ, ಧಾರವಾಡದ ಪಾಲಿಕೆ ಚುನಾವಣೆ ಎದುರಿಸಿದ್ದು, ನಮಗೆ ಸಮಾಧಾನಕರ ಫಲಿತಾಂಶ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.

    ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲಿ ಗೆಲುವು ಸಿಗದಿದ್ದರೂ ನಮ್ಮ ಫಲಿತಾಂಶ ಸುಧಾರಿಸಿದೆ. ಇಷ್ಟು ದಿನ ಬೆಳಗಾವಿಯಲ್ಲಿ ಪಕ್ಷದಿಂದ ಅಭ್ಯರ್ಥಿ ನಿಲ್ಲಿಸುತ್ತಿರಲಿಲ್ಲ. ಅಲ್ಲಿ ಸುಮಾರು 10 ಕ್ಷೇತ್ರ ಗೆಲ್ಲುವುದಾಗಿ ಕಾರ್ಯಕರ್ತರು ವರದಿ ಕೊಟ್ಟಿದ್ದರು. ಅಭ್ಯರ್ಥಿಯನ್ನು ನಿಲ್ಲಿಸಬಾರದು ಎಂದು ಸ್ಥಳೀಯ ಮಟ್ಟದಲ್ಲಿ ಒತ್ತಡವೂ ಇತ್ತು. ಆದರೂ ನಾವು ಅಭ್ಯರ್ಥಿಗಳನ್ನು ನಿಲ್ಲಿಸಿದೆವು. ನಮಗೆ ಬೆಳಗಾವಿಯಲ್ಲಿ ದೊಡ್ಡ ಸಂಖ್ಯೆ ಬರದೇ ಇದ್ದರೂ ಉತ್ತಮ ಪ್ರಾರಂಭ ಪಡೆದಿದ್ದೇವೆ. ಮುಂದೆ ನಾವು ಎಲ್ಲಿ ಸರಿ ಮಾಡಿಕೊಳ್ಳಬೇಕೋ ಅಲ್ಲಿ ಮಾಡಿಕೊಳ್ಳುತ್ತೇವೆ. ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ. ಮುಂದೆ ಜಾಗೃತರಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸೋಲನ್ನ ನಾವು ಒಪ್ಪಿಕೊಳ್ತೇವೆ: ಡಿಕೆಶಿ

    ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಾದರೂ ಅದು ಸ್ಥಳೀಯ ಅಭ್ಯರ್ಥಿಗಳ ಮೇಲೆ ನಿರ್ಧಾರವಾಗುತ್ತದೆ. ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುವಂತಹ ಮೀಸಲಾತಿ ನೀಡಿ ಚುನಾವಣೆ ನಡೆಸಲಾಗಿದೆ. ರಾಜಕಾರಣದಲ್ಲಿ ಇದು ಸಹಜ. ಈ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ. ಹುಬ್ಬಳ್ಳಿ-ಧಾರವಾಡದಲ್ಲಿ ಹಾಲಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಪ್ರತಿನಿಧಿಸುತ್ತಿದ್ದು, ಆದರೂ ನಮಗೆ ಬಂದಿರುವ ಫಲಿತಾಂಶ ಸಮಾಧಾನ ತಂದಿದೆ. ನಾವು ಎಲ್ಲ ಕಡೆಗಳಲ್ಲೂ ಹೋಗಿ ಸಭೆ ಮಾಡಿದ್ದೇವೆ, ಕಾರ್ಯಧ್ಯಕ್ಷರಿಗೆ ಉಸ್ತುವಾರಿ ಕೊಟ್ಟಿದ್ದೆವು. ಕೋವಿಡ್ ಸಮಯದಲ್ಲಿ ಇದ್ದ ಇತಿಮಿತಿಯಲ್ಲಿ ನಾವು ಕೆಲಸ ಮಾಡಿದ್ದೇವೆ. ಬಿಜೆಪಿಯವರಂತೆ ನಮಗೆ ಆರ್ಥಿಕ ಶಕ್ತಿ ಇಲ್ಲದೇ ಇರಬಹುದು, ಆದರೆ ಉಳಿದ ಎಲ್ಲ ರೀತಿ ಶ್ರಮವನ್ನು ನಾವು ಹಾಕಿದ್ದೇವೆ ಎಂದು ನುಡಿದರು.

    ನಮಗೆ ಪ್ರಚಾರ ಮಾಡಲು ಎಲ್ಲಿ ಅವಕಾಶ ನೀಡಿದ್ದರು? ಕೋವಿಡ್ ನಿಯಮಾವಳಿಗಳ ಹೆಸರಲ್ಲಿ ನಮ್ಮನ್ನು ಕಟ್ಟಿಹಾಕಿದರು. ಆದರೆ ಅವರು ಮಾತ್ರ, ಆಡಳಿತ ಯಂತ್ರ, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರಿಗೆ ಪ್ರಚಾರ ಮಾಡಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು. ನಮಗೆ ಕೊಡಲಿಲ್ಲ. ಹೀಗಾಗಿ ನಾವು ಇತಿಮಿತಿಯಲ್ಲೇ ನಮ್ಮ ಪ್ರಯತ್ನ ಮಾಡಿದ್ದೇವೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಸಿದ್ದರಾಮಯ್ಯ ಜಾತ್ಯಾತೀತ ನಾಯಕನಲ್ಲ, ಅವನೊಬ್ಬ ಜಾತಿ ರಾಜಕಾರಣಿ: ಶ್ರೀರಾಮುಲು

    ಈ ಫಲಿತಾಂಶ ಬಿಬಿಎಂಪಿ, ಬೇರೆ ಚುನಾವಣೆಗಳಿಗೆ ದಿಕ್ಸೂಚಿ ಎಂದು ಬಿಜೆಪಿಯವರು ವಿಶ್ಲೇಷಿಸುತ್ತಿದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲ ತಿಂಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 7ರಲ್ಲಿ ಕಾಂಗ್ರೆಸ್, 2ರಲ್ಲಿ ಜೆಡಿಎಸ್, ಬಿಜೆಪಿ ಕೇವಲ 1ರಲ್ಲಿ ಮಾತ್ರ ಜಯಿಸಿತ್ತು. ಆಗ ನಾನು ಇದು ಮುಂದಿನ ಚುನಾವಣೆ ದಿಕ್ಸೂಚಿ ಎಂದು ಹೇಳಿದ್ದೆನಾ? ಮೊನ್ನೆ ನಡೆದ ಉಪಚುನಾವಣೆ ದಿಕ್ಸೂಚಿ ಎಂದು ಹೇಳಲು ಸಾಧ್ಯವೇ ಎಂದು ಮರು ಪ್ರಶ್ನಿಸಿದರು. ಇದನ್ನೂ ಓದಿ: ಪಾಲಿಕೆ ಚುನಾವಣೆ- ಒಂದೇ ಕುಟುಂಬದ ಮೂವರ ಗೆಲುವು

  • ಕಾಂಗ್ರೆಸ್ ಅಪಪ್ರಚಾರಕ್ಕೆ ಜನ ಉತ್ತರಿಸಿದ್ದಾರೆ: ಕೋಟ

    ಕಾಂಗ್ರೆಸ್ ಅಪಪ್ರಚಾರಕ್ಕೆ ಜನ ಉತ್ತರಿಸಿದ್ದಾರೆ: ಕೋಟ

    ಉಡುಪಿ: ಪಾಲಿಕೆ ಚುನಾವಣೆ ಫಲಿತಾಂಶದ ಮೂಲಕ ರಾಜ್ಯದಲ್ಲಿ ಬಿಜೆಪಿ ವಾತಾವರಣ ಉತ್ತಮವಾಗುತ್ತಿದೆ. ಕಾಂಗ್ರೆಸ್‍ನ ಅಪಪ್ರಚಾರ ರಾಜ್ಯದ ಜನಕ್ಕೆ ಅರ್ಥ ಆಗಿದೆ ಹಾಗಾಗಿ ಸರಿಯಾದ ಉತ್ತರ ನೀಡಿದ್ದಾರೆ ಎಂದು ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಪ್ರಚಾರ ಮತ್ತು ಅಪಪ್ರಚಾರದಲ್ಲಿ ತಿರುಳಿಲ್ಲ ಎಂಬುದು ರಾಜ್ಯದ ಜನಕ್ಕೆ ಗೊತ್ತಾಗಿದೆ. ಜನ ಬಿಜೆಪಿ ಮತ್ತು ಪ್ರಧಾನಿ ಮೋದಿಯ ಕಾರ್ಯಶೈಲಿಗೆ ಮತ ಹಾಕಿದ್ದಾರೆ. ಸಿಎಂ ಬೊಮ್ಮಾಯಿ ಓಡಾಟ, ಸಂಘಟನಾತ್ಮಕ ಚಟುವಟಿಕೆಯನ್ನು ನೋಡಿ ಜನ ನಮ್ಮನ್ನು ಗೆಲ್ಲಿಸಿದ್ದಾರೆ. ಜನಪರವಾಗಿರುವ ಬಿಜೆಪಿಗೆ ಮತದಾರ ಆಶೀರ್ವಾದ ಮಾಡಿದ್ದಾನೆ ಎಂದು ಅಭಿಪ್ರಾಯಪಟ್ಟರು.

    ಬಿಜೆಪಿಗೆ ಎಲ್ಲಾ ಕಡೆ ಬಹುಮತ ಬಂದಿದೆ. ಅತಂತ್ರ ಇದ್ದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಗರಾಡಳಿತ ಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿದೆ. ಇಡೀ ರಾಜ್ಯದಲ್ಲಿ ಬಿಜೆಪಿಯ ವಾತಾವರಣ ಉತ್ತಮ ಆಗುತ್ತಿದ್ದು, ಸಮಸ್ಯೆ ಬಗೆಹರಿಸುವ ಶಕ್ತಿ ಬಿಜೆಪಿಗೆ ಇದೆ. ಉತ್ತಮ ಆಡಳಿತ ಕೊಡಲು ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ, ಎಲ್ಲಾ ಮತದಾರರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಸಿಕ್ಕರೂ ಬಿಜೆಪಿ ಅಧಿಕಾರಕ್ಕೆ

    ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಯಾಕೆ ಸೈಲೆಂಟ್ ಆಗಿದೆ ಗೊತ್ತಿಲ್ಲ. ಜೆಡಿಎಸ್ ಸ್ಪರ್ಧೆ ಮಾಡದಿರುವಲ್ಲಿ ನಮ್ಮ ಸ್ಥಾನಗಳು ಹೆಚ್ಚಾಗಿದೆ. ಜನ ಈ ಬಾರಿ ಅಭಿವೃದ್ಧಿಗಾಗಿ ಮತ ಹಾಕಿದ್ದಾರೆ. ನಗರವ್ಯಾಪ್ತಿಯ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ದೇಶದಲ್ಲಿ ಬಿಜೆಪಿ ಉತ್ತಮ ಆಡಳಿತ ಮಾಡುತ್ತಿದೆ ಎಂದರು. ಇದನ್ನೂ ಓದಿ: ಪಾಲಿಕೆ ಚುನಾವಣಾ ಫಲಿತಾಂಶ- ಮತದಾರರಿಗೆ, ಪಕ್ಷದ ಹಿರಿಯ ನಾಯಕರಿಗೆ ಸಿಎಂ ಧನ್ಯವಾದ

  • ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಸಿಕ್ಕರೂ ಬಿಜೆಪಿ ಅಧಿಕಾರಕ್ಕೆ

    ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಸಿಕ್ಕರೂ ಬಿಜೆಪಿ ಅಧಿಕಾರಕ್ಕೆ

    ಕಲಬುರಗಿ: ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರಬಂದಿದ್ದು, ಕಾಂಗ್ರೆಸ್ ಅತೀ ಹೆಚ್ಚು 27 ಸ್ಥಾನಗಳನ್ನು ಗೆದ್ದುಕೊಂಡಿದೆ.

    ಮಹಾನಗರ ಪಾಲಿಕೆಯ ಎಲ್ಲಾ 55 ವಾರ್ಡ್‍ಗಳ ಫಲಿತಾಂಶ ಪ್ರಕಟಗೊಂಡಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷ 27 ವಾರ್ಡ್‍ಗಳಲ್ಲಿ ಗೆಲುವು ಕಂಡರೆ, ಬಿಜೆಪಿ 23 ವಾರ್ಡ್‍ಗಳಲ್ಲಿ ಗೆಲುವಿನ ನಗೆ ಬೀರಿದೆ. ಉಳಿದಂತೆ ಜೆಡಿಎಸ್ 4 ವಾರ್ಡ್ ಮತ್ತು ಪಕ್ಷೇತರ 1 ವಾರ್ಡ್‍ಗಳಲ್ಲಿ ಗೆಲುವು ಕಂಡಿದೆ. ಇದನ್ನೂ ಓದಿ: ಮೂರು ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಲಿದೆ : ಕಟೀಲ್ ಸಂತಸ

    ಕಾಂಗ್ರೆಸ್ 27 ಸ್ಥಾನಗಳನ್ನು ಪಡೆದರು ಕೂಡ ಬಿಜೆಪಿ 23 ಸ್ಥಾನಗಳೊಂದಿಗೆ ಸಂಸದರು, ಶಾಸಕರು, ಎಂಎಲ್‍ಸಿಗಳ ವೋಟ್‍ಗಳೊಂದಿಗೆ ಪಕ್ಷೇತರ ಮತ್ತು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಪಾಲಿಕೆ ಚುಕ್ಕಾಣಿಯನ್ನು ಪಡೆಯಬಹುದು. ಎಐಎಮ್‍ಎಮ್ ಪಕ್ಷ ಕಾಂಗ್ರೆಸ್‍ಗೆ ಕಲಬುರಗಿಯಲ್ಲಿ ಮುಳುವಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

  • ಕೊಡಗಿನ ಪಟ್ಟಣ ಪಂಚಾಯತ್ ಅಧ್ಯಕ್ಷೆ ಕೊರೊನಾಗೆ ಬಲಿ

    ಕೊಡಗಿನ ಪಟ್ಟಣ ಪಂಚಾಯತ್ ಅಧ್ಯಕ್ಷೆ ಕೊರೊನಾಗೆ ಬಲಿ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪಟ್ಟಣ ಪಂಚಾಯತಿ ಅಧ್ಯಕ್ಷೆ ನಳಿನಿ ಗಣೇಶ್ ಕೊರೊನಾ ಮಾಹಾಮಾರಿಗೆ ಬಲಿಯಾಗಿದ್ದಾರೆ.

    2020ರ ನವೆಂಬರ್‍ ನಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ನಳಿನಿ ಗಣೇಶ್ ಅವರು. ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್‍ನ ನಿರ್ದೇಶಕಿ ಕೂಡ ಆಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದ ಬಳಿಕ ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಳಿನಿ ಗಣೇಶ್ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಡುತ್ತಿತ್ತು. ಬಳಿಕ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

    ಅಪ್ಪಚ್ಚು ರಂಜನ್ ಸಂತಾಪ
    ನಳಿನಿ ಗಣೇಶ್ ಅವರ ಅಕಾಲಿಕ ನಿಧನಕ್ಕೆ ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚುರಂಜನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಅಗಲಿಕೆಯ ಶೋಕವನ್ನು ತಡೆದುಕೊಳ್ಳುವ ಶಕ್ತಿ ಕುಟುಂಬವರ್ಗಕ್ಕೆ ದೊರಕಲಿ ಎಂದು ಅಪ್ಪಚ್ಚು ರಂಜನ್ ಹಾಗೂ ಬಿಜೆಪಿ ಕಾರ್ಯಕರ್ತರು ಸೋಮವಾರಪೇಟೆ ಪಟ್ಟಣ ಪಂಚಾಯತಿ ಸದಸ್ಯರು ಸಂತಾಪ ಸೂಚಿಸಿದ್ದಾರೆ.

  • ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಡೇಟ್ ಫಿಕ್ಸ್

    ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಡೇಟ್ ಫಿಕ್ಸ್

    ಬಳ್ಳಾರಿ: ಕಳೆದ ಎರಡು ವರ್ಷದಿಂದ ನಿರೀಕ್ಷಿಸಲಾಗಿದ್ದ ಬಳ್ಳಾರಿ ಜಿಲ್ಲೆಯ ಮಹಾನಗರ ಪಾಲಿಕೆಗೆ ಕೊನೆಗೂ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಈ ಕುರಿತು ಏಪ್ರಿಲ್ 8 ರಂದು ಅಧಿಸೂಚನೆ ಹೊರ ಬೀಳಲಿದೆ ಎಂದು ವರದಿಯಾಗಿದೆ.

    ನಗರದಲ್ಲಿನ 35 ವಾರ್ಡುಗಳನ್ನು 39 ವಾರ್ಡುಗಳನ್ನಾಗಿ ವಿಂಗಡಿಸಿ ಅವುಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. ಏಪ್ರಿಲ್ 8 ರಿಂದ 15ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಏಪ್ರಿಲ್ 16 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

    ಏಪ್ರಿಲ್ 19ರ ವರೆಗೆ ಅಭ್ಯರ್ಥಿಗಳು ಸಲ್ಲಿಸಿದಂತಹ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ತೀವ್ರ ಸ್ಪರ್ಧೆ ಏರ್ಪಟ್ಟ ನರರದ ವಾರ್ಡಗಳಲ್ಲಿ ಏಪ್ರಿಲ್ 27 ರಂದು ಮತದಾನ ಮುಂಜಾನೆ 7 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಏಪ್ರಿಲ್ 30 ರಂದು ಮತಗಳ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.