– ಅವಮಾನ ತಾಳಲಾಗದೇ ಕೋರ್ಟ್‌ನ 5ನೇ ಫ್ಲೋರ್‌ನಿಂದ ಬಿದ್ದು ಆತ್ಮಹತ್ಯೆಗೆ ಶರಣು
ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ (City Civil Court) ಆವರಣದಲ್ಲಿ ಆರೋಪಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಕೋರ್ಟ್‌ನ 5ನೇ ಫ್ಲೋರ್‌ನಿಂದ ಬಿದ್ದು ಗೌತಮ್ ಎಂಬ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರಣೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಿಂದ ಆರೋಪಿಯನ್ನು ಕೋರ್ಟ್ಗೆ ಕರೆತರಲಾಗಿತ್ತು. ಈ ವೇಳೆ ಕೋರ್ಟ್ನ ಮಹಡಿಯಿಂದ ಆರೋಪಿ ಜಿಗಿದಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಮೈಸೂರು ದಸರೆಗೆ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ – ರೇಪ್ & ಮರ್ಡರ್ ಶಂಕೆ
ಪೋಕ್ಸೊ ಕೇಸಲ್ಲಿ ಆರೋಪಿಯನ್ನ ಕೋರ್ಟ್‌ಗೆ ಕರೆತರಲಾಗಿತ್ತು. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನ ಕೋರ್ಟ್ಗೆ ಕರೆತಂದಾಗ ಕುಟುಂಬದವರು ಕೂಡ ಉಪಸ್ಥಿತರಿದ್ದರು. ಅವಮಾನ ತಾಳಲಾರದೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು: ಯಾವುದೇ ಪಕ್ಷದ ಚಿಹ್ನೆ ಬಳಸದಂತೆ ಸಿಎಂ ಇಬ್ರಾಹಿಂಗೆ (CM Ibrahim) ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ಹೆಚ್‍ಡಿಡಿ ಕುಟುಂಬದ ವಿರುದ್ಧವೇ ಸಿಎಂ ಇಬ್ರಾಹಿಂ ತೊಡೆ ತಟ್ಟಿದರು. ಈ ಹಿನ್ನೆಲೆಯಲ್ಲಿ ಹೆಚ್.ಡಿ ದೇವೇಗೌಡರ (HD Devegowda) ನೇತೃತ್ವದಲ್ಲಿ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಆದರೆ ಜೆಡಿಎಸ್‍ನಿಂದ (JDS) ಉಚ್ಛಾಟನೆಯಾದರೂ ಸಿಎಂ ಇಬ್ರಾಹಿಂ ಜೆಡಿಎಸ್ ಪಕ್ಷದ ಚಿನ್ನೆ ಬಳಸುತ್ತಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಇದೀಗ ಯಾವುದೇ ಪಕ್ಷದ ಚಿಹ್ನೆ ಬಳಸದಂತೆ ಆದೇಶ ನೀಡುವುದರ ಜೊತೆಗೆ ಜೆಡಿಎಸ್ ಪಕ್ಷದ ಚಿಹ್ನೆ, ಲೆಟರ್ ಹೆಡ್ ಬಳಕೆ ಮಾಡುವಂತಿಲ್ಲ. ಹಾಗೂ ಪಕ್ಷದ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸುವಂತಿಲ್ಲ. ಇಷ್ಟು ಮಾತ್ರವಲ್ಲದೇ ಪದಾಧಿಕಾರಿಗಳನ್ನೂ ನೇಮಕ ಮಾಡುವಂತಿಲ್ಲ ಎಂದು ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಇದನ್ನೂ ಓದಿ: ಜ.22 ರಂದು ಅಯೋಧ್ಯೆಗೆ ಹೋಗುತ್ತಿದ್ದು, ಬರ್ತ್ ಡೇ ಆಚರಿಸಿಕೊಳ್ತಿಲ್ಲ: ನಿಖಿಲ್
ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ (D Roopa) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರ ನಡುವಿನ ಜಟಾಪಟಿಗೆ ಸಿಟಿ ಸಿವಿಲ್ ಕೋರ್ಟ್ (City Civil Court) ಬ್ರೇಕ್ ಹಾಕಿತ್ತು.
ಡಿ. ರೂಪಾ ವಿರುದ್ಧ ಮಾಡಿದ್ದ ಆರೋಪಗಳನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಕೋರ್ಟ್ ಮೆಟ್ಟಿಲೇರಿದ್ದರು. ವಿನಾಕಾರಣ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರೋ ರೂಪಾ ಅವರು ಮಾತನಾಡದಂತೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ರೋಹಿಣಿ ಸಿಂಧೂರಿ ಅವರ ವಾದ ಆಲಿಸಿದ ಕೋರ್ಟ್ ರೋಹಿಣಿ ಸಿಂಧೂರಿ ಅವರ ವಿರುದ್ಧ ರೂಪಾ ಮಾತನಾಡದಂತೆ ತಡೆಯಾಜ್ಞೆ ನೀಡಿತ್ತು. ಇದನ್ನೂ ಓದಿ: ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ
ನಂತರ ಐಪಿಎಸ್ (IPS) ಅಧಿಕಾರಿ ಡಿ.ರೂಪಾ ಪರ ವಕೀಲರು ತಮ್ಮ ಮನವಿ ಪುರಸ್ಕರಿಸುವಂತೆ ಮನವಿ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಕೋರ್ಟ್ ರೂಪಾ ಪರ ವಕೀಲರ ಮನವಿಯನ್ನೂ ಪುರಸ್ಕರಿಸಿದೆ. ಹಾಗಾಗಿ ರೂಪಾ ಫೇಸ್‌ಬುಕ್ (Facebook) ವಾಲ್‌ನಲ್ಲಿ ತಮ್ಮ ವಾದ ಕೇಳಲು ಅವಕಾಶ ನೀಡಿದ ಕೋರ್ಟ್‌ಗೆ ನಾನು ಅಬಾರಿಯಾಗಿದ್ದೇನೆ. ಜೊತೆಗೆ ನನ್ನ ಬೆಂಬಲಕ್ಕೆ ನಿಂತವರಿಗೆ ನಾನು ಧನ್ಯವಾದಗಳನ್ನ ತಿಳಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ
ನನಗೆ ಬೆಂಬಲ ಕೋರಿ ಮಾಡಿದ ಸಂದೇಶಗಳಿಂದ ನನ್ನ ಮೆಸೇಜ್ ಬಾಕ್ಸ್ ಪ್ರವಾಹದಂತೆ ತುಂಬಿ ಹೋಗಿದೆ, ನನಗೆ ಅತೀವ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದು ಕೊನೆಯಲ್ಲಿ `ಸತ್ಯ ಮೇವ ಜಯತೆ’ ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ.
LIVE TV
[brid partner=56869869 player=32851 video=960834 autoplay=true]
ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ (Jayalalithaa) ಅವರಿಗೆ ಸಂಬಂಧಿಸಿದ ಕೆಲ ಆಸ್ತಿಯನ್ನು ಹರಾಜು ಹಾಕಲು ಕೋರ್ಟ್ (Court) ಅನುಮತಿ ನೀಡಿದೆ.
ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ದಾಳಿ ಮಾಡಿ ಜಯಲಲಿತಾಗೆ ಸೇರಿದ ಸೀರೆಗಳು, ವಾಚ್ ಗಳು (Watch) ಹಾಗೂ ಚಿನ್ನಾಭರಣಗಳನ್ನ (Gold Properties) ವಶಪಡಿಸಿಕೊಳ್ಳಲಾಗಿತ್ತು. ಅವೆಲ್ಲವನ್ನೂ ಕರ್ನಾಟಕ ವಿಧಾನಸೌಧದ ಖಜಾನೆಯಲ್ಲಿ ಇರಿಸಲಾಗಿತ್ತು. ಆದರೆ ಜಯಲಲಿತಾ ಅವರು ನಿಧನರಾದ ಹಿನ್ನೆಲೆಯಲ್ಲಿ ಆ ಆಸ್ತಿಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡುವಂತೆ ಆರ್‌ಟಿಐ ಕಾರ್ಯಕರ್ತ ಸಿಟಿ ಸಿವಿಲ್ ಕೋರ್ಟ್ (City Civil Court) ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ವಿಕ್ಟರಿ ವೆಂಕಟೇಶ್ ನಟನೆಯ ಎಪ್ಪತ್ತೈದನೇ ಸಿನಿಮಾ ಜನವರಿ 25ಕ್ಕೆ ಅನೌನ್ಸ್
ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ವಶಪಡಿಸಿಕೊಂಡ ವಸ್ತುಗಳನ್ನು ಮಾರಾಟ ಮಾಡಲು ಸೂಕ್ತವಾದ ಅಧಿಕಾರಿಯನ್ನು ನೇಮಿಸುವಂತೆ ಜೊತೆಗೆ ಬಂದ ಹಣದಲ್ಲಿ ಕರ್ನಾಟಕ ಸರ್ಕಾರ (Government Of Karnataka) ಖರ್ಚು ಮಾಡಿದ್ದ 5 ಕೋಟಿಯನ್ನು ತನ್ನಲ್ಲೇ ಇಟ್ಟುಕೊಂಡು ಉಳಿದ ಬಾಕಿ ಹಣವನ್ನು ತಮಿಳುನಾಡಿನ ಸರ್ಕಾರಕ್ಕೆ (TamilNadu Government) ನೀಡುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸದ್ಯ ರಾಜಾದ್ಯಂತ ಸಂಚಲನ ಸೃಷ್ಟಿಸಿರುವ `ಸಿದ್ದು ನಿಜಕನಸುಗಳು’ (Siddu NijaKanasugalu) ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಈಗ ಆಯೋಜಿಸಿದ್ದಕ್ಕಿಂತಲೂ ದೊಡ್ಡಮಟ್ಟದಲ್ಲಿ ನಡೆಸಲು ಆಡಳಿತ ಪಕ್ಷ ಬಿಜೆಪಿ (BJP) ಪ್ಲಾನ್ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
`ಸಿದ್ದು ನಿಜ ಕನಸುಗಳು’ ಪುಸ್ತಕದಿಂದ ವಿಚಲಿತರಾಗಿದ್ದ ಸಿದ್ದರಾಮಯ್ಯ (Siddaramaiah) ಅಂಡ್ ಟೀಂ ಪುಸ್ತಕ ಬಿಡುಗಡೆ ಅಂತಾ ಘೋಷಣೆ ಆಗ್ತಿದ್ದಂತೆ ಕೋರ್ಟ್‌ನಿಂದ (Court) ತಡೆಯಾಜ್ಞೆ ತಂದಿದೆ. ಇದೇ ಸಿದ್ದರಾಮಯ್ಯ ಅವರ ವೀಕ್ನೆಸ್ ಅನ್ನ ಬಳಸಿಕೊಳ್ಳೋಕೆ ಬಿಜೆಪಿ ಪ್ಲಾನ್ ಮಾಡಿದೆ. ಸಿದ್ದರಾಮಯ್ಯರನ್ನೇ ನೇರ ಟಾರ್ಗೆಟ್‌ಗೆ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
ಹೌದು. ಸಿದ್ದರಾಮಯ್ಯ ಅವರನ್ನ ಮಾತ್ರವೇ ಟಾರ್ಗೆಟ್ ಮಾಡ್ತಿರೋ ಬಿಜೆಪಿ, ಮತ್ತೆ ಪುಸ್ತಕ ರಿಲೀಸ್‌ಗೆ ಸಿದ್ಧತೆ ನಡೆಸಿದೆ. ಕೋರ್ಟ್ನ ತಡೆಯಾಜ್ಞೆ ತೆರವುಗೊಳಿಸೋಕೆ ವಿಶೇಷ ವಕೀಲರ ತಂಡವನ್ನ ಸಿದ್ಧತೆ ಮಾಡಿಕೊಂಡಿದೆ. ತಡೆಯಾಜ್ಞೆ ತೆರವಾಗುತಿದ್ದಂತೆ ಈಗ ಆಯೋಜಿಸಿದ್ದಕ್ಕಿಂತಲೂ ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಸಿದ್ದು ನಿಜಕನಸುಗಳು ಕೃತಿ ಬಿಡುಗಡೆಗೆ ಪ್ಲಾನ್ ಮಾಡಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ
ಹಾಗಾದ್ರೆ ಬಿಜೆಪಿ ಪ್ಲಾನ್ ಏನಿದೆ?: ಅದಕ್ಕಾಗಿ ವಿಶೇಷ ಲಾಯರ್‌ಗಳ ತಂಡ ಸಿದ್ಧತೆ ಮಾಡಕೊಂಡಿರೋ ಕಮಲ ಪಾಳಯ ಸಿದ್ದು ನಿಜ ಕನಸುಗಳು ಪುಸ್ತಕಕ್ಕೆ ಕೋರ್ಟ್ ಕೊಟ್ಟಿರೋ ತಡೆಯಾಜ್ಞೆ ತೆರವು ಮಾಡಲು ಕ್ರಮವಹಿಸೋದು. ತಡೆಯಾಜ್ಞೆ ತೆರವಾದ ಕೂಡಲೇ ಮತ್ತೆ ಸಿದ್ದರಾಮಯ್ಯ ವಿರುದ್ಧ ಅಟ್ಯಾಕ್ ಮಾಡೋದು. ಈಗ ಮಾಡಿದ ಕಾರ್ಯಕ್ರಮಕ್ಕಿಂತ ದೊಡ್ಡ ಕಾರ್ಯಕ್ರಮ ಮಾಡಿ ಪುಸ್ತಕ ರಿಲೀಸ್ ಮಾಡುವುದು. ಇದನ್ನೂ ಓದಿ: ಸಿದ್ದು ನಿಜಕನಸು ಪುಸ್ತಕಕ್ಕೆ ಸಿದ್ದರಾಮಯ್ಯ ಕೌಂಟರ್- ಸರಣಿ ಪೋಸ್ಟರ್ ಮೂಲಕ ತಿರುಗೇಟು
ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಸಿದ್ದು ನಿಜ ಕನಸುಗಳು ಪುಸ್ತಕ ರಿಲೀಸ್ ಮಾಡೋದು. ಕೊಲೆಯಾದ ಹಿಂದೂ ಕಾರ್ಯಕರ್ತರ ಕುಟುಂಬ ಸದಸ್ಯರು, ಮತಾಂತರಕ್ಕೆ ಬಲಿಯಾದ ಕೊಡಗು ಭಾಗದ ಜನರನ್ನ ಕರೆಸಿ ಕಾರ್ಯಕ್ರಮದಲ್ಲಿ ಮಾತನಾಡಿಸುವುದು. ಕೇವಲ ಬೆಂಗಳೂರು ಮಾತ್ರವಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಪುಸ್ತಕ ಬಿಡುಗಡೆ ಮಾಡಲು ಪ್ಲಾನ್. ಪಕ್ಷದ ಪ್ರಮುಖ ಮನೇತೃತ್ವದಲ್ಲೇ ಪ್ರಮುಖ ಜಿಲ್ಲೆಗಳಲ್ಲಿ ಪುಸ್ತಕ ಬಿಡುಗಡೆ ಮಾಡಲು ಯೋಜನೆ ರೂಪಿಸಿರುವುದಾಗಿ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಕೋರ್ಟ್ ತಡೆಯಾಜ್ಞೆ: ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ `ಸಿದ್ದು ನಿಜಕನಸುಗಳು ಸಂಪುಟ-1′ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ (CN Ashwath Narayan) ಅವರು ಪುಸ್ತಕ ಬಿಡುಗಡೆಗೊಳಿಸಬೇಕಿತ್ತು. ಈ ಪುಸ್ತಕ ಬಿಡುಗಡೆಯಾಗುತ್ತಿದೆ ಎಂಬ ವಿಚಾರ ತಿಳಿದು ಪುರಭವವನದ ಬಳಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಪುಸ್ತಕ ಬಿಡುಗಡೆ ವಿಚಾರ ಚರ್ಚೆ ಆಗುತ್ತಿದ್ದಂತೆ ಸಿದ್ದರಾಮಯ್ಯ ಪುತ್ರ ಯತೀಂದ್ರ (Yathindra Siddaramaiah) ಅವರು ಕೋರ್ಟ್ ಮೊರೆ ಹೋಗಿ ತಡೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನಗರದ ಸಿಟಿ ಸಿವಿಲ್ ಕೋರ್ಟ್ (City Civil Court) ಪುಸ್ತಕ ಬಿಡುಗಡೆಗೆ ತಡೆ ನೀಡಿದೆ. ಪುಸ್ತಕ ಬಿಡುಗಡೆ, ಮಾರಾಟ ಅಲ್ಲದೇ ಮಾಧ್ಯಮ ಪ್ರಸಾರಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಫೆ.9ಕ್ಕೆ ಮುಂದೂಡಿದೆ.
Live Tv
[brid partner=56869869 player=32851 video=960834 autoplay=true]