Tag: city

  • ದೇಶದಲ್ಲಿ 8 ಹೊಸ ನಗರ ನಿರ್ಮಾಣಕ್ಕೆ ಕೇಂದ್ರ ಯೋಜನೆ

    ದೇಶದಲ್ಲಿ 8 ಹೊಸ ನಗರ ನಿರ್ಮಾಣಕ್ಕೆ ಕೇಂದ್ರ ಯೋಜನೆ

    ನವದೆಹಲಿ: ಪ್ರಸ್ತುತ ಅಸ್ತಿತ್ವದಲ್ಲಿರುವ ದೇಶದ ಪ್ರಮುಖ ನಗರಗಳ (Cities) ಮೇಲಿನ ಹೊರೆಯನ್ನು ತಗ್ಗಿಸುವ ಪ್ರಯತ್ನದಲ್ಲಿ ಕೇಂದ್ರ ಹೊಸ 8 ನಗರಗಳನ್ನು (New Cities) ಸ್ಥಾಪಿಸಲು ಯೋಜನೆ ನಡೆಸಿರುವುದಾಗಿ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

    ದೇಶದಲ್ಲಿ 8 ಹೊಸ ನಗರಗಳನ್ನು ಅಭಿವೃದ್ಧಿಪಡಿಸಲು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವುದಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ20 ಘಟಕದ ನಿರ್ದೇಶಕ ಎಂಬಿ ಸಿಂಗ್ ತಿಳಿಸಿದ್ದಾರೆ.

    ‘ಅರ್ಬನ್ 20’ ಹೆಸರಿನ ಸಭೆಯಲ್ಲಿ ಮಾತನಾಡಿರುವ ಸಿಂಗ್ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಆಯೋಗದ ಮಹತ್ವದ ಶಿಫಾರಸಿನ ಬಳಿಕ ವಿವಿಧ ರಾಜ್ಯಗಳು ತಡ ಮಾಡದೇ ತಮ್ಮ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಇಂತಹ ಒಟ್ಟು 26 ಪ್ರಸ್ತಾಪಗಳನ್ನು ಸ್ವೀಕರಿಸಲಾಗಿದ್ದು, ಜಾಗರೂಕತೆಯಿಂದ ಪರಿಶೀಲನೆ ಮತ್ತು ವಿಶ್ಲೇಷಣೆ ನಡೆಸಿದ ಬಳಿಕ 8 ನಗರಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬಹುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂಕೋರ್ಟ್ ಜಡ್ಜ್ ಆಗಿ ಪ್ರಶಾಂತ್ ಮಿಶ್ರಾ, ಕೆವಿ ವಿಶ್ವನಾಥನ್ ಪ್ರಮಾಣ ವಚನ ಸ್ವೀಕಾರ

    ಅಸ್ತಿತ್ವದಲ್ಲಿರುವ ನಗರಗಳು ತಮ್ಮ ನಾಗರಿಕರ ಬೇಡಿಕೆಗಳನ್ನು ಪೂರೈಸಲು ಹೆಣಗಾಡುತ್ತಿವೆ ಎಂಬ ಅಂಶದ ಕಾರಣಕ್ಕೆ ಹೊಸ ನಗರಗಳನ್ನು ನಿರ್ಮಿಸಲು ಯೋಜಿಸಲಾಗುತ್ತಿದೆ. ಕೊನೆಯಲ್ಲಿ ಸರ್ಕಾರ ಆಯ್ಕೆಗೊಳಿಸಿದ 8 ಪ್ರದೇಶಗಳನ್ನು ಅಭಿವೃದ್ಧಿಗೆ ಉದ್ದೇಶಿತ ಸಮಯಾವಧಿಯೊಂದಿಗೆ ಸರಿಯಾದ ಸಮಯದಲ್ಲಿ ಬಹಿರಂಗಪಡಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯ ಒತ್ತಡದ ನಡುವೆಯೂ IPL ವೀಕ್ಷಿಸಿ ರಿಲ್ಯಾಕ್ಸ್ ಆದ ನೂತನ ಸಿಎಂ ಸಿದ್ದರಾಮಯ್ಯ

  • ಅಕ್ಟೋಬರ್‌ ವೇಳೆ ದೇಶದ ಮಹಾನಗರಗಳಲ್ಲಿ 5ಜಿ ಸೇವೆ ಲಭ್ಯ

    ಅಕ್ಟೋಬರ್‌ ವೇಳೆ ದೇಶದ ಮಹಾನಗರಗಳಲ್ಲಿ 5ಜಿ ಸೇವೆ ಲಭ್ಯ

    ಮುಂಬೈ: ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್‌ ವೇಳೆಗೆ 5ಜಿ ಸೇವೆ ಲಭ್ಯವಾಗುವ ಸಾಧ್ಯತೆಯಿದೆ.

    ಆಗಸ್ಟ್‌ ಮಧ್ಯಭಾಗದಲ್ಲಿ ಸರ್ಕಾರ ಏರ್‌ವೇವ್ಸ್‌ ಹಂಚಿಕೆ ಮಾಡಲಿದೆ. ಈ ಕಾರಣದಿಂದ ಈಗಾಗಲೇ ಪರೀಕ್ಷೆ ಮಾಡಲಾಗಿರುವ ನಗರಗಳಲ್ಲಿ ಅಕ್ಟೋಬರ್‌ನಿಂದ 5ಜಿ ಸೇವೆ ಶುರುವಾಗುವ ಸಾಧ್ಯತೆಯಿದೆ.

    ಜಿಯೋ ಈಗಾಗಲೇ ಬೆಂಗಳೂರು, ಮುಂಬೈ, ದೆಹಲಿ, ಜಾಮ್‌ನಗರ, ಚೆನ್ನೈ ಪರೀಕ್ಷೆ ನಡೆಸಿದೆ.

    ಜಿಯೋ ಮುಖ್ಯಸ್ಥ ಅಕಾಶ್‌ ಅಂಬಾನಿ, ಅಜಾದಿ ಕಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ಯಾನ್‌ ಇಂಡಿಯಾಗೆ 5ಜಿ ಸೇವೆಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 5G ಹರಾಜು ಮುಕ್ತಾಯ – 1.5 ಲಕ್ಷ ಕೋಟಿ ತಲುಪಿದ ಒಟ್ಟು ಬಿಡ್ ಮೊತ್ತ

    2022 ಅಂತ್ಯಕ್ಕೆ ದೇಶದ ಬಹುತೇಕ ನಗರಗಳಲ್ಲಿ 5ಜಿ ಸೇವೆ ಲಭ್ಯವಾಗುವ ಸಾಧ್ಯತೆಯಿದೆ.

    5ಜಿ ಸೇವೆ ಎಲ್ಲಿ ಸಿಗುತ್ತೆ?
    ಆರಂಭದಲ್ಲಿ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ 5ಜಿ ಸೇವೆ ಲಭ್ಯವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನಲ್ಲಿ ಲಸಿಕೆ ಪಡೆಯದೇ ಓಡಾಟ ನಡೆಸುವವರ ಮೇಲೆ ನಿಗಾ

    ಮಂಗಳೂರಿನಲ್ಲಿ ಲಸಿಕೆ ಪಡೆಯದೇ ಓಡಾಟ ನಡೆಸುವವರ ಮೇಲೆ ನಿಗಾ

    ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಖಚಿತ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ. ಆದರೆ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಕೂಡ ಇದೆ. ಜೊತೆಗೆ ಸಂಭಾವ್ಯ ಕೋವಿಡ್ ಮೂರನೇ ಅಲೆಯ ಭೀತಿಯನ್ನು ತಪ್ಪಿಸಲು ಲಸಿಕೆ ಪಡೆಯದೇ ಓಡಾಟ ನಡೆಸುವವರ ಮೇಲೆ ಪಾಲಿಕೆ ನಿಗಾ ವಹಿಸಿದೆ.

    ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್, ನಗರ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಷ್ಠಾನಗೊಳಿಸಿ, ಸಂಭಾವ್ಯ ಕೋವಿಡ್ ಮೂರನೇ ಅಲೆಯ ಭೀತಿಯನ್ನು ತಪ್ಪಿಸಲು, ನಗರ ವ್ಯಾಪ್ತಿಯಲ್ಲಿ ಕೋವಿಡ್ ಸಮುಚಿತ ವರ್ತನೆ ಪಾಲನೆಯಾಗುತ್ತಿರುವುದರ ಬಗ್ಗೆ ನಿಗಾವಹಿಸುವುದು ಅನಿವಾರ್ಯವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಅಪಾರ್ಟ್ಮೆಂಟ್‌ಗೆ ಬೆಂಕಿ – 46 ಸಾವು, 41 ಜನರಿಗೆ ಗಾಯ

    ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯದವರನ್ನು ಗುರುತಿಸಿ, ಲಸಿಕೆ ಕೊಡಿಸುವ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಅ.14 ರಿಂದ 16 ರವರೆಗೆ ನಗರದ ವಿವಿಧೆಡೆ ಹಮ್ಮಿಕೊಳ್ಳಲಾಗಿರುವ ಲಸಿಕಾ ಮೇಳಗಳ ಸಂಪೂರ್ಣ ಲಾಭವನ್ನು ನಾಗರಿಕರು ಪಡೆಯಬೇಕು. ತಪ್ಪಿದಲ್ಲಿ ಅ.16 ರಂದು ಮಾಲ್, ಸಹಿತ ಎಲ್ಲಾ ಸಾರ್ವಜನಿಕ ಸ್ಥಳಗಳು ಸೇರಿದಂತೆ ಸಾರ್ವಜನಿಕರಿಗೆ ಲಸಿಕೆ ಪಡೆದ ದಾಖಲೆ ಇಲ್ಲದೆ, ಬೇಕಾಬಿಟ್ಟಿ ಓಡಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ 13 ಸಾವಿರಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ – ರೈತ ಕಂಗಾಲು

  • ಬೆಂಗಳೂರಿನಲ್ಲಿ ನಿಯಂತ್ರಣ, ಜಿಲ್ಲೆಗಳಲ್ಲಿ ಸ್ಫೋಟ – ಕೊರೊನಾ ಹೆಚ್ಚಾಗಲು ಕಾರಣ ಏನು?

    ಬೆಂಗಳೂರಿನಲ್ಲಿ ನಿಯಂತ್ರಣ, ಜಿಲ್ಲೆಗಳಲ್ಲಿ ಸ್ಫೋಟ – ಕೊರೊನಾ ಹೆಚ್ಚಾಗಲು ಕಾರಣ ಏನು?

    ಬೆಂಗಳೂರು: ಇಷ್ಟು ದಿನ ನಗರಗಳಲ್ಲಿ ಹೆಚ್ಚಾಗಿದ್ದ ಕೊರೊನಾ ಸಾಂಕ್ರಾಮಿಕ ರೋಗ, ಇದೀಗ ಹಳ್ಳಿಗಳಿಗೂ ಕಾಲಿಟ್ಟಿದೆ. ಬೆಂಗಳೂರು ಮಹಾನಗರದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಜಿಲ್ಲೆಗಳಲ್ಲಿ ಸೋಂಕು ಸ್ಫೋಟಗೊಳ್ಳುತ್ತಿದೆ.

    ಯಾಕೆ ಹೆಚ್ಚಾಯ್ತು?
    ಆರಂಭದ ಹಂತದಲ್ಲಿ ಸರ್ಕಾರ ಕೇವಲ ಬೆಂಗಳೂರಿನತ್ತ ಗಮನವನ್ನು ಕೇಂದ್ರೀಕರಿಸಿತು. ಜಿಲ್ಲೆಗಳಿಗೆ ಬೆಂಗಳೂರಿನಿಂದ ಗುಳೆ ಹೊರಡುವ ಸಮಯದಲ್ಲಿ ಸರ್ಕಾರ ಗ್ರಾಮೀಣ ಭಾಗದಲ್ಲಿ ಟೆಸ್ಟಿಂಗ್ ಹೆಚ್ಚಿಸುವ ಗೋಜಿಗೆ ಹೋಗದೇ ಸುಮ್ಮನಾಯಿತು. ಹೀಗಾಗಿ ನಗರದತ್ತ ಇದ್ದ ಕೊರೊನಾ ಇದೀಗ ಹಳ್ಳಿಗಳಿಗಳಲ್ಲಿಯೂ ಹಬ್ಬುತ್ತಿದೆ.

    ಮಾರ್ಗಸೂಚಿ ಸಡಿಲಿಕೆ ಮಾಡಿದ್ದರಿಂದ ಉಸ್ತುವಾರಿ ಸಚಿವರುಗಳು ಆಯಾಯ ಜಿಲ್ಲೆಯ ಪರಿಸ್ಥಿತಿಯನ್ನು ಮನಕಂಡು ಟಫ್ ರೂಲ್ಸ್ ತರುವುದಕ್ಕೆ ಹೊರಟಿದ್ದರು. ಆದರೆ ಸರ್ಕಾರ ಆರ್ಥಿಕತೆಗೆ ಹೊಡೆತ ಬೀಳಬಹುದು ಎಂಬ ಕಾರಣ ನೀಡಿ ಟಫ್ ರೂಲ್ಸ್‍ಗೆ ಅವಕಾಶ ನೀಡಲಿಲ್ಲ.

    ಗ್ರಾಮೀಣ ಭಾಗದಲ್ಲಿ ಖಾಕಿ ಫೋರ್ಸ್‍ನ್ನು ಜನರನ್ನು ನಿಯಂತ್ರಿಸಲು ಇನ್ನಷ್ಟು ಹೆಚ್ಚಾಗಿ ಬಳಸಬೇಕಾಗಿತ್ತು. ಆದರೆ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಇಲ್ಲದೇ ಜನರು ಓಡಾಟ ನಡೆಸಿದರು. ಅಲ್ಲದೆ ಮದುವೆ ಸಮಾರಂಭಗಳಿಗೆ ಅವಕಾಶ ಕೊಂಡಿದ್ದರಿಂದ ಸ್ಥಳೀಯ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಹೆಚ್ಚಿನ ಜನ ಸೇರುತ್ತಿದ್ದರು.

    ಲಾಕ್‍ಡೌನ್ ಮೇಲೆ ನಿಗಾ ಇಡಲು ಜಿಲ್ಲಾಡಳಿತ ವಿಫಲವಾಗಿತ್ತು. ಇನ್ನೂ ಹೆಚ್ಚು ಕೇಸ್ ಇರುವ ಭಾಗದಲ್ಲಿ ಮಾರ್ಕೆಟ್‍ಗಳ ತೆರೆದಿದ್ದರಿಂದ ಜನರು ಹೆಚ್ಚಾಗಿ ಸೇರುತ್ತಿದ್ದರು. ಜಿಲ್ಲೆಗಳಲ್ಲಿ ಟೆಸ್ಟಿಂಗ್‍ನತ್ತ ಕೂಡ ಗಮನವೇ ಹರಿಸಿಲ್ಲ. ಟೆಸ್ಟಿಂಗ್ ಹೆಚ್ಚಿಸಬೇಕಾಗಿತ್ತು.

    ಪ್ರಾಥಮಿಕ ಸಂಪರ್ಕಿತರ ಟ್ರೇಸಿಂಗ್‍ನಲ್ಲಿ ಜಿಲ್ಲಾಡಳಿತ ಕೂಡ ಎಡವಿತು. ಈ ಎಲ್ಲಾ ಕಾರಣಗಳಿಂದ ನಗರಗಳಷ್ಟೇ ಅಲ್ಲದೆ ಹಳ್ಳಿಗಳಲ್ಲಿಯೂ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

  • ಗುಣಮಟ್ಟದ ಜೀವನ – ದೇಶದಲ್ಲೇ ಬೆಂಗಳೂರು ನಂಬರ್ 1 ಸಿಟಿ

    ಗುಣಮಟ್ಟದ ಜೀವನ – ದೇಶದಲ್ಲೇ ಬೆಂಗಳೂರು ನಂಬರ್ 1 ಸಿಟಿ

    – ಕೇಂದ್ರ ಸರ್ಕಾರದಿಂದ ಘೋಷಣೆ

    ಬೆಂಗಳೂರು: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈಸ್ ಆಫ್ ಲಿವಿಂಗ್ ಮತ್ತು ಮುನ್ಸಿಪಲ್ ಫಾರ್ಮಾಮೆನ್ಸ್ ಇಂಡಿಸಿಸ್ ಕಾರ್ಯಕ್ರಮದಡಿ, ಗುಣಮಟ್ಟದ ಜೀವನ ನಡೆಸಲು (ಈಸ್ ಆಫ್ ಲಿವಿಂಗ್) ಸೂಕ್ತ ನಗರಗಳ ಪೈಕಿ ಬೆಂಗಳೂರಿಗೆ ನಂಬರ್ ವನ್ ಸ್ಥಾನ ಎಂದು ಘೋಷಿಸಿದೆ.

    ದೇಶದ ಟಾಪ್ 51 ನಗರಗಳ ಪೈಕಿ, ರಾಜ್ಯದ ಜಿಲ್ಲೆಗಳಾದ ಹುಬ್ಬಳ್ಳಿ- ಧಾರವಾಡ 37ನೇ ಸ್ಥಾನದಲ್ಲಿದೆ. ಪ್ರತೀ ವರ್ಷ ಕೇಂದ್ರ ಸರ್ಕಾರ ಸೂಚ್ಯಂಕ ಬಿಡುಗಡೆ ಮಾಡುತ್ತದೆ. ಈಸ್ ಆಫ್ ಲಿವಿಂಗ್ ಪ್ರಕಾರ, ನಗರದಲ್ಲಿ ವಾಸಿಸುತ್ತಿರುವ ಜನರ ಜೀವನ ಮಟ್ಟ, ಗುಣಮಟ್ಟದಲ್ಲಿ ಜೀವನ ನಡೆಸಲು ಬೇಕಾದ ಸೌಕರ್ಯಗಳು, ಶಿಕ್ಷಣ, ಆರೋಗ್ಯ, ಸುರಕ್ಷತೆ, ಘನತ್ಯಾಜ್ಯ ನಿರ್ವಹಣೆ ಸೌಲಭ್ಯಗಳ ಬಗ್ಗೆ ಹಾಗೂ ಜನರ ಆರ್ಥಿಕ ಅಭಿವೃದ್ಧಿಗಾಗಿ ನಗರ ಎಷ್ಟು ಸಹಕಾರಿಯಾಗಿದೆ, ಜೊತೆಗೆ ನಗರದ ಪರಿಸರ ಯಾವ ಗುಣಮಟ್ಟದಲ್ಲಿದೆ ಎಂಬ ಮೂರು ವಿಭಾಗಗಳಲ್ಲಿ ಕೇಂದ್ರ ಸರ್ಕಾರ ಜನರ ಸಮೀಕ್ಷೆ ನಡೆಸಿದೆ. ಒಟ್ಟು 100 ಅಂಕಗಳಿದ್ದು, 30 ಅಂಕಗಳು ಜನರ ಅಭಿಪ್ರಾಯಕ್ಕೆ ಬಿಟ್ಟಿತ್ತು. ಈ ಸರ್ವೇಯನ್ನು ಈಗಾಗಲೇ ಕೇಂದ್ರ ಸರ್ಕಾರ ಮಾಡಿದ್ದು, ಇಂದು ಫಲಿತಾಂಶ ಘೋಷಣೆ ಮಾಡಿದೆ.

    ಇಡೀ ದೇಶದಲ್ಲಿ ನಗರಗಳನ್ನು ಎರಡು ವಿಭಾಗ ಮಾಡಿ, ಹತ್ತು ಲಕ್ಷ ಜನಸಂಖ್ಯೆಯ ನಗರ ಹಾಗೂ ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯ ನಗರವಾಗಿ ವಿಭಾಗಿಸಲಾಗಿದೆ. ಇಡೀ ದೇಶದಲ್ಲಿ ಗುಣಮಟ್ಟದ ಜೀವನ ನಡೆಸಲು ಉತ್ತಮ ನಗರ ಎಂದು ಬೆಂಗಳೂರಿಗೆ ಮೊದಲ ರ್ಯಾಂಕಿಂಗ್ ನೀಡಿದೆ. ಈ ಹಿಂದೆ, ಕಡಿಮೆ ರ್ಯಾಂಕ್ ಪಡೆಯುತ್ತಿದ್ದ ಬೆಂಗಳೂರು ಈ ಬಾರಿ ನಂಬರ್ ವನ್ ಬಂದಿದ್ದು, ಇದು ಕೇವಲ ಬಿಬಿಎಂಪಿಗಷ್ಟೇ ಅಲ್ಲ ಜಲಂಮಡಳಿ, ಬಿಡಿಎ, ಬೆಸ್ಕಾಂ, ಮೆಟ್ರೋ, ಬಿಎಂಟಿಸಿಗೂ ಸೇರಿದೆ, ಇಲ್ಲಿನ ಸಂಘಸಂಸ್ಥೆಗಳು- ಜನರಿಗೂ ಈ ಶ್ರೇಯಸ್ಸು ಸೇರಿದೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದರು.


    ಇದೇ ರ್ಯಾಂಕಿಂಗ್ ಮುಂದೆಯೂ ಉಳಿಸಿಕೊಂಡು ಹೋಗಲು, ಬೆಂಗಳೂರನ್ನು ಸುಂದರವಾಗಿ ಮಾಡಲು ಸಿಎಂ ಕೂಡಾ ಹಲವಾರು ಯೋಜನೆ ಕೈಗೊಂಡಿದ್ದಾರೆ, ಮುನ್ಸಿಪಲ್ ಪರ್ಫಾಮೆನ್ಸ್ ಇಂಡೆಕ್ಸ್ ನ ಐದು ವಿಭಾಗಗಳಲ್ಲಿ ಬಿಬಿಎಂಪಿಗೆ ಉತ್ತಮ ಅಂಕಗಳು ಬಂದಿಲ್ಲ. ಎಲ್ಲೆಲ್ಲಿ ಎಡವಿದ್ದೇವೆ, ಎಂದು ನೋಡಬೇಕಿದೆ. ಹಾಗೆ ಹಣಕಾಸು, ತಂತ್ರಜ್ಞಾನ, ಪಾಲಿಸಿ, ಆಡಳಿತ ವಿಭಾಗಗಳಲ್ಲಿ ಕೆಲವೆಡೆ ಕಡಿಮೆ ಅಂಕಗಳು ಬಂದಿವೆ. ಇದನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

    ಇನ್ನು ಸಂಸದರಾದ ಪಿ.ಸಿ ಮೋಹನ್ ಮಾತನಾಡಿ, ಈಸ್ ಆಫ್ ಲಿವಿಂಗ್ ಸರ್ವೇಯಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ ಬಂದಿರುವುದಕ್ಕೆ ಅಭಿನಂದನೆಗಳು. ಒಂದುಕಾಲು ಕೋಟಿ ಜನಸಂಖ್ಯೆಗೆ ಎಲ್ಲಾ ರೀತಿಯ ಸೌಲಭ್ಯ ನೀಡಿ, ಪಾರ್ಕ್-ಕೆರೆಗಳ ಅಭಿವೃದ್ಧಿಯಿಂದ ಈ ಸರ್ವೇಯಲ್ಲಿ ಪ್ರಥಮ ಸ್ಥಾನ ಬಂದಿದೆ. ಕೇಂದ್ರಸರ್ಕಾರದ ಎಲ್ಲಾ ಸಹಕಾರವೂ ಬೆಂಗಳೂರು ನಗರದೊಂದಿಗೆ ಇದೆ ಎಂದರು.

  • ಬೈಕ್‌ನಲ್ಲಿ ಶಿಕ್ಷಣ ಸಚಿವರ‌ ಬೆಂಗಳೂರು ನಗರ ಸಂಚಾರ

    ಬೈಕ್‌ನಲ್ಲಿ ಶಿಕ್ಷಣ ಸಚಿವರ‌ ಬೆಂಗಳೂರು ನಗರ ಸಂಚಾರ

    ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಇಂದು ಬೈಕಿನಲ್ಲಿ ಕುಳಿತುಕೊಂಡು ಬೆಂಗಳೂರಿನಲ್ಲಿ ಸಂಚರಿಸಿದ್ದಾರೆ.

    ಬಿಜೆಪಿ ಪಕ್ಷದ ಕೆಲಸದ ಸಂಬಂಧ ಸಚಿವರು ಬೈಕ್‌ ಏರಿ ಹೆಲ್ಮೆಟ್‌ ಧರಿಸಿ ರಾಜಾಜಿನಗರ ಕ್ಷೇತ್ರದಲ್ಲಿ ಜನರ ಮನೆಗಳಿಗೆ ಭೇಟಿ ನೀಡಿದ್ದಾರೆ. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಫೋಟೋ ಪ್ರಕಟಿಸಿ ಬಹಳ ದಿನಗಳ ನಂತರ ದ್ವಿಚಕ್ರವಾಹನದಲ್ಲಿ ಸಂಚರಿಸಿದೆ ಎಂದು ಬರೆದುಕೊಂಡಿದ್ದಾರೆ.

     

    ಪೋಸ್ಟ್‌ನಲ್ಲಿ ಏನಿದೆ?
    ಇಂದು ಬೆಳಗ್ಗೆ ನಮ್ಮ ರಾಜಾಜಿನಗರ ಕ್ಷೇತ್ರದಲ್ಲಿ ಪಕ್ಷದ ಪ್ರಮುಖರೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಓಡಾಡಿ ವಾರ್ಡ್‌ಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಮತ್ತು ಕೆಲವು ನಾಗರೀಕರ ಮನೆಗಳಿಗೆ ಭೇಟಿ ಕೊಟ್ಟೆ.

    ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಅನೌಪಚಾರಿಕ ಭೇಟಿಯಲ್ಲಿ ಅನೇಕರೊಂದಿಗೆ ಮಾತನಾಡುವ ಹಾಗೂ ವಿವಿಧ ವಿಷಯಗಳ ಕುರಿತು ಅಭಿಪ್ರಾಯ ಪಡೆಯುವ ಅವಕಾಶ ದೊರಕಿತು. ಬಹಳ ದಿನಗಳ ನಂತರ ದ್ವಿಚಕ್ರವಾಹನದಲ್ಲಿ ಓಡಾಡಿದ ಸುಖ ನನ್ನದಾಗಿತ್ತು.

     

  • ಕಲಬುರಗಿಯಲ್ಲಿ ರಕ್ತಪಾತ- ಹಾಡಹಗಲೇ ಯುವಕನ ಕೈ ಕತ್ತರಿಸಿ ಎಸ್ಕೇಪ್

    ಕಲಬುರಗಿಯಲ್ಲಿ ರಕ್ತಪಾತ- ಹಾಡಹಗಲೇ ಯುವಕನ ಕೈ ಕತ್ತರಿಸಿ ಎಸ್ಕೇಪ್

    – ದವಡೆ ಹಲ್ಲು ಕಾಣುವಂತೆ ಮಚ್ಚಿನ ಏಟು

    ಕಲಬುರಗಿ: ನಗರದಲ್ಲಿ ಹಾಡುಹಗಲೇ ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಇಂದು ನಡೆದಿದೆ.

    ಬಸವರಾಜ್ ಆಮ್ಟೆ (23) ದಾಳಿಗೊಳಗಾದ ಯುವಕ. ನಗರದ ಐವಾನ್ ಎ ಶಾಹಿ ಸಕ್ಯೂಟ್ ಹೌಸ್ ಬಳಿ ಕೃತ್ಯ ಎಸಗಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.

    ಬಸವರಾಜ್ ರೈಲ್ವೆ ಇಲಾಖೆಯಲ್ಲಿ ಹೌಸ್ ಕಿಪಿಂಗ್ ಸೂಪರ್‍ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಇಂದು ಬೈಕ್ ಮೇಲೆ ತೆರಳುತ್ತಿರುವಾಗ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಬೆಚ್ಚಿಬಿದ್ದು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತಕ್ಷಣವೇ ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ಬಸವರಾಜ್‍ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಸೈಕಲ್ ಮೇಲೆ 1860 ಕಿ.ಮೀ. ಪ್ರಯಾಣ ಆರಂಭಿಸಿದ ಯುವಕರು

    ಸೈಕಲ್ ಮೇಲೆ 1860 ಕಿ.ಮೀ. ಪ್ರಯಾಣ ಆರಂಭಿಸಿದ ಯುವಕರು

    -ಆರು ರಾಜ್ಯ ದಾಟಿ ಸೇರಬೇಕಿದೆ ಗೂಡು
    -ರೈಲ್ವೇ ಟಿಕೆಟ್ ಕನ್ಫರ್ಮ್ ಆಗ್ತಿಲ್ಲ ಏನ್ ಮಾಡೋದು?

    ಚೆನ್ನೈ: ಯುವಕರಿಬ್ಬರು 1860 ಕಿಲೋ ಮೀಟರ್ ದೂರದ ಊರು ಸೇರಲು ಪ್ರಯಾಣ ಆರಂಭಿಸಿದ್ದಾರೆ. ರೈಲ್ವೇ ಟಿಕೆಟ್ ಖಚಿತವಾಗದ ಹಿನ್ನೆಲೆಯಲ್ಲಿ ಯುವಕರಿಬ್ಬರು ಸೈಕಲ್‍ನಲ್ಲಿಯೇ ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ ಪಯಣ ಬೆಳೆಸಿದ್ದಾರೆ.

    ಸೋನು ಮತ್ತು ಶೈಲು ಉತ್ತರ ಪ್ರದೇಶದ ಔರಿಯಾ ಜಿಲ್ಲೆಯವರಾಗಿದ್ದು, ತಮಿಳುನಾಡಿನ ಅರ್ಕನೊಂನಲ್ಲಿ ವಾಸವಾಗಿದ್ದರು. ಅರ್ಕನೋಂನಲ್ಲಿ ಕ್ಯಾಂಡಿ ವ್ಯಾಪಾರ ಮಾಡಿಕೊಂಡಿದ್ದ ಇವರ ಬದುಕನ್ನು ಕೊರೊನಾ ಕಿತ್ತುಕೊಂಡಿತ್ತು. ಇದೀಗ ಪ್ರಯಾಣ ಆರಂಭಿಸಿರುವ ಸೋನು ಮತ್ತು ಶೈಲು ಆರು ರಾಜ್ಯಗಳನ್ನು ಪಾರು ಮಾಡಿ ಹೋಗಬೇಕಿರೋದು ದೊಡ್ಡ ಸವಾಲು ಆಗಿದೆ.

    ನಾವು ಕೆಲಸ ಆರಂಭಿಸಿದ ದಿನದಿಂದಲೂ ಸ್ವಲ್ಪ ಹಣ ಕೂಡಿಟ್ಟು ಅದರಲ್ಲಿ ಒಂದು ಭಾಗವನ್ನು ಊರಿಗೆ ಕಳಿಸ್ತಾ ಇದ್ದೀವಿ. ಲಾಕ್‍ಡೌನ್ ನಿಂದಾಗಿ ಇಷ್ಟು ದಿನ ಕೂಡಿಟ್ಟ ಹಣದಿಂದ ಜೀವನ ನಡೆಯಿತ್ತು. ಹಣ ಇಲ್ಲದಿದ್ರೆ ಈ ಊರಿನಲ್ಲಿರಲು ಆಗಲ್ಲ. ನಮ್ಮ ಟ್ರೈನ್ ಟಿಕೆಟ್ ಸಹ ಕನ್ಫರ್ಮ್ ಆಗುತ್ತಿಲ್ಲ. ವಿಧಿಯಿಲ್ಲದೇ ಗೆಳೆಯನ ಜೊತೆ ಸೇರಿ ಬ್ಯಾಗ್ ಗಳಿಗೆ ಬಟ್ಟೆ ಹಾಕಿಕೊಂಡು ಸೈಕಲ್ ಮೇಲೆಯೇ ಊರಿಗೆ ಹೊರಟಿದ್ದೇವೆ ಎಂದು ಸೋನು ಹೇಳುತ್ತಾರೆ.

    ಹೆದ್ದಾರಿಯ ಪುಟ್ಟ ಗುಡಿಸಲಿನಲ್ಲಿ ವಾಸವಾಗಿರುವ ಮಹಿಳೆ ಸುಂಕಮ್ಮ ಮಾತನಾಡಿ, ನನ್ನ ಕಣ್ಮುಂದೆ ಕಾರ್ಮಿಕರು ನಡೆದುಕೊಂಡು ಹೋಗೋದನ್ನು ನೋಡಿ ದುಃಖವಾಗುತ್ತದೆ. ಕೆಲವರು ಬಂದು ಬಾಟಲ್ ಗಳಿಗೆ ನೀರು ತುಂಬಿಕೊಡುವಂತೆ ಕೇಳುತ್ತಾರೆ. ಬಾಟಲ್ ಗಳಿಗೆ ನೀರು ತುಂಬಿ ಕೆಲವು ಬಾರಿ ಊಟ ಸಹ ನೀಡುತ್ತೇನೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

  • ಮಾಸ್ಕ್ ಹಾಕದವರಿಗೆ ಬಿತ್ತು ದಂಡ!

    ಮಾಸ್ಕ್ ಹಾಕದವರಿಗೆ ಬಿತ್ತು ದಂಡ!

    – ರಸ್ತೆಯಲ್ಲಿ ಉಗುಳುವ ಮುನ್ನ ಯೋಚಿಸಿ, ಜೇಬಿಗೆ ಬೀಳಲಿದೆ ಕತ್ತರಿ

    ಶಿವಮೊಗ್ಗ: ಎಲ್ಲೆಂದರಲ್ಲಿ ಅಲ್ಲಿ ಗುಟ್ಕಾ ಹಾಕಿಕೊಂಡು ಉಗಿದು, ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದ್ದ ಜನರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ದಂಡ ಪ್ರಯೋಗ ಮಾಡಿದೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಉಗುಳುವುದು, ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು. ಈಗಾಗಲೇ ಪಾಲಿಕೆ ಅಧಿಕಾರಿಗಳು ಗುಟ್ಕಾ ಜಗಿಯುತ್ತ, ಮಾಸ್ಕ್ ಹಾಕಿಕೊಳ್ಳದೆ ನಿಂತಿದ್ದ ವ್ಯಕ್ತಿಗಳಿಗೆ ದಂಡ ವಿಧಿಸಿದ್ದಾರೆ. ಅಲ್ಲದೇ ರಸ್ತೆ ಮೇಲೆ ಉಗುಳಿದ್ದಕ್ಕೆ 500 ರೂ. ಮಾಸ್ಕ್ ಹಾಕದೇ ಓಡಾಡುತ್ತಿದ್ದ ವ್ಯಕ್ತಿಗಳಿಗೆ 100 ರೂ. ದಂಡ ಹಾಕಿದ್ದಾರೆ.

    ಜನರಲ್ಲಿ ವೈರಸ್ ಕುರಿತು ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಿರುವ ಪಾಲಿಕೆ ನಿನ್ನೆಯಿಂದ ದಂಡ ವಸೂಲಿಗೆ ಮುಂದಾಗಿದೆ. ನಾಗರಿಕರು ರಸ್ತೆಯಲ್ಲಿ ಉಗುಳುವ ಮುನ್ನ ಯೋಚಿಸಿ, ಇಲ್ಲದಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ ಎಂಬ ಎಚ್ಚರಿಕೆ ಸಾಧ್ಯ ರವಾನೆಯಾಗಿದೆ. ಈ ದಂಡ ಆರಂಭಿಕವಾಗಿದ್ದು, ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದೆ ಹೋದಲ್ಲಿ, ದಂಡದ ಪ್ರಮಾಣ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ನೀಡಿರುವ ಸೂಚನೆ ಮೇರೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಗೆ ಅಧಿಕಾರಿಗಳು ತಿಳಿಸಿದ್ದಾರೆ.

  • ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ನುಗ್ಗಿದ ಕಾರು

    ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ನುಗ್ಗಿದ ಕಾರು

    ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿದ್ದ ಚರಂಡಿ ಒಳಗೆ ನುಗ್ಗಿದ ಘಟನೆ ನಗರದಲ್ಲಿ ನಡೆದಿದೆ.

    ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲೇ ಇದ್ದ ಚರಂಡಿ ಮೇಲೆ ಹರಿದು ನಜ್ಜುಗುಜ್ಜಾಗಿ ಸಿಕ್ಕಿಹಾಕಿಕೊಂಡಿದೆ. ನಗರದ ದೇವರಾಯಪಟ್ಟಣಕ್ಕೆ ಹೋಗುವ ಮಾರ್ಗದ ಬಂಡೆಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಕಾರಿನ ನಂಬರ್ ಪ್ಲೇಟ್ ಜಖಂಗೊಂಡಿದ್ದು, ಕಾರು ಯಾರಿಗೆ ಸೇರಿದ್ದು ಎಂದು ಗುರುತಿಸುವುದಕ್ಕೆ ಸಾಧ್ಯವಾಗಿಲ್ಲ. ಎದುರಿನಲ್ಲೇ ಇದ್ದ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಹೀಗಾಗಿ ಭಾರೀ ಅನಾಹುತ ತಪ್ಪಿದೆ.

    ಈ ಸಂಬಂಧ ಸ್ಥಳೀಯರು ಪೊಲೀಸಿರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.