Tag: Citizens

  • ಬೆಂಗ್ಳೂರಿನ ಬಿಸ್ಮಿಲ್ಲಾ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾ ಪ್ರಜೆಗಳು ಅರೆಸ್ಟ್!

    ಬೆಂಗ್ಳೂರಿನ ಬಿಸ್ಮಿಲ್ಲಾ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾ ಪ್ರಜೆಗಳು ಅರೆಸ್ಟ್!

    – ಭಾರತದ ಪಾಸ್‌ಪೋರ್ಟ್, ಆಧಾರ್, ರೇಷನ್ ಕಾರ್ಡ್ ನಕಲು ಮಾಡಿದ್ದ ಆರೋಪಿಗಳು
    – ಅಕ್ರಮವಾಸಿಗಳಿಗೆ ಸಹಕರಿಸಿದ್ದ ನಾಲ್ವರು ಯುವಕರ ವಿರುದ್ಧವೂ ಕೇಸ್

    ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾದೇಶದ ಪ್ರಜೆಗಳನ್ನು (Bangladesh Citizens) ಸಿಸಿಬಿ ಪೊಲೀಸರು (CCB Police) ಬಂಧಿಸಿರುವ ಘಟನೆ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಬಂಧಿತರನ್ನು ಶಮೀಮ್ ಅಹಮದ್, ಮೊಹಮ್ಮದ್ ಅಬ್ದುಲ್ಲಾ, ನೂರ್ ಜಹಾನ್ ಮತ್ತು ಹರೂನ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಓರ್ವ ಮಹಿಳೆ ಸೇರಿ ಮೂವರು ಪುರುಷರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಭಾರತದ ಪಾಸ್‌ಪೋರ್ಟ್‌ (Indian Passport) ಸಹ ಪಡೆದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಹತ್ಯೆ – ಯುವಕ ಅರೆಸ್ಟ್‌

    ದಾಳಿ ವೇಳೆ ಆರೋಪಿಗಳಿಂದ ಸಿಕ್ಕ ಆಧಾರ್ ಕಾರ್ಡ್ (Aadhar Card), ಜಾತಿ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಮಜ್ದೂರ್ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಣಿ ತರಹ ನೋಡಿಕೊಳ್ತಿದ್ವಿ, ಪ್ರತಿದಿನ ಕಾರಿನಲ್ಲೇ ಕಾಲೇಜಿಗೆ ಕಳಿಸ್ತಿದ್ವಿ – ಮಗಳ ಸಾವು ನೆನೆದು ತಂದೆ-ತಾಯಿ ಅಳಲು!

    ಆರೋಪಿಗಳನ್ನು ಸೆರೆಹಿಡಿದದ್ದೇ ರೋಚಕ:
    ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿದ್ದ ಶಮೀಮ್ ಅಹಮದ್, ಮೊಹಮ್ಮದ್ ಅಬ್ದುಲ್ಲಾ, ನೂರ್ ಜಹಾನ್ ಮತ್ತು ಹರೂನ್ ಮೊಹಮ್ಮದ್ ಬನ್ನೇರುಘಟ್ಟ ರಸ್ತೆಯ ಬಿಸ್ಮಿಲಾನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜಮೀಲ್ ಎಂಬುವರ ಮನೆ ಬಾಡಿಗೆ ಪಡೆದು ವಾಸವಿದ್ದರು. ನಕಲಿ ಬಾಡಿಗೆ ಕರಾರು ಪತ್ರ ಮತ್ತು ವಾಸದ ದೃಢೀಕರಣ ಪತ್ರಗಳನ್ನೂ ಸಿದ್ಧಪಡಿಸಿಕೊಂಡಿದ್ದರು. ಆ ಮೂಲಕ ಆಧಾರ್ ಕಾರ್ಡ್, ಫ್ಯಾನ್ ಕಾರ್ಡ್, ರೇಷನ್ ಕಾರ್ಡ್‌ಗಳನ್ನೂ ಹೊಂದಿದ್ದರು. ಇದನ್ನೂ ಓದಿ: ಡಬಲ್ ಮರ್ಡರ್‌ಗೆ ಟ್ವಿಸ್ಟ್; ಕಣ್ಣಮುಂದೆ ಮಗಳನ್ನ ಚುಚ್ಚಿಕೊಂದ ಪ್ರೇಮಿಯನ್ನ ಕಲ್ಲಿನಿಂದ ಚಚ್ಚಿದ ತಾಯಿ!

    ಅಲ್ಲದೇ ನಾಲ್ವರು ಸ್ಥಳೀಯರ ಸಹಾಯದಿಂದ ಭಾರತದ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದರು. ಅನಧಿಕೃತ ದಾಖಲೆ ನೀಡಿ ಪಾಸ್‌ಪೋರ್ಟ್ ಸಹ ಮಾಡಿಸಿಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಬಿಸ್ಮಿಲ್ಲಾ ನಗರದ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಸಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಾಂಗ್ಲಾ ಪ್ರಜೆಗಳಿಗೆ ಸಹಾಯ ಮಾಡಿದ್ದ ಮುಬಾರಕ್, ಮುನೀರ್, ಹುಸೇನ್, ನಹೀಂ ಎಂಬ ನಾಲ್ವರು ಯುವಕರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 199 ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡ ಹಮಾಸ್

    199 ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡ ಹಮಾಸ್

    ಟೆಲ್ ಅವಿವ್: ಹಮಾಸ್ ಬಂಡುಕೋರ (Hamas Militants) ಸಂಘಟನೆ 199 ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ಇಸ್ರೇಲಿ (Israel) ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಮಾಧ್ಯಮ ಸಭೆಯಲ್ಲಿ ಹೇಳಿದ್ದಾರೆ.

    ಇದಕ್ಕೂ ಮೊದಲು ಭಾನುವಾರ ಸುದ್ದಿಗೋಷ್ಠಿ ನಡೆಸಿದ್ದ ಅವರು, 155 ಜನರನ್ನು ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ಆರೋಪಿಸಿದ್ದರು. ಅಕ್ಟೋಬರ್ 7ರಂದು ಹಮಾಸ್ ರಾಕೆಟ್ ದಾಳಿ ನಡೆಸಿದ ಬಳಿಕ ಅಕ್ರಮವಾಗಿ ಇಸ್ರೇಲ್ ಗಡಿಯನ್ನು ನುಸುಳಿದೆ. ಇಲ್ಲಿ ಜನರ ಹತ್ಯೆ ಮಾಡುವುದಲ್ಲದೇ ಮಹಿಳೆಯರು ಮಕ್ಕಳು ಸೇರಿದಂತೆ ಇಸ್ರೇಲಿ ಪ್ರಜೆಗಳನ್ನು (Citizens) ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ಡೇನಿಯಲ್ ಹಗರಿ ವಿವರಿಸಿದರು. ಇದನ್ನೂ ಓದಿ: ಮಿಷನ್‌ ಗಗನಯಾನ; ಅ.21 ಕ್ಕೆ ಮೊದಲ ಪರೀಕ್ಷಾರ್ಥ ಉಡಾವಣೆ

    ಯುದ್ಧ ಆರಂಭವಾದ ಬಳಿಕ ಗುಂಡು ಹಾರಿಸಿ, ಇರಿದು ಮತ್ತು ಸುಟ್ಟು 1,400 ಕ್ಕೂ ಜನರನ್ನು ಹಮಾಸ್ ಹತ್ಯೆ ಮಾಡಿದೆ. ಏಳು ದಿನಗಳ ನಿರಂತರ ಬಾಂಬ್ ದಾಳಿಯು ಹಮಾಸ್ ನೆಲೆಗಳನ್ನು ನಾಶಪಡಿಸಿದೆ. ಎರಡೂ ಕಡೆಗಳಲ್ಲಿ ಒಟ್ಟು 3,000 ಜೀವಗಳನ್ನು ಯುದ್ಧ ಬಲಿ ತೆಗೆದುಕೊಂಡಿದೆ. ಇದನ್ನೂ ಓದಿ: ತೆಲಂಗಾಣ ಚುನಾವಣೆ – ‘ಕೈ’ ಪ್ರಣಾಳಿಕೆಯಲ್ಲಿ ವಧುವಿಗೆ 10 ಗ್ರಾಂ ಚಿನ್ನ, ಮಕ್ಕಳಿಗೆ ಉಚಿತ ಇಂಟರ್ನೆಟ್?

    ಯುದ್ಧ ಉಲ್ಬಣಗೊಳ್ಳುತ್ತಿದ್ದಂತೆ ಇಸ್ರೇಲಿ ಸೈನ್ಯವು ಗಾಜಾ ಪಟ್ಟಿಯ (Gaza Stripe) ಉತ್ತರದಲ್ಲಿ 1.1 ಮಿಲಿಯನ್ ಪ್ಯಾಲೆಸ್ತೀನಿಯಾದವರಿಗೆ ಸ್ಥಳಾಂತರಿಸುವ ಆದೇಶಗಳನ್ನು ನೀಡಿತು. ಅದರ 2.4 ಮಿಲಿಯನ್ ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟು ಜನರು ತಮ್ಮ ಸುರಕ್ಷತೆಗಾಗಿ ದಕ್ಷಿಣದ ಕಡೆಗೆ ಚಲಿಸುವಂತೆ ಒತ್ತಾಯಿಸಿದೆ ಎಂದರು. ಇದನ್ನೂ ಓದಿ: ದೆಹಲಿಗೆ ಬರ್ತಿದ್ದಂತೆ ಎಲ್ಲ ಭಾರ ಇಳಿದು ನೆಮ್ಮದಿ ಸಿಕ್ಕಿತು: ಇಸ್ರೇಲ್‌ ಯುದ್ಧ ಭೀಕರತೆ ಬಿಚ್ಚಿಟ್ಟ ಕನ್ನಡಿಗರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಸ್ಕ್, ಗ್ಲೌಸ್ ಇಲ್ಲದೆ ಕೋವಿಡ್ ಆಸ್ಪತ್ರೆ ತ್ಯಾಜ್ಯ ವಿಲೇವಾರಿ- ಪೌರಕಾರ್ಮಿಕರಿಗಿಲ್ಲ ಸುರಕ್ಷತೆ

    ಮಾಸ್ಕ್, ಗ್ಲೌಸ್ ಇಲ್ಲದೆ ಕೋವಿಡ್ ಆಸ್ಪತ್ರೆ ತ್ಯಾಜ್ಯ ವಿಲೇವಾರಿ- ಪೌರಕಾರ್ಮಿಕರಿಗಿಲ್ಲ ಸುರಕ್ಷತೆ

    ರಾಯಚೂರು: ಸುರಕ್ಷತಾ ಕ್ರಮಗಳಿಲ್ಲದೆ ರಾಯಚೂರು ನಗರಸಭೆ ಪೌರಕಾರ್ಮಿಕರು ಖಾಸಗಿ ಕೋವಿಡ್ ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ.

    ರಾಯಚೂರು ನಗರವೊಂದರಲ್ಲೇ 19 ಖಾಸಗಿ ಕೋವಿಡ್ ಆಸ್ಪತ್ರೆಗಳಿದ್ದು, ಆಸ್ಪತ್ರೆ ತ್ಯಾಜ್ಯವನ್ನ ನಗರಸಭೆ ಸಿಬ್ಬಂದಿಗಳೇ ವಿಲೇವಾರಿ ಮಾಡುತ್ತಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ಸೌಲಭ್ಯವನ್ನೂ ಸಮರ್ಪಕವಾಗಿ ನೀಡಿದೆ ಬೇಜವಾಬ್ದಾರಿತನ ಮೆರೆದಿದ್ದಾರೆ. ಗ್ಲೌಸ್, ಮಾಸ್ಕ್ ಧರಿಸದೆ ಕೋವಿಡ್ ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ಪೌರಕಾರ್ಮಿಕರಿಗೆ ಕೊರೊನಾ ಸೋಂಕಿನ ಭಯ ಕಾಡುತ್ತಿದೆ.

    ನಗರಸಭೆ ಎಲ್ಲಾ ಪೌರಕಾರ್ಮಿಕರಿಗೂ ಮಾಸ್ಕ್,ಗ್ಲೌಸ್ ಸಮರ್ಪಕವಾಗಿ ವಿತರಿಸದ ಹಿನ್ನೆಲೆ ಕಾರ್ಮಿಕರು ಸುರಕ್ಷತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಇಡೀ ನಗರವನ್ನ ಸ್ವಚ್ಛವಾಗಿಡುವ ಪೌರಕಾರ್ಮಿಕರಿಗೆ ಸುರಕ್ಷತೆಯಿಲ್ಲದಂತಾಗಿದೆ. ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕಾದ ನಗರಸಭೆ ಸೌಲಭ್ಯ ನೀಡದ ಹಿನ್ನೆಲೆ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದೇವೆ ಅಂತ ಪೌರಕಾರ್ಮಿಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

  • ಕೊರೊನಾ ಸಂಕಷ್ಟ- ಆದಷ್ಟು ಬೇಗ ಭಾರತ ತೊರೆಯಿರಿ, ತನ್ನ ಪ್ರಜೆಗಳಿಗೆ ಅಮೆರಿಕ ಸೂಚನೆ

    ಕೊರೊನಾ ಸಂಕಷ್ಟ- ಆದಷ್ಟು ಬೇಗ ಭಾರತ ತೊರೆಯಿರಿ, ತನ್ನ ಪ್ರಜೆಗಳಿಗೆ ಅಮೆರಿಕ ಸೂಚನೆ

    ನವದೆಹಲಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಭಾರತಕ್ಕೆ ಪ್ರಯಾಣ ಬೆಳೆಸಬೇಡಿ, ಅಲ್ಲದೆ ಭಾರತದಲ್ಲಿರುವ ಅಮೆರಿಕ ಪ್ರಜೆಗಳು ಆದಷ್ಟು ಬೇಗ ತೊರೆಯಿರಿ ಎಂದು ತನ್ನ ಪ್ರಜೆಗಳಿಗೆ ಅಮೆರಿಕ ಸಲಹೆ ನೀಡಿದೆ.

    ಅಮೆರಿಕ ಭಾರತವನ್ನು ಲೆವೆಲ್ 4 ಟ್ರಾಲೆವ್ ಅಡ್ವೈಸರಿಯಲ್ಲಿರಿಸಿದ್ದು, ಭಾರತದಲ್ಲಿ ವೈದ್ಯಕೀಯ ಆರೈಕೆ ತುಂಬಾ ಸೀಮಿತವಾಗಿದೆ, ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಭಾರತಕ್ಕೆ ಪ್ರಯಾಣ ಬೆಳೆಸಬೇಡಿ, ಭಾರತದಲ್ಲಿನ ಅಮೆರಿಕನ್ನರು ಸಹ ತಾಯ್ನಾಡಿಗೆ ಮರಳಿ ಎಂದು ಅಮೆರಿಕ ತಿಳಿಸಿದೆ.

    ಭಾರತದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಕಾರಣ ವೈದ್ಯಕೀಯ ಆರೈಕೆ ತುಂಬಾ ಸೀಮಿತವಾಗಿದೆ. ಹೀಗಾಗಿ ಅಮೆರಿಕ ಪ್ರಜೆಗಳು ಆದಷ್ಟು ಬೇಗ ಮರಳಲು ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳಿ. ದಿನ ನಿತ್ಯ ಅಮೆರಿಕಕ್ಕೆ ವಿಮಾನಗಳಿದ್ದು, ಪ್ಯಾರಿಸ್ ಹಾಗೂ ಫ್ರಾಂಕ್‍ಫರ್ಟ್ ಮಾರ್ಗವಾಗಿ ಸಂಚರಿಸಲಿವೆ ಎಂದು ಟ್ರಾವೆಲ್ ಸ್ಟೇಟ್ ಡಿಪಾರ್ಟ್‍ಮೆಂಟ್ ತನ್ನ ಟ್ವಿಟ್ಟರ್ ನಲ್ಲಿ ತಿಳಿಸಿದೆ.

    ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಸಹ ಈ ಕುರಿತು ಟ್ವೀಟ್ ಮಾಡಿದ್ದು, ಅಮೆರಿಕ ನಾಗರಿಕರು ಸ್ಟೆಪ್(ಸ್ಮಾರ್ಟ್ ಟ್ರಾವೆಲರ್ ಎನ್ರೋಲ್‍ಮೆಂಟ್ ಪ್ರೊಗ್ರಾಮ್) ನಲ್ಲಿ ನೋಂದಾಯಿಸಿಕೊಳ್ಳಬಹುದು. step.state.gov ವೆಬ್‍ಸೈಟ್‍ನಲ್ಲಿ ಭಾರತದಲ್ಲಿ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ರಾಯಭಾರ ಕಚೇರಿಯಿಂದ ಮಾಹಿತಿ ಪಡೆಯವಹುದು ಎಂದು ತಿಳಿಸಿದೆ.

    ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಮತ್ತು ಮೃತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 3,645 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಮರಣ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ಎರಡನೇ ಅಲೆಯ ಆತಂಕ ಜನರಲ್ಲಿ ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ 3,79,257 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,83,76,524ಕ್ಕೆ ಏರಿಕೆಯಾಗಿದೆ.

  • ಮೇ 1ರ ನಂತರ ಅಮೇರಿಕಾದ್ಯಂತ ಲಸಿಕೆ

    ಮೇ 1ರ ನಂತರ ಅಮೇರಿಕಾದ್ಯಂತ ಲಸಿಕೆ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮೇ ಆರಂಭದಲ್ಲಿ ಕೋವಿಡ್-19 ಲಸಿಕೆ ಪಡೆಯಲು ಇಚ್ಛಿಸುವ ಜನರ ಮೇಲಿನ ಆದ್ಯತೆ ಹಾಗೂ ನಿರ್ಬಂಧಗಳನ್ನು ತೆಗೆದುಹಾಕಲು ಆದೇಶಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

    ಮೇ 1 ಬಳಿಕ ಅಮೆರಿಕದ ಎಲ್ಲ ನಾಗರೀಕರು ಕೊರೊನಾ ಲಸಿಕೆ ಪಡೆಯಬಹುದು. ಈ ಕುರಿತಂತೆ ಜೋ ಬಿಡನ್ ಪ್ರೈಂ ಟೈಮ್ ದೂರದರ್ಶನದ ಮೂಲಕ ತಮ್ಮ ಯೋಜನೆಗಳನ್ನು ಚರ್ಚಿಸಲಿದ್ದಾರೆ ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ನಿಗದಿ ಪಡಿಸಿದ ದಿನಾಂಕದಂದೇ ಎಲ್ಲ ವಯಸ್ಕರೆಲ್ಲರು ಲಸಿಕೆ ಪಡೆಯುತ್ತಾರೆ ಎಂದಲ್ಲ. ಮೊದಲಿಗೆ ವಯಸ್ಸು, ವೃತ್ತಿ ಹಾಗೂ ಆರೋಗ್ಯ ಪರಿಸ್ಥಿತಿಗಳ ಅನುಗುಣವಾಗಿ ಜನರಿಗೆ ಲಸಿಕೆ ನೀಡಲಾಗುತ್ತದೆ. ಅಮೆರಿಕದ ವಯಸ್ಕರಿಗೆ ಸಾಕಷ್ಟು ಲಸಿಕೆ ಸರಬರಾಜು ಆಗುತ್ತಿದ್ದು, ದೇಶದ ಎಲ್ಲಾ ವಯಸ್ಕರಿಗೆ ಮೇ ಅಂತ್ಯದ ವೇಳೆಗೆ ಲಸಿಕೆ ಲಭ್ಯವಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ತಿಳಿಸಿದರು.

  • ಹಿಮದಲ್ಲಿ ಸಿಲುಕಿದ್ದ 10 ಜನರನ್ನು ರಕ್ಷಿಸಿದ ವೀರ ಯೋಧರು

    ಹಿಮದಲ್ಲಿ ಸಿಲುಕಿದ್ದ 10 ಜನರನ್ನು ರಕ್ಷಿಸಿದ ವೀರ ಯೋಧರು

    – ಹಿಮಪಾತದಲ್ಲಿ 5 ಗಂಟೆ ನಡೆದ ಸೈನಿಕರು

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು, ಅಲ್ಲಿನ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ಜನ ಹಿಮದಡಿಯೇ ಸಿಲುಕುತ್ತಿದ್ದಾರೆ. ಇದೇ ರೀತಿ ಹಿಮದಲ್ಲಿ ಸಿಲುಕಿದ್ದ 10 ಜನರನ್ನು ನಮ್ಮ ವೀರ ಯೋಧರು ರಕ್ಷಿಸಿದ್ದಾರೆ.

    ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿರುವುದರಿಂದ ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ರಸ್ತೆಗಳು ಬಂದ್ ಆಗಿವೆ. ಹೀಗಾಗಿ ಸಿಂಥಾನ್ ಪಾಸ್ ಬಳಿ ಚಿಂಗಮ್ ಮಾರ್ಗದ ಎನ್‍ಎಚ್-244 ನಲ್ಲಿ ಸಿಲುಕಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಸೈನಿಕರು ಹಾಗೂ ಜಮ್ಮು ಕಾಶ್ಮೀರ ಪೊಲೀಸರು ತಂಡ ಅವರನ್ನು ರಕ್ಷಿಸಿದೆ.

    ತೀವ್ರ ದುಸ್ತರ ದಾರಿಯಲ್ಲಿ ಸಾಗಿ 10 ಜನರನ್ನು ಯೋಧರು ರಕ್ಷಿಸಿದ್ದು, ರಾತ್ರಿ ಇಡೀ ಬರೋಬ್ಬರಿ 5 ಗಂಟೆಗಳ ಕಾಲ ನಡೆದುಕೊಂಡು ಹೋಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮಂಜು ಆವರಿಸಿದೆ, ಕತ್ತಲಾಗಿದೆ, ದಾರಿ ಸಹ ತಿಳಿಯುತ್ತಿಲ್ಲ. ಇಂತಹ ದುಸ್ತರ ಸ್ಥಿತಿಯಲ್ಲಿ ಸೈನಿಕರು ಕಾರ್ಯಾಚರಣೆ ನಡೆಸಿ 10 ಜನರನ್ನು ರಕ್ಷಿಸಿದ್ದಾರೆ.

    ರಕ್ಷಿಸಿದ 10 ಜನ ನಾಗರಿಕರನ್ನು ಸಿಂಥಾನ್ ಮೈದಾನಕ್ಕೆ ಕರೆ ತರಲಾಗಿದ್ದು, ಅವರಿಗೆ ಆಹಾರ ಹಾಗೂ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಜಮ್ಮು ಕಾಶ್ಮೀರದ ಬಹುತೇಕ ಭಾಗಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಕಳೆದ 24 ಗಂಟೆಗಳಲ್ಲಿ ಭಾರೀ ಪ್ರಮಾಣದ ಮಳೆ ಹಾಗೂ ಹಿಮಪಾತವಾಗುತ್ತಿದೆ.

    ಗುಲ್ಮಾರ್ಗ್ ಹಾಗೂ ಪಹಲ್ಗಮ್ ನಂತರ ಗಿರಿಧಾಮಗಳು ಸೇರಿದಂತೆ ಕಾಶ್ಮೀರ ಕಣಿವೆಯ ಮೇಲ್ಭಾಗದಲ್ಲಿ ಹೆಚ್ಚು ಹಿಮಪಾತವಾಗುತ್ತಿದೆ. ಬಹುತೇಕ ಬಯಲು ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ವಿಪರೀತ ಮಳೆಯಾಗಿದೆ. ಅಧಿಕೃತ ಮೂಲಗಳ ಪ್ರಕಾರ ಶ್ರೀನಗರದಲ್ಲಿ ಕಳೆದ ಸೋಮವಾರ 3.7 ಮಿ.ಮೀ. ಮಳೆಯಾಗಿದೆ. ಮಾತ್ರವಲ್ಲದೆ ರಾತ್ರಿ ವೇಳೆ 2.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

    ಖಾಜಿಗುಂಡ್‍ನ ಕಾಶ್ಮೀರದ ಗೇಟ್‍ವೇ ಬಳಿ 16.2 ಮಿ.ಮೀ. ಪಹಲ್ಗಮ್ 15.0 ಮಿ.ಮೀ. ಮಳೆ ಸುರಿದರೆ, 10 ಮಿ.ಮೀ.ಹಿಮಪಾತವಾಗಿದೆ. ಗುಲ್ಮಾರ್ಗ್ ಬಳಿ ಮಳೆ 30.6 ಮಿ.ಮೀ ಮಳೆ ಹಾಗೂ ಹಿಮಪಾತವಾಗಿದೆ. ಮುಂದಿನ 24 ಗಂಟೆಗಳ ನಂತರ ಶುಷ್ಕ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಕರ್ತವ್ಯ ನಿರತ ಪೌರಕಾರ್ಮಿಕರು ಸೋಂಕಿಗೆ ಬಲಿಯಾದ್ರೆ ಸರ್ಕಾರ 50 ಲಕ್ಷ ಪರಿಹಾರ ನೀಡ್ಬೇಕು: ಎಚ್‍ಡಿಕೆ

    ಕರ್ತವ್ಯ ನಿರತ ಪೌರಕಾರ್ಮಿಕರು ಸೋಂಕಿಗೆ ಬಲಿಯಾದ್ರೆ ಸರ್ಕಾರ 50 ಲಕ್ಷ ಪರಿಹಾರ ನೀಡ್ಬೇಕು: ಎಚ್‍ಡಿಕೆ

    ಬೆಂಗಳೂರು: ಕೊರೊನಾ ಸಂಕಷ್ಟದ ದಿನಗಳಲ್ಲಿ ಜನರ ಆರೋಗ್ಯದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ಪೌರಕಾರ್ಮಿಕರು ದುಡಿಯುತ್ತಿದ್ದಾರೆ. ಅವರು ಕೂಡ ವೈದ್ಯ ಸಮೂಹದಷ್ಟೆ ಪ್ರಧಾನ ಪಾತ್ರ ವಹಿಸಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪೌರಕಾರ್ಮಿಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ.

    ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಪೌರಕಾರ್ಮಿಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಕರ್ತವ್ಯ ನಿರತ ಪೌರಕಾರ್ಮಿಕರು ಸೋಂಕಿನಿಂದ ಸಾವಿಗೆ ತುತ್ತಾದರೆ ಅವರ ಕುಟುಂಬಕ್ಕೆ ಅವರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    “ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವ ಪೌರಕಾರ್ಮಿಕರನ್ನು ಈ ಸಮಾಜ ಪ್ರತಿಕ್ಷಣವು ತಾಯ್ತನದಿಂದ ಕಾಣುವುದೇ ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಕೃತಜ್ಞತೆ” ಎಂದು ಹೇಳಿದ್ದಾರೆ.

    ಪೌರಕಾರ್ಮಿಕ ದಿನಾಚರಣೆಯ ಶುಭಾಶಯಗಳು. ಕೊರೊನಾ ಸಂಕಷ್ಟದ ಈ ದಿನಗಳಲ್ಲಿ ಜನರ ಆರೋಗ್ಯದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ದುಡಿಯುತ್ತಿರುವ ಪೌರಕಾರ್ಮಿಕರು ವೈದ್ಯ ಸಮೂಹದಷ್ಟೆ ಪ್ರಧಾನ ಪಾತ್ರ ವಹಿಸಿದ್ದಾರೆ ಎಂದರು.

    “ಕರ್ತವ್ಯ ನಿರತ ಪೌರಕಾರ್ಮಿಕರು ಸೋಂಕಿನಿಂದ ಸಾವಿಗೆ ತುತ್ತಾದರೆ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಬೇಕು. ಹಣರೂಪದ ಪರಿಹಾರ ಸರ್ಕಾರದ ಆಡಳಿತಾತ್ಮಕ ಕರ್ತವ್ಯವಾಗುತ್ತದೆ. ಪೌರಕಾರ್ಮಿಕ ಸಮುದಾಯವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುವುದು, ಅವರ ಬೇಡಿಕೆಗಳನ್ನು ಈಡೇರಿಸುವುದೇ ಅವರಿಗೆ ಸಲ್ಲಿಸಬಹುದಾದ ನಿಜ ಗೌರವವಾಗುತ್ತದೆ” ಎಂದು ಕುಮಾರಸ್ವಾಮಿ ಪೌರಕಾರ್ಮಿಕರಿಗೂ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

  • ಇಟಲಿ, ಡೆನ್ಮಾರ್ಕ್ ಬಳಿಕ ಕುವೈತ್ ಸಂಪೂರ್ಣ ಬಂದ್

    ಇಟಲಿ, ಡೆನ್ಮಾರ್ಕ್ ಬಳಿಕ ಕುವೈತ್ ಸಂಪೂರ್ಣ ಬಂದ್

    – ಖಾಲಿ ಹೊಡೆಯುತ್ತಿದೆ ರಸ್ತೆ, ಬೀಚ್ ಮಾಲ್
    – ಮನೆಯಿಂದ ಯಾರೂ ಹೊರಬಾರದಂತೆ ಆದೇಶ
    – 60 ದಿನಕ್ಕೆ ಸಮಸ್ಯೆ ಇಲ್ಲ ಎಂದ ಸರ್ಕಾರ

    ಮಂಗಳೂರು: ಕೊರೊನಾ ಎಫೆಕ್ಟ್‍ಗೆ ಕುವೈತ್‍ನಲ್ಲಿರುವ ಕರಾವಳಿಗರು ಅತಂತ್ರವಾಗಿದ್ದು, ಸರ್ಕಾರದಿಂದಲೇ ಕೆಲ ಘಟಕಗಳ ಮೂಲಕ ಆಹಾರ ಒದಗಿಸುವುದನ್ನು ಹೊರತು ಪಡಿಸಿದರೆ ಯಾರೂ ಹೊರಗೆ ಬರುವಂತಿಲ್ಲ ಎಂಬ ಆದೇಶ ನೀಡಲಾಗಿದೆ. ಹೀಗಾಗಿ ಕುವೈತ್ ಸಂಪೂರ್ಣ ಸ್ತಬ್ಧವಾಗಿದೆ.

    ರಾಜ್ಯದ ಕರಾವಳಿ ಭಾಗದ 30 ಸಾವಿರಕ್ಕೂ ಅಧಿಕ ಮಂದಿ ಕುವೈತ್‍ನಲ್ಲಿದ್ದು ಆತಂಕದಲ್ಲಿದ್ದಾರೆ. ಕುವೈತ್ ನ ರಸ್ತೆ, ಬೀಚ್, ಮಾಲ್ ಗಳು ಮತ್ತು ಏರ್ ಪೋರ್ಟ್ ಗಳು ಜನರಿಲ್ಲದೆ ಖಾಲಿ ಹೊಡೆಯುತ್ತಿದ್ದು, ಇಂದಿನಿಂದ ಬಸ್ ಸಂಚಾರವನ್ನು ಸಹ ಬಂದ್ ಮಾಡಲಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ವಿಮಾನಗಳನ್ನು ಸರ್ಕಾರ ಬಂದ್ ಮಾಡಿದೆ.

    ನಾಗರಿಕರು ಮನೆಯಲ್ಲೇ ಇರುವಂತೆ ಕುವೈತ್ ಸರ್ಕಾರ ಆದೇಶ ನೀಡಿದೆ. ಅಗತ್ಯ ಸೇವೆ ನೀಡುವ ಇಲಾಖೆಯನ್ನು ಹೊರತು ಪಡಿಸಿ ಸರ್ಕಾರದ ಎಲ್ಲ ಇಲಾಖೆ, ಬ್ಯಾಂಕ್, ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ.

    ಈ ಕುರಿತು ಕನ್ನಡಿಗ ಮೋಹನ್ ದಾಸ್ ಅವರು ವಿಡಿಯೋ ಮೂಲಕ ಅಲ್ಲಿನ ಚಿತ್ರಣವನ್ನು ವಿವರಿಸಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ಫೆಬ್ರವರಿ 24ಕ್ಕೆ ಮಂಗಳೂರಿಗೆ ಹೋಗಿದ್ದೆ, ಮಾ.1ಕ್ಕೆ ಮತ್ತೆ ಕುವೈತ್‍ಗೆ ಮರಳಿದೆ. ಇಲ್ಲಿಗೆ ಬಂದ ಮೇಲೆ ಫೆಬ್ರವರಿ 27ರ ನಂತರ ಕುವೈತ್‍ಗೆ ಬಂದವರು ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ಅದರ ಪ್ರಕಾರ ನಾನು ಮೆಡಿಕಲ್ ಚೆಕಪ್‍ಗೆ ಒಳಗಾದೆ. ಈ ವೇಳೆ ಕೊರೊನಾ ವೈರಸ್ ಇರುವ ಕುರಿತು ನೆಗಟಿವ್ ರಿಪೋರ್ಟ್ ಬಂದರೂ 14 ದಿನಗಳ ಕಾಲ ಮನೆಯಲ್ಲೇ ಇರಬೇಕು ಹೊರಗಡೆ ಬರಬಾರದು ಎಂಬ ನಿಯಮವನ್ನು ರೂಪಿಸಲಾಗಿದೆ. ಅದರ ಪ್ರಕಾರ ನಾವು ಮನೆಯಲ್ಲೇ ಇದ್ದೇವೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

    ಮಾರ್ಚ್ 11ರಂದು ಮತ್ತೆ ಹೊಸ ಕಾನೂನು ತಂದರು, ಎಲ್ಲ ಶಾಲೆಗಳು, ಬ್ಯಾಂಕ್, ಸರ್ಕಾರಿ ಕಚೇರಿಗಳು, ಬಸ್ ಸೇರಿದಂತೆ ಎಲ್ಲ ಸೌಲಭ್ಯವನ್ನು ಬಂದ್ ಮಾಡಿದ್ದಾರೆ. ಕೇವಲ ಎಟಿಎಂಗಳು ಮಾತ್ರ ತೆರೆದಿವೆ. ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಜನರ ಓಡಾಟ ಕಡಿಮೆಯಾಗಿದ್ದರಿಂದ ರೋಗದ ಭೀತಿ ಇರುವುದಿಲ್ಲ. ಜನ ಹೆಚ್ಚು ಪ್ಯಾನಿಕ್ ಆಗಿದ್ದರು, ಈಗ ಎಲ್ಲವೂ ನಾರ್ಮಲ್ ಆಗಿದೆ. ಕೆಲವು ಪ್ರವಾಸಿ ತಾಣಗಳ ಭೇಟಿಯನ್ನು ಸಹ ಪೊಲೀಸರು ನಿರ್ಬಂಧಿಸಿದ್ದಾರೆ. 14 ದಿನದ ಬಳಿಕ ಮತ್ತೆ ಆಸ್ಪತ್ರೆಗೆ ಮತ್ತು ತಪಾಸಣೆಗೆ ಒಳಾಗಗಬೇಕು ಎಂದು ಸರ್ಕಾರ ಆದೇಶಿಸಿದೆ ಎಂದು ತಿಳಿಸಿದರು.

    ಜನತೆ ಆಹಾರಕ್ಕೆ ಯಾವುದೇ ಸಮಸ್ಯೆ ಇಲ್ಲ. 60 ದಿನಕ್ಕೆ ಆಗುವಷ್ಟು ಸಂಗ್ರಹ ನಮ್ಮ ಜೊತೆ ಇದೆ ಎಂದು ಕುವೈತ್ ಹೇಳಿಕೊಂಡಿದೆ. ಕುವೈತ್ ನಲ್ಲಿ ಇಲ್ಲಿಯವರಗೆ 100 ಕೇಸ್ ದಾಖಲಾಗಿದೆ. ಆದರೆ ಯಾರೂ ಮೃತಪಟ್ಟಿಲ್ಲ. ಆದರೂ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ದೇಶವನ್ನೇ ಬಂದ್ ಮಾಡಿದೆ.

  • ಕಸಕ್ಕೂ ಹೈಟೆಕ್ ಟೆಕ್ನಾಲಜಿ – ಬಿಬಿಎಂಪಿಯಿಂದ ಹೊಸ ಆ್ಯಪ್

    ಕಸಕ್ಕೂ ಹೈಟೆಕ್ ಟೆಕ್ನಾಲಜಿ – ಬಿಬಿಎಂಪಿಯಿಂದ ಹೊಸ ಆ್ಯಪ್

    ಬೆಂಗಳೂರು: ಸಿಲಿಕಾನ್ ಸಿಟಿ ಕಸದ ವಿಚಾರದಲ್ಲಿ ಮತ್ತಷ್ಟು ಸ್ಮಾರ್ಟ್ ಆಗುತ್ತಿದ್ದು, ನಗರದ ಮನೆ ಮನೆಗಳಲ್ಲಿ ಕಸ ಸಂಗ್ರಹಣೆಯ ಇಂಚಿಂಚು ಮಾಹಿತಿ ಕಲೆ ಹಾಕಲು ಹೊಸ ಪ್ಲ್ಯಾನ್ ಸಿದ್ಧಗೊಂಡಿದೆ.

    ಹೌದು. ನಿಮ್ಮ ಮನೆ ಕಸ ವಿಂಗಡಿಸ್ತಾ ಇದ್ದೀರಾ? ಹಸಿ ಕಸ ಎಷ್ಟು? ಒಣ ಕಸ ಎಷ್ಟು ಎಂಬ ಮಾಹಿತಿ ಯಾರಿಗೂ ಇರಲ್ಲ. ಕೆಲವರಂತೂ ಕಸವನ್ನ ಎಲ್ಲೆಂದರಲ್ಲಿ ಬಿಸಾಡ್ತಾರೆ. ಇಂತಹ ಜನರನ್ನು ಕಂಡು ಹಿಡಿಯಲು ಬಿಬಿಎಂಪಿ ಕ್ಯೂಆರ್ ಕೋಡ್ ಕಸ ಎಂಬ ಹೊಸ ಆ್ಯಪ್ ಟೆಕ್ನಾಲಜಿ ಪರಿಚಯಿಸುತ್ತಿದೆ.

    ನಗರದ ಹತ್ತು ವಾರ್ಡಗಳ ಪ್ರತಿ ಮನೆಗೂ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ. ಇದರಿಂದ ಮನೆ ಮನೆಗೆ ಕಸ ಸಂಗ್ರಹಿಸಲು ಬರುವ ಪೌರಕಾರ್ಮಿಕರು ಹಾಗೂ ಸಹಾಯಕರು ಯಾವ ಮನೆಯಲ್ಲಿ ಕಸ ಹಾಕಿದ್ರು? ಹಸಿ, ಒಣ ಕಸ ವಿಂಗಡಿಸಿದ್ರಾ? ಹೀಗೆ ಹಲವು ಮಾಹಿತಿಗಳನ್ನ ಕಲೆ ಹಾಕಲು ಸುಲಭವಾಗಲಿದೆ. ಅಷ್ಟೇ ಅಲ್ಲದೆ ಹೊಸ ಬಿಬಿಎಂಪಿ ಸಿದ್ಧಪಡಿಸೊ ಆ್ಯಪ್‍ನಲ್ಲಿ ಎಲ್ಲಾ ಮಾಹಿತಿಯನ್ನ ಅಪ್ಲೋಡ್ ಮಾಡಬೇಕಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಮಾಹಿತಿ ನೀಡಿದರು.

    ಸ್ಮಾರ್ಟ್ ಸಿಟಿ ಅಡಿಯಲ್ಲಿ ಕ್ಯೂಆರ್ ಕೋಡ್ ಬರಲಿದು, ಪ್ರತಿ ಕೋಡ್ ಅಳವಡಿಕೆಗೂ 4 ರೂಪಾಯಿಂದ 16 ರೂಪಾಯಿ ಆಗೊ ಸಾಧ್ಯತೆಯೂ ಇದೆ. ಈ ಮೂಲಕ ಬಿಬಿಎಂ ಕಸ ವಿಲೇವಾರಿ ವಿಚಾರದಲ್ಲಿ ಸ್ಮಾರ್ಟ್ ಆಗುತ್ತಿದ್ದು, ಸಾರ್ವಜನಿಕರು ಬಿಬಿಎಂಪಿ ಹೊಸ ಪ್ರಯತ್ನಕ್ಕೆ ಸಹಕರಿಸಬೇಕಿದೆ.

  • ಎಲ್‍ಒಸಿ ಬಳಿ ಪಾಕ್ ದಾಳಿ – ಇಬ್ಬರು ಸಾವು, ಆರು ಮಂದಿಗೆ ಗಾಯ

    ಎಲ್‍ಒಸಿ ಬಳಿ ಪಾಕ್ ದಾಳಿ – ಇಬ್ಬರು ಸಾವು, ಆರು ಮಂದಿಗೆ ಗಾಯ

    ಶ್ರೀನಗರ: ಎಲ್‍ಒಸಿ(ಗಡಿ ನಿಯಂತ್ರಣ ರೇಖೆ) ಬಳಿ ಪಾಕಿಸ್ತಾನ ಸೈನಿಕರು ಮಾಡಿದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಂಡಿ ಚೆಚಿಯನ್ ಪ್ರದೇಶದ ಮೇಲೆ ಪಾಕಿಸ್ತಾನ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಇದಕ್ಕೆ ಭಾರತೀಯ ಸೇನೆ ಸೂಕ್ತವಾದ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

    ಇಂದು ಮಧ್ಯಾಹ್ನ 2:30ರ ಸುಮಾರಿಗೆ ಭಾರತದ ನಾಗರೀಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ಮತ್ತು ಶೆಲ್ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಗುಲ್ನಾಜ್ ಅಖ್ತರ್ (35) ಮತ್ತು ಶೋಹೈಬ್ (16) ಮೃತಪಟ್ಟಿದ್ದಾರೆ ಮತ್ತು ಆರು ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ಸೇನೆ ತಿಳಿಸಿದೆ.

    ಕಳೆದ ಒಂದು ವಾರದಿಂದ ಪಾಕಿಸ್ತಾನ ಎಲ್‍ಒಸಿ ಬಳಿ ತನ್ನ ಪುಂಡಾಟ ಮುಂದುವರಿಸಿದ್ದು, ಭಾರತೀಯ ನಾಗರಿಕ ಪ್ರದೇಶದ ಮೇಲೆ ಅಪ್ರಚೋದಿತ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸುತ್ತಿದೆ. ಕಳೆದ ಮೂರು ದಿನಗಳಲ್ಲಿ ಇದಕ್ಕೆ ಎರಡನೇ ಬಾರಿ ಪೂಂಚ್ ಜಿಲ್ಲೆಯ ಎಲ್‍ಒಸಿ ಬಳಿ ಪಾಕಿಸ್ತಾನ ಗುಂಡಿನ ದಾಳಿ ಮಾಡುತ್ತಿದೆ. ನವೆಂಬರ್ 25 ರಿಂದ ಸತತವಾಗಿ ಅಖ್ನೂರ್ ವಲಯದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಲೇ ಇದೆ ಎಂದು ಸೇನೆ ಹೇಳಿದೆ.