Tag: citizen

  • ನೀವು ಬರೋದು ಬೇಡ – ತನ್ನ ಪ್ರಜೆಗಳನ್ನೇ ದೇಶಕ್ಕೆ ಸೇರಿಸದ ಪಾಕ್‌

    ನೀವು ಬರೋದು ಬೇಡ – ತನ್ನ ಪ್ರಜೆಗಳನ್ನೇ ದೇಶಕ್ಕೆ ಸೇರಿಸದ ಪಾಕ್‌

    ನವದೆಹಲಿ: ಭಾರತದಿಂದ ತೆರಳಿದ ತನ್ನ ಪ್ರಜೆಗಳನ್ನು ತಾನು ಸ್ವೀಕರಿಸುವುದಿಲ್ಲ ಎಂದು ಪಾಕಿಸ್ತಾನ (Pakistan) ಹೇಳಿದೆ.

    ಹೌದು. ಪಹಲ್ಗಾಮ್‌ ದಾಳಿಯ (Pahalgam Terror Attack) ಬಳಿಕ ಭಾರತದ ಗೃಹ ಸಚಿವಾಲಯ ಭಾರತದಲ್ಲಿರುವ ಪಾಕ್‌ ಪ್ರಜೆಗಳು ಭಾರತ ತೊರೆಯಬೇಕು. ಪಾಕ್‌ನಲ್ಲಿರುವ ಭಾರತೀಯರು ಕೂಡಲೇ ದೇಶಕ್ಕೆ ಮರಳಬೇಕು ಎಂದು ಸೂಚಿಸಿತ್ತು.


    ಈ ಸೂಚನೆಯ ಬೆನ್ನಲ್ಲೇ ಭಾರತದಲ್ಲಿರುವ ಪಾಕ್‌ ಪ್ರಜೆಗಳು ದೇಶಕ್ಕೆ ಮರಳುತ್ತಿದ್ದರು. ಆದರೆ ಈಗ ಗಡಿಯಲ್ಲೇ ಪಾಕ್‌ ತನ್ನ ದೇಶದ ಪ್ರಜೆಗಳನ್ನು ತಡೆ ಹಿಡಿದಿದೆ. ವಾಘಾದಲ್ಲಿ ತನ್ನ ಗಡಿಯನ್ನು (Wagah Attari Border) ಸಂಪೂರ್ಣವಾಗಿ ಮುಚ್ಚಿರುವುದರಿಂದ ಪಾಕ್‌ ಪ್ರಜೆಗಳು ಅಟ್ಟಾರಿ-ವಾಘಾ ಕ್ರಾಸಿಂಗ್‌ನಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ ದಾಳಿಗೆ ಮುನೀರ್‌, ಪಾಕ್‌ ಸೇನೆ, ಇಸ್ಲಾಮಿಕ್ ಉಗ್ರರು ಕಾರಣ – ಪಾಕ್‌ ನಟಿ ಕೆಂಡಾಮಂಡಲ

    ಗಡಿ ಮುಚ್ಚಲ್ಪಟ್ಟ ನಂತರ, ಗುರುವಾರ ಎರಡೂ ದೇಶಗಳಿಂದ ಯಾರೂ ಇನ್ನೊಂದು ಬದಿಗೆ ದಾಟಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಪಣ – ಸೈಲೆಂಟ್ ಪ್ಲ್ಯಾನಿಂಗ್, ಮೋದಿ ನಿಗೂಢ ನಡೆ

    ನಾನು ಬೆಳಿಗ್ಗೆ 6 ಗಂಟೆಗೆ ನನ್ನ ಸಹೋದರಿಯರೊಂದಿಗೆ ಇಲ್ಲಿಗೆ ಬಂದೆ. ಬೆಳಿಗ್ಗೆ 10 ಗಂಟೆಗೆ ಗಡಿ ತೆರೆಯುತ್ತದೆ ಎಂದು ಅಧಿಕಾರಿಗಳು ಹೇಳಿದರು. ಆದರೆ 11 ಗಂಟೆಯಾದರೂ ಗಡಿಯನ್ನು ತೆರೆಯಲಿಲ್ಲ. ಯಾಕೆ ಗೇಟ್‌ ತೆಗೆಯುತ್ತಿಲ್ಲ ಎಂದು ಕೇಳಿದ್ದಕ್ಕೆ ಪಾಕ್‌ ಅಧಿಕಾರಿ, ಭಾರತದಿಂದ ಪಾಕಿಸ್ತಾನಕ್ಕೆ ಮರಳದಂತೆ ಸರ್ಕಾರ ಆದೇಶ ನೀಡಿದೆ ಎಂದು ಹೇಳಿದರು ಎಂಬುದಾಗಿ ವ್ಯಕ್ತಿಯೊಬ್ಬರು ತಿಳಿಸಿದರು.

    ಬುಧವಾರ 125 ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತವನ್ನು ತೊರೆದಿದ್ದರು. ಈ ಮೂಲಕ ಒಂದು ವಾರದಲ್ಲಿ ಒಟ್ಟು 911 ಮಂದಿ ಪಾಕ್‌ಗೆ ಮರಳಿದ್ದರು.

    ಒಂದು ವಾರದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಒಟ್ಟು 1,1617 ಭಾರತೀಯರು ಮತ್ತು ದೀರ್ಘಾವಧಿಯ ಭಾರತೀಯ ವೀಸಾ ಹೊಂದಿರುವ 224 ಮಂದಿ ಭಾರತಕ್ಕೆ ಮರಳಿದ್ದಾರೆ.

  • ರಷ್ಯಾ ಸೇನಾ ನೆಲೆ ಮೇಲೆ ಗುಂಡಿನ ದಾಳಿ- 11 ಸಾವು

    ರಷ್ಯಾ ಸೇನಾ ನೆಲೆ ಮೇಲೆ ಗುಂಡಿನ ದಾಳಿ- 11 ಸಾವು

    ಮಾಸ್ಕೋ: ರಷ್ಯಾದ (Russia) ಮಿಲಿಟರಿ (Military) ತರಬೇತಿ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಉಕ್ರೇನ್ ಗಡಿಯಲ್ಲಿರುವ ಬೆಲ್ಗೊರೊಡ್ ಪ್ರದೇಶದಲ್ಲಿ ನಡೆದಿದೆ.

    ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಸಿಐಎಸ್ ದೇಶದ ಇಬ್ಬರು ಬಾಲ್ಗೊರೊಡ್ ಪ್ರದೇಶದ ಪಶ್ಚಿಮ ಮಿಲಿಟರಿ ಜಿಲ್ಲೆಯ ತರಬೇತಿ ಕೇಂದ್ರದಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಉಕ್ರೇನ್‍ ಮೇಲೆ ದಾಳಿ ನಡೆಸಲು ಸ್ವಯಂಸೇವಕರಿಗೆ ತರಬೇತಿ ನೀಡುತ್ತಿದ್ದ ಅವಧಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 10ರ ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ

    ಈ ಬಗ್ಗೆ ರಷ್ಯಾದ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರು ತರಬೇತಿ ಸಮಯದಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಎರಡು ಕಡೆಯಿಂದ ದಾಳಿ ಪ್ರತಿದಾಳಿ ನಡೆದಿದ್ದು, 11 ಮಂದಿ ಮೃತಪಟ್ಟಿದ್ದಾರೆ ಜೊತೆಗೆ ಘಟನೆಯಲ್ಲಿ ಇಬ್ಬರು ನಾಗರಿಕರನ್ನು ಸೇನೆ ಹತ್ಯೆ ಮಾಡಿದೆ ಎಂದು ತಿಳಿಸಿದೆ. ಇದನ್ನೂ ಓದಿ: ನಿಲ್ಲಿ, ಎಲ್ಲಿಗೆ ಹೋಗ್ತಿದ್ದೀರಾ ಅಂದಿದ್ದಕ್ಕೆ ಸೆಕ್ಯೂರಿಟಿಗಾರ್ಡ್‍ಗೆ ಹಿಗ್ಗಾಮುಗ್ಗ ಹೊಡೆದ

    Live Tv
    [brid partner=56869869 player=32851 video=960834 autoplay=true]

  • ನೈಜೀರಿಯಾ ಪ್ರಜೆ ಅರೆಸ್ಟ್ – 70 ಲಕ್ಷರೂ. ಮೌಲ್ಯದ ಡ್ರಗ್ಸ್ ವಶ

    ನೈಜೀರಿಯಾ ಪ್ರಜೆ ಅರೆಸ್ಟ್ – 70 ಲಕ್ಷರೂ. ಮೌಲ್ಯದ ಡ್ರಗ್ಸ್ ವಶ

    ಬೆಂಗಳೂರು: ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯಿಂದ 70 ಲಕ್ಷ ಬೆಲೆ ಬಾಳುವ ಡ್ರಗ್ಸ್ ಮತ್ತು 800 ಗ್ರಾಂ ತೂಕದ ಎಂಡಿಎಂಎ, ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ. ಪ್ರತಿ 5 ಸಾವಿರದಿಂದ 8 ಸಾವಿರಕ್ಕೆ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದನು.

    ಆರೋಪಿಯು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದನು. ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ದೇಶದ ಪ್ರಜೆಗಳಿಗೆ ಸಿಗಲಿದೆ ಆರೋಗ್ಯ ಐಡಿ ಕಾರ್ಡ್‌

    ದೇಶದ ಪ್ರಜೆಗಳಿಗೆ ಸಿಗಲಿದೆ ಆರೋಗ್ಯ ಐಡಿ ಕಾರ್ಡ್‌

    – ಒಂದೇ ಕ್ಲಿಕ್‌ನಲ್ಲಿ ಸಿಗಲಿದೆ ರೋಗಿಯ ಸಂಪೂರ್ಣ ಆರೋಗ್ಯ ಮಾಹಿತಿ
    – ಎನ್‌ಡಿಎಚ್‌ಎಂ ಆರಂಭಿಸಲು ಸರ್ಕಾರ ಸಿದ್ಧತೆ
    – ಎಲ್ಲ ಪ್ರಜೆಗಳಿಗೆ ಕಾರ್ಡ್‌ ಕಡ್ಡಾಯವಲ್ಲ

    ನವದೆಹಲಿ: ಆಸ್ಪತ್ರೆಗೆ ಅಡ್ಮಿಟ್‌ ಆಗಿರುವ ರೋಗಿಗೆ ಈ ಹಿಂದೆ ಎಲ್ಲಿ ಚಿಕಿತ್ಸೆ ನೀಡಲಾಗಿತ್ತು? ಏನು ಚಿಕಿತ್ಸೆ ನೀಡಲಾಗಿತ್ತು? ಆ ಸಮಯದಲ್ಲಿ ರೋಗಿಯ ಆರೋಗ್ಯ ಹೇಗಿತ್ತು? ಯಾವ ಕಾರಣಕ್ಕೆ ಏನು ಪರೀಕ್ಷೆ ಮಾಡಿಸಲಾಗಿತ್ತು ಎಲ್ಲವೂ ಒಂದೇ ಕ್ಲಿಕ್‌ ನಲ್ಲಿ ಸಿಗಲಿದೆ.

    ಹೌದು, ಕೇಂದ್ರ ಸರ್ಕಾರ ರಾಷ್ಟ್ರೀಯ ಡಿಜಿಟಲ್‌ ಹೆಲ್ತ್‌ ಮಿಷನ್‌(ಎನ್‌ಡಿಎಚ್‌ಎಂ) ಆರಂಭಿಸಲು ಮುಂದಾಗಿದೆ. ಈ ಸೇವೆ ಆರಂಭಗೊಂಡರೆ ದೇಶದ ಪ್ರತಿಯೊಬ್ಬ ಪ್ರಜೆಗೆ ಆರೋಗ್ಯ ಐಡಿ ಕಾರ್ಡ್‌ ಸಿಗಲಿದೆ. ಇದನ್ನೂ ಓದಿ:ಮರಣ ಪ್ರಮಾಣ ಇಳಿಕೆ- 4 ತಿಂಗಳ ಬಳಿಕ ವೆಂಟಿಲೇಟರ್‌ ರಫ್ತಿಗೆ ಅನುಮತಿ

     

    ಈಗಾಗಲೇ ಪ್ರಸ್ತಾಪ ಸಿದ್ಧಗೊಂಡಿದ್ದು, ಈ ವಾರವೇ ಕ್ಯಾಬಿನೆಟ್‌ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿುವರು ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಐಡಿ ಕಾರ್ಡ್‌ ಎಲ್ಲರಿಗೂ ಕಡ್ಡಾಯವಲ್ಲ. ಜನರು ಸ್ವಇಚ್ಛೆಯಿಂದ ಕಾರ್ಡ್‌ ಮಾಡಿಸಬಹುದು. ಆರಂಭದಲ್ಲಿ ಹೆಲ್ತ್‌ ಐಡಿ, ವೈಯಕ್ತಿಕ ಆರೋಗ್ಯ ಮಾಹಿತಿ, ಡಿಜಿ ಡಾಕ್ಟರ್‌ ಮತ್ತು ಹೆಲ್ತ್‌ ರಿಜಿಸ್ಟ್ರಿ ಇರಲಿದೆ. ನಂತರದ ದಿನಗಳಲ್ಲಿ ಇ ಫಾರ್ಮಾಸಿ ಮತ್ತು ಟೆಲಿಮೆಡಿಸಿನ್‌ ಸೇವೆಗಳನ್ನು ಸೇರಿಸಲಾಗುತ್ತದೆ. ಈಗಾಗಲೇ ಹಲವು ದೇಶಗಳಲ್ಲಿ ಸರ್ಕಾರವೇ ಈ ರೀತಿಯ ಆರೋಗ್ಯ ಕಾರ್ಡ್‌ಗಳನ್ನು ನೀಡಿವೆ.

    ಕೆಲಸ ಹೇಗೆ? 
    ಈ ಸೇವೆ ಬೇಕಾದವರು ವೆಬ್‌ಸೈಟ್‌/ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು ವಿವರಗಳನ್ನು ನೀಡಬೇಕಾಗುತ್ತದೆ. ಈ ವಿವರಗಳನ್ನು ಆ ವ್ಯಕ್ತಿ ಶೇರ್‌ ಮಾಡಿದರೆ ಮಾತ್ರ ಉಳಿದವರಿಗೆ ಸಿಗುತ್ತದೆ. ಹಣಕಾಸು ಸಚಿವಾಲಯ ಈ ಪ್ರಸ್ತಾಪಕ್ಕೆ 470 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಎನ್‌ಎಚ್‌ಎಯಲ್ಲಿ ಅಂತಿಮಗೊಂಡ ಬಳಿಕ ಈ ಪ್ರಸ್ತಾಪ 400 ಕೋಟಿ ರೂ. ಗಿಂತ ಜಾಸ್ತಿ ಆಗಲಾರದು ಎಂದು ವರದಿಯಾಗಿದೆ.

    ಲಾಭ ಹೇಗೆ? 
    ಈ ಸೇವೆ ದೇಶವ್ಯಾಪಿ ಇರಲಿದೆ. ವ್ಯಕ್ತಿ ಯಾವುದೇ ಮೂಲೆಗೆ ಹೋದಾಗ ಸಮಸ್ಯೆಯಾಗಿ ಆಸ್ಪತ್ರೆ ಸೇರಿದಾಗ ಆತನ ಆರೋಗ್ಯದ ಮಾಹಿತಿ ಕೂಡಲೇ ಸಿಗುವುದಿಲ್ಲ. ಆದರೆ ಈ ಆಪ್‌ನಲ್ಲಿ ವಿವರ ನೀಡಿದ್ದರೆ ಕೂಡಲೇ ವೈದ್ಯರಿಗೆ ಈ ಹಿಂದೆ ರೋಗಿಗೆ ಏನಾಗಿತ್ತು? ಯಾವ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು? ಈ ಹಿಂದೆ ಎಲ್ಲಿ ಚಿಕಿತ್ಸೆ ನೀಡಲಾಗಿತ್ತು ಈ ಎಲ್ಲ ವಿವರಗಳು ಕೂಡಲೇ ಸಿಗಲಿದೆ. ಇದರಿಂದಾಗಿ ಕಡಿಮೆ ಅವಧಿಯಲ್ಲಿ ರೋಗಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

  • ಅಪಘಾತ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನೀಗ್ರೋಗಳಿಂದ ಹಲ್ಲೆ

    ಅಪಘಾತ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನೀಗ್ರೋಗಳಿಂದ ಹಲ್ಲೆ

    ಬೆಂಗಳೂರು: ನಗರದಲ್ಲಿ ಆಫ್ರಿಕನ್ ನೀಗ್ರೊಗಳದ್ದೇ ದರ್ಬಾರ್ ಶುರುವಾಗಿದ್ದು, ಇವರನ್ನು ಮುಟ್ಟುವುದಕ್ಕೆ ಪೊಲೀಸರು ಕೂಡ ಭಯಪಡುವ ವಾತಾವರಣ ಸೃಷ್ಟಿಯಾಗಿದೆ. ಅಪಘಾತ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ 44 ಹೋಲಿಗೆ ಬೀಳುವ ಹಾಗೆ ಹಲ್ಲೆ ನಡೆಸಿದ್ದಾರೆ.

    ಮೂವರು ಆಫ್ರಿಕನ್ ಪ್ರಜೆಗಳು ಯುವಕ ನರೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ನಗರದ ಚೇಳಿಕೆರೆಯಲ್ಲಿ ಈ ಘಟನೆ ನಡೆದಿದ್ದು, ನರೇಶನ ಬೈಕಿಗೆ ಆಫ್ರಿಕನ್ ಪ್ರಜೆ ತನ್ನ ಕಾರಿನಿಂದ ಡಿಕ್ಕಿ ಹೊಡೆದಿದ್ದನು. ಕಾರ್ ಅಡ್ಡಗಟ್ಟಿ ಪ್ರಶ್ನೆ ಮಾಡಿದ್ದ ನರೇಶ್ ನನ್ನು ಮೂವರು ಆಫ್ರಿಕನ್ ಪ್ರಜೆಗಳು ರಾಡ್ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

    ಸದ್ಯ ನರೇಶ್ ತಲೆಗೆ 44 ಸ್ಟಿಚ್ ಹಾಕಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮೂವರು ಆಫ್ರಿಕನ್ ಪ್ರಜೆಗಳ ವಿರುದ್ಧ ದೂರು ದಾಖಲಾಗಿದೆ.