Tag: Citadel Web Series

  • ಬಾಲಿವುಡ್‌ನ `ಸಿಟಾಡೆಲ್’ ಸೀರಿಸ್ ಒಪ್ಪಿಕೊಂಡಿದ್ಯಾಕೆ? ಕಾರಣ ಬಿಚ್ಚಿಟ್ಟ ಸಮಂತಾ

    ಬಾಲಿವುಡ್‌ನ `ಸಿಟಾಡೆಲ್’ ಸೀರಿಸ್ ಒಪ್ಪಿಕೊಂಡಿದ್ಯಾಕೆ? ಕಾರಣ ಬಿಚ್ಚಿಟ್ಟ ಸಮಂತಾ

    ಟಿ ಸಮಂತಾ(Samantha)  `ಮೈಯೋಸಿಟಿಸ್’ (Myositis) ಎಂಬ ಅಪರೂಪದ ಕಾಯಿಲೆಯಿಂದ ಇದೀಗ ಚೇತರಿಸಿಕೊಂಡಿದ್ದಾರೆ. ಮತ್ತೆ ಸಿನಿಮಾಗಳತ್ತ ಬ್ಯುಸಿಯಾಗಿದ್ದಾರೆ. ಹೀಗಿರುವಾಗ `ಸಿಟಾಡೆಲ್’ (Citadel) ಸೀರಿಸ್‌ನ ಸಮಯದ ಚರ್ಚೆ ಮಾಡ್ತಿರುವ ಫೋಟೋ ಶೇರ್ ಮಾಡಿ ಈ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು ಯಾಕೆ ಅಂತಾ ಸಮಂತಾ ರಿವೀಲ್ ಮಾಡಿದ್ದಾರೆ.

    `ಯಶೋದ’ (Yashoda)ಸೂಪರ್ ಸಕ್ಸಸ್ ನಂತರ ಸಮಂತಾ, `ಶಾಕುಂತಲಂ’ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಈ ನಡುವೆ ಬಾಲಿವುಡ್ ಬಹುನಿರೀಕ್ಷಿತ ʻಸಿಟಾಡೆಲ್ʼ ಸೀರಿಸ್‌ನಲ್ಲಿ ಸಮಂತಾ ಮತ್ತು ತಂಡ ತೊಡಗಿದ್ದಾರೆ. ಇತ್ತೀಚಿನ ʻಸಿಟಾಡೆಲ್ʼ ಸೀರಿಸ್‌ನ ಸಮಂತಾ ಮಾಸ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿತ್ತು.

    ಆರೋಗ್ಯದಲ್ಲಿ ಚೇತರಿಕೆ ಕಂಡ ಬೆನ್ನಲ್ಲೇ `ಸಿಟಾಡೆಲ್’ ತಂಡ ವಿಶೇಷ ಫೋಟೋವೊಂದನ್ನ ನಟಿ ಹಂಚಿಕೊಂಡಿದ್ದಾರೆ. ಸಮಂತಾ ಜೊತೆ ವರುಣ್ ಧವನ್ (Varun Dhawan), ಸೀತಾ ಆರ್. ಮೆನಾನ್, ನಿರ್ದೇಶಕರಾದ ರಾಜ್, ಡಿ.ಕೆ ಕೃಷ್ಣ ಜೊತೆಗೆ ಸಮಯ ಕಳೆದಿದ್ದಾರೆ. ಮತ್ತೆ ಶೂಟಿಂಗ್ ಶುರು ಮಾಡಲು ಮಾತುಕತೆ ನಡೆಸಿದ್ದಾರೆ.‌ ಇದನ್ನೂ ಓದಿ: ಕನ್ನಡಕ್ಕೆ ವಿಜಯ್ ಸೇತುಪತಿ: ಇನ್ನೂ ಕನ್ಫರ್ಮ್ ಆಗಿಲ್ಲ ಅಂತಿದೆ ಟೀಮ್

     

    View this post on Instagram

     

    A post shared by Samantha (@samantharuthprabhuoffl)

    ಫಸ್ಟ್ ಟೈಮ್ `ಸಿಟಾಡೆಲ್’ (Citadel) ಸೀರಿಸ್‌ನಲ್ಲಿ ನಟಿಸಬೇಕೋ ಅಥವಾ ಬೇಡ್ವಾ ಎಂದು ನಿರ್ಧಾರ ಮಾಡುವಾಗ ನನ್ನ ಹಾರ್ಟ್ ಬೀಟ್ ಜೋರಾಗಿತ್ತು. ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್‌ನ ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತವಾದ ಕಾರಣ ನಾನು ಸಿಟಾಡೆಲ್ ಒಪ್ಪಿಕೊಂಡೆ. ಭಾರತೀಯ ಶೈಲಿಯಲ್ಲಿ ಸಿಟಾಡೆಲ್ ಕಥೆಯನ್ನ ಹೇಳಲಾಗುತ್ತಿದೆ. ಸ್ಕ್ರಿಪ್ಟ್ ಕೇಳಿ ರೋಮಾಂಚನವಾಯಿತು. ಈ ಟೀಮ್ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ ಎಂದು ಸಮಂತಾ ಹೇಳಿದ್ದಾರೆ.

    ಇನ್ನೂ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ವರುಣ್ ಮತ್ತು ಸಮಂತಾ ಜೋಡಿ ನೋಡಲು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

    ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

    ಬಾಲಿವುಡ್ ನ ಖ್ಯಾತ ನಟ ವರುಣ್ ದವನ್ ಜತೆ ಇದೇ ಮೊದಲ ಬಾರಿಗೆ ಸಮಂತಾ ಕಾಣಿಸಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದಿನವೂ ನೆಟ್ಟಿಗರ ಪ್ರಶ್ನೆಗೆ ಬೇಸತ್ತು ಹೋಗಿರುವ ಈ ಚೆಲುವೆ, ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಒಂದರ ಮೇಲೊಂದು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹಲವು ದಿವಸಗಳ ಹಿಂದೆ ಸಮಂತಾ ಮತ್ತೆ ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕರ ಜತೆ ಕೆಲಸ ಮಾಡಲಿದ್ದಾರೆ ಎಂದು ಸುದ್ದಿ ಆಗಿತ್ತು. ಅದು ಈಗ ನಿಜವೂ ಆಗಿದೆ. ಅತೀ ಶೀಘ್ರದಲ್ಲೇ ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕರಾದ ರಾಜ್ ಮತ್ತು ಡಿಕೆ  ಅವರ ಹೊಸ ವೆಬ್ ಸರಣಿಯ ಚಿತ್ರೀಕರಣದಲ್ಲೂ ಸಮಂತಾ ಭಾಗಿಯಾಗಲಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿಂದ ಜೇಮ್ಸ್ ಚಿತ್ರಕ್ಕೆ ತೊಂದರೆ ಇಲ್ಲ : ಶಿವರಾಜ್ ಕುಮಾರ್

    ಈ ವೆಬ್ ಸರಣಿಗೆ ಹೀರೋ ಆಗಿ ವರುಣ್ ದವನ್ ಆಯ್ಕೆಯಾಗಿದ್ದರೆ, ಸಮಂತಾ ಅವರದ್ದು ಪ್ರಮುಖ ಪಾತ್ರ. ಈ ವೆಬ್ ಸರಣಿಗೆ ‘ಸಿಟಾಡೆಲ್’ ಎಂದು ಹೆಸರಿಡಲಾಗಿದೆ. ಇದೇ ಮೊದಲ ಬಾರಿಗೆ ವರುಣ್ ದವನ್ ಮತ್ತು ಸಮಂತಾ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ಹಾಗಾಗಿಯೇ ಮೊನ್ನೆಯಷ್ಟೇ ಮುಂಬೈನಲ್ಲಿ ಸಮಂತಾ ಮತ್ತು ವರುಣ್ ಕೂಡ ಭೇಟಿಯಾಗಿದ್ದಾರೆ. ಸ್ವತಃ ಸಮಂತಾ ಅವರನ್ನು ವರುಣ್ ಕಾರಿನವರೆಗೂ ಬಿಟ್ಟು ಬಂದು ಒಲವು ತೋರಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

    ಈ ವೆಬ್ ಸರಣಿಯ ಚಿತ್ರೀಕರಣ ಮುಂದಿನ ತಿಂಗಳಿಂದ ಶುರುವಾಗಲಿದ್ದು, ಮೊದಲು ಮುಂಬೈನಲ್ಲಿಯೇ ಶೂಟ್ ಮಾಡಲಿದೆಯಂತೆ ಚಿತ್ರತಂಡ. ಆನಂತರ  ಯುರೋಪ್ ಭಾಗಗಳಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಕೂಡ ಹಾಕಿಕೊಂಡಿದೆ. ಇದನ್ನೂ ಓದಿ : ಬಸವರಾಜ ಬೊಮ್ಮಾಯಿಯನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?

    ಇದೊಂದು ಸಾಹಸಮಯ ವೆಬ್ ಸೀರಿಸ್ ಆಗಿದ್ದು, ದವನ್ ಅವರಿಗೆ ಹೇರಳಾಗಿ ಸಾಹಸ ದೃಶ್ಯಗಳು ಇವೆಯಂತೆ. ಹಾಗಾಗಿಯೇ ಅವರು ಮಾರ್ಷಲ್ ಆರ್ಟ್ ಕೂಡ ಕಲಿಯುತ್ತಿದ್ದಾರಂತೆ.