Tag: citadel honey bunny

  • Citadel Honey Bunny: ವರುಣ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ ಸಮಂತಾ- ದಂಗಾದ ಫ್ಯಾನ್ಸ್

    Citadel Honey Bunny: ವರುಣ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ ಸಮಂತಾ- ದಂಗಾದ ಫ್ಯಾನ್ಸ್

    ಟಿ ಸಮಂತಾ ಸದ್ಯ ‘ಸಿಟಾಡೆಲ್ ಹನಿ ಬನಿ’ (Citadel Honey Bunny) ಸಕ್ಸಸ್ ಖುಷಿಯಲ್ಲಿದ್ದಾರೆ. ವರುಣ್ ಧವನ್ ಜೊತೆ ನಟಿಸಿದ ವೆಬ್ ಸಿರೀಸ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ವರುಣ್ ಜೊತೆಗಿನ ಲಿಪ್‌ಲಾಕ್ ದೃಶ್ಯಗಳಲ್ಲಿ ಸಮಂತಾರನ್ನು (Samantha) ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಜೊತೆ ಬ್ಯಾಕ್ ಟು ಬ್ಯಾಕ್ 3 ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್‌

    ಸೌತ್ ಸಿನಿಮಾಗಳಲ್ಲಿ ಗ್ಲ್ಯಾಮರಸ್‌ ಪಾತ್ರಗಳ ಮೂಲಕ ಸಮಂತಾ ಸೈ ಎನಿಸಿಕೊಂಡಿದ್ದರು. ಇದೀಗ ಬಾಲಿವುಡ್‌ನ ‘ಸಿಟಾಡೆಲ್ ಹನಿ ಬನಿ’ ವೆಬ್ ಸಿರೀಸ್‌ನಲ್ಲಿ ನಟಿ ಸಖತ್ ಹಾಟ್ ಅವತಾರ ತಾಳಿದ್ದಾರೆ. ವರುಣ್ ಜೊತೆ ಬೋಲ್ಡ್ ದೃಶ್ಯಗಳಲ್ಲಿ ನಟಿಸಿರುವ ಸ್ಯಾಮ್ ಅವತಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ಇದು ನಮ್ಮ ನೆಚ್ಚಿನ ನಟಿನಾ? ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರೊಮ್ಯಾನ್ಸ್ ಮಿತಿ ಮೀರಿದೆ ಎಂದು ನೆಟ್ಟಿಗರು ಕುಟುಕಿದ್ದಾರೆ. ಇನ್ನೂ ಕೆಲವರು ಸ್ಯಾಮ್ ಯಾವ ರೋಲ್ ಕೊಟ್ರು ಸಖತ್ ಆಗಿ ನಟಿಸ್ತಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.


    ಇನ್ನೂ ಹಾಲಿವುಡ್ ವರ್ಷನ್‌ನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಭಾರತೀಯ ವರ್ಷನ್‌ಗೆ ತಕ್ಕಂತೆ ‘ಸಿಟಾಡೆಲ್ ಹನಿ ಬನಿ’ ಚಿತ್ರೀಕರಣ ಮಾಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವರುಣ್ (Varun Dhawan) ಮತ್ತು ಸಮಂತಾ ಜೊತೆಯಾಗಿ ನಟಿಸಿದ್ದಾರೆ. ಇದನ್ನೂ ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ.

  • ಆ್ಯಕ್ಷನ್ ಅವತಾರ ತಾಳಿದ ಸಮಂತಾ- ‘ಸಿಟಾಡೆಲ್ ಹನಿ ಬನಿ’ ಟ್ರೈಲರ್ ಔಟ್

    ಆ್ಯಕ್ಷನ್ ಅವತಾರ ತಾಳಿದ ಸಮಂತಾ- ‘ಸಿಟಾಡೆಲ್ ಹನಿ ಬನಿ’ ಟ್ರೈಲರ್ ಔಟ್

    ಸೌತ್ ನಟಿ ಸಮಂತಾ ಮತ್ತು ವರುಣ್ ಧವನ್ (Varun Dhawan) ಜೊತೆಯಾಗಿ ನಟಿಸಿರುವ ‘ಸಿಟಾಡೆಲ್ ಹನಿ ಬನಿ’ (Citadel Honey Bunny) ವೆಬ್ ಸಿರೀಸ್ ಟ್ರೈಲರ್ ರಿಲೀಸ್ ಆಗಿದೆ. ವರುಣ್ ಜೊತೆ ಸಮಂತಾ (Samantha) ಗನ್ ಹಿಡಿದು ಆ್ಯಕ್ಷನ್ ಅವತಾರ ತಾಳಿದಿದ್ದಾರೆ.

    ‘ಸಿಟಾಡೆಲ್ ಹನಿ ಬನಿ’ ವೆಬ್ ಸಿರೀಸ್‌ನಲ್ಲಿ ಒಂದು ಮಗುವಿನ ತಾಯಿಯಾಗಿ ಮತ್ತು ರಾ ಏಜೆಂಟ್ ಪಾತ್ರದಲ್ಲಿ ಸಮಂತಾ ನಟಿಸಿದ್ದಾರೆ. ವರುಣ್ ಮತ್ತು ಸಮಂತಾ ಗನ್ ಹಿಡಿದು ಖಡಕ್ ಆಗಿ ನಟಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ನಟಿ ಮಿಂಚಿದ್ದಾರೆ. ಟ್ರೈಲರ್ ನೋಡಿ ಫ್ಯಾನ್ಸ್ ಕಾಯುತ್ತಿದ್ದಾರೆ.

     

    View this post on Instagram

     

    A post shared by prime video IN (@primevideoin)

    ಈ ವೆಬ್ ಸರಣಿಗೆ ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ. ಹಾಲಿವುಡ್‌ನ ‘ಸಿಟಾಡೆಲ್’ ವೆಬ್ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ ಪಾತ್ರದಲ್ಲೇ ಸಮಂತಾ ಕಾಣಿಸಿಕೊಂಡಿದ್ದಾರೆ. ನವೆಂಬರ್ 7ರಂದು ‘ಸಿಟಾಡೆಲ್ ಹನಿ ಬನಿ’ ಒಟಿಟಿಯಲ್ಲಿ ರಿಲೀಸ್ ಆಗಲಿದೆ.

    ಇನ್ನೂ ಈ ಹಿಂದೆ ಸಮಂತಾ ಜೊತೆ ಡೈರೆಕ್ಟರ್ ರಾಜ್ ಮತ್ತು ಡಿಕೆ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಕೆಲಸ ಮಾಡಿದ್ದರು. ದಿ ಫ್ಯಾಮಿಲಿ ಮ್ಯಾನ್ 2ಗೆ ಮತ್ತು ಸಮಂತಾ ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು.

  • ‘ಸಿಟಾಡೆಲ್’ ಟ್ರೈಲರ್ ರಿಲೀಸ್- ಆ್ಯಕ್ಷನ್ ಅವತಾರದಲ್ಲಿ ಸಮಂತಾ

    ‘ಸಿಟಾಡೆಲ್’ ಟ್ರೈಲರ್ ರಿಲೀಸ್- ಆ್ಯಕ್ಷನ್ ಅವತಾರದಲ್ಲಿ ಸಮಂತಾ

    ಮಂತಾ (Samantha) ನಟಿಸಿರುವ ಬಾಲಿವುಡ್‌ನ ಎರಡನೇ ಪ್ರಾಜೆಕ್ಟ್ ‘ಸಿಟಾಡೆಲ್: ಹನಿ ಬನಿ’ ಟ್ರೈಲರ್ ರಿಲೀಸ್ ಆಗಿದೆ. ವರುಣ್ ಧವನ್ (Varun Dhawan) ಜೊತೆ ಆ್ಯಕ್ಷನ್ ಅವತಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಒಟಿಟಿ ರಿಲೀಸ್ ಕುರಿತು ಫ್ಯಾನ್ಸ್‌ಗೆ ಸಿಹಿಸುದ್ದಿ ಕೂಡ ಸಿಕ್ಕಿದೆ. ಇದನ್ನೂ ಓದಿ:ಬ್ಯಾಚುಲರ್ ಪಾರ್ಟಿ ಕಾಪಿರೈಟ್ ಉಲ್ಲಂಘನೆ ಕೇಸ್: ವಿಚಾರಣೆಗೆ ರಕ್ಷಿತ್ ಶೆಟ್ಟಿ ಹಾಜರು

    ‘ಸಿಟಾಡೆಲ್: ಹನಿ ಬನಿ’ (Citadel Honey Bunny) ಟ್ರೈಲರ್‌ನಲ್ಲಿ ಸಮಂತಾ ಗೂಢಚಾರಿಣಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ಜೊತೆಗೆ ಬಾಲಿವುಡ್ ನಟ ವರುಣ್ ಧವನ್ ಕೂಡ ನಟಿಸಿದ್ದಾರೆ. ವೆಬ್ ಸರಣಿಯಲ್ಲಿ ಸಮಂತಾ ಆ್ಯಕ್ಷನ್ ಅವತಾರ ತಾಳಿದ್ದಾರೆ. ಅದ್ಧೂರಿಯಾಗಿ ‘ಹನಿ ಬನಿ’ ಚಿತ್ರೀಕರಣವನ್ನು ಮಾಡಲಾಗಿದ್ದು, ಭಾರತ ಸೇರಿದಂತೆ ವಿದೇಶಗಳಲ್ಲಿಯೂ ವೆಬ್ ಸರಣಿಯ ಶೂಟಿಂಗ್ ಮಾಡಲಾಗಿದೆ. ಆ್ಯಕ್ಷನ್ ಸೀಕ್ವೆನ್ಸ್ ಮತ್ತು ವರುಣ್ ಜೊತೆಗಿನ ಸಮಂತಾ ರೊಮ್ಯಾನ್ಸ್ ಇದ್ದು, ಸೆಂಟಿಮೆಂಟ್ ಸಹ ಇರುವುದಕ್ಕೆ ಟ್ರೈಲರ್‌ನಲ್ಲಿ ಸುಳಿವುಗಳಿವೆ.

    ಪ್ರಿಯಾಂಕಾ ಚೋಪ್ರಾ ನಟಿಸಿದ ಹಾಲಿವುಡ್ ವೆಬ್ ಸರಣಿ ‘ಸಿಟಾಡೆಲ್’ ಭಾರತೀಯ ವರ್ಷನ್‌ನಲ್ಲಿ ರಿಲೀಸ್ ಆಗುತ್ತಿದೆ. ‘ಸಿಟಾಡೆಲ್ ಹನಿ ಬನಿ’ ಟೈಟಲ್‌ನೊಂದಿಗೆ ಬಿಡುಗಡೆಯಾಗ್ತಿದೆ. ಇದಕ್ಕೆ ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ. ಸಮಂತಾ, ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ನವೆಂಬರ್ 7ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

    ಈ ಹಿಂದೆ ಸಮಂತಾ, ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಈ ವೆಬ್ ಸರಣಿ ಸೂಪರ್ ಹಿಟ್ ಆಗಿತ್ತು. ಈಗ ಬಾಲಿವುಡ್‌ನಲ್ಲಿ ‘ಸಿಟಾಡೆಲ್’ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.