Tag: CISF

  • ಲೆಹೆಂಗಾ ಬಟನ್‌ನಲ್ಲಿ ಲಕ್ಷ – ಲಕ್ಷ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದವನ ಬಂಧನ

    ಲೆಹೆಂಗಾ ಬಟನ್‌ನಲ್ಲಿ ಲಕ್ಷ – ಲಕ್ಷ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದವನ ಬಂಧನ

    ನವದೆಹಲಿ: ವಿದೇಶಿ ಕರೆನ್ಸಿಯನ್ನಯನ್ನು ಲೆಹೆಂಗಾ ಗುಂಡಿಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದವನನ್ನು ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, 41 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.

    ಬಂಧಿತ ಪ್ರಯಾಣಿಕ ಮಿಸಾಮ್ ರಾಝಾ ಎಂದು ಗುರುತಿಸಲಾಗಿದೆ. ಈತ ಸ್ಪೈಸ್‌ಜೆಟ್ ವಿಮಾನದಲ್ಲಿ ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದನು. ಸೆಂಟ್ರಲ್ ಇಂಡಸ್ಟ್ರಿಯಲ್‌ ಸೆಕ್ಯುರಿಟಿ (ಸಿಐಎಸ್‌ಎಫ್) ಹಾಗೂ ವಿಮಾನ ನಿಲ್ದಾಣದಲ್ಲಿನ ಗುಪ್ತಚರ ಅಧಿಕಾರಿಗಳು ಟರ್ಮಿನಲ್-3ರಲ್ಲಿ ನಿಂತಿದ್ದ ಈ ವ್ಯಕ್ತಿಯ ವರ್ತನೆಯನ್ನು ಕಂಡು ಅನುಮಾನಗೊಂಡಿದ್ದಾರೆ. ಬಳಿಕ ಈತನ ಚಟುವಟಿಕೆಗಳನ್ನು ಗಮನಿಸಿದ್ದಾರೆ. ಅನುಮಾನದ ಮೇಲೆ ಆತನ ಲಗೇಜ್‌ಗಳನ್ನು ಪರಿಶೀಲಿಸಲಾಯಿತು. ಇದನ್ನೂ ಓದಿ: ನಿಮಗೆ ಅಧಿಕಾರದ ಅಮಲೇರಿದೆ: ಕೇಜ್ರಿವಾಲ್‍ಗೆ ಅಣ್ಣಾ ಹಜಾರೆ ಪತ್ರ

    ಸಾಂದರ್ಭಿಕ ಚಿತ್ರ

    ಎಕ್ಸ್ರೇ ಮೂಲಕ ಲಗೇಜ್ ಬ್ಯಾಗ್ ಅನ್ನು ತಪಾಸಣೆ ನಡೆಸಿದಾಗ ದೊಡ್ಡ ಗಾತ್ರದ ಗುಂಡಿಗಳು ಪತ್ತೆಯಾಗಿದೆ. ಅದನ್ನು ಪರಿಶೀಲಿಸಿದಾಗ ಕರೆನ್ಸಿ ನೋಟುಗಳನ್ನೇ ಗುಂಡಿ ರೂಪದಲ್ಲಿಟ್ಟು ಸಾಗಿಸಲಾಗುತ್ತಿತ್ತು ಎಂಬುದು ಗೊತ್ತಾಗಿದೆ. ಬ್ಯಾಗ್‌ನಿಂದ ಹೊರತೆಗೆದಾಗ 1,85,500 ಸೌದಿ ರಿಯಾಲ್(41 ಲಕ್ಷ ರೂ.) ಲೆಹೆಂಗಾ ಬಟನ್‌ನಲ್ಲಿ ಇದ್ದದ್ದು ಕಂಡುಬಂದಿದೆ.

    ಸಿಐಎಸ್‌ಎಫ್ ಸಿಬ್ಬಂದಿ ಕಸ್ಟಮ್ಸ್ ಕಚೇರಿಗೆ ಆತನನ್ನು ಕರೆತಂದಿದ್ದು, ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ವಿಮಾನದೊಳಗೆ ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ಹೊರಹಾಕಿ – DGCA

    ವಿಮಾನದೊಳಗೆ ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ಹೊರಹಾಕಿ – DGCA

    ನವದೆಹಲಿ: ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದ ನಂತರವೂ ವಿಮಾನದೊಳಗೆ ಮಾಸ್ಕ್ ಧರಿಸಲು ನಿರಾಕರಿಸಿದ್ರೆ ಅಂತಹ ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಯು ಹೊರಹಾಕಬೇಕು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತಿಳಿಸಿದೆ.

    ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ವಿಮಾನಯಾನ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ವಿಶೇಷ ಸಂದರ್ಭದಲ್ಲಿ ಅನುಮತಿಯೊಂದಿಗೆ ಮಾತ್ರ ವಿನಾಯಿತಿ ನೀಡುವಂತೆ ಹೇಳಿದೆ. ಇದನ್ನೂ ಓದಿ: ಮಾಸ್ಕ್‌ ಧರಿಸಲ್ಲ ಎಂದ ಪ್ರಯಾಣಿಕ – ಅರ್ಧದಲ್ಲಿಯೇ ವಿಮಾನ ವಾಪಸ್‌

    ಮಾಸ್ಕ್ ಧರಿಸದವರಿಗೆ ದಂಡ ವಿಧಿಸಬೇಕು. ಮಾಸ್ಕ್ ನಿರಾಕರಿಸಿದರೆ ಅಥವಾ ಪ್ರಯಾಣದ ಮಧ್ಯದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ, ಅಂತಹವರನ್ನು ಅಶಿಸ್ತಿನ ಪ್ರಯಾಣಿಕ ಎಂದು ಪರಿಗಣಿಸುವಂತೆ ತಾಕೀತು ಮಾಡಿದೆ.

    ಸಿಐಎಸ್‌ಎಫ್ ಮತ್ತು ಇತರೆ ಪೊಲೀಸ್ ಸಿಬ್ಬಂದಿ ಮಾಸ್ಕ್ ಧರಿಸದವರಿಗೆ ಒಳಗೆ ಪ್ರವೇಶಿಸಲು ಅನುಮತಿ ನೀಡಬಾರದು. ಟರ್ಮಿನಲ್‌ನ ಪ್ರಮುಖ ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಒದಗಿಸಬೇಕು ಎಂದೂ ಸೂಚನೆ ನೀಡಿದೆ. ಇದನ್ನೂ ಓದಿ: ವಿಮಾನ ತುರ್ತು ಭೂಸ್ಪರ್ಶ – ನನ್ನ ಶಿಫ್ಟ್‌ ಮುಗಿಯಿತು ಮತ್ತೆ ಫ್ಲೈ ಮಾಡಲ್ಲ ಎಂದ ಪಾಕ್‌ ಪೈಲಟ್‌!

    ಇದೇ 3ರಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ಮೇರೆಗೆ ಡಿಜಿಸಿಎ ಸುತ್ತೋಲೆ ಹೊರಡಿಸಿದೆ. ಮಾಸ್ಕ್ ಧರಿಸದವರು, ಸ್ವಚ್ಛತೆ ಕಾಪಾಡದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗಳ್ಳಲು ಗಗನಸಖಿಯರು, ಕ್ಯಾಪ್ಟನ್‌ಗಳು, ಪೈಲಟ್‌ಗಳು, ವಿಮಾನ ನಿಲ್ದಾಣ ಹಾಗೂ ವಿಮಾನದಲ್ಲಿ ನಿಯೋಜಿಸಿರುವ ಸಿಬ್ಬಂದಿಗೆ ಡಿಜಿಸಿಎ ಪ್ರತ್ಯೇಕ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ಹೇಳಿತ್ತು.

  • ಮೆಟ್ರೋ ನಿಲ್ದಾಣದ ಗ್ರಿಲ್‍ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಿಸಿದ CISF ಸಿಬ್ಬಂದಿ!

    ಮೆಟ್ರೋ ನಿಲ್ದಾಣದ ಗ್ರಿಲ್‍ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಿಸಿದ CISF ಸಿಬ್ಬಂದಿ!

    ನವದೆಹಲಿ: ಮೆಟ್ರೋ ನಿಲ್ದಾಣದಲ್ಲಿ ಕಿರಿದಾದ ಕಟ್ಟೆಯಲ್ಲಿ 9 ವರ್ಷದ ಬಾಲಕಿ ಸಿಕ್ಕಿಕೊಂಡಿದ್ದು, ಆಕೆಯನ್ನು ಸಿಐಎಸ್‍ಎಫ್ ಸಿಬ್ಬಂದಿ ರಕ್ಷಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಭಾನುವಾರ ಸಂಜೆ ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ಗ್ರಿಲ್‍ನ ಹಿಂದೆ ಒಂಬತ್ತು ವರ್ಷದ ಬಾಲಕಿ ಸಿಕ್ಕಿಕೊಂಡಿದ್ದಳು. ಇದನ್ನು ಗಮನಿಸಿದ ಸ್ಥಳೀಯರು ಆಕೆಯ ರಕ್ಷಣೆಗಾಗಿ ಸಿಬ್ಬಂದಿಯನ್ನು ಕರೆದಿದ್ದು, ಸಿಐಎಸ್‍ಎಫ್ ಸಿಬ್ಬಂದಿ ಬಾಲಕಿಯನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಸಂಘರ್ಷ ಕೃಷಿ ರಫ್ತಿನ ಮೇಲೆ ಪರಿಣಾಮ ಬೀರುತ್ತೆ: ನಿರ್ಮಲಾ

    ನಡೆದಿದ್ದೇನು?
    ಬಾಲಕಿ ಮೆಟ್ಟಿಲುಗಳ ಸುತ್ತಲೂ ಆಟವಾಡುತ್ತಿದ್ದಳು. ಈ ವೇಳೆ ಬಾಲಕಿ ಮೆಟ್ಟಿಲುಗಳ ಮೇಲೆ ನೆಗೆಯುವ ಬದಲಿಗೆ ಪಕ್ಕಕ್ಕೆ ನೆಗೆದಿದ್ದಾಳೆ. ಪರಿಣಾಮ ಆಕೆ 15-20 ಅಡಿ ಎತ್ತರದ ಕಟ್ಟೆಯ ಮೇಲೆ ಸಿಲುಕಿಕೊಂಡಿದ್ದಾಳೆ. ಇದನ್ನು ನೋಡಿದ ಬಾಲಕಿಯ ಕುಟುಂಬ ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದೆ. ನಂತರ ಸಿಐಎಸ್‍ಎಫ್ ಕ್ವಿಕ್ ರೆಸ್ಪಾನ್ಸ್ ತಂಡವನ್ನು ಸಹಾಯಕ್ಕಾಗಿ ಕರೆ ಮಾಡಲಾಗಿದೆ.

    ಸುದ್ದಿ ತಿಳಿದ ತಕ್ಷಣ ಬಂದ ಸಿಬ್ಬಂದಿ ಬಾಲಕಿಯನ್ನು ರಕ್ಷಿಸಿದ್ದಾರೆ. ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ, ಸಿಐಎಸ್‍ಎಫ್ ಸಿಬ್ಬಂದಿ ಗ್ರಿಲ್ ನಲ್ಲಿ ಸಿಕ್ಕಿಕೊಂಡಿದ್ದ ಬಾಲಕಿಯನ್ನು ಹಿಂದಿನಿಂದ ಹೊರಬರಲು ಸಹಾಯ ಮಾಡುವುದನ್ನು ಸೆರೆಹಿಡಿಯಲಾಗಿದೆ. ಅಲ್ಲದೆ ಬಾಲಕಿಯನ್ನು ಸೂಕ್ಷ್ಮವಾಗಿ ಮೆಟ್ಟಿಲುಗಳಿಂದ ಜಾಗಕ್ಕೆ ಕರೆದುಕೊಂಡು ಹೋಗಲು ಹಗ್ಗದ ಸಹಾಯ ಪಡೆದುಕೊಳ್ಳುತ್ತಿರುವುದು ವೀಡಿಯೋದಲ್ಲಿ ಕಾಣಬಹುದು.  ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಪುಡಿ ರೌಡಿಗಳ ಹಾವಳಿ

    ವೀಡಿಯೋವನ್ನು ಸಿಐಎಸ್‍ಎಫ್ ಟ್ಟಿಟ್ಟರ್, ಫೆಬ್ರವರಿ 27ರಂದು ನಿರ್ಮಾನ್ ವಿಹಾರ್ ಮೆಟ್ರೋ ನಿಲ್ದಾಣದ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಗು ಗ್ರಿಲ್‍ನಲ್ಲಿ ಸಿಲುಕಿಕೊಂಡಿತು. ಸಿಐಎಸ್‍ಎಫ್ ಕ್ಯೂಆರ್‌ಟಿ ತಂಡದ ಸಿಟಿ/ಜಿಡಿ ನಾಯಕ್ ಕೂಡಲೇ ಸ್ಪಂದಿಸಿ ಮಗುವನ್ನು ರಕ್ಷಿಸಿದ್ದಾರೆ ಎಂದು ಬರೆದು ಟ್ವೀಟ್ ಮಾಡಿದೆ.

  • ಸಂಕ್ರಾಂತಿ ಹಬ್ಬಕ್ಕೆ ಬಂದು ಮಕ್ಕಳ ಪ್ರಾಣ ತೆಗೆದ ತಂದೆ

    ಸಂಕ್ರಾಂತಿ ಹಬ್ಬಕ್ಕೆ ಬಂದು ಮಕ್ಕಳ ಪ್ರಾಣ ತೆಗೆದ ತಂದೆ

    ಹೈದರಾಬಾದ್: ಪತ್ನಿಯೊಂದಿಗೆ ಜಗಳವಾಡಿ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು, ಸಿಐಎಸ್‍ಎಫ್ ಪೇದೆ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಬೂಬಾಬಾದ್ ಜಿಲ್ಲೆಯ ಗಾಡಿಗುಡೆಮ್ ತಾಂಡಾದಲ್ಲಿ ನಡೆದಿದೆ.

    ಭುಕ್ಯ ರಾಮ್ ಕುಮಾರ್ ಮೃತ ಸಿಐಎಸ್‍ಎಫ್ ಕಾನ್‍ಸ್ಟೆಬಲ್. ಈತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದನು. ಸಂಕ್ರಾಂತಿ ಹಬ್ಬವನ್ನು ಕುಟುಂಬ ಸಮೇತ ಆಚರಿಸಲು ಗಡಿಗುಡೆಂ ತಾಂಡಾದ ಮನೆಗೆ ಬಂದಿದ್ದನು.

    ಈ ವೇಳೆ ಫೈನಾನ್ಸ್ ಕಂಪನಿಯೊಂದರಲ್ಲಿ ಅಡಮಾನವಿಟ್ಟಿದ್ದ ಚಿನ್ನಾಭರಣಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ಹೀಗೆ ಕೆಲವು ವಿಚಾರಗಳ ಕುರಿತಾಗಿ ದಂಪತಿ  ನಡುವೆ ಮನಸ್ಥಾಪ ಇತ್ತು. ಮನನೊಂದ ರಾಮ್ ಕುಮಾರ್ ತನ್ನ ಮಕ್ಕಳನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದಾನೆ. ಇಬ್ಬರ ಪ್ರಾಣವನ್ನು ತೆಗೆದು ಮೃತ ದೇಹಗಳನ್ನು ಬಾವಿಗೆ ಎಸೆದು ಗ್ರಾಮಸ್ಥರಿಗೆ ಈ ವಿಚಾರವನ್ನು ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ಸಾಂದರ್ಭಿಕ ಚಿತ್ರ

    ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಹಬೂಬಾಬಾದ್ ಗ್ರಾಮಾಂತರ ಸಬ್ ಇನ್ಸ್‍ಪೆಕ್ಟರ್, ರಾಮ್ ಕುಮಾರ್ ಮಕ್ಕಳನ್ನು ಹತ್ತಿರದ ಕೃಷಿ ಜಮೀನಿನಲ್ಲಿ ತೆರೆದ ಬಾವಿಗೆ ಕರೆದೊಯ್ದು ನೀರಿಗೆ ಎಸೆದು ಪರಾರಿಯಾಗಿದ್ದನು. ಈ ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಾಗಿತ್ತು. ಆದರೆ ಸಂಜೆ ನಂತರ ಅನಂತರಾಮ್ ಗ್ರಾಮದ ರೈಲ್ವೆ ಹಳಿಯಲ್ಲಿ ರಾಮ್ ಕುಮಾರ್ ಶವ ಪತ್ತೆಯಾಗಿದೆ. ಈ ಕುರಿತಾಗಿ ಹೆಚ್ಚಿನ ತನಿಖೆ ಮಾಡಲಾಗುತ್ತದೆ ಎಂದಿದ್ದಾರೆ.

  • ರಿಲಯನ್ಸ್‌, ಪತಂಜಲಿ, ಟಾಟಾ, ಇನ್ಫೋಸಿಸ್‌ ಸೇರಿ 11 ಖಾಸಗಿ ಸಂಸ್ಥೆಗಳಿಗೆ ಸಿಐಎಸ್‌ಎಫ್‌ ಭದ್ರತೆ

    ರಿಲಯನ್ಸ್‌, ಪತಂಜಲಿ, ಟಾಟಾ, ಇನ್ಫೋಸಿಸ್‌ ಸೇರಿ 11 ಖಾಸಗಿ ಸಂಸ್ಥೆಗಳಿಗೆ ಸಿಐಎಸ್‌ಎಫ್‌ ಭದ್ರತೆ

    ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌, ಟಾಟಾ ಸ್ಟೀಲ್‌, ಇನ್ಫೋಸಿಸ್‌, ಪತಂಜಲಿ ಸೇರಿದಂತೆ 11 ಖಾಸಗಿ ಸಂಸ್ಥೆಗಳು ಹಾಗೂ 64 ವಿಮಾನ ನಿಲ್ದಾಣಗಳಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್‌ಎಫ್‌) ರಕ್ಷಣೆ ಒದಗಿಸುತ್ತಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ತಿಳಿಸಿದ್ದಾರೆ.

    ಬೆದರಿಕೆ ಕಾರಣ ಹಾಗೂ ನಿರ್ವಹಣೆಯ ಬದ್ಧತೆ ದೃಷ್ಟಿಯಿಂದ ಸಿಐಎಸ್‌ಎಫ್‌ ನಿಯೋಜಿಸಲಾಗುವುದು. ಪ್ರಸ್ತುತ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ವಲಯಕ್ಕೆ ಸಿಐಎಸ್‌ಎಫ್‌ ನಿಯೋಜಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಕೇಳಿಬಂದ ಪ್ರಶ್ನೆಯೊಂದಕ್ಕೆ ರಾಯ್‌ ಉತ್ತರಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ಲಸಿಕೆ ಪಡೆದ ಪ್ರಮಾಣ ಪತ್ರ ಇಲ್ಲದಿದ್ರೆ ನೌಕರರಿಗೆ ಸಂಬಳ ನೀಡಲ್ಲ – ಪಂಜಾಬ್‌ ಸರ್ಕಾರ

    ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಇಂಡಸ್ಟ್ರೀಸ್‌, ಬೆಂಗಳೂರು, ಮೈಸೂರು ಮತ್ತು ಪುಣೆಯಲ್ಲಿರುವ ಇನ್ಫೋಸಿಸ್‌ ಸಂಸ್ಥೆ, ಹರಿದ್ವಾರದ ಪತಂಜಲಿ ಆಹಾರ ಮತ್ತು ಗಿಡಮೂಲಿಕೆ ಉದ್ಯಾನ, ಮುಂಬೈನ ರಿಲಯನ್ಸ್‌ ಕೋ ಆಪರೇಟಿವ್‌ ಪಾರ್ಕ್‌ ಕ್ಯಾಂಪಸ್‌, ಜಾಮ್‌ನಗರದ ನಾಯರ್‌ ಎನರ್ಜಿ ಲಿಮಿಟೆಡ್‌, ಹೈದರಾಬಾದ್‌ ಭಾರತ್‌ ಬಯೋಟೆಕ್‌ ಅಂತಾರಾಷ್ಟ್ರೀಯ ಲಿಮಿಟೆಡ್‌, ಹೋಟೆಲ್‌ ಟರ್ಮಿನಲ್‌ 1ಸಿಗೆ ಸಿಐಎಸ್‌ಎಫ್‌ ಭದ್ರತೆ ಒದಗಿಸಲಾಗಿದೆ.

    ಸಿಐಎಸ್‌ಎಫ್‌ ಕಾಯಿದೆ-1968ರ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿ ಉದ್ಯಮ, ಖಾಸಗಿ ಕೈಗಾರಿಕಾ ಉದ್ಯಮ, ನಿಯಂತ್ರಿತ ಕೈಗಾರಿಕಾ ಉದ್ಯಮಗಳ ರಕ್ಷಣೆ ಮತ್ತು ಭದ್ರತೆಗಾಗಿ ಸ್ಥಾಪಿಸಲಾಗಿದೆ ಎಂದು ರಾಯ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಳಯ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ – ದೇಶದ ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

  • ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಖಾನ್ ತಡೆದ ಅಧಿಕಾರಿಗೆ ಇನಾಮು

    ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಖಾನ್ ತಡೆದ ಅಧಿಕಾರಿಗೆ ಇನಾಮು

    ಮುಂಬೈ: ವಿಮಾನನಿಲ್ದಾಣದ ಪ್ರವೇಶ ದ್ವಾರದ ಬಳಿಕ ಸಲ್ಮಾನ್ ಖಾನ್ ಅವರನ್ನ ತಡೆದು ಚೆಕ್ಕಿಂಗ್ ಮಾಡಿದ್ದ ಎಎಸ್‍ಐಗೆ ಸಿಐಎಸ್‍ಎಫ್ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

    ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಟೈಗರ್-3 ಸಿನಿಮಾ ಚಿತ್ರೀಕರಣಕ್ಕಾಗಿ ರಷ್ಯಾಗೆ ಹೊರಟಿದ್ದರು. ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿ ಸಲ್ಮಾನ್ ಖಾನ್ ಅವರನ್ನ ಎಎಸ್‍ಐ ಸೋಮನಾಥ್ ಮೊಹಂತಿ ತಡೆದು, ಭದ್ರತಾ ಪರಿಶೀಲನೆ ನಡೆಸಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿತ್ತು.

    ಈ ಚರ್ಚೆಗಳ ನಡುವೆ ಎಎಸ್‍ಐ ಸೋಮನಾಥ್ ಮೊಹಂತಿ ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿ ಫೇಮಸ್ ಆದ್ರು. ಮತ್ತೊಂದು ಕಡೆ ಸಲ್ಮಾನ್ ಖಾನ್ ಅವರನ್ನ ತಡೆದ ಪರಿಣಾಮ ಸೋಮನಾಥ್ ಸಂಕಷ್ಟದಲ್ಲಿ ಸಿಲುಕಿದ್ದು, ಅವರ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಆರೋಪಗಳು ಕೇಳಿ ಬಂದಿವೆ ಎಂಬ ಬರಹಗಳಡಿ ಫೋಟೋಗಳು ಹರಿದಾಡಿದ್ದವು.

    ಸಿಐಎಸ್‍ಎಫ್ ಸ್ಪಷ್ಟನೆ:
    ಈ ಬೆಳವಣಿಗೆ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ವೀಡಿಯೋ ಕುರಿತು ವೈರಲ್ ಆಗಿರುವ ಬರಹಗಳು ಸತ್ಯವಲ್ಲ. ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರಿಂದ ಅವಾರ್ಡ್ ನೀಡಲಾಗಿದೆ ಎಂದು ಹೇಳಿದೆ. ಇನ್ನೂ ಸೋಮನಾಥ್ ಮೊಹಂತಿ ಅವರನ್ನ ರಿಯಲ್ ಟೈಗರ್ ಎಂದು ನೆಟ್ಟಿಗರು ಹಾಡಿ ಹೊಗಳಿದ್ದಾರೆ.

    ಟೈಗರ್-3 ಚಿತ್ರೀಕರಣ ರಷ್ಯಾದಲ್ಲಿ ನಡೆಯುತ್ತಿದ್ದು, ಸಲ್ಮಾನ್‍ಗೆ ಕತ್ರಿನಾ ಕೈಫ್ ಜೊತೆಯಾಗಿದ್ದಾರೆ. ಇಮ್ರಾನ್ ಹಶ್ಮಿ ಮೊದಲ ಬಾರಿಗೆ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಟೈಗರ್-3 ಹೊರತುಪಡಿಸಿ ಜಾಕ್ವೇಲಿನ್ ಫರ್ನಾಂಡೀಸ್ ಜೊತೆ ಕಿಕ್-2, ಪೂಜಾ ಹೆಗ್ಡೆಯೊಂದಿಗೆ ಕಭೀ ಈದ್, ಕಭೀ ದಿವಾಲಿ ಮತ್ತು ಆಯುಷ್ ಶರ್ಮಾ ಜೊತೆಯಲ್ಲಿ ‘ಅಂತಿಮ್” ದಿ ಫೈನಲ್ ಟ್ರುಥ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಈರುಳ್ಳಿ ಉಪ್ಪಿನಕಾಯಿ ಹಾಕೋ ವೀಡಿಯೋ ವೈರಲ್

  • ಯಾವುದೇ ವಾರೆಂಟ್ ಇಲ್ಲದೆ ಹುಡುಕಿ, ಅರೆಸ್ಟ್ ಮಾಡಿ- ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಯುಪಿ ಸರ್ಕಾರ

    ಯಾವುದೇ ವಾರೆಂಟ್ ಇಲ್ಲದೆ ಹುಡುಕಿ, ಅರೆಸ್ಟ್ ಮಾಡಿ- ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಯುಪಿ ಸರ್ಕಾರ

    – ಮ್ಯಾಜಿಸ್ಟ್ರೇಟ್ ಅನುಮತಿ ಸಹ ಬೇಕಿಲ್ಲ

    ಲಕ್ನೋ: ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚು ನಡೆಯುವುದು ತಿಳಿದೇ ಇದೆ. ಹೀಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಸುವ್ಯವಸ್ಥೆಗೆ ಮೇಜರ್ ಸರ್ಜರಿ ಮಾಡಿದ್ದು, ವಿಶೇಷ ಪೊಲೀಸ್ ಪಡೆಯನ್ನು ನಿರ್ಮಿಸುತ್ತಿದೆ. ಈ ಪಡೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದ್ದು, ಯಾವುದೇ ವಾರೆಂಟ್ ಇಲ್ಲದೆ ಯಾರ ಮನೆಗೆ ಬೇಕಾದರೂ ದಾಳಿ ನಡೆಸಿ ಸರ್ಚ್ ಮಾಡಬಹುದು ಹಾಗೂ ಆರೋಪಿಗಳನ್ನು ಮುಲಾಜಿಲ್ಲದೆ ಬಂಧಿಸಬಹುದಾಗಿದೆ.

    ಈ ಕುರಿತು ಉತ್ತರ ಪ್ರದೇಶ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದ್ದು, ಉತ್ತರ ಪ್ರದೇಶದಲ್ಲಿ ವಿಶೇಷ ಪೊಲೀಸ್ ಪಡೆಯನ್ನು ಯೋಜಿಸಲಾಗುತ್ತಿದೆ. ಇದು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(ಸಿಐಎಸ್‍ಎಫ್)ನ ಅಧಿಕಾರವನ್ನು ಹೋಲುತ್ತದೆ. ಈ ಪೊಲೀಸ್ ಪಡೆ ಯಾರ ಅನುಮಾನಾಸ್ಪದವಾಗಿ ಕಂಡು ಬಂದ ಯಾವುದೇ ಮನೆ ಮೇಲೆ ಯಾವುದೇ ವಾರೆಂಟ್ ಇಲ್ಲದೆ ದಾಳಿ ಮಾಡಬಹುದು. ಅಲ್ಲದೆ ವಾರೆಂಟ್ ಇಲ್ಲದೆ ಬಂಧಿಸಬಹುದು ಎಂದು ತಿಳಿಸಿದೆ.

    ಈ ತಂಡಕ್ಕೆ ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆ(ಯುಪಿಎಸ್‍ಎಸ್‍ಎಫ್) ಎಂದು ಹೆಸರಿಡಲಾಗಿದ್ದು, ನ್ಯಾಯಾಲಯಗಳು, ವಿಮಾನ ನಿಲ್ದಾಣಗಳು, ಆಡಳಿತ ಕಟ್ಟಡ, ಮಹಾನಗರ, ಬ್ಯಾಂಕ್ ಇತರೆ ಸರ್ಕಾರಿ ಕಚೇರಿಗಳನ್ನು ರಕ್ಷಿಸುವ ಹೊಣೆಯನ್ನು ಈ ಪಡೆಗೆ ನೀಡಲಾಗಿದೆ.

    ಉತ್ತರ ಪ್ರದೇಶದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ಟ್ವೀಟ್ ಮಾಡಿದ್ದು, ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕನಸಿನ ಯೋಜನೆಯಾಗಿದೆ. ಆರಂಭಿಕ ಹಂತವಾಗಿ ಎಂಟು ಬೆಟಾಲಿಯನ್‍ಗಳನ್ನು ನಿಯೋಜಿಸಲಾಗಿದ್ದು, ಇದಕ್ಕಾಗಿ 1,747 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಆರಂಭಿಕ ಹಂತದ ಮೂಲ ಸೌಲಭ್ಯಗಳನ್ನು ಯುಪಿ ಪೊಲೀಸ್ ವಿಶೇಷ ಘಟಕವಾಗಿರುವ ಪಿಎಸಿ(ಪ್ರೊವಿನ್ಶಿಯಲ್ ಆರ್ಮಡ್ ಕನ್‍ಸ್ಟಾಬುಲರಿ)ಯಿಂದ ಬಳಸಿಕೊಳ್ಳಬಹುದಾಗಿದೆ.

    ಈ ಪೊಲೀಸ್ ಪಡೆಯ ಯಾವುದೇ ಸದಸ್ಯ ಯಾವುದೇ ವಾರೆಂಟ್, ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯದೇ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದಾಗಿದೆ. ಈ ವಿಭಾಗಕ್ಕಾಗಿ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

    ಸರ್ಕಾರದ ಈ ನಿರ್ಧಾರದ ಕುರಿತು ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರಿಗೆ ಬಂಧಿಸುವ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದು ದುರ್ಬಳಕೆಯಾಗುವ ಸಂಭವವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಯುಪಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕಠಿಣ ಕಾನೂನು ಅಗತ್ಯ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ

    ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ

    ಮಂಗಳೂರು: ನಗರದ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದವಾದ ಲ್ಯಾಪ್‍ಟಾಪ್ ಬ್ಯಾಗ್ ಪತ್ತೆಯಾಗಿತ್ತು. ಅನುಮಾನ ಹಿನ್ನೆಲೆ ಬಾಂಬ್ ಸ್ಕ್ವಾಡ್ ತಂಡದಿಂದ ತಪಾಸಣೆ ನಡೆಸಿದಾಗ ಸಜೀವ ಬಾಂಬ್ ಪತ್ತೆಯಾಗಿದೆ.

    ಬಾಂಬ್ ಪತ್ತೆಯಾದ ಕೂಡಲೇ ಎಚ್ಚೆತ್ತ ಸಿಬ್ಬಂದಿ, ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ. ಬಾಂಬ್ ಇರಿಸಲಾಗಿದ್ದ ಬ್ಯಾಗ್ ನ್ನು ನಿಲ್ದಾಣದ ಆವರಣದ ಹೊರಗೆ ತರಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಿಐಎಸ್‍ಎಫ್ ಭದ್ರತಾ ಪಡೆ ನಿಲ್ದಾಣದ ಸುತ್ತಲೂ ಬಿಗಿ ಬಂದೋಬಸ್ತ್ ಕೈಗೊಂಡಿದೆ.

    ಆಟೋದಲ್ಲಿ ಬಂದ ಅಪರಿಚಿತ ವ್ಯಕ್ತಿ ಬ್ಯಾಗ್ ನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳದ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಸದ್ಯ ಸಜೀವ ಬಾಂಬ್ ನ್ನು ಪ್ರೂಫ್ ವೆಹಿಕಲ್ ನಲ್ಲಿ ಇರಿಸಲಾಗಿದೆ.

  • 50 ಸಾವಿರ ರೂ.ಗಳಿದ್ದ ಬ್ಯಾಗ್ ಮಾಲೀಕರಿಗೆ ಮರಳಿಸಿದ ಮೆಟ್ರೋ ಸಿಬ್ಬಂದಿ

    50 ಸಾವಿರ ರೂ.ಗಳಿದ್ದ ಬ್ಯಾಗ್ ಮಾಲೀಕರಿಗೆ ಮರಳಿಸಿದ ಮೆಟ್ರೋ ಸಿಬ್ಬಂದಿ

    – ಸಿಐಎಸ್‍ಎಫ್ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ ವೃದ್ಧೆ

    ನವದೆಹಲಿ: 50 ಸಾವಿರ ರೂ. ಇರುವ ಬ್ಯಾಗ್ ಕಳೆದುಕೊಂಡ ಮಾಲೀಕರಿಗೆ ಮರಳಿ ತಲುಪಿಸುವ ಮೂಲಕ ಸಿಐಎಸ್‍ಎಫ್ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

    ನವದೆಹಲಿಯ ಗ್ರೀನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಭದ್ರತೆ ಪರಿಶೀಲನೆ ವೇಳೆ ಹಿರಿಯ ನಾಗರಿಕರಾದ ಕಮಲ ಅವರು ಅಲ್ಲಿಯೇ ಬ್ಯಾಗ್ ಬಿಟ್ಟು ತೆರಳಿದ್ದರು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಬ್ಯಾಗ್‍ನ್ನು ಸುರಕ್ಷಿತ ಸ್ಥಳದಲ್ಲಿಟ್ಟು ನಂತರ ಮರಳಿ ನೀಡಿದ್ದಾರೆ. ಬ್ಯಾಗನ್ನು ಸುರಕ್ಷಿತವಾಗಿಟ್ಟು ಮರಳಿ ನೀಡಿದ್ದಕ್ಕೆ ಕಮಲ ಅವರು ಭದ್ರತಾ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

    ಭದ್ರತೆಗಾಗಿ ಬ್ಯಾಗ್ ಪರಿಶೀಲಿಸಿದ ನಂತರ ಸಿಬ್ಬಂದಿ ಬ್ಯಾಗನ್ನು ನೀಡಿದ್ದರು. ಆದರೆ ಮಾಲೀಕರು ಇದನ್ನು ಅಲ್ಲಿಯೇ ಬಿಟ್ಟು ತೆರಳಿದ್ದರು. ರಾತ್ರಿ 10.25ರ ಹೊತ್ತಿಗೆ ಮಾಲೀಕರು ಬ್ಯಾಗ್ ಬಿಟ್ಟು ಹೋಗಿರುವ ಕುರಿತು ತಿಳಿದಿದ್ದು, ಹಿಂದಿನ ದಿನ ಸಿಐಎಸ್‍ಎಫ್ ಸಿಬ್ಬಂದಿ ಬ್ಯಾಗ್ ನ್ನು ಸುರಕ್ಷಿತವಾಗಿ ಇಟ್ಟಿದ್ದರು. ಸಿಬ್ಬಂದಿ ಠಾಣೆ ನಿಯಂತ್ರಕರಿಗೆ ಬ್ಯಾಗ್ ನ್ನು ಹಸ್ತಾಂತರಿಸಿದ್ದಾರೆ. ಆಗ ಬ್ಯಾಗ್ ತೆರೆದು ನೋಡಿದ್ದು, 58,820 ರೂ. ಇರುವುದು ಪತ್ತೆಯಾಗಿತ್ತು. ಅಲ್ಲದೆ ಬ್ಯಾಗಿನಲ್ಲಿ ಹಲವು ದಾಖಲೆಗಳು ಸಹ ಇದ್ದವು. ಬ್ಯಾಗಿನಲ್ಲಿ ಸಂಪರ್ಕ ಸಂಖ್ಯೆ ಇದ್ದಿದ್ದರಿಂದ ಸಿಬ್ಬಂದಿ ಕಮಲ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ನಂತರ ಕಮಲ ಅವರು ಗ್ರೀನ್ ಪಾರ್ಕ್ ಮೆಟ್ರೋಗೆ ಆಗಮಿಸಿ, ಸಿಬ್ಬಂದಿಯಿಂದ ಬ್ಯಾಗ್ ಪಡೆದಿದ್ದಾರೆ. ಸಿಐಎಸ್‍ಎಫ್ ಸಿಬ್ಬಂದಿಯ ಪ್ರಾಮಾಣಿಕತೆಗೆ ಕಮಲಾ ಅವರು ಧನ್ಯವಾದ ಅರ್ಪಿಸಿದ್ದಾರೆ.

  • ‘ಶ್ವಾನವಾಗಿ ಹುಟ್ಟಿ, ಯೋಧನಾಗಿ ನಿವೃತ್ತಿ’- ಸಿಐಎಸ್‍ಎಫ್ ಶ್ವಾನಗಳಿಗೆ ವಿದಾಯ ಕೂಟ

    ‘ಶ್ವಾನವಾಗಿ ಹುಟ್ಟಿ, ಯೋಧನಾಗಿ ನಿವೃತ್ತಿ’- ಸಿಐಎಸ್‍ಎಫ್ ಶ್ವಾನಗಳಿಗೆ ವಿದಾಯ ಕೂಟ

    ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ(ಸಿಐಎಸ್‍ಎಫ್) ಸೇವೆ ಸಲ್ಲಿಸಿದ್ದ 7 ಶ್ವಾನಗಳು ಮಂಗಳವಾರ ನಿವೃತ್ತಿ ಪಡೆದಿದೆ. ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಈ ಶ್ವಾನಗಳಿಗೆ ಸೇನಾ ಗೌರವದೊಂದಿಗೆ ವಿದಾಯ ನೀಡಲಾಯ್ತು.

    ಮಂಗಳವಾರದಂದು ನಡೆದ ವಿದಾಯ ಕೂಟ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ನಿವೃತ್ತಿಯಾದ ಯೋಧನಿಗೆ ಗೌರವ ಸಲ್ಲಿಸಿ ಬೀಳ್ಕೊಡುವ ರೀತಿ ಶ್ವಾನಗಳಿಗೂ ಗೌರವದಿಂದ ನಿವೃತ್ತಿ ನೀಡಲಾಯ್ತು. ಮಂಗಳವಾರ ಈ ಶ್ವಾನಗಳ ಸೇವೆಯ ಕೊನೆಯ ದಿನವಾದರಿಂದ ಅವುಗಳಿಗೆ ಸೆಲ್ಯೂಟ್ ಹೊಡೆದು, ಸೇನಾ ಗೌರವದೊಂದಿಗೆ ಸೈನಿಕನಂತೆ ಬೀಳ್ಕೊಡಲಾಯ್ತು. ಇದನ್ನೂ ಓದಿ:ಯೋಧರಿಗಾಗಿ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ ದೇಶಭಕ್ತ

    ಸಿಐಎಸ್‍ಎಫ್ ತನ್ನ ತಂಡದಲ್ಲಿ ಸೇವೆ ಸಲ್ಲಿಸಿದ್ದ ಶ್ವಾನಗಳ ನಿವೃತ್ತಿ ಕುರಿತಾಗಿ ಟ್ವೀಟ್ ಮಾಡಿ, ‘ಶ್ವಾನವಾಗಿ ಹುಟ್ಟಿ, ಯೋಧನಾಗಿ ನಿವೃತ್ತಿ’ ಎಂದು ಬರೆದು, ಕಾರ್ಯಕ್ರಮದ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.

    ಕೆ9 ಹೀರೋಗಳಿಗೆ ವಿದಾಯ ನೀಡಿದ್ದೇವೆ. ಜೆಸ್ಸಿ(ಜಿಎಸ್‍ಡಿ/ಎಫ್), ಲಕ್ಕಿ(ಲ್ಯಾಬ್/ಎಫ್) ಮತ್ತು ಲವ್ಲಿ(ಲ್ಯಾಬ್/ಎಫ್) ಅಧಿಕೃತವಾಗಿ ನಿವೃತ್ತಿ ಹೊಂದಿವೆ. ದೆಹಲಿ ಮೆಟ್ರೋ ವಿಭಾಗದಲ್ಲಿ ಈ ಶ್ವಾಗಳ ನಿಸ್ವಾರ್ಥ ಸೇವೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇವುಗಳನ್ನು ನಾವು ನೆನಪಿಸಿಕೊಳ್ಳುತ್ತಿರುತ್ತೇವೆ ಎಂದು ಸಿಐಎಸ್‍ಎಫ್ ಟ್ವೀಟ್ ಮಾಡಿದೆ.

    ನಿವೃತ್ತಗೊಂಡ ಶ್ವಾನಗಳು ದೆಹಲಿ ಮೆಟ್ರೋ ವಿಭಾಗದ ಸಿಐಎಸ್‍ಎಫ್ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಹಾಗೆಯೇ ಪ್ಯಾರಾ ಮಿಲಿಟರಿ ಪಡೆಯಲ್ಲೂ ಸೇವಿಸಲ್ಲಿಸಿದ್ದವು. ಸತತ 8 ವರ್ಷಗಳ ಕಾಲ ಈ ಶ್ವಾನಗಳು ದೇಶಕ್ಕಾಗಿ ಸೇವೆ ಸಲ್ಲಿಸಿವೆ. ಹೀಗಾಗಿ ಸಮಾರಂಭದಲ್ಲಿ ಶ್ವಾನಗಳಿಗೆ ಸ್ಮರಣಿಕೆ, ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಪ್ರೀತಿಯಿಂದ ಗೌರವಿಸಲಾಯಿತು.

    ಅದರಲ್ಲೂ ಇದೇ ಮೊದಲ ಬಾರಿಗೆ ಸೇನಾ ವಿಭಾಗವೊಂದು ಶ್ವಾನಗಳ ನಿವೃತ್ತಿಗಾಗಿ ಇಂತಹ ವಿಶೇಷ ಹಾಗೂ ಅದ್ಧೂರಿ ವಿದಾಯ ಕೂಟ ಕಾರ್ಯಕ್ರಮ ಏರ್ಪಡಿಸಿದ್ದು ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಕಾರ್ಯಕ್ರಮದ ನಂತರ ಈ ಶ್ವಾನಗಳನ್ನು ಎನ್‍ಜಿಒ ಒಂದಕ್ಕೆ ಒಪ್ಪಿಸಲಾಯ್ತು.