Tag: CISF jawan

  • ಉಗ್ರರ ದಾಳಿಯಲ್ಲಿ ಮಾಗಡಿಯ ಯೋಧ ಹುತಾತ್ಮ

    ಉಗ್ರರ ದಾಳಿಯಲ್ಲಿ ಮಾಗಡಿಯ ಯೋಧ ಹುತಾತ್ಮ

    ರಾಮನಗರ: ಜಮ್ಮುವಿನ ಉಧಂಪುರ ಕ್ಯಾಂಪ್ ಬಳಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಮಾಗಡಿಯ ವೀರ ಯೋಧ ಹುತಾತ್ಮರಾಗಿದ್ದಾರೆ.

    ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯ ಪಾಪಣ್ಣ ಅವರ ಪುತ್ರ ವೆಂಕಟ ನರಸಿಂಹಮೂರ್ತಿ(29) ಉಗ್ರರ ಗುಂಡಿಗೆ ಹುತಾತ್ಮರಾದ ವೀರಯೋಧ. ಸಿಐಎಸ್‍ಎಫ್‍ನಲ್ಲಿ ವೆಂಕಟ ನರಸಿಂಹಮೂರ್ತಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಮೃತದೇಹವನ್ನು ಜಮ್ಮುವಿನ ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಕುಟುಂಬಗಳಿಂದ ಮಾಹಿತಿ ಲಭ್ಯವಾಗಿದೆ.

    ಮಾಗಡಿ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ರವಾನೆಯಾಗಿದ್ದು, ಹೆಚ್ಚಿನ ಮಾಹಿತಿ ಬರಬೇಕಾಗಿದೆ. ಈಗಾಗಲೇ ಪೊಲೀಸರು ವೆಂಕಟ ನರಸಿಂಹಮೂರ್ತಿ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಲಾಗಿದೆ. ವೀರ ಯೋಧ ಸಾವನ್ನಪ್ಪಿದ ವಿಚಾರ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಯೋಧ ವೆಂಕಟ ನರಸಿಂಹಮೂರ್ತಿ ಅವರ ಪಾರ್ಥೀವ ಶರೀರ ಯಾವಾಗ ಮಾಗಡಿಗೆ ತಲುಪಲಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ರಜೆ ಮೇಲೆ ಮಾಗಡಿಗೆ ಬಂದಿದ್ದ ಯೋಧ ವೆಂಕಟ ನರಸಿಂಹಮೂರ್ತಿ ಮರಳಿ ಜಮ್ಮು-ಕಾಶ್ಮೀರ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು ಎನ್ನಲಾಗಿದೆ.

  • ಓರ್ವ ಯೋಧ ಸೇರಿ ಐವರನ್ನು ಹತ್ಯೆಗೈದ ಮಾವೋವಾದಿಗಳು

    ಓರ್ವ ಯೋಧ ಸೇರಿ ಐವರನ್ನು ಹತ್ಯೆಗೈದ ಮಾವೋವಾದಿಗಳು

    ರಾಯಪುರ್: ಓರ್ವ ಯೋಧ ಸೇರಿ ಐವರನ್ನು ಮಾವೋವಾದಿಗಳು ಹತ್ಯೆ ಮಾಡಿರುವ ಘಟನೆ ಛತ್ತೀಸಗಢ ರಾಜ್ಯದ ದಾಂತೇವಾಡ ಜಿಲ್ಲೆಯಲ್ಲಿ ನಡೆದಿದೆ.

    ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಸಿಎಫ್) ಸಿಬ್ಬಂದಿ ಅಡುಗೆ ಸಾಮಾಗ್ರಿಗಳನ್ನು ಖರೀದಿಸಿಕೊಂಡು ಕ್ಯಾಂಪ್‍ಗೆ ಮರಳುತ್ತಿದ್ದರು. ಈ ವೇಳೆ ಬಚೇಲಿ ಗುಡ್ಡಗಾಡು ಪ್ರದೇಶದಲ್ಲಿ ಬಸ್‍ನಲ್ಲಿದ್ದ ಬಾಂಬ್ ಸ್ಫೋಟಗೊಂಡು ಓರ್ವ ಸಿಐಸಿಎಫ್ ಯೋಧ ಹಾಗೂ ಚಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

    ಛತ್ತೀಸಗಢ್ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಜಗ್ದಾಲ್‍ಪುರ್ ಗೆ ಭೇಟಿ ನೀಡುತ್ತಿದ್ದರು. ಮಾವೋವಾದಿಗಳು ಇಂದು ದಾಳಿ ಮಾಡಿದ ಪ್ರದೇಶದಿಂದ ಜಗ್ದಾಲ್‍ಪುರ್ 100 ಕಿ.ಮೀ. ಅಂತರದಲ್ಲಿದೆ. ಹೀಗಾಗಿ ಈ ಘಟನೆಯಿಂದ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ವಿಧಾನಸಭಾ ಚುನಾವಣೆ ಮುಂದಿನ ವಾರದಲ್ಲಿ ಪ್ರಾರಂಭವಾಗಲಿದೆ. ಮೊದಲ ಹಂತದ ಚುನಾವಣೆ ನವೆಂಬರ್ 12ರಂದು ಹಾಗೂ ಎರಡನೇ ಹಂತದ ಚುನಾವಣೆ 20ರಂದು ನಡೆಯಲಿದೆ. ಹೀಗಿರುವಾಗ ಮಾವೋವಾದಿಗಳು ದಾಳಿ ಮಾಡುತ್ತಿದ್ದು, ಸಾಮಾನ್ಯ ಜನರು ಸೇರಿದಂತೆ ರಕ್ಷಣಾ ಸಿಬ್ಬಂದಿ ಹತ್ಯೆಯಾಗುತ್ತಿದ್ದಾರೆ. ಕಳೆದ 8 ದಿನಗಳ ಹಿಂದೆಯಷ್ಟೇ ಛತ್ತೀಸಗಢ್‍ದ ಇಬ್ಬರು ಪೊಲೀಸರು ಹಾಗೂ ದೂರದರ್ಶನದ ಕ್ಯಾಮೆರಾಮನ್ ಮಾವೋವಾದಿಗಳ ಗುಂಡಿಗೆ ಬಲಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv