Tag: circus

  • ಅಪ್ಪನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರೂಪೇಶ್ ಶೆಟ್ಟಿ

    ಅಪ್ಪನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರೂಪೇಶ್ ಶೆಟ್ಟಿ

    ಬಿಗ್ ಬಾಸ್ ವಿನ್ನರ್ (Bigg Boss Kannada) ರೂಪೇಶ್ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಅಪ್ಪನ ಜೊತೆ ಸಂಭ್ರಮದಿಂದ ಸೆಲೆಬ್ರೇಟ್‌ ಮಾಡಿದ್ದಾರೆ. ಆಗಸ್ಟ್‌ 14ರಂದು ರೂಪೇಶ್‌ ಬರ್ತ್‌ಡೇಯಾಗಿದ್ದು, ಅಂದು ಸರ್ಕಸ್‌ ಚಿತ್ರದ ಪ್ರಚಾರಕ್ಕಾಗಿ ವಿದೇಶದಲ್ಲಿದ್ದರು. ಇದೀಗ ಮಂಗಳೂರಿಗೆ ಬರುತ್ತಿದ್ದಂತೆ ಅಪ್ಪನ ಜೊತೆ ಹುಟ್ಟುಹಬ್ಬವನ್ನ ಖುಷಿಯಿಂದ ಆಚರಿಸಿಕೊಂಡಿದ್ದಾರೆ.

    ರೂಪೇಶ್ ಶೆಟ್ಟಿ (Roopesh Shetty) ಅವರಿಗೆ ಈ ವರ್ಷ ತುಂಬಾನೇ ಸ್ಪೆಷಲ್ ಬಿಗ್ ಬಾಸ್ ವಿನ್ನರ್ ಪಟ್ಟದ ಜೊತೆ ಸರ್ಕಸ್ ಸಿನಿಮಾ ಕೂಡ ಸಕ್ಸಸ್ ಕಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಾಣ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿದ್ದ ಕಾರಣ, ತಮ್ಮ ಹುಟ್ಟುಹಬ್ಬವನ್ನ(Birthday)  ಅವರು ಸೆಲೆಬ್ರೇಟ್ ಮಾಡಲು ಆಗಿರಲಿಲ್ಲ. ಇದೀಗ ಅಪ್ಪನ ಜೊತೆ ಕೇಕ್ ಕತ್ತರಿಸುವ ಮೂಲಕ ಬರ್ತ್‌ಡೇ ಖುಷಿಯನ್ನ ಸೆಲೆಬ್ರೇಟ್ ಮಾಡಿದ್ದಾರೆ. ಅಪ್ಪನ ಜೊತೆಗಿನ ಸಂಭ್ರಮ ಫೋಟೋಗಳನ್ನ ನಟ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:Bigg Boss Kannada 10: ಬಿಗ್‌ ಬಾಸ್‌ ಶೋನಲ್ಲಿ ಯಾರೆಲ್ಲಾ ಇದ್ದಾರೆ?

    ಮಂಗಳೂರು, ಉಡುಪಿ ಭಾಗಗಳಲ್ಲಿ ‘ಸರ್ಕಸ್’ (Circus) ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಅನೌನ್ಸ್ ಮಾಡಿದ್ದರು. ಅಧಿಪತ್ರ ಚಿತ್ರದ ಭಿನ್ನ ಕಥೆಯನ್ನ ಹೇಳಲು ರೂಪೇಶ್ ಶೆಟ್ಟಿ ಸಜ್ಜಾಗಿದ್ದಾರೆ.

    ಡಾರ್ಲಿಂಗ್ ಕೃಷ್ಣ- ರಚಿತಾ ರಾಮ್ (Rachita Ram) ನಟನೆಯ ‘ಲವ್ ಮಿ ಔರ್ ಹೇಟ್ ಮಿ’ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಮಾಹಿತಿ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಣ್ವೀರ್ ಸಿಂಗ್, ದೀಪಿಕಾ ಮುಂಬೈ ಬಿಡಲು ‘ಸರ್ಕಸ್’ ಸಿನಿಮಾ ಸೋಲು ಕಾರಣ: ಹೀಗೊಂದು ಚರ್ಚೆ

    ರಣ್ವೀರ್ ಸಿಂಗ್, ದೀಪಿಕಾ ಮುಂಬೈ ಬಿಡಲು ‘ಸರ್ಕಸ್’ ಸಿನಿಮಾ ಸೋಲು ಕಾರಣ: ಹೀಗೊಂದು ಚರ್ಚೆ

    ಬಾಲಿವುಡ್ ಖ್ಯಾತ ನಟ ರಣ್ವೀರ್ ಸಿಂಗ್ (Ranveer Singh) ನಟನೆಯ ‘ಸರ್ಕಸ್’ (Circus) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚಿತ್ರತಂಡ ಅಂದುಕೊಂಡಂತೆ ಸಿನಿಮಾ ಗೆಲ್ಲಲಿಲ್ಲ ಎನ್ನುವ ಮಾತು ಸ್ವತಃ ಬಾಲಿವುಡ್ ಅಂಗಳದಿಂದಲೇ ಕೇಳಿ ಬರುತ್ತಿದೆ. ಈ ಸೋಲನ್ನು ಅರಗಿಸಿಕೊಳ್ಳಲಾಗದೇ ನಟ ರಣ್ವೀರ್ ತಮ್ಮ ಪತ್ನಿ ದೀಪಿಕಾ ಪಡುಕೋಣೆ ಜೊತೆ ಮುಂಬೈ ತೊರೆದಿದ್ದಾರೆ ಎನ್ನುವುದು ಸದ್ಯಕ್ಕಿರುವ ಸುದ್ದಿ.

    ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (Deepika Padukone) ದೋಣಿ ಹತ್ತಿರ ಹೊರಟಿರುವ ಫೋಟೋಗಳು ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದ್ದು, ಸೋಲಿನ ಕಾರಣದಿಂದಾಗಿಯೇ ಪತ್ನಿಯೊಂದಿಗೆ ರಣವೀರ್ ಮುಂಬೈ ತೊರೆದಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಸರ್ಕಸ್ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಹೊಂದಲಾಗಿತ್ತು. ಸೋಲರಿಯದ ಸರದಾರ ಎಂದೇ ಖ್ಯಾತರಾಗಿರುವ ರೋಹಿತ್ ಶೆಟ್ಟಿ ನಿರ್ದೇಶನದ ಸಿನಿಮಾವಾಗಿದ್ದು, ಈ ಸಿನಿಮಾ ಕೂಡ ಭರ್ಜರಿ ಗೆಲ್ಲುತ್ತದೆ ಎನ್ನುವ ಮಾತಿತ್ತು. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ

    ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿರುವ ಕಾರಣದಿಂದಾಗಿಯೇ ರೋಹಿತ್ ಶೆಟ್ಟಿ (Rohit Shetty) , ಬಾಲಿವುಡ್ ತೆಗಳುವವರು ವಿರುದ್ಧ ಗುಡುಗಿದ್ದರು. ಬಾಲಿವುಡ್ ಗೆ ಒಂದು ವರ್ಷ ಹಿನ್ನೆಡೆಯಾಗಿರಬಹುದು. ಹಾಗಂತ ಸೋತಿದೆ ಎಂದು ಹೇಳಬೇಡಿ. ಅದು ಮತ್ತೆ ಎದ್ದೇಳುತ್ತದೆ ಎಂದೂ ಮಾತನಾಡಿದ್ದರು. ಈ ಮಾತಿಗೂ ಕೂಡ ಹಲವರು ಟ್ರೋಲ್ ಮಾಡುತ್ತಿದ್ದಾರೆ. ಬಾಲಿವುಡ್ ಅನ್ನು ಗೆಲ್ಲಿಸುವ ಸಿನಿಮಾ ಮಾಡಿ ಎಂದು ಸಲಹೆ ಕೂಡ ಹಲವರು ನೀಡಿದ್ದಾರೆ.

    ರಣ್ವೀರ್ ಸಿಂಗ್ ಸಿನಿಮಾಗೆ ದೀಪಿಕಾ ಪಡುಕೋಣೆ ಮುಳುವಾದರಾ ಎನ್ನುವ ಚರ್ಚೆ ಕೂಡ ನಡೆದಿದೆ. ಪಠಾಣ್ ಸಿನಿಮಾದಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿ, ಹಾಡಿಗೆ ಡಾನ್ಸ್ ಮಾಡಿದ್ದರು. ಹಾಗಾಗಿ ಬೈಕಾಟ್ ಪಠಾಣ್ ಅಭಿಯಾನ ಶುರುವಾಗಿದೆ. ದೀಪಿಕಾ ನಟನೆಯ ಸಿನಿಮಾ ನೋಡಬೇಡಿ ಎಂದು ಹಲವರು ಬರೆದುಕೊಂಡಿದ್ದರು. ಈ ಬಿಸಿ ಏನಾದರೂ ದೀಪಿಕಾ ಪತಿಗೂ ತಟ್ಟಿದೆಯಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಣವೀರ್ ಒಳ್ಳೆಯ ಎಂಟರ್ಟೈನರ್ ಎಂದ ಪೂಜಾ ಹೆಗ್ಡೆ

    ರಣವೀರ್ ಒಳ್ಳೆಯ ಎಂಟರ್ಟೈನರ್ ಎಂದ ಪೂಜಾ ಹೆಗ್ಡೆ

    ಮುಂಬೈ: ದಕ್ಷಿಣ ಭಾರತ ಖ್ಯಾತ ನಟಿ ಪೂಜಾ ಹೆಗ್ಡೆ, ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ಎಂಟರ್ಟೈನರ್ ಎಂದು ಹೊಗಳಿದ್ದಾರೆ.

    ರಣವೀರ್ ಸಿಂಗ್ ಯಾವಾಗಲು ಸೆಟ್ ನಲ್ಲಿ ಮಾತ್ರವಲ್ಲ ಎಲ್ಲೇ ಹೋದರೂ ರಾಕಿಂಗ್ ಆಗಿರುತ್ತಾರೆ. ಈ ಕುರಿತು ಪೂಜಾ ಸಹ ಮಾತನಾಡಿದ್ದು, ನಾನು ಸೆಟ್‍ಗಳಲ್ಲಿ ಯಾವಾಗಲೂ ಮನರಂಜನೆ ನೀಡುತ್ತಿದ್ದೆ, ಅದರಲ್ಲಿಯೂ ರಣವೀರ್ ಒಳ್ಳೆಯ ಎಂಟರ್ಟೈನರ್ ಆಗಿದ್ದರು. ಅವರು ಸದಾ ಸೆಟ್ ನಲ್ಲಿ ಕ್ರೀಯಾಶೀಲರಾಗಿ ಇರುತ್ತಿದ್ದರು. ಸ್ನೇಹಪರ ವ್ಯಕ್ತಿತ್ವ ಅವರಲ್ಲಿ ಇದೆ. ಅವರು ಹೊಸಬರ ಜೊತೆ ಸಲೀಸಾಗಿ ಬೆರೆಯುತ್ತಾರೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ತೆಲುಗು ಭಾಷೆಯನ್ನು ನೀವು ಅನುವಾದಿಸಿದರೆ ಸೆಕ್ಸಿಸ್ಟ್ ಆಗಿ ಕಾಣುತ್ತೆ: ನಾಗಾರ್ಜುನ ಅಕ್ಕಿನೇನಿ

    ನಾನು ರಣವೀರ್ ಮತ್ತು ರೋಹಿತ್ ಸರ್ ಜೊತೆ ಸಖತ್ ಎಂಜಾಯ್ ಮಾಡಿದ್ದೇನೆ. ಸೆಟ್ ನಲ್ಲಿ ಫುಲ್ ಕಾಮಿಡಿ ಇತ್ತು. ಶೂಟಿಂಗ್ ಸಮಯದಲ್ಲಿ ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಕ್ರಿಯೇಟ್ ಆಗಿತ್ತು. ಇದೊಂದು ಅದ್ಭುತ ಅನುಭವವಾಗಿತ್ತು ಎಂದು ತಿಳಿಸಿದ್ದಾರೆ.

    ಪೂಜಾ ಹೆಗ್ಡೆ ತಮ್ಮ ಮುಂದಿನ ಚಿತ್ರ ‘ಸರ್ಕಸ್’ ನಲ್ಲಿ ರಣವೀರ್ ಸಿಂಗ್ ಅವರ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾಗೆ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಜಾಕ್ವೆಲಿನ್ ಫೆನಾರ್ಂಡೀಸ್, ವರುಣ್ ಶರ್ಮಾ, ಸಿದ್ದಾರ್ಥ ಜಾದವ್, ಜಾನಿ ಲೀವರ್, ಸಂಜಯ್ ಮಿಶ್ರಾ, ಮುರಳಿ ಶರ್ಮಾ, ಸುಲಭಾ ಆರ್ಯಾ, ವ್ರಜೇಶ್ ಹಿರ್ಜೀ ಮುಂತಾದವರು ನಟಿಸುತ್ತಿದ್ದಾರೆ.

    Ranveer Singh

    ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಟಿ-ಸೀರೀಸ್ ‘ಸರ್ಕಸ್’ ಸಿನಿಮಾಗೆ ಬಂಡವಾಳ ಹೂಡಿದೆ. ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ ಇದೇ ಮೊದಲಬಾರಿಗೆ ರಣವೀರ್ ಸಿಂಗ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಶುಭಾನನ್ನು ನೋಡಲು ಹಳ್ಳಿಗೆ ಹೋದ ನೀತು

    ಈ ಸಿನಿಮಾ ಜೊತೆಗೆ ರಣವೀರ್ ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಇವರಿಗೆ ಜೋಡಿಯಾಗಿ ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ. ಪೂಜಾ ಹೆಗ್ಡೆ ‘ರಾಧೆ ಶ್ಯಾಮ್’ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದು, ಈ ಸಿನಿಮಾದಲ್ಲಿ ಪ್ರಭಾಸ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  • ವಿಡಿಯೋ: ಸರ್ಕಸ್ ನಲ್ಲಿ ಬೋನಿನಿಂದ ತಪ್ಪಿಸಿಕೊಂಡ ಹುಲಿ, ದಿಕ್ಕಾಪಾಲಾಗಿ ಓಡಿದ್ರು ಜನ

    ವಿಡಿಯೋ: ಸರ್ಕಸ್ ನಲ್ಲಿ ಬೋನಿನಿಂದ ತಪ್ಪಿಸಿಕೊಂಡ ಹುಲಿ, ದಿಕ್ಕಾಪಾಲಾಗಿ ಓಡಿದ್ರು ಜನ

    ಬೀಜಿಂಗ್: ಚೀನಾದ ಗ್ರಾಮವೊಂದರಲ್ಲಿ ಸರ್ಕಸ್ ನಡೆಯುತ್ತಿದ್ದ ವೇಳೆ ಬೋನಿನಿಂದ ಹುಲಿ ತಪ್ಪಿಸಿಕೊಂಡಿದ್ದು, ಜನ ಆತಂಕದಿಂದ ದಿಕ್ಕಾಪಾಲಾಗಿ ಓಡುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಚೀನಾದ ಶಾಂಕ್ಸಿ ಪ್ರಾಂತ್ಯದ ಲಿನ್‍ಫೆನ್‍ನಲ್ಲಿ ನವೆಂಬರ್ 25ರಂದು ಈ ಘಟನೆ ನಡೆದಿದೆ. ಪ್ರದರ್ಶನ ನೀಡುತ್ತಿದ್ದ ವೇಳೆ ಹುಲಿ ಬೋನಿನಿಂದ ತಪ್ಪಿಸಿಕೊಂಡು ಹೊರಬರುತ್ತಿದ್ದಂತೆ ಸರ್ಕಸ್ ನೋಡಲು ಬಂದಿದ್ದ ಜನ ಗಾಬರಿಯಿಂದ ಅತ್ತಿತ್ತ ಓಡಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

    ಘಟನೆಯ ವಿವಿಧ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಸರ್ಕಸ್ ನೋಡಲು ಬಂದಿದ್ದವರಲ್ಲಿ ಇಬ್ಬರು ಮಕ್ಕಳಿಗೆ ಹುಲಿ ಪರಚಿದೆ. ತಕ್ಷಣ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮರುದಿನ ಡಿಸ್ಚಾರ್ಜ್ ಆಗಿದ್ದಾರೆ. ಘಟನೆಯ ನಂತರ ಹುಲಿಯನ್ನ ಸೆರೆಹಿಡಿಯಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

    ಘಟನೆಯ ಬಗ್ಗೆ ಸದ್ಯ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

  • ವಿಡಿಯೋ: ಸರ್ಕಸ್‍ನಲ್ಲಿ ಪ್ರೇಕ್ಷಕರ ಮುಂದೆಯೇ ತರಬೇತುದಾರನನ್ನ ಕಚ್ಚಿ ಎಳೆದಾಡಿದ ಸಿಂಹ

    ವಿಡಿಯೋ: ಸರ್ಕಸ್‍ನಲ್ಲಿ ಪ್ರೇಕ್ಷಕರ ಮುಂದೆಯೇ ತರಬೇತುದಾರನನ್ನ ಕಚ್ಚಿ ಎಳೆದಾಡಿದ ಸಿಂಹ

    ಪ್ಯಾರಿಸ್: ಸರ್ಕಸ್‍ನಲ್ಲಿ ಸಿಂಹವೊಂದು ತರಬೇತುದಾರನ ಕುತ್ತಿಗೆಯನ್ನ ಬಾಯಲ್ಲಿ ಕಚ್ಚಿ ಎಳೆದಾಡಿದ ಘಟನೆ ಫ್ರಾನ್ಸ್‍ನಲ್ಲಿ ನಡೆದಿದೆ.

    ಫ್ರಾನ್ಸ್ ನ ಡೌಲೆನ್ಸ್ ನಲ್ಲಿ ಭಾನುವಾರದಂದು ನಡೆದ ಸರ್ಕಸ್ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ. 34 ವರ್ಷದ ತರಬೇತುದಾರನ ಮೇಲೆ ಸಿಂಹ ದಾಳಿ ಮಾಡುತ್ತಿದ್ದಂತೆ ಸರ್ಕಸ್ ನೋಡಲು ಬಂದಿದ್ದ ಪ್ರೇಕ್ಷಕರು ಭಯದಲ್ಲಿ ಕುರ್ಚಿಯಿಂದ ಎದ್ನೋ ಬಿದ್ನೋ ಎಂಬಂತೆ ಓಡಿದ್ದಾರೆ. ಇದನ್ನ ನೋಡ್ತಿದ್ದ ಮಕ್ಕಳು ಜೋರಾಗಿ ಚೀರಿದ್ದಾರೆ. ತಕ್ಷಣ ಸರ್ಕಸ್ ಕಂಪೆನಿಯ ಸಿಬ್ಬಂದಿ ಹೊಗೆ ಹಾಕಿ ಸಿಂಹದ ಕಣ್ಣು ಮಂಜಾಗುವಂತೆ ಮಾಡಿ ತರಬೇತುದಾರನನ್ನ ರಕ್ಷಿಸಿದ್ದಾರೆ.

    ಸರ್ಕಸ್ ನೋಡಲು ಮಗಳ ಜೊತೆಗೆ ಹೋಗಿದ್ದ ಮಹಿಳೆಯೊಬ್ಬರು ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಸಿಂಹದ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ತರಬೇತುದಾರನನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, 5 ಗಂಟೆಗಳ ಶಸ್ತ್ರಚಿಕಿತ್ಸೆ ನಂತರ ಈಗ ಚೇತರಿಸಿಕೊಳ್ಳುತ್ತಿದ್ದಾರೆಂದು ಕುಟುಂಬಸ್ಥರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ತರಬೇತುದಾರ ಒಂದು ವರ್ಷದಿಂದ ಸಿಂಹಕ್ಕೆ ತರಬೇತಿ ನೀಡುತ್ತಿದ್ದು, ಈ ಹಿಂದೆ ಯಾವತ್ತೂ ಈ ರೀತಿಯ ತೊಂದರೆಯಾಗಿರಲಿಲ್ಲ. ತಾನೇ ಸಾಕಿ, ತರಬೇತಿ ನೀಡಿದ ಸಿಂಹ ತನ್ನ ಮೇಲೆಯೇ ದಾಳಿ ಮಾಡಿದ್ದು ನೋಡಿ ತರಬೇತುದಾರ ಶಾಕ್ ಆಗಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.

    https://www.youtube.com/watch?v=bo3HwmrFQ_Q

  • ವೀಡಿಯೋ: 1 ನಿಮಿಷದಲ್ಲಿ 32 ಬಾರಿ ನಾಲಗೆಯಲ್ಲಿ ಫ್ಯಾನ್ ರೆಕ್ಕೆ ನಿಲ್ಲಿಸಿ ದಾಖಲೆ ಬರೆದ ಮಹಿಳೆ!

    ವೀಡಿಯೋ: 1 ನಿಮಿಷದಲ್ಲಿ 32 ಬಾರಿ ನಾಲಗೆಯಲ್ಲಿ ಫ್ಯಾನ್ ರೆಕ್ಕೆ ನಿಲ್ಲಿಸಿ ದಾಖಲೆ ಬರೆದ ಮಹಿಳೆ!

    ರೋಮ್: ಜಗತ್ತಿನಲ್ಲಿ ಹಲವು ಮಂದಿ ವಿಚಿತ್ರವಾದ ಸವಾಲುಗಳನ್ನು ಎದುರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಅಂಥವರ ಸಾಲಿಗೆ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಸೇರ್ಪಡೆಯಾಗಿದ್ದಾರೆ.

    ಹೌದು ಆಸ್ಟ್ರೇಲಿಯಾದ ಸರ್ಕಸ್ ಪ್ರದರ್ಶಕಿ ಝಿಯೋ ಎಲ್ಲಿಸ್, ತನ್ನ ನಾಲಿಗೆಯಿಂದ ಜೋರಾಗಿ ತಿರುಗುತ್ತಿರುವ ಫ್ಯಾನ್ ರೆಕ್ಕೆಗಳನ್ನು ನಿಲ್ಲಿಸುವ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಇತ್ತೀಚೆಗೆ ಇಟಾಲಿಯನ್ ಶೋ `ಲೊ ಶೋ ಡೈ ರೆಕಾರ್ಡ್’ ನಲ್ಲಿ ಅತ್ಯದ್ಭುತ ಸಾಹಸ ಮಾಡಿ ಗಿನ್ನಿಸ್ ರೆಕಾರ್ಡ್ ಪುಟ ಸೇರಿದ್ದಾರೆ.

    ಜೋರಾಗಿ ತಿರುಗುವ ಎರಡು ಫ್ಯಾನ್‍ಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ಫ್ಯಾನ್‍ನ ರೆಕ್ಕೆಗಳನ್ನು 1 ನಿಮಿಷದಲ್ಲಿ 32 ಬಾರಿ ನಾಲಗೆಯಿಂದ ನಿಲ್ಲಿಸೋ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಝಿಯೋ ಇತಿಹಾಸ ಬರೆದಿರೋದು ಇದು ಮೊದಲೇನಲ್ಲ. ಈ ಹಿಂದೆ 1 ನಿಮಿಷದಲ್ಲಿ 20 ಬಾರಿ ಫ್ಯಾನ್ ರೆಕ್ಕೆ ನಿಲ್ಲಿಸಿದ್ದು, ಆ ರೆಕಾರ್ಡನ್ನ ಈ ಬಾರಿ ಮುರಿದಿದ್ದರು.

    ಆದ್ರೆ ಶೋದಲ್ಲಿ ತನ್ನ ಮೊದಲಿನ ರೆಕಾರ್ಡನ್ನ ಮುರಿದು ಮತ್ತೊಂದು ದಾಖಲೆ ಬರೆದ ಝಿಯೋ ದಾಖಲೆಯನ್ನು ಮತ್ತೊಬ್ಬ ಮಹಿಳೆ ಅರ್ಶಿಟಾ ಫರ್ಮನ್ ಮುರಿದಿದ್ದಾರೆ. ಅರ್ಶಿಟಾ 1 ನಿಮಿಷದಲ್ಲಿ 35 ಬಾರಿ ಫ್ಯಾನ್ ರೆಕ್ಕೆ ನಿಲ್ಲಿಸುವ ಮೂಲಕ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

    https://www.youtube.com/watch?v=Lf814UKG0fk