Tag: Circle Inspector

  • ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್

    ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್

    ಚಿಕ್ಕಮಗಳೂರು: ಹೇಳೋದು ಕೇಳಮ್ಮಾ….. ಹೇ…. ತಗೋ ಈ ಶರ್ಟ್ ಹಾಕ್ಕೊಂಡ್ ನೀನ್ ಈ ಕಡೆ ಬಾ, ನಾನು ಅಲ್ಲಿ ನಿಂತ್ಕೋಂತೀನಿ ಎಂದು ಹಿಜಬ್‍ಗಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಗೆ ನಗರದ ಮಹಿಳಾ ಠಾಣೆ ಇನ್ಸ್ ಪೆಕ್ಟರ್ ಸಲೀಂ ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ನಗರದಲ್ಲಿ ಇಂದೂ ಕೂಡ ಹಿಜಬ್ ಹೋರಾಟ ಮುಂದುವರಿದಿತ್ತು. ನಗರದ ಬಸವನಹಳ್ಳಿ ಪ್ರೌಢ ಶಾಲೆಯ ಮುಸ್ಲಿಂ ವಿದ್ಯಾರ್ಥಿನಿಯರು ಇಂದು ಕೂಡ ಹಿಜಬ್ ಇಲ್ಲದ ನಾವು ಶಾಲೆಗೆ ಬರೋದಿಲ್ಲ ಎಂದು ಶಾಲೆಯ ಮುಂಭಾಗ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಇನ್ಸ್‍ಪೆಕ್ಟರ್ ಸಲೀಂ, ವಿದ್ಯಾರ್ಥಿನಿಯರಿಗೆ ಕೋರ್ಟ್ ತೀರ್ಪು ಬರುವವರೆಗೂ ಹಿಜಬ್ ತೆಗೆದು ಶಾಲೆಗೆ ಹೋಗುವಂತೆ ಮನವಿ ಮಾಡಿದರು. ಆದರೆ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸುತಾರಂ ಒಪ್ಪಲಿಲ್ಲ.

    ಈ ವೇಳೇ ಪೊಲೀಸರು ಹಾಗೂ ಇನ್ಸ್‍ಪೆಕ್ಟರ್ ಸಲೀಂ ಸುಮಾರು ಅರ್ಧಗಂಟೆಗಳ ಕಾಲ ಅವರಿಗೆ ಮನವೊಲಿಸುವ ಪ್ರಯತ್ನ ಮಾಡಿದರೂ ವಿಫಲರಾದರು. ಈ ವೇಳೆ ವಿದ್ಯಾರ್ಥಿನಿಯರು ಇನ್ಸ್‍ಪೆಕ್ಟರ್ ಸಲೀಂ ಅವರಿಗೆ ಸಂವಿಧಾನ ಪಾಠ ಮಾಡಲು ಮುಂದಾದರು. ಇನ್ಸ್ ಪೆಕ್ಟರ್ ಒಳಗೆ ಹೋಗಿ. ಅಲ್ಲಿ ನಿಮಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ಹಿಜಬ್ ತೆಗೆದು ಸಂಜೆ ಶಾಲೆ ಮುಗಿದ ಮೇಲೆ ಮತ್ತೆ ಅಲ್ಲಿಯೇ ಹಿಜಬ್ ಧರಿಸಿಕೊಂಡು ವಾಪಸ್ ಬನ್ನಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

    ಆಗ ವಿದ್ಯಾರ್ಥಿನಿಯೊಬ್ಬಳು ನಮಗೆ ಯಾರೂ ಏನು ಮಾಡಬಾರದು ಎಂದಾಗ ಇನ್ಸ್ ಪೆಕ್ಟರ್ ಸಲೀಂ, ನೋಡಮ್ಮಾ.. ನೀನು ಪ್ರತಿಯೊಂದಕ್ಕೂ ಹೀಗೆ ಮಾತನಾಡಿದರೆ ಸಂಜೆವರಗೂ ಇಲ್ಲಿಯೇ ಹೀಗೆ ನಿಲ್ಲಬೇಕು ಎಂದರು. ಈ ವೇಳೆ ವಿದ್ಯಾರ್ಥಿನಿ ಇನ್ಸ್ ಪೆಕ್ಟರ್ ಅವರಗೆ ಸಂವಿಧಾನದ ಪಾಠ ಮಾಡಲು ಮುಂದಾದಾದಳು. ಆಗ ಅವರು ತಗೋ ಈ ಶರ್ಟ್ ಹಾಕಿಕೊಂಡು ಈಕಡೆ ಬಾ ಎಂದು ನಗೆ ಚಟಾಕಿ ಹಾರಿಸಿದರು.

    ಆದರೂ ವಿದ್ಯಾರ್ಥಿನಿಯರು ಹಾಗೂ ಪೋಷಕರು ಹಿಜಬ್ ತೆಗೆದು ಶಾಲೆಗೆ ಹೋಗಲು ನಿರಾಕರಿಸಿ ಮನೆಗೆ ವಾಪಸ್ ಹೋಗಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ಹಿಜಬ್ ತೆಗೆದು ರೀಲ್ಸ್ ಹಾಕ್ತಾರೆ, ಈಗ ತೆಗೆಯೋಕಾಗಲ್ವಾ..?- ವಿದ್ಯಾರ್ಥಿಗಳು

  • ಚಿಕ್ಕಬಳ್ಳಾಪುರ ಕೊರೊನಾ ಸೋಂಕಿತನಿಗೂ ಪೊಲೀಸ್ ಕುಟುಂಬಕ್ಕೂ ನಂಟು

    ಚಿಕ್ಕಬಳ್ಳಾಪುರ ಕೊರೊನಾ ಸೋಂಕಿತನಿಗೂ ಪೊಲೀಸ್ ಕುಟುಂಬಕ್ಕೂ ನಂಟು

    – 19 ಜನ ಹೋಮ್ ಕ್ವಾರಂಟೈನ್

    ಕೋಲಾರ: ಚಿಕ್ಕಬಳ್ಳಾಪುರ ಜಿಲ್ಲೆಯ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ ಹಿನ್ನಲೆ, ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಕುಟುಂಬದವರು ಸೇರಿದಂತೆ ಒಟ್ಟು 19 ಜನರನ್ನು ಕೋಲಾರದಲ್ಲಿ ಹೋಮ್ ಕ್ವಾರಂಟೇನ್ ನಲ್ಲಿ ಇಡಲಾಗಿದೆ.

    ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದು, ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಶಂಕೆ ವ್ಯಕ್ತವಾದ ಹಿನ್ನೆಲೆ ಪೊಲೀಸ್ ಕುಟುಂಬಕ್ಕೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇನ್ಸ್‍ಪೆಕ್ಟರ್ ಕುಟುಂಬದ 9 ಜನ ಹಾಗೂ ಪಕ್ಕದ ಮನೆಯ ಹತ್ತು ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

    ಕ್ವಾರಂಟೈನ್ ನಲ್ಲಿರುವವರು ಚಿಕ್ಕಬಳ್ಳಾಪುರದಲ್ಲಿ ನಿಧನವಾದ ಸೋಂಕಿತ ವ್ಯಕ್ತಿಯ ಸಂಬಂಧಿಕರು ಎನ್ನಲಾಗಿದೆ. ಹೀಗಾಗಿ ಅವರ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಕೊರೊನಾ ಸೋಂಕಿತ ವ್ಯಕ್ತಿ, ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಹಿನ್ನಲೆ ಅವರ ಸಂಬಂಧಿಕರು ಎನ್ನುವ ಕಾರಣಕ್ಕೆ ಕ್ವಾರಂಟೈನ್ ಮಾಡಲಾಗಿದೆ.